ಶುಕ್ರವಾರ, ಸೆಪ್ಟೆಂಬರ್ 14, 2012

ಬದುಕೆತ್ತ ಸಾಗಿದೆ, ನಿಂತು ನೋಡಿ

14
2012
Sep
ಲಿಮಾ, ಪೆರುಇಂದು ರಾತ್ರಿ ಏನು ಮಾತನಾಡೋಣ?
ನಾನು ಮಾತುಗಾರನ ಪಾತ್ರವಹಿಸುತ್ತಿದ್ದೇನೆ ಮತ್ತು ನೀವೆಲ್ಲರೂ ಕೇಳುಗರಾಗಿದ್ದೀರಿ.ನೀವಿಂದು ರಾತ್ರಿ ಏನು ತಿಳಿಯ ಬಯಸುತ್ತೀರೆಂಬುದನ್ನು ನಾನು ತಿಳಿಯುವುದು ಬಹಳ ಚೆನ್ನಾಗಿರುತ್ತದೆ.
ನೀವು ವಿಶಯಗಳನ್ನು ಯೋಚಿಸಬಹುದು.

ನಮ್ಮ ಹೃದಯಕ್ಕೆ ಬಲು ನೆಚ್ಚಿನ ವಿಷಯ ಮಾತನಾಡಲು ನಾವು ಒಂದು ಮಾಮೂಲಿನ(ಅನೌಪಚಾರಿಕವಾದ) ಪರಿಸರದಲ್ಲಿರಬೇಕು. ಔಪಚಾರಿಕ ವಾತಾವರಣವು ವಿವೇಕ ಮತ್ತು ನೈಜತೆಗೆ(ವಿಶ್ವಾಸಾರ್ಹತೆಗೆ) ಒಗ್ಗುವುದಿಲ್ಲ.
ನನಗೆ ಎಲ್ಲವನ್ನೂ ಅನೌಪಚಾರಿಕವಾಗಿ ಮಾಡುವ ಅಭ್ಯಾಸವಿದೆ.

ಹಾಗಾಗಿ ನಾವು ಸುತ್ತ ತಿರುಗಿ ನಮ್ಮ ಮುಂದೂ, ಹಿಂದೂ, ಪಕ್ಕದಲ್ಲೂ ಇರುವ ವ್ಯಕ್ತಿಗಳಿಗೆ ಅಭಿವಂದಿಸುವುದರೊಂದಿಗೆ ಪ್ರಾರಂಭಗೊಳ್ಳೋಣ. ನಿಮ್ಮ ಸುತ್ತಲಿನ ಎಲ್ಲರೊಂದಿಗೂ ಪರಿಚಿತರಾಗಿ.

ನಾನು ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ.
ನೀವು ನಿಜವಾಗಿಯೂ ಆ ವ್ಯಕ್ತಿಯನ್ನು ಅಭಿವಂದಿಸಿದಿರೇ, ಅಥವಾ ಅದನ್ನು ಔಪಚಾರಿಕವಾಗಿ ಮಾಡಿದಿರೇ?
ನೀವು ನಿಮ್ಮ ಪಕ್ಕದ ವ್ಯಕ್ತಿಗೆ ಅದನ್ನು ಹೇಳಬೇಕಾಗಿಲ್ಲ, ’ನಾನು ಔಪಚಾರಿಕತೆಗಷ್ಟೇ ನಿಮಗೆ ಅಭಿವಂದಿಸಿದ್ದು.’ ಎಂದು.
ನೀವು ನಿಮ್ಮನ್ನೇ ಕೇಳಿಕೊಳ್ಳಬೇಕು, ನೀವು ನಜವಾಗಿಯೂ ಆ ವ್ಯಕ್ತಿಗೆ ಅಭಿವಂದಿಸಿದಿರೇ?

ನಿಮಗೆ ಗೊತ್ತೇ, ನೀವು ವಿಮಾನದಿಂದ ಇಳಿಯುವಾಗ, ಗಗನ ಸಖಿಯರು ’ನಿಮ್ಮ ದಿನ ಚೆನ್ನಾಗಿರಲಿ’ ಎಂದು ನಿಮಗೆ ಹಾರೈಸುತ್ತಾರೆ, ಆದರೆ ಅವರಲ್ಲಿ ಆ ಭಾವ ಅಥವಾ ನಿಜವಾದ ಇಚ್ಛೆ ಇರುವುದಿಲ್ಲ. ಅದು ಕೇವಲ ಬಾಯಿ ಮಾತಾಗಿದೆ.
ಆದರೆ ನಿಮಗೆ ನಿಮ್ಮ ತಾಯಿ, ಅಥವಾ ತಂಗಿ, ಅಥವಾ ಆತ್ಮೀಯ ಸ್ನೇಹಿತರಿಂದ ಅದೇ ಮಾತುಗಳು ಬಂದರೆ ಅದರಲ್ಲಿ ಕೆಲವು ಕಂಪನಗಳು ಕೂಡಿರುತ್ತವೆ.
ಆದ್ದರಿಂದ ನಾವು ನಮ್ಮ ಕಂಪನಗಳಿಂದ ಇನ್ನೂ ಹೆಚ್ಚನ್ನು ತಿಳಿಸುತ್ತೇವೆ.

ಯಾರಾದರೂ ನಿಮಗೆ ಪ್ರೀತಿಯ ಬಗ್ಗೆ ಎರಡು ಘಂಟೆಗಳ ಕಾಲ ಭಾಷಣ ನೀಡಬಹುದು, ಆದರೆ ಒಂದು ಮಗು ಅಥವಾ ನಾಯಿಯು ನಿಮಗೆ ಕಂಪನಗಳಿಂದ ತಿಳಿಸುವುದನ್ನು ಅದು ತಿಳಿಸುವುದಿಲ್ಲ.
ಜನರು ಖಿನ್ನರಾಗಿರುವಂಥ ಸ್ಥಳಕ್ಕೆ ನೀವು ಹೋದಾಗ, ವಿನಾ ಕಾರಣ ನೀವೂ ಖಿನ್ನರಾಗಿರುವುದನ್ನು ನೀವು ಕಾಣುತ್ತೀರಿ.ಹಾಗೆಯೇ, ಜನರು ಆನಂದದಿಂದ ಇರುವಂಥ ಸ್ಥಳಕ್ಕೆ ನೀವು ಹೋದರೆ ನಿಮ್ಮೊಳಗೇ ಆನಂದ ತುಂಬಿಬರುವುದನ್ನು ನೀವು ಅನುಭವಿಸುತ್ತೀರಿ.

ಈ ಸಂಪೂರ್ಣ ಜಗತ್ತು ಕೇವಲ ಕಂಪನಗಳಿಂದ ಕೂಡಿದೆ, ಅಲೆಯ ಮೇಲೆ ಅಲೆ.
ನಮ್ಮ ಮನಸ್ಸು ಕಂಪನಗಳು, ನಮ್ಮ ಶರೀರವು ಪೂರ್ತಿಯಾಗಿ ಕಂಪನಗಳದ್ದು, ಆಲೋಚನೆಗಳು ಕಂಪನಗಳು ಮತ್ತು ನಮ್ಮೆಲ್ಲಾ ಭಾವನೆಗಳು ಕಂಪನಗಳು.ಆದರೆ ನಾವು ನಮ್ಮ ಕಂಪನಗಳನ್ನು ಸಂಸ್ಕರಿಸಲು, ನಮ್ಮ ಧನಾತ್ಮಕತೆಯನ್ನು ಅಭಿವೃದ್ದಿಸಲು ಏನೂ ಮಾಡುವುದಿಲ್ಲ. ಅಲ್ಲವೇ?!
ಅಂಥ ಒಂದು ಕ್ರಿಯೆ, ಯಾವುದರಿಂದ ನಿಮ್ಮ ಕಂಪನಗಳು ಆನಂದಮಯ, ಧನಾತ್ಮಕ ಮತ್ತು ಶಾಂತಿಯುತವಾಗುವುದೋ, ಅದು ಧ್ಯಾನ.
ಇದು ಪ್ರಾಣಾಯಾಮ ಮತ್ತು ಧ್ಯಾನಗಳಿಂದ ಬಹಳ ವೇಗವಾಗಿ ನೆರವೇರುತ್ತದೆ.

ಸಾಮಾನ್ಯವಾಗಿ ಧ್ಯಾನ ಎಂದಾಗ, ನೀವು ಎಲ್ಲವನ್ನೂ ಬಿಟ್ಟು ಹಿಮಾಲಯಕ್ಕೆ ಹೋಗಬೇಕಾಗುತ್ತದೆ ಎಂದು ಯೋಚಿಸುತ್ತೀರಿ; ಅಲ್ಲ, ಅದು ಹಾಗಲ್ಲ.ನೀವು ಅದನ್ನು ನಿಮ್ಮ ಮನೆಯಲ್ಲೇ ಅನುಭವಿಸಬಹುದು.
ಮತ್ತೆ ಧ್ಯಾನದ ಪ್ರಯೋಜನಗಳೇನು?ನಾವೇಕೆ ಧ್ಯಾನ ಮಾಡಬೇಕು?ನಾನು ಆಗ ಹೇಳಿದಂತೆ, ನಮ್ಮ ಕಂಪನಗಳು ಧನಾತ್ಮಕವಾಗುತ್ತವೆ.

ಕೆಲವೊಮ್ಮೆ ನೀವು ಯಾರನ್ನಾದರೂ ಭೇಟಿಯಾದಾಗ ವಿಕರ್ಶಣೆ ಅಹವಾ ಅಸಹನೆಯನ್ನು ಅನುಭವಿಸುತ್ತೀರಿ ಮತ್ತು ನೀವು ಅವರೊಂದಿಗೆ ಮಾತನಾಡ ಬಯಸುವುದಿಲ್ಲ. ನೀವು ಇದನ್ನು ಅನುಭವಿಸಿದ್ದೀರೇ?
ಮತ್ತೆ ಕೆಲವರನ್ನು ನೀವು ಭೇಟಿಯಾದಾಗ, ನೀವು ಅವರೊಂದಿಗೆ ಮಾತನಾಡಲು ಮತ್ತು ಒಳ್ಳೆಯ ಸಂಬಂಧವಿರಿಸಲು ಬಯಸುತ್ತೀರಿ.ಇದೂ ಕೂಡ ಕಂಪನಗಳೇ.

ಅದೇ ರೀತಿ ನಿಮಗೆ ಕೆಲವು ಆಲೋಚನೆಗಳು ಬರುತ್ತವೆ, ಅವು ಪರಿಪೂರ್ಣವಾಗಿ ಸರಿಯಾಗಿರುತ್ತವೆ.ಮತ್ತೆ ಉಳಿದ ಸಲ, ನಿಮಗೆ ಸಂಪೂರ್ಣವಾಗಿ ತಪ್ಪಾದ ಆಲೋಚನೆಗಳು ಬರುತ್ತವೆ.ಹಾಗಾಗುವುದಿಲ್ಲವೇ?
ಇದು ನಾವು ಕತ್ತಲಲ್ಲಿ ನಮ್ಮ ಸ್ವಂತ ಚೈತನ್ಯದ ಅರಿವಿಲ್ಲದೇ ನಡೆಯುತ್ತಿರುವಂತೆ.ನೀವು ಚೈತನ್ಯವನ್ನು ಅರಿತರೆ, ಬಹಳ ಪರಿವರ್ತನೆಗಳಾಗಿ ನಿಮ್ಮ ಜೀವನ ಬಹಳ ಸಂತೋಷದಿಂದ ಕೂಡಿರುತ್ತದೆ.ನಮ್ಮ ಆರೋಗ್ಯ ಇನ್ನೂ ಚೆನ್ನಾಗಿರುತ್ತದೆ, ಜನರೊಂದಿಗೆ ನಮ್ಮ ಸಂಬಂಧಗಳು ಇನ್ನೂ ಚೆನ್ನಾಗಿರುತ್ತದೆ.
ಜೀವನದಲ್ಲಿ ಅಹಿಂಸಾತ್ಮಕ ಪ್ರವೃತ್ತಿಗಳು ಹೇಗೆ ಕುಂದುತ್ತವೆ ಎಂಬುದನ್ನು ನೀವು ಜನರಿಂದ ಕೇಳಿರಬಹುದು.ಮತ್ತೆ ಬಹಳ ಮುಖ್ಯವಾಗಿ, ನಮ್ಮ ಆಕಾಂಕ್ಷೆಗಳು ಪೂರ್ಣಗೊಳ್ಳುತ್ತವೆ.
ನಾಲ್ಕು ವಿಧದ ಜನರಿದ್ದಾರೆ.
ಕೆಲವರಿಗೆ ಆಸೆಗಳಿವೆ, ಅವರು ಮತ್ತೆ ಮತ್ತೆ ಹಂಬಲಿಸುತ್ತಾರೆ ಆದರೆ ಯಾವುದೂ ನೆರವೇರುವುದಿಲ್ಲ.
ಮತ್ತೆ ಕೆಲವರು ತಮ್ಮ ಆಸೆಗಳನ್ನು ನೆರವೇರಿಸಲು ಬಹಳ ಕಷ್ಟಪಟ್ಟು ದುಡಿಯುತ್ತಾರೆ, ಹಾಗೂ ಅದು ಬಹಳ ಸಮಯದ ನಂತರ ನೆರವೇರುತ್ತದೆ.
ಮತ್ತೆ ಮೂರನೆಯ ರೀತಿಯ ಜನರು ಇಚ್ಚಿಸುತ್ತಾರೆ ಮತ್ತು ಅಂತೆಯೇ ಅದು ಕೂಡಲೇ ನೆರವೇರುತ್ತದೆ, ಬಹಳ ಕಷ್ಟಕರ ಪರಿಶ್ರಮವಿಲ್ಲದೇ.
ಮತ್ತೆ ನಾಲ್ಕನೆಯ ರೀತಿಯ ಜನರಿಗೆ ಏನೆನ್ನೂ ಇಚ್ಚಿಸುವ ಅಗತ್ಯವೂ ಇಲ್ಲ, ಆಸೆಗಳುಂಟಾಗುವ ಮೊದಲೇ ಎಲ್ಲವೂ ಅಲ್ಲಿ ಆಗಲೇ ಸಿದ್ಧವಿರುತ್ತದೆ.
ನೀವು ಯಾವ ಪಂಕ್ತಿಯಲ್ಲಿ ಇರಲು ಬಯಸುತ್ತೀರಿ?ನಾಲ್ಕನೆಯದರಲ್ಲೇ?

ಹೌದು, ಅಲ್ಲಿರುವುದು ಅತ್ಯಂತ ಭಾಗ್ಯಶಾಲಿಗಳು.ಅದು ಈ ರೀತಿಯಾಗಿರುತ್ತದೆ- ನಿಮಗಿನ್ನೂ ಬಾಯಾರಿಕೆಯಾಗಲಿಲ್ಲ, ಹಾಗೂ ಆಗಲೇ ಅಲ್ಲಿ ನೀರಿದೆ.

ಭಾರತದಲ್ಲಿ ಒಂದು ಹೀಗೊಂದು ನಾಣ್ಣುಡಿಯಿದೆ, ’ನಿಮಗೆ ಹಲ್ಲಿದ್ದಾಗ ಶೇಂಗಾ ಸಿಗಲಿಲ್ಲ, ಮತ್ತೆ ಶೇಂಗಾ ಸಿಕ್ಕಾಗ ನಿಮಗೆ ಹಲ್ಲಿರಲಿಲ್ಲ.’

ಭಳ ಜನರು ಈ ಪರಿಸ್ಥಿತಿಯಲ್ಲಿದ್ದಾರೆ.ಅವರು ಜೀವನ ಪೂರ್ತಿ ಬಹಳ ಕಷ್ಟಪಟ್ಟು ದುಡಿದು, ಪೂರ್ಣ ಸಂಪಾದನೆ ಮಾಡಿ ಅದನ್ನು ಬ್ಯಾಂಕ್.ನಲ್ಲಿ ಇಟ್ಟು ಮತ್ತೆ ಸಾವನ್ನಪ್ಪುತ್ತಾಎ. ನಂತರ ಮಕ್ಕಳು ಪೋಷಕರ ಹಣಕ್ಕಾಗಿ ಜಗಳವಾಡುತ್ತಾರೆ.
ಜಗತ್ತಿನಲ್ಲಿ ೭೦% ನ್ಯಾಯಾಲಯ-ದಾವೆಗಳು ವಾರಸುದಾರಿಕೆಗೆ ಸಂಬಂಧಿಸಿವೆ.
ಈಗ ನೋಡಿ, ಯಾರೂ ತಾವು ಸಂಪದಿಸಿದ ಹಣಕ್ಕಾಗಿ ಜಗಳವಾದುವುದಿಲ್ಲ. ಹಾಗಾಗಿ, ನೀವೇನು ಮಾಡಿದ್ದೀರೆಂದರೆ, ನೀವು ಹಣ ಗಳಿಸಿದ್ದೀರಿ, ಅದನ್ನು ಬ್ಯಾಂಕ್.ನಲ್ಲಿ ಇಟ್ಟಿದ್ದೀರಿ ಮತ್ತು ನಿಮ್ಮ ಮಕ್ಕಳು ತಮ್ಮೊಳಗೇ ಆ ಹಣಕ್ಕಾಗಿ ಜಗಳವಾಡುವಂತೆ ಮಾಡಿದ್ದೀರಿ. ಇದು ಮಾಡಲು ಬುದ್ಧಿವಂತಿಕೆಯ ಕೆಲಸವೇ?

ನಾವು ನಮ್ಮ ಅರ್ಧದಷ್ಟು ಆರೋಗ್ಯವನ್ನು ಹಣ ಸಂಪಾದಿಸಲಿಕ್ಕಾಗಿ ವ್ಯಯಿಸುತ್ತೇವೆ, ಹಾಗೂ ನಂತರ ಆ ಆರೋಗ್ಯವನ್ನು ಮರಳಿ ಪಡೆಯಲು ನಮ್ಮ ಅರ್ಧದಷ್ಟು ಸಂಪಾದನೆಯನ್ನು ವ್ಯಯಿಸುತ್ತೇವೆ.
ಇದು ಅಷ್ಟೇನು ಜಾಣತನವಲ್ಲ! ಆರ್ಥಿಕವಾಗಿ ಒಪ್ಪವಾದುದಲ್ಲ.

ಜೀವನ ಎತ್ತ ಸಾಗುತ್ತಿದೆ ಎಂದುದನ್ನು ನಾವು ತಿಳಿದುಕೊಳ್ಳಬೇಕಾಗಿದೆ.
ಒಬ್ಬ ವಿವೇಕಿ ಮೂರ್ಖನ ಕಥೆಯೊಂದಿದೆ!
ಒಬ್ಬ ವಿವೇಕಿ ಮೂರ್ಖ ಕತ್ತೆ ಮೇಲೆ ಕುಳಿತು ಅದನ್ನು ಓಡಿಸುತ್ತಿದ್ದ. ಅದು ಅದೇ ದಾರಿಯಲ್ಲಿ ಮತ್ತೆ ಮತ್ತೆ ಬಹಳ ಸಲ ಸುತ್ತಿತು.ಅದಕ್ಕೆ ಯಾರೋ ಈ ಮಹೋದಯನನ್ನು ಕೇಳಿದರು, ’ನೀವು ಹಲವು ಬಾರಿ ಮೇಲೆ ಮತ್ತೆ ಕೆಳಗೆ ಹೋಗುತ್ತಿರುವುದನ್ನು ನೋಡಿದೆ, ನಿಮಗೆ ಎಲ್ಲಿ ಹೋಗಬೇಕಾಗಿದೆ?’
ಅವನು ಉತ್ತರಿಸಿದ, ’ನನಗೆ ಗೊತ್ತಿಲ್ಲ, ಈ ಕತ್ತೆಯನ್ನು ಕೇಳಿ!’

ಬಹಳಷ್ಟು ಸಲ ನಮ್ಮ ಜೀವನವೂ ಹಾಗೆಯೇ ಇರುತ್ತದೆ. ನಾವು ಕೆಲಸ ಮಾಡುತ್ತಲೇ ಇರುತ್ತೇವೆ, ಚಟುವಟಿಕೆಗಳಲ್ಲಿ ಮತ್ತೆ ಮತ್ತೆ ತೊಡಗಿರುತ್ತೇವೆ- ಉದ್ದೇಶವೇನು ಎಂಬ ಅರಿವಿಲ್ಲದೇ! ಈ ಪ್ರಕೃತಿಯು ನಮಗೆ ಕೊಟ್ಟಿರುವಂಥದ್ದೆಲ್ಲವನ್ನೂ ಆನಂದದಿಂದ ಅನುಭವಿಸದೇ.

ನೋಡಿ ನಿಮ್ಮ ಮನಸ್ಸು ಕಹಿಯಾಗಿದ್ದಾಗ, ನೀವು ಜಗತ್ತಿನಲ್ಲೆಲ್ಲೂ ಸಂತೋಷವನ್ನು ಪಡೆಯಲಾಗುವುದಿಲ್ಲ. ಮನಸ್ಸು ಸಿಹಿಯಾಗಿದ್ದಾಗ, ನೀವು ಎಲ್ಲೆಲ್ಲೂ ಸಿಹಿತನವನ್ನು ಕಾಣುತ್ತೀರಿ.
ಹಾಗಾಗಿ ಧ್ಯಾನವೆಂದರೆ ನಮ್ಮ ಅಂತರಾಳದಲ್ಲಿ ಇರುವ ಸಿಹಿತನವನ್ನು ಕಂಡುಹಿಡಿಯುವುದೇ ಆಗಿದೆ.ನೀವು ಅದನ್ನು ಪಡೆದಾಗ, ನಿಮಗೆ ಏನು ಮಾಡಬೇಕೆನ್ನಿಸುತ್ತದೆ ಗೊತ್ತಾ?ನೀವು ಅದನ್ನು ಎಲ್ಲರಿಗೂ ಕೊಡ ಬಯಸುತ್ತೀರಿ.

ಜನರು ನನ್ನನ್ನು ಕೇಳುತ್ತಾರೆ, "ನಿಮ್ಮ ಸ್ಫೂರ್ತಿಯೇನು?ನಿಮಗೇನು ಸಿಗುತ್ತದೆ?ನೀವು ಯಾಕಾಗಿ ಜಗತ್ತಿನ ಸುತ್ತಲೂ ಈ ಎಲ್ಲಾ ಸ್ಥಳಗಳಿಗೆ ಯಾವತ್ತೂ ಓಡಾಡುತ್ತಿರುತ್ತೀರಿ?’
ನಾನು ಅವರಿಗೆ ಒಂದು ಪ್ರಶ್ನೆ ಕೇಳಿದೆ, ’ನೀವೊಂದು ಬಹಳ ಒಳ್ಳೆಯ ಸಿನೆಮಾ ನೋಡಿದಿರಿ ಅಂದುಕೊಳ್ಳಿ, ಆಗ ಏನು ಮಾಡುತ್ತೀರಿ?ನೀವು ನಿಮ್ಮ ಕೋಣೆಯಲ್ಲಿ ಸುಮ್ಮನೆ ಕೂರುತ್ತೀರಾ?ಅಥವಾ ಫೋನ್ ಎತ್ತಿ ಸ್ನೇಹಿತರೆಲ್ಲರಿಗೆ ಕರೆ ಮಾಡಿ ಹೇಳುತ್ತೀರಾ, ’ಓ, ಇದೊಂದು ಬಹಳ ಒಳ್ಳೆಯ ಸಿನೆಮಾ, ನೀವು ಹೋಗಿ ಈ ಸಿನೆಮಾ ನೋಡಲೇಬೇಕು.’ ಈಗ, ಹಾಗೆ ಮಾಡುವುದರಿಂದ ನಿಮಗೇನು ಸಿಗುತ್ತದೆ?ಸಿನೆಮಾ ನಿರ್ದೇಶಕರು ನಿಮಗೇನಾದರೂ ಮಧ್ಯಸ್ತಿಕೆ ನೀಡುತ್ತಾರೆಯೇ?ಅಥವಾ ನಟರು ನಿಮಗೆ ಹಣ ಕೊಡುತ್ತಾರೆಯೇ?ಆ ಎಲ್ಲಾ ಫೋನ್ ಕರೆಗಳನ್ನು ಮಾಡಿ ನಿಮಗೇನು ಸಿಗುತ್ತದೆ?ಆನಂದದ ಸ್ವಭಾವೇ ಹಂಚಿಕೆಯಾಗಿರುವುದರಿಂದ ನೀವು ಹಾಗೆ ಮಾಡುತ್ತೀರಿ.

ಆನಂದದ ಸ್ವಭಾವವೆಂದರೆ ಹಂಚಿಕೊಳ್ಳುವುದು.
ಎರಡು ರೀತಿಯ ಆನಂದಗಳಿವೆ, ಒಂದು ಕಸಿದುಕೊಳ್ಳುವ ಆನಂದ. ಮಕ್ಕಳಾಗಿ, ನಾವು ಈ ಪ್ರವೃತ್ತಿಯೊಂದಿಗೆ ಜನಿಸಿದ್ದೆವು. ಒಂದು ಮಗುವನ್ನು ನೀವು ಇಲ್ಲಿ ಬಿಟ್ಟರೆ, ಅದು ಹೋಗಿ ಈ ಹೂವನ್ನು ಕಿತ್ತುಕೊಳ್ಳುತ್ತದೆ, ಈ ಹೊದಿಕೆಯನ್ನು ಸೆಳೆದುಕೊಳ್ಳುತ್ತದೆ, ಆ ಕುರ್ಚಿಯನ್ನು ಎಳೆಯುತ್ತದೆ, ಸುತ್ತಲಿರುವ ಎಲ್ಲವನ್ನೂ ಮೇಲು-ಕೆಳಗೆ ಮಾಡಿ ವಸ್ತುಗಳನ್ನು ಹಿಡಿದಿಟ್ಟುಕೊಳ್ಳುತ್ತದೆ.
ಅದು ಏನನ್ನೂ ಹಿಡಿದಿಟ್ಟುಕೊಳ್ಳುತ್ತದೆ, ಅದು ಚೂರಿಯೂ ಆಗಿರಬಹುದು.ಗೊತ್ತಿಲ್ಲದೇ ಅದು ತನ್ನನೇ ನೋಯಿಸಿಕೊಳ್ಳುತ್ತದೆ, ಚೂರಿಯನ್ನು ಕಸಿದುಕೊಂಡಂಥ ಮಗು.ಆದರೆ ತಾಯಂದಿರು ಬಹಳ ನಿಪುಣೆಯರು, ಚೂರಿಯ ಮೇಲಿನ ಮಗುವಿನ ಹಿಡಿತವನ್ನು ಸಡಿಲಗೊಳಿಸಲು ಅವರು ಮಗುವಿಗೆ ಬೇರೆಯೇನಾದರೂ ಕೊಡುತ್ತಾರೆ.ಹಾಗಾಗಲ್ಲವೇ?
ಮಕ್ಕಳು ಒಳ್ಳೆಯದಲ್ಲವಾದುದನ್ನು ಏನಾದರೂ ಹಿಡಿದುಕೊಂಡರೆ, ನೀವು ಅವರಿಗೆ ಬೇರೆ ಏನಾದರನ್ನು ಕೊಡಬೇಕು.
ಹೀಗೆ, ಇದು ಒಂದು ರೀತಿಯ ಆನಂದ- ಏನನ್ನಾದರೂ ಪಡೆಯುವ, ಹೊಂದುವ ಆನಂದ. ಇದು ಬಾಲಿಷ ಆನಂದ; ಬಾಲಿಷ ಸಂತೋಷ.
ಇನ್ನೊಂದು ಬಗೆಯ ಸಂತೋಷ, ಆನಂದವಿದೆ, ಯಾವುದು ಕೊಡುವುದರಿಂದ ಬರುವುದೋ ಅದು.
ಇಲ್ಲಿರುವ ಹಲವು ಮಹಿಳೆಯರು, ನಿಮ್ಮ ಮನೆಗೆ ನೆಂಟರೋ ಅಥವಾ ಮಕ್ಕಳೋ ಬರಲಿರುವಾಗ ನೀವೇನು ಮಾಡುತ್ತೀರಿ?ನೀವು ಬಗೆ ಬಗೆಯಾದ ಅಡುಗೆ ಮಾಡಿ, ಅದನ್ನು ಅಲಂಕರಿಸಿ ಟೇಬಲ್ ಮೇಲೆ ಸಿದ್ಧಪಡಿಸುತ್ತೀರಿ. ಒಂದು ತಾಯಿಯಾಗಿ ನಿಮ್ಮ ಆನಂದವಿರುವುದು ಕೊಡುವುದರಲ್ಲಿ, ಅಲ್ಲವೇ!
ನಿಮ್ಮ ಅಜ್ಜ, ಅಜ್ಜಿಯರನ್ನು ನೋಡಿ, ಅವರು ಮಕ್ಕಳಿಗೆ ಉಡುಗೊರೆಗಳನ್ನು ಕೊಡಲು ಬಹಳ ಇಷ್ಟಪಡುತ್ತಾರೆ, ಅಲ್ಲವೇ?! ಕೊಡುವುದರಲ್ಲಿ ಒಂದು ಆನಂದವಿದೆ, ಮತ್ತು ಇದೊಂದು ಪಕ್ವವಾದ(ಪ್ರೊಢವಾದ) ಆನಂದ.
ನಾವು ಕೊಡುವುದರಲ್ಲಿರುವ ಆನಂದವನ್ನು ಅರ್ಥಮಾಡಿಕೊಳ್ಳದೇ, ಜೀವನವನ್ನು ಕೇವಲ ಪಡೆದುಕೊಳ್ಳುವ ಆನಂದದಿಂದ ಬದುಕಲಾಗುವುದಿಲ್ಲ.

ಒಮ್ಮೆ ನಿಮಗೆ ಕೊಡುವುದರಿಂದ ಬರುವ ಆನಂದದ ಕಿಂಚಿತ್ ರುಚಿ ತಿಳಿದರೆ, ನೀವು ಜೀವನವನ್ನು ಬಾಳುವುದು ಎಷ್ಟೊಂದು ಅಮೂಲ್ಯವೆಂದು ತಿಳಿಯುತ್ತೀರಿ, ಜೀವನವು ತೃಪ್ತಿದಾಯಕವೆಂದು ತಿಳಿಯುತ್ತೀರಿ.
ಹಾಗಾಗಿ, ಇನ್ನೂ ಹೆಚ್ಚು ಮುಗುಳ್ನಗಿ!

ನಿಮಗೆ ಗೊತ್ತೇ, ಒಂದು ಮಗುವು ದಿನಕ್ಕೆ 400 ಸಲ ಮುಗುಳ್ನಗುತ್ತದೆ, ಒಬ್ಬ ಯುವಕ ಕೇವಲ 17 ಸಲ ಮುಗುಳ್ನಗುತ್ತಾನೆ, ಮತ್ತು ಒಬ್ಬ ಹಿರಿಯ/ಪ್ರಬುದ್ಧ ವಿರಳವಾಗಿ ಮುಗುಳ್ನಗುತ್ತಾನೆ.ಮತ್ತೆ ನೀವು ಒಬ್ಬ ಅಧಿಕಾರಿಯೋ ಅಥವಾ ರಾಜಕಾರಣಿಯೋ ಆದರೆ, ಅದರ ಬಗ್ಗೆ ಮರೆತು ಬಿಡುತ್ತೀರಿ.ನಿಮ್ಮ ಮುಗುಳ್ನಗು ಮಾಯವಾಗುತ್ತದೆ, ದೂರ ಹಾರಿ ಹೋಗುತದೆ.

ಒಂದು ಮುಗುಳ್ನಗು ಎಂದರೆ ಕೃತಕವಾದಂಥದ್ದಲ್ಲ, ಅದು ಒಳಗಿನಿಂದ ಬರಬೇಕು.ಅದು ಕೇವಲ ಒತ್ತಡಗಳು ದೂರವಾದರೆ ಮಾತ್ರ ಸಾಧ್ಯ, ನಾವು ಧ್ಯಾನದಲ್ಲಿ ಆಳ ಹೋದಾಗ ಸಾಧ್ಯ.

ಯಾರಾದರೂ, ’ನಾನು ಧ್ಯಾನ ಮಾಡುತ್ತೇನೆ’ ಎಂದು ಹೇಳಿದರೆ, ಅದರರ್ಥ ಅವರು ಹೆಚ್ಚು ಮುಗುಳ್ನಗುತ್ತಾರೆ ಎಂದು; ಅವರಲ್ಲಿ ಪ್ರಶಾಂತತೆ, ಸಂವೇದನಶೀಲತೆ ಮತ್ತು ಹೃದಯವಂತಿಕೆ ಇದೆ ಎಂದು ಕೂಡ, ಮತ್ತು ಇದು ಆಧ್ಯಾತ್ಮಿಕತೆ.

ಆಧ್ಯಾತ್ಮಿಕತೆ ಎಂದರೆ ಹೃದಯವಂತಿಕೆ, ಸಂವೇದನಶೀಲತೆ, ಸಿಹಿತನ, ಮುಗುಳ್ನಗು; ಇವೆಲ್ಲವುಗಳ ಸಹಯೋಗ.

ಪ್ರ: ಒತ್ತಡಗಳು ಹೊರಗಿನಿಂದ ಬರುತ್ತಿದ್ದರೆ ನಾನೇನು ಮಾಡುವುದು? ಅದು ನನ್ನ ವಶದಲ್ಲಿ ಇಲ್ಲದ ಅಥವಾ ನನ್ನ ಹಿಡಿತವನ್ನು ಮೀರಿದುದಾದರೆ..ನಾನು ಶಾಂತಿಯನ್ನು ಹೇಗೆ ಪಸರಿಸಲಿ?

ಶ್ರೀ ಶ್ರೀ: ಆದ್ದರಿಂದಲೇ ನಾವು ಜನರಿಗೆ ತಮ್ಮ ಒತ್ತಡಗಳನ್ನು ಸಂಭಾಲಿಸುವುದರ ಬಗ್ಗೆ ಶಿಕ್ಷಣ ನೀಡಬೇಕು. ಕುಟುಂಬದಲ್ಲಿ ಒಬ್ಬರ ಆರೋಗ್ಯ ಕೆಟ್ಟರೆ, ಅದು ಪೂರ್ತಿ ಕುಟುಂಬವನ್ನು ಪರಿಣಮಿಸುವುದಿಲ್ಲವೇ?ಹೌದು, ಅದು ಪರಿಣಮಿಸುತ್ತದೆ.ಹಾಗೆಯೇ, ಸಮಾಜದಲ್ಲಿ ಕೆಲವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರೆ, ಸಮಾಜದಲ್ಲಿ ಅಪರಾಧ ಹೆಚ್ಚುತ್ತದೆ.
ಸೆರೆಮನೆಗಳಲ್ಲಿ, ’ಓ, ನಮಗೀಗ ಅಹಿಂಸೆಯಲ್ಲಿ ಇರಲು ಇಷ್ಟವಿಲ್ಲ’ ಎಂದು ಹೇಳುವ ಜನರಿದ್ದಾರೆ, ಆದರೆ ಹೊರಗಡೆ ಇನ್ನೂ ಬಹಳ ಜನರು ಸಮಾಜಕ್ಕೆ ತೊಂದರೆಗಳನ್ನುಂಟು ಮಾಡುವವರಿದ್ದಾರೆ ಮತ್ತು ಆದ್ದರಿಂದಲೇ ನಾವು ಈ ಆಧ್ಯಾತ್ಮಿಕ ಶಿಕ್ಷಣವನ್ನು ಜನರಿಗೆ ನೀಡಬೇಕಾಗಿದೆ.

ನಾವು ಜನರಿಗೆ ಹೇಗೆ ಶಾಂತವಾಗಿರುವುದು, ಅವರ ನೇತ್ಯಾತ್ಮಕ ಭಾವನೆಗಳನ್ನು ಹೇಗೆ ಸಂಭಾಲಿಸುವುದು ಮತ್ತು ಅವರ ಮನಸ್ಸನ್ನು ಹೇಗೆ ಸಂಭಾಲಿಸುವುದು ಎಂಬುದನ್ನು ಕಲಿಸಬೇಕಾಗಿದೆ, ಯಾಕೆಂದರೆ ಮನೆಯಲ್ಲೂ, ಶಾಲೆಯಲ್ಲೂ ಯಾರೂ ನಮಗೆ ಮನಸ್ಸನ್ನು ಹೇಗೆ ಸಂಭಾಲಿಸುವುದು ಎಂದು ಹೇಳಿಕೊಡಲಿಲ್ಲ.
ಹಾಗೆ ಮತ್ತೆ ಸಿಟ್ಟು, ಮತ್ಸರ ಮತ್ತು ದ್ವೇಷ ಇವೆ, ಮತ್ತು ನೀವು ಈ ಭಾವನೆಗಳೊಂದಿಗೆ ಬದುಕಿದಾಗ ನೀವು ಅದನ್ನು ಸಾಧಿಸುತ್ತೀರಿ(ಕಾರ್ಯರೂಪಕ್ಕೆ ತರುತ್ತೀರಿ). ಅದರಿಂದ ಹೇಗೆ ಮುಕ್ತವಾಗುವುದು ಎಂಬುದು ನಿಮಗೆ ತಿಳಿದಿಲ್ಲ. ನೀವು ಅದನ್ನು ಹಿಡಿದಿಟ್ಟುಕೊಳ್ಳುತ್ತೀರಿ ಮತ್ತೆ ಆ ಮನೋಭಾವದಿಂದ ಕಾರ್ಯನಿರ್ವಹಿಸುತ್ತೀರಿ ಮತ್ತೆ ನಂತರ ಪಶ್ಚಾತ್ತಾಪ ಪಡುತ್ತೀರಿ. ಅದೇ ತೊಂದರೆ.
ಈ ಅಭ್ಯಾಸಗಳು ಮತ್ತು ಇಲ್ಲಿರುವ ಈ ಜ್ಞಾನವೇ ಪರಿಹಾರ.