ಭಾನುವಾರ, ಮೇ 2, 2010

ಜನ್ಮಾಷ್ಟಮಿ-ಒಂದು ಹೊಸ ನೋಟ

ಗುರುವಾರ, ಸೆಪ್ಟೆಂಬರ್ 2, 2010

      ಶ್ರೀಕೃಷ್ಣನ ಜನ್ಮ ದಿನಾಚರಣೆಯಾದ ಜನ್ಮಾಷ್ಟಮಿಯು ಮಹತ್ವಪೂರ್ಣ, ಏಕೆಂದರೆ ಇದು ಪ್ರತ್ಯಕ್ಷ ಜಗತ್ತು ಮತ್ತು ಕಣ್ಣಿಗೆ ಕಾಣದ ಆಧ್ಯಾತ್ಮಿಕ ಲೋಕದ ಸಂಕೇತ, ನೈಜತೆಯ ಗೋಚರ ಮತ್ತು ಅಗೋಚರ ಅಂಶಗಳ ಸಂಕೇತ. ಅಷ್ಟಮಿಯಂದು ಶ್ರೀಕೃಷ್ಣನ ಜನ್ಮ ಅವನ ಆಧ್ಯಾತ್ಮಿಕ ಹಾಗೂ ಲೌಕಿಕ ಜ್ಞಾನದಲ್ಲಿ ಗುರುತ್ವವನ್ನು ಸೂಚಿಸುತ್ತದೆಅವನೊಬ್ಬ ಶ್ರೇಷ್ಠ ಗುರು, ಆಧ್ಯಾತ್ಮಿಕ ಸ್ಫೂರ್ತಿ ಹಾಗೂ ಪರಿಪೂರ್ಣ ರಾಜಕಾರಣಿ. ಒಂದು  ರೀತಿಯಲ್ಲಿ ಅವನು ಯೋಗೇಶ್ವರ(ಪ್ರತಿ ಯೋಗಿಯೂ ಏರಬಯಸುವ ಸ್ಥಿತಿ), ಇನ್ನೊಂದು ರೀತಿಯಲ್ಲಿ ಅವನೊಬ್ಬ ಚೋರ.
      ಕೃಷ್ಣನ ಅನನ್ಯ ಗುಣವೆಂದರೆ ಅವನು ಒಂದು ಕ್ಷಣದಲ್ಲಿ ಎಲ್ಲಾ ಸಾಧುಗಳಿಗಿಂತಲೂ ಹೆಚ್ಚು ಶ್ರದ್ಧಾವಂತ, ಜೊತೆಗೆ ಒಬ್ಬ ಅಪ್ಪಟ ತುಂಟ!ಅವನ ನಡತೆಯು ಅತಿ ವಿರೋಧಾತ್ಮಕ ಅಂಶಗಳ ನಿಕೃಷ್ಠವಾದ ಸಮತೋಲನ- ಬಹುಶಃ ಹೀಗಾಗಿ ಶ್ರೀಕೃಷ್ಣನ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಕರ. ಒಬ್ಬ ಸನ್ಯಾಸಿಯು ಹೊರಗಿನ ಪ್ರಪಂಚದಿಂದ ವಿಚಲಿತನಾಗಿರುತ್ತಾನೆ. ಅದೇ ಮಟ್ಟದಲ್ಲಿ ಒಬ್ಬ ರಾಜಕಾರಣಿ ಅಥವಾ ರಾಜ ಆಧ್ಯಾತ್ಮಿಕ ಲೋಕದ ಬಗ್ಗೆ ಅರಿಯದವನಾಗಿರುತ್ತಾನೆ.  ಆದರೆ ಶ್ರೀಕೃಷ್ಣನು ದ್ವಾರಕಾಧೀಶನೂ ಹೌದು, ಯೋಗೇಶ್ವರನೂ ಹೌದು.
ಕೃಷ್ಣನ ಬೋಧನೆಗಳು ನಮ್ಮ ಕಾಲಕ್ಕೆ ಅನುಸರಿಸಲು ಬಹಳ ಪ್ರಸ್ತುತವಾಗಿವೆ
ಏಕೆಂದರೆ ಅದರಿಂದ ನೀವು ಲೌಕಿಕ ಆಕಾಂಕ್ಷೆಗಳಲ್ಲಿ ಮುಳುಗಿಹೋಗುವುದಿಲ್ಲ, ಜೊತೆಗೆ ಸಂಪೂರ್ಣವಾಗಿ ನಿರ್ಲಿಪ್ತರನ್ನಾಗಿಯೂ ಮಾಡುವುದಿಲ್ಲ. ಅವು ನಿಮ್ಮ ಜೀವನವನ್ನು ಮತ್ತೆ ಬೆಳಗಿಸುತ್ತವೆ; ಕರಟಿದ, ಒತ್ತಡಗಳಿಂದ ಬಳಲಿದ ವ್ಯಕ್ತಿತ್ವದಿಂದ, ನೀವು ಇನ್ನೂ ಕೇಂದ್ರೀಕೃತರಾಗಿ, ಕ್ರಿಯಾಶೀಲರನ್ನಾಗಿಸುತ್ತದೆ. ಶ್ರೀಕೃಷ್ಣನು ನಮಗೆ ಭಕ್ತಿಯ ಜೊತೆಗೆ ಕೌಶಲ್ಯಗಳನ್ನೂ ಹೇಳಿಕೊಡುತ್ತಾನೆ. ಗೋಕುಲಾಷ್ಟಮಿ ಆಚರಿಸುವುದೆಂದರೆ, ನಮ್ಮೊಳಗೆ ಸಂಪೂರ್ಣ ವಿರುದ್ಧಾತ್ಮಕವಾದರೂ ಮೈತ್ರಿಯ ಗುಣಗಳನ್ನು ಅಳವಡಿಸುವುದು, ಅದನ್ನು ತಮ್ಮ ಜೀವನದಲ್ಲಿಯೂ ಕಂಡುಕೊಳ್ಳುವುದು.
      ಅಂದರೆ ಜನ್ಮಾಷ್ಟಮಿಯನ್ನು ಆಚರಿಸುವ ಎಲ್ಲದಕ್ಕಿಂತಲು ಪರಿಪೂರ್ಣ ರೀತಿಯೆಂದರೆ-ನಿಮಗೆ ಎರಡು ಪಾತ್ರಗಳನ್ನು ನಿರ್ವಹಿಸಬೇಕಾಗಿದೆ ಎಂದು ತಿಳಿದಿರುವುದು- ಈ ಭೂಮಿಯಲ್ಲಿ ಒಬ್ಬ ಜವಾಬ್ದಾರ ಜೀವಿಯಾಗಿ ಬಾಳುವುದು, ಅದರೊಂದಿಗೆ ನೀನು ಎಲ್ಲಾ  ಆಗು ಹೋಗುಗಳಿಂದ ಮೇಲೆ ಇರುವಿ, ಪರಿಶುದ್ಧ ಬ್ರಹ್ಮ ಎಂದು ತಿಳಿಯುವುದು. ನಿಮ್ಮ ಜೀವನದಲ್ಲಿ ಒಂದಂಶ ಸನ್ಯಾಸಿ, ಒಂದಂಶ ಕ್ರಿಯಾಶೀಲತೆಯನ್ನು ಅಳವಡಿಸುವುದು ಜನ್ಮಾಷ್ಟಮಿಯನ್ನು ಆಚರಿಸುವುದರ ನಿಜವಾದ ಮಹತ್ವವಾಗಿದೆ.

The Art of living
© The Art of Living Foundation