ಭಾನುವಾರ, ಮಾರ್ಚ್ 27, 2011

ಈ ವರ್ಷ ಒಂದು ಆಧ್ಯಾತ್ಮಿಕ ಗುರಿಯನ್ನು ಇರಿಸಿಕೊಳ್ಳಿ

ಯುಗಾದಿಯ ಹಬ್ಬದ ದಿನದಂದು ಗುರೂಜಿಯವರು ನೀಡಿದ ಸಂದೇಶ.
ಬೆಂಗಳೂರು ಆಶ್ರಮ, ಮಾರ್ಚ್ ೨೭ ( ಶುಕ್ರವಾರ ) ಮಧ್ಯಾಹ್ನ ೧೨ ಗಂಟೆ:
೫೧೧೦ ನೇ ವರ್ಷವನ್ನು ಪ್ರವೇಷಿಸುತ್ತಿರುವ ಈ ದಿನದಂದು ಎಲ್ಲರಿಗೂ ಹೊಸವರ್ಷದ ಶುಭಾಶಯಗಳು..... ಈ ಪೃಥ್ವಿಯ ಉಗಮವಾಗಿ ೧೯೭೨೯೪೯೧೦೦ ವರ್ಷಗಳಾಗಿವೆ. ಪ್ರತಿಯೊಂದು ವರ್ಷಕ್ಕೂ ಒಂದೊಂದು ಹೆಸರು. ಈ ವರ್ಷದ ಹೆಸರು ವಿರೋಧಿ. ಈ ವರ್ಷ ಜನರು ಪರಸ್ಪರ ಕಾದಾಡುವ ಸಂಭವ ಜಾಸ್ತಿ.

ಅಂತರ್ಮುಖಿ ಸದಾಸುಖಿ. ನಿಮ್ಮೊಳಗೆ ಇಣುಕಿನೋಡಿ, ಸಂತೋಷ ನಿಮ್ಮೊಳಗೇ ಇದೆ.
ಈ ವರ್ಷ ಶುಭವಾಗುತ್ತದೆ. ಭಕ್ತನಿಗೆ ಎಲ್ಲ ಕಾಲದಲ್ಲಿಯೂ ಶುಭವೇ ಆಗುತ್ತಿರುತ್ತದೆ. ಅವನಿಗೆ ಎಲ್ಲಾ ಕಾಲವೂ ವಿಕಾಸಕ್ಕೆ ಅನುಕೂಲ. ಇದು ನಮ್ಮನ್ನು ಇನ್ನೂ ಎತ್ತರದ ಆಯಮಕ್ಕೆ ಕೊಂಡೊಯ್ಯಲು ಸಕಾಲ.

ಆಗುವುದೆಲ್ಲ ಒಳ್ಳೆಯದಕ್ಕೆ, ಓಂ ನಮಃ ಶಿವಾಯ ಮಂತ್ರ ಜಪಿಸುತ್ತಿರಿ. ಧ್ಯಾನವೂ ಪ್ರಮುಖವಾದುದು. ನಿಮ್ಮಲ್ಲಿ ಶೇಕಡ ಒಂದರಷ್ಟು ಜನ ಧ್ಯಾನಮಾಡಿದರೂ ಅದರಿಂದ ಉಳಿದ ಶೇ. ೯೯ ಜನರಿಗೆ ಒಳ್ಳೆಯದಾಗುತ್ತದೆ. ಈ ವರ್ಷ ಪ್ರತಿಯೊಬ್ಬರೂ ಧ್ಯಾನ ಮಾಡಬೇಕು, ಸತ್ಸಂಗದಲ್ಲಿ ನಿರತರಾಗಬೇಕು. ನಿಮ್ಮ ಆಧ್ಯಾತ್ಮಿಕತೆಯಿಂದ ಉಳಿದವರಿಗೆ ಒಳಿತಾಗುತ್ತದೆ. ಇದು ನಿಮ್ಮ ಈ ವರ್ಷದ ಆಧ್ಯಾತ್ಮಿಕ ಗುರಿ. ಭೌತಿಕವಾದ ಗುರಿಗಳನ್ನು ಬದಿಗೆ ಸರಿಸಿ ಧ್ಯಾನಮಾಡಿ, ಸತ್ಸಂಗ ಮಾಡಿ, ಜ್ಞಾನದ ತುಣುಕುಗಳನ್ನು ಮನನ ಮಾಡಿ. ಇದರಿಂದ ನೀವು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿದಂತಾಗುತ್ತದೆ. ಯುಗಾದಿಯಂದು ಜನರು ಬೇವು ಮತ್ತು ಬೆಲ್ಲವನ್ನು ಸೇವಿಸುತ್ತಾರೆ. ಜೀವನವು ಸಿಹಿ ಕಹಿಗಳ ಮಿಶ್ರಣವೆಂಬುದರ ಸಂಕೇತವಿದು.