ಶನಿವಾರ, ಜುಲೈ 28, 2012

ತೀರದ ಬಾಯಾರಿಕೆಯೇ ಭಕ್ತಿ

28
2012
Jul
ಬೆಂಗಳೂರು ಆಶ್ರಮ, ಭಾರತ


ಪ್ರ: ಬಹಳ ಕಷ್ಟ ಅನುಭವಿಸಿದ ನಂತರ ನಾನು ನಿಮ್ಮನ್ನು ಗುರುವಾಗಿ ಪಡೆದೆ. ನನ್ನ ಮುಂದಿನ ಜನ್ಮದಲ್ಲಿ ಎಲ್ಲೋ ದಿಕ್ಕೆಟ್ಟು ನಂತರ ಗುರುವಿನಿಂದ ಆರಿಸುವಂತಾಗಬಾರದು.ಇದರಿಂದ ಪಾರಾಗಲು ಮಾರ್ಗವಿದೆಯೇ?
ಶ್ರೀ ಶ್ರೀ:
ಈ ಕ್ಷಣದಲ್ಲಿ ಚಿಂತಿಸಬೇಕಾದದ್ದು ಬಹಳಷ್ಟಿದೆ. ನೀವು ಮುಂದಿನ ಜನ್ಮಕ್ಕೇಕೆ ಮುಂದೂಡುತ್ತಿದ್ದೀರಿ?ಈ ಕ್ಷಣದಲ್ಲಿ, ಇಲ್ಲಿ ನಿಮಗೊಂದು ಅವಕಾಶವಿದೆ. ಮುಕ್ತರಾಗಿ, ಸಂತುಷ್ಟರಾಗಿ ಮತ್ತು ಸೇವೆ ಮಾಡಿ!
ಮುಂದಿನ ಜನ್ಮದ ಬಗ್ಗೆ ನಾವು ಆಮೇಲೆ ಯೋಚಿಸೋಣ.

ಪ್ರ: ಸತ್ಸಂಗಗಳಲ್ಲಿ ಮತ್ತು ಕೆಲವು ಜೀವನ ಕಲಾ ಶಿಬಿರಗಳಲ್ಲಿ ನಾನೇಕೆ ಅಳುತ್ತೇನೆ?
ಶ್ರೀ ಶ್ರಿ:
ನೀವೇಕೆ ಅಳುತ್ತೀರಿ? ನನಗನ್ನಿಸುತ್ತದೆ ನೀವು ನಗಬೇಕು, ಅಲ್ಲ್ಲವೇ? ಮುಗುಳ್ನಗೆ ಬೀರಿ! ಉಪನಿಶತ್ತಿನಲ್ಲಿ ಒಂದು ಶ್ಲೋಕವಿದೆ-
"ಬಿಧ್ಯಂತಿ ಹೃದಯ ಗ್ರಂಥಿ ಛಿದ್ಯಂತೇ ಸರ್ವ ಸಂಶಯಃ| ಕ್ಷೀಣತೇಚಾಸ್ಯ ಕರ್ಮಾಣಿ ಯಸ್ಮಿನ್ ದೃಷ್ಟೇ ಪರಾವರೇ||” - (ಮಾಂಡೂಕ್ಯೋಪನಿಷತ್)

ನೀವು ನಿಮಗೆ ಪ್ರಿಯವಾದವರನ್ನು ಕಂಡಾಗ, ನಿಮ್ಮ ಹೃದಯದಲ್ಲಿನ ಗಂಟುಗಳು ತೆರೆದು ಕಣ್ಣೀರು ಉಕ್ಕುತ್ತದೆ.ಮನಸ್ಸಿನ ಎಲ್ಲಾ ಸಂಶಯಗಳು ಮತ್ತು ಪ್ರಶ್ನೆಗಳು ಮಾಯವಾಗುತ್ತವೆ ಮತ್ತು ಎಲ್ಲಾ ದುಷ್ಕರ್ಮಗಳು ಮಾಯವಾಗುತ್ತವೆ. ಉಪನಿಷತ್ತುಗಳಲ್ಲಿ ಹೀಗೆ ಹೇಳಲ್ಪಟ್ಟಿದೆ.

ಹಾಗಾಗಿ ನೀವೇಕೆ ಅಳುತ್ತಿದ್ದೀರಿ ಎಂಬುದು ನಿಮಗೆ ತಿಳಿಯದು, ನಿಮ್ಮ ಹುದಯಲ್ಲಿನ ಒಂದು ಗಂಟು ತೆರೆಯುತ್ತಿರುವುದರಿಂದ-ಇದು ಒಂದು ಆಯಾಮ. ಮತ್ತೆ ಅದರಲ್ಲಿ ತಪ್ಪೇನಿಲ್ಲ, ಹೃದಯ ಅರಳಿದಾಗ ಭಾವನೆಗಳು ಉಕ್ಕಿ ಕಣ್ಣೀರು ಹರಿಯುತ್ತೆ. ಕೃತಜ್ಞತೆ ಮತ್ತು ಪ್ರೀತಿಯೂ ಕಣ್ಣೀರುಗಳೊಂದಿಗೆ ಸಂಬಂಧಿತವಾಗಿವೆ, ದುಃಖವಷ್ಟೇ ಅಲ್ಲ. ಇವುಗಳನ್ನು ಮಧುರ ಭಾಷ್ಪ ಎಂದು ಕರೆಯುತ್ತಾರೆ.
ಭಕ್ತಿ ಸೂತ್ರಗಳಲ್ಲಿ ಹೇಳಲಾಗಿದೆ, ದೇವತೆಗಳು ಪಿತಿಯಿಂದ ಬರುವಂಥಹ ಕಣ್ಣೀರುಗಳಿಗಾಗಿ ಕಾತರಿಸುತ್ತಿರುತ್ತಾರೆ.
ಹಾಗಾಗಿ ಇಂಥ ಕಣ್ಣೀರುಗಳನ್ನು ಪಡೆಯಲು ನೀವು ಭಾಗ್ಯವಂತರು.
ಈಗ ಕೆಲವರಿಗೆ ಕಣ್ಣೀರು ಬಾರದಿದ್ದರೆ ’ನಾನು ಭಾಗ್ಯವಂತನಲ್ಲ, ನನಗೆ ಅಳು ಬರುತ್ತಿಲ್ಲ.’ ಎಂದು ಅಂದುಕೊಳ್ಳಬೇಡಿ. ಹಾಗೇನೂ ಇಲ್ಲ.!ನಿಮಗೆ ಕಣ್ಣೀರು ಬಂದರೆ ಮಾತ್ರ ನೀವು ವಿಕಾಸವಾಗಿರುವುದು ಎಂದೇನೂ ಇಲ್ಲ. ಇದು ಕೆಲವರ ರಚನೆಯಷ್ಟೇ.ಕೆಲವರಿಗೆ ಭಾವುಕತೆ ಹೆಚ್ಚು ಮನದಲ್ಲಿ ಕಾಲಿ ಮತ್ತು ಟೊಳ್ಳುತನದ ಅನುಭವ ವಿಶಾಲವಾಗಿರುತ್ತದೆ.ಕೆಲವರನ್ನು ಹೆಚ್ಚು ಭಾವನೆಯ ಅಲೆಗಳು ಆಳುತ್ತವೆ.
ಇವು ವಿವಿಧ ಅನುಭವಗಳು.ವಿವಿಧ ಸಮಯಗಳಲ್ಲಿ ಜನರು ಈ ವಿವಿಧ ಅನುಭವಗಳನ್ನು ಪಡೆಯುತ್ತಾರೆ.ಎಲ್ಲರೂ ಅದನ್ನು ಪಡೆಯಬೇಕಾಗಿಲ್ಲ. ಮತ್ತು ಅದು ವಿಕಾಸದ ಒಂದು ನಿರ್ದಿಷ್ಟ ಚಿಹ್ನೆಯಲ್ಲ. ಇದು ಹಲವು ಚಿಹ್ನೆಗಳಲ್ಲಿ ಒಂದು, ಆದರೆ ಏಕಮಾತ್ರ ಚಿಹ್ನೆಯಲ್ಲ.

ಪ್ರ: ಗುರೂಜಿ, ದಯವಿಟ್ಟು ಅಹಿಂಸೆಯ ಬಗ್ಗೆ ಮಾತನಾಡುತ್ತೀರಾ? ಮಾಂಸಾಹಾರಿಗಳು ’ನೀವು ಸಸ್ಯಾಹಾರಿಗಳೂ ಗಿಡಗಳನ್ನು ಕೊಲ್ಲುತ್ತೀರಿ ಹಾಗೂ ಸಸ್ಯಗಳಿಗೂ ನೋವಾಗಿ ಚೀರಾಡುತ್ತವೆ!’ ಎಂದಾಗ, ಸಸ್ಯಾಹಾರಿಗಳು ಹೇಗೆ ಉತ್ತರ ನೀಡುವುದು.
ಶ್ರೀ ಶ್ರೀ:
ಆ ಮಾಂಸಾಹಾರಿಗಳನ್ನು ಕೇಳಿ, ಅವರ ಮನೆಯಲ್ಲಿ ನಾಯಿ ಮರಿ ಇದೆಯೇ, ಇದ್ದರೆ ಅವರು ಅದನ್ನು ಊಟದಲ್ಲಿ ಬಳಸುವರೇ? ಇಲ್ಲ, ಅವರು ಹಾಗೆ ಮಾಡುವುದಿಲ್ಲ! ಯಾರೂ ಮಾಡುವುದಿಲ್ಲ.
ನೋಡಿ ನಮ್ಮ ಮಾನವ ಶರೀರ ರಚನೆಯು ಶಾಖಾಹಾರ ಸೇವನೆಗೆಂದು ಮಾಡಲಾಗಿದೆ. ಇದರ ಬಗ್ಗೆ ಹಲವು ಸಂಶೋಧನೆಗಳಿವೆ, ಅಂತರ್ಜಾಲದಲ್ಲಿ ಹುಡುಕಿ- ’ನಾನೇಕೆ ಸಸ್ಯಾಹಾರಿಯಾಗಬೇಕು?’ ನಿಮಗೆ ಇದರ ಮೇಲೆ ಹಲವು ವಿವಿಧ ಉತ್ತರಗಳು ದೊರೆಯುತ್ತವೆ. ಎಲ್ಲಾ ಉತ್ತರಗಳೂ ’ಗೂಗ್ಲ್’ನಲ್ಲಿ ದೊರೆಯುತ್ತವೆ.
ಅಹಿಂಸೆಯು ಮನೋಗತ ಉದ್ದೇಶ. ಏನನ್ನಾದರೂ ನಶಿಸುವ ಉದ್ದೇಶದಿಂದ ಮಾಡುವ ಕೆಲಸದಲ್ಲಿರುವ ಮನಃಸ್ಥಿತಿ ಹಿಂಸೆ.ಅಹಿಂಸೆಯೆಂದರೆ ಸಂಪೂರ್ಣವಾಗಿ ಶಾಂತವಾಗಿರುವ ಮನಸ್ಸು, ಅದು ಏನನ್ನೂ ನಶಿಸಲು ಅಥವಾ ಕೊಲ್ಲಲು ಇಚ್ಚಿಸುವುದಿಲ್ಲ. ಅದು ಅಹಿಂಸೆ.
ಕಾನಡರೆಂಬ ಒಬ್ಬ ಋಷಿಗಳಿದ್ದರು.ಅವರು ಬೆಳೆಗಳನ್ನು ಕೀಳುತ್ತಿರಲಿಲ್ಲ; ಅವರು ಗದ್ದೆಗೆ ಹೋಗಿ ಬೀಜಗಳನ್ನು ಆರಿಸುತ್ತಿದ್ದರು.ಹಾಗಾಗಿ ವಸ್ತುಗಳನ್ನು ಅರ್ಥ್ಮಾಡಿಕೊಳ್ಳಬೇಕು ಎಂದು ಕಾನಡ ಮಹರ್ಷಿಗಳು ಹೇಳಿದ್ದರು.ಪದಾರ್ಥ ಜ್ಞಾನಾತ್ ಮೋಕ್ಷಃ - ಜಗತ್ತಿನ ರಚನೆಯಲ್ಲೊಳಗೊಂಡ ವಸ್ತುಗಳನ್ನು ನಿಮಗೆ ಅರ್ಥಮಾಡಿಕೊಳ್ಳುವುದು ಸಾಧ್ಯವಾದರೆ, ನಿಮಗೆ ಮುಕ್ತಿಯ ಅನುಭವವಾಗುತ್ತದೆ.
ಸಸ್ಯಗಳಲ್ಲಿ ನೀವು ಹಣ್ಣುಗಳನ್ನೋ ತರಕಾರಿಗಳನ್ನೋ ಕೇವಲ ಕೀಳುತ್ತಿದ್ದೀರಿ.ಹೋಲಿಕೆಯಲ್ಲಿ ಕನಿಷ್ಟ ಕೇಡನ್ನು ನಿರ್ಧರಿಸುವುದು.

ಪ್ರ: ಪ್ರೀತಿಯಗುರೂಜಿ, ವಿಶಾಲಾಕ್ಷಿ ಮಂಟಪವನ್ನು ಕಮಲದ ಆಕಾರದಲ್ಲಿ ಏಕೆ ರಚಿಸಲಾಗಿದೆ? ನಿಮಗೆ ಕಮಲ ಹೂವು ಪ್ರಿಯವಾದ್ದರಿಂದಲೇ?ವಿಶಾಲಾಕ್ಷಿ ಮತ್ತು ಸುಮೇರು ಎಂಬ ಪದಗಳ ಅರ್ಥವೇನು?
ಶ್ರೀ ಶ್ರೀ:
ಅದು ಚೆನ್ನಾಗಿದೆಯಲ್ಲವೇ? (ನಗು).
ನೀವು ನೂರು ವಿವಿಧ ಕಾರಣಗಳನ್ನು ಕಂಡುಕೊಳ್ಳಬಹುದು. ನಾವು ಇಂಥದ್ದೊಂದನ್ನು ಮಾಡಲು ನಿರ್ಧರಿಸಿದೆವು, ಮತ್ತೆ ಅದು ಸುಂದರವಾಗಿ ಕಾಣುತ್ತದೆ, ಅಷ್ಟೇ!
ನಾನದಕ್ಕೆ ದಾಸವಾಳದ ಆಕಾರ ನೀಡಿದ್ದರೆ, ನೀವಿದೇ ಪ್ರಶ್ನೆಯನ್ನು ಕೇಳುತ್ತಿದ್ದಿರಿ! ದಾಸವಾಳವೇಕೆ?ಹಾಗಾಗಿ ಈ ಹೂವು ಏಕೆ, ಆ ಹೂವೇಕೆ ಎಂದು ಸಮರ್ಥಿಸುವ ಅಗತ್ಯವಿಲ್ಲ. ಬೇರೆ ಯಾವುದೇ ಹೂವನ್ನೂ ಸಿಟ್ಟುಗೊಳಿಸಲು ಅಥವಾ ಮತ್ಸರಗೊಳಿಸಲು ನಾನು ಇಚ್ಛಿಸುವುದಿಲ್ಲ. (ನಗು).
ವಿಶಾಲ ಎಂದರೆ ವಿಸ್ತಾರವಾದ, ಅಕ್ಷಿ ಎಂದರೆ ಕಣ್ಣುಗಳು; ಹಾಗೆ ಅದರರ್ಥ ವಿಸ್ತಾರವಾದ ದೃಷ್ಟಿ.ಹಾಗಾಗಿ ಅಲ್ಲಿಗೆ ಹೋದವರ ದೃಷ್ಟಿಯು ವಿಶಾಲವಗುತ್ತದೆ ಮತ್ತು ಅವರು ವಿಷಯಗಳನ್ನು ದೊಡ್ಡದಾಗಿ ನೋಡಲಾರಂಭಿಸುತ್ತಾರೆ.ಅಲ್ಲವೆ?(ನೆರೆದ ಜನರು ಚಪ್ಪಾಳೆಗಳೊಂದಿಗೆ ಉತ್ತರಿಸಿದರು).
ಧ್ಯಾನವು ಅದನ್ನೇ ಮಾಡುವುದು- ನಿಮ್ಮ ದೃಷ್ಟಿಯನ್ನು ವಿಸ್ತರಿಸಿ, ನಿಮ್ಮ ಬೇರು(ಆಧಾರ)ಗಳನ್ನು ಆಳ(ವೃದ್ಧಿ)ಗೊಳಿಸುತ್ತದೆ.

ಪ್ರ:ಗುರೂಜಿ, ನಾನು ಬಹಳ ಭಕ್ತಿಯನ್ನು ಅನುಭವಿಸುತ್ತಿದ್ದೆ, ಆದರೆ ಅದು ಸಮಯದೊಂದಿಗೆ ಕುಂದಿದಂತೆ ಕಾಣುತ್ತಿದೆ. ಪತಂಜಲಿ ಯೋಗ ಸೂತ್ರಗಳ ಬಗ್ಗೆ ನಿಮ್ಮ ಪ್ರವಚನಗಳನ್ನು ಕೇಳಿದ ಮೇಲೆ, ಅದು ನನ್ನ ಸ್ವಭವವಲ್ಲ ಎಂದು ಅರಿತೆ.ನಾನು ಮತ್ತೆ ಅದೇ ಭಕ್ತಿಯನ್ನು ಹೇಗೆ ಅನುಭವಿಸಲಿ ಎಂದು ದಯವಿಟ್ಟು ತಿಳಿಸುತ್ತೀರಾ?
ಶ್ರೀ ಶ್ರೀ:
ಭಕ್ತಿ ಎಂದಿಗೂ ಇದೆ, ಆದರೆ ಕೆಲವೊಮ್ಮೆ ಮೋಡಗಳು ಕವಿಯುತ್ತವೆ. ನಿಷ್ಠೆಯು ಸಮಯದೊಂದಿಗೆ ಮೇಲೆ ಮತ್ತೆ ಕೆಳಗೆ ಸಾಗುತ್ತದೆ.ಆದರೆ ಅದು ಕೆಳಗೆ ಹೋದಾಗ ಅದು ಎಂದಿಗೂ ಕೆಳಗೆಯೇ ಉಳಿಯುತ್ತದೆ ಎಂದು ಯೋಚಿಸಬೇಡ. ಅದು ಮತ್ತೆ ಮೇಲೆ ಹೋಗುತ್ತದೆ.
ಇದು ಮನಸ್ಸಿನ ಸ್ವಭಾವ, ಅದು ಮೇಲೆ ಕೆಳಗೆ ಹೋಗುತ್ತದೆ ಮತ್ತು ಪ್ರೀತಿ ಹಾಗೂ ನಿಷ್ಠೆ ಮೇಲೆ ಕೆಳಗೆ ಹೋಗುತ್ತಿವೆಯೋ ಎಂಬಂತೆ ಕಾಣಿಸುತ್ತದೆ.ಹಾಗೆಯೇ ಅದು ಪ್ರಾಣ ಶಕ್ತಿಗೆ ಸಂಬಂಧಿಸಿದೆ.ಪ್ರಾಣವು ಮೇಲ್ಮಟ್ಟದಲ್ಲಿರುವಾಗ ನಿಷ್ಠೆಯು ಉನ್ನತವಾಗಿರುತ್ತದೆ.ಪ್ರಾಣ ಕೆಳಮುಖವಾಗಿರುವಾಗ ’ಓ, ಇದೇನು?ನಾನು ಸರಿಯಾದ ಸ್ಥಳದಲ್ಲಿದ್ದೇನೆಯೇ?ನಾನು ಸರಿಯಾದುದನ್ನೇ ಮಾಡುತ್ತಿದ್ದೇನೆಯೇ?’ ಎಂದು ಮನಸ್ಸಿನಲ್ಲಿ ನೂರಾರು ಸಂಶಯಗಳು ಬರುತ್ತವೆ.ಹಾಗಾಗಿ ನೀವು ನಿಮ್ಮ ಆತ್ಮನಲ್ಲಿ ಭದ್ರವಾಗಿ ನೆಲೆಗೊಂಡಿರುವಾಗ, ನೀವು ಜ್ಞಾನದಲ್ಲಿ ಭದ್ರವಾಗಿ ನೆಲೆಗೊಂಡಿರುವಾಗ, ಆಗ ಮಾತ್ರ ಸ್ಥಿರತೆ ಉಂಟಾಗುತ್ತದೆ.ಆದ್ದರಿಂದಲೇ ಹಿಂದಿನ ಸಂತರು ದೇವರಲ್ಲಿ ಅಚಲ ಶ್ರದ್ಧೆಗಾಗಿ ಪ್ರಾರ್ಥಿಸುತ್ತಿದ್ದರು.
ಬಹಳ ಸಂತರು ಅಚಲ ಶ್ರದ್ಧೆ, ನಿರಂತರ ಭಕ್ತಿ, ಸತತವಾದ ಪ್ರೀತಿಯನ್ನು ಹಾಡಿ ಕೇಳಿಕೊಂಡಿದ್ದಾರೆ.
ನಾವು ಇಷ್ಟನ್ನೇ ಕೇಳಿಕೊಳ್ಳಬಹುದು ಯಾಕೆಂದರೆ ಇದೂ ಒಂದು ಕೊಡುಗೆ! ನಿಮಲ್ಲಿ ಪ್ರೀತಿ ಹಾಗೂ ಭಕ್ತಿ ಇದ್ದಾಗ ನೋಡಿ ನಿಮ್ಮ ಜೀವನದಲ್ಲಿ ಎಂತಹ ಪರಿವರ್ತನೆಗಳುಂಟಾಗುತ್ತವೆ.ಅವು ಮುರಿದು ಬಿದ್ದಾಗ, ನೋಡಿ ಏನಾಗುತ್ತದೆ - ಒಂದು ರೀತಿಯ ಜಡತೆ ಪ್ರಾರಂಭವಾಗುತ್ತದೆ.ನಿರಾಶೆಯ ಭಾವನೆ ಬಂದು ಜೀವನ ನಿರರ್ಥಕವೆಂಬಂತೆ ಕಾಣಿಸುತ್ತದೆ.ಪ್ರತಿ ಬಾಗಿಲೂ ಮುಚ್ಚಿರುವಂತೆ ಕಾಣುತ್ತದೆ ಹಾಗೂ ಎಲ್ಲೆಡೆಯೂ ಅವರು ಕತ್ತಲನ್ನು ಕಾಣುತ್ತಾರೆ.ಕ್ರೈಸ್ತ ಸಂಪ್ರದಾಯದಲ್ಲಿ ಅದನ್ನು ಆತ್ಮದ ಕತ್ತಲ ರಾತ್ರಿ ಎಂದು ಕರೆಯುತ್ತಾರೆ.ಆತ್ಮವು ಅಂಥ ಕತ್ತಲ ರಾತ್ರಿಯನ್ನು ಕಳೆಯಬೇಕು. ಆದರೆ ನಾನು ಹೇಳುತ್ತೇನೆ, ನೀವೊಬ್ಬ ಯೋಗಿಯಾಗಿದ್ದರೆ(ಆಧ್ಯಾತ್ಮಿಕ ಪಥದಲ್ಲಿನ ಜ್ಞಾನಾರ್ಥಿ), ನಿಮಗೆ ಅದನ್ನು ಕಳೆಯಬೇಕಾಗಿಲ್ಲ.
ಯೋಗ ಸೂತ್ರಗಳಲ್ಲಿ, ನಾನು ಯೋಗದ ಪಥದಲ್ಲಿನ ಒಂಭತ್ತು ತೊಡಕುಗಳ ಬಗ್ಗೆ ಮಾತನಾಡಿದ್ದೇನೆ.ಮತ್ತು ನೀವು ಅವುಗಳನ್ನು ಹೇಗೆ ದಾಟಿಬರಬಹುದು?
ಏಕತತ್ತ್ವ ಅಭ್ಯಾಸ - ನೀವು ಒಂದು ತತ್ತ್ವವನ್ನು ತಪ್ಪದೆ ಪಾಲಿಸುತ್ತಿದ್ದರೆ ಆಗ ನೀವು ಈ ಒಂಭತ್ತು ತೊಡಕುಗಳನ್ನು ಅಥವಾ ತೊಡಕುಗಳಂತೆ ತೋರುವಂಥವನ್ನು ದಾಟಿ ಸಾಗಬಹುದು.

ಪ್ರ: ಪ್ರೀತಿಯ ಗುರೂಜಿ, ನಾನು ಗಾಢ ಪ್ರೀತಿ ಅಥವಾ ಭಕ್ತಿಯನ್ನು ಅನುಭವಿಸುವಾಗ ನನ್ನ ಅರಿವನ್ನು ಕಳೆದುಕೊಳ್ಳುತ್ತೇನೆ. ನಾನು ಅರಿವಿನಲ್ಲಿರುವಾಗ ಭಕ್ತಿಯ ಆಳವನ್ನು ಕಳೆದುಕೊಳ್ಳುತ್ತೇನೆ.ಗಾಢತೆ ಮತ್ತು ಅರಿವು, ಇವೆರಡನ್ನೂ ನಾನು ಹೇಗೆ ಉಳಿಸಿಕೊಳ್ಳಬಹುದು?
ಶ್ರೀ ಶ್ರೀ:
ನಿಮಗೆ ಏನಾಗುತ್ತಿದೆ ಎಂದು ಆಲೋಚಿಸಲು ಮತ್ತು ನೋಡಲು ಬಿಡುವಿನ ಸಮಯ ಹೆಚ್ಚಾಗಿರಬೇಕೆಂದು ಕಾಣುತ್ತದೆ. ಕಾರ್ಯನಿರತರಾಗಿರಿ, ಕರ್ಮ ಯೋಗವನ್ನು ಮಾಡಿ(ಕೆಲಸಗಳಲ್ಲಿ ನಿರತವಾಗಿರುವ ಮಾರ್ಗ). ನೀವು ಸೇವೆಯಲ್ಲಿ ನಿರತರಾಗಿದಾಗ, ಕುಳಿತು ಆಲೋಚಿಸುವುದಿಲ್ಲ’ನನಗೆ ಏನನ್ನಿಸುತ್ತಿದೆ? ನನಗೆ ಏನನಿಸುತ್ತಿಲ್ಲ?’ ಭಾವನೆಗಳೆಲ್ಲ ಜೀವನದ ಭಾಗ, ಅವುಗಳೊಂದಿಗೆ ಮುನ್ನಡೆಯಿರಿ!
ನಮ್ಮ ಶರೀರದಲ್ಲಿ 1,72,೦೦೦ ನಾಡಿಗಳಿವೆ. ಕೆಲವೊಮ್ಮೆ ಜ್ಞಾನ ನಾಡಿ ತೆರೆದುಕೊಳ್ಳುತ್ತದೆ, ಕೆಲವೊಮ್ಮೆ ಸಂಗೀತ ನಾಡಿ ತೆರೆದುಕೊಳ್ಳುತ್ತದೆ.ವಿವಿಧ ನಾಡಿಗಳು ತೆರೆದುಕೊಂಡಾಗ ವಿವಿಧ ಅನುಭವಗಳನ್ನು ಪಡೆಯುತ್ತೀರಿ.ನಿಮ್ಮ ಭಾವನೆಗಳಿಂದ ಅಷ್ಟೊಂದು ಮನಸ್ಸಿನಲ್ಲಿ ಆವೃತ್ತರಾಗದಿರಿ.ತಿಳಿಯಿತಾ?
ನಿಮಗೇನನ್ನಿಸುತ್ತಿದ್ದರೂ ಏನಂತೆ?ಎಲ್ಲರೂ ನೀವೇನು ಮಾಡುತ್ತೀರಿ ಎಂದು ಮುಂದೆ ನೋಡುತ್ತಿರುತ್ತಾರೆ.ಈ ಭೂಗ್ರಹಕ್ಕೆ ನೀವು ಹೇಗೆ ಸಹಾಯವಾಗಬಹುದು, ಬೇಕಾದುದನ್ನು ಒದಗಿಸಬಹುದು?
ನಾನೇನು ಒಳ್ಳೆಯದನ್ನು ಮಾಡಬಹುದು - ಅದರಲ್ಲಿ ಗಮನವಿಡಿ.ನಡೆಯುತ್ತಿರುವುದರ ಮೇಲೆ ಕೇಂದ್ರೀಕರಿಸಬೇಡಿ.ನೀವೇನು ಮಾಡಬಹುದು ಮತ್ತು ನೀವೇನು ಮಾಡಬೇಕು ಎಂಬುದರ ಮೇಲೆ ಗಮನವಿಡಿ.
ಹಲವು ಬಾರಿ, ನಾವೇನು ಮಾಡಬೇಕಾಗಿದೆಯೋ ಅದರ ಮೇಲೆ ಗಮನವಿರಿಸುವುದಿಲ್ಲ ಆದರೆ ನಡೆಯುತ್ತಿರುವುದರ ಬಗ್ಗೆ ಕುಳಿತು ಆಲೋಚನೆಗಿಳಿಯುತ್ತೇವೆ.ನಾವು ಮಾಡುತ್ತಿರುವ ವಿಷಯಗಳಿಗಿಂತ, ನಡೆಯುತ್ತಿರುವ ವಿಷಯಗಳ ಮೇಲೆ ಬಹಳ ಗಮನವಿಡುತ್ತೇವೆ.ನೀವೇನು ಮಾಡುತ್ತೀರೋ ಅದರ ಮೇಲೆ ಗಮನ ಹಾಕಿ ಮತ್ತು ನಡೆಯುತ್ತಿರುವುದನ್ನು ಪ್ರಕೃತಿಗೆ ಬಿಡಿ.ಏನೇ ನಡೆಯುತ್ತಿದ್ದರೂ ಪ್ರಕೃತಿಯು ನಿಮ್ಮನ್ನು ಅದರ ಮೂಲಕ ಸಾಗಿಸುತ್ತದೆ.
ನಾನು ಹೇಳುತ್ತೇನೆ, ಅದು ಆಲೋಚನೆಗಳಾಗಿರಲಿ ಅಥವಾ ಭಾವನೆಗಳಗಿರಲಿ, ಅದೊಂದು ಪ್ರತ್ಯೇಕ ಘಟನೆಯಲ್ಲ. ಅದು ಜಾಗತಿಕ ಸಂಗತಿ. ಉದಾಹರಣೆಗೆ, ನೀವು ಬೇರೊಂದು ದೇಶದಲ್ಲಿದ್ದು ಅಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಥವಾ ಒಂದು ರಾಷ್ಟ್ರೀಯ ದಿನಾಚರಣೆಯಗುತ್ತಿದ್ದರೆ, ಎಲ್ಲರೂ ದೇಶಭಕ್ತಿಗೀತೆಗಳನ್ನು ಹಾಡುತ್ತಾ ದೇಶಾಭಿಮಾನದಿಂದಿರುವಾಗ ನೀವು ಒಮ್ಮೆಲೇ ದೇಶಭಕ್ತಿಯನ್ನು ಅನುಭವಿಸಲು ಆರಂಭಿಸುವುದಿಲ್ಲವೇ?
(ಬಹಳ ಮಂದಿ ಕೈ ಎತ್ತಿದರು)
ಕಣ್ಣೀರುಗಳು ಹರಿಯುತ್ತವೆ.
ಹಾಗೆಯೇ ನೀವು ದೂರದರ್ಶನದಲ್ಲಿ ಒಬ್ಬ ರಾಜಕಾರಾಣಿಯಿಂದ ಅನ್ಯಾಯಕ್ಕೆ ತುತ್ತಾದ ವ್ಯಕ್ತಿಯು ತನ್ನ ಕಥೆಯನ್ನು ಹೇಳುತ್ತಿರುವುದನ್ನು ನೋಡಿದರೆ, ನೀವು ಒಮ್ಮೆಲೇ ಕ್ರೋಧ ಅನುಭವಿಸುತ್ತೀರಿ.ನಿಮ್ಮಲ್ಲೆಷ್ಟು ಜನ ಇದನ್ನು ಅನುಭವಿಸಿದ್ದೀರಿ? (ಬಹಳ ಮಂದಿ ಕೈ ಎತ್ತಿದರು)
ನೀವು ಬಹಳ ಸಿಟ್ಟುಗೊಂಡಿರಿ.ಎಲ್ಲರೂ ಒಂದು ರೀತಿಯ ದೇಶಭಕಿಯನ್ನು ಅನುಭವಿಸುತ್ತಾರೆ, ಅದು ನಿಮ್ಮಲಿ ಉಕ್ಕುತ್ತದೆ.ಚಲನಚಿತ್ರ ನಿರ್ದೇಶಕರು ಹಾಗೂ ನಿರ್ಮಾಪಕರು ನಿಮ್ಮಲ್ಲಿ ಈ ಭಾವನೆಗಳನ್ನು ಹೇಗೆ ಆವಾಹಿಸುವುದು, ಮತ್ತು ಅಲ್ಲಿ ಯಾವ ರಾಗ-ಸಂಗೀತ ಸರಿಹೊಂದುತ್ತದೆ ಎಂದು ಬಲ್ಲರು.ನಿಮಗೆ ಗೊತ್ತೇ ಭಾವನೆಗಳು ಸಂಗೀತದೊಂದಿಗೆ ಸಂಬಧಿತವಾಗಿವೆ ಹಾಗೂ ಭಾವನೆಗಳನ್ನು ಪ್ರಚೋದಿಸಬಹುದು. ಈ ದೊಡ್ಡ ತುಮುಲ(ದಂಗೆ)ಗಳು ಹೇಗೆ ಉಂಟಾಗುತ್ತವೆ? ಭಾವನೆಗ್ಳನ್ನು ಪ್ರಛೋದಿಸಲಾಗುತ್ತದೆ.ಮತ್ತು ಅಸ್ಥಿರವಾಗಿರುವವರು ಅಷ್ಟರಲ್ಲೆ ಅದಕ್ಕೆ ಧುಮುಕುತ್ತಾರೆ.ಅರಿವಿಲ್ಲದ ಜನರು ಅದಕ್ಕೆ ಧುಮುಕಿ ಸ್ವೇಚ್ಚೆಯಿಂದ ಅದನ್ನು ಮಾಡುತ್ತಾರೆ, ಚಪಲ ತೀರಿಸಿಕೊಳ್ಳುತ್ತಾರೆ.
ಅಸ್ಸಾಂನಲ್ಲಿ ದಂಗೆಗಳು ನಡೆಯುತ್ತಿವೆ ಮತ್ತು ಸಮೀಪ 2,೦೦,೦೦೦ ಜನರು ಬೀಡುಗಳನ್ನು(ಚಮ್ಪ್) ಸೇರಿದ್ದಾರೆಂದು ಇವತ್ತು ನನಗೆ ವರದಿಯಾಯಿತು. ಅವರು ತಮ್ಮ ಮನೆಗಳನ್ನು ಬಿಟ್ಟು ಓಡಬೇಕಾಯಿತು.೫೦೦ ಗ್ರಾಮಗಳ ಮೇಲೆ ಪರಿಣಾಮವಾಯಿತು.ಆದರೆ ಇದರ ನಡುವಿನಲ್ಲಿ, ೩ ಗ್ರಾಮಗಳು ಪರಿಣಮಕ್ಕೊಳಗಾಗಲಿಲ್ಲ. ಯಾಕೆ ಗೊತ್ತೇ? ಆ ಮೂರು ಗ್ರಾಮಗಳಲ್ಲಿ ಜೀವನ ಕಲೆಯ ಬಹಳ ಪ್ರಬಲವಾದ ಉಪಸ್ಥಿತಿಯಿತ್ತು!
ಸವಿತಾ ಮತ್ತು ಆಶಿಶ್ ಭೂತಾನಿ(ಅಸ್ಸಾಂನಲ್ಲಿ ಪರಿಹಾರ ಹಾಗೂ ಪ್ರಗತಿಗಾಗಿ ಕೆಲಸ ಮಾಡುತ್ತಿರುವ ಭಕ್ತರು) ಇಲ್ಲಿದ್ದಾರೆ. ಸವಿತಾ ಆ ಹಳ್ಳಿಗಳ ಹೆಸರನ್ನೂ ಹೇಳುತ್ತಿದ್ದಳು.
ಹಾಗಾಗಿ ಆ ಮೂರೂ ಗ್ರಾಮಗಳು ಸೇರಿದವು ಮತ್ತೆ ಆ ಗ್ರಾಮಗಳಲ್ಲಿ ಯಾವುದೇ ಹಿಂಸಾಚಾರ ನಡೆಯಲು ಬಿಡಲಿಲ್ಲ. ಯಾರಿಗೂ ಯಾರ ಮನೆಯನ್ನೂ ಸುಡಲು ಬಿಡಲಿಲ್ಲ. ಆ ಪೂರ್ತಿ ಹಳ್ಳಿಯನ್ನು ಕಾಯ್ದಿರಿಸಲಾಗಿತ್ತು, ಏಕೆಂದರೆ ಅವರಲ್ಲಿ ವಸುಧೈವಕುಟುಂಬಕಂ(ಈ ಜಗತ್ತು ಒಂದು ಪರಿವಾರ) ಎಂಬ ಪರಿಜ್ಞಾನವಿತ್ತು. ಮುಸಲ್ಮಾನರು, ಕ್ರೈಸ್ತರು, ಹಿಂದೂಗಳು, ಎಲ್ಲರೂ ಸೇರಿ ನಿಂತರು ಮತ್ತು ಮಸಲ್ಮಾನರು ಹಿಂದೂಗಳನ್ನು ಹಿಂಸಿಸದಂತೆ ಹಾಗೂ ಹಿಂದೂಗಳು ಮುಸಲ್ಮಾನರನ್ನು ಹಿಂಸಿಸದಂತೆ ನೋಡಿಕೊಂಡರು.ಅವರು ಯಾವುದೇ ದಿಕ್ಕಿನಿಂದ ಹಿಂಸೆಯಾಗಲು ಬಿಡಲಿಲ್ಲ.
ಸವಿತಾ, ನಮಗೆ ಆ ಗ್ರಾಮಗಳ ಹೆಸರನ್ನು ಹೇಳು.(ಸವಿತಾ ಅಸ್ಸಾಂನ ಆ ಮೂರು ಹಳ್ಳಿಗಳ ಹೆಸರನ್ನು ತಿಳಿಸಿದರು).

ಸವಿತಾ: ಒಂದು ಗ್ರಾಮದಲ್ಲಿ ಎಲ್ಲಾ ಮೂರೂ ಮತಗಳಿವೆ - ಬೋಡೋ, ಅಸ್ಸಾಂ ಜನಾಂಗ ಹಾಗೂ ಮುಸಲ್ಮಾನರು. ಆದರೂ, ಅವರೆಲ್ಲರೂ ಜೊತೆಗೂಡಿ ಯಾವುದೇ ಗ್ರಾಮದಲ್ಲಿ ಯಾವುದೇ ಹಿಂಸೆ ನಡೆಯದಂತೆ ಖಾತ್ರಿಪಡಿಸುವ ನಿಲುವು ತೆಗೆದುಕೊಂಡರು. ಇದೆಲವೂ ಜೀವನ ಕಲೆಯ ಉಪಸ್ಥಿತಿಯಿಂದ ಆಯಿತು, ಯಾಕೆಂದರೆ ಬಹಳ ಜನರು ಭಾಗ ೧ ಮತ್ತು ವೈ.ಎಲ್.ಟಿ.ಪಿ.(ಗ್ರಾಮಗಳಲ್ಲಿ ಯುವ ಮುಖಂಡರ ತರಬೇತಿಗಾಗಿ ಶಿಬಿರ) ಶಿಬಿರಗಳನ್ನುಮಾಡಿದ್ದರು. ಹಾಗಾಗಿ ಈ ಮೂರು ಹಳ್ಳಿಗಳಲ್ಲಿ ಯಾವುದೇ ಹಿಂಸೆ ನಡೆಯಲಿಲ್ಲ, ಯಾರೂ ಕೊಲೆಯಾಗಲಿಲ್ಲ. ಈ ಗ್ರಾಮಗಳ 1 ಅಥವಾ 2ಕಿ.ಮೀ ಸಮೀಪದಷ್ಟು ಪಕ್ಕದ ಗ್ರಾಮಗಳು ಸಂಪೂರ್ಣವಾಗಿ ನೆಲಸಮವಾಗುವಂತೆ ಸುಡಲ್ಪಟ್ಟಿದ್ದವು.ಆದರೆ ಈ ಮೂರು ಹಳ್ಳಿಗಳು ಜೀವನ ಕಲೆಯಿಂದಾಗಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದವು."
ಬಹಳ ಒಳ್ಳೆಯದು, ಬಹಳ ಒಳ್ಳೆಯದು! ಜೈ ಗುರುದೇವ.
ಈ ಜ್ಞಾನವನ್ನು ಎಲ್ಲರಿಗೂ ತಲುಪಿಸುವುದು ಏಷ್ಟು ಮುಖ್ಯವೆಂದು ಕಾಣುತ್ತಿದ್ದೀರಾ?ಈ ಜ್ಞಾನವನ್ನು ಹರಡುವುದು ನಮಗೆ ಬಹಳ ಮುಖ್ಯವೆಂದು, ಅದರಲ್ಲೂ ಸೂಕ್ಷ್ಮ ಪ್ರದೇಶಗಳಲ್ಲಿ ಮುಖ್ಯವೆಂದು ಎಷ್ಟು ಮಂದಿ ಯೋಚಿಸುತ್ತೀರಿ? ಎಲ್ಲಿ ಶಾಂತಿ ನಾಜೂಕಾಗಿದೆಯೋ, ಅಲ್ಲಿ ನಾವು ಹೆಜ್ಜೆಯಿಟ್ಟು ಏನಾದರೂ ಕೆಲಸ ಮಾಡಬೇಕು!

ಪ್ರ: ಜೈ ಗುರುದೇವ, ನಾನು 2014 ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದುಕೊಂಡಿದ್ದೇನೆ. ಚುನಾವಣೆಗೆ ಇನ್ನೂ ಎರಡು ವರ್ಷಗಳಿವೆ.ಗೆಲ್ಲಬೇಕಾದರೆ, ಈ ಎರಡು ವರ್ಷಗಳಲ್ಲಿ ನಾನು ಕ್ಷೇತ್ರದಲ್ಲಿ ಏನು ಕೆಲಸ ಮಾಡಬೇಕು?
ಶ್ರೀ ಶ್ರೀ:
ಬಹಳ ಒಳ್ಳೆಯದು. ಮೊದಲು ಕ್ಷೇತ್ರ ಮತ್ತು ಪ್ರಾಂತ್ಯವನ್ನು ಆಯ್ಕೆ ಮಾಡಿ ನಂತರ ಅಲ್ಲಿ ಬಹಳ ಕೆಲಸ ಮಾಡಿ.ಶಿಬಿರಗಳನ್ನು ನಡೆಸಿ ಅಲ್ಲಿ ಹೆಚ್ಚು ಸ್ವಯಂಸೇವಕರನ್ನು ಪೋಷಿಸಿ.ಅಲ್ಲಿ ಟಿ.ಟಿ.ಸಿ.-ಪೂರ್ವ ಸ್ವಯಂಸೇವಕ ತರಬೇತಿ ಶಿಬಿರವನ್ನು ಏರ್ಪಡಿಸಿ.ಎಲ್ಲರನ್ನೂ ಜೊತಗೂಡಿಸಿ ಮತ್ತು ಅವರು ಒಂದು ಆಧ್ಯಾತ್ಮಿಕ ಸಮಾಜ ಅಂದರೆ ಕಾನೂನು ಪಾಲಿಸುವ ಮತ್ತು ಭ್ರಷ್ಟ ಮುಕ್ತ ಸಮಾಜದ ನಿರ್ಮಾಣದಲ್ಲಿ ಹೇಗೆ ನೆರವಾಗಬಹುದು ಎಂಬ ಅರಿವು ಅವರಲ್ಲಿ ಮೂಡಿಸಿ.
ಇದನ್ನು ಖಂಡಿತವಾಗಿ ಮಾಡಿ.

ಪ್ರ: ಗುರೂಜಿ, ಸಾಯದೆ ಸ್ವರ್ಗವಿಲ್ಲ ಎಂದು ಹೇಳುತ್ತಾರೆ. ಮೋಕ್ಷ ಪಡೆಯಲು ಸಾಯುವುದು ಮುಖ್ಯವೇ?
ಶ್ರೀ ಶ್ರೀ:
ಹಾಗೆ ಯಾರೆಂದರು? ಬದುಕಿರುವಾಗ ನಿಮಗೆ ಸ್ವರ್ಗದ ಅನುಭವವಾಗದಿದ್ದರೆ, ಸತ್ತ ಮೇಲೆ ನೀವು ಅದನ್ನು ಹೇಗೆ ಅನುಭವಿಸಬಹುದು?ಸತ್ತ ಮೇಲೂ ನೀವದನ್ನು ಅನುಭವಿಸುವುದಿಲ್ಲ. ಜೀವಿಸುತ್ತಿರುವಾಗ ನಿಮಗೆ ನಗಲು, ಸಂತೋಷದಿಂದಿರಲು ಮತ್ತು ಆನಂದದಿಂದಿರಲು ಕಲಿಯಲು ಆಗದಿದ್ದರೆ, ಮರಣದ ನಂತರ ನೀವೇನು ಕಲಿಯುತ್ತೀರಿ? ಸಾಧ್ಯವೇ ಇಲ್ಲ! ಹಾಗೆ ಯಾರೆಂದರು?
ಮತ್ತೆ ನೀವೇಕೆ ಇಲ್ಲಿ ಬಂದಿದ್ದೀರಿ?ನೀವು ಇಲ್ಲಿ ನಿಮ್ಮ ಕರ್ಮಗಳನ್ನು ಕಳೆಯಲು ಬಂದಿದ್ದೀರಿ, ನೀವು ಇಲ್ಲೇ ಸ್ವರ್ಗವನ್ನು ಅನುಭವಿಸುವುದು ಸಾಧ್ಯವಾಗಲೆಂದು.

ಪ್ರ: ಗುರೂಜಿ, ಭಕ್ತಿ ಮತ್ತು ಸಮರ್ಪಣೆ ಬುದ್ಧಿವಂತಿಕೆಯ ಚಿಹ್ನೆಗಳೆನ್ನಲ್ಪಡುತ್ತವೆ. ಆದರೆ ಭಕ್ತಿ ಮತ್ತು ಸಮರ್ಪಣೆಗಳೆರಡೂ ಬುದ್ಧಿಯನ್ನು ಮೀರಿದವು.ಮತ್ತೆ ಅವು ಹೇಗೆ ಅದನ್ನು ಗುರುತಿಸುವ ಚಿಹ್ನೆಗಳಾಗಿರಬಹುದು?
ಶ್ರೀ ಶ್ರೀ:
ನೋಡಿ, ಸತ್ಯ ಒಂದೇ ಬಗೆಯದ್ದಾಗಿಲ್ಲ. ಸತ್ಯಕ್ಕೆ ಹಲವು ಮುಖಗಳಿವೆ. ಹಾಗಾಗಿ ನೀವು ಯಾವುದೇ ಸಿದ್ಧಾಂತವನ್ನು ಸಾಬೀತುಪಡಿಸಬಹುದು ಅಥವಾ ಅಬದ್ಧವೆಂದು ಸಾಧಿಸಬಹುದು.ಯಾವುದೇ ಸಿದ್ಧಾಂತವನ್ನು ತೆಗೆದುಕೊಳ್ಳಿ, ನಿವದನ್ನು ಎರಊ ರೀತಿ ಸಾಧಿಸಬಹುದು, ಸರಿ ಮತ್ತು ತಪ್ಪು ಎಂದೂ ಸಾಧಿಸಬಹುದು. ಎರಡೂ ಸಾಧ್ಯ, ಆಯಿತೇ!
ಅದರ ಬಗ್ಗೆ ಯೋಚಿಸಿ! ನಿಮಗದು ಸರಿಯೆನಿಸಿದರೆ ಸ್ವೀಕರಿಸಿ ಇಲ್ಲವಾದರೆ ಬಿಟ್ಟುಬಿಡಿ.ಇದನ್ನು ನಿಮ್ಮದೇ ಚಿತ್ತದೊಂದಿಗೆ ಚರ್ಚಿಸಿ.ನೀವು ಚರ್ಚಿಸಿದಾಗ, ಅದು ಒಂದು ದೃಷ್ಟಿಯಿಂದ ಸರಿಯೆಂದು ಕಾಣುತ್ತದೆ ಹಾಗೂ ಇನ್ನೊಂದು ದೃಷ್ಟಿಯಿಂದ ಅದು ತಪ್ಪೆಂದು ಕಾಣುತ್ತದೆ ಎಂಬುದನ್ನು ತಿಳಿಯುತ್ತೀರಿ.

ಪ್ರ: ಗುರೂಜಿ, ನಾವು ಭಗವಂತನಿಗೆ ಹೇಗೆ ಸಂಪೂರ್ಣವಾಗಿ ಶರಣಾಗಬಹುದು? ದಯವಿಟ್ಟು ವಿವರವಾಗಿ ಹೇಳಿ.
ಶ್ರೀ ಶ್ರೀ:
ಎಚ್ಚೆತ್ತು ನೋಡಿ ನಿಮ್ಮದೇನೂ ಇಲ್ಲ ಎಂದು; ನಿಮ್ಮಲ್ಲಿರುವ ಏನೂ ನಿಮಗೆ ಸೇರಿದ್ದಲ್ಲ, ಆಗ ನೀವು ಸಂಪೂರ್ಣವಾಗಿ ಶರಣಾಗುತ್ತೀರಿ.
ಅಥವಾ ನಿಮಗೆ ಸಿಕ್ಕಿರುವುದನ್ನೆಲ್ಲಾ ನೋಡಿ, ನಿಮಗೆ ಅರ್ಹತೆ ಇಲ್ಲದಾಗಲೂ ನಿಮಗೆ ದೊರಕಿರುವುದನ್ನು ನೋಡಿ, ಆಗ ನೀವು ಸಂಪೂರ್ಣವಾಗಿ ಶರಣಾಗುತ್ತೀರಿ.
’ನಾನು ಇಷ್ಟೊಂದಕ್ಕೆ ಅರ್ಹನಲ್ಲ,ಆದರೂ ನಾನು ಇಷ್ಟೆಲ್ಲಾ ಪಡೆದಿದ್ದೇನೆ’, ಎಂದು ಯೋಚಿಸುವುದರಿಂದ ನೀವು ಸಂಪೂರ್ಣ ಶರಣಾಗುತ್ತೀರಿ ಮತ್ತು ನಿಮ್ಮಲ್ಲಿ ಕೃತಜ್ಞತೆ ತಾನಾಗಿ ತುಳುಕುತ್ತದೆ.

ಪ್ರ: ಗುರೂಜಿ, ನಿಮ್ಮನ್ನು ಭೇಟಿಯಾದ ಮೇಲೂ ನಾನು ಸಂತೃಪ್ತನಾಗಿಲ್ಲ. ನಿಮ್ಮನ್ನು ಮತ್ತೆ ಮತ್ತೆ ಭೇಟಿಯಾಗಬೇಕೆಂದು ಇನ್ನೂ ಇಚ್ಚಿಸುತ್ತೇನೆ. ಮತ್ತೆ ಯಾವತ್ತೂ ನಿಮ್ಮನ್ನು ಭೇಟಿಯಾಗುವ ಇಚ್ಚೆ ಬಾರದಂತೆ ಹೇಗೆ ನನ್ನ ತುಂಬೆಲ್ಲಾ ನಿಮ್ಮನ್ನು ಇರಿಸಲಿ?
ಶ್ರೀ ಶ್ರೀ:
ಓ! ಇದನ್ನು ಹೇಗೆ ಮಾಡುವುದೆಂದು ನನಗೆ ತಿಳಿದಿಲ್ಲ. ಇವತ್ತಿನವರೆಗೆ ಇದು ಎಲ್ಲರೊಂದಿಗೂ ಆಗುತ್ತಿರುವುದನ್ನು ನಾನು ಕಂಡಿದ್ದೇನೆ; ಅದು ಭಕ್ತಿಯ ಚಿಹ್ನೆ.
ನೀವು ಒಂದು ರೀತಿಯಲ್ಲಿ ನೋಡಿದರೆ, ಭಕ್ತಿಯಲ್ಲಿ ತೃಪ್ತಿಯೆಂಬುದು ಇಲ್ಲ, ಮತ್ತೆ ಇನ್ನೊಂದು ರೀತಿಯಲ್ಲಿ ನೋಡಿದರೆ, ಈ ಜಗತ್ತಿನಲ್ಲಿ ಭಕ್ತಿಯಷ್ಟು ತೃಪ್ತಿ ನೀಡುವಂಥದ್ದು ಮತ್ತೊಂದಿಲ್ಲ.
ಅದಕ್ಕೆ ಕೊನೆಯಿಲ್ಲ, ಯಾಕೆಂದರೆ ಭಕ್ತಿಯ ಅರ್ಥವೇ ಎಂದೂ ಕ್ಷೀಣಗೊಳ್ಳದ ಪ್ರೀತಿ. ಆದ್ದರಿಂದ, ಅದು ಎಂದೂ ತೀರದ ತೃಷೆ ಹಾಗೂ ಎಂದು ಕೊನೆಗೊಳ್ಳದ ಪ್ರೀತಿ!

ಪ್ರ: ಪ್ರೀತಿಯ ಗುರೂಜಿ, ಅನಾದಿ ಕಾಲದಿಂದ ಇಂದಿನವರೆಗೆ ಇರುವುದು ಒಂದೇ ಪ್ರಜ್ಞೆಯಾಗಿರುವಾಗ, ಅದರಿಂದ ಮನುಷ್ಯ ಹೇಗೆ ಸೃಷ್ಟಿಯಾದ ಮತ್ತು ಏಕೆ? ಅದಕ್ಕೆ ಒಂದು ಕಾರಣವಿರಬೇಕು.
ಶ್ರೀ ಶ್ರೀ:
ಓ! ಅದು(ಪ್ರಜ್ಞ್ನೆ) ಒಂಟಿಯಾಗಿ ತನ್ನಷ್ಟಕ್ಕೇ ಇರುತ್ತಾ ಬೇಸರಗೊಂಡಿತು!ಹಾಗಾಗಿ ಅದು ಯ್ಚಿಸಿತು, ’ನಾನ ಅನೇಕವಾಗುತ್ತೇನೆ’. ಆ ಒಂದು ಪ್ರಜ್ಞೆಗೆ ಈ ಯೋಚನೆ ಬಂದು ಮತ್ತೆ ಎಲ್ಲವೂ ಇರುವಿಕೆಗೆ ಬಂತು.
ಈಗ ಇದು ಸರಿಯೋ ತಪ್ಪೋ, ನೀನು ನಿರ್ಧರಿಸು!