ಶನಿವಾರ, ಜುಲೈ 13, 2013

ಆಧ್ಯಾತ್ಮಿಕ ಸಾಧನೆಯ ಮೂರು ಹಂತಗಳು

ಮಾಂಟ್ರಿಯಾಲ್, ಕ್ಯಾನಡಾ
೧೩.೦೭.೧೩

ಧ್ಯಾತ್ಮಿಕ ಸಾಧನೆಯಲ್ಲಿ ಮೂರು ಹಂತಗಳಿವೆ.

ಈ ವಿಷಯವನ್ನು ನಾನು ಹಿಂದೆ ಮಾತನಾಡಿಲ್ಲ.

ಮೊದಲನೆಯದನ್ನು ಅಣ್ವ ಉಪಾಯ ಎಂದು ಕರೆಯಲಾಗುತ್ತದೆ. ಎರಡನೆಯದನ್ನು ಶಾಕ್ತ ಉಪಾಯವೆಂದೂ, ಮೂರನೆಯದನ್ನು ಶಾಂಭವ ಉಪಾಯ ಎಂತಲೂ ಕರೆಯಲಾಗುತ್ತದೆ.

ಶಿವ, ಶಕ್ತಿ ಮತ್ತು ಅಣ್ವ. ಈ ಬ್ರಹ್ಮಾಂಡದ ಎಲ್ಲಾ ಕಣಗಳನ್ನು ಈ ಮೂರು ವಿಂಗಡಣೆಗಳಲ್ಲಿ ವಿಂಗಡಿಸಲು ಸಾಧ್ಯ. ಹಾಗೆ, ಅಣ್ವ ಎಂದರೆ ಅತಿ ತಳಮಟ್ಟದ್ದು; ಎಂದರೆ ಪ್ರಾರಂಭದ ಹಂತ. ಎಲ್ಲಾ ಜಪಗಳು, ಮಂತ್ರಗಳು, ಪೂಜೆಗಳು, ಯೋಗಾಸನಗಳು, ಉಸಿರಾಟದ ನಿಯಂತ್ರಣ, ಎಲ್ಲವೂ ಅಣ್ವ ಉಪಾಯದಲ್ಲಿ ಬರುತ್ತವೆ. ಅವುಗಳನ್ನು ಉಪಾಯಗಳು ಎಂದು ಕರೆಯಲಾಗುತ್ತದೆ, ಅಂದರೆ ಪರಿಹಾರಗಳು.

ಇದಕ್ಕೆ ಮೇಲಿನದು ಶಾಕ್ತ. ಶಾಕ್ತವು ಕೇವಲ ಮಾನಸಿಕ, ಎಂದರೆ ಒಳಗಿರುವುದು. ಇದರಲ್ಲಿ ಹೊರಗಿನದು ಎಂದು ಏನೂ ಇಲ್ಲ, ಇದರಲ್ಲಿ ಮಂತ್ರಗಳಿಲ್ಲ. ಇದು ಧ್ಯಾನಸ್ಥ ಸ್ಥಿತಿಯ ಪರಿಣಾಮ, ಅದು ಶಾಕ್ತ ಉಪಾಯ.

ನೀವು ಹಾಡುವುದು, ಧ್ಯಾನ, ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯೆ (ಕ್ರಿಯೆ ಅಣ್ವ ಉಪಾಯದಿಂದ ಪ್ರಾರಂಭವಾಗುತ್ತದೆ, ಆದರೆ) ಅದು ಶಾಕ್ತ ಉಪಾಯದತ್ತ ಒಯ್ಯುತ್ತದೆ, ಆಗ ನೀವು ಕೇವಲ ಶಕ್ತಿಯಾಗಿರುತ್ತೀರಿ. ಇಲ್ಲಿ ಯಾವುದೇ ಪ್ರಯತ್ನವಿಲ್ಲ, ಯಾವುದೇ ಚಟುವಟಿಕೆಯಿಲ್ಲ. ಕೇವಲ ಕೊಂಚ ನಿಷ್ಪ್ರಯತ್ನವಾದ ಪ್ರಯತ್ನವಿದೆ.

ನಂತರ ಶಾಂಭವ ಅಥವಾ ಶಿವ ಉಪಾಯವು ಕೇವಲ ಶುದ್ಧ ಅರಿವು. ಕೇವಲ ಅರಿವಿನ ಸ್ಥಿತಿ.

ಶಾಂಭವ ಉಪಾಯ ಎಂದರೆ ಅದನ್ನು ಮಾಡುವ ಯಾವುದೇ ಮಾರ್ಗವಿಲ್ಲ, ಅದು ಕೇವಲ ಒಂದು ಘಟನೆ, ಅದು ಕೇವಲ ಘಟಿಸುತ್ತದೆ. ಆದರೂ ಅದನ್ನು ಉಪಾಯ ಎಂದೇ ಕರೆಯಲಾಗುತ್ತದೆ.

ಹಾಗೆ ಅಣ್ವ ಮತ್ತು ಶಾಕ್ತ ಉಪಾಯದ ಉದ್ದೇಶವೆಂದರೆ ನೀವು ಶಿವನೊಂದಿಗೆ(ಚೈತನ್ಯದ ನಾಲ್ಕನೆ ಸ್ಥಿತಿ) ಒಂದಾಗುವಂಥ ಶಾಂಭವ ಉಪಾಯವನ್ನು ತಲುಪುವುದಾಗಿದೆ. ಇಲ್ಲಿ ಎರಡಿಲ್ಲ, ಕರ್ತೃ ಎಂಬುದಿಲ್ಲ, ನೀನು ಶಿವನಾಗಿರುತ್ತಿ, ಹಾಗೆ ಅದು ಶಾಂಭವ ಉಪಾಯ.

ಸಾಮಾನ್ಯವಾಗಿ ಜಿಡ್ಡು ಕೃಷ್ಣಮೂರ್ತಿಯಂಥ ಶಾಂಭವ ಉಪಾಯದ ನಿರ್ದಿಷ್ಟ ಹಂತವನ್ನು ಅನುಭವಿಸಿರುವ ಇತರರು ಉಳಿದೆಲ್ಲಾ ಹಂತಗಳನ್ನು ತಿರಸ್ಕರಿಸುತ್ತಾರೆ. ನೀವು ಓದಿರಬಹುದು, ಕೆಲವರು ಹೇಳಿದ್ದಾರೆ, ಪ್ರಾಣಾಯಾಮಗಳನ್ನು ಮಾಡುವುದರಲ್ಲಿ ಅರ್ಥವಿಲ್ಲ, ಅಥವಾ ಮಂತ್ರಗಳನ್ನು ಪಠಿಸುವುದರಲ್ಲಿ ಏನೂ ಅರ್ಥವಿಲ್ಲ, ಅಥವಾ ಪೂಜೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು. ಅವರೆಲ್ಲಾ ಶಾಂಭವ ಉಪಾಯದ ಹಂತದಿಂದ ಮಾತನಾಡುತ್ತಿದ್ದಾರೆ, ಆದರೆ ಈ ಎಲ್ಲಾ ಸಾಧನೆಗಳಿಗೂ ತಮ್ಮದೇ ಆದ ಸ್ಥಳವಿದೆ.

ನೋಡಿ, ಉದಾಹರಣೆಗೆ, ನೀವು ಕ್ಯಾನಡಾದ ಪ್ರಧಾನಿಯ ಬಳಿ ಹೋದರೆ, ಸೈಂಟ್ ಮ್ಯಾಥೂಸ್ ಮೇಯರ್ ಹೆಚ್ಚು ಪ್ರಮುಖ ಎನಿಸುವುದಿಲ್ಲ. ಆದರೆ ಸೈಂಟ್ ಮ್ಯಾಥೂಸ್ ಮೇಯರಿಗೂ ಒಂದು ಪ್ರಸ್ತಾಪವಿದ್ದರೆ, ಆಗ ನೀವು ಪ್ರಧಾನಿಯ ಬಳಿ ಹೋದರೂ ಈ ಪಟ್ಟಣದ ಮೇಯರ್ ಅಡೆತಡೆಗಳನ್ನು ಹಾಕಬಹುದು, ಅಲ್ಲವೇ? ಇಲಾಖಾಧಿಕಾರಿಗಳು ಕೆಲವು ಅಡೆತಡೆಗಳನ್ನು ಹಾಕಬಹುದು.

ಹಾಗಾಗಿ, ಪ್ರಾಚೀನ ಪದ್ಧತಿಯೆಂದರೆ, ಎಲ್ಲರನ್ನೂ ಆದರಿಸುವುದು ಮತ್ತು ಎಲ್ಲರಿಗೂ ತಮ್ಮ ಯುಕ್ತವಾದ ಸ್ಥಾನವನ್ನು ನೀಡುವುದಾಗಿದೆ. ಮತ್ತು ಅದೇ ರೀತಿಯಲ್ಲಿ ಈ ಎಲ್ಲ, ಅಣ್ವ ಉಪಾಯ, ಶಾಕ್ತ ಉಪಾಯ, ಎಲ್ಲವನ್ನೂ ಕಾಪಾಡಲಾಗಿರುವುದು ಏಕೆಂದರೆ ಅವುಗಳಿಗೆ ಒಂದು ಉದ್ದೇಶವಿದೆ.

ಇದು ಗಹನ ಜ್ಞಾನ.