ಶುಕ್ರವಾರ, ಸೆಪ್ಟೆಂಬರ್ 27, 2013

ನಿಸ್ಪೃಹ ಸಾಧಕರಿಗೊಂದು ಆತ್ಮೀಯ ಕಿವಿಮಾತು

ಸೆಪ್ಟೆಂಬರ್ ೨೭, ೨೦೧೩
ಬೆಂಗಳೂರು, ಭಾರತ 

ಲ್ಲಿ ನಿಮ್ಮೊಂದಿಗೆ ಸಾಹಿತ್ಯಕ ಉತ್ಸವದಲ್ಲಿ ಪಾಲ್ಗೊಳ್ಳಲು ಮುದವೆನಿಸುತ್ತದೆ. ಸಾಹಿತ್ಯ ಹಾಗು ಆಧ್ಯಾತ್ಮಿಕತೆಯು ದೀರ್ಘ ಸಂಬಂಧ ಹೊಂದಿವೆ. ಈ ಪ್ರಪಂಚದಲ್ಲಿ ಆಧ್ಯಾತ್ಮಿಕತೆ ಇದೆ ಅಂದರೆ ಅದು ಸಾಹಿತ್ಯದ ಸಹಾಯದಿಂದ. ಕನಿಷ್ಠ ಪಕ್ಷ ಈ ದೇಶದಲ್ಲಿ ಹೆಚ್ಚಿನ ಪ್ರಚಲಿತದಲ್ಲಿರುವ, ಓದಿ ಆಚರಣೆಗೆ ತಂದಿರುವಂತಹ ಸಾಹಿತ್ಯವು ಆಧ್ಯಾತ್ಮಿಕತೆಯ ಬಂಧನ ಹೊಂದಿದೆ.

ಮತ್ತೆ, ಆಧ್ಯಾತ್ಮಿಕತೆ ಎಂದರೇನು? ಅದು ಹೊರಗಿರುವಂತದ್ದೆ? ಅಥವಾ, ಪ್ರಾಯೋಗಿಕವಾದುದೆ? ಯಾವುದು ನಿಮ್ಮ ಚೇತನವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೊ ಅದನ್ನು ಆಧ್ಯಾತ್ಮಿಕತೆ ಎಂದು ಹೇಳಬಯಸುತ್ತೇನೆ.  ಪೂರ್ಣ ಸಾಹಿತ್ಯವು ನಿಮ್ಮನ್ನು ಎತ್ತರಕ್ಕೊಯ್ದು, ನಿಮ್ಮ ಮುಖದಲ್ಲಿ ಮುಗುಳ್ನಗೆ ಮೂಡಿಸಿ, ನಿಮ್ಮನ್ನು ವಿಶ್ರಾಂತಗೊಳಿಸಿ, ನೀವು ಕ್ಷೀಣಿಸುತ್ತಿರುವಾಗ ಚೈತನ್ಯ ತುಂಬಿ, ಎಲ್ಲವು ಅಲುಗಾಡುವ ಅಥವಾ ಅಭಾವದಿಂದಿರುವ ಸಂಧರ್ಭದಲ್ಲಿ ನಂಬಿಕೆ ತುಂಬುವುದೇ ಆಧ್ಯಾತ್ಮಿಕತೆ ಎಂದು ಹೇಳಬಯಸುತ್ತೇನೆ.

ವಸ್ತುತಃ ಎಲ್ಲ ಪದ್ಯಗಳು ಆಧ್ಯಾತ್ಮದೊಳಗಿಂದ ಒಡಮೂಡಿವೆ ಎನ್ನಬಯಸುತ್ತೇನೆ. ಇದೆಲ್ಲ ಒಳಗಿನ ಸಮಚಿತ್ತತೆ, ಪರೋಕ್ಷ ಅರಿವಿನಿಂದ ಬಂದಿವೆ.

ನಿಸ್ಪೃಹ ಸಾಧಕರಿಗೆ ಆತ್ಮೀಯ ಕಿವಿಮಾತು ಎಂಬ ಪುಸ್ತಕವು ಒಂದು ಗುಂಪಿನ ಯುವಜನರಿಗೆ ಪ್ರತಿ ಬುಧವಾರ ಸತತ ಏಳು ವರ್ಷಗಳ ಕಾಲ ನೀಡಿದ ಸಂವಾದದ ಫಲ. ಒಬ್ಬರನ್ನೊಬ್ಬರು ಪ್ರಶ್ನೆ ಕೇಳುತ್ತ, ಕೆಲವು ವಿಷಯವನ್ನು ಚರ್ಚಿಸುತ್ತ, ಬೌದ್ದಿಕ ಬುದ್ದಿ ಶಕ್ತಿಯನ್ನು ಮಥಿಸುತ್ತ, ಮತ್ತು ಯಾವುದೆಲ್ಲ ಹೊರಬರುತ್ತಿದ್ದವೋ ಅವನ್ನೆಲ್ಲ ಜ್ಞಾನ ಪುಟಗಳನ್ನಾಗಿ ಹೊರತರಲಾಯಿತು.

ಸಂಸ್ಕೃತದಲ್ಲಿ ಒಂದು ಹೇಳಿಕೆಯಿದೆ, 'ವದೆ ವದೆ ಜಯತೆ ತತ್ವಭೋದಃ'. ಪ್ರತಿಯೊಂದು ಚರ್ಚೆಯು ಗ್ರಹಿಸುವಂತಹ ತತ್ವವನ್ನು ಹೊರತರುತ್ತದೆ. ನಮ್ಮ ಅನುಭವಗಳನ್ನು ಚರ್ಚಿಸಿದಾಗ ಅದರಿಂದ ಸುಂದರವಾದುದೊಂದು ಹೊರಬರುತ್ತದೆ. ಆದ್ದರಿಂದ ಚರ್ಚೆಯು ಸಾಹಿತ್ಯದ ಹಾಗು ಆಧ್ಯಾತ್ಮದ ಒಂದು ಭಾಗ.  ಒಂದು ಆಳವಾದ ತೃಪ್ತಿಯ ಹಾಗು ಸಮಾಧಾನದ ಭಾವ ಉಂಟಾದರೆ ಅದು ಆಧ್ಯಾತ್ಮದ ಸಂಕೇತ.

ಆರ್ಟ್ ಆಫ್ ಲಿವಿಂಗ್ ನಲ್ಲಿ ನಾವು ಉಸಿರಿನ (ಮನಸ್ಸು ಮತ್ತು ಉಸಿರು ನಿಕಟ ಕೊಂಡಿಗಳು) ಸಹಾಯದಿಂದ ದೇಹಕ್ಕೆ ಬೇಕಾದಂತಹ ಚೈತನ್ಯವನ್ನು ಒದಗಿಸಲಾಗುತ್ತದೆ.

ಇದು 'ಬರಹಗಾರನ ತಡೆ' ಎಂಬ ತೊಂದರೆಯಿಂದ ತಪ್ಪಿಸುತ್ತದೆ. ನೀವು ಬರಹಗಾರರಾಗಿದ್ದಲ್ಲಿ ಬರೆಯುವ ಮುಂಚೆ ಉಸಿರಿನ ವ್ಯಾಯಾಮ ಮಾಡಿ ವಿಶ್ರಮಿಸಿ.  ಯೋಗ ವಿಜ್ಞಾನದಲ್ಲಿ ಹೇಳಿರುವಂತೆ  'ಜ್ಞಾನ ನಾಡಿ'ಯು (ಅದೊಂದು ಶಕ್ತಿ ಪ್ರಸರಣದ ಮಾರ್ಗ)  ತೆರೆದುಕೊಳ್ಳುವುದನ್ನು ನೋಡುವಿರಿ. ನಂತರ ನೀವು ಬರೆಯಲು ಸಾಧ್ಯವಾಗುತ್ತದೆ. 'ಬರಹಗಾರನ ತಡೆ' ತೊಂದರೆಯು ಮಾಯವಾಗುತ್ತದೆ. ಇದು ಬರಹಗಾರರಿಗೆ ರಚನಾತ್ಮಕ,ಹೊಸದಾದ ಬರಹಗಳನ್ನು ಹೊರತರಲು ಸಹಾಯಮಾಡುತ್ತದೆ. ಕೆಲವು ನಿಮಿಷದ ಆಳವಾದ ಮೌನವು ನಮ್ಮನ್ನು ನಾವು ಚೆನ್ನಾಗಿ ವ್ಯಕ್ತಪಡಿಸಿಕೊಳ್ಳಲು ಸಹಾಯವಾಗುತ್ತದೆ. ನಿಮಗೀಗ ಏನಾಗುತ್ತಿದೆಯೆಂದು ಗಮನಿಸುತ್ತೀರ? ಪದಗಳ ಮಧ್ಯ ಓದಲು ಸಾಧ್ಯವೇ? ಮನಸ್ಸಿನಲ್ಲಿ ಏನೋ ಒಂದು ಸಮಸ್ಥಿತಿಗೆ ಬರುತ್ತಿರುವುದು ಗೊತ್ತಾಗುತ್ತಿದೆಯೇ?

ನಮ್ಮ ಆಲೋಚನೆಯ ಮಧ್ಯೆ ಇಲಿಯ ಓಟ ಸಾಗುತ್ತಿರುತ್ತದೆ. ಅದು ಕಡಿಮೆಯಾದಾಗ ಒಂದು ಸುಂದರವಾದುದೊಂದು ಸೃಷ್ಟಿಯಾಗಲು ಸಾಧ್ಯವಾಗುತ್ತದೆ.

ಬರಹಗಾರರು ಪ್ರಕೃತಿಯೊಂದಿಗೆ ಇರಲು ಬಯಸುತ್ತಾರೆ. ನಿಮಗೆ ಗೊತ್ತೇ ಪ್ರಕೃತಿಯೊಂದಿಗಿದ್ದಾಗ, ಸಮುದ್ರದ ದಂಡೆಯಲ್ಲಿ, ಪರ್ವತ ಪ್ರದೇಶದಲ್ಲಿ, ಉದ್ಯಾನವನದಲ್ಲಿ  ನಿಜವಾಗಿಯು  ಏನಾಗುವುದೆಂದು?   ಯಾವುದೋ ಒಂದು ಆಂತರ್ಯದಲ್ಲಿ ನಿಮ್ಮನ್ನು ನಿಧಾನಗೊಳಿಸುತ್ತದೆ. ಕಟ್ಟಳೆ ಕಡಿಮೆಯಾದಾಗ ರಚನಾತ್ಮಕತೆ ಹೆಚ್ಚುತ್ತದೆ.

ಇದೇ ತರಹ ಬರಹಗಾರರ ತಡೆಯು ಒಡೆದು ರಚನಾತ್ಮಕ ಕೆಲಸ ಸಾಧ್ಯವಾಗುತ್ತದೆ ಬರಹಗಾರರು  ಏಕಾಂತ ಸ್ಥಳಗಳಿಗೆ ಹೋದಾಗ.

ಬೆಳ್ಳಂಬೆಳಿಗ್ಗೆ ನೀವು ಏನನ್ನಾದರು ಬರೆಯಲು ಕುಳಿತಾಗ ನಿಮ್ಮಲ್ಲೊಂದು ಚೆಂದದ ಭಾವ ಉಂಟಾಗುತ್ತದೆ. ಅದು ವಾತಾವರಣದಿಂದಲೋ ಅಥವಾ ಸುತ್ತಲಿನ ಪರಿಸರದಿಂದಲೋ ಉಂಟಾಗುತ್ತದೆ. ಇಂತಹ ಪರಿಸರವನ್ನು ನೀವೇ ಸೃಷ್ಟಿಸಬಹುದು. ಇದಕ್ಕಾಗಿ ನೀವು ಬೇರೆಲ್ಲೋ ಇರಬೇಕಾಗಿಲ್ಲ, ನಿಮ್ಮ ಮನಶಕ್ತಿಯಿಂದ ನೀವಿದ್ದಲ್ಲೇ ಸೃಷ್ಟಿಸಬಹುದು. ಉಸಿರಿನತ್ತ ಗಮನ ಹರಿಸುತ್ತ ನಮ್ಮ ಮನಸನ್ನು ಶಾಂತಗೊಳಿಸಬಹುದು.

ನಾನು ೧೯೭೨ ರಲ್ಲಿ ಬರೆಯಲು ಶುರು ಮಾಡಿದಾಗ ನನಗೆ ೧೬ ವರ್ಷ. ನನ್ನ ಸ್ನೇಹಿತನ ತಂದೆಯು ಪ್ರಸಿದ್ಧ ಬರಹಗಾರರು. ಕೆಲವೊಮ್ಮೆ ನಾವುಗಳು ಅವರ ಜೊತೆ ಕುಳಿತು ಸಂಭಾಷಿಸುತ್ತಿದ್ದೆವು. ನಾವುಗಳು ಅಂತಹ ಶ್ರೇಷ್ಠ ವ್ಯಕ್ತಿಗಳಿಂದ ಸುತ್ತುವರಿದು ನಾವೂ ಏನಾದರು ಮಾಡಬೇಕೆಂಬ ಹುಮ್ಮಸ್ಸು ಹುಟ್ಟಿಸುತ್ತಿದ್ದರು. ಅವರ ಪುಸ್ತಕಗಳನ್ನು ಅಥವಾ ಪದ್ಯಗಳನ್ನು ಓದಿದಾಗ ಅವರಲ್ಲಿ ಹೇಳುತ್ತಿದ್ದೆ, ನನಗೆ ಅನ್ನಿಸುವುದನ್ನು ನನ್ನಿಂದ ಬರೆಯಲಾಗುವುದಿಲ್ಲ, ಏಕೆಂದರೆ ಅದನ್ನೆಲ್ಲ ಆಗಲೇ ಬರೆದಾಗಿದೆ.
ನನ್ನ ಯುವ ಮತ್ತು ಉದಯೋನ್ಮುಖ ಬರಹಗಾರರೆ ನಿಮಗೆ ನನ್ನ ಸಲಹೆಯೆಂದರೆ ದೊಡ್ಡ ದೊಡ್ಡ ಪುಸ್ತಕಗಳನ್ನು ಓದಲು ಹೋಗಬೇಡಿ ಅದರ ಬದಲು ವರ್ಣಚಿತ್ರಗಳನ್ನು ನೋಡಿ.

ಚಿತ್ರಗಾರರಿಗೆ ನನ್ನ ಸಲಹೆಯೆಂದರೆ ಇನ್ನೊಬ್ಬರ ಚಿತ್ರಗಳನ್ನು ನೋಡಲು ಹೋಗಬೇಡಿ. ಒಳ್ಳೆಯ ಪುಸ್ತಕಗಳನ್ನು ಓದಿ, ಅದರಿಂದ ಚೆನ್ನಾಗಿ ಚಿತ್ರಿಸಬಹುದು.

ಕೆಲವರು ಎಷ್ಟು ಚೆನ್ನಾಗಿ ಬರೆಯುತ್ತಾರೆಂದರೆ ಅದಕ್ಕಿಂತ ಚೆನ್ನಾಗಿ ನಿಮಗೆ ಬರೆಯಲು ಸಾಧ್ಯವಿಲ್ಲ ಎಂದೆನಿಸುತ್ತದೆ. ನಿಮಗೆ ಏನು ಹೇಳಬೇಕಾಗಿದೆಯೋ ಅದನ್ನು ಹೇಳಿ ಮುಗಿಸಿಯಾಗಿದೆ. ಸ್ಪಷ್ಟವಾಗಿ ಇಂತಹುದೇ ಭಾವ ಕೃಷ್ಣ, ಅಡಿಗರ ಅಥವಾ ಡಾ. ಡಿ.ವಿ ಗುಂಡಪ್ಪನವರ 'ಮಂಕುತಿಮ್ಮನ ಕಗ್ಗ' ಓದಿದಾಗ  ಉಂಟಾಯಿತು. ನಮ್ಮಲ್ಲಿ ಕೆಲವರಿಗೆ ಆಗಿರುವಂತಹ ಅನುಭವವನ್ನೇ ಬರೆದಿದ್ದಾರೆ. ಸಾಹಿತ್ಯವು ಮನುಷ್ಯನಲ್ಲಿ ಸಾಮಾನ್ಯ ಜ್ಞಾನದ ಹನಿ ಹನಿಯನ್ನು ತುಂಬುತ್ತದೆ. ಇದು ಕೆಲವರನ್ನು ಪೂರ್ವಗ್ರಹ ಪೀಡಿತರನ್ನಾಗಿ ಮತ್ತು ತಪ್ಪು ಭಾವ ಹಾಗು ಸಂಕುಚಿತ ಬುದ್ಧಿಯವರನ್ನಾಗಿ ಮಾಡಬಹುದು. ಇದನ್ನು ನಾವು ಚೀನ ಹಾಗು ಪ್ರಪಂಚದ ಇತರೆ ಭಾಗಗಳಲ್ಲಿ ನೋಡಿದ್ದೇವೆ. ಸಾಹಿತ್ಯದ ಮೂಲಕ ಕೆಲವು ಸಿದ್ದಾಂತಗಳು ಹುಟ್ಟಿಕೊಂಡು ತುಂಬಾ ಜನರು ತೊಂದರೆಪಟ್ಟರು. ಹಾಗು ಆ ಭಾಗಕ್ಕೆ ಅಂಟಿಕೊಂಡು ಲಕ್ಷ ಲಕ್ಷ ಮಂದಿ ಸಾವನ್ನಪ್ಪಿದರು.

ಚತ್ತೀಸ್ ಗಡ್, ನಾನು ಈ ದಿನ ಭೇಟಿ ಕೊಡಬೇಕಿರುವ ಸ್ಥಳ. ಈ ಸ್ಥಳವು ನಕ್ಸಲರ ಚಟುವಟಿಕೆಯಿಂದ ತ್ರಾಸವನ್ನನುಭವಿಸುತ್ತಿದೆ. ಇದೂ ಇದರದೇ ಆದ ಸಾಹಿತ್ಯವನ್ನು ಹೊಂದಿದೆ. ನಕ್ಸಲರು ಅದರಲ್ಲಿ ಬಹಳ ನಂಬಿಕೆಯಿಟ್ಟಿದ್ದಾರೆ ಹಾಗು ನೆಪೋಲಿಯನ್ ಅನ್ನು ಉಲ್ಲೇಖಿಸಿ ಹೇಳುತ್ತಾರೆ 'ಹಿಂಸೆಯೇ ದಾರಿ'!.

ನಾನು ಹೇಳಿದೆ, ನೆಪೋಲಿಯನ್ ಹೇಳಲಿಲ್ಲ ಅವನನ್ನು ಅಂಗೀಕರಿಸಿ ಎಂದು!. ಅವನು ರಾಜ್ಯವನ್ನು ಅವನ ಶಕ್ತಿಯಿಂದ ವಶಪಡಿಸಿಕೊಂಡ. ನಾವುಗಳು ನಮ್ಮ ಶಕ್ತಿಯತ್ತ ಗಮನಹರಿಸಬೇಕು.

ಇಂತಹ ದಾರಿ ತಪ್ಪಿಸುವಂತಹ ಅಥವಾ ಹಿಂಸೆಯ ಸಿದ್ದಾಂತವನ್ನು ಜನರಲ್ಲಿ ತುಂಬುವಂತಹ ಕೆಲಸ ಈ ಪ್ರಪಂಚದಲ್ಲಿ ತುಂಬಾ ನಡೆದಿದೆ. ತದ್ವಿರುದ್ದವಾಗಿ,  ಇಂತಹುದೇ ಸಂಭವಿಸಿದೆ ಶಾಂತಿ ನೆಲೆಸುವ ಮೂಲಕ. ಮಹಾತ್ಮ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್ ಹಾಗು ಇತರರುಗಳ ಬರಹಗಳು ಶಾಂತಿ, ತತ್ವಕ್ಕೆ ಬದ್ಧವಾದ, ಸಹನೆ, ಪ್ರೀತಿಯ ಹಂಚಿಕೆ ಇವುಗಳಿಂದ ತುಂಬಿತ್ತು. ಈ ದಿನಗಳಲ್ಲಿ ಇವುಗಳು ಬೇಕಾಗಿವೆ.

ಸಾಹಿತ್ಯವು ಶಾಂತಿಯಿಂದ ತಪ್ಪುದಾರಿಗೆ ಎಳೆಯಬಹುದು. ಹಾಗು ಶಾಂತಿಯನ್ನು ತರಬಹುದು. ಇದು ಕೋಪ, ಆಶಾಭಂಗ ಅಥವಾ ಪ್ರೀತಿ, ಒಂದೇ ಎಂಬ ಭಾವವನ್ನು ತರಬಹುದು. ಇದೆಲ್ಲ ನಮಗೆ ತಿಳಿದಿದೆ. ಇದರಲ್ಲಿ ಒಂದು ಅಥವಾ ಮತ್ತೊಂದು ಆಗಬೇಕೆಂದು ನಾನು ಹೇಳುತ್ತಿಲ್ಲ.

ಜೀವನವು ತುಂಬ ಕ್ಲಿಷ್ಟವಾದುದು. ಇದರಲ್ಲಿ ಎಲ್ಲ ರೀತಿಯ ಅಂಶಗಳು ಒಳಗೊಂಡಾಗ ಮಾತ್ರ ಪರಿಪೂರ್ಣವೆನಿಸುತ್ತದೆ. ಯಾವುದೇ ಸಾಹಿತ್ಯವು ಸ್ವಲ್ಪ ವ್ಯಂಗ್ಯ, ಸಂದೇಹ, ಪುಳಕಗಳನ್ನು ವಿಮರ್ಶಿಸಲು ಓದುಗರಿಗೆ ನೀಡಬೇಕು. ಎಲ್ಲವು ಸಾದಾ ಇರುವ ಬದಲು ಇಂತಹುದನ್ನು ನೀಡಬೇಕು.

ಜನರು ಅವರದೇ ಆದ ವಿಚಾರಗಳನ್ನು ಹೊರತರಬೇಕು. ಸಾಹಿತ್ಯದಲ್ಲಿ ಪ್ರತ್ಯೇಕತೆ ಇರಬೇಕು. ಸಾಹಿತ್ಯವು ಚಿತ್ತೋದ್ರೇಕದಿಂದ ಅಥವಾ ಯಾವುದೋ ಒಂದು ಮನೋಭಾವದಿಂದ ಕೂಡಿರುವ ಬದಲು ಪ್ರತ್ಯೇಕತೆ ಇರಬೇಕು ಅನ್ನುವುದು ನನ್ನ ಅನಿಸಿಕೆ. ಇದು ಜನರಿಗೆ ಅವರ ಬಗ್ಗೆ ಚಿಂತಿಸುವ, ರಚನಾತ್ಮಕತೆ, ಅವರದೇ ಆದ ವಿಚಾರ, ಮತ್ತು ಮಾನವೀಯ ಮೌಲ್ಯವನ್ನು ಗೌರವಿಸುವ ಗುಣವನ್ನು ತರುತ್ತದೆ.

ನಿಸ್ಪೃಹ ಸಾಧಕರಿಗೆ ನನ್ನದೊಂದು ಕಿವಿಮಾತು, 'ಉನ್ನತವಾದುದನ್ನು ಅರಸಿರಿ'. ನಿಮ್ಮ ಐದು ಗ್ರಹಣ ಶಕ್ತಿಗೂ ಮೀರಿದ, ಜೀವನಕ್ಕೂ ಅತೀತವಾದುದನ್ನು ಅರಸಿರಿ. ನಮ್ಮೆಲ್ಲರಲ್ಲಿ ಪ್ರಚಲಿತದಲ್ಲಿರುವ ಜೀವನದ ಒಂದು ಭಾಗವಾದ ಆಧ್ಯಾತ್ಮದ ಕಡೆಗೆ ಗಮನ ಹರಿಸಿ. ನೀವು ಎಲ್ಲಿಯೂ ಹೋಗಬೇಕಾಗಿಲ್ಲ, ಜೀವನವನ್ನು ಬರಿ ವಿಶಾಲ ದೃಷ್ಟಿಯಿಂದ ನೋಡಿ ಸಾಕು.

ನಿಮ್ಮನ್ನು ನೀವು ಕೇಳಿಕೊಳ್ಳಿ, ನಾನು ಯಾರು? ನಾನೇನು ಮಾಡುತ್ತಿದ್ದೇನೆ? ನನಗೇನು ಬೇಕು? ಈ ವಿಶ್ವವು ಯಾವುದಕ್ಕೆ ಸಂಬಂಧಿಸಿದೆ? ಇವೆಲ್ಲವೂ ಯಾವುದಕ್ಕಾಗಿ? ಈ ವಿಚಾರಣೆಯು ನಿಮ್ಮನ್ನು ಅನ್ವೇಷಕರನ್ನಾಗಿ ಮಾಡುತ್ತದೆ. ನನಗನ್ನಿಸುವ ಹಾಗೆ  ಪ್ರತಿಯೊಬ್ಬ ಸಾಕ್ಷರನು ಅನ್ವೇಷಕನಾಗಬೇಕು. ಅನ್ವೇಷಣೆಯು ಕೊನೆಯಾಗಬಾರದು.

ಅನ್ವೇಷಣೆಯು ಜೀವನದಲ್ಲಿ ಮುಂಚಿತವಾಗಿ ಬರುತ್ತದೆ. ಮೂರು ವರ್ಷದ ಮಗುವು ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತದೆ, ಮತ್ತು ಇದು ನಮ್ಮ ಜೀವನದ ಕೊನೆಯವರೆಗೂ ಸಾಗಬೇಕು. ಎಲ್ಲಿ ನಮಗೆ ತಿಳಿಯಬೇಕೋ, ಎಲ್ಲಿ ನಾವು ಸತ್ಯವನ್ನು ಅರಿಯ ಬಯಸುತ್ತೇವೋ, ಮತ್ತು ಜೀವನವೆಂದರೇನು, ಇತರರ ಮನಸ್ಸನ್ನು ತಿಳಿಯುವುದು ಹಾಗು ನಮ್ಮ ಸ್ವಂತ ಮನಸ್ಸನ್ನು ಅರಿಯುವುದು,  ಈ ಎಲ್ಲ ಕ್ಲಿಷ್ಟ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವುದೇ ಮನುಷ್ಯ ಜೀವನದ ಉದ್ದೇಶ.

ನಮಗೆ ದಯಪಾಲಿಸಲಾಗಿರುವ ಧೀಶಕ್ತಿ ಬಗ್ಗೆ ಗಮನ ಹರಿಸೋಣ. - ಮನಸ್ಸು, ಪ್ರಜ್ಞೆ, ಸ್ಮರಣೆ, ಅಹಂ, ಮತ್ತು ಎಲ್ಲಕ್ಕೂ ಮೀರಿದ, ಆಲೋಚನಾ ಉತ್ಪತ್ತಿ ಕೇಂದ್ರ ಇವೆಲ್ಲವೂ ನಮ್ಮ ಜೀವನವನ್ನು ಶ್ರೀಮಂತಗೊಳಿಸುತ್ತದೆ. ಪೂರ್ವಗ್ರಹ ಇರಬಾರದು. ಎಲ್ಲ ಕ್ಷೇತ್ರದಲ್ಲೂ ವಿಶಾಲ ಹೃದಯದಿಂದಿರುವುದು  ಒಂದು ನಿಜವಾದ ಜ್ಞಾನ ಎಂಬುದು ನನ್ನ ಪರಿಗಣನೆ.

ಪ್ರ. ನಾನೊಬ್ಬ ವೃತ್ತಿಪರ ಬರಹಗಾರ. ನಾನು ಕಥೆಗಳನ್ನು ವಾಣಿಜ್ಯೋದ್ಯಮಕ್ಕಾಗಿ ಬರೆಯಲೇ? ಅಥವಾ ಹೃದಯಾಂತರಾಳದಿಂದ ಬಂದುದನ್ನು ಬರೆದು, ಅದು ಮಾರಾಟವಾಗದಿದ್ದರೂ ಸಹ ನನ್ನ ಕಲೆಗೆ ನಿಷ್ಠನಾಗಿರಲೆ?  

ಶ್ರೀಶ್ರೀ: ಇವೆರಡರಲ್ಲಿ ಒಂದನ್ನು ಮಾತ್ರ ಏಕೆ ಆಯ್ಕೆ ಮಾಡುತ್ತೀರಿ. ಎರಡನ್ನೂ ಒಟ್ಟಿಗೆ ಮಾಡಬಹುದಲ್ಲ? ವಾಣಿಜ್ಯೋದ್ಯಮಕ್ಕೆ ಸಂಬಂಧಿಸಿದಂತೆ ಬರೆಯಿರಿ. ಬರಹವು ಅಮರವಾಗುವಂತೆ ಬರೆಯಿರಿ.

(ಆದರೆ ಗುರುದೇವ್ ನನಗೆ ನನ್ನದೇ ಆದ ಗುರುತಿದೆ. ನಾನು ನನ್ನ ಗುರುತಿಗೆ ಅಂಟಿಕೊಳ್ಳಲೆ ಅಥವಾ ಎರಡೆರಡು ಗುರುತುಗಳನ್ನು ಹೊಂದಲೆ?)

ನೀವು ಎರಡೆರಡು ಗುರುತುಗಳನ್ನು ಹೊಂದಬಹುದು. ಒಂದೇ ಗುರುತಿಗೆ ಯಾಕೆ ಅಂಟಿಕೊಳ್ಳುತ್ತೀರಿ. ಎರಡನ್ನೂ ನಿಭಾಯಿಸಿ. ನನಗೆ ಇದರಲ್ಲೇನು ತೊಂದರೆ ಇಲ್ಲ ಎನಿಸುತ್ತದೆ.

ಪ್ರ. ಗುರುದೇವ್, ಜ್ಞಾನ ಹಾಗು ಲೋಕಜ್ಞಾನಕ್ಕೆ ವ್ಯತ್ಯಾಸವೇನು?

ಶ್ರೀ: ಶ್ರೀ: ಜ್ಞಾನವು ನಿಮ್ಮಲ್ಲಿ ಏನಿದೆ ಎಂಬುದನ್ನು ಸೂಚಿಸಿದರೆ ಲೋಕಜ್ಞಾನವು ನಿಮ್ಮ ಜೀವನದಲ್ಲಿ ಏನಿದೆ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಅನುಭವದಿಂದ ಬರುವುದು ಲೋಕಜ್ಞಾನ. ಓದಿ, ಕೇಳಿ ಅರಗಿಸಿಕೊಂಡಿದ್ದು ಜ್ಞಾನ. ಜ್ಞಾನವು ಮೆನುವನ್ನು ಓದಿದಂತೆ. ಲೋಕಜ್ಞಾನವು ಊಟವನ್ನು ಸವಿದಂತೆ.
ಪ್ರ. ಆಧ್ಯಾತ್ಮಿಕತೆಯು ನಮ್ಮ ದೇಶಕ್ಕೆ ಅಗತ್ಯವಾಗಿದೆ. ನಿಜಾಂಶವೇನೆಂದರೆ ಇದು ಶ್ರೀಮಂತರಿಗೆ ಅಥವಾ ದುಡ್ಡಿರುವವರಿಗೆ ಮಾತ್ರ ದಕ್ಕುತ್ತಿದೆ. ಸಾಮಾನ್ಯ ಪ್ರಜೆಯು ಶ್ರೀಮಂತನಾಗಿರದಿದ್ದರು ಆಧ್ಯಾತ್ಮಿಕತೆಯನ್ನು ಅನುಭವಿಸಬೇಕಾದರೆ ಏನು ಮಾಡಬೇಕು?
ಶ್ರೀಶ್ರೀ: ಆಧ್ಯಾತ್ಮಿಕತೆಗು ಹಣಕ್ಕೂ ಯಾವುದೇ ಸಂಬಂಧವಿಲ್ಲ. ಖಂಡಿತ ಇಲ್ಲ. ಬಡವರೂ ಶ್ರೀಮಂತರಷ್ಟೇ ಆಧ್ಯಾತ್ಮಿಕತೆಯನ್ನು ಹೊಂದಬೇಕು. ನಿಜ ಹೇಳಬೇಕೆಂದರೆ ನಾವು ಕಾರ್ಯಕ್ರಮವನ್ನು ಸುಮಾರು 40,000 ಹಳ್ಳಿಗಳಲ್ಲಿ ಹಾಗು ಸ್ಲಂಗಳಲ್ಲಿ ಮಾಡುತ್ತಿದ್ದೇವೆ.

ಬಡವರು ಆಧ್ಯಾತ್ಮಿಕತೆಗೆ ಬಂದರೆ ನಿಜಕ್ಕೂ ಅವರು ಪ್ರಾಮಾಣಿಕರಾಗಿರುತ್ತಾರೆ. ಅವರು ಕುಡಿತ ಹಾಗು ದುಶ್ಚಟಗಳಿಂದ ಪಾರಾಗುತ್ತಾರೆ.

ನಾವು ಕಾರ್ಯಕ್ರಮವನ್ನು ಜೈಲಿನಲ್ಲೂ ಹಮ್ಮಿಕೊಂಡಿದ್ದೇವೆ. ನಾನಿದನ್ನು ಒಪ್ಪುವುದಿಲ್ಲ, ಆಧ್ಯಾತ್ಮಿಕತೆಯು ಶ್ರೀಮಂತರಿಗೆ ಮಾತ್ರವೆಂದು. ಇದು ಎಲ್ಲರಿಗಾಗಿ. ಯಾವುದಾದರು ಮುಕ್ತವಾಗಿ ಸಿಕ್ಕಿದರೆ ಶ್ರೀಮಂತರು ಗೌರವಿಸುವುದಿಲ್ಲ. ಅವರು ಪಾವತಿಸಿದಾಗ ಮಾತ್ರ ಗೌರವದಿಂದ ಕಾಣುತ್ತಾರೆ. ನಂತರ ಇದರಿಂದ ಏನಾದರು ಪಡೆಯಬೇಕೆಂದು ಭಾವಿಸುತ್ತಾರೆ. ಇದೇ ಶ್ರೀಮಂತರ ನಡವಳಿಕೆ.

ಪ್ರ. ಗುರುದೇವ್, ಸ್ವಲ್ಪ ಸಮಯದ ನಂತರ ವಿವಿಧ ಮನೋಭಾವದಿಂದ ಶ್ರೇಷ್ಠ ಸಾಹಿತ್ಯಗಳು ಹೊರಬರುತ್ತವೆ. ಆದರೆ ಅವುಗಳು ನಕಾರಾತ್ಮಕ ಮನೋಭಾವ, ನೋವು, ಲಾಲಸೆಯಿಂದ  ಕೂಡಿದ್ದು ಅವುಗಳನ್ನು ಹೊಂದಲು ಯೋಗ್ಯವಾಗಿರುವುದಿಲ್ಲ. ನನಗನ್ನಿಸುತ್ತದೆ ಒಬ್ಬರು ಸಕಾರಾತ್ಮಕತೆಯಿಂದ ಮುಂದೆ ಹೋಗಬಹುದಾಗಿದೆ. ನಾನು ಇವೆರಡನ್ನೂ ಹೇಗೆ ಉಪಯೋಗಿಸಿಕೊಳ್ಳಲಿ?

ಶ್ರೀಶ್ರೀ: ನೀವು ಮೊದಲು ತಿಳಿದುಕೊಳ್ಳಬೇಕಾಗಿದೆ ವಿವಿಧ ಬಗೆಯ ಜನರಿದ್ದಾರೆಂದು. ನಾವು ಏಕಜಾತೀಯ ಸಮಾಜದಲ್ಲಿಲ್ಲ. ವಿಜಾತೀಯ ಸಮಾಜದಲ್ಲಿದ್ದೇವೆ. ಇನ್ನು ವ್ಯಕ್ತಿಗತವಾಗಿ ಒಬ್ಬನು ಕೊನೆಯವರೆಗೂ ಒಂದೇ ರೀತಿ ಇರುವುದಿಲ್ಲ. ಅವನ ಭಾವನೆ, ಮನಸ್ಥಿತಿಯು ಬದಲಾಗುತ್ತಿರುತ್ತದೆ. ಉದಾಹರಣೆಗೆ, ಯಾರಿಗಾದರು ಸಂಗೀತ ಕೇಳಬೇಕೆನಿಸಿದಾಗ ಕೆಲವೊಮ್ಮೆ ಅಶ್ರಾವ್ಯ ಸಂಗೀತ ಕೇಳುತ್ತಾರೆ. ಕೆಲವೊಮ್ಮೆ ಹಳಹಳಿ, ವಿಷಣ್ಣತೆಯಿಂದ ಕೂಡಿದ ಸಂಗೀತ ಕೇಳುತ್ತಾರೆ. ಜನರ ಮನೋಭಾವವು ಬದಲಾಗುತ್ತಿರುತ್ತದೆ. ಮನೋಭಾವ ಬದಲಾದಾಗ ಅವರ ಆಸಕ್ತಿಗೆ ತಕ್ಕಂತೆ ಸಾಹಿತ್ಯವನ್ನು ಆರಿಸಿಕೊಳ್ಳುತ್ತಾರೆ. ವ್ಯಕ್ತಿತ್ವಗಳು ಬೇರೆ ಬೇರೆ. ಬೇರೆ ಬೇರೆ ವಿಷಯಗಳಲ್ಲಿ ಆಸಕ್ತಿ ಹೊಂದಿರುತ್ತಾರೆ.

ಪ್ರಾಚೀನ ಭಾರತದಲ್ಲಿ ನವರಸ (ಒಂಭತ್ತು ಮನೋಭಾವ)ವೆಂಬ  ಪರಿಕಲ್ಪನೆಯಿತ್ತು. ಸಾಹಿತ್ಯವು  ಪೂರ್ಣವಾಗಬೇಕಾದರೆ ಈ ಒಂಬತ್ತು ಮನೋಭಾವವು ಇರಬೇಕಿತ್ತು. ಕೋಪ, ಶೌರ್ಯ, ಹತಾಶೆ, ದುಃಖ ಈ ಎಲ್ಲ ಭಾವಗಳು ಬೇರೆ ಬೇರೆ ಕಾಲದಲ್ಲಿ ಜನರನ್ನು ಆಕರ್ಷಿಸುತ್ತಿದ್ದವು. ಕೆಲವು ಜನರು ವಿನೋದವನ್ನು ಇಷ್ಟಪಡುತ್ತಾರೆ. ಕೆಲವರು ಎಲ್ಲಾ ಕಾಲದಲ್ಲಿ ವಿನೋದವನ್ನು ಇಷ್ಟಪಡುವುದಿಲ್ಲ. ಅವರುಗಳು ನೀನು ಹೇಳಿದ ಹಾಗೆ ಹೃದಯವನ್ನು ತಟ್ಟುವಂತಹ, ಕಣ್ಣೀರಾಗಿಸುವ, ಅಥವಾ ಸ್ವಲ್ಪ ಭಾವೋದ್ವೇಗವನ್ನು ಹೆಚ್ಚಿಸುವಂತಹ ಸಾಹಿತ್ಯವನ್ನು ಇಷ್ಟಪಡುತ್ತಾರೆ. ನೀನು ಸಮಾಜದ ಎಲ್ಲಾ ವರ್ಗದವರಿಗೂ ಉಣಬಡಿಸಬೇಕಾಗುತ್ತದೆ. ನಿಜವಾಗಿ, ಆ ಸಮಯದಲ್ಲಿ ನಿನಗೆ ಅನ್ನಿಸಿದ್ದನ್ನು ವ್ಯಕ್ತಪಡಿಸಬೇಕಾಗುತ್ತದೆ.

ನಿನ್ನನ್ನು ನೀನು ಹಾಸ್ಯವನ್ನು ಬರೆಯುವಂತೆ ಒತ್ತಾಯಿಸಲಾಗುವುದಿಲ್ಲ. ಅದೇ ರೀತಿ ಪ್ರೇಮ ಪುಸ್ತಕ ಅಥವಾ ಪ್ರೇಮ ಗೀತೆಯನ್ನು ಬರೆಯುವಂತೆ ಒತ್ತಾಯಿಸಲಾಗುವುದಿಲ್ಲ. ಅದು ನಿನ್ನೊಳಗಿಂದ ಬರದಿದ್ದರೆ ನನಗನ್ನಿಸುವ ಹಾಗೆ ಅದು ಫಲ ಕೊಡುವುದಿಲ್ಲ.

ಪ್ರ. ಕಲೆ ಅಥವಾ ಸಾಹಿತ್ಯವನ್ನು ಅಭಿನಂದಿಸುವುದು ಭಾವುಕತೆ, ಅಂದರೆ ಅದು ವ್ಯಕ್ತಿಯನ್ನು ಅಲುಗಿಸಿದಂತೆ. ಹಾಗಾದರೆ ಅದು ಬೌದ್ಧಿಕತೆಗಿಂತ ಭಾವುಕತೆಯೇ ಹೆಚ್ಚಾಗುತ್ತದೆ ಎನಿಸುವುದಿಲ್ಲವೇ?  

ಶ್ರೀಶ್ರೀ: ಸಾಹಿತ್ಯವು ಭಾವುಕತೆಯಿಂದಲೇ ತುಂಬಿರುವುದಿಲ್ಲ. ಅದು ಬರೀ ಮೃದು ಮೃದು ಬರವಣಿಗೆಯಿಂದಲೇ ತುಂಬಿದ್ದರೆ ಜನರು ಇಷ್ಟಪಡುವುದಿಲ್ಲ. ಓದು ಎನ್ನುವುದು ವೈಚಾರಿಕತೆಯಿಂದ ಕೂಡಿರುವಂತದ್ದು.

ಅದು ಶುಷ್ಕವಾಗಿರಬಾರದು, ತಾಂತ್ರಿಕ ಶಿಕ್ಷಣ ಪುಸ್ತಕದಂತೆ. ನಂತರ ಅದನ್ನು ಓದಲು ಇಚ್ಚೆಯಾಗುವುದಿಲ್ಲ. ಸಾಹಿತ್ಯವು ಸ್ವಲ್ಪ ಭಾವೋದ್ವೇಗದಿಂದ ಹಾಗು ವೈಚಾರಿಕತೆಯ ಹರಿತದಿಂದ ಕೂಡಿರಬೇಕು. ಆಧುನಿಕ ಕವಿತೆಯಂತೆ ವೈಚಾರಿಕವಾಗಿರಬೇಕು. ಇದು ನಿಮ್ಮ ವೈಚಾರಿಕತೆಯನ್ನು ಉದ್ದೇಪಿಸಿ, ಭಾವೋದ್ವೇಗದ ಕಿಡಿಯನ್ನು ಹೊತ್ತಿಸುತ್ತದೆ. ನನಗನ್ನಿಸುವ ಹಾಗೆ ಇವೆರಡು ಮಗ್ಗುಲುಗಳು ಸಾಹಿತ್ಯಕ್ಕೆ ಬಹಳ ಬೇಕಾದವುಗಳೆನಿಸುತ್ತವೆ.

ಪ್ರ. ಸರ್, ಎಲ್ಲ ಅನಿಷ್ಟಗಳಿಗೆ ಆಸೆಯೇ ಕಾರಣ ಎಂದು ಪುಸ್ತಕಗಳಲ್ಲಿ ಓದಿದ್ದೇನೆ. ಆಸೆಗಳನ್ನು ಗೆಲ್ಲಲು ಹಲವು ಬಾರಿ ಪ್ರಯತ್ನಿಸಿದ್ದೇನೆ. ಮುಂದೇನು ಮಾಡುವುದೆಂದು ತಿಳಿಯದಾಗಿದೆ.

ಶ್ರೀಶ್ರೀ: ಇದು ಇನ್ನೊಂದು ಆಸೆ. ಆಸೆಯನ್ನು ಗೆಲ್ಲಬೇಕೆಂಬುದು ಮತ್ತೊಂದು ಆಸೆಯೇ. ಅಲ್ಲವೇ?

ಪ್ರ. ಸರ್, ನನಗೆ ಕೆಲವೇ ಕೆಲವು ಆಸೆಗಳಿವೆ. ಆದರೆ ಆಧ್ಯಾತ್ಮಿಕತೆಯ ಹಾದಿಯಲ್ಲಿ ಮುಂದಿನ ದಾರಿ ಯಾವುದು?

ಶ್ರೀಶ್ರೀ: ಆಧ್ಯಾತ್ಮಿಕತೆಯಲ್ಲಿ ಮುಂದಿನ ದಾರಿ ಎಂದರೆ 'ಸಮಾಧಾನ'. ನಿಮ್ಮಲ್ಲಿ ಸಮಾಧಾನವಿದ್ದರೆ ಸಣ್ಣ ಸಣ್ಣ ಆಸೆಗಳು ನಿಮ್ಮಲ್ಲಿ ಭುಗಿಲೇಳುವುದಿಲ್ಲ. ಆದಾಗ್ಯೂ ನಿಮ್ಮಲ್ಲಿ ಆಸೆಯು ಚಿಗುರಿದರೆ ದೊಡ್ಡ ಆಸೆಯನ್ನಿಟ್ಟುಕೊಳ್ಳಿ. ನಾನು, ಎಲ್ಲರು ಸಂತೋಷದಿಂದಿರಲೆಂದು ಬಯಸುತ್ತೇನೆ. ಇಡೀ ಪ್ರಪಂಚವು ಶಾಂತಿಯಿಂದ ಇರಲು ಆಶಿಸುತ್ತೇನೆ. ಇಂತಹ ಆಸೆಗಳನ್ನು ನೀವು ಹೊಂದಬೇಕು. ಸಣ್ಣ ಆಸೆಗಳು ದೊಡ್ಡ ಆಸೆಗಳಾಗಬೇಕು, ದೊಡ್ಡ ಆಸೆಗಳು ನಿಮಗೆ ದುಗುಡವನ್ನುಂಟ್ಟು ಮಾಡುವುದಿಲ್ಲ. ಕೇವಲ ಸಣ್ಣ ಆಸೆಗಳೇ ನಿಮಗೆ ದುಗುಡವನ್ನುಂಟ್ಟು ಮಾಡಬಲ್ಲವು.

ಸಂಸ್ಕೃತದಲ್ಲಿ ಒಂದು ಉಕ್ತಿ ಇದೆ. 'ನಾಲ್ಪೆ ಸುಖಂ ಅಸ್ತಿ ಯೋ ವೈ ಭೂಮ ತತ್ ಸುಖಂ'. ಮನಸ್ಸು ಯಾವಾಗಲು ದೊಡ್ಡದನ್ನು ಬೇಡುತ್ತದೆ ಅಂದರೆ ದೊಡ್ಡದಾದ ಸಂತೋಷ, ದೊಡ್ಡದಾದ ಆನಂದ. ಅದು ಮನಸ್ಸಿನ ಗುಣ. ಅದನ್ನು ನೀವು ತಪ್ಪಿಸಲು ಸಾಧ್ಯವಿಲ್ಲ. ಮನಸ್ಸಿಗೆ ದೊಡ್ಡದಾದುದೇ ಬೇಕು. ಆಧ್ಯಾತ್ಮಿಕತೆಯು ದೊಡ್ಡದಾದ ಆನಂದ, ದೊಡ್ಡದಾದ ಸಂತೋಷವನ್ನು ಕೊಡುತ್ತದೆ.

ಒಂದು ವಿಧವಾದ ಸಂತೋಷವಿದೆ. ಅದು 'ಪಡೆಯುವುದರ' ಮೂಲಕ ಸಿಗುತ್ತದೆ. ನಾವು ಚಿಕ್ಕವರಿದ್ದಾಗ ಸಂತೋಷವನ್ನು ಪಡೆದಿದ್ದೇವೆ. ಒಬ್ಬ ವಯಸ್ಕನ ಸಂತೋಷವು 'ಕೊಡುವುದರಲ್ಲಿದೆ'. ಮನೆಯಲ್ಲಿ ತಾಯಿಯಿದ್ದ ಹಾಗೆ. ಅವಳು ಎಲ್ಲರಿಗು ಅಡಿಗೆ ಮಾಡಲು ಬಯಸುತ್ತಾಳೆ. ಅವಳಿಗೆ ಮಾತ್ರವೇ ಅಡಿಗೆ ಮಾಡುವುದಿದ್ದಾಗ ಅವಳು ಐದು-ಹತ್ತು ರೀತಿಯ ಭೋಜನವನ್ನು ಸಿದ್ಧಪಡಿಸಿ ತಿನ್ನುವುದಿಲ್ಲ. ಅವಳೆಂದಿಗೂ ಹಾಗೆ ಮಾಡುವುದಿಲ್ಲ. ಕಾಫಿ ಅಥವಾ ಚಾ ಜೊತೆಗೆ ಕುರುಕಲು ತಿನ್ನುತ್ತಾಳೆ ಅಷ್ಟೇ. ಆದ್ದರಿಂದ ಸಂತೋಷವು ಕೊಡುವುದರಲ್ಲಿದೆ. ಲೇಖಕರು ಹಾಗು ಸಾಹಿತ್ಯ ಲೋಕದ ದಿಗ್ಗಜರು ಸಮಾಜಕ್ಕೆ ಕೊಡುಗೆ ನೀಡುವುದರ ಮೂಲಕ ಸಂತೋಷವನ್ನನುಭವಿಸುತ್ತಾರೆ. ಅದರಲ್ಲಿ ಆನಂದವಿದೆ. ಅದನ್ನು ಪಡೆಯಿರಿ.

ಪ್ರ. ಗುರುದೇವ್, ಆಧ್ಯಾತ್ಮಿಕತೆಯು ಕೆಲವು ಜನರ ಮಧ್ಯೆ ಒಂದು ಝೇಂಕರಿಸುವ ಪದವಾಗಿದೆ.  ಎಲ್ಲರು ಹೇಳ ಬಯಸುತ್ತಾರೆ "ನಾನು ಧ್ಯಾನ ಮಾಡುತ್ತೇನೆ, ನಾನು ಆಧ್ಯಾತ್ಮಿಕ ವ್ಯಕ್ತಿ".  ಆಧ್ಯಾತ್ಮಿಕತೆ ಎಂದರೇನು?

ಶ್ರೀಶ್ರೀ: ನಾವೆಲ್ಲರು ವಿಷಯ ಹಾಗು ಚೇತನದಿಂದ ಮಾಡಲ್ಪಟ್ಟಿದ್ದೇವೆ ಅಲ್ಲವೇ? ನಮ್ಮ ಶರೀರವು ಕಾರ್ಬೋಹೈಡ್ರೇಟ್, ಮಿನರಲ್, ಪ್ರೋಟೀನ್ ನಿಂದ  ಮಾಡಲ್ಪಟ್ಟಿದೆ. ಚೇತನವು ಕ್ರಿಯೆ, ಸಂತೋಷ, ಶಾಂತಿ, ಕೋಪ ಮತ್ತು ಈ ಎಲ್ಲ ಭಾವನೆಗಳಿಂದ ಮಾಡಲ್ಪಟ್ಟಿದೆ. ಆಧ್ಯಾತ್ಮಿಕತೆಯು ಚೇತನವನ್ನು ಸಂಧಿಸುತ್ತಿದೆ. ನಾನು ಯಾರು? ನಾನು ಈ ಶರೀರವೇ? ಆಲೋಚನೆ ಎಂದರೇನು?  ಆಲೋಚನೆಯ ಮೂಲ ಯಾವುದು? ಭಾವನೆ ಎಂದರೇನು? ಭಾವನೆಗಳ ಮೂಲ ಯಾವುದು?  ಭಾವನೆಗಳ ಹಾಗು ಆಲೋಚನೆಗಳ ಬೇರನ್ನು ಹುಡುಕುತ್ತ ನಿಮ್ಮಲ್ಲಿ ಇನ್ನು ಅಂತರವಿರುವುದನ್ನು ಗಮನಿಸುತ್ತೀರ ಅದೇ ಆಧ್ಯಾತ್ಮಿಕತೆ. ನಂತರ ನಿಮಗೆ ಗೊತ್ತಾಗುತ್ತದೆ ಇದರಿಂದಲೇ ಎಲ್ಲವು ಮಾಡಲ್ಪಟ್ಟಿದೆ ಎಂದು!.

ನೀವು ಒಬ್ಬ ಭೌತ ವಿಜ್ಞಾನಿಯಾಗಿದ್ದರೆ, ನೀವು ಒಬ್ಬ ಆಧ್ಯಾತ್ಮಿಕ ವ್ಯಕ್ತಿಯೇ. ಇವೆರಡನ್ನು ಬದಲಿಸಲು ಸಾಧ್ಯವಿಲ್ಲ. ಏಕೆಂದರೆ ಭೌತ ವಿಜ್ಞಾನಿಯು ಇದನ್ನೇ ಹೇಳುತ್ತಾನೆ. ಅದೆಂದರೆ ವಿಶ್ವವು ಒಂದೇ ವಸ್ತುವಿನಿಂದ ಮಾಡಲ್ಪಟ್ಟಿದೆ ಎಂದು.

ಆಧ್ಯಾತ್ಮಿಕತೆಯು ಹೇಳುತ್ತದೆ "ಹೌದು, ನಾನೇನು ಆಗಿದ್ದೇನೋ ಎಲ್ಲರು ಅದರಿಂದಲೇ ಮಾಡಲ್ಪಟ್ಟಿದ್ದಾರೆ. ನಾವೆಲ್ಲರೂ ಒಂದೇ. ಪ್ರಪಂಚವೆಲ್ಲವು ಒಂದೇ ಜೀವಧಾರಿ ರಚನೆಯಾಗಿದೆ". ಈ ತಿಳಿವು ಧೃಡ ನಂಬಿಕೆ, ಶಾಂತಿ, ಶರತ್ತಿಲ್ಲದ ಪ್ರೀತಿಯನ್ನು ಕೊಡುತ್ತದೆ. ಎಲ್ಲರಲ್ಲೂ ಕೊಂಚವಾದರೂ ಆಧ್ಯಾತ್ಮಿಕತೆಯ ಲೇಪನವಿದೆ. ಆಧ್ಯಾತ್ಮಿಕತೆ ಕೊಂಚವಾದರೂ ಇಲ್ಲದ ಜನರಿಲ್ಲ ಈ ಪ್ರಪಂಚದಲ್ಲಿ.

ಪ್ರ. ಒಬ್ಬರು ಹೇಗೆ ಆಧ್ಯಾತ್ಮಿಕ ಗುರುವಾಗಬಲ್ಲರು?

ಶ್ರೀಶ್ರೀ: ಆಧ್ಯಾತ್ಮಿಕ ನಾಯಕನಾಗಲು ದಾರಿ ಇದೆಯೇ? ನನಗೆ ಹಾಗೆ ಅನ್ನಿಸುವುದಿಲ್ಲ. ಮತ್ತು ನನಗೆ ಗೊತ್ತಿಲ್ಲ. ಅದಕ್ಕೂ ದಾರಿಯಿರಬಹುದೆಂದು ನನಗೆ ತಿಳಿದಿಲ್ಲ!!. ನೀವು ನನ್ನನ್ನು ಕೇಳಬಹುದು ನಾನು ಹೇಗೆ ಆಧ್ಯಾತ್ಮಿಕ ಗುರುವಾದೆ ಎಂದು. ನನಗೆ ತಿಳಿದಿರುವ ಹಾಗೆ, ನಾನು ಏನನ್ನು ಕಲಿತೆನೋ ಅದನ್ನು ಇನ್ನೊಬ್ಬರಿಗೆ ಹಂಚುತ್ತ ಹೋದೆ ಅಷ್ಟೇ.

ನಾನು ಒಂದನ್ನು ಪಾಲಿಸುತ್ತಾ ಬಂದುದೆಂದರೆ, ನನ್ನ ಅನುಭವದ ಪರಿಧಿಗೆ ಒಳಪಡದಿರುವುದರ ಬಗ್ಗೆ ಮಾತನಾಡದಿರುವುದು. ಏನಿತ್ತೋ ಅದನ್ನು ಎಲ್ಲರಲ್ಲೂ ಹಂಚುತ್ತ ಬಂದಿದ್ದೇನೆ.

ಅದೇ ರೀತಿ ಪ್ರತಿಯೊಬ್ಬರೂ ಆಧ್ಯಾತ್ಮಿಕ ಗುರುಗಳೇ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಬೇರೆಯವರಿಗೆ ಉಪದೇಶಿಸುತ್ತ ಬಂದಿದ್ದೀರ. ನೀವು ನಿಮ್ಮ ಒಳ್ಳೆ ಕೃತ್ಯದಿಂದ ಅಥವಾ ನಿಮ್ಮ ತಪ್ಪುಗಳಿಂದ ಬೇರೆಯವರಿಗೆ ಉಪದೇಶ ನೀಡುತ್ತಿದ್ದೀರ. ನಿಮ್ಮ ಒಬ್ಬರ ತಪ್ಪಿನಿಂದ ನೀವೊಬ್ಬರೇ ಪಾಠ ಕಲಿಯುವುದಿಲ್ಲ, ನಿಮ್ಮ ಸುತ್ತ ಮುತ್ತಲಿನ ಜನರೆಲ್ಲಾ ಆ ತಪ್ಪಿನಿಂದ ಪಾಠ ಕಲಿಯುತ್ತಾರೆ. ನೀವು ಆಧ್ಯಾತ್ಮಿಕ ಗುರುವಾಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಈ ಪ್ರಪಂಚದಲ್ಲಿ. ನೀವು ನಿಮ್ಮ ಬಟ್ಟೆಯನ್ನು ಬದಲಿಸಿ ಧೋತಿ-ಕುರ್ತಾ ಹಾಕಬೇಕಾಗಿಲ್ಲ. ಅಥವಾ ಯಾವುದೇ ಆಧ್ಯಾತ್ಮಿಕ ಬಟ್ಟೆಯನ್ನು ಧರಿಸಬೇಕಾಗಿಲ್ಲ. ಉದ್ದ ಕೂದಲನ್ನು ಬಿಡಬೇಕಾಗಿಲ್ಲ. ಇವೆಲ್ಲದರ ಅಗತ್ಯವಿಲ್ಲ. ನಿಮಗೆ ಸಹಜವಾಗಿ ನಗಲು ಸಾಧ್ಯವಾದರೆ, ನಿಮ್ಮ ಪ್ರೀತಿ ಎಲ್ಲರಿಗು ಕೊಡಲು ಸಾಧ್ಯವಾದರೆ ನೀವು ಮಾತ್ರವೇ ಅಲ್ಲ ಬೇರೆಯವರೂ ನಿಮಗೆ ಅದೇ ಪ್ರೀತಿಯನ್ನು ತೋರಿಸುತ್ತಾರೆ. ಇದು ನಿಮ್ಮ ಜೀವನವನ್ನು ಶ್ರೀಮಂತಗೊಳಿಸುತ್ತದೆ. ಇದು ಹೊಸ ಆಯಾಮಕ್ಕೆ ದಾರಿ ತೋರಿಸುತ್ತದೆ. ನೀವು ಧ್ಯಾನಿಗಳಾಗಿದ್ದರೆ ನಿಮಗಿದು ತಿಳಿದಿರುತ್ತದೆ ಹಾಗು ನೀವು ನನ್ನೊಂದಿಗೆ ಸಮ್ಮತಿಸುತ್ತೀರ.

ಪ್ರ. ಗುರುದೇವ್, ಗುರಿಯು ಸಂಕಲ್ಪಕ್ಕಿಂತ ದೊಡ್ಡದೇ? ಉದಾಹರಣೆಗೆ, ಒಬ್ಬನ ಗುರಿಯು ಮ್ಯಾನೇಜರ್ ಆಗುವುದಾಗಿದ್ದರೆ, ಅವನು ನಟನಾಗಬಹುದೇ?

ಶ್ರೀಶ್ರೀ: ನಿನ್ನ ಕನಸಿಗೆ ಅಂಟಿಕೊ. ಅದು ಒಮ್ಮೆ ನಿಜವಾಗುತ್ತದೆ. ನಾನು ಈ ಊರಿನ ಒಬ್ಬ ವಿದ್ಯಾರ್ಥಿಯಾಗಿದ್ದೆ. ನಾನು ಯೋಚಿಸಿದೆ, ಈ ಪ್ರಪಂಚದಲ್ಲಿ ಸುತ್ತಾಡಿ ಎಲ್ಲ ದೇಶದವರನ್ನು ಒಂದು ಮನೆಯವರಂತೆ ಮಾಡಬೇಕೆಂದು. ಜನರು ನಾನೊಬ್ಬ ತಲೆತಿರುಕನೆಂದರು. ನಿಮಗೆ ಈ ತರಹದ ವಿಚಾರಗಳು ಮನಸ್ಸಿನಲ್ಲಿ ಬಂದಾಗ ಜನರು ಹಾಗೆಯೇ ತಿಳಿಯುತ್ತಾರೆ!. ನೀವು ನಿಮ್ಮ ಕನಸಿಗೆ ಜೋತುಬಿದ್ದರೆ ಅವುಗಳು ಒಂದು ದಿನ ನಿಜವಾಗುತ್ತವೆ.

ಚಲಿಸುವ ಚಿತ್ರಗಳ ರೂಪದಲ್ಲಿ ಇದನ್ನು ನೋಡಲು ಲಿಂಕ್: 

An Intimate Note to the Sincere Seeker