ಸೋಮವಾರ, ಜುಲೈ 15, 2013

ನೀವೋರ್ವ ಉಪಕಾರಿಯೆ?

ಮಾಂಟ್ರಿಯಾಲ್, ಕ್ಯಾನಡಾ
೧೫.೦೭.೧೩

ಪ್ರ: ಪೂಜ್ಯ ಗುರೂಜಿ, ಕಛೇರಿಯ ಕೆಲಸಕ್ಕೆ ಹೋಲಿಸಿದರೆ, ಸೇವೆಯಲ್ಲಿ ಜನರನ್ನು ಶಕ್ತಿಯುತವಾಗಿಸುವಂಥ ಅಂಶ ಏನದು?

ಶ್ರೀ ಶ್ರೀ: ನೋಡಿ ನಾವೇನಾದರೂ ಮಾಡಬೇಕು, ಮತ್ತು ನಾವು ಏನಾದರೂ ಮಾಡುತ್ತಿರುತ್ತೇವೆ. ನಾವು ಏನಾದರೂ ಮಾಡಿದಾಗ, ಅದರಿಂದ ನಮಗಾಗಿ ಏನಾದರೂ ಪಡೆಯಬಯಸುತ್ತೇವೆ. ಈಗ ನೀವು ಏನಾದರೂ ಮಾಡಿ ಅದಕ್ಕೆ ಮರಳಿ ಏನೂ ಬಯಸದೇ ಇದ್ದರೆ, ಆದರೆ ಜೀವನದಲ್ಲಿ ಕೇವಲ ಪ್ರಯೋಜನಕಾರಿಯಾಗಿರ ಬಯಸಿದರೆ, ಅದನ್ನು ಸೇವೆ ಎಂದು ಕರೆಯುವುದು. ಪ್ರತಿಫಲ/ಪುರಸ್ಕಾರ ಬಯಸದೇ ಮಾಡಿದ ಒಂದು ಕ್ರಿಯೆ, ನೀವು ಕೇವಲ ಒಂದು ಕೆಲಸವನ್ನು ಮಾಡುವುದರಿಂದಲೇ ಸಂತುಷ್ಟವಾಗಿರುವುದು, ಯಾವುದು ಇತರರಿಗೆ ಪ್ರಯೋಜನವನ್ನುಂಟು ಮಾಡುವುದೋ, ಅದು ಸೇವೆ.

ನಿಮಗಾಗಿ ಯಾವುದೇ ಪ್ರಯೋಜನವನ್ನು ಬಯಸದೇ ಮಾಡುವ ಒಂದು ಕ್ರಿಯೆ, ಆದರೆ ಬದಲಾಗಿ ನೀವು ಇತರರಿಗೆ ಪ್ರಯೋಜಕವಾಗಿರಲು ಇಚ್ಚಿಸಿರುವುದ್, ಅದು ಸೇವೆ.

ಪ್ರ: ಸಿದ್ಧಿಗಳ ಉದ್ದೇಶವೇನು?

ಶ್ರೀ ಶ್ರೀ: ಸರಿ, ನಿಮಗೇನಾದರೂ ಬೇಕಾಗಿದ್ದರೆ, ಅದರ ಅಗತ್ಯ ಬರುವ ಮೊದಲೇ ಅದು ನಿಮಗೆ ಒದಗಿದರೆ, ಅದನ್ನು ಸಿದ್ಧಿ ಎನ್ನಲಾಗುತ್ತದೆ.

ಉದಾಹರಣೆಗೆ, ನಿಮಗೆ ಮದುವೆಯಾಗುವ ಮನಸ್ಸಿದ್ದು ನಿಮಗೆ ೭೦ ವರ್ಷಗಳಾಗುವ ತನಕ ಯಾರೂ ಸಿಗದಿದ್ದರೆ, ನೀವೇನು ಮಾಡುವುದು? ಅದರ ಅರ್ಥ ಸಿದ್ಧಿಯಿಲ್ಲ ಎಂದು. ನೀವು ಮದುವೆಯಾಗಲು ಇಚ್ಚಿಸುವ ಮೊದಲೇ ನಿಮಗೆ ೧೦ ಜನರು ’ದಯವಿಟ್ಟು ನನ್ನನ್ನು ವರಿಸಿ’ ಎಂದು ಹೇಳುತ್ತಿದ್ದರೆ, ಅದರ ಅರ್ಥ ನಿಮಗೆ ಸಿದ್ಧಿಗಳಿವೆ ಎಂದು.

ಭಾರತದಲ್ಲಿ ಒಂದು ಗಾದೆಯಿದೆ, ನಿಮಗೆ ಹಲ್ಲುಗಳಿದ್ದಾಗ ನಿಮ್ಮ ಬಳಿ ಕಾಯಿಗಳಿರಲಿಲ್ಲ, ಮತ್ತೆ ನಿಮ್ಮ ಬಳಿ ಕಾಯಿಗಳಿದ್ದಾಗ ನಿಮ್ಮ ಹಲ್ಲುಗಳಿರಲಿಲ್ಲ.

ಹಾಗೆ ನಿಮ್ಮ ಹಲ್ಲುಗಳು ಚೆನ್ನಾಗಿದ್ದಾಗ ನಿಮಗೆ ಕಾಯಿಗಳನ್ನು ಪಡೆಯಲಾಗಲಿಲ್ಲ. ನೀವು ಕಾಯಿಗಳನ್ನು ಪಡೆದಾಗ ನಿಮ್ಮ ಹಲ್ಲುಗಳಿರಲಿಲ್ಲ. ಹಾಗೆ ಇದು ಸಿದ್ಧಿಯ ಕೊರತೆ. ನಿಮಗೆ ಬೇಕಾದುದು ನಿಮಗೆ ದೊರಕಿತು, ಆದರೆ ಆಗ ಬಹಳ ತಡವಾಗಿತ್ತು.

ಈಗ, ನಿಮಗೇನಾದರೂ ಬೇಕಾಗಿರುವಾಗ ನಿಮಗೆ ಸಿಕ್ಕಿರುವುದು ನಿಮ್ಮ ಅಗತ್ಯಕ್ಕಿಂತ ಕಮ್ಮಿಯಾಗಿದ್ದರೆ, ಆಗ ಅದೂ ಸಿದ್ಧಿಯಲ್ಲ. ಉದಾಹರಣೆಗೆ, ನಿಮಗೆ ಕ್ಯಾಲಿಫೋರ್ನಿಯಾಗೆ ಹೋಗಬೇಕಾಗಿದೆ ಮತ್ತು ನಿಮಗೆ ೧೫೦೦ ಡಾಲರ್ ಗಳ ಅಗತ್ಯವಿದೆ, ಆದರೆ ನಿಮಗೆ ಕೇವಲ ೧೩೦೦ ಡಾಲರ್ಗಳು ದೊರೆತವು, ಆಗ ಅದು ಸಿದ್ಧಿಯಲ್ಲ. ಹಾಗಾಗೆ, ನಿಮಗೆ ಅಗತ್ಯ ಬರುವ ಮೊದಲು, ನಿಮಗೆ ಅಗತ್ಯವಿರುವುದಕ್ಕಿಂತ ಹೆಚ್ಚು ಬಂದಾಗ, ಅದು ಸಿದ್ಧಿ.

ಅಗತ್ಯಕ್ಕಿಂತ ಹೆಚ್ಚು, ಸಮಯಕ್ಕಿಂತ ಮೊದಲು, ಐಹಿಕ ವಸ್ತು ಲಬ್ಧವಾಗುವುದನು ಸಿದ್ಧಿ ಎನ್ನುತ್ತಾರೆ.

ಅಗತ್ಯಕ್ಕಿಂತ ಹೆಚ್ಚು ಬರುವುದು, ನಿಮ್ಮ ದುರಾಸೆಗಳನ್ನು ಪೂರೈಸಲಿಕ್ಕಾಗಿ ಅಲ್ಲ. ಹಾಗೆ ಅಗತ್ಯಕ್ಕಿಂತ ಹೆಚ್ಚು ಮತ್ತು ಸಮಯಕ್ಕಿಂತ ಮೊದಲು.

ಪ್ರ: ಗುರೂಜಿ, ಕೇವಲ ನಿಮ್ಮ ಉಪಸ್ಥಿತಿಯಲ್ಲಿರುವುದು ಬಹಳ ವಿಸ್ಮಯಕಾರಕವಾಗಿದೆ. ನಮಗೆ ಈ ಎಲ್ಲಾ ಧ್ಯಾನ ಅಭ್ಯಾಸಗಳ ಅಗತ್ಯವೇನು? ಅದನ್ನು ನಿರತವಾಗಿ ಮಾಡುವುದು ಅವಶ್ಯಕವೇ?

ಶ್ರೀ ಶ್ರೀ: ಹೌದು, ನಿಮಗೆ ಮಾಡಲು ಏನಾದರೂ ಇರಬೇಕು ಮತ್ತು ನನಗೆ ಮಾಡಲು ಏನಾದರೂ ಇರಬೇಕು ಎಂದು.
ನಾಲ್ಕು ಹಂತಗಳಿವೆ. ಮೊದಲನೆಯದು ಸಾನ್ನಿಧ್ಯ, ಅಂದರೆ ಉಪಸ್ಥಿತಿಯನ್ನು ಅನುಭವಿಸುವುದು.

ನಂತರ ಸಾಮೀಪ್ಯ, ಗುರುವಿಗೆ ಅಥವಾ ದೇವರಿಗೆ ಸಮೀಪವಾಗಿರುವ ಭಾವ ಹೊಂದುವುದು. ಸಾಮೀಪ್ಯದ ಭಾವನೆ ನಿಮ್ಮಿಂದ ಬರಬೇಕು. ಯಾರಿಂದಲೂ ನಿಮಗೆ ಸಾಮೀಪ್ಯದ ಭಾವವನ್ನು ಬರಿಸಲು ಸಾಧ್ಯವಿಲ್ಲ. ಅದು ತನ್ನಿಂದಲೇ ಬರಬೇಕು.

ನಂತರವಿರುವುದು ಸಾರೂಪ್ಯ, ರೂಪ/ಆಕಾರದೊಂದಿಗೆ ಒಂದಾಗಿರುವುದು. ಅಂದರೆ ನನ್ನಲ್ಲಿ ಮತ್ತು ನಿನ್ನಲ್ಲಿ ಭೇದವಿಲ್ಲ ಎಂದರ್ಥ.

ಮತ್ತೆ ನಂತರ ಸಾಯುಜ್ಯ ಎಂದು, ಅದರ ಅರ್ಥ ದೈವಿಕತೆಯಲ್ಲಿ ಲೀನವಾಗುವುದು.

ಪ್ರ: ಜೀವನ ಕಲೆಯು ಆಧ್ಯಾತ್ಮಿಕತೆಯೊಂದಿಗೆಯೇ ಸಂಪರ್ಕ ಹೊಂದಿದ್ದು, ಧರ್ಮಕ್ಕೆ ಸಂಬಂಧಿತವಾಗಿಲ್ಲದಿದ್ದರೆ, ಅಷ್ಟೊಂದು ಭಜನೆಗಳು ಕೃಷ್ಣ ಮತ್ತು ಹಿಂದೂ ದೇವತೆಗಳ ಬಗ್ಗೆ ಏಕೆ ಸಾಮಾನ್ಯವಾಗಿವೆ?

ಶ್ರೀ ಶ್ರೀ: ಈಗ, ಹಾಡುವುದು ಆಧ್ಯಾತ್ಮಿಕತೆಯ ಒಂದು ಭಾಗವಾಗಿದೆ.

ಮತ್ತು ನಾವು ಹಾಡುವ ಪುರಾತನ ಭಜನೆಗಳನ್ನು ಮಂತ್ರ ಎನ್ನುತ್ತಾರೆ, ಅವುಗಳಲ್ಲಿ ನಿಮ್ಮನ್ನು ಪ್ರಭಾವಿಸುವ ಬಲವಿದೆ.

ಹಾಗಾಗಿ ಇದು ಕೇವಲ ಜೀವನದ ಒಂದು ವಿಧಾನ. "ಓಂ ನಮಃ ಶಿವಾಯ" ಎಂಬುದು ಒಂದು ಮಂತ್ರ, ಮತ್ತು ಮಂತ್ರೋಚ್ಚಾರಣೆ ಆಧ್ಯಾತ್ಮಿಕತೆಯ ಒಂದು ಭಾಗ. ನೀವು ಹುಟ್ಟಿದ ಸಮಯದಿಂದ, ನಿಮ್ಮ ನಾಮಕರಣ, ನಿಮ್ಮ ಮದುವೆ ಮತ್ತು ನಿಮ್ಮ ತಿಥಿ, ಇವೆಲ್ಲವೂ ಧಾರ್ಮಿಕವಾಗಿರುತ್ತವೆ. ಆದರೆ ಆಧ್ಯಾತ್ಮಿಕತೆ ಎಂಬುದು ಜೀವನವನ್ನು ಉದ್ಧರಿಸುವ ಯಾವುದೇ ವಿಧಿಯಾಗಿದೆ. ಹಾಗಾಗಿ ಯೋಗ, ಧ್ಯಾನ ಇತ್ಯಾದಿ ಯಾವುವೇ ಪ್ರಾಚೀನ ಪದ್ಧತಿಗಳಿಂದ ಹುಟ್ಟಿಕೊಂಡಿವೆ ಮತ್ತು ಅದು ತಾನೇ ಒಂದು ಧರ್ಮವಾಗಿಲ್ಲ.

ಯಾರೋ ಭಾರತದ ಅಧ್ಯಕ್ಷ ಸರ್ವಪಲ್ಲಿ ರಾಧಾಕೃಷ್ಣನ್ , ಒಬ್ಬ ಹಿಂದೂ, ಅವರನ್ನು ಹಿಂದೂ ಧರ್ಮದ ಅರ್ಥವಿವರಣೆಯನ್ನು ಸೂತ್ರೀಕರಿಸಲು ಹೇಳಿದರು. ಅವರು ಹೇಳಿದರು, ’ಹಿಂದೂ ಧರ್ಮವನ್ನು ಸೂತ್ರೀಕರಿಸಲು ಸಾಧ್ಯವಿಲ್ಲ. ಅದು ಕೇವಲ ಜೀವನದ ಒಂದು ಮಾರ್ಗವಾಗಿದೆ.’

ಹಾಗೆ ಹಲವು ಧರ್ಮಗಳಿರುವುದರಿಂದ, ಜೀವನದ ಮಾರ್ಗವನ್ನೂ ಧರ್ಮ ಎಂದು ಕರೆಯಲಾಯಿತು, ಇದಲ್ಲದಿದ್ದರೆ ಹಿಂದೂ ಎಂಬುದು ಒಂದು ಧರ್ಮವಲ್ಲ, ಅದು ಕೇವಲ ಒಂದು ಜೀವನ ಶೈಲಿ.

ಹಾಗೆ ಈ ಮಂತ್ರಗಳು ನಮ್ಮ ಶರೀರದ ಮೇಲೆ, ನಮ್ಮ ಮನಸ್ಸಿನ ಮೇಲೆ, ಮತ್ತು ನಮ್ಮ ಚೈತನ್ಯದ ಮೇಲೆ ಪ್ರಭಾವ ಹೊಂದಿವೆ. ಮಂತ್ರಗಳು ಎಷ್ಟು ಪ್ರಾಚೀನವೋ, ಅಷ್ಟು ಹೆಚ್ಚು ಆಳವಾಗಿ ನಮ್ಮ ಚೈತನ್ಯದ ಮೇಲೆ ಪ್ರಭಾವ ಬೀರುತ್ತವೆ.

ಹಾಗಾಗಿಯೇ ಓಂಕಾರವನ್ನು ಉಚ್ಚರಿಸಲು ಹೇಳಲಾಗುತ್ತದೆ.

ಮುಖ್ಯವಾಗಿರುವುದು ಕೃಷ್ಣ ಅಥವಾ ಇನ್ಯಾವುದೂ ಅಲ್ಲ, ಆದರೆ ಯಾವುದು ಮುಖ್ಯವೆಂದರೆ ಈ ಮಂತ್ರದ ಬೆಲೆ.

ಪ್ರ: ಗುರೂಜಿ, ವಿವಿಧ ಬಗೆಯ ನುಡಿ ಇದ್ದಂತೆ, ವಿವಿಧ ಬಗೆಯ ಮೌನವಿದೆಯೇ?

ಶ್ರೀ ಶ್ರೀ: ವಿವಿಧ ಬಗೆಯ ಖಾಲಿತನ ಇವೆಯೇ? ಮೌನವು ಮೌನ, ಖಾಲಿತನವು ಖಾಲಿತನ. ಒಂದು ತಟ್ಟೆ ಖಾಲಿಯಾಗಿದ್ದರೆ, ಅದು ಯಾವ ಥರದ ಖಾಲಿತನ ಎಂದು ಕೇಳಲಾಗುವುದಿಲ್ಲ. ಆದರೆ ಅದು ತುಂಬಿದ್ದರೆ, ಅದು ಯಾವುದರಿಂದ ತುಂಬಿದೆ ಎಂದು ನೀವು ಕೇಳಬಹುದು.

ಮಾತು/ನುಡಿಯಲ್ಲಿ, ನಾಲ್ಕು ವಿಧಗಳಿವೆ- ಪರಾ, ಪಶ್ಯಂತಿ, ಮಧ್ಯಮಾ ಮತ್ತು ವೈಖರಿ.

ವೈಖರಿ ಎಂಬುದು ಸ್ಥೂಲ ಮಟ್ಟ, ನಾವು ಈಗ ಮಾತನಾಡುತ್ತಿರುವಂಥದ್ದು.

ಪಶ್ಯಂತಿ ಎಂಬುದು ಇದಕ್ಕಿಂತ ಸೂಕ್ಷ್ಮವಾದುದು. ಅದು ಭಾಷೆಯನ್ನು ವರ್ಜಿಸಿದ ಮಾತು. ನಿಮ್ಮಗೆ ಆ ಕಂಪನಗಳ ಗ್ರಹಣೆಯಾಗುತ್ತದೆ, ನಿಮಗೆ ಅದರ ಅರಿವುಂಟಾಗುತ್ತದೆ ಮತ್ತು ನಿಮಗೆ ಅದನ್ನು ಮಾತಿಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಇದು ಪಶ್ಯಂತಿ.

ಒಂದು ಮಗು ನಿಮಗೆ ’ನಾನು ನಿಮ್ಮ ಪ್ರೀತಿಸುತ್ತೇನೆ!’ ಎಂದು ಯಾವತ್ತೂ ಹೇಳುವುದಿಲ್ಲ. ಆದರೆ ಅದು ಸುಮ್ಮನೆ ನಿಮ್ಮನ್ನು ನೋಡುತ್ತದೆ, ಅಷ್ಟರಲ್ಲಿ ನಿಮಗೆ ಪ್ರೀತಿಯ ಅನುಭವವಾಗುತ್ತದೆ. ಪ್ರೀತಿ ಮತ್ತು ಭಾವನೆಗಳು ಮಾತಿಲ್ಲದೆ ತಿಳಿಸಲ್ಪಡುತ್ತವೆ. ಇದು ಪಶ್ಯಂತಿ: ಭಾಷೆಯಿಲ್ಲದೇ ಗುರುತಿಸುವುದು.

ಮಧ್ಯಮಾ ಎಂಬುದು ಇನ್ನೂ ಸೂಕ್ಷ್ಮ. ಅದು ಅಭಿವ್ಯಕ್ತಿಯ ವ್ಯಾಪ್ತಿಗೂ ಮೊದಲು ಬರುವಂಥದ್ದು. ಅದನ್ನು ಮಧ್ಯಮಾ ಎಂದು ಕರೆಯಲಾಗುತ್ತದೆ. ಅದು ಅಭಿವ್ಯತಿಯ ವ್ಯಾತಿಗೂ ಬರುವ ಮೊದಲು ಅಸ್ತಿತ್ವದಲ್ಲಿ ಲೀನವಾಗಿರುವಂಥದ್ದು. ಅದು ಮಾಧ್ಯಮವಿಲ್ಲದೇ ಸಾಗಿಸಲ್ಪಡುವಂಥದ್ದು. ಪಶ್ಯಂತಿಯಲ್ಲಿ ಮಾಧ್ಯಮವಿದೆ. ಆದು ಭಾಷೆಯು ಇಲ್ಲದೇ ಪ್ರಸಾರವಾಗುವುದು, ಆದರೆ ಮಾಧ್ಯಮವಿದೆ. ಮಧ್ಯಮಾದಲ್ಲಿ ಅದೂ ಇಲ್ಲ.

ಪರಾ ಎಂಬುದು ಇನ್ನೂ ಸೂಕ್ಷ್ಮವಾದುದು. ಅದು ಕೇವಲ ಮೊದಲಿನಿಂದಲೂ ಇರುವಂಥ ಭಾಷೆ. ಅದು ಭಾಷೆಯನ್ನು ಅವಲಂಬಿಸಿಲ್ಲ, ಅದರಲ್ಲಿ ಪದಗಳಿಲ್ಲ, ಆದರೆ ಚೈತನ್ಯದಲ್ಲಿ ಹೊಮ್ಮುತ್ತಿರುವ ಜ್ಞಾನ. ಅದು ಪರಾ.

ಹೀಗೆ ಪರಾ, ಪಶ್ಯಂತಿ, ಮಧ್ಯಮಾ ಹಾಗೂ ವೈಖರೀ ಎಂಬುದು ಕೊನೆಯದು. ಅಷ್ಟೆ.

’ಪ್ರೂಫ್ ಆಫ್ ಹೆವನ್’ ಎಂಬ ಪುಸ್ತಕದಲ್ಲಿ, ಲೇಖಕನು ಬಾಷೆ ಇಲ್ಲದೇ ಸವಾದದ ಬಗ್ಗೆ ಪ್ರಸ್ತಾಪನೆ ಮಾಡುತ್ತಾನೆ.ಅವನು ಕೋಮಾದಲ್ಲಿದ್ದಾಗ ಅನುಭವಿಸಿದು ಅದನ್ನೆ. ಮತ್ತು, ದೈವಿಕತೆಯ ಹೆಸರು ಓಂ ಎಂದು ಅವನು ಹೇಳುತ್ತಾನೆ.

ನೀವು ಈ ಪುಸ್ತಕದ ಬಗ್ಗೆ ಓದಿದ್ದೀರಾ? ಇದು ಬಹಳ ಸ್ವಾರಸ್ಯಕರವಾಗಿದೆ.

ಅದು ಅಮೆರಿಕಾದಲ್ಲಿ ಒಬ್ಬ ನರಶಸ್ತ್ರಚಿಕಿತ್ಸಾ ತಜ್ಞನಾಗಿರುವ ವೈದ್ಯನ ಬಗ್ಗೆ. ಅವನು ಕೋಮಾಗೆ ಹೋಗಿದ್ದಾಗ ಜನರು ಅವನು ಬಹುಪಕ್ಷ ಮೃತನಾಗಿದ್ದ ಎಂದು ಯೋಚಿಸಿದ್ದರು. ಅವನು ಮರಳಿ ಬಂದಾಗ ತನ್ನ ಅನುಭವ್ದ ಬಗ್ಗೆ ಬರೆದನು, ಅವನು ’ಪ್ರೂಫ್ ಆಫ್ ಹೆವನ್’ ಬರೆದನು. ಅವನು ಹೇಗೆ ಇನ್ನೊಂದು ಕಡೆಯ ವ್ಯಾಪ್ತಿಯಲ್ಲಿ ಹೋದನು ಎಂದು ಬರೆದನು.

ಇದು ನಿಚ್ಚಳವಾಗಿ ಸ್ತಬ್ಧಗೊಳಿಸುವಂಥದ್ದಾಗಿದೆ, ಮತ್ತು ವೇದಾಂತದಲ್ಲಿ, ಪುರಾಣಗಳಲ್ಲಿ ಮತ್ತು ಪ್ರಾಚೀನ ಲೇಖನಗಳಲ್ಲಿ ಇರುವಂಥದ್ದೇ ಆಗಿದೆ. ಏಕಪ್ರಕಾರವಾಗಿ ಅದೇ ಆಗಿದೆ. ಅವನು ಹೇಳಿದ್ದು, ನಾನು ಹಲವು ವರ್ಷಗಳಿಂದ ಹೇಳುತ್ತಿರುವಂಥದ್ದು, ಅದು ಒಂದು ಬೆಳಕಿದೆ ಮತ್ತು ಆ ಬೆಳಕಿನ ಹೆಸರು ಓಂ ಎಂದು, ಅಂದರೆ ಸರ್ವವ್ಯಾಪಿ, ಸರ್ವಜ್ಞವಾದ, ಬಹಳ ಪ್ರೀತಿ ಹಾಗು ಆಪ್ತವಾದದ್ದು.

ಅವನು ಒಂದು ಮರದ ಮುಖವಾಗಿ ಸಾಗಿದನಂತೆ, ಆ ಮರಕ್ಕೆ ಬೇರುಗಳು ಮೇಲೆ ಹಾಗೂ ಕೊಂಬೆಗಳು ಕೆಳಗಿವೆ ಎಂದೂ ಹೇಳುತ್ತಾನೆ. ಇದು ಭಗವದ್ಗೀತೆಯಲ್ಲಿದೆ. ಇನ್ನೊಂದು ಕಡೆಗೆ ತಲುಪಲು ಆ ಬೇರುಗಳ ಮೂಲಕ ಸಾಗುತ್ತಾರೆ. ಹಾಗೆ ಅವನು ಈ ಬೇರುಗಳ ಬಗ್ಗೆ ಮಾತನಾಡುತ್ತಾನೆ.

ನಂತರ ಅವನು ಬಂಗಾರದ ಮೊಟ್ಟೆಯ ಬಗ್ಗೆ ಮಾತನಾಡುತ್ತಾನೆ, ನಾವು ಅದನ್ನು ಹಿರಣ್ಯಗರ್ಭ ಎಂದು ಕರೆಯುತ್ತೇವೆ. ಕೇಂದ್ರವಾಗಿರುವಂಥ ಆ ತಿರುಳು ಆತ್ಮ ಎಂದು ಅವನು ಹೇಳುತ್ತಾನೆ. ಆತ್ಮನು ತಿರುಳು, ಮತ್ತು ಆ ಬಂಗಾರದ ಮೊಟ್ಟೆಯು ಒಂದು ಚಿಪ್ಪಾಗಿದೆ. ನೀವು ಭಗವದ್ಗೀತೆಯಲ್ಲಿ ಯಥಾರ್ಥವಾಗಿ ಇದನ್ನೇ ಓದುತ್ತೀರಿ.

ನಂತರ ಅವನು ಸಂವಾದದ ಬಗ್ಗೆ ಮಾತನಾಡುತ್ತಾನೆ, ಮತ್ತು ಸಂವಾದವು ಶಬ್ದ/ಪದಗಳಿಲ್ಲದೆ, ಯಾವುದೇ ಭಾಷೆಯಿಲ್ಲದೆ ನಡೆದಿತ್ತು ಎಂದು ಹೇಳುತ್ತಾನೆ, ಮತ್ತು ಇದು ಯಥಾರ್ಥವಾಗಿ ಪಶ್ಯಂತಿ, ಪರಾ, ಮಧ್ಯಮಾ ಮತ್ತು ವೈಖರಿಯಾಗಿದೆ. ಇದು ಬಹಳ ಸ್ವಾರಸ್ಯಕರವಾಗಿದೆ.

ಪ್ರ: ಪೂಜ್ಯ ಗುರೂಜಿ, ನಮಗೆ ಆಪ್ತರಾದವರು ಬುದ್ಧಿಯಲ್ಲಿ, ಅಥವಾ ಭಯದಲ್ಲಿ, ಅಥವಾ ಪರಿಕಲ್ಪನೆಗಳಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ನಾವು ಕಂಡಾಗ, ಅವರನ್ನು ಹೃದಯದ ಮಟ್ಟಕ್ಕೆ ಹೇಗೆ ತರುವುದು?

ಶ್ರೀ ಶ್ರೀ: ಕೇವಲ ಚಿಂತಿಸದಿರಿ, ಅವರು ತಾವಾಗಿಯೇ ಹೊರಬರುತ್ತಾರೆ. ಅದು ಸಮಯದ ಬಗ್ಗೆಯಾಗಿದೆ; ಸಮಯ ಮತ್ತು ಸ್ಥಳ. ಹಿಂದಿಯಲ್ಲಿ ಒಂದು ಸಾಲಿದೆ, ಅದೇನೆಂದರೆ: ಈ ಲೋಕದಲ್ಲಿ ಎಲ್ಲವೂ ಇದೆ, ಈ ಲೋಕದಲ್ಲಿ ಬಹಳ ಉಡುಗೊರೆಗಳಿವೆ, ಆದರೆ ಒಳ್ಳೆಯ ಕರ್ಮವಿಲ್ಲದ ವ್ಯಕ್ತಿಗೆ ಏನೂ ಸಿಗುವುದಿಲ್ಲ.