ಗುರುವಾರ, ಫೆಬ್ರವರಿ 10, 2011

ನಿಷ್ಠೆ

ಶನಿವಾರ ಮಾರ್ಚ್ ೨೧, ೨೦೦೯

ಪ್ರಬುದ್ಧವಾದ ಹಾಗೂ ಸುಸಂಬದ್ಧ ಮನಸ್ಸು ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತದೆ. ಪ್ರಜ್ಞೆಯ ಅವಿಭಾಜಿತ ಸಮಗ್ರತೆಯನ್ನು ಮನಸ್ಸಿನ ಸಮೃದ್ಧಿಯನ್ನು ನಿಷ್ಠೆ ಸೂಚಿಸುತ್ತದೆ. ಮನಸ್ಸು ಏಕಾಗ್ರವಾಗಿರುವಾಗ ಅದು ಉದ್ರೇಕಗೊಂಡಿರುತ್ತದೆ, ಮೋಸ ಮಾಡುತ್ತದೆ, ಸಮಯ ಸಾಧಕವಾಗುತ್ತದೆ.

ಸಮಯ ಸಾಧಕ ಪ್ರವೃತ್ತಿಯಿಂದ ನಿಷ್ಠಾಹೀನತೆ ಉಂಟಾಗುತ್ತದೆ. ತನ್ನ ವಿಧಿಯ ಬಗ್ಗೆ ದೂರದೃಷ್ಠಿಯಿಲ್ಲದಿರುವುದೇ ಸಮಸಾಧಕತನ. ಆರೋಗ್ಯವಾಗಿರಬೇಕಾದರೆ ಪ್ರಾಮಾಣಿಕತೆ ಹಾಗೂ ಏಕಾಗ್ರತೆ ಎರಡೂ ಬೇಕು. ಮನಸ್ಸು ಒಡೆದಾಗ ಭ್ರಮೆ ಮುಂತಾದ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳು ಹಚ್ಚಿಕೊಳ್ಳುತ್ತವೆ. ನಿಷ್ಠೆಯೇ ನಿಜವಾದ ಸಾಮರ್ಥ್ಯ. ಇದಕ್ಕೆ ಪ್ರಕೃತಿಯಿಂದಲೂ ಸೂಕ್ತ ಸಹಾಯ ಕಾಲಾಂತರದಲ್ಲಿ ಓದಗಿಬರುತ್ತದೆ.

ಭಯ ಹಾಗೂ ಮಹತ್ವಾಕಾಂಕ್ಷೆಗಳು ನಿಷ್ಠೆಗೆ ಎದುರಾಗುವ ತೊಂದರೆಗಳು ಭೌತಿಕ ಹಾಗೂ ಆಧ್ಯಾತ್ಮಿಕ ಸ್ತರಗಳಲ್ಲಿ ನಿಷ್ಠೆ ಅಗತ್ಯ. ಯಾವುದೇ ಸಂಸ್ಥೆಯನ್ನು, ಸಮಾಜವನ್ನು ನಾಶಮಾಡಲು, ಕಟ್ಟಲು, ಕಾಪಾಡಲು ನಿಷ್ಠೆ ಅಗತ್ಯ.

ನಿಮ್ಮ ಬದ್ಧತೆಗಳ ಪ್ರಸ್ತುತೆಯ ಬಗ್ಗೆ ನಿಮ್ಮ ನಂಬಿಕೆಯೇ ನಿಷ್ಠೆ . ಬದ್ಧತೆಗಳನ್ನು ಗೌರವಿಸಿ ಕರ್ಯಗತ ಮಾಡುವುದು ನಿಷ್ಠೆ. ಇದು ನಿಮ್ಮನ್ನು ಬಯಕೆ ಹಾಗೂ ಹೇವರಿಕೆಗಳ ದ್ವಂದ್ವದಿಂದ ಪಾರುಮಾಡುತ್ತದೆ.
ಜವಾಬ್ದಾರಿ, ಸಮರ್ಪಣೆ ಮತ್ತು ಬದ್ಧತೆಗಳು ನಿಷ್ಠೆಯ ಮೂರು ಕಾರಣಗಳು.

ನಿಷ್ಠಾವಂತ ಮನಸ್ಸು ಹೌದು ಎನ್ನುತ್ತದೆ. ಪ್ರಶ್ನೆಗಳನ್ನು ಕೇಳುವ ಉದ್ದೇಶ ಉತ್ತರಗಳನ್ನು ಪಡೆಯುವುದು. ಎಲ್ಲ ಉತ್ತರಗಳ ಮೂಲ ಉದ್ದೆಶ ಹೌದು ಎನ್ನಿಸುವುದು.

ಹೌದು ಎನ್ನುವುದು ಜ್ಞಾನದ ಗುರುತು. ಹೌದು ಎನ್ನುವ ಮನಸ್ಸು ಮೌನವಾಗಿರುತ್ತದೆ. ಇದು ಆನಂದಮಯ ಮನಸ್ಸು ಇಲ್ಲ ಎನ್ನುವ ಸಂಘರ್ಷ ಮಾಡುತ್ತಿರುತ್ತದೆ. ಅನುಮಾನಿಸುತ್ತದೆ, ದುಃಖಿಯಾಗಿರುತ್ತದೆ. ನಿಷ್ಠೆಯು 'ಹೌದು' ಎನ್ನುವ ಮನಸ್ಸಿನಿಂದ ಪ್ರಾರಂಭವಾಗಿ ಇಲ್ಲ ಎನ್ನುವ ಮನಸ್ಸನ್ನು ನಾಶಮಾಡಲು ತೊಡಗುತ್ತದೆ.