ಭಾನುವಾರ, ಮೇ 6, 2012

ಬುದ್ಧ ಪೌರ್ಣಮಿಯ ಬಗ್ಗೆ ಶ್ರೀ ಶ್ರೀ


06
2012............................... ಮಾಂಟ್ರಿಯಲ್, ಕೆನಡ
May

ವತ್ತು ಬುದ್ಧ ಪೌರ್ಣಿಮೆ, ಬುದ್ಧನು ಹುಟ್ಟಿದ ದಿನ. ಅವನು ಆತ್ಮ ಸಾಕ್ಷಾತ್ಕಾರ ಹೊಂದಿದ್ದು, ನಿರ್ವಾಣವನ್ನು ಪಡೆದದ್ದು ಮತ್ತು ಇಹಲೋಕ ತ್ಯಜಿಸಿದ್ದೂ ಕೂಡಾ ಇದೇ ದಿನ. ಇವತ್ತು, ಚಂದ್ರನು ಇತರ ಹುಣ್ಣಿಮೆಯ ದಿನಗಳಿಗಿಂತ ೨೦% ಹೆಚ್ಚಿರುವಂತೆ ತೋರುತ್ತದೆ. ಇದು ತುಂಬಾ ದೊಡ್ಡ ಚಂದ್ರ. ಆದುದರಿಂದ ನೀವು ಚಂದ್ರನು ಉದಯವಾಗುವುದನ್ನು ನೋಡಬೇಕು.
ಪ್ರತಿಯೊಬ್ಬರಲ್ಲೂ ಒಂದು ಚಿಕ್ಕ ಬುದ್ಧನಿರುತ್ತಾನೆ ಮತ್ತು ಆ ಬುದ್ಧನು ಸಿದ್ಧಾರ್ಥನ ರೂಪದಲ್ಲಿರುತ್ತಾನೆ. ಸಿದ್ಧಾರ್ಥನೆಂದರೆ ಯಾರೆಂದು ನಿಮಗೆ ತಿಳಿದಿದೆಯೇ? ಬುದ್ಧನು ಬುದ್ಧನಾಗುವ ಮೊದಲು ಅವನು ಸಿದ್ಧಾರ್ಥನಾಗಿದ್ದನು. ಅವನು ಅಲೆದಾಡುತ್ತಿದ್ದನು, ಕಳೆದು ಹೋಗಿದ್ದನು. ಅವನು ಎಲ್ಲವನ್ನೂ ಪ್ರಯತ್ನಿಸಿದ್ದನು ಆದರೆ ಅವನಿಗೆ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ; ಆದರೆ ಅವನಲ್ಲಿ ವಿಚಾರಿಸುವ ಉತ್ಸಾಹವಿತ್ತು. ಅವನಂದನು, "ಪ್ರಪಂಚವೆಲ್ಲಾ ದುಃಖವಾಗಿದೆ ಮತ್ತು ನಾನು ದುಃಖವನ್ನು ತೊಡೆದು ಹಾಕಲು ಬಯಸುತ್ತೇನೆ." ಎಲ್ಲವೂ ದುಃಖವೆಂಬುದನ್ನು ಸಿದ್ಧಾರ್ಥನು ತಿಳಿದಿದ್ದನು, ಆದರೆ ಅವನಿಗೆ ಮಾರ್ಗವು ತಿಳಿದಿರಲಿಲ್ಲ. ಆದುದರಿಂದ ಪ್ರತಿಯೊಬ್ಬರ ಒಳಗೂ ಒಬ್ಬ ಚಿಕ್ಕ ಬುದ್ಧನಿದ್ದಾನೆ ಮತ್ತು ಅವನು ಎಚ್ಚೆತ್ತುಕೊಳ್ಳಬೇಕಷ್ಟೆ.
ಬುದ್ಧನು ಇದನ್ನು, ಅದನ್ನು ಮತ್ತು ಅದನ್ನು, ಇದನ್ನು ಮಾಡಿನೋಡಿದನು. ಅವನು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಓಡಿದನು, ಅವನು ತಂತ್ರಗಳ ಮೇಲೆ ತಂತ್ರಗಳ ಮೇಲೆ ತಂತ್ರಗಳನ್ನು ಮಾಡಿದನು, ಆದರೆ ಯಾವುದೂ ಕೆಲಸ ಮಾಡಲಿಲ್ಲ. ಯಾಕೆಂದರೆ, ಇದನ್ನೆಲ್ಲಾ ಮಾಡುವಾಗ, ಅವನ ಮನಸ್ಸು ಹೊರಗಿತ್ತು ಮತ್ತು ಅವನು ಎಲ್ಲದರಿಂದಲೂ ಬೇಸತ್ತಾಗ, ಸುಸ್ತಾದಾಗ ಮತ್ತು ಎಲ್ಲವನ್ನೂ ಬಿಟ್ಟು ಬಿಟ್ಟಾಗ, ಆ ಕ್ಷಣದಲ್ಲಿ ಅವನು ಆತ್ಮ ಸಾಕ್ಷಾತ್ಕಾರ ಹೊಂದಿದನು. ಈ ರೀತಿ ಕಥೆ ಸಾಗುತ್ತದೆ. ಆದುದರಿಂದ, ಪ್ರಯತ್ನ ಪಟ್ಟು, ಪ್ರಯತ್ನ ಪಟ್ಟು, ಪ್ರಯತ್ನ ಪಟ್ಟು ಸುಸ್ತಾದಾಗ ಅವನಂದನು, "ಸರಿ, ಸ್ವಲ್ಪ ಆರಾಮವಾಗಿರೋಣ. ನಾನು ಬಿಟ್ಟುಬಿಡುತ್ತೇನೆ". ಹಾಗೆ ಅವನು ಬಿಟ್ಟು ಬಿಟ್ಟು ಕುಳಿತನು ಮತ್ತು ಮನಸ್ಸು ಒಳಮುಖವಾಗಿ ತಿರುಗಿತು. ನಂತರ ಅವನು ಬುದ್ಧನಾದನು. ಆದುದರಿಂದ ಮನಸ್ಸನ್ನು ಒಳಮುಖವಾಗಿ ತಿರುಗಿಸಿಕೊಳ್ಳಿ.
ದುರದೃಷ್ಟವಶಾತ್ ಬುದ್ಧನಿಗೆ ಒಬ್ಬರು ಗುರು ಸಿಗಲಿಲ್ಲ. ಆ ಸಮಯದಲ್ಲಿ ಅವರಿಗೆ ಒಬ್ಬರು ಗುರು ಸಿಗಲಿಲ್ಲ. ಆದರೆ ಆದಿ ಶಂಕರಾಚಾರ್ಯರಿಗೆ ಒಬ್ಬರು ಗುರುವಿದ್ದರು. ಹಾಗೆ ಅವರು ಗುರುವನ್ನು ಭೇಟಿಯಾದರು ಮತ್ತು ಹಾದಿಯು ತುಂಬಾ ಸರಳವಾಯಿತು, ಸುಗಮವಾಯಿತು. ಅವರಿಗೆ ಹಾಗೇ ಕುಳಿತುಕೊಂಡು ಸಮಾಧಿಗೆ ಹೋಗಲು ಸಾಧ್ಯವಾಗುತ್ತಿತ್ತು. ಆದರೆ ಬುದ್ಧನಿಗೆ ಸಮಾಧಿ ಮತ್ತು ಧ್ಯಾನಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಅದು ಅವರಿಗೆ ಕಷ್ಟವಾಗುತ್ತಿತ್ತು. ಆದುದರಿಂದ ಅವರು ಉಪವಾಸ ಮಾಡಿದರು. ಯಾರೋ ಅವರಿಗೆ ಉಪವಾಸ ಮಾಡಲು ಹೇಳಿದರು ಮತ್ತು ಅವರು ಉಪವಾಸ ಮಾಡಿದರು, ಯಾಕೆಂದರೆ ಅವರು ರಾಜ ಮನೆತನದ ಒಬ್ಬ ರಾಜನಾಗಿದ್ದುದರಿಂದ ಅವರಿಗೆ ಶರಣಾಗತಿಯ ಬಗ್ಗೆಯಾಗಲೀ ಅಥವಾ ಭಕ್ತಿಯ ಬಗ್ಗೆಯಾಗಲೀ ಅಥವಾ ಬಿಟ್ಟು ಬಿಡುವುದರ ಬಗ್ಗೆಯಾಗಲೀ ತಿಳಿದಿರಲಿಲ್ಲ. ಮಾಡುವುದು, ಮಾಡುವುದು ಮತ್ತು ಮಾಡುವುದು, ಅವರು ಕೇಳಿದ್ದುದು ಅದನ್ನು, ಅವರು ತಿಳಿದಿದ್ದುದು ಅದನ್ನು ಯಾಕೆಂದರೆ ಅವರು ಆ ರೀತಿ ತರಬೇತಿಗೊಳಿಸಲ್ಪಟ್ಟಿದ್ದರು. ಆದುದರಿಂದ ದೊಡ್ಡ ಅಹಂಕಾರ ಮತ್ತು ಆ ದೊಡ್ಡ ಕಾರ್ಯವು ಅವರನ್ನು ಹಲವಾರು ವರ್ಷಗಳ ವರೆಗೆ ಓಡುವಂತೆ ಮಾಡಿತು. ಕೊನೆಯಲ್ಲಿ ಅವರು ಬಿಟ್ಟು ಬಿಟ್ಟರು ಮತ್ತು ಆಗ ಅವರು ಆತ್ಮ ಸಾಕ್ಷಾತ್ಕಾರ ಹೊಂದಿದರು; ಕಥೆ ಹೋಗುವುದು ಈ ರೀತಿಯಲ್ಲಿ.
ಆದುದರಿಂದ ನಿಮ್ಮೊಳಗಿರುವ ಆ ಚಿಕ್ಕ ಮನಸ್ಸು, ಹೋಗಲು ಬಿಡುವುದಿಲ್ಲ ಮತ್ತು ಸುಮ್ಮನೇ ಬಿಟ್ಟು ಕೊಡಲು ಬಯಸುವುದಿಲ್ಲ. ಅದು, ನಾನು ಮಾಡಲು ಬಯಸುತ್ತೇನೆ, ನಾನು ಮಾಡಲು ಬಯಸುತ್ತೇನೆ, ನಾನು ಮಾಡಲು ಬಯಸುತ್ತೇನೆ ಮತ್ತು ನಾನು ಇದನ್ನು ಸಾಧಿಸುತ್ತೇನೆ, ನಾನು ಅದನ್ನು ಸಾಧಿಸುತ್ತೇನೆ ಎಂಬ ಯಾತ್ರೆಯ ಮೇಲೆ ಹೋಗುತ್ತದೆ.
ಸಾಧಿಸಲು ಅಲ್ಲಿ ಏನಿದೆ? ಎಂಬುದನ್ನು ನೀವು ತಿಳಿದಾಗ, ಎಲ್ಲವೂ ಬಿದ್ದುಬಿಡುತ್ತದೆ, ನೀವು ಶರಣಾಗುತ್ತೀರಿ, ನೀವು ಹೋಗಲು ಬಿಡುತ್ತೀರಿ ಮತ್ತು ಧ್ಯಾನವು ಆಗುತ್ತದೆ. ನಿಮಗೆ ತಿಳಿದಿದೆಯಾ, ಇದು ಒಂದು ಆಯುರ್ವೇದ ಮಸಾಜ್ ಮಾಡುವ ಮೇಜಿನ ಮೇಲೇರಿದಂತೆ. ನೀವು ಕೇವಲ ಅದರ ಮೇಲೇರುತ್ತೀರಿ ಮತ್ತು ಅಷ್ಟೆ, ನೀವು ಏನನ್ನೂ ಮಾಡುವುದಿಲ್ಲ. ಎಲ್ಲವನ್ನೂ ನಿಮಗಾಗಿ ಮಾಡಲಾಗುತ್ತದೆ; ಹೀಗೆ ಧ್ಯಾನ ಕೂಡಾ ನಿಮಗಾಗಿ ಮಾಡಲ್ಪಡುತ್ತದೆ. ನೀವು ಸುಮ್ಮನೇ ಕುಳಿತುಕೊಳ್ಳಿ ಮತ್ತು ಧ್ಯಾನವು ಆಗುತ್ತದೆ.