ಗುರುವಾರ, ಫೆಬ್ರವರಿ 10, 2011

ಕಿಟಕಿಯ ಬಾಗಿಲುಗಳು

ಸೋಮವಾರ ಮಾರ್ಚ್ ೨೩, ೨೦೦೯

ನಿಮ್ಮ ಮನಸ್ಸಿನ ಕಿಟಕಿಗಳನ್ನು ತೆರೆಯುವ ಮತ್ತು ಮುಚ್ಚುವ ನಿಮ್ಮ ಸಾಮರ್ಥ್ಯದ ಮೇಲೆ ಅರಿವಿನ ಪ್ರಮಾಣ ಅವಲಂಬಿತವಾಗಿರುತ್ತದೆ. ದೊಡ್ಡ ಬಿರುಗಾಳಿ ಕಾಣಿಸಿಕೊಂಡಾಗ ಕಿಟಕಿಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ಒಳಗಿದ್ದರೂ ನೀವು ಒದ್ದೆಯಾಗುತ್ತೀರಿ. ಒಳಗೆ ಬಿಸಿಯಾಗಿದ್ದು ಉಸಿರು ಕಟ್ಟತೊಡಗಿದರೆ ಬಾಗಿಲುಗಳನ್ನು ತೆರೆಯಬೇಕು.

ನಿಮ್ಮ ಇಂದ್ರಿಯಗಳು ಕಿಟಕಿಗಳಂತೆ. ನೀವು ಎಚ್ಚರವಾಗಿರುವಾಗ ನಿಮ್ಮ ಇಚ್ಛೆಯಂತೆ ತೆರೆಯಲು ಅಥವಾ ಮುಚ್ಚಲು ಸಾಧ್ಯವಾಗದಿದ್ದರೆ ನೀವು ಬಂಧನಕ್ಕೊಳಗಾಗಿರುತ್ತೀರಿ. ಇದನ್ನು ಸಾಧನೆ ಹಾಗೂ ಆಧ್ಯಾತ್ಮಿಕ ಆಚರಣೆಗಳ ಮೂಲಕ ಸಾಧಿಸಬಹುದು.

ನೀವು ಎಷ್ಟರ ಮಟ್ಟಿಗೆ ಎಚ್ಚರದಲ್ಲಿರುತ್ತೀರೊ, ಅಲ್ಲಿಯವರೆಗೆ ನಿಮ್ಮ ನೆರೆಹೊರೆಯ ಎಲ್ಲವೂ ನಿಮಗೆ ಜ್ಞಾನವನ್ನು ಕೊಡುತ್ತವೆ. ನೀವು ಎಚ್ಚರವಾಗಿಲ್ಲದಿದ್ದರೆ ಎಂತಹ ಉತ್ಕೃಷ್ಟ ಜ್ಞಾನದಿಂದಲೂ ಏನೂ ಪ್ರಯೋಜನವಾಗುವುದಿಲ್ಲ.