ಶನಿವಾರ, ಡಿಸೆಂಬರ್ 10, 2011

ಪ್ರತಿ ವಸ್ತುವಿನಲ್ಲೂ ದೈವತ್ವವಿದೆ

10 ಡಿಸೆಂಬರ್ 2011

ಪ್ರ: ಗುರೂಜಿ, ಈ ಭೂಮಿಯಲ್ಲಿ ನಮ್ಮ ಇರುವಿಕೆ ಒಂದು ಕನಸೆಂದಾಗ ಧ್ಯಾನ, ಸಾಧನೆ ಮತ್ತು ಸತ್ಸಂಗ ಸಹ ಕನಸಿನ ಚಟುವಟಿಕೆಗಳೆನಿಸುತ್ತವೆ. ಅವು ನಮ್ಮನ್ನು ಕನಸಿನಿಂದ ಎಚ್ಚರಿಸಲು ಹೇಗೆ ಸಾಧ್ಯ?

ಶ್ರೀ ಶ್ರೀ ರವಿಶಂಕರ್:
ನೀವು ಗಾಢ ನಿದ್ರೆಯಲ್ಲಿರುವಾಗ ನಿಮ್ಮನ್ನು ಕನಸಿನಲ್ಲಿ ಒಂದು ಹಾವು ಬಂದು ಕಚ್ಚುತ್ತದೆ. ಆಗ ನೀವು ಕಿರುಚುತ್ತ ನಿದ್ದೆಯಿಂದ ಏಳುತ್ತೀರ! ಅದೇ ಪ್ರಕಾರ ನಿಮ್ಮ ಕನಸಿನ ಇನ್ನಷ್ಟು ಸಂಗತಿಗಳು ನಿದ್ದೆಯಿ0ದ ಎದ್ದೇಳಲು ಪ್ರೇರಕವಾಗಬಹುದು.

ಹಿಂದಿಯಲ್ಲಿ "ನೇಕಿ ಕರ್ ಔರ್ ಕುಂಯೇ ಮೇ ದಾಲ್"ಎ0ಬ ಗಾದೆಯಿದೆ. ಅಂದರೆ, ಒಳ್ಳೆಯ ಕೆಲಸ ಮಾಡಿ ಅವುಗಳನ್ನು ಕನಸೆಂದುಕೊಂಡು ಮರೆತು ಬಿಡಿ. ಅವುಗಳನ್ನು ನಾವು ಮಾಡಿದ್ದೆ0ಬ ಭಾವನೆಯನ್ನು ಹೊರಚೆಲ್ಲಿ ಧ್ಯಾನಾಸಕ್ತರಾಗುವ ಮೂಲಕ ಕನಸಿನಿಂದ ಎಚ್ಚರಗೊಳ್ಳುತ್ತೀರಿ.

ಸಾಧನೆಯಲ್ಲಿ ಎರಡು ಗುಣಗಳಿವೆ: ನಿಶ್ರೇಯ ಹಾಗು ಅಭ್ಯುದಯ. ಒಂದು ಜಾಗೃತರಾಗುವುದು ಹಾಗು ಇನ್ನೊಂದು ನೆಮ್ಮದಿಯಾಗಿರೋದು.

ಸಾಧನೆ ಸರ್ವರ ಅಪೇಕ್ಷೆಯ ಸಮಾಧಾನ ನೀಡುತ್ತದೆ ಹಾಗು ಸಮಾಧಾನದಿಂದ ಮನಸ್ಸು ಮುಕ್ತವಾಗುತ್ತದೆ. ನಾವು ಕನಸಿನಿಂದ ಎಚ್ಚೆತ್ತು ಹೊರಬರುತ್ತೇವೆ. ಸಾಧನೆಯ ಮೂಲಕ ಸಮಾಧಾನವಾದ ಬದುಕನ್ನೂ, ಮುಕ್ತ ಮನಸ್ಸನ್ನೂ ಹೊ0ದಲು ಸಾಧ್ಯ.

ಪ್ರ: ಗುರೂಜಿ, ಪುರುಷಾರ್ಥದ ಬಗ್ಗೆ ಹೇಳಿ. ಅದು ನಾವು ಮಾಡುವ ಸಾಧನೆ, ಸೇವೆ ಮತ್ತು ಸತ್ಸಂಗ - ಇವೇನಾ? ಅಥವಾ ಅದು ಬೇರೇನಾ?

ಶ್ರೀ ಶ್ರೀ ರವಿಶಂಕರ್:
ಪುರುಷಾರ್ಥವೆಂದರೆ ಧರ್ಮ, ಅರ್ಥ, ಕಾಮ ಹಾಗು ಮೋಕ್ಷದ ಪ್ರಾಪ್ತಿ. ಧರ್ಮ ಅಂದರೆ ಕರ್ತವ್ಯ ನಿರ್ವಹಣೆ; ಕಾಮ ಅಂದರೆ ಇಷ್ಟಾರ್ಥ ಪೂರೈಕೆ; ಅರ್ಥ ಅಂದರೆ ಧನ ಸಂಪಾದನೆ; ಮೋಕ್ಷವೆಂದರೆ ಈ ಎಲ್ಲದರಿಂದ ಬಿಡುಗಡೆ. ಈ ನಾಲ್ಕೂ ಅತ್ಯವಶ್ಯಕ. ಅದೇ ಪುರುಷಾರ್ಥ.

ಪ್ರ: ಗುರೂಜಿ, ಬುದ್ಧಿಶಕ್ತಿ, ಸ್ಮರಣೆ ಹಾಗು ಅಹಂ ಪು0ಖಾನುಪು0ಖವಾಗಿ ಬದಲಾಗುತ್ತವೆಯೆನ್ನುತ್ತಾರೆ. ಎಲ್ಲವೂ ಕ್ಷಣ-ಕ್ಷಣಕ್ಕೂ ಬದಲಾಗುತ್ತಿರುವ ಪ್ರಕ್ರಿಯೆಯ ಮಧ್ಯೆ ನಾವು ಎಲ್ಲಿಯೂ ಗೋಚರಿಸುವುದಿಲ್ಲ. ಹೀಗಿರುವಲ್ಲಿ ಮುಕ್ತರು ಯಾರು, ಬ0ಧಿತರು ಯಾರೆ0ದು ಹೇಗೆ ಗುರ್ತಿಸುವುದು?

ಶ್ರೀ ಶ್ರೀ ರವಿಶಂಕರ್:
ಹೌದು, ಎಲ್ಲವೂ ಬದಲಾಗುತ್ತಿರುತ್ತವೆ. ಆದರೆ ಈ ಬದಲಾವಣೆಯ ಅರಿವು ಯಾರಿಗಿದೆ? ಕೇವಲ ಆತ್ಮಸಾಕ್ಷಿಗೆ ಅರಿವಾಗಬಲ್ಲ ಪ್ರಕ್ರಿಯೆಯಿದು.

ನನ್ನಿ0ದಾದ ಬದಲಾವಣೆಗಳಿವು ಎ0ದು ಬೆನ್ನು ತಟ್ಟಿಕೊಳ್ಳುವವರು ಬಂಧಿತರು. ಸುತ್ತಮುತ್ತ ಬದಲಾವಣೆಗಳು ಪ್ರಕೃತಿಯ ಪ್ರೇರಣೆಯಿ0ದ ಆಗಿವೆ, ನಾನು ಬದಲಾಗಿಲ್ಲ ಎಂಬ ಅರಿವು0ಟಾದಾಗ, ನಾವು ಮುಕ್ತರು.

ಪ್ರ: ಗುರೂಜಿ, ಚಂದ್ರಗ್ರಹಣದ ವೈಶಿಷ್ಟ್ಯ ಹಾಗು ಆ ಸ0ದರ್ಭದ ಸುತ್ತ ಇರುವ ಕಟ್ಟುಪಾಡುಗಳ ಬಗ್ಗೆ ನಿಮ್ಮ ಅಭಿಪ್ರಾಯ ಹೇಳ್ತೀರಾ? ಆ ದಿನ ಚಂದ್ರನನ್ನು ನೋಡಬಾರದು, ಆಹಾರವನ್ನು ಗ್ರಹಣದ ಕೆಲವು ಗಂಟೆಗಳ ಮುಂಚೆ ತಿನ್ನಬೇಕು, ಇಲ್ಲದಿದ್ದರೆ ಅಜೀರ್ಣ ಆಗುತ್ತದೆ - ಅಂತಾ ಹೇಳ್ತಾರಲ್ಲ. ಇದರ ಬಗ್ಗೆ ಸ್ವಲ್ಪ ಹೇಳ್ತೀರಾ?

ಶ್ರೀ ಶ್ರೀ ರವಿಶಂಕರ್:
ಚಂದ್ರಗ್ರಹಣ ನೋಡಬಹುದು - ಅದರಿಂದ ಏನು ತೊಂದರೆಯಿಲ್ಲ, ಅದೊಂದು ಬಾಹ್ಯಾಕಾಶದ ಸ್ವಾಭಾವಿಕ ಪ್ರಕೃತಿ. ಆದರೆ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಬೇಡಿ. ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನ ಕಿರಣಗಳು ಕಣ್ಣಿಗೆ ಹಾನಿ ಮಾಡುವದರಿಂದ ವಿಶೇಷ ಕನ್ನಡಕ ಹಾಕಿಕೊಂಡು ನೋಡಬೇಕು.

ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗಿದ್ದರೆ ಗ್ರಹಣದ ಸಮಯದಲ್ಲಿ ಧ್ಯಾನ ಮಾಡಲು ಅನುಕೂಲವಾಗುತ್ತದೆ ಎಂಬ ದೃಷ್ಟಿಯಿ0ದ ನಮ್ಮ ಹಿರಿಯರು, ಗ್ರಹಣ ಮತ್ತು ಆಹಾರ ಸೇವನೆಯ ನಡುವೆ ಕೆಲವು ಗಂಟೆಗಳ ಅ0ತರವಿರಬೇಕು ಎ0ದಿದ್ದರು. ಗ್ರಹಣದ ಸಮಯದಲ್ಲಿ ಮಂತ್ರಪಠಣ, ಧ್ಯಾನ ಹಾಗು ಪ್ರಾರ್ಥನೆ ಮಾಡುವುದರ ಫಲ ಸಾಮಾನ್ಯ ಸಮಯಕ್ಕಿಂತ ನೂರುಪಟ್ಟು ಜಾಸ್ತಿ ಇರುತ್ತದೆ ಅಂತ ಹೇಳ್ತಾರೆ.

ಸೂರ್ಯ, ಚಂದ್ರ ಹಾಗು ಭೂಮಿ ಒಂದೇ ರೇಖೆಯಲ್ಲಿ ಇರುವಾಗ ಬಾಹ್ಯಾಕಾಶದಿ0ದ ಪಸರಿಸುವ ವಿಕಿರಣಗಳು, ಆ ಸಮಯದಲ್ಲಿ ನೀವು ಮಾಡುವ ಸಾಧನೆಯನ್ನು ಹಲವು ಪಟ್ಟು ಪ್ರಭಾವಿತಗೊಳಿಸುತ್ತವೆ.

ಆದ್ದರಿಂದ ಗ್ರಹಣದ ಸಮಯದಲ್ಲಿ ನೀವು ಧ್ಯಾನದ ಬಳಿಕ, "ಓಂ ನಮಃ ಶಿವಾಯ" ಅಥವಾ "ಓಂ ನಮೋ ನಾರಾಯಣ" ಪಠಿಸಿ. ನೀವು 108 ಸಲ ಜಪ ಮಾಡಿದರೆ, ಹತ್ತು ಸಾವಿರ ಸಲ ಜಪ ಮಾಡಿದ ಪ್ರಭಾವ ಇರುತ್ತದೆ. ಚಂದ್ರಗ್ರಹಣ ಸಾಧಕರಿಗೆ ಬಹಳ ಶುಭ ಘಳಿಗೆಯೇ ವಿನಾ ಅಶುಭವಲ್ಲ. ಭೋಗ ಮತ್ತಿತರ ವಿನೋದ-ವಿಹಾರPಗಳಿಗಷ್ಟೇ ಅದು ಅಶುಭ ಘಳಿಗೆ.

ಪ್ರ: ಗುರೂಜಿ, ತುಳಸಿ ಗಿಡದ ಅಸ್ತಿತ್ವ ಭೂಮಿಯಲ್ಲಿ ಉ0ಟಾದದ್ದು ಏಕೆ, ಹೇಗೆ? ಕೃಷ್ಣಪರಮಾತ್ಮನಿಗೆ ಇದು ಅತ್ಯ0ತ ಪ್ರಿಯವೆನ್ನುವುದೇಕೆ?

ಶ್ರೀ ಶ್ರೀ ರವಿಶಂಕರ್:
ಭೂಮಿಗೆ ಬರಲಿದ್ದ ನಮಗೆ ಗಿಡಗಳು ಅತ್ಯಗತ್ಯವಾಗಿದ್ದವು. ಆ ಸಲುವಾಗಿ ನಮಗಿ0ತ ಮೊದಲು ಗಿಡಗಳ ಅಸ್ತಿತ್ವ ಉ0ಟಾಯಿತು.

ಜೀವನಕ್ಕೆ ಲಾಭದಾಯಕವಾದ, ಪ್ರಾಣಶಕ್ತಿಯನ್ನು ವರ್ಧಿಸುವ ಯಾವುದೇ ಪದಾರ್ಥವನ್ನು ನಮ್ಮ ದೇಶದಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ತುಳಸಿ ಹಾಗು ನಿಂಬೆಹಣ್ಣು ಬಹಳ ಪವಿತ್ರ ಅಂತ ಹೇಳ್ತೀವಿ. ಬೇವಿನ ಮರ ಕೂಡ ಪವಿತ್ರ ಅಂತ ಪರಿಗಣಿಸುತ್ತೇವೆ. ಸೊಂಕುರೋಗ ಶಮನಕ್ಕೆ ಬೇವು ಹಾಗು ನಿಂಬೆಹಣ್ಣು ಬಹಳ ಪರಿಣಾಮಕಾರಿ. ಇದರೆಲ್ಲಿ ದೇವಿ ಇರುತ್ತಾಳೆ ಅಂತ ಹೇಳ್ತಾರೆ.

ವಿಷ್ಣು ನೆಲೆಸಿರುವ ಎದೆಗೆ ತುಳಸಿ ಶ್ರೇಷ್ಟ. ಎದೆ - ರಕ್ಷಣೆ ಮತ್ತು ಸಂರಕ್ಷಣೆಗಾಗಿ, ಅದಕ್ಕೆ ವಿಷ್ಣು ಹಾಗು ತುಳಸಿ ಮದುವೆ ಆಗಿರುತ್ತಾರೆ ಅಂತ ಹೇಳುತ್ತಾರೆ. ಅಂದರೆ, ಇವರಿಬ್ಬರೂ ಬಹಳ ಹತ್ತಿರದವರು ಎಂದರ್ಥ. ನಿಮಗೆ ಕೆಮ್ಮಿದ್ದಾಗ ತುಳಸಿರಸ ಕುಡಿದರೆ ತುಂಬಾ ಒಳ್ಳೆಯದು.

ಹಾಗೆಯೇ, ಬಿಲ್ವಪತ್ರೆ ಮನಸ್ಸಿಗೆ ಹಾಗು ನರಮಂಡಲಕ್ಕೆ ಬಹಳ ಒಳ್ಳೆಯದು; ಮನಸ್ಸಿಗೆ ಪ್ರಸನ್ನತೆ ನೀಡುತ್ತವೆ. ಹೊಟ್ಟೆಯ ವ್ಯಾಧಿಗಳಿಗೂ ಬಿಲ್ವಪತ್ರೆ ತೆಗೆದುಕೊಳ್ಳೋಕೆ ಹೇಳುತ್ತಾರೆ.

ಆದ್ದರಿಂದ, ಯಾವುದು ಪವಿತ್ರ ಅಂತ ಪರಿಗಣಿಸುತ್ತೇವೋ, ಅವು ನಮ್ಮ ದೇಹದ ಅಂಗಾಂಗಗಳಿಗೆ ಉಪಯುಕ್ತವಾಗಿರುತ್ತವೆ.

ಪ್ರ: ಗುರೂಜಿ, ಬೇರೆಯವರ ಸೌಂದರ್ಯ ನೋಡುವುದು ಸರಿಯಾ? ಇತರರ ಸೌಂದರ್ಯ ನೋಡುವುದು ಕಾಮವಲ್ಲವೇ?

ಶ್ರೀ ಶ್ರೀ ರವಿಶಂಕರ್:
ನೀವು ಪ್ರಪಂಚದಲ್ಲಿ ಸುಂದರ ವಸ್ತುಗಳನ್ನು ನೋಡುವಾಗ ಅವು ನಿಮಗೆ ದೈವತ್ವನ್ನು ಜ್ಞಾಪಿಸಬೇಕು. ಆಗ ಸ್ವತಃ ಸೌಂದರ್ಯವೇ ಒಂದು ಪ್ರಾರ್ಥನೆ ಆಗುತ್ತದೆ. ಇದೇ ಸೌಂದರ್ಯಲಹರಿ.

ಆದಿಶಂಕರಾಚಾರ್ಯರು "ಸೌಂದರ್ಯಲಹರಿ" ಎಂಬ ಸುಂದರವಾದ ಸಂಸ್ಕೃತ ಶ್ಲೋಕಗಳ ಮಾಲಿಕೆಯನ್ನ್ನು ರಚಿಸಿದ್ದಾರೆ. ಆ ಮಾಲಿಕೆಯಲ್ಲಿ ತಮ್ಮ ಕಣ್ಣಿಗೆ ಕಾಣುವ ಎಲ್ಲದರಲ್ಲಿಯೂ ದೈವತ್ವ ಗೋಚರಿಸುತ್ತದೆ ಎಂದು ಅವರು ನಿರೂಪಿಸಿದ್ದಾರೆ. ಸೌಂದರ್ಯದ ಅಲೆಗಳ ಮಧ್ಯೆ ನೆಲೆಸಿದ ಅವರ ವ್ಯಕ್ತಿತ್ವಕ್ಕೆ ಸಕಲವೂ ದೈವವೇ ಎ0ಬ ಭಾವನೆಯಿದ್ದುದು ಸ್ಪಷ್ಟ. ಸೌ0ದರ್ಯವನ್ನು ಕ0ಡು ಅದು ತನಗೆ ಬೇಕೆಂದು ಬಯಸುವುದು ಕಾಮ.

ಪ್ರ: ಗುರೂಜಿ, ಈಗಿನ ಯುವ ಪೀಳಿಗೆಗೆ ಏನು ಸಂದೇಶ ಹೇಳಲು ಬಯಸುತ್ತೀರಾ?

ಶ್ರೀ ಶ್ರೀ ರವಿಶಂಕರ್:
ಈ ದೇಶ ನಿಮ್ಮದು. ಎಚ್ಚೆತ್ತುಕೊಳ್ಳಿ! ಈಗಿನಿಂದಲೇ ನೋಡಿಕೊಳ್ಳಲು ಪ್ರಾರಂಭಿಸಿ!

ಪ್ರ: ಗುರೂಜಿ, ಒಬ್ಬ ವ್ಯವಸ್ಥಾಪಕನಿಗೆ ಯಾವುದು ಪ್ರಮುಖವಾಗಬೇಕು, ತಮ್ಮ ಕೈಕೆಳಗಿನವರ ಅಭಿವೃದ್ಧಿಯೋ, ಅಥವಾ ತಮ್ಮ ಕೈಕೆಳಗಿನವರು ಯಾವುದೇ ಮನಸ್ಥಿತಿಯಲ್ಲಿದ್ದರೂ ಚಿ0ತೆಯಿಲ್ಲ ಕೆಲಸ ಮುಗಿಸಿಕೊಟ್ಟರೆ ಸಾಕೆಂಬುದೋ?

ಶ್ರೀ ಶ್ರೀ ರವಿಶಂಕರ್:
ಕೆಲಸ ಮಾಡಿಸಿಕೊಳ್ಳುವುದು! ಮನಸ್ಸಿನ ಸ್ಥಿತಿ ಬದಲಾಗುತ್ತಿರುತ್ತದೆ, ತಕ್ಕಡಿಯಲ್ಲಿ ಕಪ್ಪೆಯ ತೂಕ ನೋಡುವ ಹಾಗೆ. ಕಪ್ಪೆ ಒಂದು ಕಡೆ ನಿಲ್ಲದೆ ಹಾರುತ್ತಿರುವದರಿಂದ ಅದರ ತೂಕ ನೋಡಲು ಅಸಾಧ್ಯ.

ಪ್ರ: ತನ್ನನ್ನು ತಾನು ಅರ್ಥ ಮಾಡಿಕೊಳ್ಳುವುದು ಅಂದರೆ ಏನು? ತನ್ನನ್ನು ತಾನು ಅರ್ಥ ಮಾಡಿಕೊ0ಡ ವ್ಯಕ್ತಿಗೆ ಪುನರ್ಜನ್ಮ ಇರುವುದಿಲ್ಲವಾ?

ಶ್ರೀ ಶ್ರೀ ರವಿಶಂಕರ್:
ಹೌದು, ಅದು ಪೂರ್ಣ ಸತ್ಯ ಹಾಗು ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರ. ಬಹಳ ಸಮಯ ಜನ ಇರಬೇಕಾದ ಜಾಗದಲ್ಲಿ ಇರುವುದಿಲ್ಲ. ಬಟ್ಟೆ ಅಂಗಡಿಗೆ ಹೋಗಿ ಕಾಫಿû-ಚಹಾ ಕೇಳುತ್ತಾರೆ. ಆದರೆ ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರ, ಸ್ವಲ್ಪ ತಾಳ್ಮೆಯಿರಲಿ.

ಪ್ರ: ಒಬ್ಬ ಮನುಷ್ಯ ತನ್ನ ಜೀವನದ ದೈನಂದಿನ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದಾಗ್ಯೂ, ಆತನಲ್ಲಿ ಮನುಷ್ಯತ್ವ, ಅನುಕಂಪ ಹಾಗು ಪ್ತಾಮಾಣಿಕತೆಯ ಅಭಾವವಿದ್ದರೆ ಏನು ಮಾಡುವುದು, ಅಂಥ ಬದುಕಿನ ಮೌಲ್ಯವಾದರೂ ಏನು?

ಶ್ರೀ ಶ್ರೀ ರವಿಶಂಕರ್:
ಸೊನ್ನೆ, ಅದಕ್ಕೆ ಬೆಲೆಯಿಲ್ಲ್ಲ. ಈ ಮೌಲ್ಯಗಳಿಲ್ಲದವ ಯಾವುದೇ ಉಪಯುಕ್ತ ಕಾರ್ಯವನ್ನೆಸಗಲಾರ.

ಕೇಳಿ, ನಮ್ಮ ದೇಶದಲ್ಲಿ ನಮಗೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗು ಸಮಾಧಿ - ಇವೆಲ್ಲವನ್ನು ಕಲಿಸಿರುತ್ತಾರೆ.

ಇವೇ ಜೀವನದ ಮೂಲಾಧಾರಗಳು, ಬದುಕಿನ ಅ ಆ ಇ ಈ.

ಬೇರೊಬ್ಬ ಮು0ದುವರಿಯಲು ಏನು ಮಾಡುತ್ತಿದ್ದಾನೆ0ದು ಯೋಚಿಸುವುದಕ್ಕಿ0ತ ನೀವು ಮು0ದುವರಿಯಲು ಏನು ಮಾಡಬೇಕೆ0ಬುದರ ಕಡೆಗೆ ಗಮನ ಹರಿಸುವುದು ಒಳ್ಳೆಯದು.

ಅನೇಕರು ಅರಿಯದೆ ತಪ್ಪು ಮಾಡುತ್ತಾರೆ, ಅ0ಥವರಿಗೆ ತಿದ್ದಿಕೊಳ್ಳಲು ನಿಮ್ಮ ಕೈಲಾದ ಸಹಾಯ ಮಾಡಿ. ಸಹಕಾರ ಹಾಗು ಸೇವೆಯ ಕರ್ತವ್ಯವನ್ನು ಮು0ದುವರಿಸಿ.

ನಿ0ದನೆಯ ಸರಣಿಗೆ ಅ0ತ್ಯ ಇಲ್ಲ. ಕೃಷ್ಣ, ರಾಮ, ಬುದ್ಧರನ್ನು ದೂಷಿಸಲೂ ನೀವು ಹಿ0ಜರಿಯುವುದಿಲ್ಲ. ಇನ್ನೊಬರಲ್ಲಿ ತಪ್ಪು ಹುಡುಕುವ ನೀವೇ ತಪ್ಪುಗಳಿ0ದ ಸುತ್ತುವರಿಯಲ್ಪಟ್ಟಿರುತ್ತೀರಿ.

ನಿಮ್ಮ ಗಮನ ಕೇ0ದ್ರೀಕೃತವಾಗಿರಬೇಕಾದ್ದು ನಿಮ್ಮ ಸುತ್ತಮುತ್ತ ಇರುವ ಪ್ರತಿ ವ್ಯಕ್ತಿ ಹೊ0ದಿರತಕ್ಕ ಒಳ್ಳೆಯ ಗುಣ, ದೈವತ್ವದ ಕಡೆಗೆ. ಸ0ಪರ್ಕದಲ್ಲಿ ಮೌಲ್ಯವೃದ್ಧಿಯಾಗಬೇಕು, ಇನ್ನೊಬ್ಬರ ಒಳ್ಳೆಯತನ ಬೆಳಕಿಗೆ ಬರಲು ನೀವೇನು ಮಾಡಲು ಸಾಧ್ಯವೆ0ದು ಯೋಚಿಸಬೇಕು.

ಇಲ್ಲವಾದರೆ ನಕಾರಾತ್ಮಕ ಧೋರಣೆ ತಳೆಯುವ ನಾವು ಈ ಪ್ರಪಂಚದಲ್ಲಿ ಬರೀ ಕಳ್ಳಕಾಕರು ತು0ಬಿರುವರೆ0ದು ತಪ್ಪಾಗಿ ತೀರ್ಮಾನಿಸುತ್ತೇವೆ.

ಪ್ರಪಂಚದಲ್ಲಿರುವ ಜನ ಮುಗ್ಧರು, ಪ್ರೀತಿಪಾತ್ರರು ಎ0ದು ಭಾವಿಸಿ. ಕೆಟ್ಟವರು ಕೆಲವರಿರಬಹುದಾದ ಪ್ರಪ0ಚದಲ್ಲಿ ಮುಗ್ಧ ಮನುಷ್ಯರ ಸಂಖ್ಯೆಯೇ ಹೆಚ್ಚು. ಎಲ್ಲರಲ್ಲೂ ಒಳ್ಳೆಯತನವನ್ನು ಗುರ್ತಿಸಿ ಸಾಧ್ಯವಾದಾಗ ಸಹಾಯ ಮಾಡಿ.

ಪ್ರ: ಆತ್ಮ ಯಾವುದು, ಪರಮಾತ್ಮನಾರು?

ಶ್ರೀ ಶ್ರೀ ರವಿಶಂಕರ್:
ನಮ್ಮೊಳಗಿನ ಆತ್ಮ ಚಡಪಡಿಸುವ0ಥದ್ದು ಹಾಗು ಆ ಆತ್ಮಕ್ಕೆ ಪ್ರಶಾ0ತತೆಯನ್ನು ಪ್ರದಾನಿಸುವವನು ಪರಮಾತ್ಮ. ಸಾಗರದಲ್ಲಿ ಅಲೆಗಳ ಓಲಾಟ ಹೇಗೋ ಹಾಗೆ.

ಅಲೆಗಳ ಬಡಿತ ನಿ0ತಾಗ ಸಾಗರ ಪ್ರಶಾಂತವಾಗಿರುತ್ತದೆ. ಹಾಗೆಯೇ, ನಮ್ಮ ಮನದಲ್ಲಿ ಅಲ್ಲೋಲಕಲ್ಲೋಲವಿಲ್ಲದೆ ನಾವು ಸಮಾಧಾನವಾಗಿರುವಾಗ, ಪರಮಾತ್ಮನ ಕೃಪೆ ನಮ್ಮ ಮೇಲಿರುತ್ತದೆ.

ಪ್ರ: ನಾವೇಕೆ ನಿಮ್ಮ ಕುಟೀರಕ್ಕೆ ಬಂದು ನೇರವಾಗಿ ನಿಮ್ಮನ್ನು ನೋಡಲಾಗದು? ಕುಟೀರದ ಪ್ರವೇಶದ್ವಾರವನ್ನು ಸುತ್ತುವರಿದ ಸರಪಳಿಗಳು ನಮ್ಮ ಚಡಪಡಿಕೆಗೆ ಕಾರಣವಾಗಿವೆಯಲ್ಲವೆ.

ಶ್ರೀ ಶ್ರೀ ರವಿಶಂಕರ್:
ನನ್ನ ಮನೆಯ ಹಾದಿ ಹಾಗೆಯೇ; ಸ್ವಲ್ಪ ಡೊ0ಕು, ಪ್ರತಿಯೊಬ್ಬರ ಮನಸ್ಸಿನಲ್ಲೂ ಅಷ್ಟಿಷ್ಟು ಕೊ0ಕು ಇರುವ0ತೆ! ಯೋಚನೆ ಮಾಡಬೇಡಿ, ಹಾದಿ ಸ್ವಲ್ಪ ಡೊ0ಕಾಗಿದ್ದರೂ ನೀವು ನಿಮ್ಮ ಗುರಿಯಿರುವ ಎಡೆಗೆ ನೇರವಾಗಿ ತಲುಪುವುದು ಖ0ಡಿತ.

The Art of living
© The Art of Living Foundation