ಶುಕ್ರವಾರ, ಏಪ್ರಿಲ್ 9, 2010

ಎಲ್ಲಾ ಧರ್ಮಗ್ರಂಥಗಳೂ ನಿಮ್ಮನ್ನು ವಿಶ್ವವ್ಯಾಪಿ ಚೈತನ್ಯದೊಂದಿಗೆ ಜೋಡಿಸುತ್ತವೆ

ಪ್ರಿಲ್ 3, 2010

ಪ್ರ: ನಾನು ಋಣಾತ್ಮಕ ಗುಣಗಳನ್ನು ಹೇಗೆ ಪಡೆದುಕೊಳ್ಳಬಹುದು?
ಶ್ರೀ ಶ್ರೀ ರವಿಶಂಕರ: ನಿಮ್ಮಲ್ಲಿ ಯಾವುದೇ ಋಣಾತ್ಮಕ ಗುಣಗಳಿಲ್ಲವೆಂದು ನೀವು  ಯೋಚಿಸಿದರೆ, ನೀವು ಎಂದೂ ಅದನ್ನು ಹೊಂದುವುದಿಲ್ಲ. ನಿಮ್ಮಲ್ಲಿ ಎಲ್ಲಾ ಋಣಾತ್ಮಕ ಗುಣಗಳು ಇವೆ ಎಂದು ಆಲೋಚಿಸಿ- ಅವು ತೋರ್ಪಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿವೆ ಅಷ್ಟೇ.

ಪ್ರ: ಒಬ್ಬ ಗುರು ಹೇಗಿರಬೇಕು?
ಶ್ರೀ ಶ್ರೀ ರವಿಶಂಕರ: ಎರಡು ಬಗೆಯ ಗುರುಗಳಿದ್ದಾರೆ.
ಮೊದಲನೆಯ ಬಗೆಯಲ್ಲಿ ಇರುವವರು ನಿಂದನೆ ಮತ್ತು ದೋಷ ಸೂಚಿಸುವುದನ್ನು  ನಂಬಿದವರು. ಇದು ತಾಮಸಿಕ ವಿಧಾನ. ಎರಡನೆ ಬಗೆಯವರು ನಿಮಲ್ಲಿ ಎಲ್ಲಾ ಋಣಾತ್ಮಕ ಗುಣಗಳು ಇವೆ ಎಂದು ನಿಮಗೆ ಹೇಳುತ್ತಾರೆ. ಸ್ವಲ್ಪ ಎಮ್ಮೆ ಚರ್ಮದವರಿಗೆ ಸ್ವಲ್ಪ ಕಠಿನತೆ ಬೇಕಾಗಬಹುದು.

ಪ್ರ: ನಮ್ಮ ಜೀವನ ಹೇಗೆ ಒಂದು ದಿವ್ಯ ಗ್ರಂಥ?
ಶ್ರೀ ಶ್ರೀ ರವಿಶಂಕರ: ಎಲ್ಲಾ ಧರ್ಮಗ್ರಂಥಗಳು ನಿಮ್ಮನ್ನು ಆ ವಿಶ್ವವ್ಯಾಪಿ ಚೈತನ್ಯದೊಂದಿಗೆ ಸಂಪರ್ಕಿಸುತ್ತವೆ. ಈ ಗ್ರಂಥಗಳು ನಿಮಗೆ ಹವಾನಿನಿಯಂತ್ರಕದಂತೆ ಹಿತ ನೀಡುತ್ತವೆ. ಜ್ಞಾನ ಮತ್ತು ಧ್ಯಾನದ ಸಂಯೋಜನೆ ಮನಸ್ಸಿಗೆ ಏ.ಸಿ. ಆಗಿದೆ, ಪರಿಪೂಣ ಹಿತ.

ಪ್ರ: ಸಲಿಂಗಕಾಮ ತಪ್ಪೇ?
ಶ್ರೀ ಶ್ರೀ ರವಿಶಂಕರ: ಅದು ಒಂದು ಪ್ರವೃತ್ತಿ. ಅದು ಯಾವಾಗಲಾದರೂ ಬದಲಾಗಬಹುದು. ಬಹಳ ಜನರಿಗೆ ಹಾಗಾಗುತ್ತದೆ. ನೀವು ನಿಮ್ಮ ತಾಯಿ ಹಾಗೂ ತಂದೆಯ ಸಂಯೋಜನೆ. ನಿಮ್ಮಲ್ಲಿ ಕೆಲವೊಮ್ಮೆ ಸ್ತ್ರೀಸಹಜ ಶಕ್ತಿ ಪ್ರಬಲವಾಗಿರುತ್ತದೆ, ಮತ್ತೆ ಕೆಲವೊಮ್ಮೆ ಪುರುಷಸಹಜ ಶಕ್ತಿ ಪ್ರಬಲವಾಗಿರುತ್ತದೆ. ನಿಮ್ಮನ್ನು ನೀವು ನಿಂದಿಸಿಕೊಳ್ಳಬೇಡಿ. ಇದೆಲ್ಲವನ್ನೂ ದಾಟಿ ನಿಮ್ಮನ್ನು ವಿವೇಕದ ಬೆಳಕಿನಲ್ಲಿ ನೋಡಿಕೊಳ್ಳಿ. ನೀವೂ ಮಾಂಸದ ತುಂಡಲ್ಲ(ಶರೀರವಲ್ಲ). ನೀವು ಆ  ತೇಜೋಮಯ ಚೈತನ್ಯ(ಸ್ವಪ್ರಜ್ಞೆ). ನಿಮ್ಮನ್ನು ಚೈತನ್ಯವೆಂದು ಗುರುತಿಸಿಕೊಳ್ಳಿ, ಅದು ಯಾವುದೇ ಲಿಂಗಕ್ಕೂ ಅತೀತವಾಗಿದೆ. ನೀವು ಅಂಥ ಸಮಾಧಾನವನ್ನು ಪಡೆಯುತ್ತೀರಿ!


"ನಿಮ್ಮಿಂದ ವ್ಯಕ್ತಪಡಿಸಲಾಗದ್ದು ಪ್ರೀತಿ
ನಿಮ್ಮಿಂದ ತಿರಸ್ಕರಿಸಲಾಗದ್ದು ಸೌಂದರ್ಯ
ನಿಮಗೆ ಯಾವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೋ ಅದೇ ಸತ್ಯ"

The Art of living
© The Art of Living Foundation