ಬುಧವಾರ, ಜನವರಿ 1, 2014

ನಿಮ್ಮನ್ನು ನೀವು ನಂಬಿ

೦೧.೦೧.೧೪
ಬಾಡ್ ಅಂತೋಗಸ್ತ್, ಜರ್ಮನಿ

ಶ್ರೀ ಶ್ರೀ: ನಾನು ನಿಮಗೊಂದು ಕಥೆ ಹೇಳಬಯಸುತ್ತೇನೆ. ಒಂದು ಬಿಳಿ ಬೆಕ್ಕು ತನ್ನ ಹಣೆಯ ಮೇಲೆ "ನಾನೊಬ್ಬ ಕರಿ ಬೆಕ್ಕು" ಅಂತ ಒಂದು ಪಟ್ಟಿ ಹಚ್ಚಿಕೊಂಡು ಸುತ್ತಾಡುತ್ತಿತ್ತು.

"ವಿನಾ ಕಾರಣ ಕರಿ ಬೆಕ್ಕೆಂದೇಕೆ ಪ್ರಚಾರ ಮಾಡಿಕೊಂಡು ತಿರುಗುತ್ತಿರುವೆ, ನೀನು ಬಿಳಿ ಬೆಕ್ಕಲ್ಲವೇ?" ಎಂದು ಯಾರೆಷ್ಟೇ ತಿಳಿ ಹೇಳಿದರೂ ಕೇಳದೆ, "ಇಲ್ಲ, ನಾನೊಬ್ಬ ಕರಿ ಬೆಕ್ಕು." ಎನ್ನುವುದನ್ನು ಅದು ಬಿಡಲಿಲ್ಲ.

ಹಾಗೆ ನಿಮಗೆ ನಿಮ್ಮ ಮೇಲೆ ವಿಶ್ವಾಸ ಇಲ್ಲ ಎಂದು ಅನಿಸಿದರೆ, ಈ ಭೂಮಿಯಲ್ಲಿ ಯಾರೂ ನಿಮ್ಮನ್ನು ವಿಶ್ವಾಸಭರಿತರನ್ನಾಗಿ ಮಾಡಲು ಸಾಧ್ಯವಿಲ್ಲ. ಎಚ್ಚೆತ್ತುಕೊಳ್ಳಿ! ಜೀವನದಲ್ಲಿ ಬೇಕಾದುದೆಲ್ಲ ನಿಮ್ಮಲ್ಲಿದೆ. ನೀವು ಸ್ವಾವಲಂಬಿ, ನೀವು ಚೆಲುವರು, ನೀವು ಸತ್ಯ, ನೀವು ಸೌಂದರ್ಯ. ನಮ್ಮ ಆಧ್ಯಾತ್ಮಿಕ ಮಾರ್ಗ ನಿಮಗೆ ಹೇಳುವುದು ಅದನ್ನೇ.

ನೀವು ಅಷ್ಟಾವಕ್ರ ಗೀತೆಯನ್ನು ಕೇಳಿಲ್ಲವೇ? ಅಷ್ಟಾವಕ್ರ ಗೀತೆಯ ೩೩ ಜ್ಞಾನ ಸುಧೆಯನ್ನು ಕೇಳಿ. ಅದು ನಿಮಗೆ ಶಕ್ತಿ ಹಾಗೂ ವಿಶ್ವಾಸವನ್ನು ನೀಡುತ್ತದೆ. ಅದು ನಿಮ್ಮನ್ನು ಅರಳಿಸುತ್ತದೆ. ಈ ಎಲ್ಲ ಸುಂದರ ಗುಣಗಳು ನಿಮ್ಮೊಳಗಿವೆ. ಅವುಗಳು ಅರಳಲಿಕ್ಕಾಗಿ, ಸ್ವಲ್ಪ ಪೋಷಣೆಯ ಅಗತ್ಯವಿದೆ.

ಮೊಗ್ಗು ಒಡೆದಿದೆ. ಎಲ್ಲಾ ಪಕಳೆಗಳು ಇವೆ, ಅರಳುವುದು ಕೇವಲ ಸಕಾಲದ ಮಾತು. ನಿಮಗೆ ಇದು ತಿಳಿದಾಗ, ಮಹತ್ತರವಾದ ಶಾಂತಿಯು ನಿಮ್ಮಲ್ಲಿ ಮೂಡುತ್ತದೆ.

ಮಕ್ಕಳಾಗಿದ್ದಾಗ ’ನೀನು ನಿಷ್ಪ್ರಯೋಜಕ, ನೀನು ನಿಷ್ಪ್ರಯೋಜಕ, ನೀನು ನಿಷ್ಪ್ರಯೋಜಕ!’ ಎಂದು ನಿಮ್ಮನ್ನು ಹಳಿಯಲಾಗುತ್ತಿತ್ತು. ಅದನ್ನು ನೆನಪಿಸಿಕೊಳ್ಳುತ್ತ ನಾವು ನಿಷ್ಪ್ರಯೋಜಕರೆಂದೇ ಸದಾ ಭಾವಿಸುವ ಸಂದಿಗ್ಧವೇರ್ಪಡಬಹುದು. ಇದು ಪುರಾತನ ಸಂಪ್ರದಾಯವಲ್ಲ. ಇದು ಆಧ್ಯಾತ್ಮಿಕತೆಯ ಮಾರ್ಗವಲ್ಲ. ಆಧ್ಯಾತ್ಮಿಕ ಮಾರ್ಗವು ನಿಮಗೆ ಯಾವತ್ತೂ ಸ್ಫೂರ್ತಿ ನೀಡಿದೆ; ಅದು ಯಾವತ್ತೂ ಹೇಳಿದೆ, ’ನೀನು ಮಹಾನ್, ನೀನು ದೈವತ್ವದ ಒಂದು ಭಾಗ, ನೀನು ಪ್ರೇಮ, ನೀನು ಸುಂದರ, ನೀನು ಸತ್ಯ!’ ’ನೀನು ನಿಷ್ಪ್ರಯೋಜಕ, ನಿನ್ನ ಮೇಲೆ ಭರವಸೆ ಇಡಲು ಸಾಧ್ಯವಿಲ್ಲ. ನೀನೊಬ್ಬ ಪಾಪಿ ಹಾಗೂ ನೀನು ಯಾವುದಕ್ಕೂ ಬಾರದ ವ್ಯಕ್ತಿ.’ ಎಂದು ಹೇಳುವುದಕ್ಕಿಂತ, ಈ ಸ್ಫೂರ್ತಿ, ಜ್ಞಾನವು ಜನರಲ್ಲಿ ಬಿತ್ತು ಚಿಗುರೊಡೆಯಬೇಕಾಗಿದೆ.

ಒಂದು ಮಗುವನ್ನು ನಿಷ್ಪ್ರಯೋಜಕ ಎಂಬ ಮಾತು/ಆಲೋಚನೆಗಳಿಂದ ಸ್ಫೋಟಗೊಳಿಸುವುದರಿಂದ ಬಹಳಷ್ಟು ತೊಂದರೆಗಳು ಹುಟ್ಟುಹಾಕಿವೆ. ಬದಲಾಗಿ ನಾವು ’ನೀನು ದೈವತ್ವದ ಒಂದು ಅಂಶ. ನೀನು ಇರುವಂತೆಯೇ ನಿನ್ನನ್ನು ಪ್ರೀತಿಸಲಾಗುತ್ತೆ. ನಿನ್ನಲ್ಲಿ ಏನಾದರೂ ಕುಂದು/ಕೊರತೆಗಳಿದ್ದರೆ, ಅದನ್ನು ಕಂಡು ಪ್ರತ್ಯೇಕಿಸು ಮತ್ತು ಅದರಿಂದ ಹೊರಬರುತ್ತೀಯ ಎಂದು ತಿಳಿದುಕೊಂಡಿರು.’ ಎಂದು ಹೇಳಬೇಕು.

ನಿಮಗೆ ಯಾವಾಗೆಲ್ಲ ’ಓ, ಇದು ನನ್ನಿಂದ ಸಾಧ್ಯವಿಲ್ಲ’ ಅನಿಸುವುದೋ, ಆಗ ನಿಮಗದನ್ನು ಮಾಡಲು ಸಾಧ್ಯವಾಗುವುದೇ ಇಲ್ಲ. ಆದರೆ ’ನಾನಿದನ್ನು ಮೀರಬಲ್ಲೆ, ನನಗಿದನ್ನು ಮಾಡಲು ಸಾಧ್ಯ’ ಎಂದು ನೀವು ಹೇಳಿದಾಗ, ನಿಮ್ಮಲ್ಲಿ ಆ ಶಕ್ತಿ, ಆ ಧೈರ್ಯ, ಆ ಉತ್ಸಾಹ, ಹುಮ್ಮಸ್ಸು, ಹಾಗೂ ಎಲ್ಲವೂ ಬರುವುದು. ನೀವೊಬ್ಬ ಸಿಗರೇಟು/ಬೀಡಿ ಸೇದುವ ಚಟದವರಾಗಿದ್ದು, ನೀವು ’ನನಗೆ ಸೇದದೇ ಇರಲು ಸಾಧ್ಯವಿಲ್ಲ’ ಎಂದು ಹೇಳುವಿರಾದರೆ, ಏನ್ರೀ ಏಳಿ ಎದ್ದೇಳಿ ಮತ್ತು ಹೇಳಿ, ’ಇಲ್ಲ, ನಾನು ಚಿಗರೇಟು/ಬೀಡಿ ಮುಟ್ಟುವುದಿಲ್ಲ’, ನಂತರ ನೋಡಿ ಏನಾಗುತ್ತದೆ.

ಹಾಗೆಯೇ, ನೀವು ಬ್ಯುಲೀಮಿಯಾದಿಂಅ ಬಳಲುತ್ತಿದ್ದು ನೀವು ’ಓ, ನಾನೆಷ್ಟು ನಿರ್ಬಲವಾಗಿದ್ದೇನೆ. ನನಗೇನೂ ಮಾಡಲು ಸಾಧ್ಯವಿಲ್ಲ!’ ಎಂದು ಹೇಳುತ್ತಿದ್ದರೆ, ರೀ! ಎಚ್ಚೆತ್ತುಕೊಳ್ಳಿ! ನೀವು ನಿರ್ಬಲರಲ್ಲ.

ಆಧ್ಯಾತ್ಮಿಕ ಮಾರ್ಗವು ವಿಶ್ವಾಸವನ್ನು ಬೇರೂರಿಸುತ್ತದೆ. ನೀವು ಸರಿಯಾದ ಸ್ಥಳದಲ್ಲಿದ್ದೀರಿ. ಆದರೆ ಅವಸರ ಬೇಡ. ನಿಮಗೆ ಹತು ಮೈಲು ನಡೆಯಬೇಕೆಂದಿದ್ದರೆ, ಅದು ನಾಳೆಯಾಗುವುದಿಲ್ಲ. ಅಭ್ಯಾಸ ಮಾಡಿ. ಮೊದಲು ಒಂದು ಮೈಲು ನಡೆಯಿರಿ, ನಂತರ ಎರಡು ಮೈಲು ಹೋಗಿ, ನಂತರ ಐದು, ಹಾಗು ಎರಡು ಮೂರು ತಿಂಗಳಲ್ಲಿ ನೀವು ಹತ್ತು ಮೈಲು ನಡೆಯಬಹುದು.

ಯಾವುದಕ್ಕಾದರೂ ಸ್ವಲ್ಪ ತಾಳ್ಮೆ ಮತ್ತು ಸ್ವಲ್ಪ ಅಭ್ಯಾಸ ಬೇಕಾಗುತ್ತದೆ. ನನಗೀ ಮೊಗ್ಗನ್ನು ಇದೀಗಲೇ ಅರಳಿಸಲು ಸಾಧ್ಯವಿಲ್ಲ. ನಾನದನ್ನು ತೆರೆದರೆ, ಅದು ಸುಲಭದಲ್ಲೆ ಕೆಡವಿ ಹೋಗುತ್ತದೆ. ನಾನದನ್ನು ನೀರಿನಲ್ಲಿಡಬೇಕು, ಹಾಗೂ ಅದು ತಾನಾಗಿಯೇ ಆಗುತ್ತದೆ.

ಪ್ರ: ಗುರೂಜಿ, ನೀವು ಪುಸ್ತಕಗಳನ್ನು ಓದುತ್ತೀರಾ?

ಶ್ರೀ ಶ್ರೀ: ಸಾಮಾನ್ಯವಾಗಿ ನಾನು ಪುಸ್ತಕಗಳನ್ನು ಓದುವುದೇಇಲ್ಲ, ಆದರೆ ಕಳೆದ ವರ್ಷ ನಾನು ಜಪಾನಿನಿಂದ ಕ್ಯಾನಡಾಗೆ ದೀರ್ಘ ಯಾನದಲ್ಲಿದ್ದಾಗ, ಯಾರೋ ನನಗೆ ಕೊಟ್ಟ  ದಿ ಪ್ರೂಫ್ ಆಫ್ ಹೆವೆನ್ (ಸ್ವರ್ಗದ ಕುರುಹು) ಎಂಬ ಪುಸ್ತಕವನ್ನು ನಾನು ಓದಿದೆನು.ಇದು  ಏಳು ದಿನಗಳ ಕಾಲ ಕೋಮಾದಲ್ಲಿದ್ದ ವೈದ್ಯರೊಬ್ಬರಿಂದ ಬರೆಯಲ್ಪಟ್ಟಿತ್ತು. ಜನರು ಇವನ ಮಿದುಳು ಮೃತವಾಗಿ ನಿಷ್ಕ್ರಿಯವಾಗಿತ್ತು ಹಾಗು ಇವನು ಮರಳಿ ಬರುವುದಿಲ್ಲ ಎಂದು ಯೋಚಿಸಿದ್ದರು. ಅವನು ಮರಳ್ ಬಂದಾಗ ಅವನು ಈ ಅನುಭವವನ್ನು ಬರೆದನು. ಅವನು ಹೇಳಿದನು, ಅವನು ಈ ಶರೀರವನ್ನು ಬಿಟ್ಟಾಗ, ಅವನು ಈ ಒಂದು ಬೆಳಕನ್ನು, ಅತ್ಯಂತ ಪ್ರಿಯಕರವಾದ ಬೆಳಕನ್ನು ಕಂಡನು ಹಾಗು ವನಿದನ್ನು ಓಂ ಎಂದು ಕರೆದನು. ಅವನು ಹೇಳಿದನು, ’ಆ ಬೆಳಕು ನನ್ನ ಮೂಲ’. ಅವನು ಇದರ ಮೊದಲು ಯಾವುದೇ ಪುರಾತನ ಗ್ರಂಥಗಳನ್ನು ಓದಿಲ್ಲ. ಅವನೊಬ್ಬ ನಾಸ್ತಿಕನಾಗಿದ್ದ. ಅವನು ಇಗರ್ಜಿಗೆ ಕೇವಲ ಕ್ರಿಸ್ಮಸ್ ದಿನದಂದು, ವರ್ಷಕ್ಕೊಂದು ಸಲ ಹೋಗುತ್ತಿದ್ದ, ಆದರೆ ಯಾವುದನ್ನೂ ಎಂದೂ ನಂಬಲಿಲ್ಲ.

ಹಲವಾರು ಮರಣ-ಸನಿಹ-ಅನುಭವಗಳು(ನಿಯರ್ ಡೆತ್ ಎಕ್ಸ್ಪೀರಿಯನ್ಸ್) ಇವೆ ಹಾಗೂ ಎಲ್ಲವೂ  ಆ ಸಾರ್ವತ್ರಿಕ ಬೆಳಕನ್ನು, ಸಾರ್ವತ್ರಿಕ ಶಬ್ದವನ್ನು ಓಂ ಎಂದು ನಮೂದಿಸಿವೆ. ಮತ್ತು ಧರ್ಮ ಗ್ರಂಥಗಳಲ್ಲೂ, ಉಪನಿಶತ್ತುಗಳಲ್ಲೂ ಹಾಗೂ ವೇದಗಳಲ್ಲೂ ಹೇಳಿರುವುದು ಇದನ್ನೇ.

ಭಗವಾನ್ ಬುದ್ಧನೂ ಇದನ್ನು ಹೇಳಿದ್ದರು. ಬೌದ್ಧ ಮತ, ಜೈನ ಮತ ತಓ ಮತ, ಶಿಂಟೊ ಮತ, ಹಿಂದೂ ಮತ, ಸಿಖ್ ಮತ ಮತ್ತು ಭಾರತದಲ್ಲಿ ಜನಿಸಿದ ಸಾವಿರಾರು ಸನ್ಯಾಸಿಗಳು, ಎಲ್ಲರೂ ಆ ಒಂದು ಶಬ್ದವು ಓಂ ಎಂದು ಹೇಳಿದರು. ಅದು ನಮ್ಮ ಅನುಭವೂ ಹೌದು.

ನೀವು ಧ್ಯಾನದಲ್ಲಿ ಹೋದಾಗ, ವಸ್ತುತಃ ಒಂದು ಕೈಯ ಚಪ್ಪಾಳೆ ಅಥವಾ ಆ ಶಬ್ದವು ಓಂಕಾರವಾಗಿದೆ. ಅದುವೇ ಎಲ್ಲದರ ಮೂಲ. ಹಾಗೆ ಓಂಕಾರವು ಆ ವಿಶ್ವವ್ಯಾಪಿ ಶಬ್ದವಾಗಿದೆ. ವಿಜ್ಞಾನಿಗಳೂ ಇದರ ಕುರಿತು ಬರೆದಿದ್ದಾರೆ ಹಾಗೂ ಇದನ್ನು ಅನುಭವಿಸಿದ್ದಾರೆ.

ನಾವು ಮೌನದಲ್ಲಿ ಆಳ ಹೋದಾಗ ಹಾಗೂ ಮನಸ್ಸು ಪೂರ್ಣ ವಿಶ್ರಾಮದಲ್ಲಿದ್ದಾಗ, ಒಂದು ಗುನುಗಿದೆ ಹಾಗೂ ಆ ಗುನುಗು ಓಂಕಾರವಾಗಿದೆ. ಅ, ಉ, ಅಂ. ಅ ಎಂಬುದು ಈ ಸೃಷ್ಟಿ ಅರಳುವಿಕೆ, ಉ ಎಂಬುದು ಅದವ ಮುಂದುವರೆಯುವಿಕೆ, ಮತ್ತು ಅಂ (ಮ್) ಅದರ ಪೂರ್ಣಗೊಳ್ಳುವಿಕೆ. ಓಂಕಾರಕ್ಕೆ ಹಲವಾರು ಅರ್ಥಗಳಿವೆ, ಅವು ನೂರಾರಿವೆ. ಶಾಂತಿ ಹಾಗೂ ಪ್ರೇಮ ಅದರಲ್ಲಿ ಸೇರಿವೆ. ಜೀವನದ ಉಗಮ ಒಂದು.

ಆದಿಯಲ್ಲಿ ಆ ಪದವಿತ್ತು, ಮತ್ತು ಭಗವಂತ ಆ ಪದವಾಗಿತ್ತು. ಬೈಬಲ್ ನಲ್ಲಿ ಇಂತು ಹೇಳಿದೆ. ಅ, ಉ, ಅಂ ಸೇರಿ ಅಮೆನ್ ಆಯಿತು. ಸ್ವಲ್ಪ ವಕ್ರವಾಗಿ ಅದು ಅಮೆನ್ ಆಯಿತು. ಮತ್ತು ಇಸ್ಲಾಮ್ ಧರ್ಮದಲ್ಲಿ ಅದು ಆಮೀನ್ ಆಯಿತು. ಆದರೆ ಮೂಲ ಶಬ್ದವು ಓಂ ಆಗಿತ್ತು, ಸಾವಿರಾರು ವರ್ಷಗಳಿಂದ ಇದ್ದಂತದ್ದಾಗಿತ್ತು.  ಇನ್ನೂ ಬಹಳ ಇದೆ, ನಾವು ಅದರ ಬಗ್ಗೆ ಮಾತನಾಡುತ್ತಲೇ ಇರಬಹುದು. ಅದನ್ನು ತ್ತಾತ್ತ್ವಿಕವಾಗಿಸುವುದಕ್ಕಿಂತ ಅಥವಾ ಬಹಳ ಆಳವಾಗಿ ಅದನ್ನು ಅರ್ಥ ಮಾಡಿಕೊಳ್ಳುವುದರ ಬದಲಾಗಿ, ನೀವು ಸುಮ್ಮನೆ ಓಂ ಎಂದು ಹೇಳಿ.

ಅ, ಇದರ ಕಂಪನಗಳು ಶರೀರದ ಕೆಳಭಾಗದಲ್ಲಿ ಇವೆ, ಉ ಎಂಬುದು ಮಧ್ಯದಲ್ಲಿ ಹಾಗೂ ಅಂ(ಮ್) ಎಂಬುದು ಮೇಲ್ಭಾಗದಲ್ಲಿ. ಹೀಗೆ ಪ್ರಾಣವು ಪರಿಪೂರ್ಣವಾಗಿದೆ, ನೀವು ಓಂ ಎಂದಾಗ ಅದು ಕೆಳಗಿನಿಂದ ಮೇಲಕ್ಕೆ ಹೋಗುತ್ತದೆ.

ಓಂ ಧ್ಯಾನಗಳಲ್ಲಿ ಎಲ್ಲಾ ಧರ್ಮಗಳಿಂದ, ಎಲ್ಲಾ ವರ್ಗದ ಜನರಿಂದ ಸಾವಿರಾರು ವರ್ಷಗಳಿಂದ ಉಪಯೋಗಿಸಲ್ಪಡುತ್ತಿದೆ. ಹಾಗೆ ನಾವದನ್ನು ಉಪಯೋಗಿಸುವುದನ್ನು ಮುಂದುವರೆಸುತ್ತಿದ್ದೇವೆ.

ಪ್ರ: ಮನಸ್ಸಿನ ಮೂಲ ಏನು?

ಶ್ರೀ ಶ್ರೀ: ಸರಿ, ಮೊದಲು ನೀವು ನನಗೆ ಅಲೆಗಳ ಮೂಲವನ್ನು ಹೇಳಿ, ಮತ್ತೆ ನಾನು ನಿಮಗಿದನ್ನು ಹೇಳುತ್ತೇನೆ. ಚೈತನ್ಯದ ಮೇಲ್ಮೈಯಲ್ಲಿನ ಅಲೆಗಳಂತಿರುವುದು ಮನಸ್ಸು. ಚೈತನ್ಯವು ಒಂದು ಸಾಗರದಂತೆ, ಮನಸ್ಸು ಅಲೆಯಂತೆ ಮತ್ತು ಅವು ಇರುವಿಕೆಯನ್ನು ಮುಂದುವರೆಸುತ್ತವೆ.

ಸೂರ್ಯ ಬಂದಾಗ ಕತ್ತಲು ಎಲ್ಲಿ ಹೋಗುತ್ತದೆ? ನೀವು ಲೈಟ್ ಚಲಾಯಿಸಿದಾಗ, ಕತ್ತಲು ಎಲ್ಲಿ ಹೋಗುತ್ತದೆ?
ಅಪೂರ್ಣ ಬೆಳಕಿನಲ್ಲಿ, ನಿಮ್ಮ ನೆರಳು ನೆಲದ ಮೇಲೆ ಬೀಳುತ್ತದೆ, ಆದರೆ ಬೆಳಕು ದೊಡ್ಡದಾದಾಗ ಆ ನೆರಳು ಮಾಯವಾಗುತ್ತದೆ. ಆ ನೆರಳು ಎಲ್ಲಿಗೆ ಹೋಯಿತು?

ನಾನು ಈ ಬಟ್ಟೆಯಲ್ಲಿ ಗಂಟು ಹಾಕುತ್ತೇನೆ ಮತ್ತೆ ನಾನದನ್ನು ಬಿಚ್ಚುತ್ತೇನೆ, ಆ ಗಂಟು ಎಲ್ಲಿಗೆ ಹೋಯಿತು? ಅದು ಈ ಬಟ್ಟೆಯಿಂದ ಇನ್ನೊಂದು ಬಟ್ಟೆಗೆ ಹೋಯಿತೆ?

ಪ್ರ: ಸಮಕಾಲೀನ ಬ್ರಹ್ಮಾಂಡಗಳು ಅಸ್ತಿತ್ವದಲ್ಲಿವೆಯೇ?

ಶ್ರೀ ಶ್ರೀ: ವಿಜ್ಞಾನಿಗಳು ಅವು ಅಸ್ತಿತ್ವದಲ್ಲಿವೆ ಎನ್ನುತ್ತಾರೆ. ಈ ಬ್ರಹ್ಮಾಂಡಕ್ಕೆ ಹಲವಾರು ಆಯಾಮಗಳಿವೆ. ನಾನದನ್ನು ಈ ರೀತಿಯಾಗಿ ಅರ್ಥಮಾಡಿಕೊಳ್ಳುತ್ತೇನೆ: ನೀವು ದೂರದರ್ಶನ ನೋಡುತ್ತಿದ್ದೀರಿ, ಒಂದು ನಿರ್ದಿಷ್ಟ ಚ್ಯಾನಲ್ ಹಾಕಿದ್ದೀರಿ, ಮತ್ತು ಅದೇ ಸಮಯದಲ್ಲಿ ಅದೇ ಕೋಣೆಯಲ್ಲಿ ಇನ್ನೂ ಹಲವಾರು ಬೇರೆ ಚ್ಯಾನಲ್ ಗಳ ವಿದ್ಯುತ್ಕಾಂತೀಯ ಅಲೆಗಳೂ ಇವೆ. ಆದರೆ ನಿಮ್ಮ ದೂರದರ್ಶನ ಯಂತ್ರದಲ್ಲಿ ಕೇವಲ ಒಂದು ಚ್ಯಾನಲ್ ಪ್ರಸಾರವಾಗುತ್ತಿದೆ ಏಕೆಂದರೆ ನೀವು ಆ ಚ್ಯಾನಲ್ ನಲ್ಲಿದ್ದೀರಿ. ನೀವು ಚ್ಯಾನಲ್ ಬದಲಾಯಿಸಿದರೆ ನೀವು ಹಲವಾರು ಬೇರೆ ಚ್ಯಾನಲ್ ಗಳನ್ನು(ಆಯಾಮಗಳು) ನೋಡಬಹುದು. ಹಾಗೆಯೇ ನಮ್ಮ ಚೈತನ್ಯಕ್ಕೆ ಹಲವಾರು ಸ್ಥರಗಳಿವೆ. ಚೈತನ್ಯದ ವಿವಿಧ ಸ್ಥರಗಳಲ್ಲಿ, ಜ್ಞಾನವೂ ಬೇರೆಯೇ ಆಗಿರುತ್ತದೆ.

ಉಪಸ್ಥಿತ ಸಭ್ಯರಲ್ಲೊಬ್ಬರು ಒಂದು ಪ್ರಶ್ನೆ ಕೇಳಿದ್ದು, ಅದು ಕೇಳಿಬರಲಿಲ್ಲ.

ಶ್ರೀ ಶ್ರೀ: ಎಲ್ಲವೂ ಶಕ್ತಿ, ಎಲ್ಲವೂ ಒಂದು ಶಕ್ತಿಯಿಂದ ಮಾಡಲ್ಪಟ್ಟಿದೆ, ಆದರೆ ಕಾರ್ಯತಃ ಅದು ಬಹಳ ಭಿನ್ನವಾಗಿದೆ. ಈ ಕೊಠಡಿಯಲ್ಲಿ ಇದೆಲ್ಲವೂ ಮರದಿಂದ ಮಾಡಲ್ಪಟ್ಟಿದೆ, ಆದರೆ ನಿಮಗೆ ಈ ಕುರ್ಚಿಯಿಂದ ಮಾಳಿಗೆ ಮಾಡಲಾಗುವುದಿಲ್ಲ ಅಥವಾ ಮಾಳಿಗೆಯಿಂದ ಕಿಟಕಿ ಮಾಡಲಾಗುವುದಿಲ್ಲ, ಅಥವಾ ಕಿಟಕಿಯಿಂದ ಬಾಗಿಲು ಮಾಡಲಾಗುವುದಿಲ್ಲ. ಆದರೆ ಅವುಗಳೆಲ್ಲವೂ ಮರದಿಂದ ತಯಾರಾಗಿವೆ. ಅದೇ ರೀತಿಯಲ್ಲಿ, ಎಲ್ಲವೂ ಒಂದೇ ಶಕ್ತಿ, ಒಂದೇ ಕಣ, ಆದರೆ ನಿಮಗೆ ಕೋಸಂಬರಿಯ ಬದಲು ಮಣ್ಣು ತಿನ್ನಲಾಗುವುದಿಲ್ಲ. ಅರ್ಥವಾಯಿತೇ?

ಉಪಸ್ಥಿತ ಸಭ್ಯರಲ್ಲೊಬ್ಬರು ಒಂದು ಪ್ರಶ್ನೆ ಕೇಳಿದ್ದು, ಅದು ಕೇಳಿಬರಲಿಲ್ಲ.

ಶ್ರೀ ಶ್ರೀ: ಸ್ವಲ್ಪ ಆಹಾರ ನೀವು ಸೇವಿಸಬೇಕು. ನಾನು ಸ್ವಲ್ಪ ತೆಗೆದುಕೊಳ್ಳುತ್ತೇನೆ. ಪ್ರಾಣದಿಂದ ಬದುಕುತ್ತಿರುವ ಜನರಿದ್ದಾರೆ, ನಾನವರನ್ನು ನೋಡಿದ್ದೇನೆ ಆದರೆ ಅವರು ಅಷ್ಟು ಕಾಂತಿಯುತರಾಗಿ ಕಾಣುವುದಿಲ್ಲ. ನಾನು ಒಂದೆರಡು ಜನರನ್ನಲ್ಲ, ಆದರೆ ಏನನ್ನೂ ತಿನ್ನದಿರುವ ಹಲವಾರು ಜನರನ್ನು ಭೇಟಿಯಾಗಿದ್ದೇನೆ.ವ್

ಅಮೆರಿಕಾದಲ್ಲಿ ಒಬ್ಬ ಮಹಾಶಯನ ಮೇಲೆ ಅವರು ಹಲವಾರು ಪ್ರಯೋಗಗಳನ್ನು ಮಾಡಿದ್ದರು. ಈ ವ್ಯಕ್ತಿ ಕೇವಲ ಸೂರ್ಯನನ್ನು ಗೋಚರಿಸುತ್ತಾನೆ ಹಾಗೂ ಆಹಾರ ಸೇವಿಸುವುದಿಲ್ಲ. ಆದರೆ ಅವನು ಅಗಾಗ ೪-೫ ಚಮಚ ಸಕ್ಕರೆ ಸೇರಿಸಿ ಚಹಾ ಕುಡಿಯುತ್ತಿದ್ದ. ಆದರೆ ಅದನು ಪ್ರಯತ್ನಿಸುವಷ್ಟು ಸ್ಫೂರ್ತಿ ನನಗಾಗಲಿಲ್ಲ. ಅವರು ಗಟ್ಟಿಮುಟ್ಟಾಗಿ ಕಾಣುವುದಿಲ್ಲ. ಸಾಕಷ್ಟು ಕಂಪನಶೀಲ ಪ್ರಾಣ ಅಥವಾ ವೈಯಕ್ತಿಕತೆ ಇಲ್ಲ. ಹಾಗಾಗಿ ನಾನದನ್ನು ಪ್ರಯತ್ನಿಸಲಿಲ್ಲ.

ನಾನು ಉಪವಾಸ ಮಾಡುತ್ತೇನೆ. ನಾನು ಕೆಲವು ದಿನ ಉಪವಾಸ ಮಾಡುತ್ತೇನೆ ಹಾಗೂ ಈ ಹಿಂದೆಯೂ ಮಾಡಿದ್ದೇನೆ. ನೀವು ಮಾಡಬಹುದು ಆದರೆ ನಾನು ಅದನ್ನು ಉತೇಜಿಸುವುದಿಲ್ಲ. ನೀವು ಮೌನದಲ್ಲಿದ್ದು, ಯಾವುದೇ ಚಟುವಟಿಕೆಯಿಲ್ಲದಾಗ ನೀವು ಸ್ವಲ್ಪ ದಿನಗಳವರೆಗೆ ಉಪವಾಸ ಮಾಡ್ಬಹುದು. ಯಾವುದೇ ಜೂಸ್ ಅಥವಾ ಹಣ್ಣುಗಳಿಲ್ಲದೇ ಉಪವಾಸ ಮಾಡಲು ನಾನು ಪ್ರೋತ್ಸಾಹಿಸುವುದಿಲ್ಲ. ನೀವು ಏನನ್ನಾದರೂ ಸೇವಿಸಬೇಕು. ಕೇವಲ ಪ್ರಾಣದ ಆಧಾರದಲ್ಲಿ ಬದುಕುವುದಲ್ಲ.

ನಾವು ಹಾಗೆ ಬದುಕಬೇಕಾಗಿದ್ದರೆ, ಭಗವಂತನು ಏಕೆ ಪಿತ್ತಜನಕ, ಮೇದೋಜೀರಕ(ಪ್ಯಾಂಕ್ರಿಯಸ್) ಹಾಗೂ ಎಲ್ಲಾ ಕಿಣ್ವಗಳನ್ನು ಈ ಶರೀರದಲ್ಲಿ ಮಾಡುತ್ತಿದ್ದ? ಶರೀರ ಪೂರ್ತಿ ನೀವು ಉಸಿರಾಡುವಂತೆ ಅವನು ಮಾಡುತ್ತಿದ್ದ. ಪೂರ್ತಿ ಟೊಳ್ಳು ಮತು ಖಾಲಿ. ನಮಗೆ ಈ ಎಲ್ಲಾ ಅಂಗಗಳಿವೆ ಎಂದಾದರೆ ಅದು ಅವುಗಳನ್ನು ಉಪಯೋಗಿಸುವುದಕ್ಕಾಗಿ, ಆದರೆ ಅತಿ ಉಪಯೋಗಿಸುವುದಕ್ಕಾಗಿ ಅಲ್ಲ. ನಾವು ಅದನ್ನು ಪೂರ್ತಿಯಾಗಿ ನಿಲ್ಲಿಸುವುದರಲ್ಲಿ ಅಥವಾ ಅತಿ ಉಪಯೋಗಿಸುವುದರಲ್ಲಿ ಪಾರಂಗತರು. ಎರಡೂ ತಪ್ಪು. ಮಧ್ಯ ಮಾರ್ಗ. ಸ್ವಲ್ಪ ಊಟ ಮಾಡಿ, ಕನಿಷ್ಠ, ಅಷ್ಟೂ ಸಾಕು.

ಪ್ರ: ದಯವಿಟ್ಟು ಆಲೋಚನೆಗಳು ಹೇಗೆ ಮತ್ತು ಎಲ್ಲಿಂದ ಬರುತ್ತವೆ ಎಂದು ಹೇಳಿ.

ಶ್ರೀ ಶ್ರೀ: ನಮಗೆ ಆಲೋಚನೆಗಳು ಉಂಟಾಉತ್ತವೆ, ಅವು ಒಂದು ಸರಣಿಯಲ್ಲಿ ಬರುತ್ತವೆ. ಅವು ಎಲ್ಲಿಂದ ಬರುತ್ತವೆ ಎಂದು ನೀವು ಏಕೆ ಕುಳಿತು ಯೋಚಿಸಬಾರದು. ಆವು ಬಂದ ಕೂಡಲೆಯೇ, ಅವುಗಳನ್ನು ಹಿಡಿದುಬಿಡಿ! ಮತ್ತೆ ಇನ್ನೊಂದು ಬರಲು ಕಾಯುತ್ತಿರಿ! ಏನಾಗುತ್ತದೆಂದು ನೋಡಿ! ನಾಳೆ ಕುಳಿತು ಆಲೋಚನೆಗಳನ್ನು ಹಿಡಿಯಲು ಕುಳಿತುಕೊಳ್ಳಿ, ಮತ್ತೆ ನೋಡುತ್ತೀರಿ ಆ ಮೂಲ ಎಲ್ಲಿದೆ ಎಂದು!

(ಸಭ್ಯರಲ್ಲೊಬ್ಬ ಅಶ್ರವಣೀಯವಾದ ಪ್ರಶ್ನೆಯೊಂದನ್ನು ಕೇಳಿದರು)

ಶ್ರೀ ಶ್ರೀ: ಅನಾರೋಗ್ಯವು ಮೂರು ಕಾರಣಗಳಿಂದ ಉಂಟಾಗುತ್ತದೆ. ಒಂದು ನಾವು ಪ್ರಕೃತಿಯ ನಿಯಮಗಳನ್ನು ಮುರಿದಾಗ, ಮತ್ತೊಂದು ನಮ್ಮ ಕರ್ಮದ ಫಲದಿಂದ. ಮೂರನೆಯದು, ಅದು ಆನುವಂಶಿಕ. ನೀವು ನಾಲ್ಕನೆಯದನ್ನು ಸೇರಿಸಬೇಕೆಂದಿದ್ದರೆ, ಅದು ಪರಿಸರದಿಂದಾಗಿಯೂ ಇರಬಹುದು. ಈಗ ನಾವು ಪ್ರಕೄತಿಯ ನಿಯಮಗಳನ್ನು ಉಲ್ಲಂಘಿಸಿದರೆ, ನೀವಷ್ಟೇ ಅಲ್ಲ ಬೇರೆಯವರೂ ಉಲ್ಲಂಘಿಸಿದರೆ ಅದು ನಿಮ್ಮ ಶರೀರವನ್ನು ಪರಿಣಮಿಸುತ್ತದೆ. ಹಾಗೂ ಶರೀರದ ಸ್ವಭವಎಂದರೆ, ಅದಕ್ಕೆ ರೋಗನಿರೋಧಕ ಶಕ್ತಿಯಿದೆ ಆದರೆ ಅದು ಕೆಲವೊಮ್ಮೆ ಅಸ್ವಸ್ಥಗೊಳ್ಳುತ್ತದೆ.

ಎಲ್ಲವೂ ಆಧ್ಯಾತ್ಮಿಕತೆಯ ಕೊರತೆಯಿಂದ ಅಥವಾ ಆಹ್ಯಾತ್ಮಿಕತೆಯ ಆದಾಗ್ಯೂ ಉಂಟಾಗುವುವಲ್ಲ. ಒಬ್ಬ ವ್ಯಕ್ತಿಯು ಬಹಳ ಆಧ್ಯಾತ್ಮಿಕವಾಗಿದ್ದರೂ, ಅವನು ಅತಿಭೋಜನ ಮಾಡಿದರೆ, ಅವನು ಅಸ್ವಸ್ಥಗೊಂಡು ಅವನ ಹೊಟ್ಟೇ ಕೆಡುತ್ತದೆ. ಅವನು ಬಹಳ ಜಾಸ್ತಿ ದಿನಗಳವರೆಗೆ ಅನಶನನಾಗಿದ್ದರೂ ಅವನು ಅನಾರೋಗ್ಯಕ್ಕೊಳಗಾಗುತ್ತಾನೆ. ಹಾಗಾಗಿ ನಾವು ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸಬಾರದು.

ದೀಪ ಸುಡುತ್ತಿದ್ದರೆ, ಅದು "ಈತ ಒಳ್ಳೆಯ ಮನುಷ್ಯ ನಾನವನನ್ನು ಸುಡುವುದಿಲ್ಲ ಮತ್ತು ಈತ ಕೆಟ್ಟವನು, ನಾನು ಅವನನ್ನು ಸುಡುತ್ತೇನೆ"  ಎಂದು ಹೇಳುವುದಿಲ್ಲ. ಯಾರೇ ತನ್ನ ಕೈಯನ್ನು ಬೆಂಕಿಯಲ್ಲಿಟ್ಟರೆ, ಸುಟ್ಟುಕೊಳ್ಳುತ್ತಾನೆ. ಕೆಲವೊಮ್ಮೆ ಆಧ್ಯಾತ್ಮಿಕ ಗುರುಗಳಿಗೂ ಇದು ಸಿಗುತ್ತದೆ ಯಾಕೆಂದರೆ ಅವರು ನಿಯಮಗಳನ್ನು ಮುರಿಯುತ್ತಾರೆ. ಅವರು ಜನರಿಗಾಗಿ ಮಡುವುದರಲ್ಲಿ ಮತ್ತು ಅವರನ್ನು ನೋಡಿಕೊಳ್ಳುವುದರಲ್ಲಿ ಎಷ್ಟು ಮುಳುಗಿಹೋಗುತ್ತಾರೆಂದರೆ ಅವರು ನಿಯಮಗಳ ಉಲ್ಲಂಘನೆ ಮಾಡಬಹುದು. ಅಥವ ಅವರು ಜಾಸ್ತಿಏ ಊಟ ಮಾಡಿಬಿಡಬಹುದು ಅಥವಾ ಊಟ ಮಾಡದಿರಬಹುದು(ನಿಯಮೋಲ್ಲಂಘನೆ ಮಾಡಬಹುದು).

ಈ ದಿನಗಳಲ್ಲಿ ನಮ್ಮ ಸಮಾಜದಲ್ಲಿ ವಿದ್ಯುದಯಸ್ಕಾಂತೀಯ ತರಂಗಗಳು ಅಧಿಕಾಂಶದಲ್ಲಿವೆ. ಎಲ್ಲೆಲ್ಲೂ ವೈಫ಼ೈ(ನಿಷ್ತಂತೀಯ ತಂತ್ರಜ್ಞಾನ), ಹಗೂ ಎಲ್ಲ ಕಡೆಯೂ ತರಂಗ-ಚಾಲಕ ಗೋಪುರಗಳಿವೆ. ಶರೀರದಲ್ಲಿ ಅದಕ್ಕೆ ಅಗತ್ಯವಾದಷ್ಟು ನಿರೋಧ ಶಕ್ತಿ ಇಲ್ಲದೆ, ಅದಕ್ಕೆ ತುತ್ತಾಗುತ್ತದೆ. ಜನರು ತಮ್ಮ ಮನಸ್ಸನ್ನು ಸ್ಫೂರ್ತಿಯುಕ್ತವಾಗಿಟ್ಟುಕೊಂಡಿದ್ದರೂ, ಅವರು ಭಾವನಾತ್ಮಕವಾಗಿ ಗಟ್ಟಿಯಾಗಿರುತ್ತಾರೆ, ಆದರೆ ಶರೀರದಲ್ಲಿ ಹಲವು ಬಾರಿ ನಿರೋಧ ಶಕ್ತಿ ಕಡಿಮೆಯಿರುತ್ತದೆ. ನಾವು ಸೇವಿಸುವ ಆಹಾರ, ನಮ್ಮ ಪರಿಸರ ಎಲ್ಲವೂ ನಮ್ಮ ಮೇಲೆ ಪರಿಣಮಿಸುತ್ತದೆ.

ಒಬ್ಬ ಪ್ಲಾಸ್ಟಿಕ್ ಸುಟ್ಟರೆ, ಅದು ೧೦೦೦ ಜನರಿಗೆ ಕೇಡಾಗುವಷ್ಟು ಡಯಾಕ್ಸೈಡ್ ಉತ್ಪನ್ನ ಮಾಡುತ್ತದೆ. ಒಂದು ಸಣ್ಣ ಪ್ಲಾಸಿಕ್ ಬ್ಯಾಗ್ ಸುಡಲ್ಪಟ್ಟರೆ ಅಷ್ಟೊಂದು ಡಯಾಕ್ಸೈಡ್ ಸೃಷ್ಟಿಸುತ್ತದೆ. ಪರಿಸರದ ನಿರ್ಮಲತೆ ಹಾಗೂ ಸಂರಕ್ಷಣೆ ಈಗ ತಾನೆ ಶುರುವಾಗಿದೆ, ಕೇವಲ ಸ್ವಲ್ಪ ವರ್ಷಗಳ ಹಿಂದೆ, ಇದರ ಮೊದಲು ಯಾರೂ ಅದರ ಬಗ್ಗೆ ಯೋಚಿಸಲಿಲ್ಲ. ಅಲ್ಲವೆ? ಜನರು ಸುಮ್ಮನೆ ಹಾನಿಕಾರಕ ರಾಸಾಯನಿಕ ವಸ್ತುಗಳನ್ನು ಉಪಯೋಗಿಸುತ್ತಿದ್ದರು. ನಾವು ನಮ್ಮ ಸಾಬೂನುಗಳಲ್ಲಿ, ನಮ್ಮ ಶುದ್ದಿಕಾರಕಗಳಲ್ಲಿ ಮತ್ತು ಸುಗಂಧ ದ್ರವ್ಯಗಳಲ್ಲಿ ನಾವು ಹಾನಿಕಾರಕ ರಾಸಾಯನಿಕಗಳನ್ನು ಉಪಯೋಗಿಸುತ್ತೇವೆ.ನಾವು ಬಹಳಷ್ಟು ಕೀಟನಾಶಕಗಳನ್ನು ಬಳಸುತ್ತೇವೆ. ಈ ಎಲ್ಲಾ ರಾಸಾಯನಿಕಗಳೂ ನಮ್ಮ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತವೆ. ಅದು ಕೂಡಲೆ ಕಂಡುಬರುವುದಿಲ್ಲ, ೨೦ ವರ್ಷಗಳ ಮೇಲೆ ಕಂಡುಬರುತ್ತವೆ.

ಪ್ರತಿದಿನ ನಾವೀ ರಾಸಾಯನಿಕ ಸಾಬೂನುಗಳನ್ನು ನಮ್ಮ ದೇಹಕ್ಕೆ ಉಜ್ಜಿಕೊಳ್ಳುತ್ತೇವೆ, ಹಾಗೂ ನಮ್ಮ ದೇಹ ಅದನ್ನು ಹೀರಿಕೊಳ್ಳುತ್ತಿರುತ್ತದೆ. ನಮಗೆ ಯಾರೂ ಈ ಬಗ್ಗೆ ಹೇಳಲಿಲ್ಲ. ನಮ್ಮ ತ್ವಚೆ ಈ ರಾಸಾಯನಿಕಗಳನ್ನು ಹೀರಿಕೊಳ್ಳುತ್ತದೆ.

ನಿಮಗೆ ಗೊತ್ತೇ ನಮ್ಮ ಚರ್ಮವು ನಮ್ಮ ಶರೀರದ ಅತಿ ದೊಡ್ಡ ಅಂಗವಾಗಿದೆ. ನೀವು ನಿಮ್ಮ ಕಣ್ಣೊಳಗೆ ರಾಸಾಯನಿಕಗಳನ್ನು ಹಾಕಿಕೊಳ್ಳದಿರುವಂತೆ, ನೀವು ಈ ತ್ವಚೆಯ ಮೇಲೂ ರಾಸಾಯನಿಕಗಳನ್ನು ಹಾಕಿಕೊಳ್ಳಬಾರದು.

ಪ್ರಾಚೀನ ಭಾರತದಲ್ಲಿನ ಒಂದು ಹೇಳಿಕೆಯಿದೆ, ನೀವು ಯಾವುದನ್ನು ಒಳಗೆ ತೆಗೆದುಕೊಳ್ಳುತ್ತೀರೋ ಅದನ್ನು ಮಾತ್ರ ಹೊರಗೆ ಹಚ್ಚಿಕೊಳ್ಳಬೇಕು. ನೀವು ನಿಮ್ಮ ಲೋಷನ್/ಪರಿಮಳ ದ್ರವ್ಯವನ್ನು ಕುಡಿಯುವಿರೆ? ನಿಮಗೆ ಅದನ್ನು ಕುಡಿಯಲಾಗದಿದ್ದರೆ, ನೀವದನ್ನು ನಿಮ್ಮ ತ್ವಚೆಯ ಮೇಲೂ ಹಾಕಲಾಗದು. ಅದು ಆ ಹೇಳಿಕೆಯಾಗಿತ್ತು. ಅವರು ಅರಶಿನ, ಲಿಂಬೆ, ಸಹಜ ತೈಲಗಳು, ಅಂತಹ ಪದಾರ್ಥಗಳನ್ನು ತಮ್ಮ ತ್ವಚೆಗಾಗಿ ಬಳಸುತ್ತಿದ್ದರು.

ಅದೇ ರೀತಿ ಕೀಟನಾಶಕಗಳು. ಇತ್ತೀಚೆಗೆ ಅವುಗಳನ್ನು ಅಷ್ಟೊಂದು ಬಳಸಲಾಗುತ್ತಿಲ್ಲ ಆದರೆ ಅವರು ಕೀಟನಾಶಕಗಳನ್ನು ಎಲ್ಲ ಕಡೆಯೂ ಉಪಯೋಗಿಸುತ್ತಿದ್ದರು. ಕೀಟನಾಶಕಗಳಿಂದ ಸಿಂಪಡಿಸಲ್ಪಟ್ಟ ಧಾನ್ಯಗಳನ್ನು ನೀವು ಬಿಟ್ಟು ನೋಡಿ, ಒಂದು ಇರುವೆಯೂ ಅದನ್ನು ತಿನ್ನುವುದಿಲ್ಲ, ಯಾವುದೇ ಜಂತುವೂ ಅದನ್ನು ತಿನ್ನುವುದಿಲ್ಲ. ಯಾವ ಕ್ರಿಮಿಯೂ ಅದನ್ನು ತಿನ್ನುವುದಿಲ್ಲ ಹಾಗೂ ನೀವದನ್ನು ತಿನ್ನುತ್ತೀರಿ! ನಮ್ಮ ಆರೋಗ್ಯ ತುಂಬಾ ಚೆನ್ನಾಗಿರದೆ ಇರಲು ಇವೆ ಕೆಲವು ಕಾರಣಗಳು.

ಮತ್ತೆ ಔಷಧೀಕರಣ. ಹಲವು ಬಾರಿ ನಾವು ಸೇವಿಸುವ ಅಲೋಪತಿಕ್ (ಇಂಗ್ಲೀಷ್) ಔಷಧಗಳು ಕೇವಲ ಒಂದು ಖಾಯಿಲೆಯನ್ನು ಇನ್ನೊಂದು ಖಾಯಿಲೆಗೆ ಮಾರ್ಪಡಿಸುತ್ತವೆ. ಅವು ನಿಜವಾಗಿಯೂ ಗುಣವಾಗುವುದಿಲ್ಲ. ನಿಮಗೆ ಪಿತ್ತ ಜನಕದ ತೊಂದರೆ ಇದೆ, ಅದು ಹೃದಯದ ತೊಂದರೆಯಾಗುತ್ತದೆ. ನಿಮಗೆ ಹೃದ್ರೋಗವಿದ್ದು ಅದಕ್ಕೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಅದು ಮೂತ್ರಪಿಂಡಗಳ ಮೇಲೆ ಪರಿಣಮಿಸುತ್ತದೆ, ಮತ್ತು ನೀವು ನಿಮ್ಮ ಮೂತ್ರಪಿಂಡಗಳಿಗೆ ಏನಾದರೂ ತೆಗೆದುಕೊಂಡಲ್ಲಿ, ನಿಮ್ಮ ಮೇದೋಜೀರಕವು ಕುಸಿಯುತ್ತದೆ.

ನನ್ನ ಅಭಿಪ್ರಾಯದಲ್ಲಿ ಜಗತ್ತೀಗ ಅಯುರ್ವೇದಕ್ಕೆ ಮರಳುತ್ತಿದೆ, ಅದರ ಪ್ರಕಾರ ಖಾಯಿಲೆಯ ಮೂಲ ಕಾರಣಕ್ಕೆ ತಲುಪಿ ಆಮೇಲೆ ಅದನ್ನು ಉಪಚರಿಸಬೇಕು. ಆಯುರ್ವೇದವು ಪ್ರಾಚೀನ ಔಷಧಿಯ ಪ್ರಕಾರವಾಗಿದೆ. ಅದು ಒಂದು ಪರಿಪೂರ್ಣ ಪದ್ಧತಿ. ಅವರು ಹೇಳುತ್ತಾರೆ, ಕೇವಲ ಔಷಧಿಯು ಕೆಲಸ ಮಾಡುವುದಿಲ್ಲ, ಅದರೊಂದಿಗೆ ಧ್ಯಾನವೂ ಅವಶ್ಯಕವಾಗಿದೆ ಎಂದು. ಎರಡೂ ಇರಬೇಕು.