ಭಾನುವಾರ, ಸೆಪ್ಟೆಂಬರ್ 19, 2010

ನಿಮ್ಮ ಜೀವನವನ್ನು ಪವಿತ್ರವೆಂದು ಪರಿಗಣಿಸಿ

ಭಾರತ(ಬೆಂಗಳೂರು)
ಸೆಪ್ಟೆಂಬರ್ 19
ಜೀವನ, ಜೀವ ಜಗತ್ ನಶ್ವರ
      ಯಾವುದೂ ಶಾಶ್ವತವಲ್ಲ. ಒಳ್ಳೆಯ ಹಾಗೂ ಕೆಟ್ಟ ದಿನಗಳು ದೂರವಗುತ್ತವೆ. ಇದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತ ಸಂತೋಷದಿಂದ ಇರಿ. ನಮ್ಮ ಜೀವನ ಹೇಗಿದೆಯೋ , ಅದೇ ಸಾಧನೆ. ನಿಜವಾದ ಸಾಧನೆ ಎಂದರೆ ವಿಶ್ರಮಿಸುವುದು, ಆಳವಾದ ವಿಶ್ರಾಂತಿ. ನಿಮಗೆ ಏನು ತಿಳಿದುಕೊಳ್ಳಬೇಕು? ಇಲ್ಲಿ ಪ್ರತಿಯೊಂದೂ ನಾಶ ಹೊಂದುವಥದ್ದು. ಪ್ರತಿಯೊಂದೂ ಬದಲಾಗುತ್ತಿದೆ-ನಿಮ್ಮ ಶರೀರ, ನಿಮ್ಮ ಬುದ್ಧಿ. ಎಲ್ಲವೂ ಕರಗಿ ಹೋಗುತ್ತದೆ. 30 ವರ್ಷಗಳು ಒಂದು ಕ್ಷಣದಂತೆ ಕಳೆದಿವೆ.* ಕಾಲ ಅಷ್ಟು ವೇಗವಾಗಿ ಓಡುತ್ತಿದೆ. ಏನೋ ಒಂದು ಬದಲಾಗುತ್ತಿಲ್ಲ ಎಂದು ನಿಮಗೆ ಅನ್ನಿಸಿದರೆ, ಅದು ನಿಮ್ಮ ಚೈತನ್ಯ. ಯಾವುದು ಬದಲಾಗುತ್ತಿಲ್ಲವೋ ನಾವು ಅದರಲ್ಲಿ ಸ್ಥಿರವಾಗಿರೋಣ. ಈ ಸಮಯವನ್ನು ಸಂಪೂರ್ಣವಾಗಿ ಸದುಪಯೋಗಿಸಿ.
      ನಿಮ್ಮ ಜೀವನವನ್ನು ಒಂದು ಸಾಧನೆ, ಪವಿತ್ರವಾದುದು ಎಂದು ನೀವು ಪರಿಗಣಿಸಿ. ನೀವು ಪ್ರಯತ್ನ ಪಟ್ಟಾಗ ಕೆಲವು ಪ್ರಯೋಜನಗಳನ್ನು ಪಡೆಯುತ್ತೀರಿ. ನಿಮ್ಮ ಶರೀರ ಮತ್ತು ಮನಸ್ಸು ಸ್ವಲ್ಪ ಮಟ್ಟಿಗೆ ಶಕ್ತಿ ಹೊಂದುತ್ತದೆ, ನೀವು ಸ್ವಲ್ಪ ಮಟ್ಟಿಗೆ ಕುಶಲತೆಯನ್ನು ಪಡೆಯುತ್ತೀರಿ. ಉದಾಹರಣೆಗೆ, ನೀವು ಸಿತಾರ್ ನುಡಿಸುವುದರಲ್ಲೋ, ಕಂಪ್ಯೂಟರ್ ಅಥವಾ ವ್ಯಾಯಾಮಗಳಲ್ಲಿ ಸ್ವಲ್ಪ ಪರಿಶ್ರಮದಿಂದ ಕುಶಲರಾಗುತ್ತೀರಿ. ಆದರೆ ಈ ಕುಶಲತೆಗಳನ್ನು ನೀವು ನಿಜವಾದ ವಿಶ್ರಾಂತಿಯಿಂದ ನಿಮಗೆ ಸಿಗಬಹುದಾದ ಪಯೋಜನಗಳೊಂದಿಗೆ ಹೋಲಿಸಿದರೆ, ಇವು ಸೀಮಿತ ಪ್ರಯೋಜನಗಳು.
      ಸಾಧನೆ ಆಗುವುದು ಎಲ್ಲಾ ಪರಿಶ್ರಮಗಳನ್ನು ಬಿಟ್ಟಾಗ. ನೀವು ಸಂಪೂರ್ಣ ವಿಶ್ರಾಂತಿಯಿಂದ ಇರುವಾಗ ನೀವು ನಿಜವಾದ ಆನಂದವನ್ನು ಅನುಭವಿಸುತ್ತೀರಿ. ನೀವು ಪ್ರಯತ್ನದಿಂದ ಪ್ರೀತಿಯನ್ನು ಪಡೆಯುವುದು ಅಸಾಧ್ಯ. ನಿಜವಾದ ವಿಶ್ರಾಂತಿ ನಿಮಗೆ ಆನಂದವನ್ನು ನೀಡಿ ನಿಮ್ಮೊಳಗಿನ ಮಾನವೀಯ ಮೌಲ್ಯಗಳನ್ನು ಬೆಳಗಿಸುತ್ತದೆ, ನಿಮ್ಮ ಬುದ್ಧಿಯನ್ನು ತೀಕ್ಷ್ಣಗೊಳಿಸುತ್ತದೆ  ಮತ್ತು ನಿಮ್ಮನ್ನು ಸೃಜನಶೀಲರನ್ನಾಗಿ ಹಾಗೂ ಕುಶಲರನ್ನಾಗಿ ಮಾಡುತ್ತದೆ.
      ವಿಶ್ರಾಂತಿ ಎಂದರೆ ನಿರುತ್ಸಾಹದ ವಿಶ್ರಾಮ ಅಥವಾ ಉದಾಸೀನತೆ ಅಲ್ಲ. ಬೆಳಗ್ಗೆ ಏಕೆ ಯೋಗಾಸನ ಮಾಡಬೇಕು? ಸ್ವಲ್ಪ ಪ್ರಯತ್ನದ ನಂತರವೇ ವಿಶ್ರಾಂತಿ ಆಗಲು ಸಾಧ್ಯ, ನಿಮ್ಮಲ್ಲಿರುವ ಸೋಮಾರಿತನ ಕಾಣೆಯಾದಾಗ. ಸೋಮಾರಿತನದಿಂದ ಮುಕ್ತವಾಗಿರುವುದೇ ನಿಮ್ಮ  ಇಚ್ಛೆಯಾಗಿರಬೇಕು.
      ಆಸೆಗಳ ಮತ್ತು ನಿದ್ರೆಯ ಪುನರಾವರ್ತಿಸುವ ಚಕ್ರದಲ್ಲಿ ರಜೊ ಮತ್ತು ತಮೋ ಗುಣಗಳ ನಡುವೆ ನಾವು ಓಲಾಡುತ್ತಿರುತ್ತೇವೆ. ಇದು ಬಂಧನ.ಸತೋಗುಣವು ನಿಜವಾದ ವಿಶ್ರಾಂತಿ ಹಾಗೂ ಜ್ನಾನದಿಂದ ಉದಯಿಸುತ್ತದೆ. ಸಂಪೂರ್ಣ ಅಷ್ಟವಕ್ರ ಗೀತೆಯ ಸಾರಾಂಶವೇ-ಎಚ್ಚೆತ್ತಿರುವಾಗ  ಆನಂದದಿಂದ ವಿಶ್ರಾಂತಿ ಪಡೆಯಲು ಸಾಧ್ಯವಾಗುವುದು- ಇದು ಸಾತ್ತ್ವಿಕ  ವಿಶ್ರಾಂತಿ. ಅದು ನಿಜವಾದ ವಿಶ್ರಾಂತಿ. ಆ ವಿಶ್ರಾಂತಿಯಲ್ಲಿ ಎಲ್ಲ  ಬಂಧನಗಳು ತಮ್ಮ ಹಿಡಿತವನ್ನು ಸಡಿಲಗೊಳ್ಳುತ್ತವೆ. ಹಾಗಾಗಿ ನಿಮ್ಮ ಜೀವನವನ್ನು ಸಾಧನೆ ಎಂದು ಪರಿಗಣಿಸಿ.
      ಈಶ್ವರನನ್ನು ಮಹಾಕಾಲನೆಂದು ಕರೆಯುತ್ತಾರೆ. "ಮಹಾ" ಎಂದರೆ ವಿಜೃಂಭಣಿಯ ಮತ್ತು "ಕಾಲ" ಎಂದರೆ ಸಮಯ. ಶಿವ ಎಂದರೆ ತನ್ನಲ್ಲಿ ಕಾಲದ ಪರಿಣಾಮವನ್ನು ಕರಗಿಸುವ ಶಕ್ತಿಯ ವಿಸ್ತಾರ. ಕಾಲವು ಒಂದು ನಿಯಮವನ್ನು ಪಾಲಿಸುತ್ತದೆ, ಅದಕ್ಕೆ ತನ್ನದೇ ಆದ ಲಯವಿದೆ.ಕೆಲವೊಮ್ಮೆ ಅಪೇಕ್ಷಿತ ಮತ್ತೆ ಕೆಲವೊಮ್ಮೆ ಅನಪೇಕ್ಷಿತ ಘಟನೆಗಳು ನಡೆಯುತ್ತವೆ. ವಿರುದ್ಧಾತ್ಮಕ ಮೌಲ್ಯಗಳು ಒಂದಕ್ಕೊನ್ದು ಪೂರಕ ಎಂಬುದನ್ನು ಸಮಯವು ನಮಗೆ ನಿರಂತರವಾಗಿ ಕಲಿಸುತ್ತಲೇ ಇರುತ್ತದೆ.

*2011 ಆರ್ಟ್ ಆ¥sóï ಲಿವಿಂಗ್ ಪ್ರಾರಂಭವಾದಾಗಿನಿಂದ 30ನೇ ವರ್ಷ. 
The Art of living
© The Art of Living Foundation