೭ ನವೆ೦ಬರ್ ೨೦೧೨
ಬೆಂಗಳೂರು, ಭಾರತ

ಶ್ರೀಶ್ರೀರವಿಶಂಕರ್: ಅದು ಆ ಕ್ಷಣದಲ್ಲಿ ಉಂಟಾಗುತ್ತದೆ. ನಾನು ಯಾವ ತಯಾರಿಯನ್ನೂ ಮಾಡುವುದಿಲ್ಲ. ನಾನು ರೆಡಿಮೇಡ್ (ನಗೆ).
ಪ್ರ: ಪಕ್ಷಪಾತಿಯಾಗದೇ ನ್ಯಾಯಪರತೆಯನ್ನು ಹೇಗೆ ನಿಭಾಯಿಸುವುದು? ನಾನು ತಪ್ಪೆಂದೆನಿಸಿದರೆ ಹಿಂದಕ್ಕೆ ಸರಿಯುತ್ತೇನೆ, ಅದರಿಂದ ನನ್ನ ಕ್ಷಮಿಸುವ ಮತ್ತು ಮರೆಯುವ ಸಾಮಥ್ರ್ಯವು ಸೀಮಿತಗೊಳ್ಳುತ್ತದೆ.
ಶ್ರೀಶ್ರೀರವಿಶಂಕರ್: ಕೋಪ ಮಾಡಿಕೊಳ್ಳುವವರೆಲ್ಲರೂ ಹಾಗೆ ಸದಾಚಾರದಿಂದಲೇ ಕೋಪಗೊಳ್ಳುವುದು. ಆದರೆ ಅವರ ನ್ಯಾಯಪರತೆಯ ಕಲ್ಪನೆಯು ತುಂಬಾ ಸೀಮಿತವಾದುದು. ಈ ಪ್ರಪಂಚದಲ್ಲಿ ಎಲ್ಲ ರೀತಿಯ ಆಗು-ಹೋಗುಗಳು ನಡೆಯುತ್ತವೆ, ಅದಕ್ಕೆ ತಾಳ್ಮೆ ಬೇಕು.
ಕೇವಲ ನ್ಯಾಯಪರತೆಯನ್ನು ಬಯಸುವುದು ಮತ್ತು ‘ನಾನು ನ್ಯಾಯಬದ್ಧನಾಗಿರಬೇಕು. ನನಗೆ ಎಲ್ಲರೂ ನ್ಯಾಯಬದ್ಧರಾಗಿರಬೇಕು, ಈಗಲೇ’ ಎಂದರೆ, ಅದು ಸಾಧ್ಯವಿಲ್ಲ.
ಎಲ್ಲರೂ ನ್ಯಾಯಬದ್ಧರಾಗಿರಬೇಕೆಂಬುದು ಸರಿಯೇ, ಆದರೆ ಅವರಿಗೆ ತಪ್ಪು ಮಾಡಲು ಅವಕಾಶ ನೀಡಬೇಕು. ನ್ಯಾಯಬದ್ಧತೆಯೊಂದಿಗೆ ತಾಳ್ಮೆಯಿರಲಿ, ಆಗ ಕೋಪ ಬರುವುದಿಲ್ಲ.
ಇಲ್ಲದ್ದಿದ್ದರೆ, ‘ನಾನು ನೀತಿವಂತ’ ಎನ್ನುವುದು, ‘ನನಗೆ ಹೀಗಿರಬೇಕು’ ಎಂದು ತಗಾದೆ ಮಾಡಿದರೆ, ಆಗ ಕೋಪ ಉಕ್ಕುವುದು, ಕೋಪ ಬಂದರೆ, ನೀವು ನಿಮ್ಮ ನ್ಯಾಯಪರತೆಯನ್ನು ಕಳೆದುಕೊಳ್ಳುವಿರಿ. ನೀವು ಸಿಟ್ಟಾದರೆ, ಬೇರೆಯವರು ತಪ್ಪು ಮಾಡಿದಷ್ಟೇ ಕೆಟ್ಟದಾಗಿರುತ್ತದೆ.
ಒಂದು ವೇಳೆ ಈ ಸ್ಥಳವನ್ನು ಯಾರೂ ಸ್ವಚ್ಛಗೊಳಿಸದ್ದಿದ್ದರೆ, ಇದು ಕೊಳಕಾಗಿರುತ್ತದೆ. ನೀವು ಇಲ್ಲಿಗೆ ಬಂದು ಸಿಟ್ಟಾಗುವಿರಿ. ಈಗ ಆ ವ್ಯಕ್ತಿಯು ಸ್ವಚ್ಚಗೊಳಿಸದೇ ತಪ್ಪು ಮಾಡಿರುವುದು ಸರಿ. ಆದರೆ ನೀವು ಅದಕ್ಕೆ ಸಿಟ್ಟಾಗಿ, ಕೂಗುವುದು, ಕಿರುಚುವುದು ಮಾಡಿದರೆ ಅದು ಇನ್ನೊಂದು ತಪ್ಪು.
ಎರಡು ತಪ್ಪುಗಳು ಸೇರಿ ಒಂದು ತಪ್ಪನ್ನು ಸರಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಯಾರಾದರೂ ತಪ್ಪು ಮಾಡಿದರೆ, ಸಮಾಧಾನವಾಗಿ ಒಂದು, ಎರಡು, ಮೂರು ಬಾರಿ ಹೇಳಿ ತಿದ್ದಿ.
ಶಿಕ್ಷಕರಾಗಲು ನಿಮಗೆ ತುಂಬಾ ತಾಳ್ಮೆ ಬೇಕು. ಈಗಿನ ಕಾಲದ ಶಾಲೆಯ ಉಪಾಧ್ಯಾಯರಿಗೆ ಇದೊಂದು ಸವಾಲಾಗಿದೆ. ಹತ್ತು ಸಾರಿ ಹೇಳಿದರೂ ಮಕ್ಕಳು ಅವರ ಮಾತನ್ನು ಕೇಳುವುದಿಲ್ಲ. ಮಕ್ಕಳಿಗೆ ಶ್ರದ್ಧೆಯ ಅಭಾವದ ರೋಗಲಕ್ಷಣವಿದೆ. ಮಕ್ಕಳು ಗಮನ ಕೊಡುವುದಿಲ್ಲ. ಆದ್ದರಿಂದ ತಾಳ್ಮೆ ಅಗತ್ಯ.
ತಾಳ್ಮೆ ಒಂದು ಸದ್ಗುಣ. ಆರು ಸಂಪತ್ತುಗಳಲ್ಲಿ ಒಂದು: ಶಮ (ಸಹನೆ ಅಥವಾ ಶಾಂತ ಮನಸ್ಸು), ದಮ (ಸ್ವ-ನಿಗ್ರಹ ಅಥವಾ ನಿಗ್ರಹ), ಉಪರತಿ (ಲೌಕಿಕ ವಸ್ತುಗಳಿಂದ ಸ್ವಯಂ ಹಿಂದೆಗೆಯುವುದು), ತಿತೀಕ್ಷೆ (ಸಹಿಸುವ ಶಕ್ತಿ), ಶ್ರದ್ಧೆ (ನಂಬಿಕೆ) ಮತ್ತು ಸಮಾಧಾನ (ಸಮಚಿತ್ತತೆ ಅಥವಾ ಏಕಾಗ್ರಚಿತ್ತತೆ). ಸಮಾಧಾನವೆಂದರೆ ತೃಪ್ತಿ ಮತ್ತು ತಾಳ್ಮೆಯನ್ನು ಹೊಂದಿರುವುದು. ಅದು ಅತ್ಯವಶ್ಯಕ.
ಪ್ರ: ಗುರುದೇವ, ಜೀವಿಸಲು ನಮಗಿಂತ ದೊಡ್ಡದಾದ ಗುರಿಯನ್ನು ಹೇಗೆ ಕಂಡುಹಿಡಿಯುವುದು? ಶೋಧನಾ ಮಾರ್ಗವಿದೆಯೇ ಅಥವಾ ಆ ಗುರಿಯೇ ನಮ್ಮನ್ನು ಹುಡುಕುವುದೇ?
ಶ್ರೀಶ್ರೀರವಿಶಂಕರ್: ನೀವೇನಾಗಬೇಕೆಂದು ಬಯಸುವಿರೋ ಮತ್ತು ನೀವೇನು ಮಾಡಬೇಕೆಂದಿರುವಿರೋ, ಅಂತಹ ಗುರಿ, ದೃಷ್ಠಿಕೋನ ನಿಮಗಿರಬೇಕು.
ಒಂದು ನಿಮ್ಮ ಸ್ವಂತ ಗುರಿ: ಜೀವನದಲ್ಲಿ ನಾನು ಇಂತಿಂತಹದನ್ನು ಪಡೆಯಬೇಕು.
ಇನ್ನೊಂದು ಪ್ರಪಂಚದ ಪ್ರತಿ ನಿಮಗಿರಬೇಕಾದ ಗುರಿ: ನಾನು ಏನ್ನನ್ನು ಕೊಡಲಿಚ್ಛಿಸುತ್ತೇನೆ?
ಸಾಮಾನ್ಯವಾಗಿ, ಗುರಿಯ ಬಗ್ಗೆ ಯೋಚಿಸಿದಾಗ, ಅದರಿಂದೇನು ಪಡೆಯಬಹುದೆಂದು ಆಲೋಚಿಸುವಿರಿ. ಆದ್ದರಿಂದಲೇ ಎರಡು ಗುರಿಯನ್ನು ಹೊಂದಿರಬೇಕೆಂದು ನಾನು ಹೇಳುವುದು: ಒಂದು ನಿಮಗೇನು ಬೇಕೋ ಅದು, ಇನ್ನೊಂದು ನೀವೇನ್ನನ್ನು ಕೊಡಲಿಚ್ಛಿಸುತ್ತೀರೋ ಅದು. ಇವೆರಡೂ ಒಂದೇ ಆಗುವುದಾದರೆ ಇನ್ನೂ ಉತ್ತಮ.
ಪ್ರ: ಗುರುದೇವ, ನಮ್ಮ ಆಹಾರದ ಪದ್ಧತಿಯನ್ನು ಬದಲಾಯಿಸಿದರೆ ಕೋಪವನ್ನು ನಿಯಂತ್ರಿಸಬಹುದೇ? ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ ಹೆಚ್ಚು ಕೋಪ ಬರುವುದೆಂದು ಹೇಳುತ್ತಾರೆ.
ಶ್ರೀಶ್ರೀರವಿಶಂಕರ್: ನೀವು ಪ್ರಯತ್ನ ಮಾಡಿ ನೋಡಿ. ಒಂದು ವಾರ ನೀವು ಉಪ್ಪು-ಖಾರವಿಲ್ಲದ ಆಹಾರ ಸೇವಿಸಿ ನೋಡಿ. ಅದು ಸಾಧ್ಯ. ಅದರೆ ಕೆಲವರು ಖಾರದ ಪುಡಿ ಹಾಕಿದ ಮಸಾಲೆಯುಕ್ತ ಆಹಾರವನ್ನು ಸೇವಿಸಿದರೂ ಕೋಪಗೊಳ್ಳುವುದಿಲ್ಲ. ಅದೂ ಸಾಧ್ಯ.