ಗುರುವಾರ, ಜನವರಿ 24, 2013

ಅ೦ತಿಮ ಸ್ಮರಣೆಯ ಮಹತ್ವ


೨೪ ಜನವರಿ ೨೦೧೩
ಬೆಂಗಳೂರು

ಪ್ರಶ್ನೆ: ಗುರುದೇವ, ನಮ್ಮ ಜೀವನದ ಕೊನೆಯ ಕ್ಷಣಗಳಲ್ಲಿ ನಾರಾಯಣನ ಹೆಸರನ್ನು ಜಪಿಸುವುದರಿಂದ ಮೋಕ್ಷ ಸಿಗುವುದೆಂದು ಹೇಳಲಾಗುತ್ತದೆ. ನಮ್ಮ ಮುಂದಿನ ದಾರಿಯನ್ನು ನಿರ್ಧರಿಸುವಲ್ಲಿ, ನಮ್ಮ ಜೀವನದ ಕೊನೆಯ ಕ್ರಿಯೆಯು ಪ್ರಬಲವಾದುದು ಎಂಬುದು ಸರಿಯೇ?
ಶ್ರೀ ಶ್ರೀ ರವಿ ಶಂಕರ್: ಹೌದು, ಅದು ಸರಿ. ಮನಸ್ಸು ಶರೀರದಿಂದ ಬೇರ್ಪಡುವುದು ಮೃತ್ಯುವಿನ ಸಮಯದಲ್ಲಾಗಿದೆ. ಆದುದರಿಂದ ಈ ಸಮಯದಲ್ಲಿ, ಒಬ್ಬನು ಮನಸ್ಸಿನಲ್ಲಿ ಯಾವುದೇ ಅಚ್ಚನ್ನು ಉಳಿಸಿಕೊಂಡಿದ್ದರೂ, ಅದು ಮುಂದಿನ ಜನ್ಮಕ್ಕೆ ಕಾರಣವಾಗುತ್ತದೆ. ಇದೊಂದು ವೈಜ್ಞಾನಿಕ ಸತ್ಯವಾಗಿದೆ.
ನೀವಿದನ್ನು ನೀವಾಗಿಯೇ ಕಂಡುಕೊಳ್ಳಬಹುದು. ನೀವು ಗಮನಿಸಿದರೆ, ಬೆಳಗ್ಗೆ ನೀವು ಏಳುವಾಗ ನಿಮ್ಮ ಮನಸ್ಸಿನಲ್ಲಿ ಬರುವ ಮೊದಲನೆಯ ಯೋಚನೆಯು, ನೀವು ಹಿಂದಿನ ರಾತ್ರಿ ನಿದ್ರಿಸುವ ಮುನ್ನ ಯೋಚಿಸಿದುದೇ ಆಗಿರುತ್ತದೆ.
ಈಗ, ಸಾಧಾರಣವಾಗಿ ನಿಮ್ಮ ಮನಸ್ಸು ಒಂದಲ್ಲ ಒಂದು ಯೋಚನೆಯೊಂದಿಗೆ ಎಷ್ಟು ನಿರತವಾಗಿರುತ್ತದೆಯೆಂದರೆ, ಸಾವಿನ ಸಮಯದಲ್ಲಿ ನಾರಾಯಣ ಎಂದು ಜಪ ಮಾಡಲೂ ಕೂಡಾ ನಿಮಗೆ ನೆನಪಾಗದಿರಬಹುದು. ಅದಕ್ಕಾಗಿಯೇ ಪ್ರಾಚೀನ ಜನರು ಹೇಳಿದುದು, ಅವನ ಹೆಸರನ್ನು ಜಪಿಸುವುದರ ಮೂಲಕ ದೇವರನ್ನು ಎಲ್ಲಾ ಸಮಯವೂ ನೆನಪಿಸುತ್ತಾ ಇರಿ ಎಂದು. ಪ್ರತಿ ರಾತ್ರಿಯೂ ಮಲಗುವ ಮುನ್ನ ಅವನನ್ನು ನೆನಪಿಸಿಕೊಳ್ಳಿ; ನೀವು ಸ್ನಾನ ಮಾಡುವಾಗ; ನಿಮ್ಮ ಊಟವನ್ನು ಮಾಡುವಾಗಲೂ ಅವನನ್ನು ನೆನಪಿಸಿಕೊಳ್ಳಿ ಮತ್ತು ನೀವು ಪಡೆಯುವ ಆಹಾರಕ್ಕಾಗಿ ಅವನಿಗೆ ಧನ್ಯವಾದಗಳನ್ನರ್ಪಿಸಿ. ಹೊಸತು ಏನನ್ನಾದರೂ ಪ್ರಾರಂಭಿಸುವ ಮೊದಲು, ಅದನ್ನೊಂದು ಮಂಗಳಕರವಾದ ಆರಂಭವನ್ನಾಗಿ ಮಾಡಲು ಅವನನ್ನು ನೆನಪಿಸಿಕೊಳ್ಳಿ.
ಪ್ರಾಚೀನ ಜನರು ಬಹಳ ಬುದ್ಧಿವಂತರಾಗಿದ್ದರು ಮತ್ತು ಅವರು ಇದನ್ನೊಂದು ಪದ್ಧತಿಯನ್ನಾಗಿ ಮಾಡಿದರು. ಆದುದರಿಂದ, ಯಾವಾಗೆಲ್ಲಾ ಒಬ್ಬನು ಒಂದು ಹೊಸ ಅಂಗಡಿಯನ್ನು ತೆರೆಯುವನೋ ಆಗ ಅವನು ಮಾಡಬೇಕಾದ ಮೊದಲನೆಯ ಕೆಲಸವೆಂದರೆ ನಾಮ ಸ್ಮರಣೆ (ದೇವರ ಹೆಸರನ್ನು ನೆನಪಿಸಿಕೊಳ್ಳುವುದು), ಮತ್ತು ನಂತರ ಅವರು ಅಂಗಡಿಯನ್ನು ಪ್ರಾರಂಭಿಸುತ್ತಾರೆ. ಒಬ್ಬರು ಏನಾದರೂ ಹೊಸತನ್ನು ಖರೀದಿಸಿದರೆ ಅವರು ನಾರಾಯಣನನ್ನು ನೆನಪಿಸಿಕೊಳ್ಳಬೇಕು ಮತ್ತು ನಂತರ ಪ್ರಾರಂಭಿಸಬೇಕು. ನಾವೆಲ್ಲರೂ ಇದನ್ನು ಮಾಡುತ್ತೇವೆ, ಅಲ್ಲವೇ? ನಾವಿದನ್ನು ಇವತ್ತು ಕೂಡಾ ಮಾಡುತ್ತೇವೆ.
ನೀವೊಂದು ಪರೀಕ್ಷೆ ಬರೆಯುವವರಿದ್ದರೆ, ನೀವು ದೇವರ ಬಗ್ಗೆ ಯೋಚಿಸುತ್ತೀರಿ ಮತ್ತು ಪರೀಕ್ಷೆಯಲ್ಲಿ ಪ್ರಶ್ನೆಗಳು ಸುಲಭವಾಗಿರಲೆಂದು ಹಾಗೂ ನಿಮಗೆ ಉತ್ತರಗಳನ್ನು ಸರಿಯಾಗಿ ಬರೆಯಲು ಸಾಧ್ಯವಾಗಲೆಂದು ಪ್ರಾರ್ಥಿಸುತ್ತೀರಿ.
ಪ್ರತಿಯೊಬ್ಬರೂ ಪ್ರಾರ್ಥಿಸುತ್ತಾರೆ; ಮಕ್ಕಳಾಗಲೀ, ದೊಡ್ಡವರಾಗಲೀ ಅಥವಾ ವಯಸ್ಸಾದವರಾಗಲೀ; ಅವರೆಲ್ಲರೂ ಪ್ರಾರ್ಥಿಸುತ್ತಾರೆ. ಆದರೆ ಅವರು ಅದನ್ನು ಭಯದಿಂದ ಮಾಡುತ್ತಾರೆ. ನಾನು ಹೇಳುವುದೇನೆಂದರೆ, ಅದನ್ನು ಭಯದಿಂದ ಮಾಡಬೇಡಿ, ಬದಲಿಗೆ ಪ್ರೀತಿಯಿಂದ ಮಾಡಿ; ಕೃತಜ್ಞತೆಯ ಒಂದು ಆಳವಾದ ಭಾವನೆಯಿಂದ ಮಾಡಿ. ನೀವು ಅರಳುವುದು ಯಾವಾಗ ಎಂದರೆ, ನೀವು ಪ್ರೀತಿ ಮತ್ತು ಶ್ರದ್ಧೆಯಿಂದ ಪ್ರಾರ್ಥಿಸಿದಾಗ.
ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದರ ಮೊದಲು ದೇವರನ್ನು ನೆನಪಿಸಿಕೊಳ್ಳಲು ಕಷ್ಟವೇನಿದೆ? ನಿಮಗೆ ಇಷ್ಟವಾಗುವಂತೆ ಏನನ್ನೇ ಹೇಳುವುದರ ಮೂಲಕವಾದರೂ ನೀವು ಜಪ ಮಾಡಬಹುದು ಅಥವಾ ದೇವರನ್ನು ಸ್ಮರಿಸಬಹುದು. ನೀವು ನಾರಾಯಣ ಅಥವಾ ಜೈ ಗುರುದೇವ್ ಅಥವಾ ಓಂ ನಮಃ ಶಿವಾಯ ಎಂದು ಕೂಡಾ ಹೇಳಬಹುದು. ನಿಮಗೆ ಇಷ್ಟವಾಗುವ ಯಾವುದೇ ಹೆಸರಾದರೂ ಸರಿ, ಅದನ್ನು ಹೇಳಿ.
ಇಲ್ಲದಿದ್ದರೆ ಸ್ನಾನ ಮಾಡುವಾಗ ಅಥವಾ ಊಟ ಮಾಡುವಾಗ ನೀವು ಎಲ್ಲಾ ರೀತಿಯ ಹಾಡುಗಳನ್ನು ನಿಮ್ಮ ಮನಸ್ಸಿನಲ್ಲಿ ಹಾಡುತ್ತಿರುತ್ತೀರಿ; ’ಡಫ್ಲಿವಾಲೇ ಡಫ್ಲಿ ಬಜಾ’ (ಓ ಡೋಲು ಬಾರಿಸುವ ಹುಡುಗನೇ, ಡೋಲು ಬಾರಿಸು!) ಡೋಲನ್ನಲ್ಲದೆ ಒಬ್ಬ ಡೋಲಿನ ಹುಡುಗನು ನಿಮಗಾಗಿ ಏನನ್ನು ಬಾರಿಸುವನು? ಇದೊಂದು ಹಾಡೇ?
ಈಗ, ನನಗೆ ಸಮಯ ಸಿಕ್ಕಿಲ್ಲವಾದ್ದರಿಂದ ನಾನು ಇತ್ತೀಚೆಗಿನ ಹಾಡುಗಳಲ್ಲಿ ಯಾವುದನ್ನೂ ಕೇಳಿಲ್ಲ. ಆದರೆ ಯಾವುದೇ ಅರ್ಥವಿಲ್ಲದ ಕೆಲವು ಹಾಡುಗಳು ಇತ್ತೀಚೆಗೆ ಬಂದಿರಲೇಬೇಕು.
’ಕೊಲವೆರಿ ಡಿ ' ಎಂಬ ಒಂದು ಹಾಡಿದೆ. ಅದು ಬಹಳ ಜನಪ್ರಿಯವಾದಂತೆ ತೋರುತ್ತದೆ. ಹಲವು ಜನರಿಗೆ ಆ ಹಾಡಿನ ಅರ್ಥ ಕೂಡಾ ತಿಳಿಯದು. ಅದರ ಅರ್ಥವೇನೆಂದು ನಿಮಗೆ ತಿಳಿದಿದೆಯೇ? ತಮಿಳಿನಲ್ಲಿ ’ಕೊಲವೆರಿ ಡಿ ’ ಎಂಬ ಶಬ್ದಪ್ರಯೋಗಕ್ಕೆ, ’ನನಗೆ ಯಾರನ್ನಾದರೂ ಕೊಲ್ಲಬೇಕೆಂದು ಅನ್ನಿಸುತ್ತಿದೆ ’ ಎಂದು ಅರ್ಥವಿದೆ.
ನಿಮಗೆ ಯಾರನ್ನಾದರೂ ಕೊಲ್ಲಬೇಕೆಂದು ಅನ್ನಿಸುತ್ತದೆಯೆಂಬ ಅರ್ಥವಿರುವ ಇದು ಒಂದು ಒಳ್ಳೆಯ ಹಾಡೇ? ಅದಕ್ಕಾಗಿಯೇ ನಾನು ಹೇಳುವುದು, ಕೇವಲ ನಾಮ ಸ್ಮರಣೆ ಮಾಡಿ. ಓಂ ನಮಃ ಶಿವಾಯ ಅಥವಾ ಓಂಕಾರ ಮಂತ್ರವನ್ನು ಜಪಿಸಿ. ನಿಮಗೆ ಇಷ್ಟವಿರುವ ಯಾವುದನ್ನೇ ಆದರೂ ಭಕ್ತಿಯ ಒಂದು ಭಾವನೆಯೊಂದಿಗೆ ಜಪಿಸಿ.
ನೋಡಿ, ನಾನು ಯಾವುದೇ ಹಾಡನ್ನು ಅವಮಾನಗೊಳಿಸುತ್ತಿಲ್ಲ. ನಿಮಗೆ ಹಾಡಬೇಕಿದ್ದರೆ, ಪರವಾಗಿಲ್ಲ, ಕೊಲವೆರಿ ಡಿ ಕೂಡಾ ಹಾಡಬಹುದು; ತೊಂದರೆಯಿಲ್ಲ. ಆದರೆ ಕೆಲವೊಮ್ಮೆ ಇಂತಹ ಒಂದು ಆಕರ್ಷಕ ರಾಗವು ನಿಮ್ಮ ಮನಸ್ಸಿನಲ್ಲಿ ಓಡುತ್ತಾ ಇರುತ್ತದೆ ಮತ್ತು ಅದು ನಿಮ್ಮ ಮೇಲೆ ಪರಿಣಾಮ ಬೀರಬಹುದು. ಬಹುತೇಕ ಜನರಿಗೆ ಹಾಡಿನ ಅರ್ಥ ತಿಳಿಯದು, ಅದು ಒಳ್ಳೆಯದು. ಅವರಿಗೆ ಅರ್ಥ ತಿಳಿದಿದ್ದುಕೊಂಡು, ಅರ್ಥದೊಂದಿಗೆ ಹಾಡನ್ನು ಹಾಡಿರುತ್ತಿದ್ದರೆ, ಆಗ ಅಲ್ಲಿ ಸಮಸ್ಯೆಗಳಾಗುತ್ತಿದ್ದವು. ಅದು ಇನ್ನೊಂದು ಭಾಷೆಯಲ್ಲಿದೆ; ಅದು ತಮಿಳಿನಲ್ಲಿದೆ.
ನಿಮಗೊಂದು ಭಜನೆಯ ಅರ್ಥ ತಿಳಿದಿದ್ದು, ನೀವದನ್ನು ಕೃತಜ್ಞತೆ ಮತ್ತು ಭಕ್ತಿಯ ಒಂದು ಭಾವನೆಯೊಂದಿಗೆ ಹಾಡುವಾಗ, ಅದು ನಿಮ್ಮ ಜೀವನದ ಮೇಲೆ ಒಂದು ಅಗಾಧವಾದ ಪರಿಣಾಮವನ್ನು ಬೀರುತ್ತದೆ. ಪ್ರತಿಯೊಂದು ಶಬ್ದಕ್ಕೂ ತನ್ನದೇ ಆದ ಕಂಪನವಿದೆ, ಮತ್ತು ನಾವು ಒಳ್ಳೆಯ ಶಬ್ದಗಳನ್ನು ಮಾತನಾಡುವಾಗ, ಆ ಶಬ್ದದಿಂದ ಬರುವ ಕಂಪನಗಳಿಗೆ ಮನಸ್ಸನ್ನು ಶುದ್ಧಗೊಳಿಸುವ ಮತ್ತು ಜೀವನವನ್ನು ಶುದ್ಧಗೊಳಿಸುವ ಶಕ್ತಿಯಿರುತ್ತದೆ.
ಜಪ ಮಾಡುವುದರಿಂದ ಮತ್ತು ಸಕಾರಾತ್ಮಕವಾಗಿ ಮಾತನಾಡುವುದರಿಂದ, ಮನಸ್ಸು ಹಾಗೂ ಶರೀರ ಎರಡೂ ಚೈತನ್ಯಭರಿತವಾಗುತ್ತವೆ. ಅದಕ್ಕಾಗಿಯೇ ನಾಮ ಸ್ಮರಣೆ ಮಾಡಬೇಕೆಂದು ಹೇಳಲಾಗಿರುವುದು. ಕನಿಷ್ಠಪಕ್ಷ ದಿನದಲ್ಲಿ ಎರಡು ಸಾರಿಯಾದರೂ ಅದನ್ನು ಮಾಡಿ. ನಾನು ಹೇಳಿದಂತೆ, ಬೆಳಗ್ಗೆ ದಿನದ ಮೊದಲ ಊಟವನ್ನು ಮಾಡುವ ಮೊದಲು, ದೇವರ ಹೆಸರನ್ನು ಜಪಿಸುವುದರ ಮೂಲಕ ಅವನನ್ನು ಸ್ಮರಿಸಿ.
ನಾನು ಎಲ್ಲರಲ್ಲೂ ಹೇಳುತ್ತಿರುತ್ತೇನೆ: ಊಟ ಮಾಡುವ ಮೊದಲು ’ಅನ್ನದಾತ ಸುಖೀ ಭವ’ ಎಂಬ ಮಂತ್ರವನ್ನು ಜಪಿಸಿ ಎಂದು. ಇದರರ್ಥವೇನೆಂದರೆ, ಈ ಆಹಾರವನ್ನು ನನಗೆ ನೀಡಿದವರು, ಶಾಂತಿ ಮತ್ತು ಸಂತೋಷದಿಂದ ಹರಸಲ್ಪಡಲಿ. ಆದುದರಿಂದ ನಿಮ್ಮ ಹೃದಯಪೂರ್ವಕವಾಗಿ ಈ ಆಶೀರ್ವಾದವನ್ನು ನೀಡಿ. ಈ ಮಂತ್ರವನ್ನು ಜಪಿಸುವುದರ ಮೂಲಕ, ಅಡಿಗೆ ಮಾಡಿ ಆಹಾರವನ್ನು ನಿಮಗೆ ಬಡಿಸಿದ ಮನೆಯ ಹೆಂಗಸು ಶಾಂತಿ ಮತ್ತು ಸಂತೋಷದಿಂದ ಹರಸಲ್ಪಡಲಿ ಎಂದು ನೀವು ಪ್ರಾರ್ಥಿಸುವಿರಿ. ಹಾಗೆಯೇ, ಆಹಾರದ ಧಾನ್ಯಗಳನ್ನು ಖರೀದಿಸಿ ನಿಮ್ಮ ಮನೆಗೆ ತಲಪಿಸಿದ ವ್ಯಾಪಾರಿ; ಅವನು ಹರಸಲ್ಪಡಲಿ ಮತ್ತು ಕೊನೆಯದಾಗಿ ನೀವು, ಯಾರಿಂದ ನಿಮಗೆ ನಿಮ್ಮ ಆಹಾರ ದೊರಕಿತೋ; ಕೃಷಿ ಮಾಡಿ ಬೆಳೆಯನ್ನು ಬೆಳೆದ ರೈತನಿಗೆ ಹರಸುವಿರಿ. ಆದುದರಿಂದ ಈ ಮಂತ್ರವನ್ನು ಹೇಳುವುದರಿಂದ ನೀವು ಅವನನ್ನೂ ಹರಸುವಿರಿ. ಇದು ಎಷ್ಟೊಂದು ಒಳ್ಳೆಯ ಸಂಗತಿ!
ಅದೇ ರೀತಿಯಲ್ಲಿ, ಬೆಳಗ್ಗೆ ಮೊದಲನೆಯದಾಗಿ ನೀವು ಏಳುವಾಗ, "ಓಂ ನಮೋ ನಾರಾಯಣ" ಅಥವಾ "ಓಂ ನಮಃ ಶಿವಾಯ" ಎಂದು ಹೇಳಿ.
ಏನಾದರೂ ಆಗಬಾರದ್ದು ಆದಲ್ಲಿ "ಹೇ ರಾಮ್!" ಎಂದು ಹೇಳಿ.
ಯಾರಾದರೂ ನಿಧನರಾದರೆ, "ರಾಮ್ ನಾಮ್ ಸತ್ಯ ಹೈ" ಎಂದು ಜಪಿಸಿ (ಭಗವಂತ ರಾಮನ ಹೆಸರು ಮಾತ್ರ ಪರಮ ಸತ್ಯವಾದುದು).
ದೇವರ ಹೆಸರನ್ನು ಸುಮ್ಮನೇ ಸ್ಮರಿಸಿಕೊಳ್ಳಲು ಕಷ್ಟವೇನಿದೆ? ಯಾವುದೇ ಕಷ್ಟವೂ ಇಲ್ಲ.
ನೀವು ಕಾರನ್ನು ಹತ್ತುವಾಗ "ಓಂ ನಮೋ ನಾರಾಯಣ" ಎಂದು ಹೇಳಿ ಮತ್ತು ನಂತರ ಕಾರಿನಲ್ಲಿ ಕುಳಿತುಕೊಳ್ಳಿ. ಕಾರಿನಿಂದ ಹೊರಗೆ ಇಳಿಯುವ ಮೊದಲು ಕೂಡಾ ನಾಮ ಸ್ಮರಣೆ ಮಾಡಿ ಮತ್ತು ನಂತರ ಹೊರಬನ್ನಿ.
ಈ ರೀತಿಯಲ್ಲಿ, ನಾಮ ಸ್ಮರಣೆ ಮಾಡುವುದನ್ನು ನೀವೊಂದು ಅಭ್ಯಾಸವನ್ನಾಗಿ ಮಾಡಿಕೊಳ್ಳುವಿರಿ, ಅಲ್ಲವೇ? ಆದುದರಿಂದ ನಿಮ್ಮ ಕೊನೆಯ ಕ್ಷಣಗಳಲ್ಲಿ, ಮರಣದ ಸಮಯದಲ್ಲಿ, ಪ್ರಾಣವು ನಿಮ್ಮ ಶರೀರವನ್ನು ತ್ಯಜಿಸಲಿರುವಾಗ ಕೂಡಾ ನೀವು ನಾಮ ಸ್ಮರಣೆ ಮಾಡುವಿರಿ ಯಾಕೆಂದರೆ ಆ ಸಮಯದಲ್ಲಿ ಅದು ನಿಮಗೆ ಸಹಜವಾಗಿ ಬರುತ್ತದೆ ಮತ್ತು ಇದು ನಿಮ್ಮನ್ನು ಒಂದು ಉತ್ತಮ ರೀತಿಯಲ್ಲಿ ಮೇಲಕ್ಕೆತ್ತುವುದು.

ಪ್ರಶ್ನೆ: ಗುರುದೇವ, ನನ್ನ ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ನಾನು ಎಲ್ಲಿಯ ವರೆಗೆ ಪ್ರಗತಿ ಹೊಂದಿರುವೆನೆಂಬುದನ್ನು ನಾನು ತಿಳಿಯಲು ಬಯಸುತ್ತೇನೆ. ಈ ದಿನಗಳಲ್ಲಿ ನಾನು ನಿಮ್ಮ ಕಾರಿನ ಹಿಂದೆ ಓಡುವುದನ್ನು ಕೂಡಾ ನಿಲ್ಲಿಸಿದ್ದೇನೆ. ಇದರರ್ಥ ನಾನು ಆಧ್ಯಾತ್ಮಿಕವಾಗಿ ಬೆಳವಣಿಗೆ ಹೊಂದಿರುವೆನೆಂದೇ ಅಥವಾ ಇದರರ್ಥ ನಿಮ್ಮ ಕಡೆಗಿರುವ ನನ್ನ ಭಕ್ತಿಯು ಕಡಿಮೆಯಾಗಿರುವುದೆಂದೇ?
ಶ್ರೀ ಶ್ರೀ ರವಿ ಶಂಕರ್: ಇದನ್ನು ನೀನು ಮಾತ್ರ ತಿಳಿಯಬಲ್ಲೆ.
ಒಮ್ಮೆ ನೀವು ಈ ದಾರಿಗೆ ಬಂದರೆ, ನೀವು ಪ್ರಗತಿ ಹೊಂದುವಿರಿ. ನೀವು ಮುಂದಕ್ಕೆ ಮಾತ್ರ ಸಾಗುವಿರಿ.
ನೋಡಿ, ನೀವು ನನ್ನ ಕಾರಿನ ಹಿಂದೆ ಓಡುವಿರೇ ಇಲ್ಲವೇ ಎಂಬುದರ ಮೇಲೆ ನಿಮ್ಮ ಬೆಳವಣಿಗೆಯನ್ನು ಅಳೆಯಬೇಡಿ. ಹಾಗೆ ಯಾವತ್ತೂ ಮಾಡಬೇಡಿ. ನೀವು ಎಷ್ಟು ಕೇಂದ್ರಿತರಾಗಿರುವಿರಿ? ಇದನ್ನು ನೀವು ನೋಡಬೇಕಾಗಿರುವುದು. ನೀವು ಹೆಚ್ಚು ಕೇಂದ್ರಿತರಾದಷ್ಟೂ, ನೀವು ಈ ಪಥದಲ್ಲಿ ಹೆಚ್ಚು ಪ್ರಗತಿ ಹೊಂದಿರುವಿರಿ. ನೀವೆಲ್ಲೇ ಇದ್ದರೂ, ಅಲ್ಲಿರಿ ಮತ್ತು ಸ್ಥಿರವಾಗಿರಿ. ನಿಮ್ಮ ಮನಸ್ಸನ್ನು ಆತ್ಮದ ಕಡೆಗೆ ತನ್ನಿ.
ನೀವು ನೆನಪಿನಲ್ಲಿಡಬೇಕಾದುದೇನೆಂದರೆ, ನಿಮ್ಮಲ್ಲಿ ಭಕ್ತಿಯ ಯಾವುದೇ ಕೊರತೆಯೂ ಇಲ್ಲ. ನಿಮ್ಮಲ್ಲಿ ಸಾಕಷ್ಟು ಭಕ್ತಿಯಿಲ್ಲವೆಂಬುದಾಗಿ ಯೋಚಿಸಲೂ ಬೇಡಿ. ಹೌದು, ಕೆಲವೊಮ್ಮೆ ಭಕ್ತಿಯು ಅಡಗಿಹೋಗಬಹುದು, ಆದರೆ ಅದು ಕೇವಲ ಸ್ವಲ್ಪ ಸಮಯದ ವರೆಗೆ ಮಾತ್ರ, ಬೇಗನೇ ಅದು ಪುನಃ ಮೇಲೆ ಬರುವುದು.
ಭಾವನೆಗಳು ಯಾವತ್ತೂ ಸ್ಥಿರವಾಗಿರಲು ಸಾಧ್ಯವಿಲ್ಲ. ನಮ್ಮ ಅನುರಾಗವು ಕೂಡಾ ಎಲ್ಲಾ ಸಮಯದಲ್ಲೂ ಒಂದೇ ಆಗಿರುವುದಿಲ್ಲ. ಅಲ್ಲಿ ಏಳು ಬೀಳುಗಳು ಇರುತ್ತವೆ. ಭಾವನೆಗಳು ಕಲ್ಲುಗಳಂತಲ್ಲ, ಅವುಗಳು ನೀರಿನಂತೆ. ನೀರಿನಲ್ಲಿ ಹೇಗೆ ತರಂಗಗಳು ಏಳುತ್ತವೆಯೋ, ಅದೇ ರೀತಿಯಲ್ಲಿ ಅದು ಭಾವನೆಗಳಿಗೆ ಕೂಡಾ ಅನ್ವಯಿಸುತ್ತದೆ. ಭಾವನೆಗಳು ಏಳುತ್ತವೆ ಮತ್ತು ನಂತರ ಅವುಗಳು ನೆಲೆನಿಲ್ಲುತ್ತವೆ, ಹಾಗೂ ನಂತರ ಪುನಃ ಅವುಗಳು ಏಳುತ್ತವೆ. ಇದು ಕೇವಲ ಸ್ವಾಭಾವಿಕವಾದುದು. ಅದಕ್ಕಾಗಿಯೇ ಪ್ರೀತಿ ಮತ್ತು ಹಾತೊರೆತಗಳು ಯಾವತ್ತೂ ಜೊತೆಯಲ್ಲಿ ಸಾಗುವುದು. ನಿಮಗೆ ಕೆಲವೊಮ್ಮೆ ತೀವ್ರವಾದ ಹಾತೊರೆತದ ಅನುಭವವಾಗುತ್ತದೆ ಮತ್ತು ಕೆಲವೊಮ್ಮೆ ನಿಮಗೆ ಹೇರಳವಾದ ಪ್ರೀತಿಯ ಅನುಭವವಾಗುತ್ತದೆ. ನಂತರ ನಿಮಗೆ ಪುನಃ ಹಾತೊರೆತದ ಅನುಭವವಾಗುತ್ತದೆ ಮತ್ತು ನಂತರ ಉತ್ಕಟ ಪ್ರೇಮ. ಇದು ಜೀವನದಲ್ಲಿ ಆಗುತ್ತಾ ಇರುವುದು.

ಪ್ರಶ್ನೆ: ಪ್ರೀತಿಯ ಗುರುದೇವ, ನೀವು ಮೂರು ರೀತಿಯ ಭಕ್ತರ ಬಗ್ಗೆ ಮಾತನಾಡಿರುವಿರಿ. ಗುರುಗಳು ಕೂಡಾ ವಿವಿಧ ಸ್ವಾದಗಳಲ್ಲಿರುವರೇ?
ಶ್ರೀ ಶ್ರೀ ರವಿ ಶಂಕರ್: ಹೌದು, ಖಂಡಿತವಾಗಿ!
ಚರಿತ್ರೆಯು ಹಲವಾರು ವಿವಿಧ ರೀತಿಯ ಗುರುಗಳನ್ನು ನೋಡಿದೆ. ವಾಸ್ತವವಾಗಿ ಅವರೆಲ್ಲರೂ ಬಹಳ ಅನನ್ಯರು ಮತ್ತು ಪ್ರತಿಯೊಬ್ಬರೂ ವ್ಯತ್ಯಸ್ತರು. ಸ್ವಲ್ಪ ಹೆಚ್ಚು ರಾಜಸಿಕ ಗುಣವಿರುವವರು ಮತ್ತು ಸ್ವಲ್ಪ ತಾಮಸಿಕ ಗುಣವಿರುವವರು ಇದ್ದಾರೆ, ಅದೇ ವೇಳೆಯಲ್ಲಿ ಕೆಲವರು ಹೆಚ್ಚು ಸಾತ್ವಿಕರು.
ಒಂದು ದಿನ ನಾನು ಪ್ರಸ್ತಾಪಿಸಿದ್ದೆ, ಬಹಳ ಹಿಂದೆ ಎಂಭತ್ತರ ಆರಂಭದಲ್ಲಿ, ನಾನು ಕೇವಲ ೨೩ ಅಥವಾ ೨೪ ವರ್ಷ ವಯಸ್ಸಿನವನಾಗಿದ್ದಾಗ, ದಿಲ್ಲಿಯ ಹೊರವಲಯದಲ್ಲಿ ಒಬ್ಬರು ಸಂತರನ್ನು ನಾನು ಭೇಟಿಯಾದೆ. ಈ ಸಂತರು ನನ್ನಲ್ಲಿ ಹೇಳಿದರು, "೨೪ ಕ್ಯಾರೆಟ್ ಚಿನ್ನವಾದರೆ ನಿಮಗೆ ಅದರಿಂದ ಯಾವುದೇ ಆಭರಣವನ್ನು ತಯಾರಿಸಲು ಸಾಧ್ಯವಿಲ್ಲ. ನೀವದಕ್ಕೆ ಸ್ವಲ್ಪ ತಾಮ್ರ ಅಥವಾ ಏನನ್ನಾದರೂ ಸೇರಿಸಬೇಕಾಗುತ್ತದೆ, ಆಗ ಮಾತ್ರ ಅದೊಂದು ಆಭರಣವಾಗುತ್ತದೆ." ಅವರಂದರು, "ನೀನು ಕೂಡಾ ಏನನ್ನಾದರೂ ಸೇರಿಸಬೇಕು. ನೀನು ೨೪ ಕ್ಯಾರೆಟ್ ಚಿನ್ನವಾಗಲು ಸಾಧ್ಯವಿಲ್ಲ, ಇಲ್ಲದಿದ್ದರೆ ಎಲ್ಲರಿಗೂ ಪ್ರಯೋಜನಕಾರಿಯಾಗಲು ನಿನಗೆ ಸಾಧ್ಯವಿಲ್ಲ."
ನಾನಂದೆ, "ಇಲ್ಲ ಬಾಬಾ, ನಾನು ೨೪ ಕ್ಯಾರೆಟ್ ಆಗಿಯೇ ಇರುತ್ತೇನೆ ಬಿಡಿ. ಏನಾಗುವುದೋ ಅದಾಗಲಿ."
ಅವರಂದರು, "ನೀನು ಬಹಳ ವೇಗವಾಗಿ ಹರಡಬಹುದು. ನೀನು ಯಾಕೆ ತಂತ್ರದ ಬಗ್ಗೆ ಕಲಿಯಬಾರದು. ಕೆಲವು ಆತ್ಮಗಳ ಬಗ್ಗೆ ಕಲಿ ಮತ್ತು ನಂತರ ನೀನು ಕೆಲವು ಆತ್ಮಗಳನ್ನು ನಿಯಂತ್ರಿಸಬಹುದು ಹಾಗೂ ಸ್ವಲ್ಪ ಜಾದೂ ಮಾಡಬಹುದು."
ನಾನಂದೆ, "ನನಗೆ ಇವುಗಳಲ್ಲಿ ಯಾವುದನ್ನೂ ಮಾಡಬೇಕಾದ ಅಗತ್ಯವಿಲ್ಲ. ಅವುಗಳು ನಿಮ್ಮನ್ನು ಅತ್ಯುನ್ನತವಾದುದರ ಕಡೆಗೆ ಒಯ್ಯುವುದಿಲ್ಲವೆಂಬುದು ನನಗೆ ಗೊತ್ತು."
ಹೀಗೆ, ಇಂತಹ ಪವಾಡಗಳನ್ನು ಸ್ವಲ್ಪ ಮಾಡುವ ಜನರಿದ್ದಾರೆ, ಆದರೆ ಅದು ಕೇವಲ ಅಲ್ಪಾವಧಿಯವರೆಗೆ ಮಾತ್ರ ಇರುತ್ತದೆ. ಆಮೇಲೆ ಏನಾಗುತ್ತದೆಯೆಂದರೆ, ಯಾರಿಂದ ನೀವು ಕೆಲಸ ಮಾಡಿಸುವಿರೋ ಆ ಆತ್ಮಗಳು ನಿಮ್ಮ ಮೇಲೆ ಅಧಿಕಾರವನ್ನು ಸಾಧಿಸುತ್ತವೆ. ಇದೆಲ್ಲವೂ ಒಂದು ಬಹಳ ಅಲ್ಪ ಕಾಲಾವಧಿಯ ವರೆಗೆ ಮಾತ್ರ ಇರುತ್ತದೆ, ಅದು ನಿಮ್ಮೊಂದಿಗೆ ಉಳಿಯುವಂತಹದ್ದಲ್ಲ.
ಅದಕ್ಕಾಗಿಯೇ, ಶುದ್ಧವಾದ ಸಾತ್ವಿಕ ಜ್ಞಾನ, ಸಮರಸವಾದ ಜ್ಞಾನ ಅತ್ಯುತ್ತಮವಾದುದು ಮತ್ತು ಅದು ದೀರ್ಘ ಕಾಲ ಇರುವಂತಹದ್ದು. ಅದರಲ್ಲಿ ಯಾವುದೇ ತಮೋ ಗುಣ ಅಥವಾ ರಜೋ ಗುಣವಿಲ್ಲ. ಪ್ರಭಾವವು ಶಾಶ್ವತವೂ, ದೀರ್ಘ ಕಾಲ ಉಳಿಯುವಂತಹದ್ದೂ ಆಗಿರುತ್ತದೆ ಮತ್ತು ಅದು ನಿಮ್ಮನ್ನು ಅತ್ಯುನ್ನತವಾದುದರ ಕಡೆಗೆ ಒಯ್ಯುತ್ತದೆ; ಅತ್ಯುನ್ನತವಾದುದಕ್ಕಿಂತ ಕಡಿಮೆಯಾಗಿರುವ ಯಾವುದರ ಕಡೆಗೂ ಅಲ್ಲ.
ಈ ಸಂತರು ಬಹಳ ಒಳ್ಳೆಯ ಸಂತರಾಗಿದ್ದರು, ಅವರು ಕೆಟ್ಟವರಾಗಿದ್ದರೆಂದಲ್ಲ. ಅವರು ಬಹಳ ಒಳ್ಳೆಯ ವ್ಯಕ್ತಿಯಾಗಿದ್ದರು. ಆ ದಿನಗಳಲ್ಲಿ ಅವರು ತಮ್ಮ ೭೦ರ ವಯಸ್ಸಿನಲ್ಲೇನೋ ಇದ್ದರು, ಮತ್ತು ಅವರು ಕೇವಲ ಒಂದು ಸಲಹೆ ನೀಡಿದರಷ್ಟೆ. ನಾನು ಇಲ್ಲವೆಂದು ಹೇಳಿದಾಗ, ಅವರು ಅದನ್ನು ನಿಜವಾಗಿ ಮೆಚ್ಚಿಕೊಂಡರು. ಅವರಂದರು, "ಹೌದು, ಇದು ಒಳ್ಳೆಯದು."
ಬಹುಶಃ ಅವರು ನನ್ನನ್ನು ಪರೀಕ್ಷಿಸಲು ಬಯಸಿದ್ದಿರಬಹುದು, ಏನಾದರೂ ಮಾಡಲು ನನಗೆ ಆಮಿಷವೊಡ್ಡಲು ಸಾಧ್ಯವೇ ಎಂದು.

ಪ್ರಶ್ನೆ: ನಾವು ಯಾರನ್ನಾದರೂ ಮೊದಲ ಬಾರಿಗೆ ಭೇಟಿಯಾಗುವಾಗ, ಅಭಿಪ್ರಾಯಗಳು ಮತ್ತು ತೀರ್ಮಾನಗಳು ಸ್ವಾಭಾವಿಕವಾಗಿ ರೂಪುಗೊಳ್ಳುತ್ತವೆ. ಒಬ್ಬರನ್ನು ನಾವು ಮೊದಲ ಭೇಟಿಯಲ್ಲಿ ಇಷ್ಟಪಡುತ್ತೇವೆ ಮತ್ತು ಕೆಲವು ಜನರನ್ನು ನಾವು ಯಾವುದೇ ಕಾರಣವಿಲ್ಲದೆಯೇ ಇಷ್ಟಪಡದೇ ಇರುತ್ತೇವೆ. ಅದು ಯಾಕೆ ಹಾಗೆ ಗುರುದೇವ?
ಶ್ರೀ ಶ್ರೀ ರವಿ ಶಂಕರ್: ಅದು ಹಾಗೆಯೇ. ಪ್ರಪಂಚವು ಕಂಪನಗಳಿಂದ ಕಾರ್ಯನಿರ್ವಹಿಸುತ್ತದೆ ಮತ್ತು ನಾವೆಲ್ಲರೂ ಕಂಪನದಿಂದ ಕೆಲಸ ಮಾಡುತ್ತೇವೆ. ಕೆಲವು ಜನರ ಕಂಪನಗಳು ಹೆಚ್ಚು ಆಹ್ಲಾದಕರವಾಗಿರುತ್ತವೆ ಮತ್ತು ನೀವು ಅದಕ್ಕೆ ಸುಲಭವಾಗಿ ಪ್ರತಿಕ್ರಿಯಿಸುತ್ತೀರಿ. ಇತರ ಕೆಲವರ ಕಂಪನಗಳು ಸ್ವಲ್ಪ ಅನಾಕರ್ಷಕವಾಗಿರುತ್ತವೆ.
ನೀವು ಬಹಳ ಕೇಂದ್ರಿತರಾದಾಗ, ಯಾರೊಂದಿಗೂ ಅನಾಕರ್ಷಕ ಕಂಪನದ ಅನುಭವವಾಗುವುದಿಲ್ಲ ಮತ್ತು ನಿಮ್ಮನ್ನು ನಿಮ್ಮ ಕೇಂದ್ರದಿಂದ ಅಲ್ಲಾಡಿಸುವವರು ಯಾರೂ ಇರುವುದಿಲ್ಲ. ಅದು ಅತ್ಯಂತ ಹೆಚ್ಚು ಅಪೇಕ್ಷಣೀಯ ಸ್ಥಿತಿ - ಎಲ್ಲಿ ಯಾವುದೇ ಕಡುಬಯಕೆಗಳಾಗಲೀ ತಿರಸ್ಕಾರಗಳಾಗಲೀ ಇರುವುದಿಲ್ಲವೋ; ಯಾವುದೇ ಅನಾಕರ್ಷಣೆಯಾಗಲೀ ಅಥವಾ ಯಾವುದೇ ನಿರ್ಬಂಧವಾಗಲೀ ಅಥವಾ ಆಕರ್ಷಣೆಯಾಗಲೀ ಇರುವುದಿಲ್ಲವೋ ಅದು. ಆಗ ಎಲ್ಲವೂ ಮನೋಹರವಾಗಿ ಕಾಣಿಸುತ್ತದೆ. ಎಲ್ಲರೂ ನಿಮ್ಮೊಂದಿಗೆ ಸಾಮರಸ್ಯದಲ್ಲಿರುತ್ತಾರೆ ಮತ್ತು ಎಲ್ಲವೂ ನಿಮ್ಮೊಂದಿಗೆ ಸಾಮರಸ್ಯದಲ್ಲಿರುತ್ತದೆ. ಅದುವೇ ನಿಮ್ಮ ಸುತ್ತಲೂ ವಿಸ್ತರಿಸಿರುವ ಆಂತರಿಕ ಆನಂದ.

ಪ್ರಶ್ನೆ: ಗುರುದೇವ, ನಿದ್ರೆಯ ಜ್ಞಾನವು ಮುಕ್ತಿಯನ್ನು ತರುತ್ತದೆಯೆಂದು ನೀವು ಹೇಳಿರುವಿರಿ. ಇದರರ್ಥವೇನು?
ಶ್ರೀ ಶ್ರೀ ರವಿ ಶಂಕರ್: ನಿದ್ರೆ ಮತ್ತು ಕನಸುಗಳ ಜ್ಞಾನವು ನಿಮ್ಮನ್ನು ಸಮಾಧಿಯ ಒಂದು ಬೇರೆಯ ಸ್ಥಿತಿಯೊಳಕ್ಕೆ ಒಯ್ಯಬಹುದು. ಇದು, ಯೋಗಸೂತ್ರದಲ್ಲಿ ಪತಂಜಲಿ ಋಷಿಯಿಂದ ಹೇಳಲ್ಪಟ್ಟ ವಿಧಾನಗಳಲ್ಲೊಂದು.
ಮಹಾಋಷಿ ಪತಂಜಲಿಯು, ’ಸ್ವಪ್ನನಿದ್ರಜ್ಞಾನಾಲಂಬನಂ ವ’ ಎಂಬ ಸೂತ್ರವನ್ನು ಹೇಳಿದ್ದಾರೆ.
ಇದು ಅವರು ವಿವಿಧ ರೀತಿಯ ಸಮಾಧಿಗಳನ್ನು ವಿವರಿಸುವಾಗ ಹೇಳುವ ಸಮಾಧಿಗಳಲ್ಲೊಂದು.
ನಿದ್ರೆ ಮತ್ತು ಎಚ್ಚರದ ಸ್ಥಿತಿಗಳ ನಡುವೆ ನಿದ್ರೆಯು ಮನಸ್ಸಿನಲ್ಲಿ ಹೇಗೆ ಏಳುತ್ತದೆಯೆಂಬುದು ನಿನಗೆ ತಿಳಿದಿದ್ದರೆ, ಅಲ್ಲಿ ಸಂಪೂರ್ಣ ಸ್ಥಿರತೆಯ ಒಂದು ಕಿಡಿಯಿದೆ. ಸ್ಥಿರತೆಯ ಕಿಡಿ ಮಾತ್ರವೆಂದು ನಾನು ಹೇಳುತ್ತಿದ್ದೇನೆ ಯಾಕೆಂದರೆ ಸ್ಥಿರತೆಯು ಬಹಳ ಕ್ರಿಯಾಶೀಲವಾದುದು, ಬಹಳ ಜೀವಂತವಾದುದು. ಅದರ ಬಗ್ಗೆಯೇ ಅವರು ಮಾತನಾಡುತ್ತಿರುವುದು.
ಆದುದರಿಂದ ನೀವು ಗಮನಿಸಿದರೆ, ನಿದ್ರೆಗೆ ಜಾರುವುದಕ್ಕೆ ಸ್ವಲ್ಪ ಮುನ್ನ ಅಥವಾ ನೀವು ಎಚ್ಚರವಾದ ತಕ್ಷಣ, ನೀವು ಸಂಪೂರ್ಣವಾಗಿ ನಿದ್ರೆಯಲ್ಲಿಯೂ ಇರುವುದಿಲ್ಲ ಸಂಪೂರ್ಣವಾಗಿ ಎಚ್ಚರದಲ್ಲಿಯೂ ಇರುವುದಿಲ್ಲ. ಆ ಅಂತರದಲ್ಲಿ ಅಲ್ಲಿ ನಿರ್ದಿಷ್ಟವಾದ ಶಾಂತಿಯಿರುತ್ತದೆ, ಪ್ರಜ್ಞೆಯ ಒಂದು ನಿರ್ದಿಷ್ಟ ಗುಣಮಟ್ಟವಿರುತ್ತದೆ, ಅದು ಬಹಳ ಸುಂದರವಾಗಿರುತ್ತದೆ, ಬಹಳ ಹಿತವಾಗಿರುತ್ತದೆ ಮತ್ತು ಬಹಳ ಶಮನಕಾರಿಯಾಗಿರುತ್ತದೆ. ಅದನ್ನೇ ಅಲ್ಲಿ ಹೇಳಿರುವುದು.

ಪ್ರಶ್ನೆ: ಗುರುದೇವ, ಕೆಲವೊಮ್ಮೆ ಹಾತೊರೆತವು ತೀವ್ರವಾದಾಗ, ಅದು ಕ್ರೋಧ ಅಥವಾ ನಿರಾಶೆಯ ಭಾವನೆಯೊಂದಿಗೆ ಕೊನೆಯಾಗುತ್ತದೆ. ಅದನ್ನು ನಿರ್ವಹಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಹಾತೊರೆತವನ್ನು ಅಂತರ್ಮುಖವಾಗಿಸಿಕೊಳ್ಳಬೇಕಾಗಿದೆ. ನೀನು ಧ್ಯಾನದಲ್ಲಿ ಆಳಕ್ಕೆ ಹೋಗಬೇಕು. ಅಥವಾ ಅದಕ್ಕೊಂದು ಸೃಜನಾತ್ಮಕ ರೂಪವನ್ನು ಕೊಡು; ಕೆಲವು ಕವಿತೆಗಳನ್ನು ಅಥವಾ ಬರಹಗಳನ್ನು ಬರೆ. ಬರವಣಿಗೆಯು ಸಹಾಯ ಮಾಡಬಹುದು.
ನಿಮಗೆ ಗೊತ್ತಾ, ಬಹಳಷ್ಟು ಮಹಾನ್ ಕೃತಿಗಳು ಹಾತೊರೆತದಿಂದ ಬಂದಿವೆ; ಅದು ಚಿತ್ರಕಲೆಯಾಗಿರಲಿ, ಸಂಗೀತವಾಗಿರಲಿ, ನಾಟಕವಾಗಿರಲಿ, ಸಾಹಿತ್ಯವಾಗಿರಲಿ, ಇವುಗಳೆಲ್ಲವೂ ಆಳವಾದ ಹಾತೊರೆತದಿಂದ ಹೊರಬಂದಿವೆ.
ಆದುದರಿಂದ ನಿನ್ನ ಹಾತೊರೆತಕ್ಕೆ ಒಂದು ಸೃಜನಾತ್ಮಕ ದಿಕ್ಕನ್ನು ಕೊಡು ಅಥವಾ ಅದನ್ನು ಅಂತರ್ಮುಖವಾಗಿಸು, ಧ್ಯಾನದಲ್ಲಿ ಆಳಕ್ಕೆ ಹೋಗು.

ಪ್ರಶ್ನೆ: ಗುರುದೇವ, ಅಧಿಕಾರವು ಭ್ರಷ್ಟರನ್ನಾಗಿಸುತ್ತದೆ ಎಂದು ಹೇಳಲಾಗಿದೆ. ಒಬ್ಬನು ಅಧಿಕಾರವನ್ನು ನಿರ್ವಹಿಸಬಹುದಾದ ರೀತಿಯ ಕುರಿತು ನೀವು ಮಾತನಾಡುವಿರಾ?
ಶ್ರೀ ಶ್ರೀ ರವಿ ಶಂಕರ್: ನಿಮ್ಮ ಉದ್ದೇಶಗಳು ಸರಿಯಿಲ್ಲದಿರುವಾಗ ಅಧಿಕಾರವು ಭ್ರಷ್ಟರನ್ನಾಗಿಸುತ್ತದೆ. ನಿಮ್ಮ ಉದ್ದೇಶಗಳು ಸರಿಯಿಲ್ಲದಿರುವಾಗ ನೀವು ಒಂದು ಭ್ರಷ್ಟವಾದ ರೀತಿಯಲ್ಲಿ ಅಧಿಕಾರವನ್ನು ಸಂಪಾದಿಸಲು ಪ್ರಯತ್ನಿಸುವಿರಿ.
ಕೆಲವರನ್ನುತ್ತಾರೆ, ಅಧಿಕಾರವು ವಿಷವೆಂದು. ಅದನ್ನು ನೀವು ನಿಮ್ಮ ಸ್ವಾರ್ಥದ ಕಾರಣಕ್ಕಾಗಿ ಬಳಸಿಕೊಳ್ಳುತ್ತಿರುವುದಾದರೆ, ನಾನದನ್ನು ಒಪ್ಪುತ್ತೇನೆ. ಆದರೆ ನೀವು ಅಧಿಕಾರವನ್ನು ಸೇವೆಗಾಗಿ ಬಳಸುತ್ತಿರುವುದಾದರೆ, ಆಗ ಅದೊಂದು ಸಲಕರಣೆ. ನಿಮ್ಮ ಉದ್ದೇಶವು ಜನರಿಗೆ ಸೇವೆ ಮಾಡುವುದಾದರೆ, ಅಧಿಕಾರವು ಕೇವಲ ಒಂದು ಸಲಕರಣೆಯಾಗಿದೆ.

ಪ್ರಶ್ನೆ: ಗುರುದೇವ, ಸಂಗತಿಗಳು ಚೆನ್ನಾಗಿ ನಡೆಯುತ್ತಿರುವಾಗ ಕೃತಜ್ಞನಾಗಿರುವುದು ಬಹಳ ಸುಲಭ. ಸಂಗತಿಗಳು ಚೆನ್ನಾಗಿ ನಡೆಯದಿರುವಾಗ ಕೃತಜ್ಞತೆಯನ್ನು ಅನುಭವಿಸುವುದು ಹಾಗೂ ನಿಮ್ಮ ಅನುಗ್ರಹದ ಬಗ್ಗೆ ತಿಳಿದಿರುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಹಿಂದೆ ಹೇಗೆ ಕಷ್ಟಕಾಲಗಳು ಸುಲಭವಾಗಿ ಹೋದವು ಎಂಬುದನ್ನು ಸ್ಮರಿಸಿಕೊಳ್ಳಿ. ನೀವು ಕಷ್ಟಕಾಲಗಳ ಮೂಲಕ ತೇಲಿಹೋದಿರಿ. ಅದು ನಿಮಗೆ ವಿಶ್ವಾಸವನ್ನು ನೀಡುತ್ತದೆ ಮತ್ತು ನಿಮ್ಮಲ್ಲಿ ಬಲವಾದ ನಂಬಿಕೆಯನ್ನು ತುಂಬುತ್ತದೆ.

ಪ್ರಶ್ನೆ: ಗುರುದೇವ, ತಂತ್ರಜ್ಞಾನವು ಸುಖವನ್ನು ತರುತ್ತದೆ, ಆದರೆ ಅದು ಮಾಲಿನ್ಯವನ್ನು ಕೂಡಾ ಹೆಚ್ಚಿಸುತ್ತದೆ. ಸುಖಕ್ಕೆ ಪ್ರತಿಯಾಗಿ ಪರಿಸರ, ಅಭಿವೃದ್ಧಿಗಿರುವ ಮಾನದಂಡಗಳು ಯಾವುವಾಗಿರಬೇಕು?  
ಶ್ರೀ ಶ್ರೀ ರವಿ ಶಂಕರ್: ತಂತ್ರಜ್ಞಾನವು ಯಾವತ್ತೂ ಪರಿಸರಕ್ಕೆ ವಿರುದ್ಧವಾಗಿರಬೇಕಾಗಿಲ್ಲ. ಇವತ್ತು ತಂತ್ರಜ್ಞಾನವು ಹೆಚ್ಚು ಹೆಚ್ಚು ಪರಿಸರ ಸ್ನೇಹಿಯಾಗುವತ್ತ ಮುಂದುವರಿಯುತ್ತಿದೆ. ಆದುದರಿಂದ ನಾವು ತಂತ್ರಜ್ಞಾನವನ್ನು ಹೊಂದಬಹುದು ಮತ್ತು ಆಗಲೂ ಪರಿಸರದ ಬಗ್ಗೆ ಕಾಳಜಿಯನ್ನು ವಹಿಸಬಹುದು, ಆದರೆ ಪರಿಸರವು ಬಹಳ ಪ್ರಧಾನವಾದುದು. ಅದು ಹೆಚ್ಚು ಮುಖ್ಯವಾದುದು.

ಪ್ರಶ್ನೆ: ಗುರುದೇವ, ಒಂದು ಸಂಬಂಧದಲ್ಲಿ ಒಬ್ಬ ವ್ಯಕ್ತಿಯು ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲವೆಂಬುದನ್ನು ಖಾತ್ರಿ ಮಾಡಿಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಅದರ ಬಗ್ಗೆ ಚಿಂತಿಸಬೇಡ, ಅದು ಬಹಳ ಸ್ವಾಭಾವಿಕ. ಜನರು ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ ಯಾಕೆಂದರೆ ನೀವು ಈಗಾಗಲೇ ಅವರಿಗೆ ಸೇರಿದವರು ಎಂದು ಅವರು ಯೋಚಿಸುತ್ತಾರೆ, ಮತ್ತು ಇದರಿಂದಾಗಿ ಅವರು ಅತಿಥಿಗಳಾಗಿರುವ ಜನರಿಗೆ ಮಾತ್ರ ಗಮನ ನೀಡುತ್ತಾರೆ. ನೀವು ಕುಟುಂಬದ ಒಂದು ಭಾಗ, ಯಾರಾದರೂ ನಿಮ್ಮಲ್ಲಿ "ನಿನಗೆ ಕಾಫಿಯಾಯಿತೇ? ನೀನೀಗ ತಿನ್ನುವೆಯಾ?" ಎಂದು ಯಾಕೆ ಕೇಳಬೇಕು? ಅದು ಸಹಜವಲ್ಲ! ಯಾರಾದರೂ ಸ್ವಲ್ಪ ಹೆಚ್ಚೇ ಪ್ರಶ್ನೆಗಳನ್ನು ಕೇಳಿದರೆ, ಆಗ ಕೂಡಾ ನೀವು ಸಂಶಯಿಸುವಿರಿ, "ಅವರು ಯಾಕೆ ನನಗೆ ಅಷ್ಟೊಂದು ಗಮನವನ್ನು ನೀಡುತ್ತಿದ್ದಾರೆ. ಏನೋ ಇರಬೇಕು ." ನೀವು ಸಂಶಯಿಸಲು ತೊಡಗುತ್ತೀರಿ.
ಒಂದು ದಿನ ಒಬ್ಬ ಸಜ್ಜನನು ನನ್ನಲ್ಲಿ ಅಂದನು, "ಗುರುದೇವ, ನಾನು ನನ್ನ ಪತ್ನಿಯ ಕಡೆಗೆ ಗಮನ ನೀಡುವಾಗ ಮತ್ತು ಅವಳೊಂದಿಗೆ ಸ್ವಲ್ಪ ಚೆನ್ನಾಗಿರುವಾಗ ಅವಳು ಸಂಶಯಿಸಲು ತೊಡಗುತ್ತಾಳೆ. ಏನೋ ತಪ್ಪಿದೆಯೆಂದು ಅವಳು ಹೇಳುತ್ತಾಳೆ ಮತ್ತು ನನ್ನಲ್ಲಿ ಕೇಳುತ್ತಾಳೆ "ಏನು ವಿಷಯ? ನೀವು ಏನೋ ತಪ್ಪು ಮಾಡಿರಬೇಕು. ನೀವು ಪ್ರಾಮಾಣಿಕರಾಗಿಲ್ಲ" ಎಂದು. ನಾನು ಸಾಮಾನ್ಯವಾಗಿರುವಂತೆ ಇದ್ದರೆ, ನಾನವಳನ್ನು ನಿರ್ಲಕ್ಷಿಸುತ್ತೇನೆಂದು ಅವಳು ಹೇಳುತ್ತಾಳೆ. ಏನು ಮಾಡುವುದು ಗುರುದೇವ?"
ಹೀಗೆ ಒಬ್ಬರು ನಿಮ್ಮ ಬಗ್ಗೆ ಸಂಶಯಿಸಲು ಬಯಸುವಾಗ, ಹೇಗಿದ್ದರೂ ಅವರು ನಿಮ್ಮ ಬಗ್ಗೆ ಸಂಶಯಿಸಲು ತೊಡಗುವರು.
ಅವನಂದನು, "ಇದು ಬಹಳ ಕಷ್ಟ. ನಾನು ಅರ್ಧ ಗಂಟೆ ತಡವಾಗಿ ಬಂದರೆ, ಅವಳು ಒಂದು ತನಿಖಾ ಆಯೋಗಕ್ಕೆ ಕುಳಿತುಕೊಳ್ಳುತ್ತಾಳೆ, "ನೀವೆಲ್ಲಿಗೆ ಹೋದಿರಿ? ನೀವು ಎಷ್ಟು ಗಂಟೆಗೆ ಕಛೇರಿಯನ್ನು ಬಿಟ್ಟಿರಿ? ಏನಾಯಿತು? ಅವಳು ನನ್ನಲ್ಲಿ ಈ ಎಲ್ಲಾ ಪ್ರಶ್ನೆಗಳನ್ನು ಕೇಳುತ್ತಾಳೆ."
ಅದಕ್ಕಾಗಿಯೇ ನಾನು ಹೇಳುವುದು, ನಾವು ನಮ್ಮದೇ ಮನಸ್ಸನ್ನು ನಿರ್ವಹಿಸುವುದು ಹೇಗೆಂಬುದನ್ನು ಕಲಿಯಬೇಕು. ನಿಮ್ಮ ಮೇಲೆ ಅಷ್ಟೊಂದು ಆಟಗಳನ್ನು ಆಡುವುದು ಮನಸ್ಸಾಗಿದೆ. ನಿಮ್ಮ ಪ್ರಭುತ್ವದಲ್ಲಿದ್ದರೆ, ನಿಮ್ಮ ಮನಸ್ಸು ನಿಮ್ಮ ಅತ್ಯುತ್ತಮ ಮಿತ್ರನಾಗಬಲ್ಲದು ಮತ್ತು ನೀವು ನಿಮ್ಮದೇ ಮನಸ್ಸಿನ ಪ್ರಭಾವದ ಅಡಿಯಲ್ಲಿದ್ದರೆ, ಅದು ನಿಮ್ಮ ಕೆಟ್ಟ ಶತ್ರು.

ಪ್ರಶ್ನೆ: ಗುರುದೇವ, ಕೃಷ್ಣ ಪರಮಾತ್ಮನು ಎಲ್ಲಿಗೆಲ್ಲಾ ಹೋಗುತ್ತಿದ್ದನೋ ಅಲ್ಲೆಲ್ಲಾ ಜಗಳಗಳು ಮತ್ತು ಹೋರಾಟಗಳು ಪ್ರಾರಂಭವಾಗುತ್ತಿದ್ದವು. ಆದರೆ ನೀವು ಎಲ್ಲಿಗೆಲ್ಲಾ ಹೋಗುವಿರೋ, ವ್ಯತ್ಯಾಸಗಳು ಕೊನೆಯಾಗುತ್ತವೆ.
ಶ್ರೀ ಶ್ರೀ ರವಿ ಶಂಕರ್: ಹೌದು, ನಾನು ಅವರ ನಗರಕ್ಕೆ ಅಥವಾ ಪಟ್ಟಣಕ್ಕೆ ಬರುತ್ತಿರುವೆನೆಂಬ ಸಮಾಚಾರ ಜನರಿಗೆ ಸಿಕ್ಕಿದಾಗ, ಅದುವೇ ಜನರ ನಡುವೆ ಹಲವಾರು ಜಗಳಗಳನ್ನು ಸೃಷ್ಟಿಸುತ್ತದೆ. ಒಬ್ಬನು ಹೇಳುತ್ತಾನೆ, "ಗುರುದೇವ ನನ್ನ ಕಾರಿನಲ್ಲಿ ಪ್ರಯಾಣಿಸುವರು." ಇನ್ನೊಬ್ಬನು ಹೇಳುತ್ತಾನೆ, "ಅವರು ನನ್ನ ಮನೆಯಲ್ಲಿ ಇರುತ್ತಾರೆ." ಮೂರನೆಯವನು ಹೇಳುತ್ತಾನೆ, "ಅವರು ನನ್ನ ಮನೆಯಲ್ಲಿ ಊಟ ಮಾಡುತ್ತಾರೆ." ಇದೆಲ್ಲದರಿಂದಾಗಿ, ಜಗಳಗಳು ಆಗಲು ತೊಡಗುತ್ತವೆ. ಆದರೆ ನನ್ನ ಭೇಟಿಯ ನಂತರ, ಜನರು ಸಂತೋಷಗೊಳ್ಳುತ್ತಾರೆ. ನಾನವರನ್ನು ಸಂತೋಷಗೊಳಿಸುವುದನ್ನು ನಾನು ಖಾತ್ರಿಪಡಿಸುತ್ತೇನೆ.

ಪ್ರಶ್ನೆ: ಗುರುದೇವ, ಪತಿ ಮತ್ತು ಪತ್ನಿಯರ ಒಂದು ಸಾಮಾನ್ಯ ಸಂಬಂಧವಾಗಿರುವುದಕ್ಕೆ ಬದಲಾಗಿ, ನಾನು ನನ್ನ ವೈವಾಹಿಕ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಇಬ್ಬರೂ ಜೊತೆಯಲ್ಲಿ ಮುಂದೆ ಸಾಗಬೇಕು ಮತ್ತು ಪರಸ್ಪರರನ್ನು ಆಧರಿಸಬೇಕು.
ಕೆಲವೊಮ್ಮೆ, ಒಬ್ಬ ಸಂಗಾತಿಯು ಒಂದು ವೈವಾಹಿಕ ಸಂಬಂಧದಲ್ಲಿನ ಆಸಕ್ತಿಯನ್ನು ಕಳೆದುಕೊಳ್ಳಬಹುದು, ಅದೇ ಸಮಯದಲ್ಲಿ ಇನ್ನೊಬ್ಬ ಸಂಗಾತಿಯು ಇನ್ನೂ ಆಸಕ್ತಿಯಲ್ಲಿರಬಹುದು; ಹೀಗಾಗಬಹುದು. ಆಗ, ವಿಷಯಗಳು ಸರಿಯಾಗಿ ನಡೆಯುತ್ತಿಲ್ಲವೆಂದು ತೋರಬಹುದು. ಇದಾಗಬಹುದು. ಆದರೆ ಆಗಲೂ ಕೂಡಾ, ನೀವು ಪರಸ್ಪರರನ್ನು ಆಧರಿಸಬೇಕು. ಇಬ್ಬರೂ ಜೊತೆಯಲ್ಲಿ ಮುಂದೆ ಸಾಗಬೇಕು.

ಬುಧವಾರ, ಜನವರಿ 23, 2013

ತಾಳ್ಮೆ ಯೋಗಿಯ ಒ೦ದು ಅ೦ತಃಸತ್ವ

೨೩ ಜನವರಿ ೨೦೧೩
ಬೆಂಗಳೂರು

ಪ್ರಶ್ನೆ: ಗುರುದೇವ, ಕಲಿಯುಗದಲ್ಲಿ ತಪಸ್ಸಿನ ಸಾಮಂಜಸ್ಯವೇನು ಮತ್ತು ನಾವದನ್ನು ಹೇಗೆ ಅರ್ಥೈಸಿಕೊಳ್ಳಬೇಕು?
ಶ್ರೀ ಶ್ರೀ ರವಿ ಶಂಕರ್: ತಪವು ಶರೀರದ ಎಲ್ಲಾ ಅಂಗಗಳನ್ನು ಶುದ್ಧಪಡಿಸುವಲ್ಲಿ ಮತ್ತು ಅವುಗಳಲ್ಲಿನ ಅಶುಚಿತ್ವವನ್ನು ಹೋಗಲಾಡಿಸುವಲ್ಲಿ ಸಹಾಯ ಮಾಡುತ್ತದೆ. ಸಂಪೂರ್ಣ ಶರೀರವು ಸ್ವಚ್ಛವಾಗುತ್ತದೆ ಮತ್ತು ಎಲ್ಲಾ ಜ್ಞಾನೇಂದ್ರಿಯಗಳು ತಪದೊಂದಿಗೆ ಬಲಗೊಳ್ಳುತ್ತವೆ.
ದೇವರನ್ನು ಸಂತೋಷಪಡಿಸಲು ಅಥವಾ ಆತ್ಮ ಸಾಕ್ಷಾತ್ಕರ ಹೊಂದಲು ತಪಸ್ಸು ಮಾಡುವುದಲ್ಲ, ಆದರೆ ಅದನ್ನು ಮಾಡುವುದು ಶರೀರ ಮತ್ತು ಮನಸ್ಸನ್ನು ಬಲಪಡಿಸಲು.
ಹಲವಾರು ಸಂತರು, ವಿಶೇಷವಾಗಿ ಜೈನರಲ್ಲಿ ಸಂತರು ಬಹಳ ಕಠೋರ ತಪಸ್ಸುಗಳನ್ನು ಮಾಡುವುದನ್ನು ನೀವು ನೋಡಿರಬೇಕು. ಜೈನ ಸಂತರು ಬಹಳ ದೂರಗಳ ವರೆಗೆ ಬರಿಗಾಲಿನಲ್ಲಿ ನಡೆಯಬಲ್ಲರು. ಅವರಿಗೆ ಚಳಿಗಾಲಗಳಲ್ಲಿ ಬಹಳ ಚಳಿಯಾಗಲೀ ಅಥವಾ ಬೇಸಿಗೆಗಳಲ್ಲಿ ಅತಿಯಾದ ಸೆಖೆಯಾಗಲೀ ಆಗುವುದಿಲ್ಲ. ತಮ್ಮ ತಪಸ್ಸಿನ ಕಾರಣದಿಂದ ಅವರು ವಿಪರೀತ ಹವಾಮಾನ ಪರಿಸ್ಥಿತಿಗಳಿಗೆ ಒಂದು ಪ್ರತಿರೋಧವನ್ನು ವೃದ್ಧಿಸಿರುತ್ತಾರೆ. ಆದುದರಿಂದ ಇದು ತಪಸ್ಸನ್ನು ಮಾಡುವುದರಿಂದ ಸಿಗುವ ಲಾಭಗಳಲ್ಲೊಂದು. ಆದರೆ ನೀವಿದನ್ನು ಎಳೆಯುವುದಾಗಲೀ ಅಥವಾ ಅತಿಯಾಗಿ ಮಾಡುವುದಾಗಲೀ ಮಾಡಲೇಬಾರದು. ಅತಿಯಾಗಿ ತಪಸ್ಸು ಮಾಡುವುದು ಮತ್ತು ನಿಮ್ಮದೇ ಶರೀರಕ್ಕೆ ತೊಂದರೆ ನೀಡುವುದನ್ನು ಮಾಡಲೇ ಬಾರದು. ಹಾಗೆ ಮಾಡುವುದು ತಪ್ಪು.
ಕೆಲವು ಜನರಿದ್ದಾರೆ, ಅವರು ತಮ್ಮ ನಾಲ್ಕು ಸುತ್ತಲೂ ಮತ್ತು ತಲೆಯ ಮೇಲೆ  ಬೆಂಕಿಯನ್ನು ಹೊತ್ತಿಸಿಕೊಂಡು ಕುಳಿತುಕೊಂಡು ಧ್ಯಾನ ಮಾಡುತ್ತಾರೆ. ಇದು ಪಂಚಾಗ್ನಿ ತಪಸ್ಸು ಎಂದು ಕರೆಯಲ್ಪಡುತ್ತದೆ. ಇದೆಲ್ಲಾ ಅಗತ್ಯವಿಲ್ಲ. ಈ ರೀತಿಯಲ್ಲಿ ಶರೀರವನ್ನು ಹಿಂಸಿಸುವುದು ತಪ್ಪು ಮತ್ತು ಹಾಗೆ ಮಾಡಬಾರದು. ಆದರೆ ಸ್ವಲ್ಪ ಪ್ರಮಾಣದ ತಪಸ್ಸು ಆವಶ್ಯಕವಾಗಿದೆ. ’ತಪೋವೈ ದ್ವಂದ್ವ ಸಹನಂ’ ಎಂದು ಹೇಳಲಾಗಿದೆ. ಅಂದರೆ, ದ್ವಂದ್ವವನ್ನು ಸಹಿಸುವುದು ತಪಸ್ಸಾಗಿದೆ.
ನೀವು ಎಲ್ಲಿಗಾದರೂ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಿರೆಂದು ಇಟ್ಟುಕೊಳ್ಳೋಣ ಮತ್ತು ಅದೊಂದು ೧೨ ಗಂಟೆಗಳ ಕಾಲದ ಪ್ರಯಾಣ, ಅಷ್ಟು ಹೊತ್ತು ನೀವು ಕುಳಿತುಕೊಳ್ಳಬೇಕು. ಆಗ ಅದು ಕೂಡಾ ಒಂದು ರೀತಿಯ ತಪಸ್ಸು.
ಸಮಚಿತ್ತತೆಯ ಒಂದು ಸ್ಥಿತಿಯಲ್ಲಿರುವುದು ಮತ್ತು ಏನು ಬರುವುದೋ ಅದನ್ನು ಸಹಿಸುವುದು; ಅದು ಸೆಖೆಯಾಗಲೀ ಅಥವಾ ಚಳಿಯಾಗಲೀ, ಒಳ್ಳೆಯದಾಗಲೀ ಅಥವಾ ಕೆಟ್ಟದಾಗಲೀ, ಹೊಗಳಿಕೆಯಾಗಲೀ ಅಥವಾ ಟೀಕೆಯಾಗಲೀ - ಅದು ತಪಸ್ಸು.
ನೀವು ಹೊಗಳಿಕೆಗಳನ್ನು ಆಲಿಸುವಾಗಿನ ಅದೇ ಸಮಚಿತ್ತತೆಯೊಂದಿಗೆ ನಿಮಗೆ ಒಂದು ತೆಗಳಿಕೆಯನ್ನು ಕೇಳಿಸಿಕೊಳ್ಳಲು ಸಾಧ್ಯವೇ? ಅದು ತಪಸ್ಸು. ಒಬ್ಬರು ನಿಮ್ಮನ್ನು ಹೊಗಳುವಾಗ, ನೀವದನ್ನು ಒಂದು ಮುಗುಳ್ನಗೆಯೊಂದಿಗೆ ಕೇಳಿಸಿಕೊಳ್ಳುವಿರಿ. ಒಬ್ಬರು ನಿಮ್ಮ ಬಗ್ಗೆ ಟೀಕೆ ಮಾಡುವಾಗ, ನೀವದನ್ನು ಅದೇ ಮುಗುಳ್ನಗೆ ಮತ್ತು ಸಮಚಿತ್ತತೆಯೊಂದಿಗೆ ಕೇಳಿಸಿಕೊಳ್ಳಬಲ್ಲಿರೇ ಮತ್ತು ನಿಮ್ಮೊಳಗೆ ಏನು ನಡೆಯುತ್ತಿದೆಯೆಂಬುದನ್ನು ನೋಡಬಲ್ಲಿರೇ? ಅದು ತಪಸ್ಸು.
ನೀವು ಏನನ್ನಾದರೂ ಇಷ್ಟಪಡದೇ ಇರುವಾಗ, ಆದರೆ ಅದನ್ನು ಅನುಭವಿಸಲು ನಿಮಗೆ ಸಾಧ್ಯವಾದಾಗ, ಅದು ತಪಸ್ಸು.
ನೀವು ಏನನ್ನಾದರೂ ಇಷ್ಟಪಡಲು ಸಾಧ್ಯವಾದರೆ, ನೀವದಕ್ಕೆ ಒಂದು ಸಾಕ್ಷಿಯಾಗಬಲ್ಲಿರೇ ಮತ್ತು ಅದರ ಬಗ್ಗೆ ಜ್ವರವಿಲ್ಲದೇ ಇರಬಲ್ಲಿರೇ? ಆಗ ಅದು ತಪಸ್ಸು.
ವಿರೋಧಾತ್ಮಕಗಳನ್ನು ಸಹಿಸುವುದನ್ನು ತಪಸ್ಸು ಎಂದು ಕರೆಯುತ್ತಾರೆ, ಮತ್ತು ಅದು ಜೀವನದಲ್ಲಿ ಆವಶ್ಯಕವಾಗಿದೆ. ಎಷ್ಟರ ಮಟ್ಟಿಗೆ ನಾವು ಜೀವನದಲ್ಲಿ ತಪಸ್ಸನ್ನು ಅನುಸರಿಸುತ್ತೇವೋ, ಅಷ್ಟರ ಮಟ್ಟಿಗೆ ನಾವು ಪ್ರಬಲರೂ ಸ್ಥಿರವೂ ಆಗುತ್ತೇವೆ.

ಪ್ರಶ್ನೆ: ಗುರುದೇವ, ಜ್ಞಾನವನ್ನು ಸಾಬೂನಿನಂತೆ ಉಪಯೋಗಿಸಬೇಕೆಂದು ನೀವು ಹೆಚ್ಚಾಗಿ ಹೇಳಿರುವಿರಿ. ಆದರೆ ಅದನ್ನು ತೊಳೆದು ಹಾಕಬೇಕಾಗಿದ್ದರೆ, ಅದು ನಮ್ಮ ನಿಜವಾದ ಸ್ವಭಾವದ ಸಂಕೇತವಾಗಿರಲು ಹೇಗೆ ಸಾಧ್ಯ? ಹಾಗಾದರೆ ಅದರರ್ಥ ಜ್ಞಾನವು ನಮ್ಮ ನಿಜವಾದ ಸ್ವಭಾವವಲ್ಲವೆಂದೇ?
ಶ್ರೀ ಶ್ರೀ ರವಿ ಶಂಕರ್: ಎರಡು ರೀತಿಯ ಜ್ಞಾನಗಳಿವೆ.
ಒಂದನೆಯದು ಆತ್ಮದ ಜ್ಞಾನ, ಇದು ನಮ್ಮ ನಿಜವಾದ ಸ್ವಭಾವ. ಮತ್ತು ಇನ್ನೊಂದು ರೀತಿಯ ಜ್ಞಾನವು ಯಾವುದೆಂದರೆ, ಯಾವುದು ಸಾಬೂನಿನಂತೆ ಬಳಸಲ್ಪಡುವುದೋ ಅದು.
ಜ್ಞಾನವನ್ನು ಒಂದು ಸಾಬೂನಿನಂತೆ ಬಳಸಬೇಕೆಂದು ಹೇಳಿರುವುದು ಯಾಕೆಂದು ನಿನಗೆ ತಿಳಿದಿದೆಯೇ? ಜ್ಞಾನವನ್ನು ಹೊಂದಿರುವುದರ ಬಗ್ಗೆ ನೀನು ಅಹಂಕಾರಿಯಾಗದಿರಲೆಂದು. "ನನಗೆ ಬಹಳಷ್ಟು ತಿಳಿದಿದೆ; ನನಗೆ ಎಲ್ಲವೂ ತಿಳಿದಿದೆ" ಎಂದು ನೀನು ಯೋಚಿಸಬಾರದು. ನೀನು ಜ್ಞಾನದ ಬಗ್ಗೆ ದುರಹಂಕಾರ ಪಡಬಾರದು. ಆದುದರಿಂದ ಅಂತಹ ಒಂದು ಅಹಂನ್ನು ತೊಲಗಿಸುವುದಕ್ಕಾಗಿ, ಜ್ಞಾನವನ್ನು ಒಂದು ಸಾಬೂನಿನಂತೆ ಬಳಸಬೇಕೆಂದು ಹೇಳಲಾಗಿದೆ. ಇದು ನಿಜವಾದ ಅರ್ಥ.

ಪ್ರಶ್ನೆ: ಪ್ರೀತಿಯ ಗುರುದೇವ, ಸುಪ್ತ ಮನಸ್ಸಿನ ಶಕ್ತಿಯೇನು ಮತ್ತು ನಾನದನ್ನು ಉಪಯೋಗಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಜಾಗೃತ ಮನಸ್ಸು ನಿಜವಾಗಿ ನಿಮ್ಮ ಸುಪ್ತ ಮನಸ್ಸಿನ ಕೇವಲ ಹತ್ತರಲ್ಲಿ ಒಂದು ಭಾಗದಷ್ಟು ಮಾತ್ರ ಇರುವುದು. ಆದುದರಿಂದ ಸುಪ್ತ ಮನಸ್ಸಿಗೆ ಬಹಳಷ್ಟು ಶಕ್ತಿಯಿದೆ. ನೀವೊಂದು ಪೈಜಾಮ ಪಾರ್ಟಿಯಲ್ಲಿರುವಿರೆಂಬುದಾಗಿ ಊಹಿಸಿ. ನೀವು ಎಂಟು ಮಂದಿ ನಿದ್ರಿಸುತ್ತಿರುವಿರಿ ಮತ್ತು ಯಾರೋ ಒಬ್ಬರು ನಿಮ್ಮ ಹೆಸರನ್ನು ಕರೆಯುತ್ತಾರೆ, ನೀವು ಮಾತ್ರ ಪ್ರತಿಕ್ರಿಯಿಸುವಿರಿ. ಇತರರು ಗಾಢನಿದ್ರೆಯಲ್ಲಿ ಮುಂದುವರೆಯುತ್ತಾರೆ. ಅದು ಹಾಗಲ್ಲವೇ? ನೀವಿದನ್ನು ಗಮನಿಸಿರುವಿರೇ? ನಿಮ್ಮ ಹೆಸರು ಕೂಡಾ ನಿಮ್ಮ ಸುಪ್ತ ಮನಸ್ಸಿನಲ್ಲಿ ಆಳವಾಗಿ ಬೇರುಬಿಟ್ಟಿದೆಯೆಂಬುದನ್ನು ಇದು ಸೂಚಿಸುತ್ತದೆ. ಸುಪ್ತ ಮನಸ್ಸು ಹೆಚ್ಚು ಹೆಚ್ಚು ಜಾಗೃತವಾಗುವಂತೆ ಮಾಡಲಿರುವ ಮಾರ್ಗವು ಧ್ಯಾನವಾಗಿದೆ.

ಪ್ರಶ್ನೆ: ಗುರುದೇವ, ನಮ್ಮ ಸಾಮರ್ಥ್ಯಗಳ ವರ್ಧನೆಯು, ನಮ್ಮ ಕೆಲಸವನ್ನು ಸಾಧಿಸುವಲ್ಲಿ ಮತ್ತು ಪೂರೈಸುವಲ್ಲಿ ಸಹಾಯಕವಾಗುತ್ತದೆಯೆಂದು ನೀವು ಹೇಳಿರುವಿರಿ. ನಾವು ನಮ್ಮ ಸಾಮರ್ಥ್ಯಗಳನ್ನು ಹೇಗೆ ಹೆಚ್ಚಿಸಬೇಕು?
ಶ್ರೀ ಶ್ರೀ ರವಿ ಶಂಕರ್: ಧ್ಯಾನ ಮತ್ತು ಮೌನದ ಅಭ್ಯಾಸಗಳು ಒಬ್ಬನ ಸಾಮರ್ಥ್ಯವನ್ನು, ದಕ್ಷತೆಗಳನ್ನು ಹಾಗೂ ಕುಶಲತೆಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಬಹುದು. ನಿಮಗೇನು ಬೇಕೋ ಅದನ್ನು ಸಾಧಿಸಲು ಕುಶಲತೆಯು ಕೂಡಾ ಆವಶ್ಯಕವಾಗಿದೆ.
ನೀವು ವಿಶ್ರಮಿಸುವಾಗ ಮತ್ತು ನೀವು ಮೌನದಲ್ಲಿ ಹಾಗೂ ಧ್ಯಾನದಲ್ಲಿ ಆಳವಾಗಿ ಒಳಹೋದಾಗ ಈ ಎಲ್ಲಾ ಮೂರು ವರ್ಧಿಸುತ್ತವೆ.
ಚಟುವಟಿಕೆ ಮತ್ತು ವಿಶ್ರಾಂತಿಯನ್ನು ಮಿತವಾಗಿ ಪಾಲಿಸುವುದು  ಮುಖ್ಯವಾಗಿದೆ.
ಸುಮ್ಮನೇ ಊಹಿಸಿ, ಒಬ್ಬ ವ್ಯಕ್ತಿಯು ವಿಶ್ರಾಂತಿಯನ್ನೇ ತೆಗೆದುಕೊಳ್ಳದಿದ್ದರೆ, ಏನನ್ನು ಮಾಡಲೂ ಅವನಲ್ಲಿ ಸಾಕಷ್ಟು ಶಕ್ತಿ ಉಳಿಯಲಾರದು. ಅದೇ ಸಮಯದಲ್ಲಿ, ದಿನವಿಡೀ ಕೇವಲ ವಿಶ್ರಾಮ ಮಾಡುವುದರಿಂದ ಯಾವುದೇ ಸಹಾಯವಾಗಲಾರದು. ನೀವು ಕೆಲಸ ಮಾಡಬೇಕು, ವ್ಯಾಯಾಮ ಮಾಡಬೇಕು ಮತ್ತು ವಿಶ್ರಾಂತಿಯನ್ನೂ ತೆಗೆದುಕೊಳ್ಳಬೇಕು. ಧ್ಯಾನವು ನಿಮಗೆ ಒಂದು ಹೆಚ್ಚು ಆಳವಾದ ವಿಶ್ರಾಂತಿಯನ್ನು ನೀಡುತ್ತದೆ. ಅದರಲ್ಲಿ ನಿಮ್ಮ ಮನಸ್ಸು ಸಂಪೂರ್ಣವಾಗಿ ಜಾಗರೂಕತೆಯಿಂದಿರುತ್ತದೆ, ಹಾಗಿದ್ದರೂ ನಿಮ್ಮ ಶರೀರವು ಆಳವಾದ ವಿಶ್ರಾಂತಿಯನ್ನು ಪಡೆಯುತ್ತದೆ. ಅಂತಹ ಒಂದು ಸ್ಥಿತಿಯಲ್ಲಿ, ನಿಮ್ಮಲ್ಲಿ ಕುಶಲತೆಯು ವೃದ್ಧಿಸುತ್ತದೆ ಮತ್ತು ದಕ್ಷತೆಯೂ ಕೂಡಾ ನಿಮ್ಮಲ್ಲಿ ಅರಳುತ್ತದೆ.

ಪ್ರಶ್ನೆ: ಪ್ರೀತಿಯ ಗುರುದೇವ, ಬುದ್ಧಿಯನ್ನು ಬಿಟ್ಟು ಮುಗ್ಧತೆಗೆ ಮರಳಿ ಹೋಗುವುದು ಹೇಗೆ?ಹಾಗೆ ಮಾಡುವುದರಿಂದ, ಅದು ನಟನೆಯಾಗುವುದಿಲ್ಲವೇ?
ಶ್ರೀ ಶ್ರೀ ರವಿ ಶಂಕರ್: ಬುದ್ಧಿಯು ಪಕ್ವವಾದಾಗ, ನೀವು ಮುಗ್ಧರಾಗುವಿರಿ. ಹಾಗೆಯೇ ಭಾವನೆಗಳು ಅಧಿಕಾರ ವಹಿಸಿದಾಗ ಕೂಡಾ ನೀವು ಮುಗ್ಧತೆಯ ಕಡೆಗೆ ಸಾಗುವಿರಿ.
ಮುಗ್ಧತೆಯು ನಿಮ್ಮ ಜೀವನದ ಒಂದು ಮಗ್ಗಲು ಮತ್ತು ಪ್ರತಿಯೊಬ್ಬರಲ್ಲೂ ಅದು ಇದೆ. ದಾರಿಯಲ್ಲಿ ಅಡ್ಡ ಬರುವುದೇನೆಂದರೆ ಬುದ್ಧಿಯಲ್ಲಿನ ಕಲ್ಪನೆಗಳು; ಉದಾಹರಣೆಗೆ ತೀರ್ಮಾನಗಳು, ಅಥವಾ "ನನಗೆ ಇದೆಲ್ಲಾ ತಿಳಿದಿದೆ" ಅಥವಾ "ನನಗೆ ಇದು ಹೆಚ್ಚು ತಿಳಿದಿದೆ" ಮೊದಲಾಗಿ ಯೋಚಿಸುವುದು. ಬುದ್ಧಿಯು ಸಂಪೂರ್ಣವಾಗಿ ಪಕ್ವವಾಗುವುದರಿಂದ ತಡೆಯುವುದು ಇದೇ.
ಧ್ಯಾನ ಮತ್ತು ಪ್ರಾಣಾಯಾಮಗಳು, ಬುದ್ಧಿಯಿಂದ ಮರಳಿ ನಿಮ್ಮ ಮುಗ್ಧತೆಯ ಕಡೆಗಿರುವ ಪ್ರಯಾಣವನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ.
ಹಾಗೆಯೇ, ನಿಮಗಿಂತ ಬಹಳ ಹೆಚ್ಚು ತಿಳಿದ ಜನರಿರುವಾಗ ಮತ್ತು ನೀವು, "ಓ, ನನಗೆ ಬಹಳ ಕಡಿಮೆ ತಿಳಿದಿದೆ" ಎಂದು ಯೋಚಿಸುವಾಗ ಕೂಡಾ ನಿಮ್ಮಲ್ಲಿ ಮುಗ್ಧತೆಯು ಹಾಗೆಯೇ ಬರುತ್ತದೆ.
ನಿಮ್ಮ ಬಗ್ಗೆ ನೀವೊಂದು ತಪ್ಪಾದ ನಿರ್ಧಾರವನ್ನು ಮಾಡಿದಾಗ, ಅದು ನಿಮ್ಮಲ್ಲಿ ಮುಗ್ಧತೆಯು ಇಲ್ಲದಿರುವ ಭಾವನೆಯನ್ನು ತರಲೂಬಹುದು.

ಪ್ರಶ್ನೆ: ಗುರುದೇವ, ದಯವಿಟ್ಟು ಅನುರಾಗ ಮತ್ತು ಅನುರಾಗದ ಕೊರತೆಯ ಬಗ್ಗೆ ಮಾತನಾಡಿ.
ಶ್ರೀ ಶ್ರೀ ರವಿ ಶಂಕರ್: ಜೀವನದಲ್ಲಿ ಅನುರಾಗವು ಆವಶ್ಯಕವಾಗಿದೆ, ಆದರೆ ಅದು ಸ್ಥಿರವಾಗಿರಲು ಸಾಧ್ಯವಿಲ್ಲ.
ಅನುರಾಗದಲ್ಲಿ ಯಾವತ್ತೂ ಏಳು ಬೀಳುಗಳಿರುತ್ತವೆ. ಅನುರಾಗದ ತೀವ್ರತೆಯು ಕೆಲವೊಮ್ಮೆ ಹೆಚ್ಚಾಗುತ್ತದೆ ಮತ್ತು ನಂತರ ಕಡಿಮೆಯಾಗುತ್ತದೆ, ಮತ್ತು ನಂತರ ಪುನಃ ಹೆಚ್ಚಾಗುತ್ತದೆ ಮತ್ತು ಅದು ಆರೋಗ್ಯಕರ.
ಸಾಧಾರಣವಾಗಿ ಏನಾಗುತ್ತದೆಯೆಂದರೆ, ಯಾವುದಾದರೂ ವಿಷಯದ ಕಡೆಗಿರುವ ನಿಮ್ಮ ಅನುರಾಗವು ಕಡಿಮೆಯಾದಾಗ ನಿಮಗೆ ಬಹಳ ದುಃಖವಾಗುತ್ತದೆ; ನೀವು ಏನನ್ನೋ ಕಳೆದುಕೊಂಡಿರುವಿರೇನೋ ಎಂಬಂತೆ. ನಿಮ್ಮಲ್ಲೇನೋ ಕೊರತೆಯಿದೆಯೆಂದು ನಿಮಗೆ ಅನ್ನಿಸಲು ತೊಡಗುತ್ತದೆ ಮತ್ತು ಏನು ಮಾಡಬೇಕೆಂದು ಚಿಂತಿಸಲು ತೊಡಗುತ್ತೀರಿ. ನಾನು ಹೇಳುವುದೇನೆಂದರೆ, ಕೇವಲ ವಿಶ್ರಾಮ ಮಾಡಿ. ನೋಡಿ, ಅನುರಾಗದಲ್ಲಿ ಸ್ವಲ್ಪ ಮಟ್ಟಿನ ತೃಪ್ತಿ ಕೂಡಾ ಇರಬೇಕು. ಕೆಲವೊಮ್ಮೆ, ತೃಪ್ತಿ ಬರುವಾಗ, ಅನುರಾಗವು ಕಡಿಮೆಯಾಗುತ್ತದೆ.
ತೃಪ್ತಿಯಲ್ಲಿ ಕೂಡಾ ಅನುರಾಗದ ಒಂದು ಎಳೆ ಇರಬೇಕು, ಇಲ್ಲದಿದ್ದರೆ ತೃಪ್ತಿಯು ಜಡತೆಗೆ ಮತ್ತು ಒಂದು ಉದಾಸೀನತೆಗೆ ಜಾರಬಹುದು. ಆದುದರಿಂದ ತೃಪ್ತಿಯು ಜಡತೆಗೆ ಜಾರುವುದನ್ನು ತಡೆಯಲು, ನಿಮ್ಮಲ್ಲಿ ಸ್ವಲ್ಪ ಅನುರಾಗವಿರಬೇಕು. ಮತ್ತು ಅನುರಾಗವು ಅತಿಯಾಗಿ ಜ್ವರವಾಗದಿರಲು ಮತ್ತು ನಿಮ್ಮನ್ನು ಎಲ್ಲಾ ಸಮಯದಲ್ಲೂ ಅಶಾಂತರನ್ನಾಗಿ ಮಾಡದಿರಲು, ನಿಮ್ಮಲ್ಲಿ ತೃಪ್ತಿಯಿರಬೇಕು. ಇದು ನಿಮಗೆ ಸರಿಯಾದ ಸಂತುಲನವನ್ನು ನೀಡುವುದು.

ಪ್ರಶ್ನೆ: ಗುರುದೇವ, ನನ್ನ ಜೀವನದಲ್ಲಿ ಹಲವಾರು ಬದಲಾವಣೆಗಳು ನಡೆಯುತ್ತಿವೆ. ಅವುಗಳಲ್ಲಿ ಕೆಲವು ಒಳ್ಳೆಯವು ಮತ್ತು ಕೆಲವು ಕೆಟ್ಟವು. ಬದಲಾವಣೆಯನ್ನು ನಾನು ನಿಭಾಯಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಬದಲಾವಣೆಗಳು ಜೀವನದಲ್ಲಿ ಮತ್ತು ಪ್ರಪಂಚದಲ್ಲಿ ಅನಿವಾರ್ಯ. ಪ್ರಪಂಚವೆಂದರೆ ಬದಲಾವಣೆಗಳು ಎಂದು ಅರ್ಥ. ಆದರೆ ನಿನ್ನೊಳಗೆ ಆಳದಲ್ಲಿ ಬದಲಾಗದೇ ಇರುವ ಏನೋ ಒಂದಿದೆ ಮತ್ತು ನೀನು ಅದರ ಮೇಲೆ ಭದ್ರವಾಗಿ ನೆಲೆಯೂರಬೇಕು. ಅದು ಭಕ್ತಿ.

ಪ್ರಶ್ನೆ: ಗುರುದೇವ, ನೀವು ಆಹಾರ ಮತ್ತು ಉಸಿರಿನ ಬಗ್ಗೆ ಬಹಳಷ್ಟು ಮಾತನಾಡಿರುವಿರಿ. ಬಟ್ಟೆಯ ಬಗ್ಗೆ ಕೂಡಾ ನೀವು ಏನನ್ನಾದರೂ ಹೇಳಲು ಬಯಸುವಿರೇ? ನಾವು ಸಾಂಪ್ರದಾಯಿಕ ಬಟ್ಟೆಗಳನ್ನು ಮಾತ್ರ ಧರಿಸಬೇಕೇ?
ಶ್ರೀ ಶ್ರೀ ರವಿ ಶಂಕರ್: ಆರಾಮದಾಯಕ ಬಟ್ಟೆಗಳನ್ನು ಧರಿಸಿ, ಆದರೆ ನೀವು ಬಹಳಷ್ಟು ಹಣ ಕೊಟ್ಟು ಖರೀದಿಸುವ ಆ ಹರಿದ ಬಟ್ಟೆಗಳು ಮತ್ತು ಜೀನ್ಸನ್ನು ಧರಿಸುವುದಕ್ಕೆ ನಾನು ಆದ್ಯತೆ ನೀಡುವುದಿಲ್ಲ. ಅದು ಬಹಳ ಕೊಳಕಾಗಿ ಕಾಣಿಸುತ್ತದೆ.
ಜೀನ್ಸಿನಲ್ಲಿ ತೂತುಗಳಿದ್ದರೆ, ಅದಕ್ಕೆ ನೀವು ಹೆಚ್ಚು ಹಣ ನೀಡಬೇಕಾಗುತ್ತದೆಯೆಂಬುದಾಗಿ ನಾನು ಕೇಳಿದ್ದೇನೆ! ಇದನ್ನು ನೀವು ಮಾಡಬಾರದು.
ಹತ್ತಿಯು ಅತ್ಯುತ್ತಮವಾದ ಬಟ್ಟೆಯಾಗಿದೆ. ಅದು ಸ್ವಲ್ಪ ಪ್ರಮಾಣದ ಪೋಲಿಸ್ಟರಿನೊಂದಿಗೆ ಮಿಶ್ರಿತವಾಗಿದ್ದರೆ, ಅದು ಕೂಡಾ ಪರವಾಗಿಲ್ಲ. ಆದರೆ ಕೇವಲ ಪೋಲಿಸ್ಟರನ್ನು ದೂರವಿರಿಸಬೇಕು.
ಜನರು ಚರ್ಮವನ್ನು ದೂರವಿರಿಸಬೇಕೆಂದು ನಾನು ಬಯಸುತ್ತೇನೆ. ನಿಮಗೆ ಗೊತ್ತಾ, ಕೇವಲ ಚರ್ಮಕ್ಕಾಗಿ ಹಲವಾರು ಪ್ರಾಣಿಗಳನ್ನು ಕೊಲ್ಲಲಾಗುತ್ತದೆ. ಇದೆಲ್ಲವನ್ನೂ ದೂರ ಮಾಡಬೇಕು. ’ಅಹಿಂಸಾ ಪರಮೋ ಧರ್ಮ’ ಎಂದು ಹೇಳಲಾಗಿದೆ. (ಎಲ್ಲಾ ಕ್ರಿಯೆಯಲ್ಲಿ ಅಹಿಂಸೆಯನ್ನು ಪಾಲಿಸುವುದು ಪರಮ ಧರ್ಮ ಅಥವಾ ಕರ್ತವ್ಯವಾಗಿದೆ). ಪ್ರತಿಯೊಬ್ಬರೂ ಅಹಿಂಸೆಯ ಮಾರ್ಗದಲ್ಲಿ ನಡೆಯಬೇಕು ಮತ್ತು ಒಬ್ಬ ಸಸ್ಯಾಹಾರಿಯಾಗಬೇಕು. ಇದು ಬಹಳ ಆವಶ್ಯಕವಾಗಿದೆ. ಆಗ ಮಾತ್ರ ನಿಮಗೆ ಚೆನ್ನಾಗಿ ಧ್ಯಾನ ಮಾಡಲು ಸಾಧ್ಯ.

ಪ್ರಶ್ನೆ: ಗುರುದೇವ, ಮೊದಲಿನ ಪ್ರಶ್ನೆಯನ್ನೂ ಸೇರಿದಂತೆ ನನ್ನಲ್ಲಿ ಬೇರೆ ಎರಡು ಪ್ರಶ್ನೆಗಳಿವೆ. ಮೊದಲನೆಯದು: ರೇಷ್ಮೆ ಸೀರೆಗಳನ್ನು ತಯಾರಿಸುವಾಗ ರೇಷ್ಮೆ ಹುಳಗಳು ಸಾಯುತ್ತವೆಯಾದ್ದರಿಂದ ನಾವು ರೇಷ್ಮೆ ಸೀರೆಗಳನ್ನು ಉಡಬಹುದೇ? ಅದೊಂದು ಪಾಪವೇ?
ಶ್ರೀ ಶ್ರೀ ರವಿ ಶಂಕರ್: ನೀವದನ್ನು ಆ ರೀತಿಯಲ್ಲಿ ನೋಡಿದರೆ, ನೀವೊಂದು ಬಾಳೆಗಿಡವನ್ನು ಅಥವಾ ಅದರ ಭಾಗವನ್ನು ಬಟ್ಟೆ ಮಾಡಲಿಕ್ಕಾಗಿ ಕತ್ತರಿಸುವಾಗ, ಆಗ ಕೂಡಾ ಅದೊಂದು ಪಾಪವೆಂದು ನೀವು ಯೋಚಿಸಬಹುದು, ಯಾಕೆಂದರೆ ಅದು ಕೂಡಾ ಒಂದು ಜೀವ.
ನೀವು ನಿಜವಾಗಿ ಪ್ರಯತ್ನಿಸಬೇಕಾದುದೆಂದರೆ, ಇತರ ಜೀವಿಗಳಿಗೆ ಕನಿಷ್ಠ ಮಟ್ಟದ ನೋವುಂಟುಮಾಡುವುದು. ನೀವದನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ. ಆದುದರಿಂದ ರೇಷ್ಮೆಯನ್ನು ಧರಿಸುವುದು ಪರವಾಗಿಲ್ಲ. ವಿವಿಧ ರೀತಿಯ ರೇಷ್ಮೆಗಳಿವೆ. ರೇಷ್ಮೆ ಹುಳಕ್ಕೆ ತೊಂದರೆಯನ್ನುಂಟುಮಾಡದೆಯೇ ಮಾಡಲ್ಪಡುವ ಒಂದು ನಿರ್ದಿಷ್ಟ ರೀತಿಯ ರೇಷ್ಮೆಯಿದೆ. ಅಹಿಂಸಾ ರೇಷ್ಮೆ ಕೂಡಾ ಲಭ್ಯವಿದೆ. ಇದರಲ್ಲಿ ಅವರು ರೇಷ್ಮೆ ಗೂಡುಗಳನ್ನು ಕುದಿಸುವುದಿಲ್ಲ, ಆದರೆ ಹುಳಗಳಿಗೆ ತೊಂದರೆಯನ್ನುಂಟುಮಾಡದೆಯೇ ರೇಷ್ಮೆಯನ್ನು ಸಂಗ್ರಹಿಸುತ್ತಾರೆ.

ಮಂಗಳವಾರ, ಜನವರಿ 15, 2013

ಸತ್ಸಂಗ


೧೫ ಜನವರಿ ೨೦೧೩
ಬೆಂಗಳೂರು

ಪ್ರ: ಗುರೂಜೀ, ಇವತ್ತು ಸೇನಾ ದಿನ. ದಯವಿಟ್ಟು ನಮ್ಮ ಸೇನೆಯ ಅಥವಾ ರಕ್ಷಣಾಪಡೆಯ ಬಗ್ಗೆ ಮಾತನಾಡುವಿರಾ?
ಶ್ರೀಶ್ರೀರವಿಶಂಕರ್: ಭಾರತದ ಸೇನಾಪಡೆಯು ಜಗತ್ತಿನ ಉತ್ತಮ ಸೇನಾಪಡೆಗಳಲ್ಲಿ ಒಂದು; ಬಹಳ ಉತ್ತಮವಾಗಿ ನಿರ್ವಹಿಸಲ್ಪಟ್ಟಿರುವುದು.
ಅವರ ಶಿಸ್ತು, ಬದ್ಧತೆ, ಸಮಾನತೆ ಮತ್ತು ನ್ಯಾಯಪರತೆ ಅನುಸರಿಸಲು ಯೋಗ್ಯವಾಗಿದೆ. ಸೇನಾಪಡೆಯು ಶಿಸ್ತನ್ನು ಅತ್ಯುತ್ತಮವಾಗಿ ಪಾಲಿಸಿದ್ದಾರೆ. ಸೈನ್ಯದ ಯೋಧರಂತೆ ನಮ್ಮ ದೇಶದ ಯುವಕರೂ ಸಹ ಶಿಸ್ತನ್ನು ಗ್ರಹಿಸಬೇಕೆಂಬುದು ನನ್ನ ಆಶೆ.
ಅವರಲ್ಲಿ ಸಮಗ್ರತೆ, ಬದ್ಧತೆ ಮತ್ತು ಚೈತನ್ಯವನ್ನು ಕಾಣಬಹುದು. ಅದೃಷ್ಟವಶಾತ್, ಸೇನಾ ತರಬೇತಿಯು ಯೋಧರಲ್ಲಿ ಸಹಿಷ್ಣುತೆ, ಘನತೆ ಮತ್ತು ಬದ್ಧತೆಯಂತಹ ಗುಣಗಳನ್ನು ಮೈಗೂಡಿಸಿದೆ. ಅವರಲ್ಲಿ ಕೆಲಸ ಮತ್ತು ಶಿಸ್ತಿಗೆ ಸಂಬಂಧಿಸಿದಂತೆ ದೃಢವಾದ ಬದ್ಧತೆಯಿದೆ.
ವಿಶ್ವದ ಅನೇಕ ರಾಷ್ಟ್ರಗಳಲ್ಲಿ, ಯುವಕರಿಗೆ ಒಂದು ಅಥವಾ ಎರಡು ವರ್ಷ ಕಡ್ಡಾಯ ಮಿಲಿಟರಿ ತರಬೇತಿಯಿದೆ. ಭಾರತದಲ್ಲೂ ಈ ರೀತಿಯ ತರಬೇತಿ ಆವಶ್ಯಕವಾಗಿದೆ. ಇಂತಹ ಉಪಕ್ರಮಗಳಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಳ್ಳಬೇಕು.
ಯೋಧರು ಮತ್ತು ಅವರ ಕುಟುಂಬದವರು ನಿಜವಾಗಲೂ ಕೃತಜ್ಞತೆಗೆ ಅರ್ಹರು. ಈ ಸಂದರ್ಭದಲ್ಲಿ, ಇತ್ತೀಚೆಗೆ ಪಾಕಿಸ್ತಾನದಿಂದ ತಲೆ ಕಡಿತಗೊಳಿಸಲಾದ ಇಬ್ಬರು ಯೋಧರಿಗೂ ಸಂತಾಪವನ್ನು ಸೂಚಿಸೋಣ. ಪಾಕಿಸ್ತಾನದ ಸೇನೆಯು ಅಸಹನೀಯ ರೀತಿಯಲ್ಲಿ ಮತ್ತು ಹೇಡಿತನದಿಂದ ಇಬ್ಬರು ಶೂರರ ತಲೆಗಳನ್ನು ಕಡಿದಿದ್ದಾರೆ, ಇಂತಹ ಕೃತ್ಯವನ್ನೆಸಗಿದ ಅವರಿಗೆ ನಾಚಿಕೆಯಾಗಬೇಕು. ಅವರಿಬ್ಬರ ಕುಟುಂಬದವರು ಇನ್ನೂ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಅವರಿಗೆ ಆ ತಲೆಗಳು ಬೇಕಾಗಿದೆ. ಅವರೀರ್ವರ ಕುಟುಂಬದವರಿಗೆ ನಮ್ಮ ಅನುಕಂಪ ಮತ್ತು ಪ್ರಾರ್ಥನೆಯಿದೆ.

ಪ್ರ: ಪ್ರೀತಿಯ ಗುರೂಜೀ, ‘ಉತ್ತಮ ಶಿಕ್ಷಣ ಮತ್ತು ಆರೋಗ್ಯದ ನೆರವು ಸಿಗುವುದರಿಂದ ಜನರು ಮತಾಂತರಗೊಂಡರೆ ತಪ್ಪೇನು’ ಎಂದು ಕೇಳುವವರಿಗೆ ನಾವು ಹೇಗೆ ಉತ್ತರಿಸಬೇಕು?
ಶ್ರೀಶ್ರೀರವಿಶಂಕರ್: ಒಳ್ಳೆಯ ಶಿಕ್ಷಣ ಮತ್ತು ಸ್ವಲ್ಪ ಹಣವನ್ನು ನೀಡಿ ಮತಾಂತರಗೊಳಿಸುವುದು ಮಹಾಪರಾಧವೆಂದು ಮಹಾತ್ಮ ಗಾಂಧೀಜೀಯು ಹೇಳಿದ್ದಾರೆ. ಇದು ದೊಡ್ಡ ಅಪರಾಧ. ಇದನ್ನೆಂದೂ ಮಾಡಬಾರದು.
ಪ್ರತಿಯೊಬ್ಬ ವ್ಯಕ್ತಿಗೂ ಸ್ವಯಂ ನಿರ್ಣಯಿಸುವ ಹಕ್ಕಿದೆ. ಇನ್ನೊಬ್ಬರನ್ನು ಮತಾಂತರಿಸಲು ಆಮಿಷಗಳನ್ನೊಡ್ಡಬಾರದು.
ಇತರರನ್ನು ಮತಾಂತರಗೊಳಿಸಲು ನೀವೇಕೆ ಬಯಸುತ್ತೀರಿ? ನಿಮ್ಮ ಸಂಖ್ಯೆಯನ್ನು ಹೆಚ್ಚಿಸಲು ಹೀಗೆ ಮಾಡುತ್ತೀರ? ನಿಮ್ಮ ಸಂಖ್ಯೆಯನ್ನು ಏಕೆ ಹೆಚ್ಚಿಸಬೇಕೆಂದು ಬಯಸುತ್ತೀರ? ಏಕೆಂದರೆ ನೀವು ರಾಜಕೀಯ ಬಲವನ್ನು ಆಶಿಸುತ್ತೀರ.
ನೀವು ಜನರನ್ನು ಮತಾಂತರಿಸುತ್ತಿರುವುದು ರಾಜಕೀಯಕ್ಕಾಗಿ, ಅಧಿಕಾರಕ್ಕಾಗಿ; ಇದೊಂದು ದುಷ್ಕೃತ್ಯ. ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ.
ಮತಾಂತರದಿಂದ, ಒಂದು ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದೀರ, ಆ ಸಮಾಜದ ಜನಸಂಖ್ಯೆಯನ್ನು ನಾಶಪಡಿಸುತ್ತಿದ್ದೀರ. ಹೀಗಾಗಬಾರದು, ಇದನ್ನು ನಾವು ಅಂತ್ಯಗೊಳಿಸಬೇಕು.
‘ನಮ್ಮ ದೇವರು ನಿಮ್ಮ ದೇವರಿಗಿಂತ ಉತ್ತಮ’ ಎನ್ನುವುದೂ ಮತ್ತೊಂದು ರೀತಿಯ ಭಯೋತ್ಪಾದನೆ. ವಾಸ್ತವವಾಗಿ, ಅದು ಭಯೋತ್ಪಾದನೆಯ ಬೀಜ. ಆದ್ದರಿಂದ, ಇತರರನ್ನು ಮತಾಂತರಗೊಳಿಸುತ್ತಿರುವ ಜನರಿಗೆ ನಾವು ಹೇಳುವುದೇನೆಂದರೆ, ಭಯೋತ್ಪಾದಕರಂತೆ ಕೆಲಸ ಮಾಡುತ್ತಿದ್ದೀರ, ಆದರೆ ಮಾರುವೇಷದಲ್ಲಿ.

ಪ್ರ: ನೀವು ನಮಗೆ ದೈನಂದಿನ ಜೀವನಕ್ಕೆ ಲಾಭವಾಗುವಂತಹ ವಾಸ್ತವಿಕ ಜ್ಞಾನವನ್ನು ನೀಡುತ್ತಿರುವ ಹಾಗೆ, ಧಾರ್ಮಿಕ ಸಂಸ್ಥೆಗಳು ಮತ್ತು ಗುರುಗಳು ಜ್ಞಾನವನ್ನು ನೀಡಿದರೆ, ಜನರೂ ಸಹ ಉತ್ತಮ ತಿಳುವಳಿಕೆಯನ್ನು ಬೆಳೆಸಿಕೊಂಡು ತಮ್ಮ ಜೀವನದಲ್ಲಿ ಪರಿವರ್ತನೆಯನ್ನು ಅನುಭವಿಸುವರು. ಇದನ್ನು ಸಾರ್ಥಕಗೊಳಿಸಿದರೆ, ಇಂದಿನ ಸಮಾಜವು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳು ಕಣ್ಮರೆಯಾಗುವುದೆಂದು ನನ್ನ ಅನಿಸಿಕೆ.
ನಾನು ಸುದರ್ಶನ ಕ್ರಿಯೆಯನ್ನು ಮಾಡುತ್ತೇನೆ ಮತ್ತು ನಿಮ್ಮನ್ನು ಅನುಸರಿಸುತ್ತೇನೆ, ಆದರೆ ಇತರ ಎಲ್ಲ ಗುರುಗಳು ಮತ್ತು ಧಾರ್ಮಿಕ ಸಂಪ್ರದಾಯಗಳ ಬಗ್ಗೆ ನನಗೆ ಗೌರವವಿದೆ. ನಾನು ದೇವಸ್ಥಾನಗಳಿಗೆ ಹಾಗೂ ಮಸೀದಿಗಳಿಗೂ ಹೋಗುತ್ತೇನೆ.
ಶ್ರೀಶ್ರೀರವಿಶಂಕರ್: ಬಹಳ ಒಳ್ಳೆಯದು! ಹಾಗೆಯೇ ಇರಬೇಕು.
ಜನರನ್ನು ಮರುಳುಗೊಳಿಸಿ ದೇವಸ್ಥಾನಗಳಿಗೆ ಹೋಗಲು ಪುಸಲಾಯಿಸುವುದು, ಅಥವಾ ನಮಾeóï ಮಾಡಲು ಬಲವಂತ ಮಾಡುವುದು ಸರಿಯಲ್ಲ. ಜನರಿಗೆ ಬೇಕಾಗಿರುವುದು ಆಧ್ಯಾತ್ಮದ ಅನುಭವ; ಒಬ್ಬನೇ ದೇವನಿರುವನೆಂಬ ಅನುಭವ. ನಾವೆಲ್ಲರೂ ಒಂದೇ ದೈವದ ಮಕ್ಕಳು. ನಮ್ಮಲ್ಲಿರುವ ಪ್ರೀತಿಯನ್ನು ಹಂಚಬೇಕೇ ಹೊರತು ದ್ವೇಷವನ್ನಲ್ಲ.
ಇದನ್ನೇ ನಾನು ಪಾಕಿಸ್ತಾನದವರಿಗೂ ಹೇಳುತ್ತಿರುವುದು. ಅಲ್ಲಿನ ಜನರು ಬಹಳ ಒಳ್ಳೆಯವರು. ಇವತ್ತೂ ಸಹ ಅವರೊಂದಿಗೆ ಮಾತನಾಡಿದ್ದೇನೆ. ಅಲ್ಲಿ ನಮ್ಮ ಮೂರು ಕೇಂದ್ರಗಳಿವೆ. ಅವರು ಸುದರ್ಶನ ಕ್ರಿಯೆಯ ನಂತರ ಅತೀವ ಸಂತೋಷವನ್ನು ಅನುಭವಿಸಿದ್ದಾರೆ. ಅವರೆಲ್ಲರ ದುಃಖ ಮತ್ತು ಸಮಸ್ಯೆಗಳು ತೊಡೆದುಹೋಗಿವೆ. ಅನೇಕರು ನನ್ನನ್ನು ಕನಸಿನಲ್ಲಿ ಕಂಡಿರುವುದಾಗಿ ತಿಳಿಸಿದ್ದಾರೆ!
ಪಾಕಿಸ್ತಾನವಾದರೋ ನಮ್ಮ ನೆರೆಯ ದೇಶ, ಆದರೆ ನೀವು ಇರಾನಿಗೆ ಹೋದರೂ ಕೂಡ, ಅಲ್ಲಿಯೂ ಜನರು ಇಂತಹುದೇ ಅನುಭವವನ್ನು ಹಂಚಿಕೊಳ್ಳುತ್ತಾರೆ.
ನಿಮಗೆ ಗೊತ್ತೇ, ಇರಾನಿನಲ್ಲಿ 60 ರಿಂದ 65 ಜೀವನ ಕಲೆ ಶಿಬಿರದ ಶೀಕ್ಷಕರು ಕೆಲಸ ಮಾಡುತ್ತಿದ್ದಾರೆ. ಅಲ್ಲಿಯ ವಾತಾವರಣ ಬಹಳ ಕಠಿಣ ಮತ್ತು ನಿಷ್ಕೃಷ್ಟವಾಗಿದೆ, ಯೋಗಾಭ್ಯಾಸವನ್ನು ಮಾಡಲು ಅನುಮತಿ ನೀಡುವುದಿಲ್ಲ. ಮುಸ್ಲಿಮರೇ ಆದ ಅಲ್ಲಿನ ಶಿಕ್ಷಕರ ಮನೆಯಲ್ಲಿ ನನ್ನ ಭಾವಚಿತ್ರವನ್ನು ನೋಡಿದಾಗ, ಧಾರ್ಮಿಕ ಪೆÇೀಲೀಸರು, ‘ಎಲ್ಲವನ್ನು ಕಲಿಸಿದಂತಹ ನಮ್ಮ ತಾತನಂತೆ ಗುರೂಜೀಯು ಕಾಣುತ್ತಾರೆ! ನಮಗೆ ಶಿಕ್ಷಣ ಮತ್ತು ದೀಕ್ಷೆಯನ್ನು ನೀಡಿರುವ ನಮ್ಮ ಸ್ವಂತ ಧಾರ್ಮಿಕ ಗುರುವಿನಂತೆ ಕಾಣುತ್ತಾರೆ’ ಎಂದರು. ಹೀಗಾಗಿ ಅವರೂ ಸಹ ನಮ್ಮ ಕೆಲಸ-ಕಾರ್ಯಗಳಿಗೆ ಅಡ್ಡಿ ಮಾಡದೆ, ಸುಸೂತ್ರವಾಗಿ ಸಾಗಲು ಅನುವು ಮಾಡಿದರು.
ಹಲವಾರು ಯುವಕರು ಜೀವನ ಕಲೆಯ ಶಿಬಿರದಲ್ಲಿ ಭಾಗವಹಿಸಿ, ಮರಳಿ ಬಂದು ಹೇಳಿದ್ದಾರೆ, ‘ಓಹ್, ಜೀವನದಲ್ಲಿ ಬಹಳ ದೊಡ್ಡದೊಂದನ್ನು ಕಳೆದುಕೊಳ್ಳುತ್ತಿದ್ದೆವು!  ಇದಕ್ಕೂ ಮೊದಲೇ ನಾವೇನಾದರೂ ಇಂತಹ ಅನುಭವವನ್ನು ಪಡೆದಿದ್ದರೆ, ಈಗ ಅತ್ಯಂತ ಸಂತೋಷ ಮತ್ತು ಸಮೃದ್ದಿಯನ್ನು ಹೊಂದಿರುತ್ತಿದ್ದೆವು. ನೆರೆಯ ದೇಶದೊಂದಿಗೆ ಘರ್ಷಣೆ ಮತ್ತು ಕದನವೆರಡೂ ನಿಶ್ಚಿತವಾಗಿ ಕೊನೆಗೊಳ್ಳುತ್ತಿತ್ತು. ದ್ವೆಷವೆಲ್ಲವೂ ಕೊನೆಗೊಳ್ಳುತ್ತಿತ್ತು.’
ಕೆಲವು ಧಾರ್ಮಿಕ ಮುಖಂಡರು, ಮಠಾಧೀಶರು ಮತ್ತು ನಾಯಕರು, ಮುಸ್ಲಿಮರಷ್ಟೇ ಅಲ್ಲ, ಹಿಂದುಗಳೂ ಸಹ, ಇಂತಹ ಪರಿವರ್ತನೆಯುಂಟಾಗಲು ಆಶಿಸುತ್ತಿಲ್ಲ. ಜನರು ಈ ರೀತಿಯ ಅನುಭವವನ್ನು ಪಡೆದರೆ ತಮ್ಮ ವ್ಯವಹಾರವನ್ನು ಅಂತ್ಯಗೊಳಿಸಬೇಕಾಗುತ್ತದೆಂಬ ಭಯ ಆ ಮುಖಂಡರಿಗೆ. ಹೌದು, ಇದು ನಿಜ!
ಹಿಂದುಗಳಲ್ಲೂ ಕೆಲವು ಧಾರ್ಮಿಕ ಮುಖಂಡರು, ಸುದರ್ಶನ ಕ್ರಿಯೆಯನ್ನು ಖಂಡಿಸಿ, ಓಪಿಯಮ್ ನಂತಹ ಮಾದಕ ವಸ್ತುಗಳಿಗೆ ಇದರ ಪರಿಣಾಮವನ್ನು ಹೋಲಿಸುತ್ತಾ, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಜೀವನ ಕಲೆ ಶಿಬಿರಕ್ಕೆ ಹೋಗಲು ಸಂಪೂರ್ಣವಾಗಿ ತಡೆಯುತ್ತಿದ್ದಾರೆ.
ಹಾಗೆಯೇ, ಜೀವನ ಕಲೆ ಶಿಬಿರದಲ್ಲಿ ಕಲಿಯಲು ಅಥವಾ ಶಿಬಿರಕ್ಕೆ ಸೇರಲು, ಪರಧರ್ಮವೆಂಬ ಕಾರಣವೊಡ್ಡಿ ಇಮಾಮರು (ಮುಸ್ಲಿಮರ ಧಾರ್ಮಿಕ ಗುರುಗಳು) ತಮ್ಮವರನ್ನು ತಡೆಯುತ್ತಿದ್ದಾರೆ. ಜೀವನ ಕಲೆಯು ನಿಮ್ಮನ್ನು ದಾರಿ ತಪ್ಪಿಸಿ ಮೋಸಗೊಳಿಸುತ್ತಾರೆಂದು ಹೇಳುತ್ತಿದ್ದಾರೆ.
 ವ್ಯಕ್ತಿಯೊಬ್ಬನ ಪ್ರಗತಿ ಮತ್ತು ಉನ್ನತಿಯನ್ನು ಹೀಗೆ ತಡೆದು ಅಡ್ಡಿ ಮಾಡುವ ಜನರ ವಿರುದ್ಧ ನಾವು ಹೋರಾಡಬೇಕು. ಸಂತೋಷ ಮತ್ತು ಪರಿಪೂರ್ಣತೆಯನ್ನು ತರುವ ಜ್ಞಾನ ಅಥವಾ ಅಭ್ಯಾಸಗಳನ್ನು ತಡೆಯುವ ಅಥವಾ ನಿಷೇಧಿಸುವಂತಹ ಜನರೊಂದಿಗೆ ನಿಭಾಯಿಸಬೇಕು. ಅವರು ಸರಿಯಾದುದನ್ನು ಮಾಡುತ್ತಿಲ್ಲ, ಇಂತಹುದನ್ನು ನಿಲ್ಲಿಸಬೇಕಾಗಿದೆ.
ಈ ರೀತಿಯ ಕೃತ್ಯ ಕೇವಲ ಮುಸ್ಲಿಮ್ ಅಥವಾ ಕ್ರೈಸ್ತರಲ್ಲಿ ನಡೆಯುತ್ತಿದೆಯೆಂದು ಅನ್ಯಥಾ ಭಾವಿಸಬೇಡಿ. ಕೆಲವು ಹಿಂದೂ ಧಾರ್ಮಿಕ ಮುಖಂಡರೂ ಕೂಡ ಹೀಗೆ ಮಾಡುತ್ತಿದ್ದಾರೆ. ಇದು ಕೇವಲ ಅಜ್ಞಾನವಷ್ಟೇ. ಜೀವನ ಕಲೆಯಲ್ಲಿ ನಾವು ಎಲ್ಲರಿಗೂ ಉದಾರವಾಗಿ ಪ್ರೀತಿಯನ್ನು ನೀಡುತ್ತೇವೆ ಮತ್ತು ಅಂತಹ ಜನರಿಗೆ ಶುದ್ಧ ಮತ್ತು ಪ್ರಾಮಾಣಿಕ ಬುದ್ಧಿಯನ್ನು ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ.

ಪ್ರ: ಗುರೂಜೀ, ರಾಷ್ಟ್ರಾಭಿಮಾನ ಮತ್ತು ಆಧ್ಯಾತ್ಮ ಎರಡೂ ಒಟ್ಟಿಗೆ ಸಾಗಬಹುದೇ? ರಾಷ್ಟ್ರಾಭಿಮಾನವು ನಮ್ಮನ್ನು ಸೀಮಿತಗೊಳಿಸುವುದಿಲ್ಲವೇ?
ಶ್ರೀಶ್ರೀರವಿಶಂಕರ್: ಖಂಡಿತ ಇಲ್ಲ. ಇವೆರಡೂ ಒಟ್ಟಿಗೆ ಸಾಗಬಹುದು, ಮತ್ತು ಇವೆರಡರ ಮಧ್ಯೆ ಯಾವುದೇ ಗೊಂದಲಕ್ಕೂ ಅವಕಾಶವಿಲ್ಲ.
ನೋಡಿ, ನೀವು ಪ್ರಜಾಪ್ರಭುತ್ವದ ಒಂದು ಭಾಗ. ಒಂದು ಪ್ರತ್ಯೇಕ ದೇಶದ ಮತ್ತು ಜನತಂತ್ರದ ಪಾಲುದಾರರು. ಆದ್ದರಿಂದ ದೇಶದ ವ್ಯವಹಾರಗಳಲ್ಲಿ ನಿಮಗೆ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ, ಸಮರ್ಥಿಸಬೇಕು ಮತ್ತು ಅಭಿವ್ಯಕ್ತಪಡಿಸಬೇಕು. ಇದರಿಂದ ನಿಮ್ಮ ವಿಶ್ವ ಭ್ರಾತೃತ್ವಕ್ಕೆ ಅಥವಾ ಏಕತೆಗೆ ಅಡ್ಡಿಯಾಗುವುದಿಲ್ಲ.
ಉದಾಹರಣೆಗೆ, ನೀವೊಬ್ಬ ಸಮಾಜ ಸೇವಕ. ನಿಮ್ಮ ಮನೆಯಲ್ಲೇ ಕಸ ತುಂಬಿದ್ದರೆ, ಮೊದಲು ನಿಮ್ಮ ಮನೆಯನ್ನು ಸ್ವಚ್ಛಗೊಳಿಸಬೇಕು.
ನೀವು ‘ನನ್ನ ಮನೆಯನ್ನು ಸ್ವಚ್ಛಗೊಳಿಸಿದರೆ, ರಸ್ತೆಗಳನ್ನು ಅಥವಾ ಇನ್ನಿತರ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲು ಗೊಂದಲವಾಗುವುದಿಲ್ಲವೇ?’ ಎಂದು ಕೇಳಿದರೆ, ‘ಇಲ್ಲ! ನೀವು ವಿಶ್ವವನ್ನು ಸ್ವಚ್ಛಗೊಳಿಸುತ್ತಿರುವಾಗ, ನಿಮ್ಮ ಮನೆಯನ್ನು ಸ್ವಚ್ಛಗೊಳಿಸುವುದೂ ಅಗತ್ಯ.’
ನಿಮ್ಮ ಮನೆಗಿಂತ ಸ್ವಲ್ಪ ವಿಸ್ತಾರವಾದುದು ದೇಶ, ನಂತರ ಇಡೀ ವಿಶ್ವದಲ್ಲಿ ಶಾಂತಿ.
ನೀವು ಯಾವುದೇ ದೇಶಕ್ಕೆ ಸೇರದಿದ್ದರೆ, ಆ ದೇಶದ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಆಗ ಅಲ್ಲಿನ ಜನರು, ‘ಇದು ನಮ್ಮ ಆಂತರಿಕ ವ್ಯವಹಾರ. ಇದನ್ನು ಕೇಳಲು ನೀವು ಯಾರು?’ ಎನ್ನುವರು.
ನಿಮ್ಮ ಮನೆಯನ್ನು ಶುಚಿಗೊಳಿಸಲು ನಿಮಗೆ ಅಧಿಕಾರವಿದೆ, ಆದರೆ ನೆರೆಮನೆಯವರಿಗೆ ಹೋಗಿ, ‘ನಾಳೆ ನಾನು ನಿಮ್ಮ ಮನೆಗೆ ಬಂದು ಶುಚಿಗೊಳಿಸುತ್ತೇನೆ. ನಿಮ್ಮೊಂದಿಗೂ ನನಗೆ ಸ್ವಕೀಯ ಭಾವವಿದೆ’ ಎಂದರೆ, ಅವರೆನ್ನುವರು, ‘ಧನ್ಯವಾದ, ಆದರೆ ನಿಮಗೆ ಸ್ವಾಗತವಿಲ್ಲ. ನಿಮ್ಮ ಮನೆಯನ್ನು ಸ್ವಚ್ಛಗೊಳಿಸಿ, ಅದು ಉತ್ತಮ.’
 ನಿಮ್ಮ ಮನೆಯಲ್ಲಿ ನೀವು ಬಯಸಿದಂತೆ ಮಾಡುವ ಅಧಿಕಾರವಿದೆ. ಆದರೆ ಅದೇ ಅಧಿಕಾರವನ್ನು ನಿಮ್ಮ ನೆರೆಹೊರೆಯವರ ಮೇಲೆ ಬಳಸಲು ಸಾಧ್ಯವಿಲ್ಲ.
ಈಗ ನಿಮ್ಮ ನೆರೆಮನೆಯವರು ನಿಮ್ಮನ್ನು ಸ್ವಾಗತಿಸಿ, ‘ದಯವಿಟ್ಟು ಬನ್ನಿ, ನಿಮ್ಮ ಸಹಾಯದ ಅವಶ್ಯಕತೆಯಿದೆ. ನಮ್ಮ ಮನೆಯನ್ನೂ ಶುಚಿಗೊಳಿಸೋಣ’ ಎಂದರೆ, ಆಗ ನೀವು ಸಂತೋಷವಾಗಿ ಆ ಕೆಲಸವನ್ನು ಮಾಡಬಹುದು.
ನೀವೊಂದು ದೇಶದ ನಿವಾಸಿಯಾಗಿರದೇ, ಪ್ರವಾಸಿಯಾಗಿದ್ದರೆ, ಆ ದೇಶದ ವ್ಯವಹಾರಗಳ ನಡುವೆ ಪ್ರವೇಶಿಸುವುದು ಸಾಧ್ಯವಿಲ್ಲ. ಕಾನೂನಿನ ಪ್ರಕಾರ ಅದು ಸರಿಯಲ್ಲ.
ಹೀಗೆ ಮೂರ್ತ ಮತ್ತು ಅಮೂರ್ತ ಸ್ತರದಲ್ಲಿ ಗೊಂದಲವುಂಟಾಗುತ್ತದೆ.
ಅಮೂರ್ತ ಸ್ತರದಲ್ಲಿ, ಎಲ್ಲರೊಂದಿಗೂ ನೀವು ಬಾಂಧವ್ಯವನ್ನು ಹೊಂದಿದ್ದೀರ. ಭಾವನಾತ್ಮಕ ಮಟ್ಟದಲ್ಲಿ, ನಿಮಗನಿಸುವುದು, ‘ಭಾರತ ಮತ್ತು ಪಾಕಿಸ್ತಾನ ಅಥವಾ ಅಮೇರಿಕಾ ಅಥವಾ ಯೂರೋಪ್ ನಡುವೆ ವ್ಯತ್ಯಾಸವೇನಿದೆ? ನಾನೆಲ್ಲಿಗೆ ಹೋಗುವೆನೋ ಅದು ನನ್ನ ಸ್ಥಳವೆಂಬ ಭಾವನೆಯುಂಟಾಗುವುದು. ನನ್ನ ಮನೆಯಂತೆ ಭಾಸವಾಗುವುದು.’
ಅದೇ ವೇಳೆಗೆ, ಎಲ್ಲಾ ಸ್ಥಳಗಳಲ್ಲೂ ಒಂದೇ ರೀತಿ ವರ್ತಿಸಲಾಗದು. ಪ್ರತಿಯೊಂದು ದೇಶ ತನ್ನದೇ ಆದ ನೀತಿ ಸಂಹಿತೆಯನ್ನು ಹೊಂದಿದ್ದು, ಅದನ್ನು ಅನುಸರಿಸಬೇಕಾಗಿದೆ.’

ಪ್ರ: ರಾಷ್ಟ್ರಾಭಿಮಾನವೆಂದರೇನು ಮತ್ತು ಅದು ವಿಶ್ವ ಭ್ರಾತೃತ್ವಕ್ಕೆ ವಿರುದ್ದಾರ್ಥಕವಾಗಿದೆಯೇ? ವಿಶ್ವದ ಭ್ರಾತೃತ್ವವನ್ನು ರಾಷ್ಟ್ರಾಭಿಮಾನವನ್ನು ಹೇಗೆ ವಿಸ್ತಾರಗೊಳಿಸಬೇಕು?
ಶ್ರೀಶ್ರೀರವಿಶಂಕರ್: ಮೊಟ್ಟ ಮೊದಲಿಗೆ ವಿಶ್ವ ಭ್ರಾತೃತ್ವದ ಭಾವನೆ ಉದ್ದೀಪನಗೊಳ್ಳುತ್ತದೆ. ನೀವು ಇಡೀ ವಿಶ್ವದ ಮೇಲೆ ಹಕ್ಕನ್ನು ಹೊಂದದಿದ್ದರೂ, ನಿಮ್ಮ ದೇಶದಲ್ಲಿ ಖಂಡಿತ ಮತದಾರರಾಗಿರುವಿರಿ. ನಿಮ್ಮ ದೇಶದಲ್ಲಿ ಮತದಾರರಾಗಿರುವಾಗ, ದೇಶದತ್ತ ನಿಮಗೆ ಕೆಲವು ಜವಾಬ್ದಾರಿ.

ಮಂಗಳವಾರ, ಜನವರಿ 8, 2013

ಎಂಟು ರೀತಿಯ ಶುದ್ಧೀಕರಣ

ಆಲಪ್ಪುಝ, ಕೇರಳ
೮ ಜನವರಿ ೨೦೧೩

ನ್ನದಾತ ಸುಖೀ ಭವ, ಯಾರು ನನಗೆ ಈ ಆಹಾರವನ್ನು ಒದಗಿಸುತ್ತಿರುವರೋ, ಅವರು ಸಂತೋಷವಾಗಿರಲಿ. ನೀವೆಲ್ಲರೂ ಪ್ರತಿದಿನವೂ ನಿಮ್ಮ ಊಟದ ಮೊದಲು ಈ ಒಂದು ಮಂತ್ರವನ್ನು ಹೇಳುವಿರಾ?

ನೀವಿದನ್ನು ಹೇಳುವಾಗ, ನೀವು ಮೂರು ಜನರಿಗೆ ಸಮೃದ್ಧಿಯನ್ನು ಹಾರೈಸುತ್ತೀರಿ. ಒಂದನೆಯದು ರೈತನಿಗೆ, ಎರಡನೆಯದು ರೈತರಿಂದ ಖರೀದಿಸಿ ಉತ್ಪನ್ನವನ್ನು ಮಾರುವ ವ್ಯಾಪಾರಿಗೆ ಮತ್ತು ಮೂರನೆಯದು ಆಹಾರವನ್ನು ಅಡಿಗೆ ಮಾಡಿ ನಿಮಗೆ ಬಡಿಸುವ ಸ್ತ್ರೀಗೆ.

ಮೊದಲನೆಯದಾಗಿ, ನಾವು ರೈತರಿಗೆ ಒಳ್ಳೆಯದನ್ನು ಹಾರೈಸುತ್ತೇವೆ. ರೈತರು ಸಂತೋಷವಾಗಿರುವಾಗ, ಯಾರು ಆಹಾರವನ್ನು ತಿನ್ನುವರು ಅವರು ಕೂಡಾ ಸಂತೋಷವಾಗಿರುವರು. ಆದರೆ ರೈತರು ದುಃಖಿತರಾಗಿದ್ದರೆ ಮತ್ತು ಅವರು ಕಣ್ಣೀರು ಹಾಕಿಕೊಂಡು ನಮಗೆ ಆಹಾರವನ್ನು ನೀಡುತ್ತಿರುವುದಾದರೆ, ಆಗ ನಾವು ಆ ಆಹಾರವನ್ನು ತಿನ್ನುವಾಗ ನಾವು ರೋಗಿಗಳಾಗುತ್ತೇವೆ. ಆದುದರಿಂದ, ನೀವು ರೈತರಿಗೆ ಒಳ್ಳೆಯ ಆರೋಗ್ಯ ಮತ್ತು ಸಂತೋಷವನ್ನು ಹಾರೈಸಬೇಕು.

ಈ ದೇಶದಲ್ಲಿ ನಾವು ರೈತರನ್ನು ಕಡೆಗಣಿಸುತ್ತಿದ್ದೇವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಯಾಕೆಂದರೆ, ಅವರು ದುಃಖಿತರಾಗಿರುವರು ಹಾಗೂ ಅಸಂತೋಷದಿಂದಿರುವರು. ಅವರು ದುಃಖಿತರಾಗಿರುವಾಗ, ಅವರು ಉತ್ಪಾದಿಸುವ ಆಹಾರವು ನಮಗೆ ಕೇವಲ ದುಃಖವನ್ನು ತರುತ್ತದೆ. ಆದುದರಿಂದ, ನೀವೆಲ್ಲರೂ ಅವರಿಗೆ ಸಂತೋಷವನ್ನು ಹಾರೈಸಬೇಕು.

ಎರಡನೆಯದಾಗಿ, ನಾವು ವ್ಯಾಪಾರಿಗಳಿಗೆ ಒಳ್ಳೆಯದನ್ನು ಹಾರೈಸಬೇಕು. ವ್ಯಾಪಾರಿಗಳು, ಲೋಭಿಗಳಾಗದಿರುವ ಮೂಲಕ ಮತ್ತು ವಸ್ತುಗಳ ಶೇಖರಣೆ ಮಾಡದೇ ಇರುವುದರ ಮೂಲಕ ತಮ್ಮ ಕೆಲಸವನ್ನು ಸರಿಯಾಗಿ ಮಾಡಿದರೆ, ಆಗ ದೇಶದಲ್ಲಿ ಆಹಾರಕ್ಕೆ ಯಾವುದೇ ಅಭಾವ ಇರಲಾರದು. ನಮ್ಮ ದೇಶದಲ್ಲಿ ಒಂದು ಸಮಸ್ಯೆಯಿರುವುದಾದರೆ, ಅದು ಸರಕಾರದ ತಪ್ಪಾದ ನೀತಿಗಳು ಹಾಗೂ ವ್ಯಾಪಾರಿಗಳ ಶೇಖರಣಾ ಮನೋಭಾವದಿಂದಾಗಿ. ಇದರ ಫಲವಾಗಿ, ಅತ್ಯಂತ ಹೆಚ್ಚು ಕಷ್ಟಕ್ಕೀಡಾಗುವುದು ರೈತರಾಗಿದ್ದಾರೆ.

ನೀವು ಕಲ್ಪಿಸಿಕೊಳ್ಳಬಲ್ಲಿರೇ, ಎರಡು ವರ್ಷಗಳ ಮೊದಲು, ಆಹಾರದ ಕಂಪನಿಗಳು ೩೦೦% ಲಾಭವನ್ನು ಪಡೆಯುತ್ತಿದ್ದವು, ಅದೇ ವೇಳೆ ರೈತರು ದಿವಾಳಿಯಾಗುತ್ತಿದ್ದರು ಎಂಬುದನ್ನು? ನಮ್ಮ ವ್ಯವಸ್ಥೆಯಲ್ಲಿ ಒಂದು ಗಂಭೀರವಾದ ನ್ಯೂನತೆಯಿದೆ ಎಂಬುದನ್ನು ಇದು ತೋರಿಸುತ್ತದೆ, ಅದರ ಕಡೆಗೆ ನಾವು ಗಮನ ಹರಿಸಬೇಕು. ಶೇಖರಿಸಿಡುವುದು ಅತ್ಯಂತ ದೊಡ್ಡ ಅಪರಾಧವಾಗಿದೆ.

ಮೂರನೆಯದಾಗಿ, ಅಡಿಗೆ ಮಾಡಿ ಆಹಾರವನ್ನು ನಮಗೆ ಬಡಿಸುವ, ಮನೆಯಲ್ಲಿನ ಸ್ತ್ರೀಯರಿಗೆ ನಾವು ಒಳ್ಳೆಯದನ್ನು ಹಾರೈಸಬೇಕು. ಆಹಾರವನ್ನು ಅಡಿಗೆ ಮಾಡುವ, ಮನೆಯ ಸ್ತ್ರೀಯ ಕಣ್ಣುಗಳಲ್ಲಿ ಕಣ್ಣೀರಿರಬಾರದು. ಅದು ನಿಮಗೆ ಯಾವುದೇ ಒಳಿತನ್ನು ಮಾಡುವುದಿಲ್ಲ.

ಹಾಗಾಗಿ, ನೀವು ಪ್ರತಿದಿನವೂ ಅನ್ನದಾತ ಸುಖೀ ಭವ ಎಂದು ಹೇಳುವಾಗ, ಮನೆಯ ಮಹಿಳೆಯು ಸಂತೋಷವಾಗಿರುವಂತೆ ನೀವು ಪ್ರಾರ್ಥಿಸುತ್ತಿರುತ್ತೀರಿ; ವ್ಯಾಪಾರಿಯು ತನ್ನ ವ್ಯಾಪಾರವನ್ನು ಒಂದು ನ್ಯಾಯೋಚಿತವಾದ ರೀತಿಯಲ್ಲಿ (ಲೋಭದಿಂದಲ್ಲ) ಮಾಡುವಂತೆ ನೀವು ಪ್ರಾರ್ಥಿಸುತ್ತಿರುತ್ತೀರಿ ಮತ್ತು ನೀವು ರೈತನಿಗೆ ಒಂದು ಸಂತೋಷಕರವಾದ ಜೀವನವನ್ನು ಹಾರೈಸುತ್ತಿರುತ್ತೀರಿ. ಈ ಮೂವರು ಸಂತೋಷವಾಗಿದ್ದರೆ, ಆಗ ಸಮಾಜವು ಸಂತೋಷವಾಗಿರುತ್ತದೆ.

ಕೇರಳದಾದ್ಯಂತ ಸಂತೋಷದ ಒಂದು ದೊಡ್ಡ ಅಲೆಯನ್ನು ನಾವು ಸೃಷ್ಟಿಸಬೇಕಾಗಿದೆ. ಅದು ಕೇರಳದಿಂದ ಪ್ರಾರಂಭವಾಗಬೇಕು ಮತ್ತು ಸಂಪೂರ್ಣ ರಾಷ್ಟ್ರಕ್ಕೆ ಹರಡಬೇಕು. ನೀವು ಇತರರಿಗೆ ಸಂತೋಷವನ್ನು ಬಯಸಿದಾಗ, ಸಂತೋಷವು ನಿಮ್ಮ ಬಳಿಗೆ ಬರುತ್ತದೆ. ಇದು ಪ್ರಕೃತಿಯ ನಿಯಮ. ನೀವು ಇತರರಿಗೆ ಒಳ್ಳೆಯದನ್ನು ಬಯಸಿದಾಗ, ಒಳ್ಳೆಯ ವಿಷಯಗಳು ನಿಮ್ಮ ಬಳಿಗೆ ತಿರುಗಿ ಬರುತ್ತವೆ. ನೀವು ಇತರರಿಗೆ ಕೆಟ್ಟದನ್ನು ಬಯಸಿದಾಗ, ಕೇವಲ ಕೆಟ್ಟ ವಿಷಯಗಳು ನಿಮ್ಮ ಬಳಿಗೆ ಬರುತ್ತವೆ. ಯಾರೂ ತಮಗೆ ಕೆಟ್ಟದಾಗುವುದನ್ನು ಬಯಸುವುದಿಲ್ಲ, ಸರಿಯಾ? ನೀವು ನಿಮ್ಮ ಹೃದಯವನ್ನು ಶುದ್ಧವಾಗಿಯೂ ನಿರ್ಮಲವಾಗಿಯೂ ಇಟ್ಟುಕೊಳ್ಳಬೇಕಾದುದು ಈ ಕಾರಣಕ್ಕಾಗಿಯೇ.

ನಾವು ಸಂತೋಷದ ಅಲೆಗಳನ್ನು ಸೃಷ್ಟಿಸಬೇಕಾಗಿದೆ. ಅದನ್ನು ಮಾಡುವುದಕ್ಕಾಗಿ, ಭಾರತವನ್ನು ಉತ್ತಮಗೊಳಿಸುವುದಕ್ಕಾಗಿ ನಾವೆಲ್ಲರೂ ದಿನದಲ್ಲಿ ಒಂದು ಗಂಟೆಯನ್ನು ಕೊಡಬೇಕು. ಈ ದೇಶದಿಂದ, ಎಲ್ಲಾ ಹಂತಗಳಿಂದಲೂ ನಾವು ಭ್ರಷ್ಟಾಚಾರವನ್ನು ತೊಡೆದುಹಾಕಬೇಕಾಗಿದೆ. ಇಲ್ಲಿ ನಿಮ್ಮಲ್ಲಿ ಎಷ್ಟು ಮಂದಿ ದೇಶದಲ್ಲಿರುವ ಭ್ರಷ್ಟಾಚಾರದಿಂದ ಬಳಲಿ ಹೋಗಿದ್ದೀರಿ ಮತ್ತು ಒಂದು ಬದಲಾವಣೆಯನ್ನು ಬಯಸುವಿರಿ?

(ಎಲ್ಲರೂ ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ನಾವೊಂದು ವ್ಯತ್ಯಾಸವನ್ನು ಮಾಡಬೇಕಾಗಿದೆ. ಇದನ್ನು ಮಾಡಲು ಸಾಧ್ಯವಾಗುವುದು ಯಾರಿಗೆಂದರೆ, ಈ ದೇಶದ ಯುವಕರಿಗೆ; ಕೇವಲ ವಯಸ್ಸಿನಲ್ಲಿ ಮಾತ್ರವಲ್ಲ ಆದರೆ ಚೈತನ್ಯದಲ್ಲಿ. ಒಟ್ಟಾಗಿ, ಒಂದು ಅಪರಾಧ-ಮುಕ್ತ ಮತ್ತು ಭ್ರಷ್ಟಾಚಾರ-ಮುಕ್ತ ಭಾರತದ ಕನಸನ್ನು ನನಸಾಗಿಸಲು ನಮಗೆ ಸಾಧ್ಯವಿದೆ.

ಇವತ್ತು, ನೀವು ಅದರ ಬಗ್ಗೆ ಯೋಚಿಸಿ. ನಾವು ಮಾಡಲು ಬಯಸುವುದು ಏನನ್ನು? ನಮ್ಮ ದೇಶದ ಯುವಕರು ನಮ್ಮ ಸಮಾಜದಲ್ಲಿ ಒಂದು ವ್ಯತ್ಯಾಸವನ್ನು ಹೇಗೆ ಮಾಡಬಹುದು?

ನಾನು ಮೊದಲನೆಯ ಸಲ ಕೇರಳಕ್ಕೆ ಬಂದಾಗ, ೧೯೭೧ರಲ್ಲಿ, ನಾನೊಬ್ಬ ವಿದ್ಯಾರ್ಥಿಯಾಗಿದ್ದೆ. ಆ ಸಮಯದಲ್ಲಿ, ನಮಗೆ ನೀಡಲಾಗಿದ್ದ ಆಹಾರವೆಂದರೆ ಇಡೀ ಕುಚ್ಚುಲಕ್ಕಿಯಾಗಿತ್ತು ಮತ್ತು ಕರ್ನಾಟಕದಲ್ಲಿ ನಾವು ಕುಚ್ಚುಲಕ್ಕಿ ಅನ್ನವನ್ನು ಊಟ ಮಾಡುತ್ತಲೇ ಇರಲಿಲ್ಲ. ನಾವು ಬೆಳ್ತಿಗೆ ಅನ್ನವನ್ನು ಮಾತ್ರ ಊಟ ಮಾಡುತ್ತಿದ್ದೆವು. ಆರು ದಿನಗಳ ವರೆಗೆ ನಮಗೆ ಯಾವುದೇ ಬೆಳ್ತಿಗೆ ಅನ್ನ ಸಿಗಲಿಲ್ಲ, ನಮಗೆ ಕೇವಲ ಕುಚ್ಚುಲಕ್ಕಿ ಅನ್ನ ಮಾತ್ರ ಸಿಕ್ಕಿತು ಮತ್ತು ಆಗ ಅದೊಂದು ಸಮಸ್ಯೆಯಾಗಿತ್ತು! ಕೇರಳಕ್ಕೆ ಬರುತ್ತಿದ್ದ ಯಾರಿಗಾದರೂ ಕೇವಲ ಕುಚ್ಚುಲಕ್ಕಿ ಅನ್ನ ಅಥವಾ ಕೆಂಪು ಅನ್ನ ಮಾತ್ರ ಸಿಗುತ್ತಿತ್ತು. ಭಾರತದ ಇತರ ಯಾವುದೇ ಭಾಗಗಳಿಗಿಂತಲೂ ಕೇರಳವು ಬಹಳಷ್ಟು ಹೆಚ್ಚು ಆರೋಗ್ಯವಂತವಾಗಿತ್ತು.

ಇವತ್ತು, ನಾನು ಕೇಳುತ್ತಿರುವುದೇನೆಂದರೆ, ದೇಶದ ಇತರ ಭಾಗಗಳಿಗೆ ನಾವು ಕುಚ್ಚುಲಕ್ಕಿ ಹರಡುವುದರ ಬದಲು, ನಾವು ಕೂಡಾ ಬೆಳ್ತಿಗೆಯನ್ನು ಉಪಯೋಗಿಸುವ ದೇಶದ ಇತರ ಭಾಗಗಳಂತೆ ಆಗಿಬಿಟ್ಟಿದ್ದೇವೆ. ಇಲ್ಲ, ನೀವು ನಿಮ್ಮ ಕೇರಳದ ಶೈಲಿಯ ಆಹಾರಕ್ಕೆ ತಿರುಗಿ ಹೋಗಬೇಕು, ಯಾಕೆಂದರೆ ಕುಚ್ಚುಲಕ್ಕಿಯಲ್ಲಿ ವಿಟಾಮಿನ್ ಬಿ ಮತ್ತು ಇತರ ಖನಿಜಗಳಿವೆ.

ಕುಚ್ಚುಲಕ್ಕಿಯನ್ನು ಊಟ ಮಾಡಿದರೆ ನಿಮಗೆ ಸಿಹಿಮೂತ್ರ ಖಾಯಿಲೆ ಬರಲಾರದು, ಆದರೆ ಬಹಳಷ್ಟು ಪಾಲಿಷ್ ಮಾಡಿದ ಬೆಳ್ತಿಗೆ ಅಕ್ಕಿಯು ಕೇವಲ ಪಿಷ್ಟ ಮಾತ್ರವಾಗಿದೆ. ಅದನ್ನು ತಿಂದು ಜನರು ರೋಗಿಷ್ಠರಾಗುತ್ತಿದ್ದಾರೆ. ಆದುದರಿಂದ, ನಾವು, ಕುಚ್ಚುಲಕ್ಕಿ ತಿನ್ನುವ ನಮ್ಮ ಮೂಲ ಆಹಾರ ಕ್ರಮಕ್ಕೆ ತಿರುಗಿ ಹೋಗಬೇಕು; ಇವುಗಳು ಬಹಳ ಆರೋಗ್ಯಕರ.

ಅದೇ ರೀತಿಯಲ್ಲಿ, ಮೊದಲು ನಾವು ಕೇವಲ ಬೆಲ್ಲವನ್ನು ಬಳಸುತ್ತಿದ್ದೆವು, ಆದರೆ ಈಗ ನಾವು ಬಿಳಿ ಸಕ್ಕರೆಯನ್ನು ಬಳಸುತ್ತಿದ್ದೇವೆ.
ಬಿಳಿ ಸಕ್ಕರೆಯಲ್ಲಿ ಗಂಧಕ ಇದೆಯೆಂಬುದು ನಿಮಗೆ ತಿಳಿದಿದೆಯೇ? ಸಕ್ಕರೆಯಲ್ಲಿರುವ ಗಂಧಕದ ಅಂಶದಿಂದಾಗಿ, ನಮ್ಮ ಶರೀರದಲ್ಲಿರುವ ಕ್ಯಾಲ್ಸಿಯಂ ಬರಿದಾಗುತ್ತದೆ ಮತ್ತು ಅದು ಜನರು ಓಸ್ಟಿಯೋಪೋರೋಸಿಸ್ (ಎಲುಬುಗಳ ಟೊಳ್ಳಾಗುವಿಕೆಯ ರೋಗ) ಹೊಂದುವುದಕ್ಕೆ ಕಾರಣವಾಗುತ್ತದೆ.

ಕೇರಳದಲ್ಲಿ ಶರ್ಕರವನ್ನು ಉಪಯೋಗಿಸುತ್ತಿದ್ದರು. ಅದರಲ್ಲಿ ಬಹಳಷ್ಟು ಖನಿಜಗಳು, ಸತು, ಕಬ್ಬಿಣ ಮತ್ತು ಮೆಗ್ನೀಷಿಯಂ ಲೋಹಗಳಿವೆ. ಇವುಗಳು ನಮ್ಮ ಶರೀರಕ್ಕೆ ಮತ್ತು ನಮ್ಮ ಬುದ್ಧಿಗೆ ಬಹಳ ಒಳ್ಳೆಯದು. ಅದರ ಬದಲು ನಾವು ಬಿಳಿ ಸಕ್ಕರೆಯನ್ನು ಬಳಸುತ್ತಿದ್ದೇವೆ. ಅದು ಗಮನದ ಕೊರತೆಯ ಖಾಯಿಲೆ (ಅಟೆನ್ಷನ್ ಡಿಫಿಶಿಯನ್ಸಿ ಸಿಂಡ್ರೋಮ್) ಮತ್ತು ಇತರ ಹಲವಾರು ರೋಗಗಳಿಗೆ ಕಾರಣವಾಗುತ್ತದೆ.

ಆದುದರಿಂದ, ನಾವೆಲ್ಲರೂ ಕೆಲವು ವಿಷಯಗಳನ್ನು ನೆನಪಿನಲ್ಲಿಡಬೇಕು.

ಮೊದಲನೆಯದು, ಅನ್ನ ಶುದ್ಧಿ, ಧಾನ್ಯಗಳ ಶುದ್ಧೀಕರಣ. ಒಳ್ಳೆಯ ಆಹಾರ, ಪೌಷ್ಟಿಕ ಆಹಾರ ಮತ್ತು ಸರಿಯಾದ ಪ್ರಮಾಣದ ಆಹಾರ ಮುಖ್ಯವಾಗಿದೆ.

ಎರಡನೆಯದು, ಪ್ರತಿದಿನವೂ ಸ್ವಲ್ಪ, ಸರಿಯಾದ ವ್ಯಾಯಾಮವು ಮುಖ್ಯವಾಗಿದೆ. ನೀವೊಂದು ಕಾರು ಅಥವಾ ಮೋಟಾರ್ ಬೈಕನ್ನು ಹೊಂದಿದ್ದರೂ ಕೂಡಾ, ಕೆಲವೊಮ್ಮೆ ಹಗಲು ಹೊತ್ತಿನಲ್ಲಿ ನೀವು ನಡೆಯಲೂಬೇಕು. ಪ್ರತಿದಿನವೂ, ಕಡಿಮೆಯೆಂದರೆ ೨೦ ನಿಮಿಷಗಳವರೆಗಾದರೂ ನಡೆಯುವುದನ್ನು ಅಥವಾ ಯಾವುದಾದರೂ ದೈಹಿಕ ವ್ಯಾಯಾಮ ಮಾಡವುದನ್ನು ಪ್ರಾರಂಭಿಸಿ.

ಮೂರನೆಯದು, ವಾಕ್ಯ ಶುದ್ಧಿ,  ಮಾತಿನ ಶುದ್ಧೀಕರಣ. ಇದು ಬಹಳ ಮುಖ್ಯವಾದುದು. ನೀವು ಬಳಸುವ ಶಬ್ದಗಳು ಇತರ ಜನರಿಗೆ ನೋವುಂಟುಮಾಡದಂತೆ ನೀವೆಲ್ಲರೂ ನೋಡಿಕೊಳ್ಳಬೇಕು. ಯಾರಿಗಾದರೂ ನೋವುಂಟುಮಾಡುವಂತೆ  ನೀವು ಏನನ್ನಾದರೂ ಹೇಳಿದ್ದರೆ ಮತ್ತು ಅವರು ಅಳುತ್ತಿರುವುದಾದರೆ, ಆಗ ಅದು ಎಲ್ಲೋ ನಿಮ್ಮ ಮೇಲೆ ಪರಿಣಾಮ ಬೀರಲಿದೆ.

ನಾಲ್ಕನೆಯದು, ಕರ್ಮ ಶುದ್ಧಿ. ನಾವು ಸೇವೆ ಮಾಡಬೇಕು. ಸೇವೆಯೊಂದಿಗೆ ನಮ್ಮ ಕರ್ಮಗಳು ಶುದ್ಧವಾಗುತ್ತವೆ.

ಐದನೆಯದು, ಧನ ಶುದ್ಧಿ, ಅಂದರೆ, ಸಂಪತ್ತಿನ ಶುದ್ಧೀಕರಣ. ನಾವು ಎಷ್ಟು ಸಂಪಾದಿಸುತ್ತೇವೋ ಅದರಲ್ಲಿ ಕಡಿಮೆಯೆಂದರೆ ಮೂರು ಶೇಕಡಾವನ್ನು ನಾವು ಬದಿಗಿರಿಸಬೇಕು ಮತ್ತು ಅದನ್ನು ಸಮಾಜಕ್ಕಾಗಿ ಬಳಸಬೇಕು. ಆಗ ನಾವು ಸಂಪಾದಿಸುವ ಹಣವು ಶುದ್ಧವಾಗುವುದು. ನಾವು ಸಂಪಾದಿಸುವುದನ್ನೆಲ್ಲಾ ನಾವು ನಮಗಾಗಿಯೇ ಬಳಸಿದರೆ, ಆಗ ಅದು ಹಣದ ಅತ್ಯುತ್ತಮ ಬಳಕೆಯಲ್ಲ. ಆದುದರಿಂದ, ನಾವು ನಮ್ಮ ಸಂಪಾದನೆಯ ಒಂದು ಚಿಕ್ಕ ಭಾಗವನ್ನು ಸಮಾಜಕ್ಕಾಗಿ ಬಳಸಬೇಕು.

ಆರನೆಯದು, ಶರೀರ ಶುದ್ಧಿ. ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ, ನಿಮ್ಮ ಶರೀರವನ್ನು ಶುದ್ಧೀಕರಿಸಲು ಸ್ವಲ್ಪ ತ್ರಿಫಲ ಅಥವಾ ಯಾವುದಾದರೂ ಆಯುರ್ವೇದದ ಉತ್ಪನ್ನಗಳನ್ನು ತೆಗೆದುಕೊಳ್ಳಿ.

ಏಳನೆಯದು, ಭಾವ ಶುದ್ಧಿ, ಅಂದರೆ ಭಾವನೆಗಳ ಶುದ್ಧೀಕರಣ. ಸ್ವಲ್ಪ ಸಮಯದವರೆಗೆ ಸ್ವಲ್ಪ ಸತ್ಸಂಗ ಮಾಡಿ; ಅದು ಭಾವನೆಗಳನ್ನು ಶುದ್ಧೀಕರಿಸುವುದರಿಂದ ಅದು ಆವಶ್ಯಕ.

ಎಂಟನೆಯದು, ಬುದ್ಧಿ ಶುದ್ಧಿ. ಜ್ಞಾನದೊಂದಿಗೆ ಬುದ್ಧಿಯು ಶುದ್ಧವಾಗುತ್ತದೆ. ನೀವು ಜೀವನದ ಕಡೆಗೆ ಒಂದು ವಿಶಾಲ ದೃಷ್ಟಿಕೋನದಿಂದ ನೋಡುವಾಗ ಒಂದು ಶುದ್ಧವಾದ ಬುದ್ಧಿ ಬರುತ್ತದೆ. ನಾನು ಯಾರು? ಈ ವಿಶ್ವವೇನು? ನಾನು ಎಲ್ಲಿಗೆ ಹೋಗುತ್ತಿದ್ದೇನೆ?

ಪ್ರಶ್ನೆ: ಗುರುದೇವ, ಮಕ್ಕಳ ಮೇಲೆ ಹೆಚ್ಚುತ್ತಿರುವ ಒತ್ತಡದೊಂದಿಗೆ, ತಮ್ಮ ವಿದ್ಯಾರ್ಥಿಗಳು ಮಾದಕವಸ್ತುಗಳನ್ನು ಬಳಸುತ್ತಾರೆಂಬುದನ್ನು ಹಲವಾರು ಶಾಲೆಗಳು ಅರಿತಿವೆ. ಆದರೂ, ಅವರು ಯೋಗ ಮತ್ತು ಧ್ಯಾನ ಕಲಿಯುವುದನ್ನು ತಡೆಯುತ್ತಾರೆ. 

ಶ್ರೀ ಶ್ರೀ ರವಿ ಶಂಕರ್: ಅದು ಮೂರ್ಖತನ. ಮಾದಕವಸ್ತುಗಳಿಂದ, ಮದ್ಯದಿಂದ ಮತ್ತು ಇತರ ದುರುಪಯೋಗಗಳಿಂದ ಮಕ್ಕಳನ್ನು ಅವರು ತಡೆಯಬೇಕು. ಒಂದು ಶಾಲೆಯು ಇದರಿಂದ ಮುಕ್ತವಾಯಿತು ಎಂಬುದು ಒಂದು ದೊಡ್ಡ ಸುದ್ದಿಯಾದುದನ್ನು ಓದಿ ನನಗೆ ಬಹಳ ಬೆರಗಾಯಿತು. ನಾವು ೧೪ ಶಾಲೆಗಳನ್ನು ಹೊಂದಿದ್ದೇವೆ, ನಮ್ಮ ಶಾಲೆಗಳಲ್ಲಿ ಯಾವುದೂ ಮದ್ಯ ಅಥವಾ ಮಾದಕವಸ್ತುಗಳಿಗೆ ಹತ್ತಿರವೂ ಇಲ್ಲ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ.

ಇವತ್ತು, ನಮ್ಮ ಶಾಲೆಯು ಮದ್ಯಸಾರ ಮತ್ತು ಮಾದಕವಸ್ತುಗಳಿಂದ ಮುಕ್ತವಾಗಿದೆ ಎಂದು ಹೇಳುವುದು ಒಂದು ಹೆಮ್ಮೆಯ ವಿಷಯವಾಗಿದೆ; ಅದರರ್ಥವೇನೆಂದರೆ, ಅದು ಅಷ್ಟೊಂದು ಸಾಮಾನ್ಯ ವಿಷಯವಾಗಿದೆಯೆಂದು! ಜನರು ಮದ್ಯಸಾರ ಮತ್ತು ಮಾದಕ ವಸ್ತುಗಳ ವಿರುದ್ಧ ಹೋರಾಡಬೇಕು, ಯೋಗ ಮತ್ತು ಧ್ಯಾನಗಳ ವಿರುದ್ಧವಲ್ಲ. ಯೋಗ ಮತ್ತು ಧ್ಯಾನಗಳು ಜನರನ್ನು ಒಳ್ಳೆಯ ಮನುಷ್ಯರನ್ನಾಗಿ ಮಾಡುತ್ತವೆ.

ಪ್ರಶ್ನೆ: ಸಮತಾವಾದ (ಕಮ್ಯುನಿಸಮ್) ಮತ್ತು ಆಧಾತ್ಮಗಳ ನಡುವೆ ಸಾಮಾನ್ಯವಾದುದು ಏನಾದರೂ ಇದೆಯೇ?

ಶ್ರೀ ಶ್ರೀ ರವಿ ಶಂಕರ್: ಹೌದು. ಸಮತಾವಾದವೆಂದರೇನು? ಸಮತಾವಾದದ ಸಾರವೆಂದರೆ, ಎಲ್ಲರೂ ಸಮಾನರು ಎಂಬುದು. ಆಧ್ಯಾತ್ಮವೂ ಅದನ್ನೇ ಹೇಳುತ್ತದೆ. ಕೃಷ್ಣ ಪರಮಾತ್ಮನು ಮೊದಲನೆಯ ಸಮತಾವಾದಿಯಾಗಿದ್ದನು. ಅವನಂದನು, ’ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ| ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ’. ಯಾರು ಎಲ್ಲರಲ್ಲೂ ನನ್ನನ್ನು ಮತ್ತು ಎಲ್ಲರನ್ನೂ ನನ್ನಲ್ಲಿ ನೋಡುವನೋ, ಅವನು ಜ್ಞಾನಿ.

’ಸಮನ್ ಸರ್ವೇಶು ಭೂತೇಶು ತಿಷ್ಠಂತಂ ಪರಮೇಶ್ವರಂ ಪರಿಶತಿ’, ಅಂದರೆ ಎಲ್ಲರನ್ನೂ ಸಮಾನವಾಗಿ ಯಾರು ನೋಡುವನೋ ಅವನು.

’ಶುನಿ ಚೈವ ಶ್ವಪ ಪಕೇ ಚ ಪಂಡಿತಾ ಸಮ  ದರ್ಶಿನಾ’. ಒಬ್ಬ ಪಂಡಿತನು ಯಾರು? ಸಮ ದರ್ಶಿನಾ, ಯಾರು ಎಲ್ಲವನ್ನೂ ಸಮಾನತೆಯೊಂದಿಗೆ ನೋಡುವನೋ ಅವನು ಒಬ್ಬ ಪಂಡಿತನು.

ನೀವು ಭಗವದ್ಗೀತೆಯನ್ನು ತೆರೆದರೆ, ಅದು ಈ ಜ್ಞಾನದಿಂದ ತುಂಬಿದೆಯೆಂಬುದು ನಿಮಗೆ ತಿಳಿಯುವುದು. ಎಲ್ಲರನ್ನೂ ಸಮಾನವಾಗಿ ನೋಡಿ; ಅದು ಸಮತಾವಾದದ ಸಾರವಾಗಿದೆ. ಆಧ್ಯಾತ್ಮವೂ ಕೂಡಾ ಅದೇ ವಿಷಯವನ್ನು ಕಲಿಸುತ್ತದೆ. ವಾಸ್ತವವಾಗಿ, ಆಧ್ಯಾತ್ಮದಲ್ಲಿ, ಅದು ಪ್ರಾಯೋಗಿಕವಾಗುತ್ತದೆ, ಇಲ್ಲದಿದ್ದರೆ ಅದು ಕೇವಲ ಬೌದ್ಧಿಕವಾಗಿ ಉಳಿಯುತ್ತದೆ.

’ನೀವು ಎಲ್ಲರನ್ನೂ ಸಮಾನವಾಗಿ ಯಾಕೆ ನೋಡಬೇಕು?’ ಈ ಪ್ರಶ್ನೆ ಏಳುತ್ತದೆ. ಒಬ್ಬ ಆಧ್ಯಾತ್ಮಿಕ ವ್ಯಕ್ತಿಯು ಉತ್ತರವನ್ನು ತಿಳಿದಿರುತ್ತಾನೆ. ಯಾಕೆಂದರೆ, ಎಲ್ಲರಲ್ಲೂ ಇರುವುದು ಒಂದು ದೈವಿಕತೆಯಾಗಿದೆ. ಆದುದರಿಂದ, ನೀವು ಯಾರಿಗಾದರೂ ನೋವುಂಟುಮಾಡುತ್ತಿರುವುದಾದರೆ, ನೀವು ದೇವರಿಗೆ ನೋವುಂಟುಮಾಡುತ್ತಿರುತ್ತೀರಿ. ನೀವು ದೇವರನ್ನು ಪ್ರೀತಿಸುವುದಾದರೆ, ಆಗ ನೀವು ಯಾರನ್ನೂ ನೋಯಿಸಬಾರದು. ಹೀಗೆ, ನೀವು ಎಲ್ಲರಲ್ಲೂ ಸಮಾನತೆಯನ್ನು ಕಾಣುವಿರಿ.

ಮೌಲ್ಯಗಳು ತಮ್ಮ ನಿಜವಾದ ಶಕ್ತಿಯನ್ನು ಪಡಕೊಳ್ಳುವುದು ಕೇವಲ ಆಧ್ಯಾತ್ಮಿಕ ಜ್ಞಾನದೊಂದಿಗೆ ಮಾತ್ರ. ಇಲ್ಲದಿದ್ದರೆ, ನಾವು ಕೇವಲ ಮೌಲ್ಯಗಳ ಬಗ್ಗೆ ಮಾತನಾಡುತ್ತಿರುತ್ತೇವೆ, ಆದರೆ ಅದು ನಿಜವಾಗಿ ಒಳಕ್ಕೆ ಹೋಗುವುದಿಲ್ಲ. ನಮ್ಮ ಹೃದಯವು ತೆರೆದುಕೊಳ್ಳಬೇಕು.

ನಿಮ್ಮನ್ನು ಪ್ರಾಮಾಣಿಕರನ್ನಾಗಿ ಮಾಡುವುದು, ನಿಮ್ಮ ಹೃದಯವು ತೆರೆದುಕೊಳ್ಳುವಂತೆ ಮಾಡುವುದು ಆಧ್ಯಾತ್ಮವಾಗಿದೆ. ಜನರು ಮಾದಕ ವಸ್ತುಗಳತ್ತ ಅಥವಾ ಮದ್ಯಸಾರದತ್ತ ಅಥವಾ ಇತರ ಪಾಪಗಳತ್ತ ಹೋಗುವಂತೆ ಮಾಡುವುದು ಆಧ್ಯಾತ್ಮದ ಕೊರತೆಯಾಗಿದೆ.

ಸೋಮವಾರ, ಜನವರಿ 7, 2013

ಹೃದಯ ಮತ್ತು ಮನಸ್ಸಿನ ಸಂತುಲನ

೭ ಜನವರಿ ೨೦೧೩
ಕೊಚ್ಚಿ, ಕೇರಳ

ಒಂದು ಮನೆಯಲ್ಲಿ ನಿಜವಾದ ಮುಂದಾಳು ಯಾರೆಂಬುದು ನಿಮಗೆ ಗೊತ್ತೇ? ತಂದೆಯು ಮನೆಯ ಮುಂದಾಳುವೇ ಅಥವಾ ಮಗುವೇ? ಮನೆಯನ್ನು ಮುನ್ನಡೆಸುವುದು ಮಗುವೆಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಇಡಿಯ ಕುಟುಂಬವು ಸುತ್ತುವುದು ಮಗುವಿನ ಸುತ್ತಲೂ, ಅಲ್ಲವೇ?! ಅದಕ್ಕಾಗಿಯೇ, ನಾನು ನನ್ನನ್ನೇ ಒಂದು ಮಗುವೆಂದು; ಒಬ್ಬ ಬಾಲಕನೆಂದು ಪರಿಗಣಿಸುತ್ತೇನೆ.
ಒಬ್ಬ ನಿಜವಾದ ಮುಂದಾಳುವಿನಲ್ಲಿ ಈ ಎರಡು ಗುಣಗಳು ಇರಬೇಕು, ಒಂದು ತಲೆಯದ್ದು ಮತ್ತು ಇನ್ನೊಂದು ಹೃದಯದ್ದು - ತಿಳುವಳಿಕೆ ಮತ್ತು ಸೂಕ್ಷ್ಮತೆ. ಹೆಚ್ಚಾಗಿ ನಾವು ಏನನ್ನು ನೋಡುತ್ತೇವೆ, ಬಹಳ ತಿಳಿವನ್ನು ಹೊಂದಿದ ಜನರು ಸೂಕ್ಷ್ಮವಾಗಿರುವುದಿಲ್ಲ, ಯಾಕೆಂದರೆ ಅವರು ತರ್ಕದ ಮೇಲೆ ಬಹಳ ಗಮನವನ್ನಿರಿಸುತ್ತಾರೆ; ವಿವೇಕದಿಂದ ಮತ್ತು ತಾರ್ಕಿಕವಾಗಿ ಇರುವುದರ ಮೇಲೆ, ಮತ್ತು ನಂತರ ಕೆಲವರು ಎಷ್ಟೊಂದು ಸೂಕ್ಷ್ಮವಾಗಿರುತ್ತಾರೆಂದರೆ, ಒಂದು ಟೋಪಿ ಕೆಳ ಬೀಳುವ ಹೊತ್ತಿಗೆ ಅವರ ಕಣ್ಣುಗಳಲ್ಲಿ ನೀರು ಬರುತ್ತದೆ, ಆದರೆ ಅವರು ಸಾಕಷ್ಟು ವಿವೇಕಿಗಳಾಗಿರುವುದಿಲ್ಲ. ಇವರಿಬ್ಬರಲ್ಲಿ ಯಾರೂ ಒಬ್ಬ ಒಳ್ಳೆಯ ಮುಂದಾಳುವಾಗಲು ಸಾಧ್ಯವಿಲ್ಲ, ಯಾಕೆಂದರೆ ನಿಮ್ಮಲ್ಲಿ ಎರಡರದ್ದೂ ಒಂದು ಸಂತುಲನವಿರಬೇಕು - ವಿವೇಕ ಮತ್ತು ಸೂಕ್ಷ್ಮತೆ; ಹೃದಯ ಮತ್ತು ಮನಸ್ಸು, ಯಾಕೆಂದರೆ ನಾವೆಲ್ಲರೂ ನಮ್ಮ ಜೀವನದ ಈ ಎರಡು ಬಹಳ ಪ್ರಧಾನವಾದ ಅಂಶಗಳಿಂದ ಮಾಡಲ್ಪಟ್ಟಿರುವೆವು. ಬುದ್ಧಿವಂತಿಕೆಗೆ ಅದರದ್ದೇ ಆದ ಸ್ಥಾನವಿದೆ ಮತ್ತು ನಮ್ಮ ಭಾವನೆಗಳಿಗೂ ಕೂಡಾ.
ಕಳೆದ ಶತಮಾನದಲ್ಲಿ, ಮಹತ್ವವನ್ನು ಕೇವಲ ಬುದ್ಧಿಗೆ ಮಾತ್ರ ನೀಡಲಾಗಿತ್ತು. ಒಬ್ಬ ಪುರುಷನ ಕಣ್ಣುಗಳಲ್ಲಿ ಕಣ್ಣೀರು ಬರುವುದನ್ನು ಏನೋ ವಿಚಿತ್ರವಾಗಿ ಪರಿಗಣಿಸಲಾಗಿತ್ತು. ಒಬ್ಬ ಪುರುಷನು ಹೇಗೆ ಅಳಲು ಸಾಧ್ಯ?! ಮತ್ತು ಒಬ್ಬಳು ಸ್ತ್ರೀಯು ಮೈಕ್ ಹಿಡಿದು ನಿಂತುಕೊಂಡು ಮಾತನಾಡುವುದು ಅಥವಾ ತನ್ನ ಹಕ್ಕಿಗಾಗಿ ಹೋರಾಡುವುದು ವಿಚಿತ್ರವೆಂದು ಪರಿಗಣಿಸಲಾಗುತ್ತಿತ್ತು. ಸಮಾಜವಿದ್ದುದೇ ಹಾಗೆ. ಸ್ತ್ರೀಯರು ಮುಂದಾಳುವಾಗಲು ಸಾಧ್ಯವಿರಲಿಲ್ಲ! ಖಂಡಿತಾ, ಕೇರಳದಲ್ಲಲ್ಲ. ಕೇರಳದಲ್ಲಿ ಒಂದು ಬೇರೆಯ ಪದ್ಧತಿಯಿತ್ತು. ಆದರೆ ಪ್ರಪಂಚದಾದ್ಯಂತ, ಮಾತನಾಡುವ ಆ ಬೌದ್ಧಿಕ ಶಕ್ತಿಯನ್ನು ಸ್ತ್ರೀಯರಿಗೆ ನೀಡಿರಲಿಲ್ಲ, ಯಾಕೆಂದರೆ ಅವಳನ್ನು ಹೆಚ್ಚು ನ್ಯಾಯಯುತ ಹಾಗೂ ಸೂಕ್ಷ್ಮವಾದ ವಂಶವೆಂದು ಬದಿಗೆ ತಳ್ಳಲಾಗಿತ್ತು. ಇವತ್ತು, ಚಿತ್ರಣವು ಬದಲಾಗಿದೆ. ಇವತ್ತು ನಮಗೆ ವಿವೇಕ ಮತ್ತು ಸೂಕ್ಷ್ಮತೆ ಬೇಕು. ಪ್ರತಿಯೊಬ್ಬ ಮುಂದಾಳುವಿನಲ್ಲೂ ನಮಗೆ ಒಂದು ಹೆಣ್ಣಿನ ಆ ಮೃದುತ್ವವು ಬೇಕಾಗಿದೆ ಹಾಗೂ ಪ್ರತಿಯೊಬ್ಬಳು ಸ್ತ್ರೀಯಲ್ಲೂ ಒಬ್ಬ ಗಂಡಿನ ಸಾಮರ್ಥ್ಯ ಮತ್ತು ಅವಿರತವಾದ ಯತ್ನ ಇರಬೇಕು, ಆಗ ಒಬ್ಬರಿಗೆ ಯಾವುದೇ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯವಿದೆ. ನೀವೇನು ಹೇಳುವಿರಿ?!
ನಾನು ನಿಮಗೆ ಏನೋ ಬಹಳ ಪ್ರಧಾನವಾದುದನ್ನು ಹೇಳಲು ಬಯಸುತ್ತೇನೆ. ಯಾವಾಗೆಲ್ಲಾ ನಾವು ನಾಯಕತ್ವದ ಬಗ್ಗೆ ಅಥವಾ ನಮ್ಮ ಹೃದಯಗಳಿಗೆ ಬಹಳ ಪ್ರಿಯವಾದ ಯಾವುದೇ ವಿಷಯದ ಬಗ್ಗೆ ಚರ್ಚಿಸಬೇಕಾದಾಗ ನಾವು ಒಂದು ಬಹಳ ಅನೌಪಚಾರಿಕ ವಾತಾವರಣದಲ್ಲಿ ಇರಬೇಕು. ಆದುದರಿಂದ, ನಾವು ಯಾಕೆ, ನಮ್ಮ ಹಿಂದಿರುವ, ನಮ್ಮ ಮುಂದಿರುವ, ನಮ್ಮ ಬದಿಗಳಲ್ಲಿರುವ ವ್ಯಕ್ತಿಗಳೊಂದಿಗೆ, "ನಾನು ನಿನಗೆ ಸೇರಿದವನು!" ಎಂದು ಹೇಳುತ್ತಾ ಅಭಿವಂದಿಸಲು ಕೇವಲ ಅರ್ಧ ನಿಮಿಷಗಳನ್ನು ತೆಗೆದುಕೊಳ್ಳಬಾರದು?
ಆಯಿತೇ?! ನೀವು ನಿಮ್ಮ ಪಕ್ಕದಲ್ಲಿರುವ ಜನರನ್ನು ಅಭಿವಂದಿಸಿದಿರೇ? ನಿಮ್ಮಲ್ಲಿ ಕೆಲವರಿಗೆ, ಇತರರಿಗೆ ’ನಮಸ್ಕಾರ’ ಎಂದು ಹೇಳಲೂ ಕೂಡಾ ಬಹಳ ನಾಚಿಕೆಯಾಯಿತು.
ಹಲವು ಸಲ ನಾವು, ಮುಂದಾಳುಗಳು ಅಂತಹ ಒಂದು ಪರಿಸ್ಥಿತಿಯಲ್ಲಿರುವುದನ್ನು ಕಾಣುತ್ತೇವೆ. ಅವರು ಜನರ ಕಡೆಗೆ ನೋಡುವುದಿಲ್ಲ, ಅವರು ಬೇರೆಲ್ಲೋ ನೋಡುತ್ತಾರೆ ಮತ್ತು ಮಾತನಾಡುತ್ತಾ ಇರುತ್ತಾರೆ. ಅವರು ಜನರಲ್ಲಿ ಒಂದಾಗಲು ಸಾಧ್ಯವಿಲ್ಲ, ಅಲ್ಲವೇ?! ಹಾಗಾದರೆ, ನೀವು ನಿಮ್ಮ ಸುತ್ತಲಿನ ಜನರಿಗೆ, "ನಾನು ನಿನಗೆ ಸೇರಿದವನು" ಎಂದು ನಿಜವಾಗಿ ಹೇಳಿದಿರೇ ಅಥವಾ ನೀವದನ್ನು ಒಂದು ಔಪಚಾರಿಕತೆಯಿಂದ ಮಾಡಿದಿರೇ?
ನೀವು ಗಮನಿಸಿರಬೇಕು, ನೀವು ವಿಮಾನದಿಂದ ಕೆಳಗಿಳಿಯುವಾಗ, ಗಗನಸಖಿಯು, ’ಶುಭ ದಿನ!" ಎಂದು ಹೇಳುತ್ತಾ ನಿಮಗೆ ಅಭಿವಂದಿಸುತ್ತಾಳೆ. ಅವರು ಇಷ್ಟನ್ನು ಹೇಳುತ್ತಾರೆ, ಆದರೆ ಅವರದನ್ನು ನಿಜವಾದ ಅರ್ಥದಲ್ಲಿ ಹೇಳುವುದಿಲ್ಲ. ಅದೇ ರೀತಿಯಲ್ಲಿ, ನಮ್ಮ ದೈನಂದಿನ ಜೀವನದಲ್ಲಿ ನಾವು ಅದಲು ಬದಲು ಮಾಡಿಕೊಳ್ಳುವ ವಂದನೆಗಳಲ್ಲಿ ಬಹಳಷ್ಟು ಆ ಹಂತದಿಂದ ಬಂದವು. ನಾವು, ’ಹಾಯ್’ ಅಥವಾ ’ಸ್ವಾಗತ’ ಎಂದು ಹೇಳುತ್ತೇವೆ, ಆದರೆ ಒಬ್ಬರನ್ನು ಸ್ವಾಗತಿಸುವ ಹೃದಯವಂತಿಕೆ  ಅಲ್ಲಿರುವುದಿಲ್ಲ. ಆದರೆ ಅದೇ ಶಬ್ದಗಳು, ನಿಮಗೆ ಬಹಳ ಪ್ರಿಯರಾದ ಒಬ್ಬರಿಂದ; ನಿಮ್ಮ ತಾಯಿ ಅಥವಾ ನಿಮ್ಮ ಸಹೋದರಿ ಅಥವಾ ಆತ್ಮೀಯ ಸ್ನೇಹಿತರಿಂದ ಬಂದಾಗ, ಅದು ಸ್ವಲ್ಪ ಕಂಪನಗಳನ್ನು ಒಯ್ಯುತ್ತದೆ.
ನಾವು ಸಂಪರ್ಕಿಸುವುದರಲ್ಲಿ ಹೆಚ್ಚಿನದು ಕಂಪನಗಳ ಮೂಲಕ, ಮತ್ತು ಶಬ್ದಗಳು ಅದರಲ್ಲಿ ಒಂದು ಬಹಳ ಚಿಕ್ಕ ಪಾತ್ರವನ್ನು ವಹಿಸುತ್ತವೆ. ನಿಮ್ಮ ಕಂಪನಗಳು, ನಿಮ್ಮ ಬಾಯಿಯಿಂದ ಶಬ್ದಗಳು ಹೊರಬರುವುದಕ್ಕೂ ಮೊದಲೇ, ಹೆಚ್ಚು ಸಂದೇಶಗಳನ್ನು ಕಳುಹಿಸುತ್ತವೆ. ಒಬ್ಬ ಮುಂದಾಳುವು ತನ್ನ ಶಬ್ದಗಳ ಮೇಲೆ ಅವಲಂಬಿತನಾದಾಗ, ತನ್ನ ಮಾತನ್ನು ನೆಚ್ಚಿಕೊಳ್ಳಲಾಗುವುದಿಲ್ಲ ಎಂಬುದರ ಬಗ್ಗೆ ಖಚಿತವಾಗಿ ತಿಳಿದಿರಬೇಕು. ನೀವು ಮಾತಿನ ಮೇಲೆ ಅಷ್ಟೊಂದು ಅವಲಂಬಿತರಾಗಿದ್ದರೆ, ಜನರು ನಿಮ್ಮ ಮಾತಿನ ಮೇಲೆ ಅವಲಂಬಿಸರು. ಅದು ಒಳಗೆ ಆಳದಿಂದ ಬರಬೇಕು. ಅದನ್ನೇ ಪ್ರಾಮಾಣಿಕತೆ ಎಂದು ಕರೆಯುವುದು; ನಿಮ್ಮ ಕಂಪನಗಳು, ನಿಮ್ಮ ಭಾವನೆಗಳು ಮತ್ತು ನಿಮ್ಮ ಮಾತುಗಳ ನಡುವೆ ಸಂಬಂಧವಿರುವಾಗ.
ನೀವು ನನ್ನಲ್ಲಿ ಹೇಳಬಹುದು, "ಗುರುದೇವ, ಈ ಮೂರನ್ನು ಸರಿಹೊಂದಿಸುವುದು ಬಹಳ ಕಷ್ಟ. ಅದು ಹೇಗೆ ಸಾಧ್ಯ?! ಪ್ರತಿಯೊಬ್ಬರಿಗೂ ಈ ಮೂರನ್ನು ಸರಿಹೊಂದಿಸಲು ಸಾಧ್ಯವಾದರೆ, ಪ್ರತಿಯೊಬ್ಬರೂ ಒಬ್ಬ ಸಂತರಾಗುವರು. ಅದು ಪ್ರಾಯೋಗಿಕವಲ್ಲ!" ನಾನು ಹೇಳುತ್ತೇನೆ, ಸರಿ, ನಾನು ನೀವು ಹೇಳುವುದನ್ನು ಒಪ್ಪುತ್ತೇನೆ. ನಿಮಗದನ್ನು ೧೦೦% ಸರಿಹೊಂದಿಸಲು ಸಾಧ್ಯವಿಲ್ಲ, ಆದರೆ ಕನಿಷ್ಠಪಕ್ಷ ನೀವು ೨೫% ಆದರೂ ಸರಿಹೊಂದಿಸಬಲ್ಲಿರಾ? ಅಷ್ಟನ್ನು ನೀವು ಮಾಡಬಹುದು, ಯಾಕೆಂದರೆ ಜನರಿಗೆ ಅದರ ಅನುಭವವಾಗುತ್ತದೆ; ಅದನ್ನು ಗ್ರಹಿಸಬಲ್ಲರು. ಆದುದರಿಂದ, ನಾವು ನಮ್ಮ ಮಾತಿನ ಮೂಲಕ ತಿಳಿಯಪಡಿಸುವುದಕ್ಕಿಂತ ಹೆಚ್ಚಾಗಿ ನಮ್ಮ ಕಂಪನಗಳ ಮೂಲಕ ತಿಳಿಯಪಡಿಸುತ್ತೇವೆ. ಶಬ್ದಗಳು ಮುಖ್ಯ, ಆದರೆ ಅದಕ್ಕೆ ಆ ಉಪಸ್ಥಿತಿಯ ಅಗತ್ಯವಿದೆ.
ಜನರು ಬುದ್ಧಿವಂತರು, ನೀವು ಯಾವಾಗ ನಿಜವಾಗಿ ಯಾರನ್ನಾದರೂ ಸ್ವಾಗತಿಸುವಿರಿ ಮತ್ತು ಯಾವಾಗ ನೀವು ಅದನ್ನು ಔಪಚಾರಿಕವಾಗಿ ಮಾಡುವಿರಿ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬಲ್ಲರು.
ಸರಿ, ನನ್ನಲ್ಲಿ ನಿಮಗಾಗಿ ಇನ್ನೊಂದು ವ್ಯಾಯಾಮವಿದೆ. ನೀವದನ್ನು ಮಾಡುವಿರೇ? ನೀವು ಸಿದ್ಧರಿರುವಿರೇ? ನೀವು ನಿಮ್ಮ ಪಕ್ಕದಲ್ಲಿರುವ ವ್ಯಕ್ತಿಯ ಕಡೆಗೆ ತಿರುಗಿ ಅವರ ಬಳಿ, "ನಾನು ನಿಮ್ಮನ್ನು ನಂಬುವುದಿಲ್ಲ!" ಎಂದು ಹೇಳುವಿರೇ? ನಿಮ್ಮ ಸಂಗಾತಿಯು ನಿಮ್ಮ ಪಕ್ಕದಲ್ಲಿದ್ದರೆ, ಇದೊಂದು ಅವಕಾಶ! (ನಗು)
ನೀವೆಲ್ಲರೂ ಅದನ್ನು ಅಷ್ಟು ತ್ವರಿತವಾಗಿ ಮಾಡಿದಿರೇ?! ಅದನ್ನು ಮಾಡುವುದು ಸುಲಭವಲ್ಲವೆಂಬುದನ್ನು ನೀವು ಗಮನಿಸಿದಿರೇ? ನೀವು ಯಾರೊಂದಿಗಾದರೂ, "ನಾನು ನಿಮ್ಮನ್ನು ನಂಬುವುದಿಲ್ಲ" ಎಂದು ಹೇಳುತ್ತಾ ನಗಲು ಪ್ರಾರಂಭಿಸಿದುದು ಮತ್ತು ಅವರು ಕೂಡಾ ನಗಲು ಪ್ರಾರಂಭಿಸಿದುದು ಇದೇ ಮೊದಲ ಬಾರಿಗಿರಬೇಕು. ಪರಿವರ್ತನೆಯು ಆರಂಭವಾಗಿದೆ. ನೀವು ಅವರ ಮಾತಿನ ಮೇಲೆ ಅವಲಂಬಿತರಾಗಿರಲಿಲ್ಲ ಮತ್ತು ಅವರು ನಿಮ್ಮ ಮಾತಿನ ಮೇಲೆ ಅವಲಂಬಿತರಾಗಿರಲಿಲ್ಲ, ಅಲ್ಲವೇ?!
ಕೇವಲ ಒಂದು ನಿಮಿಷ ಕಾಲ ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಯಾರೂ ನಿಮ್ಮನ್ನು ನಂಬುವುದಿಲ್ಲವೆಂದು ಸುಮ್ಮನೇ ಕಲ್ಪಿಸಿ. ಪ್ರತಿಯೊಬ್ಬರೂ ನಿಮ್ಮಲ್ಲಿ, "ನಾನು ನಿನ್ನನ್ನು ನಂಬುವುದಿಲ್ಲ" ಎಂದು ಹೇಳುತ್ತಿದ್ದಾರೆ. ನೀವು ನಿಮ್ಮ ಕಣ್ಣುಗಳನ್ನು ತೆರೆಯಬಹುದು. ನಿಮಗೆ ಹೇಗನ್ನಿಸುತ್ತಿದೆ? ನೆಮ್ಮದಿಯಾಯಿತೇ?!  ಭಯಾನಕವಾಗಿತ್ತೇ?!
(ಸಭಿಕರು: ಭಯಾನಕ; ಸಂಕಟಕರ; ಅಹಿತಕರ; ಹತಾಶೆ; ದುಃಖ; ಭೀಕರ; ವ್ಯಾಕುಲತೆ)
ನಿಮಗೆ ಗೊತ್ತಾ, ನಮ್ಮಲ್ಲಿ, "ನಾನು ಯಾರನ್ನೂ ನಂಬುವುದಿಲ್ಲ" ಎಂಬ ಮನೋಭಾವವಿರುವಾಗ ನಾವು ಹುಟ್ಟಿಸುವುದು ಇದನ್ನೇ. ನಾವು ಎಂತಹ ಕಂಪನವನ್ನು ಸೃಷ್ಟಿಸುತ್ತೇವೆಯೆಂದರೆ, ಯಾರಾದರೂ ನಮ್ಮ ಸಮೀಪ ಬಂದರೆ, ನಮಗೆ ಹಾಗೆ ಅನ್ನಿಸುವುದೆಂದು ಅವರಿಗೆ ಅನ್ನಿಸುತ್ತದೆ, ಮತ್ತು ನಂತರ ಸಮಾಜದಲ್ಲಿ ಅಪನಂಬಿಕೆಯುಂಟಾಗುತ್ತದೆ. ಹೀಗೆಯೇ ಸಮಾಜವು ಅಧಃಪತನ ಹೊಂದಲು ತೊಡಗುವುದು ಮತ್ತು ಘರ್ಷಣೆಗಳು ಏಳುವುದು.
ನಿಮಗೆ ಗೊತ್ತಾ, ನಂಬಿಕೆಯ ಒಪ್ಪಂದದ ಬಗ್ಗೆ ಗಮನ ಹರಿಸಿದರೆ ಹೆಚ್ಚಿನ ಘರ್ಷಣೆಗಳನ್ನು ಬಹಳ ಪ್ರಾರಂಭದಲ್ಲಿಯೇ ಪರಿಹರಿಸಬಹುದು. ನೋಡಿ, ಯಾರೂ ನಿಮ್ಮನ್ನು ನಂಬುವುದಿಲ್ಲವೆಂದು ನಿಮಗನ್ನಿಸುವಾಗ, ನಿಮಗೆ ಬಹಳ ದುಃಖವಾಗುತ್ತದೆ ಮತ್ತು ನಿಮ್ಮ ಸುತ್ತಲೂ ಬಹಳ ಕೆಟ್ಟ ಕಂಪನದ ಅನುಭವವಾಗುತ್ತದೆ. ಇದು ಎಂತಹ ಒಂದು ವಾತಾವರಣವನ್ನು ಸೃಷ್ಟಿಸುವುದೆಂದರೆ, ಅದು ನಿಮಗೆ ಅಥವಾ ಬೇರೆ ಯಾರಿಗಾದರೂ ಒಳ್ಳೆಯದಲ್ಲ. ನೀವು ಬೋಳರಾಗಿರಬೇಕೆಂಬುದು ನನ್ನ ಮಾತಿನ ಅರ್ಥವಲ್ಲ, ಆದರೆ ಅದೇ ಸಮಯದಲ್ಲಿ ನೀವು ನಂಬಿಕೆಯ ಈ ಮಗ್ಗುಲಿನ ಕಡೆಗೆ ನೋಡಬೇಕೆಂದು ನಾನು ಬಯಸುತ್ತೇನೆ. ಮಾನವೀಯ ಮೌಲ್ಯಗಳಲ್ಲಿ ನಂಬಿಕೆಯಿರದ ಒಂದು ಸಮಾಜವು ಯಾವುದೇ ಲೆಕ್ಕದಲ್ಲಿಯೂ ಸಮೃದ್ಧಿ ಹೊಂದಲು, ಪ್ರಗತಿ ಹೊಂದಲು ಅಥವಾ ಸೃಜನಶೀಲವಾಗಲು ಸಾಧ್ಯವಿಲ್ಲ. ಇದು ನನ್ನ ತೀರ್ಮಾನ.
ಈಗ ನೀವು ಕೇಳಬಹುದು, "ಸ್ವಯಂ-ಅನುಮಾನದ ಬಗ್ಗೆಯೇನು? ನನಗೆ ಇತರರಲ್ಲಿ ನಂಬಿಕೆಯಿದೆ ಆದರೆ ನಾನು ನನ್ನನ್ನೇ ನಂಬುವುದಿಲ್ಲ." ಇದು ಅದೇ ರೋಗದ ಇನ್ನೊಂದು ರೂಪ. ನಿಮ್ಮನ್ನೇ ನಂಬುವುದರ ಕೊರತೆಯು, ಇತರರ ಮೇಲಿರುವ ನಂಬಿಕೆಯ ಕೊರತೆಗೆ ದಾರಿಮಾಡುತ್ತದೆ. ಇತರರ ಮೇಲಿರುವ ನಂಬಿಕೆಯ ಕೊರತೆಯು ಸಮಾಜದ ಮೌಲ್ಯಗಳ ಮೇಲಿರುವ ನಂಬಿಕೆಯ ಕೊರತೆಗೆ ದಾರಿಮಾಡುತ್ತದೆ. ಇದು ತಿರುಗಿ ತನ್ನ ಮೇಲೆಯೇ ಇರುವ ನಂಬಿಕೆಯ ಕೊರತೆಗೆ ದಾರಿಮಾಡುತ್ತದೆ. ಇದನ್ನು ಸರಿಪಡಿಸಬೇಕಾಗಿದೆ, ಮತ್ತು ಇದನ್ನು ಸರಿಪಡಿಸುವ ಯಾವುದನ್ನೇ ಆದರೂ ಸ್ವಾಗತಿಸಬೇಕು. ಸಮುದಾಯಗಳ ನಡುವಿನ ನಂಬಿಕೆ, ಒಂದೇ ಕುಟುಂಬದ ಸದಸ್ಯರ ನಡುವಿನ ನಂಬಿಕೆ ಮುಖ್ಯವಾಗಿದೆ. ನಾನು ಹೇಳುವುದೇನೆಂದರೆ, ಅಪನಂಬಿಕೆಗೆ ಕಾರಣವಾಗಿರುವುದು ಒತ್ತಡ.
ಪ್ರತಿಯೊಬ್ಬರೂ ಒಬ್ಬ ಮೋಸಗಾರರೆಂದು ಯೋಚಿಸಬೇಡಿ. ಭೂಮಿಯ ಮೇಲೆ ಒಳ್ಳೆಯ ಜನರಿದ್ದಾರೆ ಮತ್ತು ಅವರ ಸಂಖ್ಯೆ ಬಹಳ ಹೆಚ್ಚಿದೆ. ಪ್ರಪಂಚವು ಇವತ್ತು ಕೆಟ್ಟದಾಗಿರುವುದು ಕೆಲವು ಕೆಟ್ಟ ಜನರಿಂದಾಗಿಯಲ್ಲ, ಆದರೆ ಅನಾನುಕೂಲ ಪರಿಸ್ಥಿತಿಗಳನ್ನು ಸೃಷ್ಟಿಸಿರುವುದು ಒಳ್ಳೆಯ ಜನರ ಮೌನವಾಗಿದೆ. ಈಗ ಇದನ್ನು ಬದಲಾಯಿಸುವುದು ನಮ್ಮ ಕೈಗಳಲ್ಲಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಒಬ್ಬ ಮುಂದಾಳು, ಒಬ್ಬ ಮುಂದಾಳುವಿಗಾಗಿ ಹುಡುಕಾಡಬೇಡಿ. ಮುಖ್ಯವಾದುದೇನೆಂದರೆ ಹಿಂದೆ ನಿಂತು ಮುನ್ನಡೆಸುವುದು. ಒಬ್ಬ ನಿಜವಾದ ಮುಂದಾಳುವೆಂದರೆ, "ನಾನು ಮುಂದಾಳು, ನೀವು ನನ್ನನ್ನು ಹಿಂಬಾಲಿಸಬೇಕು" ಎಂದು ಒತ್ತಿ ಹೇಳುವವನಲ್ಲ, ಬದಲಾಗಿ ಅವನು, "ಮುಂದಕ್ಕೆ ಹೋಗಿ" ಎಂದು ಹೇಳುತ್ತಾನೆ ಮತ್ತು ಅವನು ಇತರರನ್ನು ಮುಂದಕ್ಕೆ ತಳ್ಳುತ್ತಾನೆ. "ನಾನಿಲ್ಲಿ ನಿಮ್ಮೊಂದಿಗಿದ್ದೇನೆ, ಆದುದರಿಂದ ನೀವು ಓಡಿ"; ಒಂದು ಓಟದ ಪಂದ್ಯದಲ್ಲಿ ತನ್ನ ಕಡೆಯಿಂದ ಭಾಗವಹಿಸುವವನಿಗೆ ಸಹಾಯ ಮಾಡುವ ಒಬ್ಬ ತರಬೇತುದಾರನಂತೆ ಅಥವಾ ನಿಮಗೆ ಈಜಲು ಕಲಿಸುವ ಒಬ್ಬ ತರಬೇತುದಾರನಂತೆ. ಒಬ್ಬರು ವಾದ ಮಾಡುತ್ತಾರೆ, ನನಗೆ ಈಜಲು ತಿಳಿದಿಲ್ಲದಿರುವಾಗ ನಾನು ನೀರಿನೊಳಕ್ಕೆ ಹಾರುವುದು ಹೇಗೆ? ಆದರೆ ನೀವು ನೀರಿನೊಳಕ್ಕೆ ಇಳಿಯದೆ, ನಿಮಗೆ ಈಜುವುದನ್ನು ಕಲಿಯಲು ಹೇಗೆ ಸಾಧ್ಯ?! ನಿಮಗೆ ಗಾಳಿಯಲ್ಲಿ ಈಜಲು ಸಾಧ್ಯವಿಲ್ಲ. ಆದುದರಿಂದ ಆ ಮಾರ್ಗದರ್ಶನವು ಒಬ್ಬನ ಸ್ವಂತ ಜೀವನದ ಅನುಭವದಿಂದ ಬರಬೇಕು.
ಭಾರತದಲ್ಲಾಗಿರುವ ದೊಡ್ಡ ಗಲಭೆಯನ್ನು ನೀವು ನೋಡಿರುವಿರಿ. ಕೊನೆಗೂ ಜನರು ಮಹಿಳೆಯರ ದುರವಸ್ಥೆಯ ವಿಷಯವಾಗಿ ಎಚ್ಚೆತ್ತಿದ್ದಾರೆ. ಒಬ್ಬಳು ಮಹಿಳೆಯು ಕಿರುಕುಳಕ್ಕೊಳಗಾಗಿರುವುದು ಇದು ಮೊದಲನೆಯ ಸಲವಲ್ಲ, ಅದು ಹಲವಾರು ವರ್ಷಗಳಿಂದ ಮತ್ತು ಹಲವಾರು ಜಾಗಗಳಲ್ಲಿ ನಡೆಯುತ್ತಿದೆ. ಜನರು ಎಚ್ಚೆತ್ತಿದ್ದಾರೆ, ಮತ್ತು ಆ ಜನರನ್ನು ಶಿಕ್ಷಿಸಬೇಕೆಂಬುದಾಗಿ ಎಲ್ಲರೂ ಬೇಡಿಕೆಯನ್ನೊಡ್ಡುತ್ತಿದ್ದಾರೆ, ಆದರೆ ಅವರು ಒಬ್ಬ ವ್ಯಕ್ತಿಯನ್ನು ಬಿಡುತ್ತಿದ್ದಾರೆ; ಶ್ರೀಮಾನ್. ಮದ್ಯಸಾರ. ಈ ವ್ಯಕ್ತಿಗಳು ಮದ್ಯಪಾನ ಮಾಡದೇ ಇರುತ್ತಿದ್ದರೆ, ಬಹುಶಃ ಅವರು ತಮ್ಮ ಪ್ರಜ್ಞೆ ಕಳೆದುಕೊಳ್ಳುತ್ತಿರಲಿಲ್ಲ. ಮತ್ತು ಈ ವ್ಯಕ್ತಿಗಳು ಪ್ರಜ್ಞೆಯಲ್ಲಿರುತ್ತಿದ್ದರೆ, ಬಹುಶಃ ಅವರು ಅಂತಹ ಒಂದು ಅಪರಾಧವನ್ನೆಸಗುತ್ತಿರಲಿಲ್ಲ. ಆದರೆ ಅವರು ಸಂಪೂರ್ಣವಾಗಿ ಪಾನಮತ್ತರಾಗಿದ್ದರು. ಅಲ್ಲವೇ! ಮೊದಲ ದೋಷಿಯಾಗಿರುವುದು ಮದ್ಯಸಾರ.
ನಾನಿದನ್ನು ಪ್ರತಿದಿನವೂ ಕೇಳುತ್ತಿರುತ್ತೇನೆ; ಪ್ರತಿಯೊಂದು ದಿನವೂ. ಗಂಡಸರು ರಾತ್ರಿಯಲ್ಲಿ ಕುಡಿಯುತ್ತಾರೆ ಮತ್ತು ನಂತರ ಹೋಗಿ ತಮ್ಮ ಪತ್ನಿಯರನ್ನು ಹೊಡೆಯುತ್ತಾರೆ. ಬೆಳಗ್ಗೆ ಅವರು ತಮ್ಮ ಪತ್ನಿಯ ಕ್ಷಮಾಪಣೆ ಕೇಳುತ್ತಾರೆ ಮತ್ತು ಅವಳು ಅವನನ್ನು ಕ್ಷಮಿಸುತ್ತಾಳೆ ಹಾಗೂ ಜೀವನವು ಮುಂದುವರಿಯುತ್ತದೆ.

ಪ್ರಶ್ನೆ: ದಿಲ್ಲಿಯ ಸಾಮೂಹಿಕ ಅತ್ಯಾಚಾರದ ಘಟನೆಯ ಹಿಂದಿನ ಪ್ರಧಾನ ಕಾರಣ ಮದ್ಯಸಾರವೆಂದು ನೀವು ಈಗಷ್ಟೇ ಹೇಳಿದಿರಿ. ಆದರೆ ಇವತ್ತು, ಚಿಕ್ಕ ಹುಡುಗಿಯರು ತಮ್ಮ ಸ್ವಂತ ತಂದೆಯರಿಂದ ಅತ್ಯಾಚಾರಕ್ಕೊಳಗಾಗುವ ಪ್ರಕರಣಗಳಾಗುತ್ತಿವೆ. ಅಂತಹ ಪ್ರಕರಣಗಳಲ್ಲಿ, ಅದು ಕೇವಲ ಮದ್ಯಸಾರವಲ್ಲ. ಇದಕ್ಕಿಂತ ದೊಡ್ಡ ಸಮಸ್ಯೆ ಯಾವುದು?
ಶ್ರೀ ಶ್ರೀ ರವಿ ಶಂಕರ್: ಸರಿ, ಈ ಪ್ರಕರಣದ ಹಿಂದಿನ ಪ್ರಧಾನ ಕಾರಣ ಮದ್ಯಸಾರವಲ್ಲ.
ಲೈಂಗಿಕ ಅಪರಾಧಿಗಳಲ್ಲಿ ಪ್ರಾಥಮಿಕವಾಗಿ ಮೂರು ಸಮಸ್ಯೆಗಳಿವೆ. ಒಂದನೆಯದು ಹಾರ್ಮೋನ್ ಸಮಸ್ಯೆಗಳು; ಇಲ್ಲಿ ಅವರಲ್ಲಿ ಸ್ವಲ್ಪ ಗಂಭೀರವಾದ ಹಾರ್ಮೋನ್ ಅಸಮತೋಲನಗಳಿರಬಹುದು. ಎರಡನೆಯದು ಭಾವನಾತ್ಮಕ ತುಮುಲಗಳು. ವ್ಯಕ್ತಿಯು ಯಾವುದಾದರೂ ರೀತಿಯಲ್ಲಿ, ತನ್ನೊಳಗೆಯೇ ಒಬ್ಬ ಬಲಿಪಶುವಾಗಿರಬಹುದು ಮೂರನೆಯದು, ಮಾನವೀಯ ಮೌಲ್ಯಗಳ ಸಂಪೂರ್ಣ ಅವನತಿ.
ಆದುದರಿಂದ, ಈ ಮೂರು ವಿಷಯಗಳು ಒಟ್ಟು ಸೇರಿ ಒಬ್ಬ ವ್ಯಕ್ತಿಯು, ತಾನೇ ಪಶ್ಚಾತ್ತಾಪ ಪಡುವಂತಹ ಅಪರಾಧಗಳನ್ನು ಎಸಗುವಂತೆ ಮಾಡಬಹುದು. ತಾವೇನೋ ಉತ್ತಮವಾದುದನ್ನು ಸಾಧಿಸಿದ್ದೇವೆಂದು ಅವರು ಸಂತೋಷಪಡಬಹುದೆಂದಲ್ಲ. ಅವರು ಒಂದು ಚಿಕ್ಕ ಮಗುವಿನೊಂದಿಗೆ ಅಂತಹ ಒಂದು ಕೆಟ್ಟ ಕೆಲಸವನ್ನು ಮಾಡುತ್ತಾರೆ. ತಮ್ಮ ರೋಗಪೀಡಿತ ಮನಸ್ಸಿನಿಂದಾಗಿ, ಅಸಮತೋಲನಗೊಂಡ ಭಾವನೆಗಳು ಮತ್ತು ಹಾರ್ಮೋನುಗಳಿಂದಾಗಿ ಅವರು ಬಲವಂತಕ್ಕೊಳಗಾಗುತ್ತಾರೆ. ಆದುದರಿಂದ ಈ ರೀತಿಯ ಜನರಿಗೆ ಶುಶ್ರೂಷೆಯ ಅಗತ್ಯವಿದೆ. ಅವರಿಗೆ ಖಂಡಿತವಾಗಿ ಸಲಹೆಯ ಅಗತ್ಯವಿದೆ, ಮತ್ತು ಸಮಾಜವು ಯಾವುದೇ ನಿಂದನೆಯನ್ನು ಮಾಡದೇ ಅವರಿಗೆ ಈ ರೀತಿಯ ಸಲಹೆಯನ್ನು ಒದಗಿಸಬೇಕು.
ನಿಮಗೆ ಗೊತ್ತಾ, ಇದು ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲ, ವಾಸ್ತವವಾಗಿ, ಎಲ್ಲಾ ಮುಂದುವರಿದ ದೇಶಗಳಲ್ಲಿ ಇದು ಹೆಚ್ಚಾಗಿದೆ. ಪ್ರಪಂಚದ ಎಲ್ಲೆಡೆಯಲ್ಲಿ, ಮಗುವಿನ ಪೀಡನೆಯ ಈ ಸಮಸ್ಯೆಯು ಪ್ರಬಲವಾಗಿದೆ. ಅಂತಹ ಹಲವಾರು ಪ್ರಕರಣಗಳಿವೆ. ತಂದೆಯು ತನ್ನ ಸ್ವಂತ ಮಗಳಿಗೆ ಲೈಂಗಿಕ ಕಿರುಕುಳ ನೀಡುವುದು, ಭಾರತದಲ್ಲಿ ನಾವು ಇಂತಹುದನ್ನು ಕೇಳಿದುದು ತೀರಾ ಇತ್ತೀಚೆಗಷ್ಟೇ, ಆದರೆ ಅಮೇರಿಕಾದಲ್ಲಿ ಇದು ಹಲವಾರು ವರ್ಷಗಳಿಂದ ನಡೆಯುತ್ತಿದೆ. ಈ ಎಲ್ಲಾ ದೂರದರ್ಶನ ಕಾರ್ಯಕ್ರಮಗಳಿಂದ ಅದು ಯಾವ ಮಟ್ಟಕ್ಕೆ ಹೋಗಿದೆಯೆಂದರೆ, ಕೆಲವೊಮ್ಮೆ ಮಕ್ಕಳು, "ಓ, ಬಹುಶಃ ನನ್ನ ತಂದೆಯು ನನಗೆ ಈ ರೀತಿ ಮಾಡಿರಬೇಕು" ಎಂದು ಸಂಶಯಿಸಲು ತೊಡಗುತ್ತಾರೆ.
ಅಂತಹ ಒಂದು ಪ್ರಕರಣವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಒಬ್ಬರು ಹಿರಿಯ ದಂಪತಿಗಳು ನನ್ನ ಬಳಿಗೆ ಬಂದರು. ಆ ಸಮಯದಲ್ಲಿ ಅದಾಗಲೇ ೩೮ ವರ್ಷ ವಯಸ್ಸಾಗಿದ್ದ ಅವರ ಮಗಳು ಈ ಎಲ್ಲಾ ಚರ್ಚಾ ಕಾರ್ಯಕ್ರಮಗಳನ್ನು ನೋಡಿದ ಬಳಿಕ ಅಚಾನಕ್ಕಾಗಿ, ತಾನೊಬ್ಬಳು ಬಲಿಪಶುವೆಂದು; ತಾನು ಚಿಕ್ಕವಳಿರುವಾಗ ತನ್ನ ತಂದೆಯು  ತನ್ನೊಂದಿಗೆ ಹೀಗೆ ಮಾಡಿದರು ಎಂದು ಯೋಚಿಸಿದಳು. ಆದುದರಿಂದ ಅಚಾನಕ್ಕಾಗಿ, ಈ ದೂರದರ್ಶನ ಕಾರ್ಯಕ್ರಮದ ಬಳಿಕ, ಹೆತ್ತವರು ಮತ್ತು ಮಗಳ ನಡುವಿನ ಸಂಬಂಧ ಬಹಳಷ್ಟು ಕೆಟ್ಟದಾಯಿತು. ತಂದೆಯು, "ಯಾವತ್ತಾದರೂ ಅಂತಹ ಒಂದು ಅಪರಾಧವನ್ನು ನಾನು ಮಾಡಲು ಹೇಗೆ ಸಾಧ್ಯ? ನನ್ನ ಮಗಳಿಗೆ ನಾನು ಈ ರೀತಿ ಮಾಡಿರುವೆನೆಂದು ಅವಳಂದುಕೊಂಡಿದ್ದಾಳೆ" ಎಂದು ಹೇಳುತ್ತಾ ಅಳುತ್ತಿದ್ದರು. ಹೀಗೆ, ಈ ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲವು, ಕುಟುಂಬವನ್ನು ನಾಶಗೊಳಿಸುವ ಇಂತಹ ಪ್ರಭಾವವನ್ನು ಕೂಡಾ ಬೀರಬಲ್ಲದು. ನಾನು ಹೇಳುತ್ತಿರುವುದೇನೆಂದು ನಿಮಗೆ ಅರ್ಥವಾಗುತ್ತಿದೆಯೇ? ಅವರನ್ನೆಲ್ಲಾ ಒಟ್ಟಿಗೆ ಕೂರಿಸಿ, ಸಲಹೆ ನೀಡಲು, ಅವರು ಧ್ಯಾನ ಮಾಡುವಂತೆ ಮಾಡಲು, ಮತ್ತು ಅದಕ್ಕೆಲ್ಲಾ ನನಗೆ ಸಾಕಷ್ಟು ಸಮಯ ಹಿಡಿಯಿತು. ಖಂಡಿತಾ, ಕೊನೆಗೆ ಕುಟುಂಬವು ಒಟ್ಟಾಯಿತು, ಅವರಿಗೆ ಈ ನೆನಪುಗಳನ್ನು ಬಿಟ್ಟು ಬಿಡಲು ಸಾಧ್ಯವಾಯಿತು.
ಹಲವು ಸಲ ಜನರು ಹೆಚ್ಚು ಗಮನವನ್ನು ಸೆಳೆಯುವುದಕ್ಕಾಗಿ ತಮ್ಮನ್ನು ಬಲಿಪಶುಗಳೆಂದು ಪರಿಗಣಿಸುತ್ತಾರೆ. ಸಮಾಜದಲ್ಲಿ ಇಂತಹ ಸಂಗತಿಗಳೂ ನಡೆಯುತ್ತವೆ.
ಯಾವುದೇ ಬೆಲೆ ತೆತ್ತಾದರೂ ನಾವು ಮಹಿಳೆಯರ ಮತ್ತು ಮಕ್ಕಳ ವಿರುದ್ಧವಾಗುವ ಅಪರಾಧಗಳನ್ನು ಕೊನೆಗೊಳಿಸಬೇಕು. ಸಮಾಜವು ಹೆಚ್ಚು ಆಧ್ಯಾತ್ಮಿಕ, ಹೆಚ್ಚು ಮಾನವೀಯ ಮತ್ತು ಹೆಚ್ಚು ಸೂಕ್ಷ್ಮವಾದಾಗ ಮಾತ್ರ ಇದಾಗಲು ಸಾಧ್ಯ.

ಪ್ರಶ್ನೆ: ಸರಕಾರವು ಭ್ರಷ್ಟವಾಗಿದ್ದರೆ, ದೇಶವು ಒಳ್ಳೆಯ ಆಡಳಿತವನ್ನು ಸೃಷ್ಟಿಸಲು ಹೇಗೆ ಸಾಧ್ಯ?
ಶ್ರೀ ಶ್ರೀ ರವಿ ಶಂಕರ್: ಸರಕಾರಕ್ಕೆ ವ್ಯಕ್ತಿತ್ವವಿಲ್ಲ, ಭ್ರಷ್ಟರಾಗುವುದು ಸರಕಾರದಲ್ಲಿರುವ ಜನರು. ಭ್ರಷ್ಟರಾಗದೇ ಇರಲು ಸಾಧ್ಯವಾಗುವುದು ಕೂಡಾ ಜನರಿಗೆ.
ನೋಡಿ, ಎಲ್ಲಿ ಆತ್ಮೀಯತೆಯ ಭಾವವು ಕೊನೆಗೊಳ್ಳುವುದೋ ಅಲ್ಲಿ ಭ್ರಷ್ಟಾಚಾರವು ಪ್ರಾರಂಭವಾಗುತ್ತದೆ. ಯಾರನ್ನು ತಮಗೆ ಸೇರಿದವರೆಂದು ಅಂದುಕೊಳ್ಳುವರೋ ಅವರೊಂದಿಗೆ ಭ್ರಷ್ಟರಾಗಿರಲು ಯಾರಿಗೂ ಸಾಧ್ಯವಿಲ್ಲ. ಅವರು ತಮ್ಮ ಮಿತ್ರರು ಮತ್ತು ಕುಟುಂಬದವರಿಂದ ಲಂಚವನ್ನು ತೆಗೆದುಕೊಳ್ಳಲಾರರು. ಯಾರನ್ನು ತಮ್ಮ ಆತ್ಮೀಯತಾ ಭಾವದಿಂದ ಹೊರಗಿರುವವರೆಂದು ಅವರು ಅಂದುಕೊಳ್ಳುವರೋ ಅವರಿಂದ ಮಾತ್ರ ಅವರು ಲಂಚವನ್ನು ತೆಗೆದುಕೊಳ್ಳುವರು. ಆದುದರಿಂದ, ಭ್ರಷ್ಟಾಚಾರ ಮತ್ತು ಅಪರಾಧ, ಈ ಎರಡು ವಿಷಯಗಳನ್ನು ನಿರ್ಮೂಲನ ಮಾಡಬೇಕು, ಅಲ್ಲದಿದ್ದರೆ ಸರಕಾರವು ಪ್ರಭಾವಶಾಲಿಯಾಗಲು ಸಾಧ್ಯವಿಲ್ಲ.
ಸರಕಾರದಲ್ಲಿ ಅಪರಾಧಿ ಅಂಶಗಳಿರುವುದು ಒಂದು ಭೀಕರ ಸಂಗತಿ. ಪ್ರತಿಯೊಂದು ಪಕ್ಷವೂ ಈ ಅಪರಾಧಿ ಅಂಶಗಳಿಗೆ ಟಿಕೆಟುಗಳನ್ನು ಯಾಕೆ ನೀಡುತ್ತದೆಯೆಂಬುದು ನಿಮಗೆ ತಿಳಿದಿದೆಯೇ? ಅದು ಯಾಕೆಂದರೆ ಅವರ ಬಳಿ ಮತಗಳ ಬ್ಯಾಂಕ್ ಇರುತ್ತದೆ. ನೀವು, ಒಳ್ಳೆಯ ಜನರು ನಿಮ್ಮದೇ ಆದ ಮತಗಳ ಬ್ಯಾಂಕುಗಳನ್ನು ಮಾಡಲು ಶುರು ಮಾಡಿದರೆ ನೀವು ಪ್ರತಿಯೊಂದು ಪಕ್ಷದವರಿಗೂ, "ನೀವು ಅಪರಾಧಿ ಅಂಶಗಳಿಗೆ ಟಿಕೆಟುಗಳನ್ನು ನೀಡಿದರೆ, ನಾವು ನಿಮಗೆ ಮತ ನೀಡಲಾರೆವು" ಎಂದು ಹೇಳುತ್ತಾ ಅವರನ್ನು ನಿಯಂತ್ರಿಸಬಹುದು. ಆಗ ಯಾವ ಪಕ್ಷವೂ ಸಮಾಜದಲ್ಲಿನ ಭ್ರಷ್ಟ ಜನರಿಗೆ ಅಥವಾ ಅಪರಾಧಿ ಅಂಶಗಳಿಗೆ ಟಿಕೆಟುಗಳನ್ನು ನೀಡುವ ಧೈರ್ಯವನ್ನು ಮಾಡಲಾರವು.
ಅದಕ್ಕಾಗಿಯೇ ನಾನು ಹೇಳಿದುದು, ನಾವೆಲ್ಲರೂ ಒಟ್ಟಾಗಿ ಸಮಾಜದಲ್ಲಿನ ಮಾನವೀಯ ಮೌಲ್ಯಗಳಿಗಾಗಿ ಎದ್ದುನಿಲ್ಲಬೇಕು, ಒಗ್ಗಟ್ಟಾಗಿ. ವೈಯಕ್ತಿಕವಾಗಿ ನಾವೆಲ್ಲರೂ ಮೌಲ್ಯಗಳಿಗಾಗಿ ಎದ್ದುನಿಲ್ಲುತ್ತೇವೆ, ಆದರೆ ನಾವು ಒಗ್ಗಟ್ಟಾಗಿದ್ದುಕೊಂಡು ಎದ್ದುನಿಲ್ಲಬೇಕು.
ಕೊಚ್ಚಿಯಲ್ಲಿರುವ ಒಳ್ಳೆಯ ಜನರೆಲ್ಲರೂ ಎದ್ದುನಿಂತು, "ಕೊಚ್ಚಿಯು ಕಲುಷಿತವಾಗಲು ನಾವು ಬಿಡುವುದಿಲ್ಲ. ನಮ್ಮ ನಗರದಲ್ಲಿ ಶುಚಿತ್ವವನ್ನು ಕಾಪಾಡಲು ನಾವು ಎದ್ದುನಿಲ್ಲುತ್ತೇವೆ" ಎಂದು ಹೇಳಿದರೆ ಸಂಗತಿಗಳು ಬದಲಾಗಲು ಶುರುವಾಗುತ್ತವೆ.
ಇದು ಆವಶ್ಯಕವೆಂದು ನನಗನಿಸುತ್ತದೆ.

ಪ್ರಶ್ನೆ: ಸಾಮಾಜಿಕ ಹೊಣೆಗಾರಿಕೆಗಳಿಗೆ ಕೈಹಾಕುತ್ತಿರುವ ಹಲವಾರು ನಿಗಮಗಳಿವೆ, ಆದರೆ ಇತ್ತೀಚೆಗೆ ಇದನ್ನು ನಿಗಮಗಳ ಮೇಲೆ ದೂಡುವಂತಹ ಕೆಲವು ನೀತಿಗಳನ್ನು ಸರಕಾರವು ಪರಿಚಯಿಸಿದೆ. ಇದರ ಬಗ್ಗೆ ನೀವು ಏನು ಹೇಳುವಿರಿ?
ಶ್ರೀ ಶ್ರೀ ರವಿ ಶಂಕರ್: ಸಂಸ್ಥೆಗಳು ತಮ್ಮ ಲಾಭದ ೩% ವನ್ನು ಸಾಮಾಜಿಕ ಹೊಣೆಗಾರಿಕೆಯ ಮೇಲೆ ಖರ್ಚು ಮಾಡಬೇಕೆಂದು ಸರಕಾರವು ಹೇಳುವುದಾದರೆ, ಒಂದು ಒಳ್ಳೆಯ ಸಂಸ್ಥೆಯು ತನ್ನ ಲಾಭದ ೪% ವನ್ನು ಖರ್ಚು ಮಾಡಬಹುದು, ಮತ್ತು ಸರಕಾರದ ಮಾರ್ಗಸೂಚಿಗಳ ಪ್ರಕಾರ ೩% ಕ್ಕೆ ಸೀಮಿತಗೊಳಿಸದು. ಸರಕಾರವು ಅಂತಹ ಒಂದು ಮಾರ್ಗಸೂಚಿಯನ್ನು ನೀಡಿರುವುದು ಒಳ್ಳೆಯ ವಿಷಯ. ಕನಿಷ್ಠಪಕ್ಷ ೨% ದಿಂದ ೩% ವನ್ನು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಕಡೆಗೆ ನೀಡಬೇಕು.
ಸರಕಾರದ ಈ ನಿರ್ಧಾರದಲ್ಲಿ ಯಾವುದೇ ತಪ್ಪಿದೆಯೆಂದು ನನಗನಿಸುವುದಿಲ್ಲ. ಪ್ರತಿಯೊಂದು ಸಂಸ್ಥೆಯೂ ತಮ್ಮ ಲಾಭದಲ್ಲಿ ಕನಿಷ್ಠಪಕ್ಷ ಸ್ವಲ್ಪ ಶೇಕಡಾವನ್ನಾದರೂ ಇತರರ ಕ್ಷೇಮಕ್ಕಾಗಿ ಖರ್ಚು ಮಾಡಬೇಕೆಂಬ ಈ ಒಂದು ನಿರ್ಧಾರ ಬಹಳ ಒಳ್ಳೆಯದೆಂದು ನನಗನಿಸುತ್ತದೆ. ಇದನ್ನು ನಮ್ಮ ಧರ್ಮಶಾಸ್ತ್ರಗಳಲ್ಲಿ ಕೂಡಾ ಹೇಳಲಾಗಿದೆ. ಏನಾದರೂ ಲಾಭವನ್ನು ಗಳಿಸುವ ಯಾರೇ ಆದರೂ ಅದರಲ್ಲಿ ಒಂದು ಶೇಕಡಾವಾರನ್ನು ಸಮಾಜದ ಕ್ಷೇಮಕ್ಕಾಗಿ ಹಂಚಬೇಕು.

ಪ್ರಶ್ನೆ: ನೀವು ಉದ್ಯಮಶೀಲತೆಯ ಬಗ್ಗೆ ಏನಾದರೂ ಹೇಳುವಿರಾ?
ಶ್ರೀ ಶ್ರೀ ರವಿ ಶಂಕರ್: ಉದ್ಯಮವು ಸೃಜನಶೀಲತೆಯ ಒಂದು ಪ್ರಕ್ಷೇಪಣೆ(ಮುಂದೆ ಚಾಚಿದ ಭಾಗ)ಯಾಗಿದೆ. ಸೃಜನಶೀಲತೆಯ ಒಂದು ಮಗ್ಗುಲು. ಒಬ್ಬ ಉದ್ಯಮಿಯು ಅವನ ಅಥವಾ ಅವಳ ಆರಾಮ ವಲಯದಿಂದ ಹೊರಬರಬೇಕು. ಒಬ್ಬನು, "ನಾನು ನನ್ನ ಆರಾಮ ವಲಯದಲ್ಲಿರಲು ಬಯಸುತ್ತೇನೆ ಮತ್ತು ನಾನೊಬ್ಬ ಉದ್ಯಮಿಯಾಗಲು ಬಯಸುತ್ತೇನೆ" ಎಂದು ಹೇಳಲು ಸಾಧ್ಯವಿಲ್ಲ, ಅದು ಕೆಲಸ ಮಾಡದು. ಉದ್ಯಮಶೀಲತೆಯು ಯಾವಾಗಲೂ ಅಪಾಯಗಳನ್ನು ಮತ್ತು ಕಷ್ಟದ ಪರಿಸ್ಥಿತಿಯ ಮೂಲಕ ಹಾದುಹೋಗುವ ಸಾಮರ್ಥ್ಯವನ್ನೊಳಗೊಂಡಿರ ಬೇಕಾಗುತ್ತದೆ.

ಪ್ರಶ್ನೆ: ಸಂಸ್ಥೆಗಳಲ್ಲಿ ಮುಂದಾಳುತ್ವದ ಸಂಸ್ಕೃತಿಯ ಮಹತ್ವವೇನು?
ಶ್ರೀ ಶ್ರೀ ರವಿ ಶಂಕರ್: ಒಬ್ಬ ಮುಂದಾಳುವು ನುಡಿದಂತೆ ನಡೆಯಬೇಕು. ವಿವೇಕವುಳ್ಳವನೂ, ಸೂಕ್ಷ್ಮತೆಯುಳ್ಳವನೂ ಮತ್ತು ಸಹೃದಯನೂ ಆಗಿರಬೇಕು. ನಮಗೆ ಜೀವನದಲ್ಲಿ ಮೂರು ವಿಷಯಗಳು ಬೇಕು, ಅನುರಾಗ, ನಿರ್ಲಿಪ್ತತೆ ಮತ್ತು ಸಹೃದಯತೆ. ನಿಮ್ಮಲ್ಲಿ ಕೇವಲ ಅನುರಾಗವಿರಲು ಸಾಧ್ಯವಿಲ್ಲ, ಆಗ ನಿಮಗೆ ಬಹಳ ಒತ್ತಡವಾಗುತ್ತದೆ. ನಿಮ್ಮಲ್ಲಿ ನಿರ್ಲಿಪ್ತತೆಯಿರಬೇಕು, ಬಿಟ್ಟುಬಿಡುವುದು ಹೇಗೆಂಬುದು ನಿಮಗೆ ತಿಳಿದಿರಬೇಕು. ವಿಷಯಗಳು ಹೇಗಿದ್ದರೂ ನಿಮ್ಮ ಕೈಬಿಟ್ಟು ಹೋಗಿರುವಾಗ ನೀವು ಅವುಗಳನ್ನು ಹಿಡಿದಿಟ್ಟುಕೊಂಡರೆ, ನಿಮಗೆ ಹೆಚ್ಚು ಒತ್ತಡವುಂಟಾಗುವುದಷ್ಟೆ, ಮತ್ತು ಒಬ್ಬ ಒತ್ತಡಭರಿತ ವ್ಯಕ್ತಿಯು ತನಗೆ, ಸಮಾಜಕ್ಕೆ ಮತ್ತು ಎಲ್ಲರಿಗೂ ಒಂದು ಹೊರೆಯಾಗುತ್ತಾನೆ. ಒಬ್ಬ ಒತ್ತಡಭರಿತ ವ್ಯಕ್ತಿಯು ಹಾನಿಕಾರಕ ಹಾಗೂ ವಿಷಕಾರಿಯಾಗುತ್ತಾನೆ.
ಯಾವುದೇ ಸಂಸ್ಥೆಯಲ್ಲಿ, ಒತ್ತಡದಲ್ಲಿರುವವರನ್ನು ನೀವು ಗುರುತಿಸಬೇಕು. ಒತ್ತಡದಲ್ಲಿರುವವರೊಬ್ಬರು ಬೇಗನೇ ವಿಷಕಾರಿಯಾಗುವರು. ಆದುದರಿಂದ, ವ್ಯಕ್ತಿಯು ತನ್ನ ಸಂಪೂರ್ಣ ಮನೋಭಾವವನ್ನು ಬದಲಾಯಿಸುವಂತೆ ಮತ್ತು ಆ ವ್ಯಕ್ತಿಗೆ ತನ್ನ ಬಗ್ಗೆ ಉತ್ತಮ ಮನೋಭಾವ ಬರುವಂತೆ ನೋಡಿಕೊಳ್ಳಿ.
ಜನರು ಒತ್ತಡದಿಂದ ಬಿಡುಗಡೆ ಹೊಂದಿದಾಗ, ಬದಲಾವಣೆಯ ಒಂದು ಅಲೆಯು ಏಳುವುದನ್ನು ನೀವು ನೋಡುವಿರಿ. ಇದೊಂದು ಬಹಳ ಸುಲಭವಾದ ಕೆಲಸವಲ್ಲ. ಒಬ್ಬರು ತಮ್ಮ ಒತ್ತಡವನ್ನು ಕಳೆಯುಲು ಇಚ್ಛಿಸದಿದ್ದರೆ, ಅವರು ಅದನ್ನು ಕಳೆಯುವಂತೆ ಮಾಡಲು ನಿಮಗೆ ಸಾಧ್ಯವಿಲ್ಲ. ಆದುದರಿಂದ ಇದೊಂದು ಕಷ್ಟದ ಕೆಲಸ ಮತ್ತು ನೀವದನ್ನು ಮಾಡಬೇಕು.

ಪ್ರಶ್ನೆ: ಮಹಿಳೆಯರು ಸಹಜವಾಗಿ ಒಳ್ಳೆಯ ಮುಂದಾಳುಗಳೆಂದು ನೀವು ಈಗಾಗಲೇ ಹೇಳಿರುವಿರಿ, ಆದರೆ ಸಾಕಷ್ಟು ಮಹಿಳಾ ಮುಂದಾಳುಗಳು ಇಲ್ಲ. ಒಬ್ಬ ಒಳ್ಳೆಯ ಮುಂದಾಳುವಾಗಲು ಇರುವ ತಡೆಗಳು ಯಾವುವು ಎಂದು ನೀವು ನಮಗೆ ಹೇಳುವಿರೇ?
ಶ್ರೀ ಶ್ರೀ ರವಿ ಶಂಕರ್: ಭಾರತದಲ್ಲಿ ಪ್ರಪಂಚದ ಬೇರೆ ಯಾವುದೇ ಭಾಗದಲ್ಲಿರುವುದಕ್ಕಿಂತ ಹೆಚ್ಚು ಮಹಿಳಾ ಮುಂದಾಳುಗಳಿರುವರೆಂದು ನಾನು ನಿನಗೆ ಹೇಳಲು ಬಯಸುತ್ತೇನೆ. ನಿನಗದು ತಿಳಿದಿದೆಯೇ? ನಮ್ಮಲ್ಲಿ ಹಲವು ಮಹಿಳಾ ಸಂಸತ್ ಸದಸ್ಯರಿದ್ದಾರೆ, ಶಾಸನ ಸಭೆಯಲ್ಲಿ ಹಲವು ಮಹಿಳೆಯರಿದ್ದಾರೆ ಮತ್ತು ಮಹಿಳೆಯರಿಂದ ಆಳಲ್ಪಡುವ ಹಲವು ರಾಜ್ಯಗಳಿವೆ. ಇಡಿಯ ದೇಶವು ಹಲವಾರು ದಶಕಗಳ ವರೆಗೆ ಮಹಿಳೆಯರಿಂದ ಆಳಲ್ಪಟ್ಟಿತು. ಆದುದರಿಂದ ನೀವು ಒಬ್ಬರಿಂದ ಸಶಕ್ತಗೊಳ್ಳಬೇಕೆಂದು ಯಾವತ್ತೂ ಯೋಚಿಸಬೇಡಿ. ಇಲ್ಲಿ, ಭಾರತದಲ್ಲಿ, ಮಹಿಳೆಯರು ಈಗಾಗಲೇ ಸಶಕ್ತರಾಗಿರುವರು. ಅಮೇರಿಕಾವು ಅದನ್ನು ಕಲಿಯಬೇಕಾಗಿದೆ. ಮಹಿಳಾ ಸಶಕ್ತೀಕರಣದ ವಿಷಯದಲ್ಲಿ ಹೇಳುವುದಾದರೆ, ಅಮೇರಿಕಾವು ಇನ್ನೂ ಆ ಹಂತಕ್ಕೆ ಬಂದಿಲ್ಲ.

ಪ್ರಶ್ನೆ: ನನ್ನ ಕೆಲಸದ ಪರಿಸರದಲ್ಲಿ ನಾನು ವಿವಿಧ ರೀತಿಯ ಜನರನ್ನು ಭೇಟಿಯಾಗುತ್ತೇನೆ ಮತ್ತು ಅವರಲ್ಲಿ ಕೆಲವರೊಂದಿಗೆ ಮಾತನಾಡಲು ನನಗೆ ಇಷ್ಟವಿಲ್ಲದಿರಬಹುದು. ಅವರನ್ನು ಸಮೀಪಿಸುವಾಗ ನನ್ನ ಕಾರ್ಯವಿಧಾನದಲ್ಲಿ ನಾನು ವ್ಯವಹಾರಕುಶಲತೆಯಿಂದಿರುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಇದೊಂದು ಬಹಳ ಯುಕ್ತಿಯುತ ಪ್ರಶ್ನೆ. ಕೆಲವೊಮ್ಮೆ ನೀವು ಮಾತಿನಲ್ಲಿ ನೇರವಾಗಿರದಿದ್ದರೆ ಮತ್ತು ನೀವದನ್ನು ಅವರ ಮುಖಕ್ಕೆ ನೇರವಾಗಿ ಹೇಳದಿದ್ದರೆ, ನೀವವರಿಗೆ ಒಂದು ಸೂಕ್ಷ್ಮ ರೀತಿಯಲ್ಲಿ ಬೇರೆ ಯಾವುದೋ ಸೂಚನೆಗಳನ್ನು ನೀಡುತ್ತಿರುವಿರೆಂದು ಅಥವಾ ತಮ್ಮ ಮನಸ್ಸಿನಲ್ಲಿ ಏನಿದೆಯೋ ಅದನ್ನು ನೀವು ದೃಢೀಕರಿಸುತ್ತಿರುವಿರೆಂದು ಅವರು ಯೋಚಿಸುತ್ತಾರೆ. ಅದೇ ಸಮಯದಲ್ಲಿ, ನಿಮ್ಮ ಅಭಿಪ್ರಾಯಗಳನ್ನು ಅಥವಾ ಆಲೋಚನೆಗಳನ್ನು ಮುಂದಿಡಲು ಬಯಸುವಾಗ ನೀವು ನಿಷ್ಠುರವಾಗಿರಬೇಕಾಗಿಲ್ಲ. ಆದುದರಿಂದ, ಇದು ನಿಜವಾಗಿ ಸಂತುಲನವನ್ನು ಕಾಯ್ದುಕೊಳ್ಳುವುದು ಹೇಗೆ ಎಂಬುದಾಗಿದೆ. ಅಲ್ಲಿ ಯಾವುದೇ ನಿರ್ದಿಷ್ಟ ಸೂತ್ರವಿಲ್ಲ. ಪೂರ್ವಯೋಜನೆಯಿಲ್ಲದೇ ಸಮಯೋಚಿತವಾಗಿ ನೀವು ವ್ಯವಹರಿಸಬೇಕು. ವ್ಯವಹಾರಕುಶಲತೆಯಿಂದಿರುವುದು ಹೇಗೆ - ಇದನ್ನು ಈಗ ಕಲಿಸಿ, ಆಮೇಲೆ ಅನ್ವಯಿಸಲು ಸಾಧ್ಯವಿಲ್ಲ. ಅದು ಆ ಕ್ಷಣದಲ್ಲಿ ನಿಮ್ಮಿಂದ ಸ್ವಾಭಾವಿಕವಾಗಿ ಹೊರಬರಬೇಕು.

ಗುರುವಾರ, ಜನವರಿ 3, 2013

ಚಕ್ರವರ್ತಿಯಂತೆ ನಡೆಯಿರಿ


ಜನವರಿ ೦೩, ೨೦೧೩
ಬರ್ಲಿನ್, ಜರ್ಮನಿ

ಪ್ರಶ್ನೆ: ದೇವದೂತರಿಗೆ ರೆಕ್ಕೆಗಳು ಯಾಕಿರುತ್ತವೆ? ಅದರ ಸಂಕೇತವೇನು? ಕ್ರೈಸ್ತ ಸಂಪ್ರದಾಯದಲ್ಲಿ ದೇವದೂತರು ಯಾಕಿರುತ್ತಾರೆ ಎಂಬುದರ ಬಗ್ಗೆ ನೀವು ದಯವಿಟ್ಟು ಮಾತನಾಡುವಿರಾ?
ಶ್ರೀ ಶ್ರೀ ರವಿ ಶಂಕರ್: ಮಾನವನಿಗೆ ಹಾರಾಡಬೇಕೆಂಬ ಒಂದು ಸೆಳೆತವಿತ್ತು. ಅವನು ಆಕಾಶವನ್ನು ಆಳಲು ಬಯಸಿದ್ದನು. ಮಾನವನಿಗೆ ಭೂಮಿಯ ಮೇಲೆ ನಡೆಯಲು ಸಾಧ್ಯವಿತ್ತು, ಅವನು ಸಾಗರಕ್ಕೆ ಧುಮುಕಿ ನೀರಿನಲ್ಲಿ ಈಜಬಲ್ಲವನಾಗಿದ್ದನು. ಆದರೆ ಅವನಿಗೆ ಮಾಡಲು ಸಾಧ್ಯವಾಗದೇ ಇದ್ದುದೆಂದರೆ, ಹಾರಾಡುವುದು. ಆದುದರಿಂದ ತನಗಿಂತ ಒಂದು ಹೆಜ್ಜೆ ಮೇಲಿನವರು ಎಂದು ಅವನು ಪರಿಗಣಿಸಿದ ದೇವದೂತರಿಗೆ ಅವನು ರೆಕ್ಕೆಗಳನ್ನು ಕೊಟ್ಟನು. ಅವನಂದುಕೊಂಡನು, ದೇವದೂತರಿಗೆ ರೆಕ್ಕೆಗಳಿವೆ ಯಾಕೆಂದರೆ ಅವರು ಮಾನವನಿಗಿಂತ ಹೆಚ್ಚು ಬಲಶಾಲಿಗಳು ಮತ್ತು ಅವರು ಹಾರಾಡುತ್ತಾ ಅವರಿಗೆ ಬೇಕಾದಲ್ಲಿಗೆ ಹೋಗಬಲ್ಲವರು.
ಆದರೆ ಇವತ್ತು ನಮ್ಮಲ್ಲಿರುವ ರೀತಿಯ ವಿಮಾನಗಳನ್ನು ನೋಡಿದರೆ, ದೇವದೂತರು ಬಹಳಷ್ಟು ನಿಧಾನವಾಗಿರುವರು. ನಾವು ಅವರಿಗಿಂತ ಬಹಳಷ್ಟು ವೇಗವಾಗಿ ತಲುಪಬಲ್ಲೆವು. ದೇವದೂತರನ್ನು ನಾವು  ಹಿಂದಿಕ್ಕುವೆವು. ರೆಕ್ಕೆಗಳಿರುವ ಯಾರೇ ಆದರೂ, ಎಷ್ಟೇ ಬಲಶಾಲಿಗಳಾದರೂ ಅವರು ಒಂದು ವಿಮಾನಕ್ಕಿಂತ ಅಥವಾ ಒಂದು ಹೆಲಿಕೋಪ್ಟರಿಗಿಂತ ವೇಗವಾಗಿ ಹಾರಾಡಲು ಸಾಧ್ಯವಿಲ್ಲ.
ಆದುದರಿಂದ, ಅವರು ನಮಗಿಂತ ಹೆಚ್ಚು ಬಲಶಾಲಿಗಳೆಂಬುದು ಕೇವಲ ಒಂದು ಪರಿಕಲ್ಪನೆಯಷ್ಟೆ, ಯಾಕೆಂದರೆ ಆಗ ಮಾತ್ರ ಅವರು ನಮಗೆ ಸಹಾಯ ಮಾಡಲು ಸಾಧ್ಯ. ದೇವದೂತರೆಂದರೆ ಯಾರು ನಮಗೆ ಸಹಾಯ ಮಾಡಬಲ್ಲರೋ ಅವರು, ಯಾರು ಹೆಚ್ಚು ಬಲಶಾಲಿಗಳೋ ಅವರು, ನಮಗಿಂತ ಹೆಚ್ಚು ಸಜ್ಜುಗೊಂಡವರು.
ಒಬ್ಬ ದೇವದೂತನು ರೆಕ್ಕೆಗಳೊಂದಿಗೆ ಬಂದು ನಿಮ್ಮನ್ನು ಅವನೊಂದಿಗೆ ಕರೆದುಕೊಂಡು ಹೋಗಿ ನಿಮಗೆ ಹೂಗಳು ಮತ್ತು ಅವನ್ನೆಲ್ಲಾ ಕೊಡುವನೆಂದು ಕಲ್ಪಿಸಿಕೊಳ್ಳಬೇಡಿ.
ಹಾಗೆಯೇ, ಹಲವಾರು ಸಲ ನಾವು ನೋಡುತ್ತೇವೆ, ದೇವದೂತರನ್ನು ಮಕ್ಕಳಂತೆ ಚಿತ್ರಿಸಲಾಗುತ್ತದೆ. ಕ್ರೈಸ್ತ ಸಂಪ್ರದಾಯದಲ್ಲಿ ಅವರನ್ನು ಮಕ್ಕಳಂತೆ ಯಾಕೆ ಚಿತ್ರಿಸಲಾಗುತ್ತದೆ ಎಂಬುದು ನಿಮಗೆ ಗೊತ್ತಾ? ಇದು ಮುಗ್ಧತೆಯನ್ನು ತೋರಿಸಲು. ನೀವು ಮೇಲೆ ಮೇಲೆ ಹೋದಂತೆ, ನೀವು ಒಳಗೆ ಪರಿಶುದ್ಧವಾಗಿ ಮತ್ತು ಮುಗ್ಧವಾಗಿರಬೇಕು, ಕುತಂತ್ರಿಯಾಗಿ ಮತ್ತು ವಂಚಕರಾಗಿಯಲ್ಲ.
ಕುತಂತ್ರಿಯಾಗಿ ಮತ್ತು ವಂಚಕರಾಗಿರುವುದು ಯಾರು? ಯಾರಿಗೆ ಒಬ್ಬ ಚಕ್ರವರ್ತಿಯಂತೆ ನಡೆಯುವ ಸಾಮರ್ಥ್ಯವಿಲ್ಲವೋ ಅವರು. ಕಡಿಮೆ ಬಲವಿರುವ ಒಬ್ಬರು ವಿಷಯವನ್ನು ತಿರುಚಬೇಕಾಗುತ್ತದೆ ಹಾಗೂ ಕುತಂತ್ರಿಯಾಗಿ ಮತ್ತು ವಂಚಕರಾಗಿ ಇರಬೇಕಾಗುತ್ತದೆ.
ಬಹಳ ಬಲಶಾಲಿಗಳಾಗಿರುವವರೊಬ್ಬರು ಯಾಕೆ ಕುತಂತ್ರಿ ಮತ್ತು ವಂಚಕರಾಗಿರುತ್ತಾರೆ? ನೇರವಾದ ರೀತಿಯಲ್ಲಿ ಕೆಲಸಗಳನ್ನು ಮಾಡುವ ಸಾಮರ್ಥ್ಯ ಮತ್ತು ಬಲ ನಿಮ್ಮಲ್ಲಿದ್ದರೆ ನೀವು ಯಾವುದನ್ನೂ ರಹಸ್ಯವಾಗಿ ಮಾಡಲಾರಿರಿ. ನೀವು ಹಾಗೆ ಮಾಡಬೇಕಾಗಿ ಬರುವುದಿಲ್ಲ.
ವಂಚನೆಯ ಕೆಲಸಗಳನ್ನು ಮಾಡುವ ಜನರೆಲ್ಲರಿಗೂ ಆತ್ಮ ವಿಶ್ವಾಸವಿರುವುದಿಲ್ಲ. ತಮ್ಮ ಇಚ್ಛೆಯ ಪ್ರಕಾರ ಕೆಲಸವನ್ನು ಸಾಧಿಸಬಲ್ಲೆವೆಂದು ಅವರು ನಂಬುವುದಿಲ್ಲ; ಅಲ್ಲಿಗೆ ತಲುಪಲು ತಾವು ವಿಷಯವನ್ನು ಸ್ವಲ್ಪ ತಿರುಚಬೇಕೆಂದು ಅವರು ಯೋಚಿಸುತ್ತಾರೆ.
ಹೀಗೆ, ದೇವದೂತರನ್ನು ರೆಕ್ಕೆಗಳಿರುವ ಮಕ್ಕಳಂತೆ ಚಿತ್ರಿಸಲಾಗುತ್ತದೆ ಯಾಕೆಂದರೆ ಅವರು ಮುಗ್ಧರು. ಎರಡು ಅಥವಾ ಮೂರು ವರ್ಷ ವಯಸ್ಸಿನ ಒಂದು ಮಗುವಿನಂತೆ ಅವರಿಗೆ ಒಂದು ದಪ್ಪ ಶರೀರವಿರುವುದಾಗಿ ಚಿತ್ರಿಸಲಾಗುತ್ತದೆ.
ನೀವು ಮೈಖೆಲ್ ಏಂಜಲೋವಿನ ಎಲ್ಲಾ ಚಿತ್ರಗಳನ್ನು ನೋಡಿದರೆ, ಹೆಚ್ಚಿನ ದೇವದೂತರು ಮಕ್ಕಳೆಂಬುದನ್ನು ನೀವು ಕಾಣುವಿರಿ. ಅದು ಕೇವಲ ಮುಗ್ಧತೆ ಮತ್ತು ಪರಿಶುದ್ಧತೆಯನ್ನು, ಹಾಗೂ ನಂತರ ಸಾಮರ್ಥ್ಯವನ್ನು - ಸಾಮಾನ್ಯ ಮನುಷ್ಯರಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ಪ್ರತಿನಿಧೀಕರಿಸುತ್ತದೆ.
ನಿಮ್ಮೊಳಗೆ ಒಂದು ದೇವದೂತ ಇದ್ದಾನೆಯೆಂದು ನಾನು ನಿಮಗೆ ಹೇಳುತ್ತೇನೆ.
ಕ್ರೈಸ್ತ ಸಂಪ್ರದಾಯದಲ್ಲಿ, ಪ್ರತಿಯೊಬ್ಬರಿಗೂ ಒಂದು ರಕ್ಷಿಸುವ ದೇವದೂತ ಇರುತ್ತಾನೆಯೆಂದು ಹೇಳಲಾಗುತ್ತದೆ. ಅವರು ನಿಮ್ಮನ್ನು ಮಾತ್ರ ರಕ್ಷಿಸುವರೆಂದಲ್ಲ, ನೀವು ಆ ರಕ್ಷಕ ದೇವದೂತರ ಭಾಗವಾಗಿರುವಿರಿ; ನೀವು ಅದೇ ಆಗಿರುವಿರಿ! ನೀವೊಬ್ಬ ದೇವದೂತರಾಗಿರುವಿರೆಂದು ನೀವು ಕೇವಲ ತಿಳಿದುಕೊಳ್ಳಬೇಕಷ್ಟೆ. ನೀವೇನು ಮಾಡಲು ಬಯಸುವಿರೋ ಅದನ್ನು ಮಾಡುವ ಶಕ್ತಿಯು ನಿಮ್ಮಲ್ಲಿದೆ. ಇದನ್ನು ತಿಳಿಯಿರಿ ಮತ್ತು ವಿಶ್ರಾಮ ಮಾಡಿ.

ಪ್ರಶ್ನೆ: ಸುಧಾರಣೆಗೆ ಪ್ರಯತ್ನಿಸುವುದು ಮತ್ತು ನಾನೇನಾಗಿರುವೆನೋ, ನಾನೇನು ಮಾಡುತ್ತಿರುವೆನೋ ಅವುಗಳ ಬಗ್ಗೆ ತೃಪ್ತಿಯಿಂದಿರುವುದು, ಇವುಗಳ ನಡುವೆ ನಾನು ಸರಿಯಾದ ಸಂತುಲನವನ್ನು ಕಂಡುಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಸೈಕಲ್ ತುಳಿಯುವುದು ಹೇಗೆಂದು ನಿನಗೆ ಗೊತ್ತಾ? ಹಾಗೆಯೇ!
ಸಂತುಲನವಿರಬೇಕೆಂದು ನೀವು ಬಯಸುವಾಗ, ನಿಮ್ಮಲ್ಲಿ ಖಂಡಿತವಾಗಿ ಅದು ಇರುತ್ತದೆ. ಕೇವಲ, "ನಾನು ನನ್ನ ಜೀವನವನ್ನು ಸಂತುಲನದಲ್ಲಿಟ್ಟುಕೊಳ್ಳಲು ಬಯಸುತ್ತೇನೆ", ಈ ಯೋಚನೆಯಿದ್ದರೆ ಸಾಕು, ನೀವು ಅದಾಗಲೇ ಆ ದಿಕ್ಕಿನಲ್ಲಿ ಚಲಿಸುತ್ತಿರುತ್ತೀರಿ.
ಈಗ, "ನಾನದನ್ನು ಮಾಡುವುದು ಹೇಗೆ?" ಎಂಬ ಪ್ರಶ್ನೆ ಎದ್ದಾಗ, ಅದನ್ನು ನೀವು ಮಾಡಬಲ್ಲಿರಿ ಎಂದು ತಿಳಿಯಿರಿ. ನಿಮ್ಮನ್ನೇ ಕೇಳಿಕೊಳ್ಳಿ, ನಿಮ್ಮ ಪ್ರಜ್ಞೆಯು ನಿಮಗೆ ಹೇಳುವುದು. "ನಾನು ಸಂತುಲನದಲ್ಲಿಲ್ಲ, ನಾನು ಇದನ್ನು", ನಿಮ್ಮ ಪ್ರಜ್ಞೆಯು ಇದನ್ನು ಹೇಳುತ್ತದೆ. ಆಗ ನೀವು ನಿಮ್ಮ ಪ್ರಜ್ಞೆ ಹೇಳುವುದನ್ನು ಕೇಳಿಸಿಕೊಳ್ಳಿ.
ನೀವು ನಿಮ್ಮ ಕೆಲಸದ ಕಡೆಗೆ ಅತಿಯಾಗಿ ಗಮನ ನೀಡುತ್ತಿದ್ದರೆ, ಆಗ ನಿಮ್ಮ ಪ್ರಜ್ಞೆಯು ನಿಮ್ಮನ್ನು ಚುಚ್ಚುತ್ತದೆ, "ನೀನು ನಿನ್ನ ಕುಟುಂಬವನ್ನು, ನಿನ್ನ ಪತ್ನಿಯನ್ನು, ನಿನ್ನ ಮಕ್ಕಳನ್ನು, ನಿನ್ನ ಪತಿಯನ್ನು ಮರೆಯುತ್ತಿರುವೆ." ಆಗ ನೀವು ಹೇಳುವಿರಿ, "ಸರಿ ನಾನು ಅವರ ಕಡೆಗೆ ಗಮನ ನೀಡುತ್ತೇನೆ."
ನೀವು ಕುಟುಂಬದಲ್ಲಿಯೇ ಅತಿಯಾಗಿ ಮುಳುಗಿದರೆ ಮತ್ತು ಇತರ ಎಲ್ಲಾ ಕೆಲಸಗಳ ಬಗ್ಗೆ ಮರೆತರೆ, ಆಗ ನಿಮ್ಮ ಪ್ರಜ್ಞೆಯು ಚುಚ್ಚುತ್ತದೆ, "ಓ ದೇವರೇ, ನಾನು ಯಾವುದರಲ್ಲಿ ಬಿದ್ದಿದ್ದೇನೆ, ನಾನು ಯಾವುದರೊಳಗೆ ಬಿದ್ದೆ, ದಿನ ರಾತ್ರಿ ನಾನು ಕೇವಲ ಕೌಟುಂಬಿಕ ವ್ಯವಹಾರಗಳಲ್ಲಿ ಮುಳುಗಿದ್ದೇನೆ, ನಾನು ಪ್ರಪಂಚಕ್ಕೆ ಪ್ರಯೋಜನಕಾರಿಯಾಗಿಲ್ಲ, ನಾನೇನಾದರೂ ಮಾಡಬೇಕು, ನಾನು ನನ್ನ ಉದ್ದೇಶವನ್ನು ಹಿಂಬಾಲಿಸಬೇಕು, ನಾನು ನನ್ನ ಕೆಲಸಕ್ಕೆ ನ್ಯಾಯವನ್ನು ಒದಗಿಸಬೇಕು." ಮನಸ್ಸು ಚುಚ್ಚುತ್ತದೆ. ನಂತರ ನೀವು ಅದನ್ನು ಮಾಡುವಿರಿ.
ಜೀವನದಲ್ಲಿ ಸಂತುಲವನ್ನಿರಿಸುವ ಈ ಬಯಕೆ, ಆ ಯೋಚನೆಯಷ್ಟೇ ಸಾಕು. ಅದು ವಿದ್ಯುತ್ ವ್ಯವಸ್ಥೆಯಲ್ಲಿನ ಫ್ಯೂಸಿನಂತೆ. ವಿದ್ಯುತ್ ಪ್ರವಾಹದಲ್ಲಿ ಅತಿಯಾದ ಏರಿಕೆಯುಂಟಾದಾಗಲೆಲ್ಲಾ ಫ್ಯೂಸ್ ತುಂಡಾಗುತ್ತದೆ ಮತ್ತು ಇತರ ಎಲ್ಲವನ್ನೂ ರಕ್ಷಿಸುತ್ತದೆ. ಅಂತೆಯೇ, ವಿದ್ಯುತ್ ವ್ಯವಸ್ಥೆಯಲ್ಲಿನ ಫ್ಯೂಸಿನಂತೆ ಸ್ವಲ್ಪ ಪ್ರಮಾಣದಲ್ಲಿ ತಪ್ಪಿತಸ್ಥ ಭಾವನೆ ಇರಬೇಕು. ನೀವದನ್ನು ಸರಿಯೆಂದು ಸಾಧಿಸಬೇಡಿ, ಆದರೆ ಅಷ್ಟು ಕಡಿಮೆ ಪ್ರಮಾಣದಲ್ಲಿ ಇದ್ದರೆ ಪರವಾಗಿಲ್ಲ; ಒಂದು ವಿದ್ಯುತ್ ವ್ಯವಸ್ಥೆಯಲ್ಲಿನ ಫ್ಯೂಸಿನಂತೆ. ವಿದ್ಯುತ್ ವ್ಯವಸ್ಥೆಯ ಬಗ್ಗೆ ನಿಮಗೆ ತಿಳಿದಿದೆ ಮತ್ತು ವಿದ್ಯುತ್ ಹಲಗೆಯಲ್ಲಿ ಫ್ಯೂಸ್ ಎಂದು ಕರೆಯಲ್ಪಡುವ ಒಂದು ಚಿಕ್ಕ ಪೆಟ್ಟಿಗೆಯಿರುತ್ತದೆಯೆಂಬುದು ನಿಮಗೆ ತಿಳಿದಿದೆ. ವಿದ್ಯುತ್ತಿನ ಪ್ರವಾಹದಲ್ಲಿ ಅಸಮತೋಲನವುಂಟಾದಾಗಲೆಲ್ಲಾ, ಫ್ಯೂಸ್ ಸಿಡಿಯುತ್ತದೆ ಮತ್ತು ಉಳಿದ ವಿದ್ಯುತ್ ವ್ಯವಸ್ಥೆಯನ್ನು ರಕ್ಷಿಸುತ್ತದೆ. ಅದರಂತೆಯೇ ಜೀವನದಲ್ಲಿ, ಅಲ್ಪ ಪ್ರಮಾಣದ ತಪ್ಪಿತಸ್ಥ ಭಾವನೆ ಇದ್ದರೆ ಪರವಾಗಿಲ್ಲ ಆದರೆ ಅತಿಯಾಗಿಯಲ್ಲ. ಆಹಾರದಲ್ಲಿರುವ ಉಪ್ಪಿನಂತೆ. ಉಪ್ಪು ಅಧಿಕವಾಗಿದ್ದರೆ ನಿಮಗದನ್ನು ತಿನ್ನಲು ಸಾಧ್ಯವೇ? ಇಲ್ಲ. ತಿಳಿಯಿತೇ? ಆದುದರಿಂದ ಸಂತುಲನದಲ್ಲಿರುವ ಇಚ್ಛೆಯಿರುವುದು ಒಳ್ಳೆಯದು.

ಪ್ರಶ್ನೆ: ನಾನು ಸೂಕ್ಷ್ಮವಾದವನು ಮತ್ತು ಸುಲಭವಾಗಿ ನೋಯುವವನು. ಸೂಕ್ಷ್ಮವಾಗಿರುವುದರಲ್ಲಿನ ಒಳಿತೇನು?
ಶ್ರೀ ಶ್ರೀ ರವಿ ಶಂಕರ್: ಜೀವನವು ಸೂಕ್ಷ್ಮತೆ ಮತ್ತು ವಿವೇಚನೆಗಳ ಒಂದು ಸಂಯೋಗವಾಗಿದೆ. ವಿವೇಚನೆಯು ಬುದ್ಧಿಗೆ ಸಂಬಂಧಿಸಿದುದು ಮತ್ತು ಸೂಕ್ಷ್ಮತೆಯು ಹೃದಯಕ್ಕೆ ಸಂಬಂಧಿಸಿದುದು.
ಸಾಧಾರಣವಾಗಿ ಬಹಳ ಸೂಕ್ಷ್ಮವಾಗಿರುವ ಜನರು ಕಾರಣವನ್ನು, ತರ್ಕವನ್ನು ಮರೆಯುತ್ತಾರೆ. ಅವರ ವಿವೇಚನೆಯು ಕಡಿಮೆಯಾಗುತ್ತದೆ, ಮತ್ತು ಬಹಳಷ್ಟು ವಿವೇಕವುಳ್ಳವರು, ಯಾವತ್ತೂ ತರ್ಕದ ಬಗ್ಗೆ ಮತ್ತು ವಿವೇಚನೆಯ ಬಗ್ಗೆ ಯೋಚಿಸುವವರಲ್ಲಿ ಸೂಕ್ಷ್ಮತೆಯ ಕೊರತೆಯಿರುವಂತೆ ತೋರುತ್ತದೆ. ಜೀವನವು ಇವೆರಡರ ಒಂದು ಸುಂದರವಾದ ಸಮತೋಲನವಾಗಿರಬೇಕು. ನೀವು ಸೂಕ್ಷ್ಮವಾಗಿ, ಅದೇ ಸಮಯದಲ್ಲಿ ಬಲವಾಗಿ ಇರಬೇಕು. ಸಾಧಾರಣವಾಗಿ ಸೂಕ್ಷ್ಮತೆಯು ಭಾವನಾತ್ಮಕ ಅಸ್ಥಿರತೆಗೆ ಸರಿಸಮಾನವಾದುದು. ಇದು ಅದಕ್ಕೆ ದಾರಿಮಾಡಬಾರದು.
ನಿಮ್ಮ ಸೂಕ್ಷ್ಮತೆಯು ನಿಮ್ಮನ್ನು ಭಾವನಾತ್ಮಕ ಅಸ್ಥಿರತೆಯ ಕಡೆಗೆ ಒಯ್ಯಬಾರದು. ನೀವು ಪ್ರಬಲರಾಗಿ ಮತ್ತು ಸೂಕ್ಷ್ಮವಾಗಿದ್ದರೆ, ಆಗ ನೀವು ನಿಮ್ಮ ಜೀವನವನ್ನು ಸಾಧಿಸಿದ್ದೀರಿ. ತಿಳಿಯಿತೇ?
ನೀವು ವಿವೇಕಿಗಳಾಗಿಯೂ ಸೂಕ್ಷ್ಮವಾಗಿಯೂ ಇರಬೇಕು.

ಪ್ರಶ್ನೆ: ಒಂದು ಜಿ.ಪಿ.ಎಸ್. ನಂತೆ ನೀವು ನಮಗೆ ನಮ್ಮ ಗುರಿ ಹಾಗೂ ವಿಧಿಯ ಕಡೆಗೆ ಮಾರ್ಗದರ್ಶನವನ್ನು ನೀಡುತ್ತಿರುವಿರಿ, ಆದರೆ ನಮ್ಮ ಗುರಿ ಮತ್ತು ವಿಧಿ ಯಾವುದು?
ಶ್ರೀ ಶ್ರೀ ರವಿ ಶಂಕರ್: ನಿಮ್ಮ ಗುರಿ ಯಾವುದಲ್ಲವೆಂಬ ಒಂದು ಪಟ್ಟಿಯನ್ನು ನೀವು ಮಾಡಬೇಕು.
ನಿಮ್ಮ ಗುರಿ ಯಾವುದೆಂಬುದನ್ನು ಮತ್ತು ನೀವು ಮಾಡಲು ಬಯಸುವುದೇನೆಂಬುದನ್ನು ನೀವೇ ಕಂಡುಹಿಡಿಯಬೇಕೆಂದು ನಾನು ಬಯಸುತ್ತೇನೆ.
ನೀವು ತಿಳಿಯಬೇಕಾದ ಒಂದು ಸಂಗತಿಯೇನೆಂದರೆ, ನೀವು ಬಹಳ ಅದೃಷ್ಟಶಾಲಿಗಳು ಎಂಬುದು. ನೀವು ಪ್ರಪಂಚವನ್ನು ಮುನ್ನಡೆಸುವ ಒಂದು ಕಾಲದಲ್ಲಿರುವಿರಿ. ಒಂದು ಸ್ವಾರ್ಥಪರ, ಕಠಿಣವಾದ ಸಮಾಜದಿಂದ ಒಂದು ಸುಂದರವಾದ ಪ್ರಪಂಚದ ಕಡೆಗಿನ ದೊಡ್ಡ ಪರಿವರ್ತನೆಯೆಂದು ಚರಿತ್ರೆಯಲ್ಲಿ ಬರೆಯಲ್ಪಡುವ ಕಾಲದಲ್ಲಿ ನೀವಿರುವಿರಿ.

ಪ್ರಶ್ನೆ: ನಾವು ಇಲ್ಲಿ ಅನಾದಿ ಕಾಲದಿಂದಲೂ ಇರುವ ಹಳೆಯ ಆತ್ಮಗಳಾಗಿದ್ದರೆ, ಯಾವತ್ತಾದರೂ ಹೊಸ ಅನುಭವಗಳಾಗಲು ನಿಜವಾಗಿಯೂ ಸಾಧ್ಯವಿದೆಯೇ?
ಶ್ರೀ ಶ್ರೀ ರವಿ ಶಂಕರ್: ಹೌದು, ಜೀವನವು ಪುರಾತನವಾದುದು ಹಾಗಿದ್ದರೂ ಹೊಸದು.
ಸೂರ್ಯ ಬಹಳ ಹಳೆಯದು. ಅದು ೧೯ ಬಿಲಿಯನ್ ವರ್ಷಗಳಷ್ಟು, ಅಥವಾ ಅದಕ್ಕಿಂತಲೂ ಹೆಚ್ಚು ಹಳೆಯದು. ಭೂಮಿಯು ೧೯ ಬಿಲಿಯನ್ ವರ್ಷಗಳಷ್ಟು ಹಳೆಯದು; ಸೂರ್ಯ ಅದಕ್ಕಿಂತಲೂ ಹೆಚ್ಚು ಹಳೆಯದಿರಬೇಕು, ಕೆಲವು ನೂರಾರು ಬಿಲಿಯನ್ ವರ್ಷಗಳಷ್ಟು ಹಳೆಯದು. ಆದರೆ ಇವತ್ತಿಗೂ ಕೂಡಾ, ಅದರ ಕಿರಣಗಳು ತಾಜಾ ಮತ್ತು ಹೊಸದಾಗಿವೆ, ಅಲ್ಲವೇ?!
ಆದುದರಿಂದ ಜೀವನವು ಪ್ರಾಚೀನತೆ ಮತ್ತು ಆಧುನೀಕತೆಗಳ; ಹಳತು ಮತ್ತು ಹೊಸತರ ಸಂಯೋಗವಾಗಿದೆ.
ಲಕ್ಷಾಂತರ ವರ್ಷಗಳಿಂದ ಹರಿಯುತ್ತಿರುವುದು ಅದೇ ನದಿಯಾಗಿದೆ, ಆದರೆ ನೀರು ಹೊಸತು ಮತ್ತು ತಾಜಾವಾಗಿದೆ, ಅಲ್ಲವೇ?

ಪ್ರಶ್ನೆ: ತಾವು ಆಹಾರವಿಲ್ಲದೆ ಬದುಕುವುದಾಗಿ ಕೆಲವು ಜನರು ಹೇಳುತ್ತಾರೆ ಮತ್ತು ಇದರ ಬಗ್ಗೆ ಒಂದು ಸಿನೆಮಾವಿದೆ. ಇದು ನಿಜವೇ ಮತ್ತು ನಿಮ್ಮ ಅನಿಸಿಕೆಯೇನು?
ಶ್ರೀ ಶ್ರೀ ರವಿ ಶಂಕರ್: ಆಹಾರಕ್ಕಾಗಿ ತಾನು ಕೇವಲ ಸೂರ್ಯಪ್ರಕಾಶವನ್ನು ನೋಡುವುದಾಗಿ ಹೇಳಿದ ಒಬ್ಬ ಸಜ್ಜನ ನನಗೆ ಗೊತ್ತು. ಅವನು ತಿನ್ನದೇ ಇರುವುದನ್ನು ಕರಗತ ಮಾಡಿಕೊಂಡಿದ್ದಾನೆ, ಆದರೆ ಕೆಲವೊಮ್ಮೆ ಅವನು ಒಂದು ಲೋಟ ಚಹಾದಲ್ಲಿ ಬಹಳಷ್ಟು ಸಕ್ಕರೆಯನ್ನು ಹಾಕಿ ಕುಡಿಯುತ್ತಾನೆ.
ನೋಡಿ, ಇದು ನಿಮ್ಮ ಶರೀರವನ್ನು ತರಬೇತುಗೊಳಿಸುವುದಾಗಿದೆ. ಇದು, ರಷ್ಯಾದಲ್ಲಿ ನಿಮಗೆ ಬ್ಯಾಲೆಯಲ್ಲಿ ಯಾವ ರೀತಿ ತರಬೇತಿ ನೀಡುತ್ತಾರೋ ಹಾಗೆ. ಅವರು ತಮ್ಮ ಇಡೀ ಬೆನ್ನುಹುರಿಯನ್ನು ಮತ್ತು ಇಡೀ ಶರೀರವನ್ನು ಯಾವ ರೀತಿ ಬಗ್ಗಿಸುವರೆಂದರೆ, ಅದು ರಬ್ಬರಿನಿಂದ ಮಾಡಲ್ಪಟ್ಟಿದೆಯೋ ಎಂಬಂತೆ. ರಷ್ಯನ್ ಬ್ಯಾಲೆಯಲ್ಲಿ ತಮ್ಮನ್ನು ತರಬೇತುಗೊಳಿಸಿಕೊಳ್ಳಲು ಅವರಿಗೆ ಬಹಳಷ್ಟು ದಿನಗಳು ಹಿಡಿದುವು.
ಅದೇ ರೀತಿಯಲ್ಲಿ, ಆಹಾರವಿಲ್ಲದೇ ಬದುಕಲು ನೀವು ನಿಮ್ಮ ಶರೀರವನ್ನು ತರಬೇತುಗೊಳಿಸಲು ಬಯಸಿದರೆ, ನೀವು ಹಾಗೆ ಮಾಡಬಹುದು. ಆದರೆ ನೀವದನ್ನು, ಅದನ್ನು ಮಾಡಿದ ಒಬ್ಬರ ಮಾರ್ಗದರ್ಶನದಲ್ಲಿ ಮಾಡಬೇಕು, ಮತ್ತು ಕೇವಲ ಪುಸ್ತಕಗಳನ್ನು ಓದುವುದರ ಮೂಲಕವಲ್ಲ. ಹಾಗೆ ಮಾಡಬೇಡಿ. ಅದರಲ್ಲಿ ನುರಿತವರೊಬ್ಬರು ನಿಮಗೆ ತರಬೇತಿ ನೀಡಬಲ್ಲರು, ಅದು ಬಹಳ ಕ್ರಮೇಣವಾಗಿ ನಡೆಯಬೇಕು.
ಆದರೆ ನೀನದನ್ನು ಯಾಕೆ ಮಾಡಲು ಬಯಸುವೆ, ಅದರಲ್ಲೇನಿದೆ. ಕಡಿಮೆ ತಿನ್ನು, ಅತಿಯಾಗಿ ತಿನ್ನಬೇಡ. ಹೌದು, ಕೇವಲ ಸೂರ್ಯನನ್ನು ದಿಟ್ಟಿಸುವುದರಿಂದ ತಮ್ಮ ಶಕ್ತಿಯನ್ನು ಪಡೆದುಕೊಳ್ಳುವ ಜನರಿದ್ದಾರೆ.
ಬೆಳಗಿನಲ್ಲಿ ನೀವು ದಿಟ್ಟಿಸುವಿರಿ ಯಾಕೆಂದರೆ ಎಲ್ಲವೂ ಚೈತನ್ಯವಾಗಿದೆ. ನಮ್ಮ ಕಣ್ಣುಗಳು ಬೆಳಕಿಗೆ ಸಂವೇದಿಸುತ್ತವೆ. ಅದು ಸೋಲಾರ್ ಸೆಲ್ ಗಳಂತೆ, ನಮ್ಮ ಕಣ್ಣುಗಳಲ್ಲಿ ಸೋಲಾರ್ ಸೆಲ್ ಗಳಲ್ಲಿರುವ ಅದೇ ಗುಣವಿದೆ. ಅವುಗಳು ಶಕ್ತಿಯನ್ನು ಹೀರಿಕೊಳ್ಳಬಲ್ಲವು ಮತ್ತು ಅದನ್ನು ಶರೀರಕ್ಕೆ ಸರಬರಾಜು ಮಾಡಬಲ್ಲವು. ಆದರೆ ಅದಕ್ಕೆ ಸರಿಯಾದ ತರಬೇತಿಯ ಅಗತ್ಯವಿದೆ. ಪ್ರಕೃತಿಯ ಇಚ್ಛೆ ಆ ರೀತಿಯಿರುತ್ತಿದ್ದರೆ, ಅದು ನಿಮಗೆ ಒಂದು ಬಾಯಿಯನ್ನು ಕೊಡುತ್ತಲೇ ಇರಲಿಲ್ಲ. ಬಾಯಿ ಮತ್ತು ಎಲ್ಲಾ ಜೀರ್ಣಕಾರಿ ಕಿಣ್ವಗಳು, ಪಿತ್ತಕೋಶ ಹಾಗೂ ಇವುಗಳೆಲ್ಲಾ ಕೆಲಸ ಮಾಡಬೇಕು, ಆದುದರಿಂದ ಅವುಗಳನ್ನು ಕೆಲಸ ಮಾಡಲು ಕೂಡಾ ಬಿಡಿ. ಆ ವಿಪರೀತಗಳಿಗೆ ಹೋಗಬೇಡಿ.

ಪ್ರಶ್ನೆ: ಮುಜುಗರವೆಂದರೇನು?
ಶ್ರೀ ಶ್ರೀ ರವಿ ಶಂಕರ್: ಮುಜುಗರವೆಂದರೇನೆಂದು ನಾನು ನಿನಗೆ ಹೇಳಬೇಕೇ? ನನಗೆ ಆಲಿಂಗಿಸಿಕೊಳ್ಳುವಿಕೆ (ಎಂಬ್ರೇಸ್ಮೆಂಟ್) ಬಗ್ಗೆ ಗೊತ್ತು, ಮತ್ತು ಮುಜುಗರ (ಎಂಬೆರಾಸ್ಮೆಂಟ್)ದ ಬಗ್ಗೆ ಅಲ್ಲ. ನಿನಗೆ ಮುಜುಗರವನ್ನು ಆಲಿಂಗಿಸಿಕೊಳ್ಳಲು ಸಾಧ್ಯವಾದರೆ, ಆಗ ಯಾವುದಕ್ಕೂ ನಿನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ.
ಜನರು ತಪ್ಪಿಸಿಕೊಳ್ಳಲು ಬಯಸುವ ಒಂದು ಸಂಗತಿಯೆಂದರೆ ಮುಜುಗರ.
ಮುಜುಗರವೆಂಬುದು ಟೀಕೆಯ ಒಂದು ಸೌಮ್ಯ ರೂಪವಾಗಿದೆ. ಅಹಿತಕರವನ್ನು ಅನುಭವಿಸುವುದರ ಒಂದು ಸೌಮ್ಯ ರೂಪವಾಗಿದೆ. ಆದುದರಿಂದ ಕೆಲವೊಮ್ಮೆ ನಾವು ಹಿತಕರ ವಲಯದಿಂದ ಹೊರಬರಬೇಕಾಗುತ್ತದೆ ಮತ್ತು ಆ ಸ್ವಲ್ಪ ಅಹಿತವನ್ನು ಅನುಭವಿಸಬೇಕಾಗುತ್ತದೆ. ಆಗ ನಮ್ಮಲ್ಲಿ ಸಾಮರ್ಥ್ಯಗಳು ಉದಯಿಸುತ್ತವೆ.

ಮಕ್ಕಳನ್ನು ಬೆಳೆಸುವ ಕಲೆ


೩ ಜನವರಿ ೨೦೧೩
ಬರ್ಲಿನ್, ಜರ್ಮನಿ

ಪ್ರಶ್ನೆ: ಕೆಲವೊಮ್ಮೆ ಕಷ್ಟಕರವಾದಂತಹ ಈ ಪ್ರಪಂಚದಲ್ಲಿ ನಮ್ಮ ಮಕ್ಕಳು ಸಂತೋಷವಾಗಿ ಬೆಳೆಯುವುದು ಅಪೂರ್ವ ಸಂಗತಿ. ಧ್ಯಾನ ಮಾಡಲು ಅವರು ಇನ್ನೂ ಬಹಳ ಚಿಕ್ಕವರಾಗಿರುವಾಗ, ಬಹಳಷ್ಟು ಪ್ರೀತಿಯ ಹೊರತಾಗಿ ನಾವವರಿಗೆ ಏನನ್ನು ನೀಡಬಹುದು?
ಶ್ರೀ ಶ್ರೀ ರವಿ ಶಂಕರ್: ಅವರೊಂದಿಗೆ ಕೇವಲ ಆಟವಾಡಿ. ಎಲ್ಲಾ ಸಮಯದಲ್ಲೂ ಅವರಿಗೆ ಶಿಕ್ಷಕರಾಗಲು ಪ್ರಯತ್ನಿಸಬೇಡಿ ಮತ್ತು ಅವರಿಗೆ ಕಲಿಸಲು ತೊಡಗಬೇಡಿ. ವಾಸ್ತವವಾಗಿ, ಅವರಿಂದ ಕಲಿಯಿರಿ ಮತ್ತು ಅವರನ್ನು ಗೌರವಿಸಿ. ಮಕ್ಕಳೊಂದಿಗೆ ಬಹಳ ಗಂಭೀರವಾಗಬೇಡಿ.
ಒಬ್ಬ ಮಗುವಾಗಿ ನನಗೆ ನೆನಪಿದೆ, ನನ್ನ ತಂದೆಯವರು ಸಂಜೆ ಮನೆಗೆ ಬರುವಾಗ ಅವರು ಸುಮ್ಮನೇ ಚಪ್ಪಾಳೆ ತಟ್ಟಿ ನಾವು ನಗುವಂತೆ ಮಾಡುತ್ತಿದ್ದರು. ನನ್ನ ತಾಯಿಯವರು ಬಹಳ ಕಟ್ಟುನಿಟ್ಟಾಗಿದ್ದರು, ಆದರೆ ನನ್ನ ತಂದೆ, ನಾವೆಲ್ಲರೂ ರಾತ್ರಿಯ ಊಟಕ್ಕೆ ಹೋಗುವುದರ ಮೊದಲು ಸುಮ್ಮನೇ ಚಪ್ಪಾಳೆ ತಟ್ಟಿ ಎಲ್ಲರೂ ನಗುವಂತೆ ಮಾಡುತ್ತಿದ್ದರು. ಎಲ್ಲರೂ ಒಟ್ಟಿಗೆ ಕೂತು ತಿನ್ನಬೇಕಾಗಿತ್ತು. ಅದರ ಮೊದಲು ಅವರು ಸುಮ್ಮನೇ ಚಪ್ಪಾಳೆ ತಟ್ಟಿ ಎಲ್ಲರನ್ನೂ ಮನೆಯೊಳಗೆ ಸುತ್ತಲೂ ಓಡಿಸುತ್ತಿದ್ದರು. ನಾವು ಊಟಕ್ಕೆ ಕುಳಿತುಕೊಳ್ಳುವ ಮೊದಲು ಪ್ರತಿಯೊಬ್ಬರೂ ನಗಬೇಕಾಗಿತ್ತು.
ಆದುದರಿಂದ ಎಲ್ಲಾ ಸಮಯದಲ್ಲೂ ಅವರಿಗೆ ಕಲಿಸುತ್ತಾ ಇರಬೇಡಿ, ಕೇವಲ ಅವರೊಂದಿಗೆ ಆಚರಿಸಿ, ಅವರೊಂದಿಗೆ ಆಟವಾಡಿ, ಅವರೊಂದಿಗೆ ಹಾಡಿ. ಇದು ಅತ್ಯುತ್ತಮವಾದುದು. ನೀವು ಯಾವತ್ತೂ ಒಂದು ಕೋಲು ತೆಗೆದುಕೊಂಡು, "ಇದನ್ನು ಮಾಡಬೇಡ, ಅದನ್ನು ಮಾಡಬೇಡ" ಎಂದು ಹೇಳಿದರೆ, ಅದು ಒಳ್ಳೆಯದಲ್ಲ.
ನನಗನ್ನಿಸುತ್ತದೆ, ಮಕ್ಕಳೊಂದಿಗೆ ನೀವು ಹೆಚ್ಚು ಆಟವಾಡಬೇಕು ಮತ್ತು ಕೆಲವೊಮ್ಮೆ ಅವರಿಗೆ ಕಥೆಗಳನ್ನು ಹೇಳಬೇಕು. ನಾವು ಮಕ್ಕಳಾಗಿದ್ದಾಗ ನಾವು ಬಹಳಷ್ಟು ಒಳ್ಳೆಯ ಕಥೆಗಳನ್ನು ಕೇಳುತ್ತಿದ್ದೆವು. ಪ್ರತಿದಿನವೂ ಒಂದು ಕಥೆ. ಈ ರೀತಿಯಲ್ಲಿ ಮೌಲ್ಯಗಳೊಂದಿಗೆ ಮಕ್ಕಳನ್ನು ಬೆಳೆಸುವುದು ಒಳ್ಳೆಯದು. ನೀವು ಅವರಿಗೆ ಒಳ್ಳೆಯ ಆಸಕ್ತಿಕರ ಕಥೆಗಳನ್ನು ಹೇಳಿದರೆ, ಆಗ ಅವರು ತಮ್ಮನ್ನು ದೂರದರ್ಶನಕ್ಕೆ ಅಂಟಿಸಿಕೊಂಡು ಯಾವತ್ತೂ ಅಲ್ಲಿಯೇ ಕುಳಿತುಕೊಳ್ಳುವುದಿಲ್ಲ. ಮಕ್ಕಳಿಗಾಗಿ ಹಲವಾರು ಕಥೆಗಳಿವೆ; ಪಂಚತಂತ್ರವಿದೆ. ನಮ್ಮ ಭಕ್ತರಲ್ಲೊಬ್ಬರು ಪಂಚತಂತ್ರದ ಕಾರ್ಟೂನುಗಳನ್ನು ಕೂಡಾ ಮಾಡುತ್ತಿದ್ದಾರೆ. ಬೇಗನೇ ಅದು ಹೊರಬರಲಿದೆ.
ಆದುದರಿಂದ, ಹೆತ್ತವರು ಮಕ್ಕಳೊಂದಿಗೆ ಕುಳಿತುಕೊಂಡು ಅವರಿಗೆ ನೀತಿಗಳಿರುವ ಕಥೆಗಳನ್ನು ಹೇಳುವುದು ಒಳ್ಳೆಯದು. ಒಂದು ನೀತಿಯಿರುವ ಕಥೆಯು ಒಳ್ಳೆಯದು, ಮತ್ತು ನೀವು ನಿಮ್ಮ ಮಕ್ಕಳೊಂದಿಗೆ ಒಂದು ಗಂಟೆ ಅಥವಾ ಅರ್ಧ ಗಂಟೆಯ ಗುಣಮಟ್ಟದ ಸಮಯವನ್ನು ಕಳೆದರೆ, ಅದು ಸಾಕು.
ಹಾಗೆಯೇ, ಐದರಿಂದ ಆರು ಗಂಟೆಗಳ ಕಾಲ ಅವರೊಂದಿಗೆ ಕುಳಿತುಕೊಂಡು ಅವರ ಉಸಿರುಗಟ್ಟಿಸಬೇಡಿ. ೪೫ ನಿಮಿಷಗಳಿಂದ ಒಂದು ಗಂಟೆಯ ವರೆಗಿನ ಗುಣಮಟ್ಟದ ಸಮಯವು ಒಳ್ಳೆಯದು, ಮತ್ತು ಈ ಸಮಯವು ಬಹಳ ಆಸಕ್ತಿಕರವಾಗಿರಬೇಕು. ಅವರು ನಿಮ್ಮೊಂದಿಗೆ ಕುಳಿತು ಕಥೆಗಳನ್ನು ಕೇಳುವುದಕ್ಕೆ ಎದುರುನೋಡುತ್ತಿರಬೇಕು.
ನನಗೆ ನೆನಪಿದೆ, ನನಗೊಬ್ಬರು ಮಾವನಿದ್ದರು. ಅವರು ಬಹಳ ದಪ್ಪಗೆ, ಬೆಳ್ಳಗಿದ್ದರು ಹಾಗೂ ಉರುಟು ಮುಖವನ್ನು ಹೊಂದಿದ್ದರು. ಪ್ರತಿ ಭಾನುವಾರ ಅವರು ನಮ್ಮ ಮನೆಗೆ ಬರುತ್ತಿದ್ದರು ಮತ್ತು ನಮಗೆ ಕಥೆಗಳನ್ನು ಹೇಳುತ್ತಿದ್ದರು. ನಾವೆಲ್ಲರೂ ಅವರೊಂದಿಗೆ ಕುಳಿತುಕೊಳ್ಳುತ್ತಿದ್ದೆವು ಮತ್ತು ಅವರು ನಮಗೆ ಒಳ್ಳೆಯ ಕಥೆಗಳನ್ನು ಹೇಳುತ್ತಿದ್ದರು ಹಾಗೂ ಮುಂದಿನ ಸಲ, ಮುಂದೇನಾಗುವುದೆಂದು ತಿಳಿಯಲು ನಾವು ಬಹಳ ಕುತೂಹಲಿಗಳಾಗಿರಲೆಂದು ಅವರು ಕೊನೆಯಲ್ಲಿ ಸ್ವಲ್ಪ ಅನಿಶ್ಚಿತ ಸ್ಥಿತಿಯನ್ನು ಬಿಡುತ್ತಿದ್ದರು.
ಹೀಗೆ ನಮ್ಮ ನಡುವೆ ಅಂತಹ ವ್ಯಕ್ತಿತ್ವಗಳಿವೆ. ಇಲ್ಲದಿದ್ದರೆ, ನಿಮ್ಮದೇ ಮಗು ಹೋಗಿ ಬೇರೆ ಕೆಲವು ಮಕ್ಕಳಿಗೆ ಕಥೆಗಳನ್ನು ಹೇಳಬಹುದು. ಅವರ ಹೆತ್ತವರು ಕೂಡಾ ಬಹಳ ಸಂತೋಷಗೊಳ್ಳುವರು. ಮಕ್ಕಳನ್ನು ಕುಳ್ಳಿರಿಸಲು ಅವರಿಗೆ ಯಾರಾದರೂ ಸಿಗುತ್ತಾರೆ ಮತ್ತು ಅದು ನಿಮ್ಮ ಸೇವಾ ಕಾರ್ಯ ಕೂಡಾ ಆಗಬಹುದು.
ಆದುದರಿಂದ, ಆ ಮಾನವ ಸ್ಪರ್ಶದ ಅಗತ್ಯವಿದೆ.
ಇವತ್ತು ಮಕ್ಕಳು, ಬೆಳಗ್ಗೆ ಏಳುವ ಸಮಯದಿಂದ ಹಿಡಿದು ಟಿವಿಯ ಮುಂದೆ ಒಂದು ಭಾಗವಹಿಸದಿರುವ ಸಾಕ್ಷಿಯಂತೆ ಕುಳಿತುಕೊಳ್ಳುತ್ತಾರೆ; ಅಲ್ಲವೇ? ಮಕ್ಕಳು ಟಿವಿಯ ಮುಂದೆ ಕುಳಿತುಕೊಂಡು ಚ್ಯಾನೆಲ್ ಬದಲಾಯಿಸುತ್ತಾ ಹೋಗುತ್ತಾರೆ. ತಾಯಿಯು ಬಂದು ಹೇಳುತ್ತಾಳೆ, "ತಿಂಡಿ ತಿನ್ನಲು ಬಾ", ಮತ್ತು ಅವರು ಮಿಸುಕಾಡುವುದೇ ಇಲ್ಲ. ಕೆಲವೊಮ್ಮೆ, ತಾಯಿಯು ಅವರ ತಿಂಡಿಯನ್ನು ಟಿವಿಯ ಮುಂದೆ ತರಬೇಕಾಗುತ್ತದೆ. ಈ ರೀತಿಯ ಸಂಸ್ಕೃತಿಯು ಒಳ್ಳೆಯದಲ್ಲ. ನಿಮಗೇನನ್ನಿಸುತ್ತದೆ? ನಿಮ್ಮಲ್ಲಿ ಎಷ್ಟು ಮಂದಿ ನಾನು ಹೇಳುವುದನ್ನು ಒಪ್ಪುತ್ತೀರಿ?
ಮಕ್ಕಳಿಗೆ ಒಂದು ಗಂಟೆಗಿಂತ ಹೆಚ್ಚು ಕಾಲ ಟಿವಿ ತೋರಿಸಬಾರದು. ಟಿವಿಯ ಸಮಯವನ್ನು ನೀವು ಸೀಮಿತಗೊಳಿಸಬೇಕು, ಇಲ್ಲದಿದ್ದರೆ ಮಕ್ಕಳಿಗೆ ಈ ಗಮನದ ಕೊರತೆಯ ಖಾಯಿಲೆ ಬರುತ್ತದೆ. ಮೆದುಳಿನ ಮೇಲೆ ಈ ಎಲ್ಲಾ ಚಿತ್ರಗಳ ಸುರಿಮಳೆ ಎಷ್ಟೊಂದಾಗುವುದೆಂದರೆ, ಬೇರೆ ಏನನ್ನಾದರೂ ನೋಂದಾಯಿಸಿಕೊಳ್ಳಲು ಅದು ವಿಫಲವಾಗುತ್ತದೆ ಮತ್ತು ನಂತರ ಮಕ್ಕಳು ಬಹಳಷ್ಟು ಮಂಕಾಗುತ್ತಾರೆ. ಅವರಿಗೆ ಯಾವುದಕ್ಕೂ ಗಮನ ನೀಡಲು ಸಾಧ್ಯವಾಗುವುದಿಲ್ಲ. ದೇವರ ದಯೆ, ನಾವು ಮಕ್ಕಳಾಗಿರುವಾಗ ನಮ್ಮ ಬಳಿ ಟಿವಿಯಿರಲಿಲ್ಲ. ನಿಮ್ಮಲ್ಲಿ ಎಷ್ಟು ಮಂದಿ ಟಿವಿಯಿಲ್ಲದೆ ಬೆಳೆದಿರಿ? ನಾವೆಲ್ಲರೂ ಟಿವಿಯಿಲ್ಲದೆ ಬೆಳೆದೆವು.
ಆದುದರಿಂದ ಹೆಚ್ಚು ಟಿವಿಯೊಂದಿಗೆ ಬೆಳೆಯುವ ಮಕ್ಕಳು ಅಷ್ಟೊಂದು ಬುದ್ಧಿವಂತರಾಗಿರುವಂತೆ ಕಾಣಿಸುವುದಿಲ್ಲ. ನೀವು ಟಿವಿಯನ್ನು ಒಂದು ದಿನದಲ್ಲಿ ಹೆಚ್ಚೆಂದರೆ ಎರಡು ಗಂಟೆಗಳಿಗೆ ಸೀಮಿತಗೊಳಿಸಬೇಕು.
ದೊಡ್ಡವರಿಗೆ ಕೂಡಾ, ಒಂದು ಅಥವಾ ಎರಡು ಗಂಟೆಗಳು ಸಾಕು, ಅದಕ್ಕಿಂತ ಹೆಚ್ಚು ಬೇಡ. ದೊಡ್ಡವರಿಗೆ ಕೂಡಾ ಅದು ಅತಿಯಾಗುತ್ತದೆ. ನಿಮಗೆ ಗೊತ್ತಾ, ಅತಿಯಾಗಿ ಟಿವಿ ನೋಡುವುದರಿಂದ ಮೆದುಳಿನಲ್ಲಿರುವ ಈ ಎಲ್ಲಾ ನರಗಳು ಬಹಳಷ್ಟು ಬಳಲುತ್ತವೆ.
ಕೆಲವೊಮ್ಮೆ ಜನರು, "ಗುರುದೇವ, ಇದು ಬಹಳ ಚೆನ್ನಾಗಿದೆ" ಎಂದು ಹೇಳುತ್ತಾ ಟಿವಿ ನೋಡಲು ನನ್ನನ್ನು ಒತ್ತಾಯಪಡಿಸುತ್ತಾರೆ. ಅರ್ಧ ಗಂಟೆಯಿಂದ ಒಂದು ಗಂಟೆಗಿಂತ ಹೆಚ್ಚು ಕಾಲ ನೋಡಲು ನನಗೆ ಸಾಧ್ಯವಾಗುವುದಿಲ್ಲ. ಅದು ನಿಜವಾಗಿ ಮನಸ್ಸನ್ನು ಬಳಲಿಸುತ್ತದೆ. ಜನರು ಒಂದು ವಾರಕ್ಕೆ ಎರಡರಿಂದ ಮೂರು ಸಿನೆಮಾಗಳನ್ನು ಹೇಗೆ ನೋಡುತ್ತಾರೆ ಎಂದು ನನಗೆ ಅಚ್ಚರಿಯಾಗುತ್ತದೆ. ನಿಜವಾಗಿ ನಾವು ನಮ್ಮ ಮೆದುಳಿನ ಕೋಶಗಳನ್ನು ಹಾಳುಮಾಡುತ್ತಿದ್ದೇವೆ.
ಚಿತ್ರಮಂದಿರಗಳಿಂದ ಹೊರಬರುವ ಜನರನ್ನು ನೋಡಿ, ಅವರು ಸಮೃದ್ಧವಾಗಿ, ಚೈತನ್ಯಭರಿತವಾಗಿ ಮತ್ತು ಸಂತೋಷವಾಗಿರುವಂತೆ ಕಾಣಿಸುತ್ತಾರೆಯೇ? ಅವರು ಚಿತ್ರಮಂದಿರಗಳ ಒಳಗೆ ಹೋಗುವ ರೀತಿ ಹೇಗಿರುತ್ತದೆ, ಅವರು ಹೊರಗೆ ಬಂದಾಗ ಹೇಗೆ ಕಾಣಿಸುತ್ತಾರೆ? ಚಲನಚಿತ್ರವು ಎಷ್ಟೇ ಒಳ್ಳೆಯದಿದ್ದರೂ, ಅವರು ಬಳಲಿಹೋದಂತೆ; ಸಂಪೂರ್ಣವಾಗಿ ದಣಿದಂತೆ ಮತ್ತು ಮಂಕಾದಂತೆ ಕಾಣಿಸುತ್ತಾರೆ, ಅಲ್ಲವೇ?
ನೀವು ಗಮನಿಸಿರದಿದ್ದರೆ, ಒಂದು ಚಿತ್ರಮಂದಿರದ ಹೊರಗಡೆ ಸುಮ್ಮನೇ ನಿಂತುಕೊಳ್ಳಿ. ಜನರು ಚಿತ್ರಮಂದಿರದ ಒಳಗೆ ಹೋಗುವಾಗ ಮತ್ತು ಅವರು ಹೊರಗೆ ಬರುವಾಗ ನೀವು ನೋಡಬೇಕು. ನಿಮಗೊಂದು ಸ್ಪಷ್ಟ ವ್ಯತ್ಯಾಸವು ಕಾಣಿಸುತ್ತದೆ. ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಗಮನಿಸಿದ್ದೀರಿ? ನಿಮ್ಮಲ್ಲಿ ಕೂಡಾ. ಯಾವುದೇ ಮನೋರಂಜನಾ ವಿನೋದವು ನಿಮ್ಮನ್ನು ಚೈತನ್ಯಗೊಳಿಸಬೇಕು, ಆದರೆ ಚಲನಚಿತ್ರಗಳನ್ನು ನೋಡುವುದರೊಂದಿಗೆ ಅದು ಆ ರೀತಿ ಆಗುವುದಿಲ್ಲ.
ನೀವೊಂದು ನೇರವಾದ ಕಾರ್ಯಕ್ರಮಕ್ಕೆ ಹೋಗುವಿರಿ ಎಂದಿಟ್ಟುಕೊಳ್ಳೋಣ, ಇದು ಅದಕ್ಕಿಂತ ಸ್ವಲ್ಪ ಹೆಚ್ಚು ಒಳ್ಳೆಯದು, ನಿಮಗೆ ಅಷ್ಟೊಂದು ದಣಿವಾಗುವುದಿಲ್ಲ. ನೀವೊಂದು ನೇರವಾದ ಸಂಗೀತ ಕಾರ್ಯಕ್ರಮಕ್ಕೆ ಹೋಗುವಿರಿ, ಅದು ಅಷ್ಟೊಂದು ಮಾಡುವುದಿಲ್ಲ. ನಿಮಗೆ ದಣಿವಾಗುತ್ತದೆ, ಆದರೆ ಅಷ್ಟೊಂದಲ್ಲ. ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಗಮನಿಸಿರುವಿರಿ? ಮತ್ತು ನೀವು ಸತ್ಸಂಗಕ್ಕೆ ಬರುವಾಗ, ಅದು ತದ್ವಿರುದ್ಧ. ನೀವು ಒಳಕ್ಕೆ ಬರುವಾಗ ನಿಮಗೆ ಬೇರೆಯ ಅನುಭವವಾಗುತ್ತದೆ, ಮತ್ತು ನೀವು ಹೊರಕ್ಕೆ ಹೋಗುವಾಗ ನಿಮಗೆ ನಿಮ್ಮಲ್ಲಿ ಚೈತನ್ಯ ಬಂದ ಅನುಭವವಾಗುತ್ತದೆ.

ಪ್ರಶ್ನೆ: ಚಿಕ್ಕ ಮಕ್ಕಳಿಗೆ ಭಯಾನಕವಾದ ಕಾಲ್ಪನಿಕ ಕಥೆಗಳನ್ನು ಹೇಳಬೇಕೆಂದು ನಿಮಗನಿಸುತ್ತದೆಯೇ, ಯಾಕೆಂದರೆ ಭಯಾನಕವಾಗಿರುವ ಕೆಲವು ಜರ್ಮನಿಯ ಕಥೆಗಳಿವೆ ಮತ್ತು ಅವುಗಳನ್ನು ಅವರಿಗೆ ಹೇಳಬಾರದೆಂದು ಜನರು ಹೇಳುವುದನ್ನು ನಾನು ಕೇಳಿದ್ದೇನೆ. 
ಶ್ರೀ ಶ್ರೀ ರವಿ ಶಂಕರ್: ಕಾಲ್ಪನಿಕ ಕಥೆಗಳನ್ನು ಮಿತವಾಗಿಟ್ಟುಕೊಳ್ಳಬೇಕು. ಒಂದು ಚಿಕ್ಕ ವಯಸ್ಸಿನಲ್ಲಿ ಅವರಿಗೆ ಯಾವುದೇ ಭಯಾನಕ ಕಥೆಗಳನ್ನು ಹೇಳಲಿಲ್ಲವೆಂದಿಟ್ಟುಕೊಳ್ಳಿ, ನಂತರ ಅವರು ಬೆಳೆದು ದೊಡ್ಡವರಾಗಿ ಅವುಗಳ ಬಗ್ಗೆ ತಿಳಿದಾಗ, ಅದು ಅವರಿಗೆ ಇನ್ನೂ ಹೆಚ್ಚು ಭಯವನ್ನುಂಟುಮಾಡುವುದು. ಅದು ಅವರನ್ನು ಬಹಳ ದುರ್ಬಲರನ್ನಾಗಿ ಮಾಡುವುದು.
ಅದೇ ಸಮಯದಲ್ಲಿ ನೀವು ಅವರಿಗೆ ಅತಿಯಾಗಿ ಭಯಾನಕ ವಿಷಯಗಳನ್ನು ಹೇಳಿದರೆ, ಆಗ ಅವರು ಭಯದೊಂದಿಗೆ ಗೀಳಿಗೆ ಬೀಳಬಹುದು. ಎರಡೂ ವಿಪರೀತಗಳನ್ನು ತಡೆಯಬೇಕು. ಸ್ವಲ್ಪ ಭಯಾನಕ ವಿಷಯಗಳು ಇರಬಹುದು ಆದರೆ ಅತಿಯಾಗಿ ಅಲ್ಲ; ವಿಶೇಷವಾಗಿ ವಿಡಿಯೋ ಗೇಮುಗಳು. ವಿಡಿಯೋ ಗೇಮುಗಳು ಹಿಂಸಾತ್ಮಕವಾಗಿರಬಾರದೆಂದು ನನಗನಿಸುತ್ತದೆ. ಮಕ್ಕಳು ವಿಡಿಯೋ ಪರದೆಯಲ್ಲಿ ಗುಂಡುಹೊಡೆಯುತ್ತಾರೆ ಮತ್ತು ಅದು ಕೇವಲ ಒಂದು ಆಟವೆಂದು ಯೋಚಿಸುತ್ತಾರೆ ಹಾಗೂ ನಂತರ ನಿಜಜೀವನದಲ್ಲಿ ಅವರು ಜನರಿಗೆ ಗುಂಡು ಹೊಡೆಯಲು ಶುರು ಮಾಡುತ್ತಾರೆ, ಯಾಕೆಂದರೆ ತಾತ್ವಿಕ (ವರ್ಚುವಲ್) ಪ್ರಪಂಚ ಮತ್ತು ನಿಜ ಪ್ರಪಂಚದ ನಡುವೆ ಅವರಿಗೆ ವ್ಯತ್ಯಾಸ ಕಾಣಿಸುವುದಿಲ್ಲ. ಇದೊಂದು ಸಮಸ್ಯೆ. ಆದುದರಿಂದ ಮಕ್ಕಳಲ್ಲಿ ಹಿಂಸಾತ್ಮಕ ವಿಡಿಯೋ ಗೇಮುಗಳಿರಬಾರದೆಂಬುದು ನನ್ನ ಅಭಿಪ್ರಾಯ.

ಪ್ರಶ್ನೆ: ಎಲ್ಲಾ ಸಂಬಂಧಗಳು ಪೂರ್ವ ಕರ್ಮವನ್ನು ಆಧರಿಸಿವೆಯೇ?
ಶ್ರೀ ಶ್ರೀ ರವಿ ಶಂಕರ್: ಹೌದು. ನಿಮಗೆ ಗೊತ್ತಾ, ಕೆಲವೊಮ್ಮೆ ಜಗತ್ತಿಗೆ ಬರಲು ಬಯಸುವ ಒಂದು ಆತ್ಮವು ಒಬ್ಬ ಪುರುಷ ಮತ್ತು ಒಬ್ಬಳು ಸ್ತ್ರೀಯನ್ನು ಆಯ್ಕೆ ಮಾಡುತ್ತದೆ ಹಾಗೂ ನಂತರ ಅವರ ನಡುವೆ ಬಹಳಷ್ಟು ಆಕರ್ಷಣೆಯನ್ನು ಸೃಷ್ಟಿಸುತ್ತದೆ. ಹಾಗೆ ಈ ಇಬ್ಬರು ವ್ಯಕ್ತಿಗಳು ಹತ್ತಿರ ಬರುತ್ತಾರೆ ಮತ್ತು ಅವರಿಗೆ ಮೊದಲನೆಯ ಮಗುವಾದ ಕ್ಷಣದಲ್ಲಿಯೇ ಇದ್ದಕ್ಕಿದ್ದಂತೆ ಅವರ ನಡುವಿನ ಎಲ್ಲಾ ಪ್ರೀತಿ ಮಾಯವಾಗುತ್ತದೆ. ಅಂತಹ ಸಂಗತಿ ಆಗುವುದನ್ನು ನಿಮ್ಮಲ್ಲಿ ಎಷ್ಟು ಮಂದಿ ನೋಡಿರುವಿರಿ?
ಆದುದರಿಂದ ಮೊದಲನೆಯ ಮಗುವಿನ ನಂತರ, ಆತ್ಮದ ಕೆಲಸವು ಮುಗಿದ ಕಾರಣ; ಅದು ಜಗತ್ತಿಗೆ ಬಂದ ಕಾರಣ, ನಂತರ ಅದು ಹೆತ್ತವರು ಏನು ಮಾಡುತ್ತಾರೆ ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ಆದುದರಿಂದ ಇದ್ದಕ್ಕಿದ್ದಂತೆಯೇ ಮೊದಲನೆಯ ಮಗುವಿನ ಬಳಿಕ, ದಂಪತಿಗಳು ಎಲ್ಲಾ ಆಕರ್ಷಣೆಯನ್ನು ಕಳೆದುಕೊಳ್ಳುತ್ತಾರೆ.
ಯಾವತ್ತೂ ಅಲ್ಲ. ಎಲ್ಲರಿಗೂ ಯಾವತ್ತೂ ಹೀಗೆ ಎಂದು ಯೋಚಿಸಬೇಡಿ. ಕೆಲವು ಪ್ರಕರಣಗಳಲ್ಲಿ ಹೀಗೆ ಆಗುತ್ತದೆ. ಕೆಲವೊಮ್ಮೆ ಅದು ಮೂರನೆಯ ಅಥವಾ ಐದನೆಯ ಮಗುವಿನ ಬಳಿಕ ಕೂಡಾ ಆಗುತ್ತದೆ. ಇದ್ದಕ್ಕಿದ್ದಂತೆಯೇ ಅವರಿಗೆ ಪರಸ್ಪರರನ್ನು ಸಹಿಸಲು ಸಾಧ್ಯವಾಗುವುದಿಲ್ಲ, ಯಾಕೆಂದರೆ, ಜಗತ್ತಿಗೆ ಬರಲು ಬಯಸಿದ ಆತ್ಮದಿಂದ ಅವರ ವ್ಯಕ್ತಿತ್ವಗಳನ್ನು ಕೃತಕವಾಗಿ ಹತ್ತಿರ ತರಲಾಯಿತು.
ಹೀಗೆ ಇದು ಆಗುತ್ತಿದೆ, ಆದರೆ ಯಾವತ್ತೂ ಅಲ್ಲ; ಸುಮಾರು ೩೦% ಎಂದು ಹೇಳಬಹುದು, ಮತ್ತು ಅವರು ಖಂಡಿತವಾಗಿ ವಿಚ್ಛೇದನ ಪಡೆಯುತ್ತಾರೆ ಯಾಕೆಂದರೆ ಈ ಪ್ರಕರಣಗಳಲ್ಲಿ ಆ ಇಬ್ಬರು ವ್ಯಕ್ತಿಗಳಲ್ಲಿ ಹೊಂದಾಣಿಕೆ ಇರುವುದೇ ಇಲ್ಲ. ಅವರ ನಡುವೆ ಯಾವ ಹೊಂದಾಣಿಕೆಯೂ ಇರುವುದಿಲ್ಲ. ಇದ್ದಕ್ಕಿದ್ದಂತೆಯೇ ಒಬ್ಬರಿಗೆ ತೋರುತ್ತದೆ, "ಓ, ನಾವು ಜೀವನದ ಆತ್ಮಸಂಗಾತಿಗಳೆಂದು ನಾವು ಯೋಚಿಸಿದೆವು ಮತ್ತು ಏನಾಯಿತು? ನಾನು ಸಂಪೂರ್ಣವಾಗಿ ವಿಭಿನ್ನ ಮತ್ತು ನಾವು ಯಾವತ್ತಿಗೂ ಪರಸ್ಪರ ಹೊಂದಾಣಿಕೆಯಾಗಲು ಸಾಧ್ಯವಿಲ್ಲ." ಈ ವಿಷಯ ಏಳುತ್ತದೆ.
ಜೀವನವೆಂದರೆ ಹಾಗೆ, ಮಿತ್ರರು ಶತ್ರುಗಳಾಗುತ್ತಾರೆ ಮತ್ತು ಶತ್ರುಗಳು ಮಿತ್ರರಾಗುತ್ತಾರೆ. ನೀವು ಒಬ್ಬರಿಗೆ ಯಾವುದೇ ಒಳ್ಳೆಯದನ್ನೂ ಮಾಡಲಿಲ್ಲ ಮತ್ತು ಅವರು ನಿಮಗೆ ಒಳ್ಳೆಯದನ್ನು ಮಾಡಲು ತೊಡಗಿದ್ದಾರೆ.
ಆದುದರಿಂದ ಮಿತ್ರರು ಅಥವಾ ಶತ್ರುಗಳು, ಅದೊಂದು ವಿಷಯವಲ್ಲ. ನಿಮ್ಮ ಜೀವನವು ಕರ್ಮದ ಯಾವುದೋ ಬೇರೆಯ ನಿಯಮಗಳಿಂದ ನಡೆಯುತ್ತದೆ. ಅದಕ್ಕಾಗಿಯೇ, ನಿಮ್ಮ ಎಲ್ಲಾ ಮಿತ್ರರು ಮತ್ತು ಶತ್ರುಗಳನ್ನು ಒಂದು ಬುಟ್ಟಿಯಲ್ಲಿ ಹಾಕಿ, ಯಾಕೆಂದರೆ ಒಂದು ಹತ್ತು ವರ್ಷಗಳ ಗೆಳೆತನವು ಶತ್ರುತ್ವವಾಗಿ ಬದಲಾಗಬಲ್ಲದು ಮತ್ತು ಒಬ್ಬ ಶತ್ರುವು ಯಾವುದೇ ಸಮಯದಲ್ಲೂ ನಿಮ್ಮ ಒಬ್ಬ ಉತ್ತಮ ಮಿತ್ರನಾಗಬಲ್ಲನು. ಅದೆಲ್ಲವೂ ನಿಮ್ಮ ಮೇಲೆ ಮತ್ತು ನಿಮ್ಮ ಕರ್ಮದ ಮೇಲೆ ಅವಲಂಬಿಸಿದೆ.

ಪ್ರಶ್ನೆ: ಒಬ್ಬರು ಪ್ರೀತಿಪಾತ್ರರ ಸಾವನ್ನು ಸ್ವೀಕರಿಸಲಿರುವ ಒಂದು ಒಳ್ಳೆಯ ಮಾರ್ಗ ಯಾವುದು?
ಶ್ರೀ ಶ್ರೀ ರವಿ ಶಂಕರ್: ಸಮಯವು ತನ್ನದೇ ಆದ ಪಥವನ್ನು ತೆಗೆದುಕೊಳ್ಳುತ್ತದೆ. ಸ್ವೀಕರಿಸಲು ಅಥವಾ ಏನನ್ನಾದರೂ ಮಾಡಲು ಪ್ರಯತ್ನಿಸಬೇಡಿ. ಅಲ್ಲಿ ಆ ಚುಚ್ಚುವಿಕೆ ಇದ್ದರೆ, ಅದು ಇದೆ, ಅದು ಹೋಗುತ್ತದೆ. ಸಮಯವು ಅತ್ಯಂತ ದೊಡ್ದ ವೈದ್ಯನಾಗಿದೆ. ಸಮಯ ಕಳೆದಂತೆಲ್ಲಾ ಅದು ನಿಮ್ಮನ್ನು ಕೇವಲ ಮುಂದು ಮುಂದಕ್ಕೆ ಒಯ್ಯುತ್ತದೆ. ಆದುದರಿಂದ ಏನನ್ನಾದರೂ ಮಾಡಲು ಪ್ರಯತ್ನಿಸಬೇಡಿ, ಸಮಯವು ಅದನ್ನು ನೋಡಿಕೊಳ್ಳುತ್ತದೆ. ಅಥವಾ ಎಚ್ಚೆತ್ತುಕೊಳ್ಳಿ ಮತ್ತು ಪ್ರತಿಯೊಬ್ಬರೂ ಒಂದು ದಿನ ಹೋಗಲಿದ್ದಾರೆ ಎಂಬುದನ್ನು ನೋಡಿ. ಅವರೊಂದು ಮುಂಚಿತವಾದ ವಿಮಾನವನ್ನು ಹತ್ತಿದರು, ನೀವೊಂದು ನಂತರದ ವಿಮಾನವನ್ನು ಹತ್ತಲಿರುವಿರಿ. ಅಷ್ಟೇ.
ಆದುದರಿಂದ ಈಗಾಗಲೇ ಹೋಗಿರುವ ಜನರಿಗೆ, "ಸ್ವಲ್ಪ ವರ್ಷಗಳ ನಂತರ ನಾನು ನಿಮ್ಮನ್ನು ಅಲ್ಲಿ ಭೇಟಿಯಾಗುವೆನು" ಎಂದು ಹೇಳಿ. ಈಗಿನ ಮಟ್ಟಿಗೆ ಟಾಟಾ ಎಂದು ಹೇಳಿ. ನೀವವರನ್ನು ಆನಂತರ ಇನ್ನೊಂದು ಜಾಗದಲ್ಲಿ ಭೇಟಿಯಾಗುವಿರಿ.

ಪ್ರಶ್ನೆ: ನನಗೆ ಯಾವುದೇ ಕುಟುಂಬವಿಲ್ಲ, ಒಬ್ಬಂಟಿತನದ ಅನುಭವ ಕಡಿಮೆಯಾಗಲು ನಾನು ಏನು ಮಾಡಬಹುದು?
ಶ್ರೀ ಶ್ರೀ ರವಿ ಶಂಕರ್: ನಾನು ನಿನಗೆ ಅಷ್ಟೊಂದು ದೊಡ್ಡ ಕುಟುಂಬವನ್ನು, ಒಂದು ನಿಜವಾದ ಕುಟುಂಬವನ್ನು ಮತ್ತು ನಿನ್ನ ಬಗ್ಗೆ ನಿಜವಾದ ಕಾಳಜಿ ತೆಗೆದುಕೊಳ್ಳುವ ಒಂದು ಕುಟುಂಬವನ್ನು ನೀಡಿದ್ದೇನೆ. ನಿನಗೆ ಯಾವುದೇ ಕುಟುಂಬವಿಲ್ಲವೆಂದು ಯಾವತ್ತಿಗೂ ಅಂದುಕೊಳ್ಳಬೇಡ, ನಾನು ನಿನ್ನ ಕುಟುಂಬ. ಅದಕ್ಕಾಗಿಯೇ ನಾನು ಪ್ರತಿವರ್ಷವೂ ಕ್ರಿಸ್ಮಸ್ ಮತ್ತು ಹೊಸ ವರ್ಷದಂದು ಇಲ್ಲಿಗೆ ಬರುವುದು. ಅಲ್ಲದಿದ್ದರೆ ನಾನು ಯಾಕೆ ಬರಬೇಕು?!

ಪ್ರಶ್ನೆ: ನಿಮ್ಮನ್ನು ಸಂತೋಷಗೊಳಿಸಲಿರುವ ಅತ್ಯುತ್ತಮ ವಿಧಾನ ಯಾವುದು?
ಶ್ರೀ ಶ್ರೀ ರವಿ ಶಂಕರ್: ನೀನು ಸಂತೋಷವಾಗಿರುವುದು ಮತ್ತು ಇತರರು ಸಂತೋಷವಾಗಿರುವಂತೆ ಮಾಡುವುದು. ನೀನು ಪ್ರಯತ್ನಿಸಿ ನಾನು ಸಂತೋಷಪಡುವಂತೆ ಮಾಡಬೇಕಾಗಿಲ್ಲ, ನಾನು ಹೇಗಿದ್ದರೂ ಸಂತೋಷವಾಗಿದ್ದೇನೆ. ಆದರೆ ನೀನು ಇತರರಿಗೆ ಸಹಾಯ ಮಾಡಬಲ್ಲೆಯಾದರೆ ನಾನು ಹೆಚ್ಚು ಸಂತೋಷಪಡುತ್ತೇನೆ. ಕೇವಲ ಅವರಿಗೆ ಸ್ವಲ್ಪ ಉಡುಗೊರೆಗಳನ್ನು ಕೊಡುವುದರಿಂದಲೋ ಅಥವಾ ಅವರಿಗೆ ಒಂದು ಔತಣಕೂಟವನ್ನು ಏರ್ಪಡಿಸುವುದರಿಂದಲೋ ಅಲ್ಲ, ಆದರೆ ಅವರಿಗೆ ಜ್ಞಾನವನ್ನು ನೀಡಿ, ಅವರನ್ನು ಬಹಳ ಶಕ್ತಿಶಾಲಿಗಳನ್ನಾಗಿ ಮಾಡುವುದರಿಂದ. ನೀನು ಜನರನ್ನು ಈ ಜ್ಞಾನದ ಕಡೆಗೆ ತರಬಲ್ಲೆಯಾದರೆ, ಅದು ಅತ್ಯುತ್ತಮವಾದುದು.  
ಜನರು ಅಷ್ಟಾವಕ್ರ ಗೀತೆಯನ್ನು ಕೇಳುವಾಗ, ತಮ್ಮ ಜೀವನವು ಪರಿವರ್ತನೆಯಾಯಿತೆಂದು ಅವರು ಹೇಳುತ್ತಾರೆ. ನಿಮ್ಮಲ್ಲಿ ಎಷ್ಟು ಮಂದಿಗೆ ಇದರ ಅನುಭವವಾಗಿದೆ? (ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ) ನೀವು ಅಷ್ಟಾವಕ್ರ ಗೀತೆಯನ್ನು ಕೇಳುವಾಗ, ಜೀವನದ ಕಡೆಗಿರುವ ನಿಮ್ಮ ಸಂಪೂರ್ಣ ಹೊರನೋಟ ಬದಲಾಗುತ್ತದೆ.

ಬುಧವಾರ, ಜನವರಿ 2, 2013

ಪ್ರೀತಿಯು ಕಲ್ಲನ್ನೂ ಕರಗಿಸಬಲ್ಲದು


೦೨ ಜನವರಿ ೨೦೧೩
ಬರ್ಲಿನ್, ಜರ್ಮನಿ

ಪ್ರ: ತಾವು ಸರ್ವವ್ಯಾಪಿ ಮತ್ತು ಸರ್ವಜ್ಞಾನಿಗಳೆಂದು ಹಲವಾರು ಕತೆಗಳಿಂದ ತಿಳಿದಿದ್ದೇನೆ. ಇದು ಕೆಲವೊಮ್ಮೆ ನನಗೆ ಭಯ ಹುಟ್ಟಿಸುತ್ತದೆ ಏಕೆಂದರೆ ನಾನು ಮಾಡುವ ತಪ್ಪುಗಳೆಲ್ಲವನ್ನು ತಿಳಿಯುವಿರೆಂದು. ನನ್ನ ತಪ್ಪುಗಳ ಬಗ್ಗೆ ನಿಮ್ಮ ನಿಲುವೇನು? ನಾನು ಮತ್ತೆ ಮತ್ತೆ ತಪ್ಪು ಮಾಡಿದರೆ ನಿಮಗೆ ಕೋಪವೇ?
ಶ್ರೀಶ್ರೀರವಿಶಂಕರ್: ಖಂಡಿತ ಇಲ್ಲ.
ಗುರುಗಳಿಗಿಂತ ಭಕ್ತರು ಹೆಚ್ಚು ಬಲಶಾಲಿಗಳೆಂದು ನಿಮಗೆ ಗೊತ್ತೆ? ಹೌದು, ಅದು ಹಾಗೆಯೇ.
ನೀವು ಗುರುವಿನ ಹಲವಾರು ಕತೆಗಳನ್ನು ಕೇಳಿರಬಹುದು, ಆದರೆ ನನ್ನ ಬಳಿ ಅನೇಕ ಭಕ್ತರ ಕತೆಗಳಿವೆ. ಅವುಗಳಲ್ಲಿ ಒಂದನ್ನು ನಿಮ್ಮೊಂದಿಗೀಗ ಹಂಚಿಕೊಳ್ಳುತ್ತೇನೆ.
ನವಂಬರ್ ತಿಂಗಳ ಕಡೆಯ ವಾರದಲ್ಲಿ ಮಹಾರಾಷ್ಟ್ರದ ನಿರ್ಜನ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದೆನು, ಎಂದೂ ಭೇಟಿ ನೀಡಿರದ ಕೆಲವು ಹಳ್ಳಿ ಮತ್ತು ಜಿಲ್ಲೆಗಳು. ಬಹಳಷ್ಟು ಜನ ನನ್ನನ್ನು ಭೇಟಿ ಮಾಡಲು ಬಂದರು.
ಒಂದು ಹಳ್ಳಿಯಲ್ಲಿ ನನ್ನ ಕಾರ್ಯದರ್ಶಿಗೆ ಹೇಳಿದೆ, ‘ಮೂವರು ತಮ್ಮ ಮೊಬೈಲ್‍ಗಳನ್ನು ಕಳೆದುಕೊಂಡಿದ್ದಾರೆ ಮತ್ತು ಅವರೆಲ್ಲರೂ ಬಡವರು. ಆದ್ದರಿಂದ ನನ್ನ ಬ್ಯಾಗಿಗೆ ಮೂರು ಹೊಸ ಮೊಬೈಲ್‍ಗಳನ್ನು ಹಾಕು.’
ಹೀಗೆ ನಾನು ಮೂರು ಹೊಸ ಮೊಬೈಲ್‍ಗಳನ್ನು ತೆಗೆದುಕೊಂಡಿದ್ದೆ, ಏಕೆಂದರೆ ಅವರೆಲ್ಲರೂ ಫ಼ೋನ್‍ಗಳನ್ನು ಕಳೆದುಕೊಂಡಿದ್ದಾರೆಂದು.
ಕಾರ್ಯಕ್ರಮದ ನಂತರ ಸ್ವಯಂಸೇವಕರನ್ನು ಭೇಟಿ ಮಾಡುವ ಸಮಯದಲ್ಲಿ, ನಾನು ಹೇಳಿದೆ, ‘ಇಲ್ಲಿ ಕೆಲವರು ನಿಮ್ಮ ಮೊಬೈಲ್‍ಗಳನ್ನು ಕಳೆದುಕೊಂಡಿದ್ದೀರ. ನನಗೆ ತಿಳಿದಿದೆ. ಯಾರು ಯಾರು ಫ಼ೋನ್‍ಗಳನ್ನು ಕಳೆದುಕೊಂಡಿದ್ದಾರೋ ಎದ್ದು ನಿಲ್ಲಿ.’ ಮೂವರು ಮಾತ್ರ ಎದ್ದು ನಿಂತರು.
ಅವರಲ್ಲಿ ಒಬ್ಬ ಮಹಿಳೆಯು ಎದ್ದು ನಿಂತಿದ್ದಳು. ನಾನು ಅವಳಿಗೆ ಹೇಳಿದೆ, ‘ನೋಡು, ಕಳೆದ ಗುರುವಾರ ನನ್ನ ಫ಼ೋಟೋ ಮುಂದೆ ನಿಂತು ನೀನು ಅಳುತ್ತಿದ್ದೆ. ಏನು ಮಾಡಬೇಕೆಂದು ತಿಳಿದಿರಲಿಲ್ಲ, ಹೇಗೆ ಮನೆಯವರಿಗೆ ಮುಖ ತೋರಿಸುವುದು ಏಕೆಂದರೆ ದುಬಾರಿಯ ಫ಼ೋನ್ ಕಳೆದುಕೊಂಡಿದ್ದೆ, ಎರಡು-ಮೂರು ತಿಂಗಳ ಆದಾಯದಷ್ಟಿರಬಹುದು. ತೊಗೋ, ಈ ಹೊಸದನ್ನು.’
ನಾನು ಹೀಗೆ ಮಾಡುತ್ತಿರುವಾಗ, ಒಂದು ಗುಂಪಿನಿಂದ ಹುಡುಗನೊಬ್ಬ ಬಂದು ತನ್ನ ಕತೆಯನ್ನು ಹಂಚಿಕೊಂಡ. ಅವನು ಅಡ್ವಾನ್ಸ್ ಕೋರ್ಸ್ ನಲ್ಲಿದ್ದಾಗ, ಮನೆಯಲ್ಲಿದ್ದ ಹೆಂಡತಿಯೊಂದಿಗೆ ಅವನು ಮಾತನಾಡಬೇಕಿತ್ತು. ಅವನ ಫ಼ೋನ್‍ನಲ್ಲಿ ಬ್ಯಾಟರಿ ಇರಲಿಲ್ಲ ಮತ್ತು ಚಾರ್ಜರ್ ತರಲು ಮರೆತಿದ್ದ. ಅದಕ್ಕಾಗಿ ಅವನು ಫ಼ೋನ್ ಅನ್ನು ನನ್ನ ಫ಼ೋಟೋ ಮುಂದಿಟ್ಟು, ‘ಗುರೂಜೀ, ನನ್ನ ಫ಼ೋನ್ ಚಾರ್ಜ್ ಆಗಲಿ’ ಎಂದು ಕೇಳಿಕೊಂಡನು.
ಮರುದಿನ ಬೆಳಿಗ್ಗೆ ಅವನೆದ್ದು ನೋಡಿದಾಗ ಅವನ ಫ಼ೋನ್ ಚಾರ್ಜ್ ಆಗಿತ್ತು.
ಆ ಹುಡುಗ ಅವನ ಫ಼ೋನ್ ತೋರಿಸಿ ಹೇಳಿದ, ‘ನೋಡಿ, ಕಳೆದ ಒಂದೂವರೆ ವರ್ಷದಿಂದ ನಾನು ಚಾರ್ಜರ್ ಅನ್ನು ಬಿಸಾಕಿ, ಫ಼ೋನ್ ಅನ್ನು ನಿಮ್ಮ ಭಾವಚಿತ್ರದ ಮುಂದಿಡುತ್ತಿದ್ದೇನೆ, ಅದು ಚಾರ್ಜ್ ಆಗುತ್ತೆ.’
ಚಾರ್ಜರ್ ಅನ್ನು ಬಿಸಾಕಿದ್ದಾನೆ!
ನಾನು ನುಡಿದೆ, ‘ಇದೊಂದು ಅಚ್ಚರಿಯ ಸಂಗತಿ. ನನ್ನ ಫ಼ೋನಿಗೂ ಚಾರ್ಜರ್ ಬೇಕು, ಆದರೆ ನನ್ನ ಭಕ್ತ ತನ್ನ ಫ಼ೋನ್ ಅನ್ನು ನನ್ನ ಭಾವಚಿತ್ರದ ಮುಂದಿಟ್ಟು ಚಾರ್ಜ್ ಮಾಡುತ್ತಾನೆ.’
ನೋಡಿ, ಭಕ್ತರು ಎಷ್ಟು ಬಲಶಾಲಿಗಳಾಗಬಹುದೆಂದು.
ಇದನ್ನು ಏಕೆ ಹೇಳುತ್ತಿರುವೆನೆಂದರೆ ನಮ್ಮ ಭಾವನೆಗಳು, ನಮ್ಮ ಭಕ್ತಿ ಮತ್ತು ಪ್ರೀತಿಯೇ ಇದನ್ನು ಸೃಷ್ಟಿಸಲು ಸಾಧ್ಯ.
ನಿಮ್ಮೊಂದಿಗೆ ಇನ್ನೊಂದು ಕತೆಯನ್ನು ಹಂಚಿಕೊಳ್ಳುತ್ತೇನೆ. ನಾನು ದಕ್ಷಿಣ ಆಫ್ರಿಕಾದಲ್ಲಿ ಮತ್ತೊಬ್ಬರ ಮನೆಯಲ್ಲಿ ಅತಿಥಿಯಾಗಿ ತಂಗಿದ್ದೆ. ಹತ್ತು ವರ್ಷಗಳ ಹಿಂದಿನ ಕತೆಯಿದು. ಜೋಹಾನ್ಸ್‍ಬರ್ಗ್‍ನಿಂದ ತೆರಳುವಾಗ, ಲಗ್ಗೇಜ್ ಪ್ಯಾಕ್ ಮಾಡಿಕೊಳ್ಳುತ್ತಿರುವಾಗ,  ಹಠಾತ್ತನೆ ಭಕ್ತರು ತಂಗಿದ್ದ ಕೊಠಡಿಗೆ  ಹೋಗಿ, ಅಲ್ಲಿ ಅತ್ತಿಂದಿತ್ತ ಹುಡುಕಾಡ ತೊಡಗಿದೆ. ಸಾಮಾನ್ಯವಾಗಿ ನಾನೆಂದೂ ಬೇರೆಯವರ ಕೊಠಡಿಗೆ ಹೋಗುವುದಿಲ್ಲ. ಗುರುಗಳು ತಮ್ಮ ಕೊಠಡಿಗೆ ಏಕೆ ಬಂದರೆಂದು ಜನರಿಗೆ ಗಾಬರಿ ಮತ್ತು ಆಶ್ಚರ್ಯವಾಯಿತು. ಸ್ವಲ್ಪ ಯೋಚಿಸಿ, ನಾನು ನಿಮ್ಮ ಹೋಟಲ್ ನ ಕೊಠಡಿಗೆ ಆಕಸ್ಮಿಕವಾಗಿ ಬಂದರೆ, ನಿಮಗೆ ಗಾಬರಿಯಾಗುತ್ತದೆ.
ಅವರಿಗೆ ಗಾಬರಿ, ‘ಗುರೂಜೀ ಏಕೆ ಇಲ್ಲಿಗೆ ಬಂದ್ದಿದ್ದಾರೆ ಮತ್ತು ಗೊಂದಲದಲ್ಲಿದ್ದಾರೆ, ಏನನ್ನು ಹುಡುಕುತ್ತಿದ್ದಾರೆ?’
ಆಗ ಅಲ್ಲೊಂದು ಟೀ ಪೊಟ್ಟಣ ಕಾಣಿಸಿತು, ‘ಇದು ಯಾರದು?’ ಎಂದು ಕೇಳಿದೆ.
ಅವರು, ‘ನಮಗೆ ಗೊತ್ತಿಲ್ಲ. ಯಾರದೋ ಇರಬಹುದು’ ಎಂದರು.
ನಾನು ಯಾವತ್ತೂ ಟೀ ಕುಡಿಯುವುದಿಲ್ಲ, ಆದರೂ ಟಿ ಪೊಟ್ಟಣ ತೆಗೆದುಕೊಂಡು ನನ್ನ ಸೂಟ್‍ಕೇಸ್ ನಲ್ಲಿ ಹಾಕಿಕೊಂಡೆ. ನಂತರವೇ ಉಸಿರಾಡಲು ಸಾಧ್ಯವಾಯಿತು.
ಆ ಟೀ ಪೊಟ್ಟಣ ಸಿಗುವ ತನಕ ನಾನು ಬಹಳ ಚಡಪಡಿಸುತ್ತಿದ್ದೆ. ಜನರಿಗೆ ಇದು ಸ್ವಲ್ಪ ವಿಚಿತ್ರವೆನಿಸಿತು, ಗುರುಜೀ ಹೇಗೆ ಒಂದು ಟೀ ಪೊಟ್ಟಣವನ್ನು ಕದ್ದುಕೊಂಡು ಹೋದರು, ಅದು ನಮ್ಮದಲ್ಲವೆಂದು, ಬೇರೆಯವರದೆಂದು ತಿಳಿದ ಮೇಲೂ.
ಡರ್ಬನ್‍ನಿಂದ  ಜೋಹಾನ್ಸ್‍ಬರ್ಗ್‍ಗೆ  ಇಳಿದ ಮೇಲೆ, ಒಬ್ಬ ಹಿರಿಯ ಸಜ್ಜನರು ವಿಮಾನ ನಿಲ್ದಾಣಕ್ಕೆ ಬಂದು ಭೇಟಿ ಮಾಡಿ ಹೇಳಿದರು, ‘ಗುರೂಜೀ, ನಾನು ಕಳುಹಿಸಿದ ಟೀ ಪೊಟ್ಟಣ ನಿಮಗೆ ತಲುಪಿತೇ? ಅದು ವಿಶಿಷ್ಠವಾದ ಟೀ. ನಾನು ಖುದ್ದಾಗಿ ನಿಂತು ಆರಿಸಿದ್ದು, ಅದನ್ನು ನಿಮಗೆ ನೀಡಬೇಕೆಂದು ಬಯಸಿದೆ. ಡರ್ಬನ್‍ಗೆ ಬರಲು ನನಗೆ ಸಾಧ್ಯವಾಗದೇ ಇದ್ದುದ್ದರಿಂದ ಬೇರೊಬ್ಬರ ಕೈಯಲ್ಲಿ ಕಳುಹಿಸಿದೆ.’
ಹೀಗೆ ಅದನ್ನು ಬೇರೆಯವರ ಕೈಯಲ್ಲಿ ಕಳುಹಿಸಿದ್ದರು ಮತ್ತು ಅದನ್ನು ಇನ್ನೊಂದು ಕೊಠಡಿಯಲ್ಲಿಟ್ಟಿದ್ದರು ಏಕೆಂದರೆ ನಾನು ಟೀ ಕುಡಿಯುವುದಿಲ್ಲವೆಂದು ಗೊತ್ತಿದ್ದರಿಂದ ನನಗೆ ಈ ವಿಷಯವನ್ನು ತಿಳಿಸಲಿಲ್ಲ. ನಂತರ ನಾನು, ‘ಹೌದು, ನನಗೆ ಆ ಟೀ ಪೊಟ್ಟಣ ತಲುಪಿದೆ’ ಎಂದು ನುಡಿದೆ.
ಇದರ ಅರ್ಥ ನಿಮ್ಮ ಭಾವನೆ ಮತ್ತು ಉದ್ವೇಗಗಳು ಬಹಳ ತೀಕ್ಷ್ಣವಾಗಿದ್ದರೆ, ನಾನು ಕೈ ಗೊಂಬೆಯಾಗುತ್ತೇನೆ. ಆದ್ದರಿಂದ ನಾನು ಆ ಟೀ ಪೊಟ್ಟಣವನ್ನು ಪಡೆಯಬೇಕಿತ್ತು.
ನಾನು ಹೇಗೆ ಟೀ ಪೊಟ್ಟಣವನ್ನು ಕದಿಯಬೇಕಾಯಿತೆಂಬ ಕತೆ ಇದು, ನಿಜವಾದ ಕಳ್ಳತನವಲ್ಲ. ಅದು ನನಗೆ ಸೇರಿದ್ದು, ಆದರೆ ಆ ಕ್ಷಣದಲ್ಲಿ ಇತರರಿಗೆ ನಾನೇನನ್ನೋ ಕದಿಯುತ್ತಿರುವಂತೆ ಭಾಸವಾಯಿತು.
ಈ ರೀತಿ ಅನೇಕ ಘಟನೆಗಳಿವೆ.
ನೋಡಿ, ಒಮ್ಮೆ ದೆಹಲಿಯಲ್ಲಿ ಒಂದು ವಿಶಾಲವಾದ ಸಭಾಂಗಣದಲ್ಲಿದ್ದೆ. ಅಲ್ಲಿ ಭಾರಿ ಜನ ಸಂದಣಿಯಿತ್ತು. ಕಾರ್ಯಕ್ರಮದ ಬಳಿಕ ಅವರೆಲ್ಲರೂ ಸಾಲಾಗಿ ಹೋಟಲ್ ಲಾಭಿಯಲ್ಲಿ ನಿಂತಿದ್ದರು.
ನನ್ನ ಬೆಂಗಾವಲಾಗಿ ಬರಬೇಕಿದ್ದ ಜನರಿಗೆ ಅನಿಸಿತು, ‘ಓಹ್, ಬಹಳ ಜನ ಸಂದಣಿಯಿದೆ. ತುಂಬಾ ಸಮಯ ಹಿಡಿಯಬಹುದು ಮತ್ತು ಗುರೂಜೀಯವರು ಇನ್ನೊಂದು ವಿಮಾನ ಹತ್ತಬೇಕಾಗಿದೆ.’
ಅದಕ್ಕಾಗಿ ಅವರು ಜನರನ್ನು ಕೌಶಲ್ಯದಿಂದ ನಿಭಾಯಿಸಲು ನಿರ್ಧರಿಸಿ, ನನ್ನನ್ನು ನೆಲಮಾಳಿಗೆಯಿಂದ ನೇರವಾಗಿ ಕಾರ್ ಸಮೀಪಕ್ಕೆ ಕರೆದುಕೊಂಡು ಹೋಗಿ, ಅಲ್ಲಿಂದ ಹೊರಟೆವು.
ನಾನಿರದ ಕಾರಣ ಅಲ್ಲಿ ನೆರೆದಿದ್ದ ಸಾವಿರಾರು ಜನರಿಗೆ ನಿರಾಸೆಯಾಯಿತು ಮತ್ತು ನಾನು ಅಸ್ವಸ್ಥನಾದೆನು.
ಜನರು ಸಿಟ್ಟಾದರು, ಘಾಸಿಗೊಂಡರು ಮತ್ತು ಆ ಇಡೀ ದಿನ ನನಗೆ ತಲೆ ಸಿಡಿತವಾಗಿ ಅಸ್ವಸ್ಥನಾದೆನು. ನನ್ನನ್ನು ನೇರವಾಗಿ ಕಾರಿಗೆ ಮತ್ತು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋದ ಜನರನ್ನು ಕೇಳಿದೆ, ‘ಏಕೆ ಹೀಗೆ ಮಾಡಿದಿರಿ? ನಾನು ಯಾರನ್ನೂ ನಿರಾಶೆಗೊಳಿಸಲು ಬಯಸುವುದಿಲ್ಲ. ನಾನು ಎಂದೂ ಯಾರನ್ನೂ ನಿರಾಶೆಗೊಳಿಸಿಲ್ಲ.’
ಇದನ್ನು ನಾನೇಕೆ ಹೇಳುತ್ತಿರುವೆನೆಂದರೆ ನಿಮ್ಮ ಭಾವನೆ ಮತ್ತು ಪ್ರೀತಿಯು ಬಹಳ ಬಲವಾಗಿದ್ದರೆ, ಕಲ್ಲನ್ನು ಕೂಡ ಕರಗಿಸಬಹುದು, ತಿಳಿಯಿತೇ?
ಹೀಗೆ ಅನೇಕ ಕತೆಗಳಿವೆ.
ಆದ್ದರಿಂದಲೇ ಧ್ಯಾನವನ್ನು ಅಭ್ಯಾಸ ಮಾಡುವವರು ಬಹಳ ಜಾಗರೂಕರಾಗಿರಬೇಕು. ಎಂದಿಗೂ ಯಾರನ್ನೂ ನಿಂದಿಸಬಾರದು. ಯಾವ ಕೆಟ್ಟ ಮಾತುಗಳನ್ನೂ ಆಡಬೇರಾದು. ನಿಮ್ಮ ಬಾಯಿಂದ ಯಾವ ಕೆಟ್ಟ ಮಾತು ಬರಬಾರದು.
ನಿಮಗೆ ಗೊತ್ತೇ ನಾನು ನನ್ನ ಇಡೀ 56 ವರ್ಷಗಳಲ್ಲಿ ಒಂದು ಕೆಟ್ಟ ಮಾತನ್ನೂ ಆಡಿಲ್ಲ, ಎಂದಿಗೂ ಇಲ್ಲ. ಅದಕ್ಕೆ ಪ್ರಶಂಸೆ ತೆಗೆದುಕೊಳ್ಳಲಾರೆ; ಅದು ಸುಮ್ಮನೆ ಬರುವುದಿಲ್ಲ.
ಕೆಟ್ಟದೇನಾದರೂ ಆಡಿರುವುದೆಂದರೆ, ‘ನೀನೊಬ್ಬ ಮೂರ್ಖ’ ಎಂದಷ್ಟೇ.
ನಾನು ಯಾರನ್ನಾದರೂ ನಿಂದಿಸಿರುವುದನ್ನು ನೀವೆಂದಿಗೂ ನೋಡಿರಲಾರಿರಿ, ನನ್ನ ಮನಸ್ಸಿನಲ್ಲೂ ಕೂಡ ನಿಂದಿಸಿಲ್ಲ.
ಧ್ಯಾನವನ್ನು ಅಭ್ಯಾಸಿಸುವವರು ಸಾಧ್ಯವಾದಷ್ಟು ನಿಮ್ಮ ಮಾತುಗಳನ್ನು ನಿಂದನೆಯಿಂದ ಮುಕ್ತಗೊಳಿಸಿ. ಏಕೆಂದರೆ ನಿಮ್ಮ ಮಾತುಗಳಲ್ಲಿ ಶಕ್ತಿಯಿರುತ್ತದೆ. ನೀವು ಧ್ಯಾನ ಮಾಡಿದಂತೆ ಹರಸುವ ಮತ್ತು ಶಪಿಸುವ ಸಾಮರ್ಥ್ಯವನ್ನು ಗಳಿಸುವಿರಿ.
ಮೊದಲಿಗೆ ಶಪಿಸುವ ಸಾಮಥ್ರ್ಯ ಪಡೆಯುವಿರಿ ನಂತರ ಹರಸುವ ಸಾಮಥ್ರ್ಯವನ್ನು ಪಡೆಯುವಿರಿ. ಆದ್ದರಿಂದಲೇ ಧ್ಯಾನವನ್ನು ಅಭ್ಯಾಸಿಸುವರು ಯಾರ ಬಗ್ಗೆಯೂ ಕೆಟ್ಟದ್ದನ್ನು ಯೋಚಿಸಬಾರದು, ಯಾರನ್ನೂ ನಿಂದಿಸಬಾರದು ಮತ್ತು ಸಕಾರಾತ್ಮಕವಾಗಿರಬೇಕೆಂಬ ನಿಯಮವಿದೆ.
ಎಂದೂ ಕೋಪ ಮಾಡಿಕೊಳ್ಳಲೇಬಾರದೆಂದು ಹೇಳುತ್ತಿಲ್ಲ. ಕೋಪವು ಜೀವನದ ಒಂದು ಭಾಗವಾಗಿದೆ. ಆದರೆ ನೀವು ಕೋಪಗೊಂಡಾಗಲೂ ನಿಮ್ಮ ತುಟಿ ಮತ್ತು ನಾಲಿಗೆ ನಿಮ್ಮ ಹತೋಟಿಯಲ್ಲಿರಲಿ.
ಕೆಲವು ಬಾರಿ ಅನಿವಾರ್ಯವಾಗಿ ನೀವು ಸಿಟ್ಟಾಗಬೇಕಾಗಬಹುದು, ಆದರೆ ನಿಮ್ಮ ಬಾಯಿಂದ ಕೆಟ್ಟ ಪದಗಳು ಹೊರ ಬರಲು ಬಿಡಬೇಡಿ.
ಏಕೆ?
ನೀವು ಕೆಟ್ಟ ಮಾತುಗಳನ್ನಾಡಿದಾಗ ನಿಮ್ಮ ಉತ್ತಮ ಶಕ್ತಿಯನ್ನು ಹೆಚ್ಚಾಗಿ ಕಳೆದುಕೊಳ್ಳುತ್ತೀರ.
ಸ್ವಲ್ಪ ಯೋಚಿಸಿ, ಕೆಲವೇ ಕೆಲವು ಮಾತುಗಳಿಂದ ನಿಮ್ಮ ಒಂದು ತಿಂಗಳ ಧ್ಯಾನದ ಶಕ್ತಿಯನ್ನು ಕಳೆದುಕೊಳ್ಳುತ್ತೀರ. ಇದು ಲಾಭದಾಯಕವಾಗಿರುವುದೇ? ಒಂದು ಡಾಲರ್ ಮೌಲ್ಯದ ಕೋಕ್ ಪಾನೀಯವನ್ನು ಪಡೆಯಲು ಒಂದು ಸಾವಿರ ಡಾಲರುಗಳನ್ನು ವೆಚ್ಚ ಮಾಡಿದಂತೆ.
ಆದ್ದರಿಂದ ನಿಮ್ಮ ಶಕ್ತಿ, ಬಲ ಮತ್ತು ಸಂಕಲ್ಪವನ್ನು ಕಡೆಗಾಣಿಸಬೇಡಿ. ಧ್ಯಾನ ಮಾಡಿದಾಗ ನಿಜವಾಗಿಯೂ ನೀವು ಹೆಚ್ಚು ಶಕ್ತಿಯನ್ನು ಪಡೆಯುತ್ತೀರ.  ಆದ್ದರಿಂದಲೇ ಪುರಾತನ ಭಾರತದಲ್ಲಿ ಋಷಿಗಳು ಮತ್ತು ಗುರುಗಳೆಲ್ಲರೂ ಶಿಷ್ಯರನ್ನು ಸೇರಿಸಿಕೊಳ್ಳುತ್ತಿರಲಿಲ್ಲ, ಅವರು ಬಲಶಾಲಿಗಳಾಗುತ್ತಾರೆಂಬ ಕಾರಣಕ್ಕಾಗಿ. ಮತ್ತು ಅವರು ನಿಯಮಗಳನ್ನು ಪಾಲಿಸದಿದ್ದರೆ, ಅದು ಸಮಸ್ಯೆಯಾಗಿ ಪರಿಣಮಿಸಬಹುದು. ಹೀಗಾಗಿ ಜ್ಞಾನವನ್ನು ಎಲ್ಲರಿಗೂ ನೀಡುತ್ತಿರಲಿಲ್ಲ. ಅನೇಕ ಪರೀಕ್ಷೆಗಳನ್ನೊಡ್ಡಿ, ಅದರಲ್ಲಿ ಉತ್ತೀರ್ಣರಾದರೆ, ನಂತರ ಧ್ಯಾನ ಮತ್ತಿತರ ಜ್ಞಾನವನ್ನು ನೀಡುತ್ತಿದ್ದರು.

ಮಂಗಳವಾರ, ಜನವರಿ 1, 2013

ಧ್ಯಾನದ ಐದು ಹಂತಗಳು


೦೧ ಜನವರಿ ೨೦೧೩
ಬರ್ಲಿನ್, ಜರ್ಮನಿ

ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
ಹೊಸ ವರ್ಷವನ್ನು ಧ್ಯಾನದೊಂದಿಗೆ ಆಚರಿಸುವುದು ಉತ್ತಮ.
ಧ್ಯಾನ ಎಂದರೇನು? ಯಾವ ಸ್ಥಿತಿಯಿಂದ ಎಲ್ಲವೂ ಬಂದಿರುವುದೋ ಮತ್ತು ಲೀನವಾಗುವುದೋ ಅದೇ ಧ್ಯಾನ. ಯಾವುದರಿಂದ ಸುಖ, ಸಂತೋಷ, ಶಾಂತಿ ಇತ್ಯಾದಿಗಳನ್ನು ಅನುಭವಿಸುವಿರೋ ಆ ಆಂತರ್ಯದ ಮೌನವೇ ಧ್ಯಾನ.
ನಿಮಗೆ ಗೊತ್ತೇ, ಮೂರು ಬಗೆಯ ಜ್ಞಾನವಿದೆ.
ಮೊದಲನೆಯದು ನಮ್ಮ ಇಂದ್ರಿಯಗಳ ಮೂಲಕ ಪಡೆಯುವ ಜ್ಞಾನ. ಪಂಚೇಂದ್ರಿಯಗಳು ಜ್ಞಾನವನ್ನು ನೀಡುತ್ತದೆ. ನೋಡುವುದರ ಮೂಲಕ, ಕೇಳುವುದರ ಮೂಲಕ, ಸ್ಪರ್ಶದಿಂದ, ಆಘ್ರಾಣಿಸುವುದರಿಂದ ಮತ್ತು ರುಚಿಯಿಂದ ಜ್ಞಾನವನ್ನು ಪಡೆಯುತ್ತೇವೆ.
ಆದ್ದರಿಂದ ಇಂದ್ರಿಯಗಳ ಮುಖಾಂತರ ಜ್ಞಾನವನ್ನು ಪಡೆಯುತ್ತೇವೆ. ಇದು ಒಂದು ಹಂತದ ಜ್ಞಾನ.

ಎರಡನೆಯದು ಬುದ್ಧಿಯ ಮೂಲಕ ಜ್ಞಾನ.
ಇಂದ್ರಿಯಗಳಿಂದ ಪಡೆಯುವ ಜ್ಞಾನಕ್ಕಿಂತ ಬುದ್ಧಿಯ ಮೂಲಕ ಪಡೆಯುವ ಜ್ಞಾನ ಶ್ರೇಷ್ಠವಾದುದು.
ಸೂರ್ಯ ಹುಟ್ಟುವುದು ಮತ್ತು ಮುಳುಗುವುದನ್ನು ನೋಡುತ್ತೀವಿ ಆದರೆ ಬುದ್ಧಿಶಕ್ತಿಯ ಮೂಲಕ ನಾವು ತಿಳಿಯುತ್ತೇವೆ ಅದು ಹುಟ್ಟುವುದೂ ಇಲ್ಲ ಮುಳುಗುವುದೂ ಇಲ್ಲವೆಂದು.
ಒಂದು ಪೆನ್ ಅನ್ನು ನೀರಿನಲ್ಲಿಟ್ಟಾಗ ಅದು ಬಾಗಿದಂತೆ ಕಾಣಿಸುತ್ತದೆ. ಆದರೆ ಬುದ್ಧಿಯ ಜ್ಞಾನದಿಂದ ತಿಳಿಯುತ್ತೇವೆ ಅದು ಬಾಗಿಲ್ಲ, ಕೇವಲ ದೃಷ್ಟಿಭ್ರಮೆಯೆಂದು.
ಆದ್ದರಿಂದ ಬುದ್ಧಿಯ ಜ್ಞಾನವು ಶ್ರೇಷ್ಠ.

ನಂತರ ಮೂರನೆಯ ಹಂತದ ಜ್ಞಾನ, ಮತ್ತಷ್ಟು ಉನ್ನತವಾದುದು, ಅಂತರ್ಬೋಧೆ. ನಿಮ್ಮ ಹೊಟ್ಟೆಯಿಂದ ಏನನ್ನೋ ತಿಳಿಯುವಿರಿ.
ಆಳವಾದ ಮೌನದಿಂದ ಏನನ್ನೋ ತಿಳಿಯುವಿರಿ, ಸೃಜನತೆ ಮೂಡುವುದು ಅಥವಾ ಯಾವುದನ್ನೋ ಅನ್ವೇಷಿಸುವಿರಿ. ಇವೆಲ್ಲವೂ ಆ ಮೂರನೆಯ ಹಂತದ ಜ್ಞಾನ, ಚೇತನದಿಂದ ಸಾಧ್ಯ.
ಧ್ಯಾನ ಮೂರನೆಯ ಹಂತದ ಜ್ಞಾನಕ್ಕೆ ದ್ವಾರವನ್ನು ತೆರೆಯುವುದು. ಮತ್ತು ಮೂರನೆಯ ಹಂತದ ಆನಂದಕ್ಕೂ ದ್ವಾರ ತೆರೆಯುವುದು.

ಆನಂದದಲ್ಲಿ ಮೂರು ವಿಧ.

ನಮ್ಮ ಇಂದ್ರಿಯಗಳು ವಿಷಯ ವಸ್ತುಗಳಲ್ಲಿ ಆಸಕ್ತಿಯುಳ್ಳದ್ದಾಗಿದ್ದರೆ, ಅಂದರೆ ನಿಮ್ಮ ಕಣ್ಣುಗಳು ನೋಡುವುದರಲ್ಲಿ ಆಸಕ್ತಿ ಹೊಂದಿದ್ದರೆ, ನಿಮ್ಮ ಕಿವಿಗಳು ಕೇಳುವುದರಲ್ಲಿ ಆಸಕ್ತಿ ಹೊಂದಿದ್ದರೆ, ನಮಗೆ ನೋಡುವುದರಿಂದ, ಕೇಳುವುದರಿಂದ, ರುಚಿಯಿಂದ ಅಥವಾ ಸ್ಪರ್ಶದಿಂದ ಸಂತೋಷ ಸಿಗುತ್ತದೆ. ಇಂದ್ರಿಯಗಳಿಂದ ಸ್ವಲ್ಪ ಸಂತೋಷ ಪಡೆಯುತ್ತೇವೆ, ಆದರೆ ಇಂದ್ರಿಯಗಳ ಮೂಲಕ ಸಂತೋಷಿಸುವ ಸಾಮಥ್ರ್ಯ ಸೀಮಿತವಾಗಿದೆ.
ನೋಡಿ, ಮೊದಲ ಮಿಠಾಯಿ ತಿನ್ನುವಾಗ ಬಹಳ ರುಚಿಯಾಗಿರುತ್ತದೆ. ಎರಡನೆಯದು ಪರವಾಗಿಲ್ಲ. ಮೂರನೆಯದು ಹೆಚ್ಚೆನಿಸುತ್ತದೆ, ಮತ್ತು ನಾಲ್ಕನೆಯದು ಯಾತನೆಯೆನಿಸುತ್ತದೆ.
ಏಕೆ? ಎಲ್ಲವೂ ಒಂದೇ ಬೇಕರಿಯಿಂದ ತಯಾರಿಸಲ್ಪಟ್ಟಿರುತ್ತದೆ ಆದರೆ ಸಂತೋಷಿಸುವ ಸಾಮಥ್ರ್ಯ ಕ್ಷೀಣವಾಗುತ್ತದೆ. ಹಾಗೆಯೇ ಇಂದ್ರಿಯಗಳ ವಿಷಯದಲ್ಲೂ- ದೃಷ್ಟಿ, ಸ್ಪರ್ಶ, ಘ್ರಾಣ, ರುಚಿ ಮತ್ತು ಶ್ರವಣ; ಇವುಗಳಿಂದ ಪಡೆಯುವ ಸಂತೋಷ ಸೀಮಿತವಾಗಿರುತ್ತದೆ. ಅಲ್ಲವೇ?

ಎರಡನೆಯ ಹಂತದ ಸಂತೋಷ ನೀವು ಸೃಜನಾತ್ಮಕವಾದುದನ್ನು ಮಾಡಿದಾಗ; ಒಳ್ಳೆಯದನ್ನು ಅನ್ವೇಷಿಸಿದಾಗ, ಇಲ್ಲವೇ ಕವಿತೆಯನ್ನು ರಚಿಸಿದಾಗ, ಅಥವಾ ಹೊಸ ತಿಂಡಿಯನ್ನು ತಯಾರಿಸಿದಾಗ.
ಯಾವುದು ಸೃಜನಶೀಲತೆಯಿಂದ ಬರುವುದೋ ಅದು ನಿರ್ದಿಷ್ಟವಾದ ಸಂತೋಷವನ್ನುಂಟು ಮಾಡುತ್ತದೆ.
ಶಿಶುವೊಂದು ಜನಿಸಿದಾಗ, ಅದು ಮೊದಲನೆಯದಾಗಿರಲಿ ಅಥವಾ ಮೂರನೆಯದಾಗಿರಲಿ ನಿರ್ದಿಷ್ಟವಾದ ಸಂಭ್ರಮವನ್ನುಂಟು ಮಾಡುತ್ತದೆ; ಒಂದು ನಿರ್ದಿಷ್ಟವಾದ ಆನಂದವನ್ನು ತರುತ್ತದೆ.

ಇನ್ನು ಮೂರನೆಯ ಬಗೆಯ ಸಂತೋಷ. ಎಂದಿಗೂ ಕುಂದದ, ಇಂದ್ರಿಯಗಳಿಂದ ಅಥವಾ ಸೃಜನತೆಯಿಂದ ಜನಿಸದ, ಆದರೆ ಆಳವಾದ ಮತ್ತು ನಿಗೂಢತೆಯಿಂದ ಬರುವ ಆನಂದ.
ಹಾಗೆಯೇ, ಶಾಂತಿ, ಜ್ಞಾನ ಮತ್ತು ಆನಂದ, ಈ ಮೂರು ಬೇರೊಂದು ಸ್ತರದಿಂದ ಬರುವುದು.
ಮತ್ತು ಅದು ಎಲ್ಲಿಂದ ಬರುವುದೋ, ಅದರ ಮೂಲ, ಧ್ಯಾನ.

ಧ್ಯಾನಕ್ಕೆ ಐದು ಮುಖ್ಯವಾದ ನಿಯಮಗಳಿವೆ.

ಆ ನಿಯಮಗಳು ಯಾವುದೆಂದರೆ, ಮುಂದಿನ ಹತ್ತು ನಿಮಿಷಗಳು ಧ್ಯಾನದಲ್ಲಿ ಕುಳಿತಿರುವಾಗ ನನಗೇನು ಬೇಡ, ನಾನೇನ್ನೂ ಮಾಡಬೇಕಾಗಿಲ್ಲ ಮತ್ತು ನಾನು ಏನೂ ಅಲ್ಲ. ಈ ಮೂರು ಮುಖ್ಯವಾದ ನಿಯಮಗಳನ್ನು ಅನುಸರಿಸಿದರೆ ಆಳವಾದ ಧ್ಯಾನಕ್ಕೆ ಹೋಗಲು ಸಾಧ್ಯ.

ಆರಂಭದಲ್ಲಿ ಧ್ಯಾನವನ್ನು ಕೇವಲ ವಿಶ್ರಾಂತಿಗಾಗಿ ಮಾಡುತ್ತೀರ. ಎರಡನೆಯ ಹಂತದಲ್ಲಿ, ಧ್ಯಾನ ನಿಮಗೆ ಶಕ್ತಿಯನ್ನು ನೀಡುತ್ತದೆ; ಶಕ್ತಿಯುತರಾಗುತ್ತೀರ. ಮೂರನೆಯ ಹಂತದಲ್ಲಿ ಧ್ಯಾನ ಸೃಜನತೆಯನ್ನು ತರುತ್ತದೆ. ನಾಲ್ಕನೆಯ ಹಂತದಲ್ಲಿ ಧ್ಯಾನ ಉತ್ಸಾಹವನ್ನು ಮತ್ತು ಆನಂದವನ್ನು ನೀಡುತ್ತದೆ. 

ಐದನೆಯ ಹಂತದಲ್ಲಿ ಧ್ಯಾನ ಆವರ್ಣನೀಯ, ವಿವರಿಸಲಾಗದು. ಅದು ಆ ಏಕತೆಯ ಭಾವ; ನೀವು ಮತ್ತು ಇಡೀ ವಿಶ್ವವೇ ಒಂದು. ಇದು ಐದನೆಯ ಹಂತದ ಧ್ಯಾನ, ಇದಕ್ಕೆ ಮೊದಲು ಧ್ಯಾನವನ್ನು ನಿಲ್ಲಿಸಬೇಡಿ. ನಾನು ಇದನ್ನು ಸಾಮಾನ್ಯವಾಗಿ ಸ್ಪೇನ್ ಅಥವಾ ಇಟಲಿಯ ಬೀಚಿಗೆ ಹೋಗುವವರೊಂದಿಗೆ ಹೋಲಿಸುತ್ತೇನೆ. ಕೆಲವರು ಒಂದು ವಾಕ್‍ಗೆ ಹೋಗುತ್ತಾರೆ ಮತ್ತು ಅದರಿಂದ ಸಂತೋಷಗೊಳ್ಳುತ್ತಾರೆ. ಇನ್ನು ಕೆಲವರು ಈಜುವ ಸಲುವಾಗಿ ಹೋಗುತ್ತಾರೆ ಮತ್ತು ಉಲ್ಲಸಿತರಾಗುತ್ತಾರೆ, ಅದರಿಂದಲೇ ಸಂತೋಷಪಡುತ್ತಾರೆ. ಕೆಲವರು ಮೀನು ಹಿಡಿಯಲು ಹೋದರೆ, ಮತ್ತೆ ಇನ್ನು ಕೆಲವರು ಸ್ಕೂಬಾ ಡೈವಿಂಗ್‍ಗೆ ಹೋಗಿ ಸುಂದರವಾದ ಜೀವಿಗಳನ್ನು ನೋಡಿ ಆನಂದಿಸುತ್ತಾರೆ. ಇನ್ನು ಕೆಲವರು ಸಮುದ್ರದಿಂದ ಮುತ್ತು, ರತ್ನಗಳನ್ನು ತರುತ್ತಾರೆ; ಅವರು ಆಳಕ್ಕೆ ಹೋಗುತ್ತಾರೆ. ಜ್ಞಾನವು ಇವೆಲ್ಲ ಆಯ್ಕೆಗಳನ್ನು ನಿಮ್ಮ ಮುಂದಿಡುತ್ತದೆ.

ಧ್ಯಾನವನ್ನು ಕೇವಲ ವಿಶ್ರಾಂತಿ, ಸಂತೋಷ, ಉಲ್ಲಾಸ ಅಥವಾ ನಿಮ್ಮ ಆಸೆಗಳ ಪೂರೈಸುವಿಕೆಗಷ್ಟೇ ನಿಲ್ಲಿಸಬೇಡಿ.
ನಿಮಗೆ ಗೊತ್ತೇ, ಧ್ಯಾನವು ನಿಮ್ಮ ಸಂತೋಷಿಸುವ ಸಾಮರ್ಥ್ಯ ಮತ್ತು ಆಸೆಗಳನ್ನು ಪೂರೈಸುವ ಸಾಮರ್ಥ್ಯನ್ನು ಹೆಚ್ಚಿಸುತ್ತದೆ, ಮತ್ತು ನಿಮಗೇನೂ ಬೇಡವೆಂದರೆ, ಇತರರ ಆಸೆಗಳನ್ನು ಪೂರೈಸುವ ಶಕ್ತಿಯಿರುತ್ತದೆ. ಇದು ಬಹಳ ಉತ್ತಮವಾಗಿದೆ. ಆದ್ದರಿಂದ ಇದಕ್ಕೆ ಮೊದಲು ನಿಲ್ಲಿಸಬೇಡಿ, ಧ್ಯಾನವನ್ನು ಮುಂದುವರಿಸುತ್ತಿರಿ..