ಸೋಮವಾರ, ಜನವರಿ 31, 2011

"ನಾದ ವೈಭವಂ- ನಮ್ಮನ್ನೆಲ್ಲಾ ಬೆಸೆಯುವ ಶಕ್ತಿ ಸಂಗೀತ.

ಜನವರಿ ೩೧, ೨೦೧೧. ಚೆನ್ನೈ. 
ಸಂಗೀತದ ಉದ್ದೇಶ ನಿಮ್ಮ ಆಳದಲ್ಲಿ ಮೌನವನ್ನುಂಟು ಮಾಡುವುದು. ಮೌನದ ಉದ್ದೇಶ ಜೀವನದಲ್ಲಿ ಕ್ರಿಯಾತ್ಮಕತೆಯನ್ನು ತರುವುದು. ಆದ್ದರಿಂದ, ಕ್ರಿಯಾತ್ಮಕತೆಯನ್ನು ತರದ ಮೌನ ಯಾವ ಪ್ರಯೋಜನಕ್ಕೂ ಬಾರದು ಮತ್ತು ಮೌನವನ್ನು, ಶಾಂತಿಯನ್ನು, ಸಾಮರಸ್ಯವನ್ನು ನಮ್ಮೊಳಗೆ ತರದಂತಹ ಸಂಗೀತವೂ ಸಹ ಯಾವ ಪ್ರಯೋಜನಕ್ಕೂ ಬಾರದು. ಇಲ್ಲಿ ನೂರಾರು, ಸಾವಿರಾರು ಸಂಖ್ಯೆಯಲ್ಲಿ ನಾವೆಲ್ಲರೂ ಸೇರಿ ಒಂದಾಗಿ, ನಮ್ಮನ್ನೆಲ್ಲಾ ಬೆಸೆಯುವಂತಹ ಸಂಗೀತವನ್ನು ಹಾಡುತ್ತಿರುವುದು ಒಂದು ದೊಡ್ಡ ಯಜ್ಞ. ಪ್ರೇಮದ ಹೊರತಾಗಿ ಎಲ್ಲಾ ಧರ್ಮದವರನ್ನೂ, ಪಂಥದವರನ್ನೂ, ದ್ವೀಪದವರನ್ನೂ ಒಂದಾಗಿಸುವ ಶಕ್ತಿಯೆಂದರೆ ಸಂಗೀತ. ಸಂಗೀತ ಎಲ್ಲರ ಹೃದಯವನ್ನೂ ಮುಟ್ಟುತ್ತದೆ. ಆದ್ದರಿಂದ  ನೀವು ಸಂಗೀತಗಾರರಾಗಿರಲ್ಲಿ, ಇಲ್ಲದಿರಲಿ ಎಲ್ಲರೂ ಹಾಡಲೇ ಬೇಕು. ನೀವು ಹಾಡಲು ಪ್ರಾರಂಭಿಸಿದಾಗ ನೀವು ಸಂಗೀತಗಾರರಾಗಿ. 

  ಸಂಗೀತವು ನಿಮ್ಮ ಭಾವನೆಗಳನ್ನು ಶುದ್ಧ ಮಾಡುತ್ತದೆ, ನಿಮ್ಮ ಭಾವನೆಗಳನ್ನು ಹಗುರವಾಗಿಸುತ್ತದೆ. ಭಾವನೆಗಳು ಶುದ್ಧವಾದಾಗ ಆಲೋಚನೆಗಳು ಶುದ್ಧವಾಗುತ್ತವೆ. ನಿಮಗೆ ಸರಿಯಾದ ಆಲೋಚನೆಗಳು ಬರಲು ಪ್ರಾರಂಭಿಸುತ್ತವೆ. ನಿಮ್ಮಲ್ಲಿ ಅಂತಪೂರ್ಣೆ ಎಚ್ಚರಗೊಳ್ಳುತ್ತದೆ ಮತ್ತು ಇದೇ ಆಧ್ಯಾತ್ಮಿಕತೆ. ಸಂಗೀತ ಮತ್ತು ಆಧ್ಯಾತ್ಮಿಕತೆ ಒಂದಕ್ಕೊಂದು ಎಷ್ಟೊಂದು ಬೆಸೆದಿದೆಯೆಂದರೆ, ಅದರಲ್ಲೂ ಈ ದೇಶದಲ್ಲಿ ಸಂಗೀತ ಮತ್ತು ಆಧ್ಯಾತ್ಮಿಕತೆಯನ್ನು ಎಂದಿಗೂ ಬೇರೆ ಬೇರೆಯಾಗಿ ಪರಿಗಣಿಸಲಾಗೇ ಇಲ್ಲ. 

ಈ ವೇದಿಕೆಯ ಮೇಲೆ ೫,೭೦೦ ಸಂಗೀತಗಾರರಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಗಾರರು ಭಾಗವಹಿಸಲು ಇಚ್ಛೆಪಟ್ಟರು, ಆದರೆ ಈ ವೇದಿಕೆಯ ಸಾಮರ್ಥ್ಯವಿರುವುದೇ ಇಷ್ಟು, ಇನ್ನೂ ಹೆಚ್ಚನ ಸಂಖ್ಯೆ ಬೇಡವೆಂದು ನಾವು ಹೇಳಿದೆವು.  ಉಳಿದ ಜನರೂ ಇಲ್ಲಿ ಉಪಸ್ಥಿತರಾಗಿ ವೇದಿಕೆಯ ಕೆಳಗೆ ಕುಳಿತು ಹಾಡುತ್ತಿದ್ದಾರೆ. (ದೂರದರ್ಶನದ ಈ ಕಾರ್ಯಕ್ರಮ ಪ್ರಸಾರದೊಂದಿಗೆ ಹಾಡುತ್ತಿದ್ದಾರೆ). ಅದಲ್ಲದೆ ಜಗತ್ತಿನ ಇತರ ಸಂಗೀತಗಾರರೂ ಇವರೊಡನೆಯೇ ಹಾಡುತ್ತಿದ್ದರು. 

    ದೈವವಿದ್ದಾಗ ಎಲ್ಲವೂ ಸಾಧ್ಯ. ಭಗವಂತನ ಕೃಪೆಯಿಂದ ಇದೆಲ್ಲವೂ ಸಾಧ್ಯ ಮತ್ತು ನಿಮ್ಮ ಆಳದೊಳಗೆ ಹೊಕ್ಕು ವಿಶ್ರಮಿಸಲು ಸಂಗೀತವು ಒಂದು ಮಾರ್ಗ. ಭೂಮಿಯ ಮೇಲಿರುವ ಎಲ್ಲಾ ಜೀವಿಗಳಲ್ಲೂ, ಮರಗಿಡಗಳಲ್ಲೂ, ಪಶು, ಪಕ್ಷಿಗಳಲ್ಲೂ ಒಂದೇ ಒಂದು ಶಕ್ತಿಯಿದೆ. ನಮ್ಮೆಲ್ಲರೊಳಗಿರುವ ಆ ಶಕ್ತಿಯು, ನಿಮ್ಮ ಹೃದಯ ತುಂಬಿ ಹಾಡಿದಾಗ ನರ್ತಿಸಲು ಪ್ರಾರಂಭಿಸುತ್ತದೆ. 

    ಸಂಗೀತವಿರುವ ಸ್ಥಳದಲ್ಲಿ, ಕಲೆಯಿರುವ ಸ್ಥಳದಲ್ಲಿ, ನೃತ್ಯ, ಯೋಗ ಮತ್ತು ಧ್ಯಾನವಿರುವ ಸ್ಥಳದಲ್ಲಿ ಹಿಂಸೆಯಿರಲು ಹೇಗೆ ಸಾಧ್ಯ?

  ಯೋಗ, ಪ್ರಾಣಾಯಾಮ, ಧ್ಯಾನ, ಆಯುರ್ವೇದ ಮತ್ತು ರಾಸಾಯನ ರಹಿತ ಆಹಾರವನ್ನು ನಮ್ಮ
ಜೀವನ ಶೈಲಿಯಾಗಿಸಿಕೊಳ್ಳಬೇಕು.

    ಈಗೊಂದು ಚಿಕ್ಕ ಧ್ಯಾನವನ್ನು ಮಾಡೋಣವೆ?
ಧ್ಯಾನವೆಂದರೆ ಏಕಾಗ್ರತೆಯಲ್ಲ, ತಿಳಿಯಿತೆ? ಏಕಾಗ್ರತೆಯನ್ನು ಬಿಟ್ಟು, ಆಳವಾಗಿ ವಿಶ್ರಮಿಸುವುದು. ಧ್ಯಾನವೆಂದರೆ ಚಲನೆಯಿಂದ ಸ್ತಬ್ಧತೆಯೆಡೆಗೆ ಮತ್ತು ಶಬ್ದದಿಂದ ಮೌನದೆಡೆಗೆ ಪಯಣ. ನಮ್ಮ ಸಂತೋಷಕ್ಕಾಗಿ ನಾವೇ ಜವಾಬ್ದಾರರು. ನಮ್ಮ ಉತ್ಸಾಹ, ಸಂತೋಷವನ್ನು ಎತ್ತರವಾಗಿರಿಸಲು ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಇದಕ್ಕಾಗಿ ನೀವು ಇದನ್ನೆಲ್ಲಾ ಮತ್ತು ಧ್ಯಾನವನ್ನು ಮತ್ತು ಪ್ರಾಣಾಯಾಮವನ್ನು ಹಾಗೂ ಸಮಾಜ ಸೇವೆಯನ್ನು ಮಾಡಬೇಕು.  

ಬುಧವಾರ, ಜನವರಿ 26, 2011

ಮನಸ್ಸಿನ, ಮನೋಭಾವನೆಯ ಹಾಗೂ ಸಮಯದ ಸುಂದರ ವಿಜ್ಞಾನ

ಜನವರಿ ೨೬, ೨೦೧೧, ಬೆಂಗಳೂರು ಆಶ್ರಮ
ಪ್ರಶ್ನೆ;-  ಗುರೂಜಿ, ಒಂದು ಗುರುವನ್ನು ಆಯ್ದುಕೊಂಡ ನಂತರ ಇತರ ಗುರುಗಳ ಬೋಧನೆಗಳನ್ನು ನಾವು ಪಾಲಿಸಬಾರದೆಂದು ಅರ್ಥವೆ? ಒಂದಕ್ಕಿಂತಲೂ ಹೆಚ್ಚು ಗುರುಗಳನ್ನು ಹೊಂದಬಹುದೆ?

ಶ್ರೀ ಶ್ರೀ;- ಓ ಒಂದು ಗುರುವನ್ನು ನಿಭಾಯಿಸುವುದೇ ಎಷ್ಟು ಕಷ್ಟ! ನೀವು ಹೇಗೆ... (ನಗು) ಅದು ಸುಲಭವಾದ ವಿಷಯವಲ್ಲ. ಎಲ್ಲರನ್ನೂ ಗೌರವಿಸಿ, ಆದರೆ ಒಂದು ಮಾರ್ಗವನ್ನು ಅನುಸರಿಸಿ. ಎಲ್ಲರನ್ನೂ ಸನ್ಮಾಸಿ.  ಆಗ ಎಲ್ಲಾ ಗುರಗಳೂ ಒಂದನ್ನೇ ಹೇಳಿದ್ದಾರೆಂದು ನೀವು ತಿಳಿದುಕೊಳ್ಳುವಿರಿ. ಇರುವುದು ಒಂದೇ ಸತ್ಯ  ಆದ್ದರಿಂದ ಒಂದನ್ನೇ ಹೇಳಿದ್ದಾರೆ, ಆದರೆ ಕಾಲಕ್ಕೆ ತಕ್ಕ ಹಾಗೆ ಅವರ ರೀತಿಗಳು ಬೇರೆ ಬೇರೆಯಾಗಿರುತ್ತದೆಯಷ್ಟೆ.

ಈ ಪಥದಲ್ಲಿ ನೀವಿರುವಾಗ ಯಾವ ಗೊಂದಲವನ್ನೂ ಹೊಂದಬೇಡಿ.  ನೀವು ಯಾವುದೇ ಪಥದಲ್ಲಿ ಇದ್ದಿದ್ದರೂ ಸಹ, ಅವರೆಲ್ಲರೂ ನಿಮ್ಮನ್ನು ಆಶೀರ್ವದಿಸಿದ್ದಾರೆ. ಅದರಿಂದಾಗಿಯೇ ನೀವು ಇಲ್ಲಿಗೆ ಬಂದಿರುವುದು. ಆ ಪಥಗಳ, ಆ ಗುರುಗಳ, ಆ ಶಿಕ್ಷಕರ ಸೇವೆಯನ್ನು ನೀವು ಮಾಡಿದ್ದರಿಂದ, ಅವರ ಆಶೀರ್ವಾದವು ನಿಮ್ಮನ್ನು ಇಲ್ಲಿಗೆ ಕರೆತಂದಿದೆ. ಈ ನಂಬಿಕೆಯನ್ನಿಟ್ಟುಕೊಂಡು ಮುನ್ನಡೆಯಿರಿ. ಸರಿಯೆ?

ಎಲ್ಲವನ್ನೂ ನೀವು ಮಾಡುತ್ತಾ ಹೋದರೆ ನೀವು ಪೂರ್ಣ ಗೊಂದಲದಲ್ಲಿರುತ್ತೀರಿ, ಅಷ್ಟೆ. ಆದ್ದರಿಂದ ನಾವು ಹೇಳುವುದು, ಒಂದನ್ನು ಎಲ್ಲರಲ್ಲೂ ಕಾಣಿ ಮತ್ತು ಎಲ್ಲರನ್ನೂ ಒಂದರಲ್ಲೇ ಕಾಣಿ. ಇದೇ ನಿಯಮ. ಎಲ್ಲರನ್ನೂ ಸನ್ಮಾನಿಸಿ, ಒಂದೇ ಪಥದಲ್ಲಿ ನಡೆಯಿರಿ.

ಪ್ರಶ್ನೆ;-  ನಮ್ಮ ಗುರುಗಳು ನಮ್ಮ ಮೇಲೆ ಅತೃಪ್ತರಾದರೆ ಏನು ಮಾಡುವುದು?

ಶ್ರೀ ಶ್ರೀ;- ಬೇಗನೆ ಅಭಿವೃದ್ಧಿ ಹೊಂದುತ್ತೀರಿ! ನಿಮ್ಮ ಅಭಿವೃದ್ಧಿಯ ಬಗ್ಗೆ ಗುರುಗಳು ಅತೃಪ್ತರಾಗಿದ್ದಾರೆ. ಬೇಗನೆ ಸಿದ್ಧರಾಗಿ ಮತ್ತು ಹೆಚ್ಚು ಅಭಿವೃದ್ಧಿ ಹೊಂದಿ. ಬೇಗ ಓಡಿ!

ಪ್ರಶ್ನೆ;-  ಗುರೂಜಿಯವರೆ, ಮನೋಭಾವನೆಗೂ ಮತ್ತು ದಿನದ ಸಮಯಕ್ಕೂ ಏನಾದರೂ ಸಂಬಂಧವಿದೆಯೆ? ಬೇರೆ ಬೇರೆ ಸಮಯಗಳಲ್ಲಿ ನಮಗೆ ಬೇರೆ ರೀತಿಯಾಗಿ ಅನಿಸುತ್ತದೆ. ರಾತ್ರಿ ವೇಳೆ ಕೇಳಗಿಳಿದಂತೆ ಅನಿಸುತ್ತದೆ.

ಶ್ರೀ ಶ್ರೀ;- ಹೌದು ಹೌದು ಸಮಯ ಮತ್ತು ಮನಸ್ಸಿನ ನಡುವೆ ಸಂಬಂಧವಿದೆ. ಇದರ ಬಗ್ಗೆ ನೀವೆಲ್ಲಾ ತಿಳಿದುಕೊಳ್ಳಬೇಕು. ಸಮಯ ಮತ್ತು ಮನಸ್ಸು ಒಂದೇ. ಎಂಟು ತತ್ತ್ವಗಳಿವೆ. ವೈಶೇಷಿಕ ದರ್ಶನದಲ್ಲಿ ಕನಾಡರು ಮತ್ತು ಇತರರು "ದೇಶ ಕಾಲ ಮನಃ" ಎಂದಿದ್ದಾರೆ. ದೇಶ ಎಂದರೆ ಸ್ಥಳ. ಕಾಲ ಎಂದರೆ ಸಮಯ. ಮನಃ ಎಂದರೆ ಮನಸ್ಸು. ಇವೆಲ್ಲವೂ ತತ್ತ್ವಗಳು ಮತ್ತು ಈ ಎಲ್ಲಾ ತತ್ತ್ವಗಳೂ ಒಂದಕ್ಕೋದು ಸಂಬಂಧಪಟ್ಟಿವೆ. ಆಕಾಶ ಮತ್ತು ಸಮಯ ಸಂಬಂಧಪಟ್ಟಿವೆ. ಭೂಮಿಯ ಮೇಲೆ ಈ ಒಂದು ದಿನ ಇನ್ನೊಂದು ಗ್ರಹದಲ್ಲಿ, ಚಂದ್ರಗ್ರಹದಲ್ಲಿ ಆಗಲೇ ಬಹಳಷ್ಟು ದಿನಗಳಾಗಿರುತ್ತದೆ. ನೀವು ಗುರುಗ್ರಹದಲ್ಲಿದ್ದರೆ ಮಾನವರ ಒಂದು ವರ್ಷ ಅವರಿಗೆ ಒಂದು ತಿಂಗಳು. ಗುರು ಗ್ರಹದಲ್ಲಿ ನೀವು ಒಂದು ವರ್ಷವನ್ನು ಅನುಭವಿಸಬೇಕೆಂದಿದ್ದರೆ, ಅದಕ್ಕೆ ಭೂಮಿಯ ಹನ್ನೆರಡು ವರ್ಷಗಳು ಹಿಡಿಯುತ್ತದೆ.  ಗುರು ಗ್ರಹವು ಸೂರ್ಯನ ಸುತ್ತಲೂ ಒಂದು ಸುತ್ತು ಸುತ್ತಲು ಹನ್ನೆರಡು ವರ್ಷಗಳು ತೆಗೆದುಕೊಳ್ಳುತ್ತದೆ. ಮತ್ತೆ ಶನಿಗ್ರಹಕ್ಕೆ ಭೂಮಿಯ ಮೂವತ್ತು ವರ್ಷಗಳು, ಅದರ ಒಂದು ವರ್ಷ! 

ಅದೇ ರೀತಿಯಾಗಿ ಪಿತೃಗಳಿಗೆ, ಎಂದರೆ ಮರಣಿಸಿದವರಿಗೆ ನಮ್ಮ ಒಂದು ಮಾನವ ವರ್ಷ, ಒಂದು ದಿನ.  ನಮ್ಮ ಅರು ತಿಂಗಳು ಅವರಿಗೆ ಹಗಲು ಮತ್ತುಳಿದ ಆರು ತಿಂಗಳು ಅವರಿಗೆ ರಾತ್ರಿ. ಆದ್ದರಿಂದ, ದೇಹವನ್ನಗಲಿದ ಆತ್ಮಕ್ಕೆ ನಮ್ಮ ಇಡೀ ಒಂದು ವರ್ಷ ಒಂದು ದಿನವಾಗುತ್ತದೆ.  ಬೇರೆ ಬೇರೆ ಆಯಾಮಗಳಲ್ಲಿ ಮತ್ತು ಬೇರೆ ಬೇರೆ ಸ್ಥಳಗಳಲ್ಲಿ ಸಮಯವು ಬೇರೆ ಬೇರೆಯಾಗಿರುತ್ತದೆ. ಆದ್ದರಿಂದ ಕಾಲ ಮತ್ತು ಆಕಾಶ ಸಂಬಂಧಪಟ್ಟಿದೆ.  ಇದ್ದನ್ನು ಕಾಲ-ಆಕಾಶದ ಕ್ರತೆ ಎಂದು ಕರೆಯುತ್ತಾರೆ.  ಮೂರನೆಯ ಆಯಾಮವಾದ ಮನಸ್ಸಿನ ವಿಷಯಕ್ಕೂ ಇದು ಅನ್ವಯಿಸುತ್ತದೆ. ಮನಸ್ಸಿಲ್ಲದಿರುವ ಸ್ಥಿತಿಗೆ, ಪರಮ ಚೈತನ್ಯಕ್ಕೆ ಮಹಾಕಾಲ, ಶಿವ, ತುರಿಯಾವಸ್ಥೆ ಎಂದು ಕರೆಯುತ್ತಾರೆ.

ಮಹಾಕಾಲ ಎಂದರೆ ಮಹತ್ತಾದ ಕಾಲ, ಮನಸ್ಸೇ ಇಲ್ಲದಿರುವ ಸ್ಥಿತಿ. ಬೆಳಿಗ್ಗೆ ೪.೩೦ಯಿಂದ ೬.೩೦ಯವರೆಗೆ, ಸೂರ್ಯೋದಯದ ಮೊದಲು, ಅರುಣೋದಯದ ಮೊದಲು ಅತೀ ಸೃಜನಾತ್ಮಕವಾದ ಸಮಯವೆನ್ನುತ್ತಾರೆ.  ಅದೇ ಬ್ರಹ್ಮಮುಹೂರ್ತ. ನಂತರ ಪ್ರತೀ ಎರಡು ಗಂಟೆಗಳನ್ನು ಲಗ್ನ ಎಂದು ಕರೆಯುತ್ತಾರೆ, ಲಗ್ನ ಎಂದರೆ ಕಾಲದ ಒಂದು ಮಾತ್ರ, ಪ್ರಮಾಣ. ಈ ಮಾತ್ರವು ಮನಸ್ಸಿನ ಸ್ಥಿತಿಗೆ ಸಮಬಂಧಪಟ್ಟಿದೆ.  ಮತ್ತೆ ಇದು ಚಂದ್ರನ ಮತ್ತು ಸೂರ್ಯನ ಸ್ಥಿತಿಗೆ ಸಂಬಂಧಪಟ್ಟಿದೆ. ಎಷ್ಟೊಂದು ಅಂಶಗಳಿವೆ. ಒಂದು ದಿನ ಸಮಯ ಅಥವಾ ಕೆಲವು ಗಂಟೆಗಳು ಮಾತ್ರವಲ್ಲದೆ ದಿನಗಳ ಗುಣಮಟ್ಟವೂ ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತದೆ.  ಹತ್ತು ಬೇರೆ ಬೇರೆ ಅಂಶಗಳು ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತವೆ. ಮನಸ್ಸು ಪ್ರತಿ ಎರಡೂವರೆ ದಿನಗಳಿಗೊಮ್ಮೆ ಬದಲಾಯಿಸುತ್ತದೆ, ಮನೋಭಾವನೆಗಳು ಬದಲಾಯಿಸುತ್ತವೆ. ನಿಮಗೆ ದುಃಖವಾಗಿದ್ದರೆ ಗರಿಷ್ಠ ಮಟ್ಟ, ಎಂದರೆ ಎರಡೂವರೆ ದಿನಗಳವರೆಗೆ ಮುಂದುವರಿಯುತ್ತದೆ.  ಭಾವನೆಯು ಒಂದು ಗರಿಷ್ಠ ಮಟ್ಟಕ್ಕೆ ಏರಿ ಕುಸಿಯುತ್ತದೆ.  ಎರಡೂವರೆ ದಿನಗಳ ನಂತರ ಅದೇ ಭಾವನೆಯು, ಅಷ್ಟೇ ತೀವ್ರತೆಯನ್ನು ಹೊಂದಿರುವುದಿಲ್ಲ. ಸಾಧ್ಯವೇ ಇಲ್ಲ.  ಖಂಡಿತ ಬದಲಾಯಿಸುತ್ತದೆ. ಮನಸ್ಸು, ಮನೋಭಾವನೆಗಳು ಮತ್ತು ಸಮಯ ಹೇಗೆ ಸಂಬಂಧಪಟ್ಟಿವೆ ಎಂಬುದು ಅತೀ ದೊಡ್ಡ ವಿಜ್ಞಾನ.

ಜ್ಯೋತಿಷ್ಯಶಾಸ್ತ್ರವು ಇದರ ಬಗ್ಗೆ ಹೆಚ್ಚು ಒಳನೋಟವನ್ನು ಹೊಂದಿದೆ. ಜ್ಯೋತಿಷಿಗಳು ವಾರಭವಿಷ್ಯವನ್ನು ನುಡಿಯುತ್ತಾರೆ, "ಓ ಸಂಬಂಧಗಳಿಗೆ ಒಳ್ಳೆಯ ಸಮಯ, ಹಣ ಸಂಪಾದನೆಗೆ ಒಳ್ಳೆಯ ಸಮಯ, ಅದು, ಇದು" ಎಂದು, ಇವೆಲ್ಲವನ್ನೂ ಬರೆಯುತ್ತಾರೆ" (ನಗು). ಎಲ್ಲಾ ವಿಷಯಗಳನ್ನೂ ಸಾಮಾನ್ಯವಾಗಿ ಮಾಡಿಬಿಡುತ್ತಾರೆ. "ನೀವು ಈ ಸಮಯದಲ್ಲಿ ಹುಟ್ಟಿದ್ದರೆ ನಿಮಗಿದು ಒಳ್ಳೆಯದು.  ಇದನ್ನು ಮಾಡಿ" ಎನ್ನುತ್ತಾರೆ.  ಇವರು ಮಾಡುವುದೆಲ್ಲಾ ಹಣವನ್ನು ಸಂಪಾದಿಸುವ ಸಲುವಾಗಿಯೇ.  ಅದು ಪೂರ್ಣವಾಗಿ ಸುಳ್ಳಲ್ಲ. ಅದರಲ್ಲಿ ಸ್ವಲ್ಪ ಸತ್ಯಾಂಶವೂ ಇದೆ. ಅದರ ತಳಹದಿಯಲ್ಲಿ ಸತ್ಯವಿದೆ. ಮನಸ್ಸು ಮತ್ತು ಸಮಯ ಸಂಬಂಧಪಟ್ಟಿವೆ ಎಂಬ ಸಿದ್ಧಾಂತವು ನಿಜವಾದದ್ದು. 

ಮನಸ್ಸು ಎಂದರೆ ಮನೋಭಾವನೆಗಳು, ಆಲೋಚನೆಗಳು, ಅಭಿಪ್ರಾಯಗಳು, ವಿಚಾರಗಳು, ನಾವು ಶೇಖರಿಸಿಕೋಳ್ಳುವ ಎಲ್ಲವೂ. ಮನಸ್ಸಿಲ್ಲದಿರುವಿಕೆಯೇ ಧ್ಯಾನ. ನೀವು ಧ್ಯಾನ ಮಾಡಿದಾಗ ಮನಸ್ಸಿನ ಪ್ರಭಾವದಿಂದ ಹೊರಬರುತ್ತೀರಿ ಮತ್ತು ಆತ್ಮದೊಳಗೆ ಹೋಗುತ್ತೀರಿ. ಆತ್ಮವೇ ಶಿವತತ್ತ್ವ. ಶಿವತತ್ತ್ವ ವೆಂದರೆ ಸದಾ ಮಂಗಳಮಯವಾಗಿರುವಂತದ್ದು, ಆದರಿಸುವಂತದ್ದು, ಉತ್ಥಾಪಿಸುವಂತದ್ದು, ಪ್ರೇಮಮಯಿಯಾದಂತದ್ದು. ನಿಮ್ಮ ಆಳದಲ್ಲಿರುವ ಆ ಪ್ರೇಮಮಯಿಯಾದ, ಆದರಣೀಯ, ಉತ್ಥಾಪನಮಯವಾದ ಮತ್ತು ಮಂಗಳಮಯವಾದ ಚೈತನ್ಯವು ಮನಸ್ಸಿನ ಮತ್ತು ಕಾಲದ ಎಲ್ಲಾ ನಕಾರಾತ್ಮಕ ಪ್ರಭಾವಗಳನ್ನೂ ಇಲ್ಲವಾಗಿಸಿಬಿಡುತ್ತದೆ. ಆದ್ದರಿಂದ ಭಾರತದಲ್ಲಿರುವ ನಂಬಿಕೆಯೆಂದರೆ, 

"ಕೆಟ್ಟಕಾಲ ಬಂದಾಗ ಸುಮ್ಮನೆ "ಓಂ ನಮಃ ಶಿವಾಯ" ಎನ್ನಿರಿ, ಎಲ್ಲವೂ ಹೊರಟುಹೋಗುತ್ತದೆ." ಎಲ್ಲಾ ಕೆಟ್ಟಕಾಲವೂ ಹೊರಟುಹೋಗುತ್ತದೆ.

"ಮನಃ" ಎಂಬ ಪದವನ್ನು ತಿರುಗುಮುರುಗಾಗಿಸಿ ಓದಿದಾಗ ಅದು "ನಮಃ" ಆಗುತ್ತದೆ. "ಮನಃ" ಎಂದರೆ ಬಹಿರ್ಮುಖವಾದ, ಜಗತ್ತಿನಲ್ಲಿ ತಲ್ಲೀನವಾಗಿರುವ ಚೈತನ್ಯ. "ನಮಃ" ಎಂದರೆ ಅಂತರ್ಮುಖವಾದ ಚೈತನ್ಯ. "ಶಿವಾಯ" ಎಂದರೆ ಶಿವತತ್ತ್ವಕ್ಕೆ, ಚೈತನ್ಯದ ತುರಿಯಾವಸ್ಥೆಗೆ, ಅಸ್ತಿತ್ವದ ಅತೀ ಸೂಕ್ಷ್ಮವಾದ ಅಂಶಕ್ಕೆ ನಮಸ್ಕಾರ. "ನಮಃ" ಎಂದರೆ ಮನಸ್ಸು ಸೃಷ್ಟಿಯ ಮೂಲದೆಡೆಗೆ ತೆರಳುತ್ತದೆ. ಇದರಿಂದ ಎಲ್ಲವೂ ಮಂಗಳಮಯವಾದ ಅನುಭವಗಳಾಗಿಬಿಡುತ್ತವೆ.

ಪ್ರಶ್ನೆ:- ಎಲ್ಲಾ ಪ್ರಶ್ನೆಗಳಿಗೂ ನಿಮ್ಮ ಬಳಿ ಹೇಗೆ ಉತ್ತರವಿರುತ್ತದೆ? 

ಶ್ರೀ ಶ್ರೀ;- ಈ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ! 

ಸೋಮವಾರ, ಜನವರಿ 24, 2011

ಧ್ಯಾನದಿಂದ ನೀವು ವಿಶ್ವಾತ್ಮಕ ಚೈತನ್ಯದೊಡನೆ ಸಂಬಂಧವನ್ನು ಪಡೆಯುವಿರಿ


ಸೋಮವಾರಜನವರಿ ೨೪, ೨೦೧೧
೬೦೦ನೆಯ ಸಾಮ್ ಬುದ್ಧ ಜಯಂತಿ, ಕೊಲಂಬೊ, ಶ್ರೀಲಂಕ
ಬುದ್ದ ಜಯಂತಿಯ ೨೬೦೦ ವರ್ಷಗಳ ಸಂದರ್ಭದಲ್ಲಿ ಸಂಗೀತ ಸಂಜೆಯನ್ನು ಆಯೋಜಿಸಲಾಗಿದೆ. ಸಮಾಜದಲ್ಲಿ ಮತ್ತೆ "ಧರ್ಮ"ವನ್ನು ತರಬೇಕೆಂಬುದೇ ಇದರ ಉದ್ದೇಶ. "ಧರ್ಮ"ದ ಮೌಲ್ಯವು ಸಮಾಜದಲ್ಲಿ ಇಲ್ಲವಾದಾಗ ಜಗತ್ತಿನಲ್ಲಿ ದುಃಖವಿರುತ್ತದೆ. ಮೌಲ್ಯಗಳನ್ನೆಲ್ಲಾ ನಾವು ಮರೆತು ಹೋಗಿರುವುದೇ ಇದಕ್ಕೆ ಕಾರಣ. ನಿಮ್ಮೊಡನೆ ಇಲ್ಲಿ ಇರಲು ನಾವು ಬಹಳ ಹರ್ಷಿಸುತ್ತೇವೆ. ನೀವೇ ಶ್ರೀಲಂಕಾದ ಆಶಾಕಿರಣ. (ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳನ್ನು ಸಂಗೀತ ಹಾಗೂ ಸಾಂಸ್ಕೃತಿಕ ಗುಂಪುಗಳನ್ನು ನೋಡಿ ಪರಮ ಪೂಜ್ಯ ಗುರೂಜಿಯವರು ಹೇಳಿದರು). ನಮ್ಮ ಬೇರುಗಳನ್ನು ಆಳವಾಗಿಸಿಕೊಂಡು, ನಮ್ಮ ದೃಷ್ಟಿಕೋನವನ್ನು ವಿಶಾಲವಾಗಿಸಿಕೊಳ್ಳಬೇಕು.
ಅರ್ಧಮವು ಪ್ರಧಾನವಾದಾಗ ಜನರು ಧರ್ಮದ ನಿಜವಾದ ಸಾರವನ್ನು ಮರೆತುಬಿಟ್ಟರು. ಭಗವಾನ್ ಬುದ್ಧರು ಧರ್ಮವನ್ನು ಪುನರ್ ಸ್ಥಾಪಿಸುವ ಸಲುವಾಗಿ ಬಂದರು. ಅವರು ಹರಡಿದ ಸಂದೇಶವೇ- "ಅಹಿಂಸಾ ಪರಮೋ ಧರ್ಮಃ". ಇಂದು ಶ್ರೀಲಂಕಾದಲ್ಲಿ ನಿರ್ಭಯತೆಯಿರುವುದನ್ನು ಕಂಡು ನಮಗೆ ಬಹಳ ಸಂತೋಷವಾಗುತ್ತಿದೆ. ಜನರೀಗ ಎಲ್ಲಾ ಕಡೆಯೂ ಓಡಾಡಬಲ್ಲರು. ಎಲ್ಲಾ ಚೆಕ್ ಪೋಸ್ಟ್‌ಗಳನ್ನೂ ತೆಗೆದು ಹಾಕಲಾಗಿದೆ ಮತ್ತು ಜನಸಂಚಾರವೀಗ ಸುಲಭವಾಗಿದೆ.
ಎಲ್ಲಾ ಪಂಗಡಗಳ ಜನರೂ - ತಮಿಳರು, ಸಿಂಗಳರು, ಮುಸಲ್ಮಾನರು, ಕ್ರೈಸ್ತ ಮತದವರು ಮತ್ತು ಬೌದ್ಧರೆಲ್ಲರೂ ಇಂದು ಒಂದಾಗಿದ್ದಾರೆ. ಸಮಾಜಕ್ಕೆ ಇನ್ನೂ ಹೆಚ್ಚಿನ ಸಂತೋಷ ಬರಬೇಕು. ಎಲ್ಲಾ ಯುವಕರು ಕ್ರಿಯಾತ್ಮಕರಾದಾಗ ದೇಶದ ಪ್ರಗತಿಗಾಗಿ ಹೆಚ್ಚಿನ ಕಾಣಿಕೆಯನ್ನು ನೀಡಬಹುದು. ಅಭಿವೃದ್ಧಿಗಾಗಿ ವಚನಬದ್ಧತೆ ಮತ್ತು ಸಂಶೋಧನೆಗಾಗಿ ತೆರೆದ ಮನಸ್ಸನ್ನು ಹೊಂದಿರಬೇಕು.
 ಒಬ್ಬ ಹಿರಿಯ ವಿಜ್ಞಾನಿಯು, ತಾವು ನಲವತ್ತು ವರ್ಷಗಳ ಕಾಲ ಭೌತಶಾಸ್ತ್ರವನ್ನು ಅಧ್ಯಯನ ಮಾಡಿ, ಭೌತವಸ್ತುವೆಂಬುದೇ ಇಲ್ಲವೆಂದು ಅರಿತೆ ಎಂದು ನಮಗೆ ಹೇಳಿದರು. ಕ್ವಾನ್‌ಟಮ್ ಫಿಸಿಕ್ಸ್‌ನ ಬಗ್ಗೆ ಅವರು ಯಾವುದೇ ಭಾಷಣೆ ನೀಡಲಿ, ಅದರ ಸಾರ ಹೀಗಿರುತ್ತದೆ - "ಭೌತಿಕ ವಸ್ತುವೆಂಬುದಿಲ್ಲ," ಇದನ್ನೇ ಬೌದ್ಧ ಧರ್ಮದಲ್ಲಿ ಮತ್ತು ವೇದಾಂತದಲ್ಲಿ ಹೇಳಲಾಗಿದೆ.
ಯುವಕರಿಗೆ ಧ್ಯಾನದ ಅವಶ್ಯಕತೆಯಿದೆಯೆ?
ಈ ಪ್ರಶ್ನೆಯನ್ನು ಅನೇಕರು ಕೇಳುತ್ತಾರೆ.
ಪೂರ್ಣ ವ್ಯಕ್ತಿತ್ವವನ್ನು ಹೊಂದಲು ನೀವೆಲ್ಲರೂ ಬಯಸುತ್ತೀರೆ? ಹೊಂದಬೇಕೆಂದಿದ್ದರೆ ಮತ್ತು ಸಂತೋಷವಾಗಿರಲು, ಆರೋಗ್ಯದಿಂದಿರಲು, ಕರುಣಾಮಯಿಗಳಾಗಿರಲು, ಪ್ರೇಮಮಯಿಗಳಾಗಿರಲು ಮತ್ತು ಹಾಸ್ಯ ಪ್ರವೃತ್ತಿಯುಳ್ಳವರಾಗಿರಲು ಧ್ಯಾನವು ಬೇಕೇ ಬೇಕು. ಈ ಎಲ್ಲಾ ಮಾನವೀಯ ಗುಣಗಳೂ ಧ್ಯಾನದಿಂದ ಅರಳುತ್ತವೆ.
ಧ್ಯಾನಕ್ಕೆ ಮೂರು ನಿಯಮಗಳಿವೆ. ಮೊದಲನೆಯ ಕೇವಲ ೧೦ ನಿಮಿಷಗಳಿಗಾಗಿ, "ನನೆಗೇನೂ ಬೇಡ". ಎಂದು ಹೇಳುವುದು. ಹೀಗೆ ಹೇಳಬಲ್ಲಿರೆ? ನಿಮ್ಮ ಅವಶ್ಯಕತೆಗಳೆಲ್ಲವನ್ನೂ ಒಂದು ಟೋಪಿಯನ್ನು ತೆಗೆದಂತೆ ಪಕ್ಕಕ್ಕೆ ತೆಗೆದಿಟ್ಟು, ಕೇವಲ ಹತ್ತು ನಿಮಿಷಗಳಾಗಿ ಕುಳಿತುಕೊಳ್ಳಿ. ನಂತರ ಎರಡನೆಯ ನಿಯಮ;-
"ನಾನೇನೂ ಮಾಡುವುದಿಲ್ಲ". ಒಬ್ಬ ಪಂಡಿತನು ಬುದ್ಧನ ಬಳಿಗೆ ಬಂದಾಗ ಬುದ್ಧರು ಆತನಿಗೆ, "ಸುಮ್ಮನೆ ವಿಶ್ರಮಿಸು. ಖಾಲಿ ಮತ್ತು ಟೊಳ್ಳಾಗು" ಎಂದರು.
"ಮುಂದಿನ ಹತ್ತು ನಿಮಿಷಗಳಲ್ಲಿ ನಾನೇನೂ ಮಾಡುವುದಿಲ್ಲ.  ಯಾವುದರ ಮೇಲೂ ಏಕಾಗ್ರತೆಯನ್ನು ಮಾಡುವುದಿಲ್ಲ. ಯಾವ ಆಲೋಚನೆಗೂ ಪ್ರಾಮುಖ್ಯತೆ ಕೊಡುವುದಿಲ್ಲ. ಒಳ್ಳೆಯ ಆಲೋಚನೆ, ಕೆಟ್ಟ ಆಲೋಚನೆ, ಯಾವುದಾದರೂ ಬರಲಿ, ಹೋಗಲಿ. ನಾನೇನೂ ಮಾಡುವುದಿಲ್ಲ. ಆಲೋಚನೆಗಳನ್ನು ಸ್ವಾಗತಿಸುವುದೂ ಇಲ್ಲ ಅಥವಾ ತಳ್ಳಿ ಹಾಕುವುದೂ ಇಲ್ಲ" ಎನ್ನಬೇಕು.
ಮೂರನೆಯ ನಿಯಮ;-
"ನಾನೂ ಯಾರು ಅಲ್ಲ" ಮುಂದಿನ ಕೆಲವು ನಿಮಿಷಗಳವರೆಗೆ ನೀವು ಒಬ್ಬ ವಿದ್ಯಾರ್ಥಿ, ಉದ್ಯಮಿ, ಗಂಡು, ಹೆಣ್ಣು... ಇತ್ಯಾದಿ ಮುದ್ರೆಗಳನ್ನೆಲ್ಲಾ ತೆಗೆದುಹಾಕಿ. ಈಗ ಧ್ಯಾನ ಮಾಡೋಣ.
(ಹದಿನೈದು ನಿಮಿಷಗಳವರೆಗೆ ಧ್ಯಾನ ನಡೆಯಿತು. ನಂತರ)
ಇಲ್ಲಿ ನಿಮಗೆಷ್ಟು ಜನರಿಗೆ ೧೫ ನಿಮಿಷಗಳು ಧ್ಯಾನ ಮಾಡಿದ್ದೀರಿ ಎಂದೆನಿಸಿತು? ನಿಮಗೆ ತಾಜಾತನದ ಅನುಭವವಾಗುತ್ತಿದೆಯೆ ? ಎಷ್ಟು ಜನರಿಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ? ನೋಡಿ, ಅದೇ ಧ್ಯಾನ. ಧ್ಯಾನವೆಂದರೆ ನಿಮಗೆ ಸಮಯದ ಅರಿವಾಗದಿರುವುದು, ವಿಶ್ವಾತ್ಮಕ ಚೈತನ್ಯದೊಡನೆ ಸಂಬಂಧವುಂಟಾಗುವುದು.
ಒಂದು ಗುಂಪಿನಲ್ಲಿ ಮಾಡಿದಾಗ ಬಹಳ ಒಳ್ಳೆಯದು. ಒಂದು ಗುಂಪಿನೊಡನೆ, ಸಂಘದೊಡ ಮಾಡಬೇಕು. ಬೆಳಿಗ್ಗೆ ನಿಮ್ಮ ಶಾಲಾ ಪ್ರಾರ್ಥನೆ ಮುಗಿದ ನಂತರ ಸ್ವಲ್ಪ ಸಮಯ ಕಣ್ಣು ಮುಚ್ಚಿ ಕುಳಿತು ಧ್ಯಾನ ಮಾಡಿ. ಧ್ಯಾನದಿಂದ ನಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ನಿಮ್ಮೊಡನೆ ಇರಲು ನಮಗೆ ಬಹಳ ಸಂತೋಷವಾಗುತ್ತಿದೆ. ಕುಶಲತೆಯುಳ್ಳ, ಕರುಣಾಮಯಿಗಳಾದ ವಿಶ್ವಮಾನವರಾಗಿ. ಜಗತ್ತಿನ ಪ್ರತಿಯೊಂದು ಭಾಗದಿಂದಲೂ ಒಳ್ಳೆಯ ವಿಷಯಗಳನ್ನು ಕಲಿತುಕೊಳ್ಳಿ.
ಭಾರತದ ಪ್ರತಿಯೊಂದು ಮಗುವೂ ಸಹ ತಮ್ಮ ಬಾಲ್ಯದಲ್ಲಿ ಕೇಳುವ ಮೊದಲ ವಿದೇಶದ ಹೆಸರೆಂದರೆ, ಶ್ರೀಲಂಕ. ಆ ಶ್ರೀಲಂಕ ಹೇಗಿತ್ತು? ಸುರ್ವಣಮಯವಾಗಿತ್ತು. ಭಗವಾನ್ ಶ್ರೀ ರಾಮನೇ "ಸುರ್ವಣಮಯ  ಶ್ರೀಲಂಕ" ಎಂದು ಹೇಳುತ್ತಾನೆ. ಆದ್ದರಿಂದ ಪ್ರತಿಯೊಂದು ಯುವಕ/ಯುವತಿಯೂ ಸಹ ಕುಶಲತೆಯುಳ್ಳ, ಹೊಳೆಯುತ್ತಿರುವ, ಕರುಣಾಮಯಿಗಳಾಗಿರುವಂತಹ ಸುವರ್ಣಮಯವಾದ ಶ್ರೀಲಂಕೆಯ ಬಗ್ಗೆ ಕನಸು ಕಾಣಬೇಕೆಂದು ನಾವು ಇಚ್ಛಿಸುತ್ತೇವೆ. ಇದು ಬಹಳ ಬಹಳ ಮುಖ್ಯ
ಭಗವಂತ ನಿಮ್ಮೆಲ್ಲರನ್ನೂ ಆಶೀರ್ವದಿಸಲಿ.
(ಬುದ್ಧಂ ಶರಣಂ ಗಚ್ಛಾಮಿ ಎಂಬ ಘೋಷಣೆಯಿಂದ ಆ ಕಾರ್ಯಕ್ರಮ ಮುಗಿಯಿತು). 

ಬುಧವಾರ, ಜನವರಿ 19, 2011

ಶ್ರೀ ಶ್ರೀ ಯವರೊಡನೆ ಕಾಲಾತೀತ ಸಂಭಾಷಣೆಗಳು

ಜನವರಿ ೧೯, ೨೦೧೧, ಬುಧವಾರ

ಪ್ರಶ್ನೆ : ಇಂದು ಪೂರ್ಷ ಪೂರ್ಣಿಮ. ಇದರೊಡನೆ ಸಂಬಂಧಪಟ್ಟ ಕಥೆಗಳಿವೆಯೇ?
ಶ್ರೀ ಶ್ರೀ : ಈ ಪೂರ್ಷ ಪೂರ್ಣಿಮ ದಕ್ಷಿಣ ಭಾರತದ ಮೊದಲನೆಯ ಫಸಲಿನ ಪೂರ್ಣಿಮ. ಇಂದು ತಾವು ಬೆಳೆದದ್ದೆನ್ನೆಲ್ಲಾ ಜನರು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಾರೆ, ಕೊಡುತ್ತಾರೆ ಮತ್ತು ತೆಗೆದುಕೊಳ್ಳುತ್ತಾರೆ. ಇದನ್ನು "ಕಾಡಿನ ಹುಣ್ಣಿಮೆ" ಎಂದೂ ಕರೆಯುತ್ತಾರೆ. ಉತ್ತರದಲ್ಲಿ ಹಿಮಪಾತವಾಗುತ್ತಿರುವಾಗ ಎಲ್ಲಾ ಎಲೆಗಳೂ ಉದುರಿ ಹೊಗಿರುತ್ತವೆ. ಆದ್ದರಿಂದ ಪೂರ್ಣ ಚಂದ್ರ ಸುಲಭವಾಗಿ ಕಾಣಿಸುತ್ತಾನೆ. ಕಾಡನ್ನು, ಪ್ರಕೃತಿಯನ್ನು, ತರಕಾರಿಗಳನ್ನು ಸನ್ಮಾನಿಸುವುದು....

ಪ್ರಶ್ನೆ : ಮೋಹವನ್ನು , ಪ್ರೇಮಕ್ಕೆ ಹೇಗೆ ಪರಿವರ್ತಿಸುವುದು?
ಶ್ರೀ ಶ್ರೀ : ಮೋಹ ಎಂದರೆ, "ಮತ್ತೆ ಮರಳಿ ಏನನ್ನೋ ನಾನು ಪಡೆಯಬೇಕು". ಪ್ರೇಮವೆಂದರೆ, "ನಾನು ನಿನಗೆ ಹೇಗೆ ಸಹಾಯಕವಾಗಲಿ?"

ಪ್ರಶ್ನೆ : ಧರ್ಮ ಏನೆಂದು ಹೇಗೆ ತಿಳಿಯುವುದು?
ಶ್ರೀ ಶ್ರೀ : ನಿಮ್ಮ ಅಂತರ್ಭಾಗದಿಂದ. "ಇದು ಸರಿ. ನಾನು ಮಾಡಬೇಕಾಗಿರುವುದು ಇದನ್ನೇ" ಎಂದು ನಿಮಗನಿಸುತ್ತದೆ.

ಪ್ರಶ್ನೆ : ನನ್ನ ಮೇಲೆ ಹೆಚ್ಚು ಗಮನ ಸೆಳೆದುಕೊಳ್ಳಬೇಕೆಂಬ ಬಯಕೆಯಿಂದ ನಾನು ಹೇಗೆ ಹೊರಬರಲಿ?
ಶ್ರೀ ಶ್ರೀ : ಮುಂದಿನ ಪ್ರಶ್ನೆ...

ಪ್ರಶ್ನೆ : ನಾನು ನಿಮಗೆ ಬಹಳ ಸನ್ನಿಹಿತವಾಗಿದ್ದೇನೆ ಎಂದು ಅನ್ನಿಸುತ್ತದೆ. ಆದರೆ ನಿಮಗೆ ಹತ್ತಿರವಾದಷ್ಟೂ ನನಗೆ ಅತೀ ಕ್ಲಿಷ್ಟಕರ ಪರಿಸ್ಥಿತಿಗಳು ಎದುರಾಗುತ್ತಿವೆ. ಇದು ಗುರುಮಂಡಲಕ್ಕೆ ಸಂಬಂಧ ಪಟ್ಟಿದೆಯೇ?
ಶ್ರೀ ಶ್ರೀ : ವಿರಹವು ನಿಮ್ಮೊಳಗಿನ ಸೃಜನಶೀಲತೆಯನ್ನು ಹೊರತರುತ್ತದೆ. ಅನೇಕ ಕವನಗಳು ಹೊರಬರಲು ಸಾಧ್ಯ. ವಿರಹವು ರಾಧಾಶಕ್ತಿ...ಕೃಷ್ಣ ಪ್ರೇಮ. ಬಹಳ ಭಾಗ್ಯಶಾಲಿಗಳಾಗಿ.

ಪ್ರಶ್ನೆ : ತೀವ್ರ ಪ್ರೇಮವನ್ನು ಅನುಭವಿಸಲು ಶಿಸ್ತನ್ನು ಬಿಡಬಹುದೇ?
ಶ್ರೀ ಶ್ರೀ : ಅವೆರಡೂ ಒಟ್ಟಿಗೇ ಹೊಗುತ್ತವೆ. ಶಿಸ್ತನ್ನು ಪಾಲಿಸಲೇಬೇಕು. ಇದರ ಬಗ್ಗೆಯೆಲ್ಲಾ ನಾವು "ನಾರದ ಭಕ್ತಿ ಸೂತ್ರ"ಗಳಲ್ಲಿ ಮಾತನಾಡಿದ್ದೇವೆ.

ಪ್ರಶ್ನೆ : ಕೃಷ್ಣನನ್ನು ಏಕೆ ಪೂರ್ಣಾವತಾರ ಎಂದು ಕರೆಯುತ್ತಾರೆ?
ಶ್ರೀ ಶ್ರೀ : ಕೃಷ್ಣನ ಹಲವಾರು ಅಂಶಗಳು ಪೂರ್ಣವಾಗಿದೆ. ಇದರ ಬಗ್ಗೆ ನಾವು "ಕೃಷ್ಣ - ಆನಂದದ ಪರಮಾವಧಿ"ಯಲ್ಲಿ ಮಾತನಾಡಿದ್ದೇವೆ.

ಪ್ರಶ್ನೆ : ಆತ್ಮವು ಮತ್ತೆ ಇದೇ ಪ್ರಪಂಚಕ್ಕೆ ಬರುತ್ತದೆಯೇ ಅಥವಾ ಬೇರೆ ಲೋಕಗಳಲ್ಲೂ ಜನಿಸಬಹುದೇ?
ಶ್ರೀ ಶ್ರೀ : ಎಲ್ಲಾ ಸಾಧ್ಯತೆಗಳೂ ಇವೆ.

ಪ್ರಶ್ನೆ : ನನ್ನ ಜೀವನದಲ್ಲಿ ಪವಾಡಗಳು ಆಗದೆ ಏಕೆ ನಿಂತು ಹೋಗಿವೆ?
ಶ್ರೀ ಶ್ರೀ : ನಿಮಗೆ ಸ್ವಲ್ಪ ವಿಪರೀತವನ್ನು ಅನುಭವಿಸುವ ಅವಕಾಶವನ್ನಿಟ್ಟು ಅಲ್ಪ ನಿದ್ರೆ ಮಾಡುತ್ತಿದ್ದೆಯಷ್ಟೆ!

ಪ್ರಶ್ನೆ : ಅಪ್ರಾಮಾಣಿಕವಾದ ಹೊಗಳಿಕೆಯು, ಪ್ರಿಯವಾದ ಸುಳ್ಳಿನಂತೆಯೇ ಅಲ್ಲವೇ?
ಶ್ರೀ ಶ್ರೀ : ನಿಮ್ಮ ಹೊಗಳಿಕೆಯೇಕೆ ಪ್ರಾಮಣಿಕವಾಗಿರಬೇಕು? ನಿಮ್ಮ ಹೊಗಳಿಕೆಯು ಒಂದು ಆಶೀರ್ವಾದವಾಗಬಹುದು. ಆಶೀರ್ವಾದಗಳು ಭವಿಷ್ಯಕ್ಕಾಗಿ ಮಾತ್ರ. ಆದ್ದರಿಂದ ಆಶೀರ್ವಾದದ ರೀತಿಯಲ್ಲಿ ಒಬ್ಬರನ್ನು ನೀವು ಹೊಗಳಬಹುದು. ಯಾರಾದರೂ ಜಿಪುಣರಾಗಿದ್ದರೆ, ನೀವು, "ಆಹಾ ನೀವೆಷ್ಟು ಉದಾರಿಗಳು!" ಎನ್ನಬಹುದು. ಈ ಹೊಗಳಿಕೆಯು ಅವರ ಭವಿಷ್ಯದಲ್ಲಿ ಆಶೀರ್ವಾದವಾಗುತ್ತದೆ.

ಪ್ರಶ್ನೆ : ನೈತಿಕವಾಗಿದ್ದುಕೊಂಡೂ ಪ್ರಾಯೊಗಿಕವಾಗಿಯೂ ಇರಬಹುದೇ?
ಶ್ರೀ ಶ್ರೀ : ಹೌದು. ನಿಮ್ಮ ಯುಕ್ತಿಯು ಊಟದಲ್ಲಿರುವ ಉಪ್ಪಿನಷ್ಟಿರಬೇಕು - ನಿಮ್ಮ ವ್ಯಾಪಾರದಲ್ಲಿ ಸ್ವಲ್ಪ ಉಪ್ಪಿದ್ದರೆ ಪರವಾಗಿಲ್ಲ. ಬಹಳ ಉಪ್ಪಾದರೆ, ಉಪ್ಪಿನಲ್ಲಿ ಊಟವಿರುವಂತೆ ಆಗಿಬಿಡುತ್ತದೆ.

ಪ್ರಶ್ನೆ : ನಾನು ಐಐಟಿಯಲ್ಲಿ ಪ್ರೊಫ಼ೆಸರಾಗಿದ್ದೇನೆ. ಇತರ ಪ್ರೊಫ಼ೆಸರ್ ಗಳಿಗೆ ಆಧ್ಯಾತ್ಮಿಕತೆಯೆಂದರೆ ತೀವ್ರ ಅಸಡ್ಡೆ. ಇಂಥವರನ್ನು ಪಥದಲ್ಲಿ ಹೇಗೆ ತರಲಿ?
ಶ್ರೀ ಶ್ರೀ : ಅವರ ಅಸಡ್ಡೆತನವನ್ನು ಗುರುತಿಸಬೇಡಿ. ನೀವೇನು ಮಾಡಬೇಕೋ ಅದನ್ನು ಮಾಡುತ್ತಲಿರಿ. ಬಹಳ ಪ್ರಯತ್ನಪಟ್ಟು ಶ್ರಮವಹಿಸಿ ಇತರರನ್ನು ಒಪ್ಪಿಸಲು ಹೋಗಬೇಡಿ. ನಿಮ್ಮ ನಿರ್ಧಾರದಲ್ಲಿ ನೀವು ಧೃಢವಾಗಿರಿ , ಪ್ರತಿಯೊಂದು ಆತ್ಮಕ್ಕೂ ಆಧ್ಯಾತ್ಮಿಕತೆಯ ಅವಶ್ಯಕತೆಯಿದೆ. ಅವರು ಅದನ್ನು ಬೇಡವೆನ್ನುತ್ತಿದ್ದರೆ ಅದು ಮೇಲಿನ ಹಂತದಲ್ಲಿ ಮಾತ್ರ.

ಪ್ರಶ್ನೆ : ನಿಮ್ಮ ಬಳಿ ಇನ್ನೂ ಬರದಿರುವ ಜನರ ಬಗ್ಗೆಯೇನು? ಅವರು ಹೇಗೆ ಮೋಕ್ಷಮಾರ್ಗಕ್ಕೆ ಬರುತ್ತಾರೆ?
ಶ್ರೀ ಶ್ರೀ : ಅವರೂ ಸ್ವಲ್ಪಸಮಯದ ನಂತರ ಬರುತ್ತಾರೆ.

ಶುಕ್ರವಾರ, ಜನವರಿ 14, 2011

ಕೋಲಾಹಲದಿಂದ ಆನಂದವುಂಟಾಗುತ್ತದೆ ಮತ್ತು ಕೋಲಾಹಲವನ್ನು ಆನಂದಿಸಬಲ್ಲ ಸಾಮರ್ಥ್ಯವೇ ಸಾಕ್ಷಾತ್ಕಾರ


ಜನವರಿ ೧೪, ೨೦೧೧, ಮುಂಬಯಿ, ಭಾರತ
 
ಪ್ರಶ್ನೆ;- ವಾಲ್ಮೀಕಿಯವರ ಮಹತ್ವದ ಬಗ್ಗೆ ಮತ್ತು ಆ ಕಾಲದ ಬಗ್ಗೆ ಸ್ವಲ್ಪ ಹೇಳುತ್ತೀರೆ? 
ಶ್ರೀ ಶ್ರೀ;- ವಾಲ್ಮೀಕಿಯವರು ಶ್ರೀರಾಮನ ಸಮಕಾಲೀನರು. ಗುರುವಿನ ದೈಹಿಕ ಇರುವಿಕೆಯು ಇಲ್ಲವಾದ ಬಹಳ ವರ್ಷಗಳ ನಂತರ ಜಗತ್ತಿನ ಅನೇಕ ಗ್ರಂಥಗಳು ಬರೆಯಲ್ಪಟ್ಟವು. ಆದರೆ ರಾಮಾಯಣ ನಡೆದ ಕಾಲದಲ್ಲೇ ವಾಲ್ಮೀಕಿಯವರು ಆ ಗ್ರಂಥವನ್ನು ರಚಿಸಿದರು. ಆ ಕಾಲದಲ್ಲಿ ಸಮಾಜದಲ್ಲಿ ಜಾತಿಭೇದಗಳಿರಲಿಲ್ಲ. ಆಗಿನ ಕಾಲದಲ್ಲಿ ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳು ಮತ್ತು ಸ್ವಕೀಯ ಭಾವನೆಯು ಬಹಳ ಆಳವಾಗಿ ಬೇರುಬಿಟ್ಟಿದ್ದವು. 

ಪ್ರಶ್ನೆ;- ಧಾರ್ಮಿಕ ಮತಾಂಧತೆಯಿಂದ ಈ ಜಗತ್ತು ಬಹಳ ಕಷ್ಟ ಪಡುತ್ತಿದೆ. ಇದರ ಬಗ್ಗೆ ಮಾತನಾಡಬಲ್ಲಿರೆ? ಇದರ ಬಗ್ಗೆ ನಾವು ಯಾವ ರೀತಿಯ ನಿಲುವನ್ನು ತಾಳಬೇಕು?
ಶ್ರೀ ಶ್ರೀ;-  ಒಂದಾನೊಂದು ಕಾಲದಲ್ಲಿ, ಎಲ್ಲರೂ ವೈವಿಧ್ಯತೆಯನ್ನು ಆಚರಿಸಿ, ಜೀವಿಸುತ್ತಿದ್ದ ಒಂದು ಸುಂದರವಾದ ಸ್ಥಳವಾಗಿತ್ತು ಈ ಭೂಮಿ ಎಂದು ನಿಮಗೆ ಗೊತ್ತೆ? ಆದರೆ ಇಷ್ಟೊಂದು ವಿಭಜನೆ ಉಂಟಾಗುವುದಕ್ಕೆ ಏನು ಕಾರಣವಾಯಿತು?  ಎಲ್ಲರೂ ವ್ಯತ್ಯಾಸಗಳ ಮೇಲೇಳಿ ಮುನ್ನಡೆಯಬೇಕೆಂಬುದೇ ನಮ್ಮ ಇಚ್ಛೆ. ಬಾಹ್ಯದಲ್ಲಿ ನಾವು ಯಾವುದೇ ಧೋರಣೆಯನ್ನು ಹೊಂದಿದ್ದರೂ, ಒಳಗೆ ಎಲ್ಲರೂ ಸಹಜತೆಯನ್ನು ಹೊಂದಿ. ಎಲ್ಲರೊಡನೆಯೂ ಸ್ವಕೀಯ ಭಾವನೆ ಬೆಳೆಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದಿ. 

ಪ್ರಶ್ನೆ;- ಕೆಲವೊಮ್ಮೆ ನಮಗೆ ಅದೃಷ್ಟವಿಲ್ಲದೆ, ಸತ್ವದ ಪ್ರಭಾವವಿಲ್ಲದಿರುವುದರಿಂದ ನಮ್ಮ ಕಾರ್ಯಗಳು ಯಶಸ್ವಿಯಾಗುವುದಿಲ್ಲ. ಇದನ್ನು ಹೇಗೆ ಹೆಚ್ಚಿಸಿಕೊಳ್ಳಬಹುದೆಂಬುದರ ಬಗ್ಗೆ ಮಾತನಾಡಿತ್ತೀರೆ? ಒಮ್ಮೆ ಸಮಾಜದಲ್ಲಿ ಅಂತಹ ಸಾಮರಸ್ಯವಿತ್ತೆಂದು ನೀವೇ ಹೇಳಿದಿರಿ. ಅದನ್ನು ಹೇಗೆ ಮರುತರಿಸುವುದು?
ಶ್ರೀ ಶ್ರೀ;- ನಿಮ್ಮ ಬಳಿ ಒಂದು ಸೆಲ್‌ಫೋನ್ ಇದೆಯೇ? ಅದು ಹೇಗೆ ಕೆಲಸ ಮಾಡುತ್ತದೆ? ಮೊಟ್ಟಮೊದಲನೆಯದಾಗಿ ಅದರಲ್ಲಿ  ಪೂರ್ಣವಾಗಿ ಚಾರ್ಜಿರಬೇಕು. ಆದರೆ ಚಾರ್ಜು ಮಾತ್ರವಿದ್ದು ಅದರಲ್ಲಿ ಸಿಮ್ ಕಾರ್ಡ್ ಇಲ್ಲದಿದ್ದರೆ? ಸಿಮ್ ಕಾರ್ಡ್ ಬೇಕು ಮತ್ತು ಮೊಬೈಲ್ ಟವರ್‌ನ ಕ್ಷೇತ್ರದ ವ್ಯಾಪ್ತಿಯಲ್ಲಿರಬೇಕು. ಈ ಮೂರು ಇದ್ದಾಗ ಮಾತ್ರವೇ ಸೆಲ್ ಫೋನ್ ಸರಿಯಾಗಿ ಕೆಲಸ ಮಾಡುತ್ತದೆ.
ಅದೇ ರೀತಿಯಾಗಿ, ಜೀವನ ಯಶಸ್ವಿಯಾಗಲು ಮೂರು ವಿಷಯಗಳು ಬೇಕು;- ಸೇವ, ಸತ್ಸಂಗ ಮತ್ತು ಕೃಪೆ. ನಿಮ್ಮ ಬಳಿ  ಅಪಾರ ಕೃಪೆಯಿದೆಯೆಂದು ತಿಳಿದುಕೊಳ್ಳಿ ಮತ್ತು ಭಗವಂತ ನಿಮ್ಮವನೇ ಎಂಬುದನ್ನು ಅರ್ಥಮಾಡಿಕೊಳ್ಳಿ. ಸತ್ಸಂಗವೇ ಚಾರ್ಜು. ಸೇವೆಯೇ ಸಿಮ್‌ಕಾರ್ಡ್. ಸೇವೆಯಿಂದ ಏನಾಗುತ್ತದೆ? ಸೇವೆ ಮಾಡಿದಾಗ ಆಶೀರ್ವಾದಗಳು ಲಭ್ಯವಾಗುತ್ತದೆ. ಈ ಆಶೀರ್ವಾದದಿಂದ ಜೀವನದಲ್ಲಿ ಶಕ್ತಿ ಹೆಚ್ಚುತ್ತದೆ. ನಂತರ ಸಾಧನೆ, ಅಭ್ಯಾಸಗಳು. ಸಾಧನೆ ಎಂದರೇನು? ಯಾವುದು ನಿಮ್ಮ ಆತ್ಮದೊಡನೆ ಸಂಪರ್ಕ ಕಲ್ಪಿಸುತ್ತದೋ, ಭಗವಂತನೊಡನೆ, ಆ ಅನಂತ ಶಕ್ತಿಯೊಡನೆ ಸಂಪರ್ಕ ಕಲ್ಪಿಸುತ್ತದೋ, ಅದು. 

ಪ್ರಶ್ನೆ;- ಭಗವಂತನ ಬಗ್ಗೆ ಸ್ವಲ್ಪ ಮಾತನಾಡುತ್ತೀರೆ? ದಿವ್ಯತೆಯೊಡನೆ ನಾನು ಹೇಗೆ ಸಂಬಂಧ ಕಲ್ಪಿಸಿಕೊಳ್ಳುವುದು? 
ಶ್ರೀ ಶ್ರೀ ;- ಭಗವಂತ ಯಾರೇ ಆಗಿರಲಿ, ಭಗವಂತನಿಗೆ ನಾನು ಸೇರಿದ್ದೇನೆ ಎಂಬ ನಂಬಿಕೆ. ದಿವ್ಯತೆಯು ಎಲ್ಲೋ ಆಕಾಶದಲ್ಲಿಲ್ಲ. ದಿವ್ಯತೆಯು ನಿಮ್ಮೊಳಗೆಯೇ, ನಿಮ್ಮ ಚೈತನ್ಯ ರೂಪದಲ್ಲಿದೆ.

ಪ್ರಶ್ನೆ;- ಸಮಾಜವನ್ನು ಸುಭದ್ರವಾಗಿಸಲು ಯಾವ ಸ್ತಂಭಗಳು ಅವಶ್ಯಕ? 
ಶ್ರೀ ಶ್ರೀ;- ಸಮಾಜದ ನಾಲ್ಕು ಸ್ತಂಭಗಳು ಎಂದರೆ, ಮೊದಲನೆಯದಾಗಿ ಆರ್ಥಿಕ ವ್ಯವಸ್ಥೆ-ಕೈಗಾರಿಕೆ ಮತ್ತು ವ್ಯಪಾರ. ಎರಡನೆಯದಾಗಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ತಳಹದಿ ಮತ್ತು ಮೂರನೆಯದು ರಾಜಕೀಯ. ಇನ್ನೂ ಒಂದಿದೆ .. .. ಯಾವುದದು? ನೀವೆಲ್ಲಾ ಅದರ ಬಗ್ಗೆ ಯೋಚಿಸಲಿ ಎಂದು ನಿಮಗೆ ಬಿಟ್ಟಿದ್ದೇವೆ. 

ಪ್ರಶ್ನೆ;- ಈ ಜಗತ್ತಿನಲ್ಲಿ ಹೆಚ್ಚು ಹೆಚ್ಚಿನ ಜ್ಞಾನವನ್ನು ಹೇಗೆ ಪಡೆದುಕೊಳ್ಳುವುದು?
ಶ್ರೀ ಶ್ರೀ;- ಪ್ರತೀ ಕ್ಷಣವೂ ಈ ಜಗತ್ತಿನಿಂದ ಏನಾದರೊಂದನ್ನು ಪಡೆದುಕೊಳ್ಳುತ್ತಲೇ ಇರುತ್ತೇವೆ. ಅದಕ್ಕಾಗಿ ಬೇಕಾಗಿರುವುದೆಲ್ಲಾ ಕೇವಲ ಅರಿವು. ಪ್ರತಿಯೊಂದು ವ್ಯಕ್ತಿಯೂ ಸಹ ಭಗವಂತನಿಂದ ರಚಿಸಲಾದ ಒಂದು ಸುಂದರವಾದ ಗ್ರಂಥ.  ನಿಮ್ಮ ಮನಸ್ಸನ್ನೇ ತಿಳಿದುಕೊಳ್ಳಿ ಮತ್ತು ನಿಮ್ಮ ಸುತ್ತಲೂ ಇರುವ ಜನರ ಮನಸ್ಸನ್ನು ಗಮನಿಸಿ. ನಾವೇನು ಮಾಡುತ್ತೇವೆ? ನಮ್ಮ ಮನಸ್ಸನ್ನು ಗಮನಿಸದೆ ಇತರರ ಮನಸ್ಸಿನ ಬಗ್ಗೆ ತೀರ್ಪು ನೀಡುವುದರಲ್ಲೇ ಎಲ್ಲಾ ಸಮಯವನ್ನೂ ವ್ಯರ್ಥ ಮಾಡುತ್ತಿರುತ್ತೇವೆ.  ಮೊದಲು ನಿಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಿ. ಆಗ ದೊಡ್ಡ ಮನಸ್ಸಿನಲ್ಲಿ, ಎಲ್ಲರ ಮನಸ್ಸಿನಲ್ಲಿ ಏನು ನಡೆಯುತ್ತಿದೆಯೆಂದು ನೀವು ಅರ್ಥ ಮಾಡಿಕೊಳ್ಳಬಹುದು.
 ಈ ಜಗತ್ತಿನಲ್ಲಿ ಯಾರನ್ನೇ ಭೇಟಿ ಮಾಡಲಿ, ಎಲ್ಲರೊಡನೆಯೂ ಸ್ವಕೀಯ ಭಾವನೆಯನ್ನು ಅನುಭವಿಸುತ್ತೇವೆ. ಯಾರನ್ನು ಭೇಟಿ ಮಾಡಿದರೂ, ಅವರನ್ನು ಮೊದಲ ಸಲ ಭೇಟಿ ಮಾಡುತ್ತಿದ್ದೇವೆ ಎಂದು ನಮಗೆ ಅನಿಸುವುದೇ ಇಲ್ಲ. ಈ ಜಗತ್ತಿನಲ್ಲಿ ಬಹಳ ಸಲ ಬಂದಿದ್ದೇವೆ. ನಮಗೆ ಸ್ವಲ್ಪ ನೆನಪಿದೆ. ಆದರೆ ನೀವು ಮರೆತುಬಿಟ್ಟಿದ್ದೀರಿ. ಈ ಸಲ ನಗುತ್ತಲೇ ಇರಿ.  

ಪ್ರಶ್ನೆ;- ನಾನು ಸಾಮಾಜಿಕ ಪರಿವರ್ತನೆಯನ್ನು ತರಲು ಬಯಸುತ್ತೇನೆ. ಈ ಕೆಲಸವನ್ನು ಮಾಡಲು ವ್ಯಕ್ತಿಗಳ ಬೇರಿಗೇ ಹೊಕ್ಕಬೇಕು ಮತ್ತು ಇದು ಬದಲಿಸುತ್ತಲೇ ಇದೆಯೆಂದು ನನಗೆ ತಿಳಿದಿದೆ. ಆದರೆ ಇದನ್ನು ಹೇಗೆ ಮಾಡುವುದೆಂದು ನನಗೆ ತಿಳಿದಿಲ್ಲ. "ಆರ್ಟ್ ಆಫ್ ಲಿವಿಂಗ್" ಉಂಟು ಮಾಡುತ್ತಿರುವ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಜಾಗೃತಿಯನ್ನು ನಾನು ಮೆಚ್ಚುತ್ತೇನೆ. ಆದರೆ ನಾನು ಇದಕ್ಕೆ ಹೊಸಬನಾದ್ದರಿಂದ ಈ ದಿಶೆಯಲ್ಲಿ ಹೇಗೆ ಮುನ್ನಡೆಯುವುದೆಂದು ತಿಳಿಸುವಿರೆ?
ಶ್ರೀ ಶ್ರೀ ;- ಹೌದು, ನೀವು ಸಾಮಾಜಿಕ ಪರಿವರ್ತನೆಯನ್ನು ತರಬಹುದು. ಚೈತನ್ಯವನ್ನು ಬಲಿಷ್ಠವಾಗಿಸಿಕೊಳ್ಳಬೇಕು.  ನಿಮ್ಮ ಚೈತನ್ಯ ಪ್ರಾಚೀನವಾದದ್ದು ಮತ್ತು ಅದರ ಬಗ್ಗೆಯೂ ನಿಮ್ಮ ಗಮನವನ್ನು ಸ್ವಲ್ಪ ಹರಿಸಿ. ಆಧ್ಯಾತ್ಮಿಕ ಜ್ಞಾನವಿಹೀನರಾದವರು ಅಪೌಷ್ಠಿಕವಾಗಿರುವ ವ್ಯಕ್ತಿಗಳಂತೆ. ನಿಮ್ಮ ಆದ್ಯತೆಗಳ ಪಟ್ಟಿಯಲ್ಲಿ ನಿಮ್ಮ ಬೇರುಗಳನ್ನು ಆಳವಾಗಿಸಿಕೊಳ್ಳುವುದು ಮೊದಲಾಗೀರಬೇಕು ಮತ್ತು ನಮ್ಮ ಮೂಲದ ಬಗ್ಗೆ ಹೆಮ್ಮೆಯನ್ನು ಹೊಂದಿರಬೇಕು. 

ಪ್ರಶ್ನೆ;- ಕೆಲವು ಮಕ್ಕಳ ಮನಸ್ಸಿನಲ್ಲಿ ಅನೇಕ ಧೋರಣೆಗಳಿವೆ. ಇದು ಬಹುಶಃ ಕೆಲವು ಐತಿಹಾಸಿಕ ಘಟನೆಗಳಿಂದೆಲೋ ಅಥವಾ ಪೂರ್ವ ಜನ್ಮಗಳಿಂದಾಗಿಯೋ ಇರಬಹುದು. ಇದರ ಬಗ್ಗೆ ಮಾತನಾಡುತ್ತೀರೆ?
ಶ್ರೀ ಶ್ರೀ;- ನಿಮ್ಮ ಬಗ್ಗೆ ನೀವು ಒಳ್ಳೆಯದಾಗಿ ಅಂದುಕೊಂಡಾಗ, ಇತರರು ಸರಿಯಿಲ್ಲ ಎಂದುಕೊಳ್ಳುತ್ತೀರಿ. ಇತರರು ಒಳ್ಳೆಯವರಲ್ಲ  ಎಂದು ನೀವಂದುಕೊಂಡಾಗ, ನೀವು ಸರಿಯಿಲ್ಲ ಎಂದುಕೊಳ್ಳುತ್ತೀರಿ. ಇಂತಹ ಧೋರಣೆಗಳು ಇಂದು ಅನೇಕ ಮಕ್ಕಳಲ್ಲಿವೆ. ನಾನೂ ಕೆಟ್ಟ ವ್ಯಕ್ತಿಯಲ್ಲ, ಇತರರೂ ಕೆಟ್ಟವರಲ್ಲ ಎಂಬ ಧೋರಣೆಯನ್ನು ಹೊಂದಿದಾಗ ಎಲ್ಲರನ್ನೂ ಸ್ವೀಕರಿಸುವ ಮನೋಭಾವವುಂಟಾಗುತ್ತದೆ ಮತ್ತು ತಮ್ಮನ್ನೂ ಸ್ವೀಕರಿಸುತ್ತಾರೆ. ಸಾಧನೆ ಮಾಡುವುದರಿಂದ ಗತದ ಎಲ್ಲಾ ಸಂಸ್ಕಾರಗಳನ್ನೂ ಅಳಿಸಿಬಿಡಬಹುದು.

ಗುರುವಾರ, ಜನವರಿ 13, 2011

ಪರಮ ಪೂಜ್ಯ ಶ್ರೀ ಶ್ರೀ ರವಿಶಂಕರರ ಸಂದೇಶ

ಜನವರಿ ೧೩, ೨೦೧೧
"ಮಕರ ಸಂಕ್ರಾಂತಿಯು ನಿಮ್ಮ ಸುತ್ತಲೂ ಸಿಹಿಯನ್ನು ಹಂಚುವ ಒಂದು ಸಮಂದರ್ಭ. ನಿಮ್ಮ ಅಭಿವ್ಯಕ್ತಿಯಿಂದ ಮತ್ತು ಆಲೋಚನೆಯಿಂದ ಸಿಹಿಯನ್ನು ಹರಡುವ ಒಂದು ಸಂದರ್ಭ ಇದು.
ಪಾರಂಪರಿಕವಾಗಿ ಪರಸ್ಪರ ಎಳ್ಳು ಮತ್ತು ಬೇವಿನ ವಿನಿಮಯ ಮಾಡಿಕೊಳ್ಳುವುದು ಇದನ್ನು ಸೂಚಿಸುವುದಕ್ಕಾಗಿ. ಸಿಹಿಯ ಈ ಭಾವನೆಯನ್ನು ಎಲ್ಲರೂ ವರ್ಷವಿಡೀ ಹಾಗೆಯೇ ಹೊಂದಿರಲಿ ಎಂದು ನಾವು ಹಾರಿಸುತ್ತೇವೆ."
ಶುಭ ಮಕರ ಸಂಕ್ರಾಂತಿ ಮತ್ತು ಪೊಂಗಲ್


ಈ ಜಗತ್ತು ಪ್ರಾಣಶಕ್ತಿಯ ಲೀಲೆ ಮತ್ತು ಪ್ರದರ್ಶನ

ಜನವರಿ ೧೩, ೨೦೧೧, ಮುಂಬಯಿ

ಇಂದಿನ ದಿನ ನಾವು ಒತ್ತಡದ ಬಗ್ಗೆ ಮತ್ತು ಒತ್ತಡ ನಿವಾರಣೆಯ ಬಗ್ಗೆ ಮಾತನಾಡುವುದಿಲ್ಲ. ಸಂಬಂಧಗಳ ಬಗ್ಗೆಯೂ ಬೇಡ. ಅದಕ್ಕಿಂತಲೂ ಹೆಚ್ಚು ಆಳವಾಗಿರುವುದರ ಬಗ್ಗೆ ಮಾತನಾಡೋಣ.
ನಿಮ್ಮ ವಯಸ್ಸು ನೆನಪಿದೆಯೇ? ೨೫ ಅಥವಾ ೩೦ ವರ್ಷಗಳಿರಬಹುದು, ಅಲ್ಲವೇ? ೨೫-೩೦ ವರ್ಷಗಳಿಗಿಂತಲೂ ಹಿಂದೆ ನೀವೆಲ್ಲಾ ಎಲ್ಲಿದ್ದಿರಿ? ೫೦-೬೦ ವರ್ಷಗಳ ನಂತರ ಅಥವಾ ೧೦೦ ವರ್ಷಗಳ ನಂತರ ಎಲ್ಲಿರುತ್ತೀರಿ? ನೀವು ಜನಿಸುವ ಮೊದಲೂ ಮುಂಬಯಿ ಇತ್ತು. ಈ ಸಮುದ್ರ ಆಗಲೂ ಇತ್ತು.
ನಿಮ್ಮ ತಾಯಿಯ ಗರ್ಭವನ್ನು ಹೇಗೆ ಪ್ರವೇಶಿಸಿದಿರಿ ಎಂಬ ನೆನಪಿದೆಯೆ ನಿಮಗೆ? ಈ ಜಗತ್ತಿನೊಳಗೆ ಹೇಗೆ ಬಂದಿರಿ ಎಂಬ ನೆನಪಿದೆಯೆ ನಿಮಗೆ?
೫ ವರ್ಷಗಳವರೆಗೆ ಮಗುವು ತನ್ನ ಪೂರ್ವ ಜನ್ಮವನ್ನು ನೆನಪಿನಲ್ಲಿಟ್ಟುಕೊಂಡಿರುತ್ತದೆ. ಮಗುವು ಬಣ್ಣಗಳನ್ನು ಗುರುತಿಸುತ್ತದೆ ಅಥವಾ ಕೆಲವು ವಿಷಯಗಳನ್ನು ಹೇಳುತ್ತದೆ. ಆದರೆ ಹಿರಿಯರು ಅದರ ಬಗ್ಗೆ ಹೆಚ್ಚು ಗಮನವನ್ನು ಕೊಡುವುದಿಲ್ಲ.
ಇಡೀ ವಿಶ್ವವು ಪ್ರಾಣಶಕ್ತಿಯ ಒಂದು ಲೀಲೆ. ಇಲ್ಲಿರುವ ಪ್ರತಿಯೊಂದರಲ್ಲೂ ಪ್ರಾಣಶಕ್ತಿಯಿದೆ. ಆದರೆ ಪ್ರಾಣದ ಪ್ರಮಾಣವು ಮಾತ್ರ ಬೇರೆಯಾಗಿರುತ್ತದೆ.
ಕಲ್ಲಿಗೆ ೧ ಮಾತ್ರದ ಪ್ರಾಣವಿದೆ
ನೀರಿಗೆ ೨ ಮಾತ್ರದ ಪ್ರಾಣವಿದೆ
ಬೆಂಕಿಗೆ ೩ ಮಾತ್ರದ ಪ್ರಾಣವಿದೆ
ಗಾಳಿಗೆ ೪ ಮಾತ್ರದ ಪ್ರಾಣವಿದೆ
ಆಕಾಶಕ್ಕೆ ೫ ಮಾತ್ರದ ಪ್ರಾಣವಿದೆ
ಪ್ರಾಣಿಗಳಿಗೆ ಮತ್ತು ಮರಗಳಿಗೆ ೬ ರಿಂದ ೭ ಮಾತ್ರದಷ್ಟು ಪ್ರಾಣವಿದೆ
ಮನುಷ್ಯರಿಗೆ ೮ ಮಾತ್ರದಷ್ಟು ಪ್ರಾಣವಿದೆ
ಆದ್ದರಿಂದ ಮನುಷ್ಯನನ್ನು "ಅಷ್ಟ ವಸು" ಎಂದು ಕರೆಯುತ್ತಾರೆ. ಆದರೆ ಮಾನವರು ಪೂರ್ಣವಾಗಿ ಅರಳುವ ಸ್ಥಿತಿಯನ್ನು ಹೊಂದುವ ಸಾಧ್ಯತೆಯೊಡನೆ ಜನಿಸುತ್ತಾರೆ. ಭಗವಾನ್ ಕೃಷ್ಣನಿಗೆ ಅತೀ ಗರಿಷ್ಠ ಮಟ್ಟದ ಪ್ರಾಣ -೧೬ ಮಾತ್ರಗಳು. ಆದ್ದರಿಂದಲೇ ಅವನನ್ನು "ಪೂರ್ಣಾವತಾರಿ" ಎಂದು ಕರೆಯುತ್ತಾರೆ.
ಪ್ರತಿಯೊಂದು ದೇವ/ದೇವತೆಯು ಒಂದೊಂದು ಪ್ರಾಣಿಯ ಮೇಲೆ ಪಯಣಿಸುವುದನ್ನು ಚಿತ್ರದಲ್ಲಿ ನೋಡಿರುತ್ತೀರಿ. ದುರ್ಗಾ ಮಾತೆಯು ಹುಲಿಯ ಮೇಲೆ ಪಯಣಿಸುತ್ತಾಳೆ. ಇದು ಒಂದು ಕಲ್ಪನೆಯಂತೆಯೇ ತೋರುತ್ತದೆ. ಬುದ್ಧಿಗೆ ಇದು ಹೊಳೆಯುವುದಿಲ್ಲ, ಆದರೆ ಇದು ಅತೀ ವೈಜ್ಞಾನಿಕ್. ಪ್ರತಿಯೊಂದು ಪ್ರಾಣಿಯೂ ಸಹ ಈ ಭೂಮಿಯ ಮೇಲೆ ದಿವ್ಯ ತರಂಗಗಳನ್ನು ತರುತ್ತದೆ. ಉದಾಹರಣೆಗೆ ನವಿಲು ಸರಸ್ವತಿ ಮಾತೆಯ, ಜ್ಞಾನದ ದೇವಿಯ ತರಂಗಗಳನ್ನು ಭೂಮಿಗೆ ತರುತ್ತದೆ. ಎತ್ತಿನ ದೇಹವು ಶಿವ ಚೈತನ್ಯವನ್ನು ಹೊರ ಸೂಸುತ್ತದೆ. ಶಿವ ಎಂದರೆ ಪ್ರಕೃತಿಯ ಪರಿವರ್ತಕ ಹಾಗೂ ಧ್ಯಾನಸ್ಥವಾದ ಅಂಶ. ಈಗ ಎಲ್ಲಾ ದೇವತೆಗಳು ಈ ಚೈತನ್ಯದಲ್ಲಿದ್ದಾರೆ. ಎಲ್ಲಾ ವಿಧಧ ಶಕ್ತಿಗಳೂ ಈ ಚೈತನ್ಯದಲ್ಲಿವೆ. ಎಲ್ಲಾ ಮಂತ್ರಗಳೂ ಈ ಮಂಗಳ ಮಯವಾದ ತರಂಗಗಳನ್ನು ಆಹ್ವಾನಿಸುತ್ತವೆ.
ತಿಂಗಳುಗಳ ಹೆಸರಿನ ಅರ್ಥ ನಿಮಗೆಲ್ಲಾ ತಿಳಿದಿದೆಯೇ?
ಜನವರಿ, ಫೆಬ್ರವರಿ......ನವೆಂಬರ್, ಡಿಸೆಂಬರ್
ತಿಂಗಳುಗಳ ಹೆಸರು ಹೇಳುತ್ತಲೇ ಇರುತ್ತೀರಿ, ಆದರೆ ಅದರ ಅರ್ಥವನ್ನು ಮಾತ್ರ ತಿಳಿದುಕೊಂಡಿಲ್ಲ ನೀವು.
ಸೆಪ್ಟೆಂಬರ್ ಎಂದರೆ ಸಪ್ತ+ಅಂಬರ, ಎಂದರೆ ಏಳನೆಯ ಆಕಾಶ.
ನವೆಂಬರ್ ಎಂದರೆ ನವ+ಅಂಬರ, ಎಂದರೆ ಒಂಭತ್ತನೆಯ ಆಕಾಶ.   
ಈ ತಿಂಗಳುಗಳ ಹೆಸರು ಯಾವ ಭಾಷೆಗೆ ಸೇರಿದ್ದೆಂದು ನಿಮಗೆ ಗೊತ್ತೇ?
ಸಭಿಕರು : ಆಂಗ್ಲ ಭಾಷೆ.
ಶ್ರೀ ಶ್ರೀ : ಇಲ್ಲ, ಎಲ್ಲವೂ ಸಂಸ್ಕೃತ ಭಾಷೆಯಿಂದ ಉದ್ಭವಿಸಿವೆ. ಈ ಪ್ರಪಂಚದ ಪ್ರಾರಂಭದಲ್ಲಿದ್ದ ಒಂದೇ ಮೂಲಭೂತ ಭಾಷೆಯೆಂದರೆ ಸಂಸ್ಕೃತ.
ಫ಼ೆಬ್ರವರಿ ಎಂದರೆ "ಫ಼ಾಗ್ ಎಂಡ್", ಎಂದರೆ "ಕೊನೆಯ" ಎಂದರ್ಥ
ಮಾರ್ಚ್ ಎಂದರೆ "ಮುನ್ನಡೆಯಿರಿ".
ಇರಾಕ್, ಇರಾನ್ , ಕುರ್ಡಿಸ್ತಾನದಲ್ಲೆಲ್ಲಾ ಹೊಸವರ್ಷವನ್ನು ಮಾರ್ಚ್ ತಿಂಗಳಲ್ಲಿ ಆಚ್ರಿಸುತ್ತಾರೆ.
ಭಾರತದ ಕೆಲವು ಭಾಗಗಳಲ್ಲೂ ಇದು ನಡೆಯುತ್ತದೆ.
ಡಿಸೆಂಬರ್ ಎಂದರೆ ದಶ+ಅಂಬರ, ಎಂದರೆ ಹತ್ತನೆಯ ಆಕಾಶ.
ತಿಂಗಳುಗಳ ಹೆಸರುಗಳಿಗಿಂತಲೂ ನೀವು ಪ್ರಾಚೀನರು. ಆಳವಾದ ಧ್ಯಾನದೊಳಗೆ ಹೊಕ್ಕು ಇದನ್ನೆಲ್ಲಾ ಅನುಭವಿಸಿರಿ. ನನ್ನ ವಯಸ್ಸಿಗಿಂತಲೂ ನಾನು ದೊಡ್ಡವನು / ದೊಡ್ಡವಳು ಎಂಬ ವಿಷಯವನ್ನು ಮನಸ್ಸಿನಲ್ಲಿ ಒಂದು ಕಡೆ ಇಟ್ಟುಕೊಳ್ಳಿ.
ಈ ವಿಷಯದ ಅನುಭವ ಜೀವನದಲ್ಲಿ ಎಂದೋ ಒಮ್ಮೆ ಆಗುತ್ತದೆ.
ನಾವು ಈಗಲಾದರೂ ನಮ್ಮ ಟೋಪಿಯನ್ನು ತೆಗೆಯಬಹುದೇ? ( ಪ್ರವಚನದ ಆರಂಭದಲ್ಲಿ ಗುರೂಜಿಯವರು ಒಂದು ಸುಂದರವಾದ ಟೋಪಿಯನ್ನು ಧರಿಸಿದ್ದರು ಮತ್ತು ಅದನ್ನು ತೆಗೆಯ ಬಾರದೆಂದು ಸಭಿಕರೆಲ್ಲಾ ವಿನಂತಿಸಿದ್ದರಿಂದ ಗುರೂಜಿಯವರು ಆ ಟೋಪಿಯನ್ನು ಧರಿಸಿಕೊಂಡೇ ಪ್ರವಚನವನ್ನು ನೀಡಿದರು.)
(೧೦-೧೫ ನಿಮಿಷಗಳ ಧ್ಯಾನವು ಕೆಲವೇ ಕ್ಷಣಗಳಂತೆ ಹಾರಿ ಹೋಗಿ, ಮನಮಿಡಿಯುವ ಭಜನೆಗಳೊಂದಿಗೆ ಅಂದಿನ ಸತ್ಸಂಗ ಮುಗಿಯಿತು.)

ಬುಧವಾರ, ಜನವರಿ 5, 2011

ಧ್ಯಾನದ ಒಳಗುಟ್ಟು

ಜನವರಿ ೫, ೨೦೧೧, ಬೆಂಗಳೂರು

ಪ್ರಶ್ನೆ : ನಮ್ಮ ಆಧುನಿಕ ಸಮಾಜದಲ್ಲಿ ಜನರೇಕೆ ಧ್ಯಾನ ಮಾಡಬೇಕು?
ಶ್ರೀ ಶ್ರೀ : ಧ್ಯಾನದಿಂದ ನಮ್ಮ ಜೀವನದಲ್ಲುಂಟಾಗುವ ಲಾಭಗಳನ್ನು ನೋಡಿದರೆ, ಧ್ಯಾನ ನಮಗೆ ಇನ್ನೂ ಹೆಚ್ಚು ಪ್ರಸಕ್ತ ಎನಿಸುತ್ತದೆ. ಪ್ರಾಚೀನ ಕಾಲಗಳಲ್ಲಿ ಧ್ಯಾನವನ್ನು ಆತ್ಮಸಾಕ್ಷಾತ್ಕಾರಕ್ಕಾಗಿ ಬಳಸುತ್ತಿದ್ದರು, ಜ್ಞಾನೋದಯಕ್ಕಾಗಿ ಧ್ಯಾನ ಮಾಡುತ್ತಿದ್ದರು. ದುಃಖಗಳಿಂದ ಮತ್ತು ಬವಣೆಗಳಿಂದ ಹೊರಬರಲು ಧ್ಯಾನ ಒಂದು ಮಾರ್ಗವಾಗಿತ್ತು. ಧ್ಯಾನದಿಂದ ನಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಬಹುದು.
ಬೇಕಿದ್ದರೆ ಮೋಕ್ಷ ಪಡೆಯುವುದನ್ನು ಪಕ್ಕಕ್ಕಿಟ್ಟುಬಿಡಿ. ಇಂದಿನ ದಿನದ ಒತ್ತಡದ ಮತ್ತು  ಉದ್ವೇಗದ ನಿವಾರಣೆಗಾಗಿ ಧ್ಯಾನ ಬೇಕು. ನೀವು ಹೆಚ್ಚು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರೆ, ಹೆಚ್ಚಿನ ಧ್ಯಾನ ಅವಶ್ಯಕ. ನಿಮ್ಮಲ್ಲಿ ಜವಾಬ್ದಾರಿಗಳು ಮತ್ತು ಹೆಬ್ಬಯಕೆಗಳು ಹೆಚ್ಚಾಗಿದ್ದಷ್ಟೂ ನೀವು ಹೆಚ್ಚಿನ ಧ್ಯಾನ ಮಾಡುವ ಅವಷ್ಯಕತೆಯಿದೆ. ಇದೇಕೆಂದರೆ, ಧ್ಯಾನದಿಂದ ನಿಮ್ಮ ಒತ್ತಡದ ಮತ್ತು ಉದ್ವೇಗದ ನಿವಾರಣೆಯಾಗುವುದಲ್ಲದೆ, ಧ್ಯಾನದಿಂದ ನಿಮ್ಮ ಸಾಮರ್ಥ್ಯಗಳು ಹೆಚ್ಚುತ್ತವೆ, ನಿಮ್ಮ ನರವ್ಯವಸ್ತೆ ಮತ್ತು ನಿಮ್ಮ ಮನಸ್ಸು ಬಲಿಷ್ಠವಾಗುತ್ತದೆ. ಒತ್ತಡದ ನಿವಾರಣೆ ಮಾತ್ರವಲ್ಲದೆ ನಿಮ್ಮ ದೇಹದಿಂದ ವಿಷಕಾರಿ ಪದಾರ್ಥಗಳನ್ನೆಲ್ಲಾ ತೆಗೆದುಹಾಕಿ ಮನಸ್ಸಿಗೆ ಆರಾಮವನ್ನು ಕೊಡುತ್ತದೆ. ಎಲ್ಲಾ ವಿಧದಲ್ಲೂ ನಿಮ್ಮನ್ನು ಹೆಚ್ಚು ಯೋಗ್ಯರನ್ನಾಗಿ ಮಾಡುತ್ತದೆ, ನಿಮ್ಮ ಸರ್ವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇನ್ನೇನು ಬೇಕು ನಿಮಗೆ? ನೀವು ಸಂತೊಷದಿಂದ ಮತ್ತು ಆರೋಗ್ಯವಂತರಾಗಿರಬೇಕೆಂದರೆ ನೀವು ಧ್ಯಾನ ಮಾಡಲೇಬೇಕು.
ಪ್ರಶ್ನೆ : ಧ್ಯಾನದ ಕಲೆಯು ಮನಸ್ಸಿಗೆ, ದೇಹಕ್ಕೆ, ಆಧ್ಯಾತ್ಮಿಕ ಆಕಾಂಕ್ಷೆಗಳಿಗೆ, ಸಂಬಂಧಗಳಿಗೆ ಮತ್ತು ಇಡೀ ಸಮಾಜಕ್ಕೆ ಯಾವ ರೀತಿಯಾಗಿ ಸಹಾಯಕವಾಗಿರುತ್ತದೆ?
ಶ್ರೀ ಶ್ರೀ : ಧ್ಯಾನದಿಂದ ನಿಮ್ಮ ದೃಷ್ಟಿಕೋನ ಬದಲಾಗುತ್ತದೆ.  ವಿಷಯಗಳನ್ನು ನೀವು ಗ್ರಹಿಸುವ ರೀತಿಯನ್ನು ಬದಲಾಯಿಸುತ್ತದೆ. ಮನಸ್ಸಿನಲ್ಲಿ ಸ್ಪಷ್ಟತೆಯನ್ನು ತರುತ್ತದೆ. ನಿಮ್ಮ ಸುತ್ತಲೂ ಇರುವ ಜನರೊಡನೆ ನಿಮ್ಮ ವ್ಯವಹಾರ ಸುಧಾರಿಸುತ್ತದೆ - ನೀವೇನು ಹೇಳುತ್ತೀರಿ, ಪ್ರತಿಕ್ರಿಯಿಸುತ್ತೀರಿ  ಮತು ಬೇರೆ ಬೇರೆ ಪರಿಸ್ಥಿತಿಗಳಲ್ಲಿ ಹೇಗೆ ಕ್ರಿಯಾತ್ಮಕವಾಗುತ್ತೀರಿ. ಅರಿವು ಹೆಚ್ಚಾಗುತ್ತದೆ. ಒತ್ತಡ-ರಹಿತ ಸಮಾಜ, ವ್ಯಕ್ತಿಗಳಲ್ಲಿ ಶಾಂತಿ ಮತ್ತು ಆರೋಗ್ಯ, ಹಿಂಸಾ-ರಹಿತ ಸಮಾಜ ಮತ್ತು ದುಃಖ ರಹಿತವಾದ ಆತ್ಮ ಇವೆಲ್ಲವೂ ಧ್ಯಾನದಿಂದ ಉಂತಾಗುವ ಲಾಭಗಳು. 
ಪ್ರಶ್ನೆ : ಸಹಜ ಸಮಾಧಿ ಧ್ಯಾನವು ಅಷ್ಟೊಂದು ಅನುಪಮವಾದ ಧ್ಯಾನವೇಕಾಗಿದೆ.
ಶ್ರೀ ಶ್ರೀ : ಅದು ಅತೀ ಸರಳವಾದದ್ದು ಮತ್ತು ಗಹನವಾದದ್ದು. ಸಾಮಾನ್ಯವಾಗಿರುವ ಧಾರಣೆಯೆಂದರೆ, ಗಹನವಾಗಿರುವಂತದ್ದು ಕ್ಲಿಷ್ಟಕರವಾಗಿರಬೇಕು ಮತ್ತು ಸರಳವಾಗಿರುವಂತದ್ದು ಪರಿಣಾಮಕಾರಿಯಾಗಿರುವುದಿಲ್ಲ. ಆದರೆ ಸಹಜ ಸಮಾಧಿಯು ಸರಳತೆಯ, ಗಹನತೆಯ ಮತ್ತು ಆಳದ ಒಂದು ಸಮ್ಮಿಳಣ.
ಪ್ರಶ್ನೆ : ಈ ಜ್ಞಾನವನ್ನು ಸಾವಿರಾರು ವರ್ಷಗಳಿಂದ ಜನರು ಈ ಜ್ಞಾನದ ತಂತ್ರವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಬಹಳಷ್ಟು ಗುರುಗಳು ಧ್ಯಾನವನ್ನು ಹೇಳಿಕೊಡುವ ಮೊದಲು ಓರ್ವ ವಿದ್ಯಾರ್ಥಿಯನ್ನು ಪರೀಕ್ಷಿಸುತ್ತಾರೆ. ಯಾರು ಅರ್ಹರೋ ಅವರಿಗೆ ಮಾತ್ರ ಈ ಜ್ಞಾನವನ್ನು ಕೊಡುತ್ತಿದ್ದರು. ಈ ಜ್ಞಾನವನ್ನು ಕೊಡಲು ಸರಿಯಾದ ವಿದ್ಯಾರ್ಥಿಯು ಬರಲಿ ಎಂದು ಕಾಯುತ್ತಿದ್ದರು. ಪ್ರಾಚೀನ ಕಾಲದಲ್ಲಿ ಬಹಳ ಕಷ್ಟ. ಗುರುಗಳಿಂದ ಏನಾದರು ಪಡೆಯುವ ಮೊದಲು ಗುರುಗಳನ್ನು ಮೆಚ್ಚಿಸಬೇಕಾಗುತ್ತಿತ್ತು. ಈಗ ವಿಷಯಗಳು ಬದಲಾಗಿವೆ. ಗುರುಗಳೇ ಎಲ್ಲರನ್ನೂ ಮೆಚ್ಚಿಸಬೇಕಾದ ಪರಿಸ್ಥಿತಿ..
ನಾವು ಬೇರೆಯ ನಿಲುವನ್ನೇ ತಾಳಿದೆವು. ಎಲ್ಲಾ ಕದಗಳನ್ನು ತೆರೆದು, ಎಲ್ಲರಿಗೂ ಕೊಟ್ಟುಬಿಟ್ಟಿದ್ದೇವೆ, ಎಲ್ಲರೂ ಅವರವರ ಸಾಮರ್ಥ್ಯಕ್ಕೆ ತಕ್ಕ ಹಾಗೆ ಮತ್ತು ಪ್ರಾಮಾಣಿಕತೆಗೆ ತಕ್ಕಂತೆ ಅಭಿವೃದ್ಧಿ ಹೊಂದಲಿ ಎಂದು.

ಮಂಗಳವಾರ, ಜನವರಿ 4, 2011

ಯಾವುದೇ ತಪ್ಪನ್ನು ಕೋಪದಿಂದ ಸರಿ ಮಾಡಲು ಸಾಧ್ಯವಿಲ್ಲ. ಕೇವಲ ಅರಿವಿನಿಂದ ಮಾತ್ರ ಯಾವದನ್ನೇ ಆಗಲಿ, ಸರಿಪಡಿಸಲು ಸಾಧ್ಯ.

ಜನವರಿ ೪, ೨೦೧೧, ಬೆಂಗಳೂರು ಆಶ್ರಮ
ಪ್ರಶ್ನೆ;-ನಾವು ಸೇವೆ ಮಾಡುತ್ತಿರುವಾಗ, ಅದರಲ್ಲೂ ಯುವಕರು ಸೇವೆ ಮಾಡುತ್ತಿರುವಾಗ ಸೇವೆಯನ್ನು, ಓದನ್ನು ಮತ್ತು ಸಂಸಾರವನ್ನು ಹೇಗೆ ಸರಿದೂಗಿಸುವುದು?.
ಶ್ರೀ ಶ್ರೀ;- ಒಂದು ಬೈಸೈಕಲನ್ನು ಹೇಗೆ ನಡೆಸುತ್ತೀರಿ? ಒಂದು ಕಡೆಗೇ ಬಿದ್ದು ಹೋಗುತ್ತೀರೆ?  ಒಂದು ಕಡೆಗೆ ಹೆಚ್ಚಾಗಿ ವಾಲುತ್ತಿದ್ದಂತೆಯೇ ಸಮತೋಲನವನ್ನು ತಂದುಕೊಳ್ಳುತ್ತೀರಿ.  ಆದರೆ ಒಂದು ಧೃಡ ನಂಬಿಕೆಯಿರಲೇ ಬೇಕು- "ನಾನು ಸೇವೆ ಮಾಡುತ್ತೇನೆ, ಓದುತ್ತೇನೆ, ನನ್ನ ಸಂಸಾರವನ್ನೂ ನೋಡಿಕೊಳ್ಳುತ್ತೇನೆ ಮತ್ತು ಹಿರಿಯರನ್ನು ಗೌರವಿಸುತ್ತೇನೆ". ಇವೆಲ್ಲವೂ ಒಂದಕ್ಕೊಂದು ವಿರೋಧವಾಗಿಲ್ಲ, ಬದಲಾಗಿ ಒಂದಕ್ಕೊಂದು ಪೂರಕವಾಗಿವೆ.
ನೀವು ಸೇವೆ ಮಾಡಿದಾಗ ನಿಮಗೆ ಶಕ್ತಿ ಬರುತ್ತದೆ ಮತ್ತು ಪುಣ್ಯವನ್ನು ಸಂಪಾದಿಸುತ್ತೀರಿ ಮತ್ತು ಇದರಿಂದ ನಿಮಗೆ ಸೌಭಾಗ್ಯವುಂಟಾಗುತ್ತದೆ.  ಆದ್ದರಿಂದ, ಆಧ್ಯಾತ್ಮಿಕತೆಯು ನಿಮ್ಮಲ್ಲಿ ಶಕ್ತಿ ತರುತ್ತದೆ. ಧ್ಯಾನದಿಂದ ನೀವು ಈ ಜಗತ್ತಿನಲ್ಲಿ ಪ್ರಗತಿಯನ್ನು ಹೊಂದುತ್ತೀರಿ.  " ನಾನು ಎಲ್ಲವನ್ನೂ ಮಾಡುತ್ತೇನೆ" ಎಂಬ ದೃಢ ನಂಬಿಕೆಯಿಂದಾಗಿ ಅನೇಕ ಪವಾಡಗಳು ನಡೆಯುತ್ತವೆ. 
ನಿಮ್ಮಲ್ಲಿ ಏನಾದರೂ ಸಂಶಯವಿದ್ದರೆ ಅದ್ದು ತತ್ಕಾಲಿಕವಾದದ್ದು ಎಂದು ತಿಳಿದುಕೊಳ್ಳಿ.  ಮುಖ್ಯವಾದ ವಿಷಯವೆಂದರೆ ಬಲಿಷ್ಠವಾದ ವ್ಯಕ್ತಿತ್ತವನ್ನು ಬೆಳೆಸಿಕೊಳ್ಳುವುದು.  ಸುಮ್ಮನೆ ಕಾಲೇಜಿಗೆ ಹೋಗುವುದು, ತಲೆಯತುಂಬಾ ಮಾಹಿತಿಯನ್ನು ತುಂಬಿಕೊಳ್ಳುವುದು ಮತ್ತು ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು, ಇಷ್ಟೇ ಜೀವನವೆ? ಇಲ್ಲ. ಎಷ್ಟು ಶಕ್ತಿಯನ್ನು ಮತ್ತು ವಿನಮ್ರತೆಯನ್ನು ನೀವು ಪಡೆದುಕೊಂಡಿದ್ದೀರಿ? ಪೂರ್ಣ ವ್ಯಕ್ತಿಯಾಗಿ ಅರಳುತ್ತಿದ್ದೀರೆ? ಇದನ್ನು ನೋಡಿಕೊಳ್ಳುವುದು ಬಲು ಮುಖ್ಯ.  ಉತ್ಸಾಹದೊಡನೆ ಅರಿವು. ಎಲ್ಲಾ ರೀತಿಯ ಜನರೊಡನೆಯೂ ಹೇಗೆ ವ್ಯವಹರಿಸುವುದೆಂಬ ಕುಶಲತೆಯು ನಿಮಗೆ ಸೇವೆಯಿಂದ ಬರುತ್ತದೆ.  ಮೃದುತನ ಮತ್ತು ಆಳವು ನಿಮ್ಮಲ್ಲುಂಟಾಗುತ್ತದೆ.  ಉತ್ಸಾಹದೊಡನೆ ಅರಿವೂ ಸಹ ಇರುತ್ತದೆ.  ಎಲ್ಲವನ್ನೂ ಒಂದೇ ದಾರದಲ್ಲಿ ಹಾಕಿ ಪೋಣಿಸಬಹುದು.


ಪ್ರಶ್ನೆ;-ಭಗವಂತ ಮುಗ್ಧರನ್ನು ಪ್ರೀತಿಸುತ್ತಾನ್ನೆನುತ್ತಾರೆ ಮತ್ತು ಅದೃಷ್ಟವು ಮುಗ್ಧರ ಪರ ವಹಿಸುತ್ತದೆನ್ನುತ್ತಾರೆ.  ನಾನು ಮುಗ್ಧವಾಗಲು ಏನು ಮಾಡಬೇಕು?
ಶ್ರೀ ಶ್ರೀ;-ಮುಗ್ಧವಾಗಿರಲು ಕುಟಿಲತೆಯನ್ನು ಬಿಡಬೇಕು.  ಮುಗ್ಧತೆಯು ಎಲ್ಲರಲ್ಲೂ ಸಹಜವಾಗೇ ಇದೆ.  ಅದನ್ನು ಅರಳಲು ನೀವು ಬಿಡಬೇಕಷ್ಟೆ.  ಅದನ್ನು ಹೇಗೆ ಮಾಡುವುದು? ಸುಮ್ಮನೆ ಧ್ಯಾನದಲ್ಲಿರಿ   "ನಾನು ಏನೂ ಅಲ ಅಕಿಂಚ, ನನಗೇನೂ ಬೇಡ ಮತ್ತು ಎಲ್ಲರೂ ನನಗೇ ಸೇರಿದವರು". ಎಲ್ಲರೂ ನಿಮ್ಮನ್ನು ಸ್ವೀಕರಿಸುತ್ತಾರೆ ಎಂದು ನೀವು ತಿಳಿದುಕೊಂಡಾಗ, ಸಹಜತೆಯಿಂದ ಮುನ್ನಡೆಯುತ್ತೀರಿ. ನೀವು ಹೇಗಿದ್ದೀರೋ ಆ ರೀತಿಯಲ್ಲಿ ಜನರು ನಿಮ್ಮನ್ನು ಸ್ವೀಕರಿಸುತ್ತಿಲ್ಲ ಎಂದು ನೀವಂದುಕೊಂಡಾಗ, ಆಗ ಸ್ವೀಕೃತಿ ಪಡೆಯಲು ಏನು ಮಾಡಬೇಕೆಂದು ನೀವು ಯೋಚಿಸತೊಡಗುತ್ತೀರಿ ಮತ್ತು ಅಸಹಜವಾಗತೊಡಗುತ್ತೀರಿ.

ಪ್ರಶ್ನೆ;- ನಾನು ಸದಾ ಭಗವಂತನನ್ನು ಏನಾದರೊಂದನ್ನು ಕೇಳುತ್ತಲೇ ಇರುತ್ತೇನೆ. ಇದು ನನಗೆ ಕೆಲವೊಮ್ಮೆ ಹಿಡಿಸುವುದಿಲ್ಲ. 
ಶ್ರೀ ಶ್ರೀ;- ನೀವೇನಾದರೂ ಕೇಳಿದ ನಂತರ ನಿಮಗದು ದೊರಕಿದರೆ, ಆಗ ನಿಮ್ಮಲ್ಲಿ ವಿಶ್ವಾಸ ಬೆಳೆಯುತ್ತದೆ.  ಆಗ ನೀವು ಕೇಳದೆಯೇ ನಿಮಗೇನು ಬೇಕೋ ಅದೆಲ್ಲವೂ ನಿಮಗೆ ಸಿಗಲು ಪ್ರಾರಂಭವಾಗುತ್ತದೆ.


ಪ್ರಶ್ನೆ;- ಸಾಕ್ಷಾತ್ಕಾರಕ್ಕಾಗಿ ಸ್ವ-ಪ್ರಯತ್ನ ಅವಶ್ಯಕ. ಆದರೆ ಪ್ರಯತ್ನರಹಿತತೆಯೇ ಅತೀ ಮುಖ್ಯವೆಂದು ನೀವು ಹೇಳುತ್ತೀರಿ.  ಇದೊಂದು ವಿಪರ್ಯಾಸ. ಆದ್ದರಿಂದ, ದಾರಿ ಯಾವುದು? 
ಶ್ರೀ ಶ್ರೀ;- ಎರಡೂ ಮುಖ್ಯ. ಟ್ರೇನಿನೊಳಗೆ ಹತ್ತಲು ನೀವು ಪ್ರಯತ್ನ ಪಡಬೇಕು. ನಿಮ್ಮ ಸಾಮಾನನ್ನು ಹೊತ್ತುಕೊಂಡು ಸರಿಯಾದ ಪ್ಲಾಟ್‌ಫಾರ್ಮಿಗೆ ಹೋಗಬೇಕು. ಆದರೆ ಒಮ್ಮೆ ಟ್ರೇನನ್ನು ಹತ್ತಿದ ನಂತರ ನಿಮ್ಮ ಸಾಮಾನನ್ನು ಪಕ್ಕಕ್ಕಿಟ್ಟು ವಿಶ್ರಮಿಸಿ. 


ಪ್ರಶ್ನೆ;- ನಾವೆಷ್ಟು ಪ್ರಯತ್ನಪಟ್ಟರೂ ನಮ್ಮ ಕೆಲವು ಕನಸ್ಸುಗಳು ನನಸಾಗುವುದೇ ಇಲ್ಲ. ಆಗ ನಾವೇನು ಮಾಡಬೇಕು? 
ಶ್ರೀ ಶ್ರೀ ;- ನಿಮ್ಮ  ಪ್ರಯತ್ನವನ್ನು ಮಾಡುತ್ತಲೇ ಇರಿ. ಒಂದು ಗಾದೆಯಿದೆ- "ಮತ್ತೆ ಮತ್ತೆ ಪ್ರಯತ್ನ ಮಾಡಿ. ಕೊನೆಗೊಮ್ಮೆ ಯಶಸ್ವಿಯಾಗುತ್ತೀರಿ" ಎಂದು. ಒಂದು ಅಥವಾ ಎರಡನೆಯ ಸಲ ನೀವು ಯಶಸ್ಸನ್ನು ಕಾಣದೇ ಇರಬಹುದು. ಆದರೆ ನಿಮ್ಮ ಸಂಕಲ್ಪ ಬಲಿಷ್ಠವಾಗಿದ್ದರೆ ಅದು ಆಗುತ್ತದೆ. 


ಪ್ರಶ್ನೆ;- ಶರಣಾಗತಿಯ ಭಾವವನ್ನು ಹೇಗೆ ಬೆಳೆಸಿಕೊಳ್ಳುವುದು?
ಶ್ರೀ ಶ್ರೀ;- ಆ ಭಾವವು ಆಗಲೇ ಇದೆಯೆಂದು ಸುಮ್ಮನೆ ಅಂದುಕೊಳ್ಳಬಿಡಬೇಕಷ್ಟೆ. ಪ್ರಯತ್ನ ಮಾಡಬೇಡಿ. ಶರಣಾಗತಿ ಈಗಾಗಲೇ ಇದೆಯೆಂದುಕೊಂಡು ಮುನ್ನಡೆಯಿರಿ.


ಪ್ರಶ್ನೆ;- ನನ್ನ ಬಾಲ್ಯದಿಂದಲೂ ಸಹ, ಮಾಂಸಾಹಾರವನ್ನು ತಿಂದರೆ ಅದು ಪಾಪದ ವಿಷಯ, ಏಕೆಂದರೆ ನಾವು ಒಂದು ಅಸಹಾಯಕ ಪ್ರಾಣಿಯನ್ನು ಕೊಲ್ಲುತ್ತಿದ್ದೇವೆ ಎಂದು ಹೇಳಲಾಗಿದೆ. ಇದು ನಿಜವೆ? 
ಶ್ರೀ ಶ್ರೀ;- ಮಾಂಸಾಹಾರ ಮಾಡುವವರೆಲ್ಲರೂ ಪಾಪಿಷ್ಠರು ಎಂದುಕೊಳ್ಳುವುದು ಬೇಡ. ಮಾಂಸಾಹಾರ ಮಾಡಿದಾಗ ನಮ್ಮ ತಾಮಸಿಕ ಪ್ರವೃತ್ತಿಗಳಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹ ಸಿಗುತ್ತದೆಯಷ್ಟೆ. ಇದರಿಂದ ಅವರಿಗೂ ಒಳ್ಳೆಯದಲ್ಲ, ಜಗತ್ತಿಗೂ ಮತ್ತು ಸಮಾಜಕ್ಕೂ ಒಳ್ಳೆಯದಲ್ಲ. ನನ್ನ ಮಗುವೇ ನಿನ್ನ ಹೊಟ್ಟೆಯನ್ನು ಒಂದು ಸ್ಮಶಾನವಾಗಿ ಮಾಡಿಬಿಡಬೇಡ.


ಪ್ರಶ್ನೆ;- ಜ್ಞಾನವು ವಿಶ್ವಾಸವಿಲ್ಲದೆಯೇ ಇರಲು ಸಾಧ್ಯವೇ ಅಥವಾ ಅವೆರಡೂ ಒಂದುಕ್ಕೊಂದು ಸಂಬಂಧಪಟ್ಟಿದೆಯೆ? 
ಶ್ರೀ ಶ್ರೀ;- ಜ್ಞಾನ ಮತ್ತು ವಿಶ್ವಾಸ ಸಂಬಂಧಪಟ್ಟಿವೆ. ಜ್ಞಾನವಿದ್ದಾಗ ವಿಶ್ವಾಸವಿರುತ್ತದೆ ಮತ್ತು ವಿಶ್ವಾಸವಿದ್ದಾಗ ಜ್ಞಾನವಿರುತ್ತದೆ. ಮತ್ತು ನಿಮ್ಮಲ್ಲಿ ವಿಶ್ವಾಸವಿರುವುದರಿಂದಲೇ ಈ ಪ್ರಶ್ನೆಯನ್ನು ನೀವು ಕೇಳುತ್ತಿರುವಿರಿ. ನಾವು ಈ ಪ್ರಶ್ನೆಗೆ ಉತ್ತರಿಸುತ್ತೇವೆ ಮತ್ತು ಕೊಟ್ಟ ಉತ್ತರವನ್ನು ನೀವು ಸ್ವೀಕರಿಸುತ್ತೀರಿ ಎಂಬ ವಿಶ್ವಸವೂ ಇದೆ ನಿಮ್ಮಲ್ಲಿ. ಆದ್ದರಂದ, ಜ್ಞಾನ ಮತ್ತು ವಿಶ್ವಾಸ ಒಂದಕ್ಕೊಂದು ಸಂಬಂಧಪಟ್ಟಿವೆ. 

ಪ್ರಶ್ನೆ;- ಒಬ್ಬರ ವಿಧಿಯು ನಿಶ್ಚಯವಾಗಿಬಿಟ್ಟಿದೆಯೇ ಅದನ್ನು ಅದು ಬದಲಾಯಿಸಬಹುದೆ? 
ಶ್ರೀ ಶ್ರೀ;- ವಿಧಿಯ ಸ್ವಲ್ಪ ಭಾಗ ನಿಶ್ಚಯವಾಗಿಬಿಟ್ಟಿದೆ ಮತ್ತು ಕೆಲವು ವಿಷಯಗಳನ್ನು ಬದಲಾಯಿಸಬಹುದು.


ಪ್ರಶ್ನೆ;- ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಬಲು ಕಷ್ಟ.  ನಾನು ಕೋಪ ಮಾಡಿಕೊಳ್ಳದೆ ಇರುವುದಕ್ಕಾಗಿ ಏನು ಮಾಡಬೇಕು?
ಶ್ರೀ ಶ್ರೀ;- ಮೊದಲನೆಯದಾಗಿ, ಕೋಪವನ್ನು ಹತೋಟಿಗೆ ತರಬೇಕು.  ಇದನ್ನು ತಿಳಿದುಕೊಳ್ಳಿ. ಮನಸ್ಸು ಬಹಳ ಸಂತೋಷದಿಂದಿದ್ದಾಗ ಮತ್ತು ತೃಪ್ತಗೊಂಡಿದ್ದಾಗ, ನೀವು ಧ್ಯಾನದಲ್ಲಿದ್ದಾಗ, ಮತ್ತು ತಪ್ಪುಗಳಿಗಾಗಿ ಹಾಗೂ ಅಪರಿಪೂರ್ಣತೆಗಳಿಗಾಗಿ ಸ್ವಲ್ಪ ಸ್ಥಾನವನ್ನು ಬಿಟ್ಟುಕೊಟ್ಟಾಗ ನಿಮಗೆ ಕೋಪ ಬರುವುದಿಲ್ಲ.  ಯಾವುದೇ ತಪ್ಪನ್ನು ಕೋಪದಿಂದ ತಿದ್ದಲಾಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಿ.  ಕೇವಲ ಅರಿವಿನಿಂದ ಮಾತ್ರ ಯಾವುದನ್ನೇ ಆಗಲಿ, ಸರಿಪಡಿಸಬಹುದು.
 

ಸೋಮವಾರ, ಜನವರಿ 3, 2011

ಜ್ಞಾನದ ನಾಲ್ಕು ಅಂಶಗಳು

ಜನವರಿ  ೩, ೨೦೧೧, ಬೆಂಗಳೂರು ಆಶ್ರಮ.

ಪ್ರಶ್ನೆ;- ಒಬ್ಬರು ತಾವು ಮಾಡುವ ಎಲ್ಲದರಲ್ಲೂ ನಿಷ್ಪ್ರಯೋಜಕರು ಎಂದುಕೊಂಡರೆ, ಅವರು ಹೇಗೆ ಜೀವನದಲ್ಲಿ ಮುನ್ನಡೆಯುವುದು? 

ಶ್ರೀ ಶ್ರೀ;-
ಸ್ವಲ್ಪ ಕಾಲದವರೆಗೆ ಇಲ್ಲೇ ಇರಿ ಮತ್ತು ಭಗವಂತ ಕಸವನ್ನು ಸೃಷ್ಟಿ ಮಾಡುವುದಿಲ್ಲ ಎಂದು ತಿಳಿದುಕೊಳ್ಳಿ. ಈ ಭೂಮಿಯ ಮೇಲೆ ಸೃಷ್ಟಿ ಮಾಡಲಾಗಿರುವ ಎಲ್ಲರೂ ಯಾವುದೋ ಒಂದರಲ್ಲಿ ಒಳ್ಳೆಯದಾಗಿರುತ್ತಾರೆ.


ಪ್ರಶ್ನೆ;- ಯಾವುದು ಉತ್ತಮ-ಮೋಕ್ಷವೇ ಅಥವಾ ಪ್ರೇಮ ಮತ್ತು ಕೃತಜ್ಞತೆಯೆ? 
                         
ಶ್ರೀ ಶ್ರೀ;-
ಪ್ರೇಮ ಮತ್ತು ಕೃತಜ್ಞತೆಯು ಸ್ವಲ್ಪ ಮಟ್ಟದ ಆಂತರಿಕ ಸ್ವಾತಂತ್ರ್ಯವಿಲ್ಲದೆ ಸಾಧ್ಯವಿಲ್ಲ. ಅವೆರಡೂ ಜೊತೆ ಜೊತೆಯಾಗೇ ಹೋಗುತ್ತವೆ. ನಿಮಗೆ ಎಷ್ಟು ಮಟ್ಟದವರೆಗೆ ಸ್ವಾತಂತ್ರ್ಯ ಅನುಭವವಾಗುತ್ತದೋ, ಅಷ್ಟು ಮಟ್ಟದಷ್ಟು ಕೃತಜ್ಞತೆಯನ್ನು ಅನುಭವಿಸುತ್ತೀರಿ.


ಪ್ರಶ್ನೆ;- ಈ ವಿಶ್ವದ ಸೃಷ್ಟಿಯಾದಾಗಿನಿಂದಲೂ ಆತ್ಮಗಳಿವೆ.  ಆತ್ಮಗಳು ಹೆಚ್ಚುತ್ತಿವೆಯೆ ಅಥವಾ ಹಾಗೆಯೇ ಇವೆಯೆ? ಆತ್ಮಗಳ ಗಣಿತ ನನಗರ್ಥವಾಗುವುದಿಲ್ಲ.

ಶ್ರೀ ಶ್ರೀ;-
ಮಾಯವಾಗುತ್ತಿರುವ ಅನೇಕ ವರ್ಗಗಳ ಜೀವಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅನೇಕ ಹಾವುಗಳು, ಚೇಳುಗಳು, ಗುಬ್ಬಚ್ಚಿಗಳು, ಚಿಟ್ಟೆಗಳು ......ಅವೆಲ್ಲವೂ ಮಾನವರಾಗಿ ಬರಲು ಸಾಧ್ಯ.


ಪ್ರಶ್ನೆ;- ಭಗವದ್ಗೀತೆಯ ಹತ್ತನೆಯ ಅಧ್ಯಾಯದ ಕೊನೆಯ ಶ್ಲೋಕದ ಬಗ್ಗೆ ಸ್ವಲ್ಪ ಬೆಳಕನ್ನು ಚೆಲ್ಲುವಿರಾ?

ಶ್ರೀ ಶ್ರೀ;-
ಭಗವಾನ್ ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ, "ಈ ಜಗತ್ತಿನಲ್ಲಿ ನೀನು ಏನೆಲ್ಲಾ ನೋಡುತ್ತಿದೆಯೋ, ಅವೆಲ್ಲವೂ ನನ್ನ ಚಿಕ್ಕ ಭಾಗಗಳು. ಎಲ್ಲೆಲ್ಲಿ ಪುಣ್ಯವನ್ನು ಕಾಣುತ್ತೀಯೋ ಅವೆಲ್ಲವೂ ನನ್ನಿಂದಲೇ ಬಂದಿದೆ. ಯಾರಲ್ಲಾದರೂ ನೀನು ಬುದ್ಧಿಯನ್ನು ಕಂಡರೆ ಅದು ನಾನೇ. ಯಾರಲ್ಲಾದರೂ ನೀನು ಶೌರ್ಯವನ್ನು ಕಂಡರೆ ಅದೂ ನಾನೇ. ಇಡೀ ಜಗತ್ತು ನನ್ನ ಸ್ವಲ್ಪ ಭಾಗದಲ್ಲಿ ಪ್ರತಿಬಿಂಬಿತವಾಗಿದೆ."


ಪ್ರಶ್ನೆ;- ಅನೇಕ ಜನರು ಹನುಮಂತ ಹಿಮಾಲಯದ ಪರ್ವತಗಳಲ್ಲಿ ಇನ್ನೂ ಇದ್ದಾನೆ ಎನ್ನುತ್ತಾರೆ. ಇದು ನಿಜವೆ? 

ಶ್ರೀ ಶ್ರೀ;-
ನೋಡಿ, ಇಡೀ ಜಗತ್ತು ಅಲೆಗಳ ತರಂಗಗಳು. ಇಲ್ಲಿ ಘನವಾಗಿರುವಂತದ್ದು ಏನೂ ಇಲ್ಲ. ಕ್ವಾಂಟಮ್ ಭೌತಶಾಸ್ತ್ರಜ್ಞರನ್ನು ಕೇಳಿದರೆ, ಯಾವೆದೆಲ್ಲವೂ ಕಾಣಿಸುತ್ತಿದೆಯೋ, ವಾಸ್ತವದಲ್ಲಿ ಅದು ಯಾವುದೂ ಇಲ್ಲ ಎನ್ನುತ್ತಾರೆ. ಸೂಕ್ಷ್ಮ ಸ್ತರದಲ್ಲಿ ಎಲ್ಲಾ ಶಕ್ತಿಗಳೂ ಇವೆ. ಭಗವಾನ್ ಹನುಮಂತನು ಅಲ್ಲೆಲ್ಲೋ ಕುಳಿತಿರುವ ಒಂದು ವ್ಯಕ್ತಿಯಲ್ಲ. ನಮ್ಮ ಪ್ರಾಣಶಕ್ತಿಯಲ್ಲೇ ಹನುಮಂತನ ಚೈತನ್ಯವಿದೆ. 


ಪ್ರಶ್ನೆ;- ಆತ್ಮಸಾಕ್ಷಾತ್ಕಾರವು ಒಂದು ಪಯಣವೆ ಅಥವಾ ಒಂದು ಗುರಿಯೆ? ನಾವೆಲ್ಲಾದರೂ ತಲುಪಿದರೆ, ನಾವು ತಲುಪಿದ್ದೇವೆ ಎಂದು ತಿಳಿಯುತ್ತದೆಯೆ ಅಥವಾ ನಡೆಯುವುದನ್ನು ಮುಂದುವರಿಸುತ್ತಿರಬೇಕೆ? 

ಶ್ರೀ ಶ್ರೀ;- ಹೌದು, ಎರಡೂ ಹೌದು. ಒಂದು ರೀತಿಯಲ್ಲಿ ಅದು ಪಯಣವೂ ಹೌದು, ಮತ್ತೊಂದು ರೀತಿಯಲ್ಲಿ  ಅದೇ ಅಂತಿಮ ಗುರಿ.  ನಿಮಗೆ ಬಹಳ ತೃಪ್ತವಾದಾಗ ನಿಮಗೇನೂ ಬೇಡವೆನ್ನಿಸುತ್ತದೆ. ಯಾವ ಅವಶ್ಯಕತೆಗಳೂ ಇರುವುದಿಲ್ಲ. ನಾವು ಬಹಳ ಪೂರ್ಣರು ಎಂಬ ಅನುಭವವಾಗುತ್ತದೆ. ಎಷ್ಟು ತೃಪ್ತಿ ಬರುತ್ತದೆಯೆಂದರೆ, ನೀವು ಬಹಳ ಪರಿಪೂರ್ಣರು ಎಂಬ ಅನುಭವವಾಗುತ್ತದೆ. ಎಂದಿಗೂ ಬಾಡಿ ಹೋಗದಂತಹ ಮುಗುಳ್ನಗೆಯಿರುತ್ತದೆ ಮತ್ತು ಇದೆಲ್ಲವೂ ಬಹಳ ಪ್ರಯತ್ನರಹಿತವಾಗಿಯೇ  ಆಗುತ್ತದೆ. 


ಪ್ರಶ್ನೆ;- ಇತರರ ನಕಾರಾತ್ಮಕತೆಯಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳುವುದು? 

ಶ್ರೀ ಶ್ರೀ;-
"ಓಂ ನಮಃ ಶಿವಾಯ" ಎಂದು ಉಚ್ಚರಿಸುವುದರಿಂದ. "ಜೈಗುರುದೇವ್" ಎಂದರೂ ಸರಿಯೆ. 


ಪ್ರಶ್ನೆ ;- ಮನಸ್ಸಿಗೂ ಆತ್ಮಕ್ಕೂ ಇರುವ ವ್ಯತ್ಯಾಸವೇನು?
 
ಶ್ರೀ ಶ್ರೀ;-
ಮನಸ್ಸು ಆಲೋಚನೆಗಳು ಮತ್ತು ಎಲ್ಲವೂ ನಡೆಯುವುದು ಆತ್ಮದಲ್ಲಿ. 


ಪ್ರಶ್ನೆ;- ಒಬ್ಬರೇಕೆ ಮದುವೆಯಾಗುತ್ತಾರೆ? ಯಶಸ್ವಿ ಮದುವೆಯ ರಹಸ್ಯವೇನು? 

ಶ್ರೀ ಶ್ರೀ;-
ಇಬ್ಬರೂ ಸಂತೋಷವಾಗಿದ್ದರೆ, ಅದೇ ಯಶಸ್ವಿಯಾದ ಮದುವೆ. ಆಗ ಮಕ್ಕಳೂ ಸಂತೋಷವಾಗಿರುತ್ತಾರೆ. ನೀವೇ ಆಯ್ಕೆ ಮಾಡಿಕೊಳ್ಳಿ. ಆಯ್ಕೆ ನಿಮ್ಮದು, ಆಶೀರ್ವಾದಗಳು ನಮ್ಮದು. ಇದನ್ನು ನಿಮ್ಮ ತಲೆಯಿಂದ ಆಯ್ಕೆ ಮಾಡಲು ಸಾಧ್ಯವಿಲ್ಲ.  ಭವಿಷ್ಯದಲ್ಲಿ ಏನಾದರೊಂದು ನಡೆದರೆ, ಆಯ್ಕೆ ಮಾಡಿಕೊಳ್ಳಿ.


ಪ್ರಶ್ನೆ;- ಜ್ಞಾನದ ವಿವರಣೆಯೇನು?

ಶ್ರೀ ಶ್ರೀ ;-
ಜ್ಞಾನವೆಂದರೆ ಮಾಹಿತಿಯಲ್ಲ. ಯಾವುದು ಅರಿವೋ, ಅದೇ ಜ್ಞಾನ.  ಮಾಹಿತಿಯನ್ನು ಹೊತ್ತಿರುವ ವ್ಯಕ್ತಿಯನ್ನು ಜ್ಞಾನ ಎನ್ನುತ್ತಾರೆ, ಮಾಹಿತಿಯು ಜ್ಞಾನವಲ್ಲ.  ಎಲ್ಲಾ ಮಾಹಿತಿಯು ಯಾವುದರಲ್ಲಿ ಆಗುತ್ತದೋ, ಅದೇ ಜ್ಞಾನ.  ಚೈತನ್ಯವೊಂದೇ ಜ್ಞಾನ.  ಸತ್ಯಂ ಜ್ಞಾನಂ ಅನಂತಂ ಬ್ರಹ್ಮ- ಇವು ಬ್ರಹ್ಮನ ನಾಲಕ್ಕು ಮುಖಗಳು, ಜ್ಞಾನದ ನಾಲಕ್ಕು ಅಂಶಗಳು. ಎಲ್ಲವೂ ಒಂದೇ.  ಜ್ಞಾನವು ಮಾಹಿತಿ ಮತ್ತು ಶುದ್ಧ ಜ್ಞಾನ.


ಪ್ರಶ್ನೆ;- ನನ್ನ ಜೀವನದ ಗುರಿಯೇನು? ಈ ಭೂಮಿಯ ಮೇಲೆ ನಾನೇಕೆ ಜನಿಸಿದ್ದೇನೆ? 

ಶ್ರೀ ಶ್ರೀ;-
ಈಗ ನೀವು ಯಾವ ರೀತಿಯಲ್ಲಿ ನಗುತ್ತಿದ್ದೀರೋ, ಆ ನಗೆಯನ್ನು ಇತರರ ಮುಖಗಳಲ್ಲೂ ತರುವುದೇ ನಿಮ್ಮ ಜೀವನದ ಗುರಿ. 


ಜ್ಞಾನವಾಹಿನಿ;-

ಶ್ರೀ ಶ್ರೀ ;-
ಡಿಸೆಂಬರ್ ತಿಂಗಳಿನ ಅರ್ಥ ನಿಮಗೆ ಗೊತ್ತೆ?
ಸಭಿಕರು;- ಇಲ್ಲ; 
ಶ್ರೀ ಶ್ರೀ;-ನವೆಂಬರ್‌ನ ಅರ್ಥ?
ಸಭಿಕರು;-ಇಲ್ಲ !


ಡಿಸೆಂಬರ್ ಎಂದರೆ ಸಂಸ್ಕೃತದಲ್ಲಿ ದಶ+ಅಂಬರ. "ದಶ" ಎಂದರೆ "ಹತ್ತು" "ಅಂಬರ" ಎಂದರೆ "ಆಕಾಶ". ಆದ್ದರಿಂದ ಡಿಸೆಂಬರ್ ಹತ್ತನೆಯ ಆಕಾಶ.  ಅದೇ ರೀತಿಯಾಗಿ ನವೆಂಬರ್ ಎಂದರೆ "ನವ"+ "ಅಂಬರ"-ಒಂಭತ್ತನೆಯ ಆಕಾಶ.  ಹೀಗೆ, ಈ ಎಲ್ಲಾ ಹೆಸರುಗಳೂ ಸಂಸ್ಕೃತದ ಮೂಲವನ್ನು ಹೊಂದಿವೆ.


ಒಂದಾನೊಂದು ಕಾಲದಲ್ಲಿ ಮಾರ್ಚ್ ತಿಂಗಳಿನಲ್ಲಿ ನವ ವರ್ಷವನ್ನು ಆಚರಿಸುತ್ತಿದ್ದರು. ಮಾರ್ಚ್ ಎಂದರೆ ಮೊದಲನೆಯ ತಿಂಗಳು, ಎಂದರೆ ಮುಂದಕ್ಕೆ ಹೋಗುವುದು, ಮುನ್ನಡೆಯುವುದು.  ಆ ತಿಂಗಳಲ್ಲಿ ಸೂರ್ಯನು ಮೊದಲ ರಾಶಿಗೆ ಹೋಗುತ್ತಾನೆ-ಮೇಷರಾಶಿಗೆ.  ಇಂದಿಗೂ ಸಹ ಇರಾಕ್‌ನಲ್ಲಿ, ಇರಾನಿನಲ್ಲಿ, ಆಫ್ಛಾನಿಸ್ತಾನದಲ್ಲಿ, ತುರ್ಕಿಯಲ್ಲಿ ಮತ್ತು ಭಾರತದ ಅನೇಕ ಭಾಗಗಳಲ್ಲಿ ಮಾರ್ಚ್ ತಿಂಗಳಲ್ಲಿ ಹೊಸವರ್ಷವನ್ನು ಆಚರಿಸುತ್ತಾರೆ. ಆದ್ದರಿಂದ, ನಿಜವಾದ ಹೊಸ ವರ್ಷ ಪ್ರಾರಂಭವಾಗುವುದು ಮಾರ್ಚ್ ತಿಂಗಳಲ್ಲಿ. ಜನವರಿಯು ಹನ್ನೊಂದನೆಯ ತಿಂಗಳು ಮತ್ತು ಫೆಬ್ರವರಿ ಕೊನೆಯ ತಿಂಗಳು.