ಗುರುವಾರ, ಫೆಬ್ರವರಿ 10, 2011

ಬುಧವಾರ ಮಾರ್ಚ್ ೨೪, ೨೦೦೯

ಬೇಸುವ ತಂಗಾಳಿ ಮಧುರವಾಗಿರಲಿ,
ಸಾಗರಗಳಿಂದ ಮಧು ಹೊರಹೊಮ್ಮಲಿ,

ಸಮಸ್ತ ವನಸ್ಪತಿಗಳೂ ನಮಗೆ ಅನುಕೂಲಕರವಾಗಲಿ
ರಾತ್ರಿಗಳು ಸಿಹಿಯಾಗಿರಲಿ, ಹಗಲುಗಳೂ ಸಿಹಿಯಾಗಿರಲಿ
ಈ ಭೂಮಂಡಲ ಕಣಕಣವೂ ನಮಗೆ ಸವಿಯಾಗಿರಲಿ
ಪರಲೋಕಗಳು, ಪಿತೃಗಳು ನಮಗೆ ಅನುಕೂಲಕರವಾಗಿರಲಿ
ಸಮಸ್ತ ಸಸ್ಯರಾಶಿಗಳೂ ಜೇನು ತುಂಬಿ ತುಳುಕಲಿ
ಸೂರ್ಯನೂ ಸಿಹಿಯಾಗಿರಲಿ,

ನಮ್ಮನ್ನು ಸ್ಪರ್ಶಿಸುವ ಎಲ್ಲ ವಿಕಿರಣಗಳೂ ನಮ್ಮನ್ನು ಪ್ರೀತಿಸಲಿ,
ಎಲ್ಲ ಪ್ರಾಣಿಗಳೂ ನಮಗೆ ಪ್ರಿಯವಾಗಲಿ
ನಮ್ಮ ಅನ್ನವು ಸಿಹಿಯಾಗಿರಲಿ
ನಮ್ಮ ಎಲ್ಲ ಯೋಚನೆಗಳೂ, ಮಾತುಗಳೂ
ಜೇನಿನಂತೆ ಮಧುರವಾಗಿರಲಿ
ನಮ್ಮ ಜೀವನ ಪರಿಶುದ್ಧವಾಗಿರಲಿ, ದಿವ್ಯವಾಗಿರಲಿ
ಜೀವನವು ಜೇನಿನಂತೆ ಮಧುರವಾಗಿರಲಿ.
                          - ಶ್ರೀ ಶ್ರೀ ರವಿಶಂಕರ್

ಕಿಟಕಿಯ ಬಾಗಿಲುಗಳು

ಸೋಮವಾರ ಮಾರ್ಚ್ ೨೩, ೨೦೦೯

ನಿಮ್ಮ ಮನಸ್ಸಿನ ಕಿಟಕಿಗಳನ್ನು ತೆರೆಯುವ ಮತ್ತು ಮುಚ್ಚುವ ನಿಮ್ಮ ಸಾಮರ್ಥ್ಯದ ಮೇಲೆ ಅರಿವಿನ ಪ್ರಮಾಣ ಅವಲಂಬಿತವಾಗಿರುತ್ತದೆ. ದೊಡ್ಡ ಬಿರುಗಾಳಿ ಕಾಣಿಸಿಕೊಂಡಾಗ ಕಿಟಕಿಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ಒಳಗಿದ್ದರೂ ನೀವು ಒದ್ದೆಯಾಗುತ್ತೀರಿ. ಒಳಗೆ ಬಿಸಿಯಾಗಿದ್ದು ಉಸಿರು ಕಟ್ಟತೊಡಗಿದರೆ ಬಾಗಿಲುಗಳನ್ನು ತೆರೆಯಬೇಕು.

ನಿಮ್ಮ ಇಂದ್ರಿಯಗಳು ಕಿಟಕಿಗಳಂತೆ. ನೀವು ಎಚ್ಚರವಾಗಿರುವಾಗ ನಿಮ್ಮ ಇಚ್ಛೆಯಂತೆ ತೆರೆಯಲು ಅಥವಾ ಮುಚ್ಚಲು ಸಾಧ್ಯವಾಗದಿದ್ದರೆ ನೀವು ಬಂಧನಕ್ಕೊಳಗಾಗಿರುತ್ತೀರಿ. ಇದನ್ನು ಸಾಧನೆ ಹಾಗೂ ಆಧ್ಯಾತ್ಮಿಕ ಆಚರಣೆಗಳ ಮೂಲಕ ಸಾಧಿಸಬಹುದು.

ನೀವು ಎಷ್ಟರ ಮಟ್ಟಿಗೆ ಎಚ್ಚರದಲ್ಲಿರುತ್ತೀರೊ, ಅಲ್ಲಿಯವರೆಗೆ ನಿಮ್ಮ ನೆರೆಹೊರೆಯ ಎಲ್ಲವೂ ನಿಮಗೆ ಜ್ಞಾನವನ್ನು ಕೊಡುತ್ತವೆ. ನೀವು ಎಚ್ಚರವಾಗಿಲ್ಲದಿದ್ದರೆ ಎಂತಹ ಉತ್ಕೃಷ್ಟ ಜ್ಞಾನದಿಂದಲೂ ಏನೂ ಪ್ರಯೋಜನವಾಗುವುದಿಲ್ಲ.

ನಿಷ್ಠೆ

ಶನಿವಾರ ಮಾರ್ಚ್ ೨೧, ೨೦೦೯

ಪ್ರಬುದ್ಧವಾದ ಹಾಗೂ ಸುಸಂಬದ್ಧ ಮನಸ್ಸು ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತದೆ. ಪ್ರಜ್ಞೆಯ ಅವಿಭಾಜಿತ ಸಮಗ್ರತೆಯನ್ನು ಮನಸ್ಸಿನ ಸಮೃದ್ಧಿಯನ್ನು ನಿಷ್ಠೆ ಸೂಚಿಸುತ್ತದೆ. ಮನಸ್ಸು ಏಕಾಗ್ರವಾಗಿರುವಾಗ ಅದು ಉದ್ರೇಕಗೊಂಡಿರುತ್ತದೆ, ಮೋಸ ಮಾಡುತ್ತದೆ, ಸಮಯ ಸಾಧಕವಾಗುತ್ತದೆ.

ಸಮಯ ಸಾಧಕ ಪ್ರವೃತ್ತಿಯಿಂದ ನಿಷ್ಠಾಹೀನತೆ ಉಂಟಾಗುತ್ತದೆ. ತನ್ನ ವಿಧಿಯ ಬಗ್ಗೆ ದೂರದೃಷ್ಠಿಯಿಲ್ಲದಿರುವುದೇ ಸಮಸಾಧಕತನ. ಆರೋಗ್ಯವಾಗಿರಬೇಕಾದರೆ ಪ್ರಾಮಾಣಿಕತೆ ಹಾಗೂ ಏಕಾಗ್ರತೆ ಎರಡೂ ಬೇಕು. ಮನಸ್ಸು ಒಡೆದಾಗ ಭ್ರಮೆ ಮುಂತಾದ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳು ಹಚ್ಚಿಕೊಳ್ಳುತ್ತವೆ. ನಿಷ್ಠೆಯೇ ನಿಜವಾದ ಸಾಮರ್ಥ್ಯ. ಇದಕ್ಕೆ ಪ್ರಕೃತಿಯಿಂದಲೂ ಸೂಕ್ತ ಸಹಾಯ ಕಾಲಾಂತರದಲ್ಲಿ ಓದಗಿಬರುತ್ತದೆ.

ಭಯ ಹಾಗೂ ಮಹತ್ವಾಕಾಂಕ್ಷೆಗಳು ನಿಷ್ಠೆಗೆ ಎದುರಾಗುವ ತೊಂದರೆಗಳು ಭೌತಿಕ ಹಾಗೂ ಆಧ್ಯಾತ್ಮಿಕ ಸ್ತರಗಳಲ್ಲಿ ನಿಷ್ಠೆ ಅಗತ್ಯ. ಯಾವುದೇ ಸಂಸ್ಥೆಯನ್ನು, ಸಮಾಜವನ್ನು ನಾಶಮಾಡಲು, ಕಟ್ಟಲು, ಕಾಪಾಡಲು ನಿಷ್ಠೆ ಅಗತ್ಯ.

ನಿಮ್ಮ ಬದ್ಧತೆಗಳ ಪ್ರಸ್ತುತೆಯ ಬಗ್ಗೆ ನಿಮ್ಮ ನಂಬಿಕೆಯೇ ನಿಷ್ಠೆ . ಬದ್ಧತೆಗಳನ್ನು ಗೌರವಿಸಿ ಕರ್ಯಗತ ಮಾಡುವುದು ನಿಷ್ಠೆ. ಇದು ನಿಮ್ಮನ್ನು ಬಯಕೆ ಹಾಗೂ ಹೇವರಿಕೆಗಳ ದ್ವಂದ್ವದಿಂದ ಪಾರುಮಾಡುತ್ತದೆ.
ಜವಾಬ್ದಾರಿ, ಸಮರ್ಪಣೆ ಮತ್ತು ಬದ್ಧತೆಗಳು ನಿಷ್ಠೆಯ ಮೂರು ಕಾರಣಗಳು.

ನಿಷ್ಠಾವಂತ ಮನಸ್ಸು ಹೌದು ಎನ್ನುತ್ತದೆ. ಪ್ರಶ್ನೆಗಳನ್ನು ಕೇಳುವ ಉದ್ದೇಶ ಉತ್ತರಗಳನ್ನು ಪಡೆಯುವುದು. ಎಲ್ಲ ಉತ್ತರಗಳ ಮೂಲ ಉದ್ದೆಶ ಹೌದು ಎನ್ನಿಸುವುದು.

ಹೌದು ಎನ್ನುವುದು ಜ್ಞಾನದ ಗುರುತು. ಹೌದು ಎನ್ನುವ ಮನಸ್ಸು ಮೌನವಾಗಿರುತ್ತದೆ. ಇದು ಆನಂದಮಯ ಮನಸ್ಸು ಇಲ್ಲ ಎನ್ನುವ ಸಂಘರ್ಷ ಮಾಡುತ್ತಿರುತ್ತದೆ. ಅನುಮಾನಿಸುತ್ತದೆ, ದುಃಖಿಯಾಗಿರುತ್ತದೆ. ನಿಷ್ಠೆಯು 'ಹೌದು' ಎನ್ನುವ ಮನಸ್ಸಿನಿಂದ ಪ್ರಾರಂಭವಾಗಿ ಇಲ್ಲ ಎನ್ನುವ ಮನಸ್ಸನ್ನು ನಾಶಮಾಡಲು ತೊಡಗುತ್ತದೆ.