ಬುಧವಾರ, ಜನವರಿ 19, 2011

ಶ್ರೀ ಶ್ರೀ ಯವರೊಡನೆ ಕಾಲಾತೀತ ಸಂಭಾಷಣೆಗಳು

ಜನವರಿ ೧೯, ೨೦೧೧, ಬುಧವಾರ

ಪ್ರಶ್ನೆ : ಇಂದು ಪೂರ್ಷ ಪೂರ್ಣಿಮ. ಇದರೊಡನೆ ಸಂಬಂಧಪಟ್ಟ ಕಥೆಗಳಿವೆಯೇ?
ಶ್ರೀ ಶ್ರೀ : ಈ ಪೂರ್ಷ ಪೂರ್ಣಿಮ ದಕ್ಷಿಣ ಭಾರತದ ಮೊದಲನೆಯ ಫಸಲಿನ ಪೂರ್ಣಿಮ. ಇಂದು ತಾವು ಬೆಳೆದದ್ದೆನ್ನೆಲ್ಲಾ ಜನರು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಾರೆ, ಕೊಡುತ್ತಾರೆ ಮತ್ತು ತೆಗೆದುಕೊಳ್ಳುತ್ತಾರೆ. ಇದನ್ನು "ಕಾಡಿನ ಹುಣ್ಣಿಮೆ" ಎಂದೂ ಕರೆಯುತ್ತಾರೆ. ಉತ್ತರದಲ್ಲಿ ಹಿಮಪಾತವಾಗುತ್ತಿರುವಾಗ ಎಲ್ಲಾ ಎಲೆಗಳೂ ಉದುರಿ ಹೊಗಿರುತ್ತವೆ. ಆದ್ದರಿಂದ ಪೂರ್ಣ ಚಂದ್ರ ಸುಲಭವಾಗಿ ಕಾಣಿಸುತ್ತಾನೆ. ಕಾಡನ್ನು, ಪ್ರಕೃತಿಯನ್ನು, ತರಕಾರಿಗಳನ್ನು ಸನ್ಮಾನಿಸುವುದು....

ಪ್ರಶ್ನೆ : ಮೋಹವನ್ನು , ಪ್ರೇಮಕ್ಕೆ ಹೇಗೆ ಪರಿವರ್ತಿಸುವುದು?
ಶ್ರೀ ಶ್ರೀ : ಮೋಹ ಎಂದರೆ, "ಮತ್ತೆ ಮರಳಿ ಏನನ್ನೋ ನಾನು ಪಡೆಯಬೇಕು". ಪ್ರೇಮವೆಂದರೆ, "ನಾನು ನಿನಗೆ ಹೇಗೆ ಸಹಾಯಕವಾಗಲಿ?"

ಪ್ರಶ್ನೆ : ಧರ್ಮ ಏನೆಂದು ಹೇಗೆ ತಿಳಿಯುವುದು?
ಶ್ರೀ ಶ್ರೀ : ನಿಮ್ಮ ಅಂತರ್ಭಾಗದಿಂದ. "ಇದು ಸರಿ. ನಾನು ಮಾಡಬೇಕಾಗಿರುವುದು ಇದನ್ನೇ" ಎಂದು ನಿಮಗನಿಸುತ್ತದೆ.

ಪ್ರಶ್ನೆ : ನನ್ನ ಮೇಲೆ ಹೆಚ್ಚು ಗಮನ ಸೆಳೆದುಕೊಳ್ಳಬೇಕೆಂಬ ಬಯಕೆಯಿಂದ ನಾನು ಹೇಗೆ ಹೊರಬರಲಿ?
ಶ್ರೀ ಶ್ರೀ : ಮುಂದಿನ ಪ್ರಶ್ನೆ...

ಪ್ರಶ್ನೆ : ನಾನು ನಿಮಗೆ ಬಹಳ ಸನ್ನಿಹಿತವಾಗಿದ್ದೇನೆ ಎಂದು ಅನ್ನಿಸುತ್ತದೆ. ಆದರೆ ನಿಮಗೆ ಹತ್ತಿರವಾದಷ್ಟೂ ನನಗೆ ಅತೀ ಕ್ಲಿಷ್ಟಕರ ಪರಿಸ್ಥಿತಿಗಳು ಎದುರಾಗುತ್ತಿವೆ. ಇದು ಗುರುಮಂಡಲಕ್ಕೆ ಸಂಬಂಧ ಪಟ್ಟಿದೆಯೇ?
ಶ್ರೀ ಶ್ರೀ : ವಿರಹವು ನಿಮ್ಮೊಳಗಿನ ಸೃಜನಶೀಲತೆಯನ್ನು ಹೊರತರುತ್ತದೆ. ಅನೇಕ ಕವನಗಳು ಹೊರಬರಲು ಸಾಧ್ಯ. ವಿರಹವು ರಾಧಾಶಕ್ತಿ...ಕೃಷ್ಣ ಪ್ರೇಮ. ಬಹಳ ಭಾಗ್ಯಶಾಲಿಗಳಾಗಿ.

ಪ್ರಶ್ನೆ : ತೀವ್ರ ಪ್ರೇಮವನ್ನು ಅನುಭವಿಸಲು ಶಿಸ್ತನ್ನು ಬಿಡಬಹುದೇ?
ಶ್ರೀ ಶ್ರೀ : ಅವೆರಡೂ ಒಟ್ಟಿಗೇ ಹೊಗುತ್ತವೆ. ಶಿಸ್ತನ್ನು ಪಾಲಿಸಲೇಬೇಕು. ಇದರ ಬಗ್ಗೆಯೆಲ್ಲಾ ನಾವು "ನಾರದ ಭಕ್ತಿ ಸೂತ್ರ"ಗಳಲ್ಲಿ ಮಾತನಾಡಿದ್ದೇವೆ.

ಪ್ರಶ್ನೆ : ಕೃಷ್ಣನನ್ನು ಏಕೆ ಪೂರ್ಣಾವತಾರ ಎಂದು ಕರೆಯುತ್ತಾರೆ?
ಶ್ರೀ ಶ್ರೀ : ಕೃಷ್ಣನ ಹಲವಾರು ಅಂಶಗಳು ಪೂರ್ಣವಾಗಿದೆ. ಇದರ ಬಗ್ಗೆ ನಾವು "ಕೃಷ್ಣ - ಆನಂದದ ಪರಮಾವಧಿ"ಯಲ್ಲಿ ಮಾತನಾಡಿದ್ದೇವೆ.

ಪ್ರಶ್ನೆ : ಆತ್ಮವು ಮತ್ತೆ ಇದೇ ಪ್ರಪಂಚಕ್ಕೆ ಬರುತ್ತದೆಯೇ ಅಥವಾ ಬೇರೆ ಲೋಕಗಳಲ್ಲೂ ಜನಿಸಬಹುದೇ?
ಶ್ರೀ ಶ್ರೀ : ಎಲ್ಲಾ ಸಾಧ್ಯತೆಗಳೂ ಇವೆ.

ಪ್ರಶ್ನೆ : ನನ್ನ ಜೀವನದಲ್ಲಿ ಪವಾಡಗಳು ಆಗದೆ ಏಕೆ ನಿಂತು ಹೋಗಿವೆ?
ಶ್ರೀ ಶ್ರೀ : ನಿಮಗೆ ಸ್ವಲ್ಪ ವಿಪರೀತವನ್ನು ಅನುಭವಿಸುವ ಅವಕಾಶವನ್ನಿಟ್ಟು ಅಲ್ಪ ನಿದ್ರೆ ಮಾಡುತ್ತಿದ್ದೆಯಷ್ಟೆ!

ಪ್ರಶ್ನೆ : ಅಪ್ರಾಮಾಣಿಕವಾದ ಹೊಗಳಿಕೆಯು, ಪ್ರಿಯವಾದ ಸುಳ್ಳಿನಂತೆಯೇ ಅಲ್ಲವೇ?
ಶ್ರೀ ಶ್ರೀ : ನಿಮ್ಮ ಹೊಗಳಿಕೆಯೇಕೆ ಪ್ರಾಮಣಿಕವಾಗಿರಬೇಕು? ನಿಮ್ಮ ಹೊಗಳಿಕೆಯು ಒಂದು ಆಶೀರ್ವಾದವಾಗಬಹುದು. ಆಶೀರ್ವಾದಗಳು ಭವಿಷ್ಯಕ್ಕಾಗಿ ಮಾತ್ರ. ಆದ್ದರಿಂದ ಆಶೀರ್ವಾದದ ರೀತಿಯಲ್ಲಿ ಒಬ್ಬರನ್ನು ನೀವು ಹೊಗಳಬಹುದು. ಯಾರಾದರೂ ಜಿಪುಣರಾಗಿದ್ದರೆ, ನೀವು, "ಆಹಾ ನೀವೆಷ್ಟು ಉದಾರಿಗಳು!" ಎನ್ನಬಹುದು. ಈ ಹೊಗಳಿಕೆಯು ಅವರ ಭವಿಷ್ಯದಲ್ಲಿ ಆಶೀರ್ವಾದವಾಗುತ್ತದೆ.

ಪ್ರಶ್ನೆ : ನೈತಿಕವಾಗಿದ್ದುಕೊಂಡೂ ಪ್ರಾಯೊಗಿಕವಾಗಿಯೂ ಇರಬಹುದೇ?
ಶ್ರೀ ಶ್ರೀ : ಹೌದು. ನಿಮ್ಮ ಯುಕ್ತಿಯು ಊಟದಲ್ಲಿರುವ ಉಪ್ಪಿನಷ್ಟಿರಬೇಕು - ನಿಮ್ಮ ವ್ಯಾಪಾರದಲ್ಲಿ ಸ್ವಲ್ಪ ಉಪ್ಪಿದ್ದರೆ ಪರವಾಗಿಲ್ಲ. ಬಹಳ ಉಪ್ಪಾದರೆ, ಉಪ್ಪಿನಲ್ಲಿ ಊಟವಿರುವಂತೆ ಆಗಿಬಿಡುತ್ತದೆ.

ಪ್ರಶ್ನೆ : ನಾನು ಐಐಟಿಯಲ್ಲಿ ಪ್ರೊಫ಼ೆಸರಾಗಿದ್ದೇನೆ. ಇತರ ಪ್ರೊಫ಼ೆಸರ್ ಗಳಿಗೆ ಆಧ್ಯಾತ್ಮಿಕತೆಯೆಂದರೆ ತೀವ್ರ ಅಸಡ್ಡೆ. ಇಂಥವರನ್ನು ಪಥದಲ್ಲಿ ಹೇಗೆ ತರಲಿ?
ಶ್ರೀ ಶ್ರೀ : ಅವರ ಅಸಡ್ಡೆತನವನ್ನು ಗುರುತಿಸಬೇಡಿ. ನೀವೇನು ಮಾಡಬೇಕೋ ಅದನ್ನು ಮಾಡುತ್ತಲಿರಿ. ಬಹಳ ಪ್ರಯತ್ನಪಟ್ಟು ಶ್ರಮವಹಿಸಿ ಇತರರನ್ನು ಒಪ್ಪಿಸಲು ಹೋಗಬೇಡಿ. ನಿಮ್ಮ ನಿರ್ಧಾರದಲ್ಲಿ ನೀವು ಧೃಢವಾಗಿರಿ , ಪ್ರತಿಯೊಂದು ಆತ್ಮಕ್ಕೂ ಆಧ್ಯಾತ್ಮಿಕತೆಯ ಅವಶ್ಯಕತೆಯಿದೆ. ಅವರು ಅದನ್ನು ಬೇಡವೆನ್ನುತ್ತಿದ್ದರೆ ಅದು ಮೇಲಿನ ಹಂತದಲ್ಲಿ ಮಾತ್ರ.

ಪ್ರಶ್ನೆ : ನಿಮ್ಮ ಬಳಿ ಇನ್ನೂ ಬರದಿರುವ ಜನರ ಬಗ್ಗೆಯೇನು? ಅವರು ಹೇಗೆ ಮೋಕ್ಷಮಾರ್ಗಕ್ಕೆ ಬರುತ್ತಾರೆ?
ಶ್ರೀ ಶ್ರೀ : ಅವರೂ ಸ್ವಲ್ಪಸಮಯದ ನಂತರ ಬರುತ್ತಾರೆ.