ಶನಿವಾರ, ಆಗಸ್ಟ್ 11, 2012

ಗುರು ತತ್ವ

11
2012
Aug
ಬೆಂಗಳೂರು ಆಶ್ರಮ, ಭಾರತ


ಅನ್ನಕೂಟ! (ವೇದಿಕೆಯ ಮೇಲೆ ಹರಡಿಟ್ಟ ತಿನಿಸುಗಳನ್ನು ನೋಡುತ್ತಾ ಹೇಳಿದರು)
ಇವತ್ತು ಮಹಿಳೆಯರು 451 ಬಗೆಯ ತಿನಿಸುಗಳನ್ನು ತಯಾರಿಸಿದ್ದಾರೆ.ಇದು ಗುಜರಾತಿನ ವೈಶಿಷ್ಟ್ಯ; 451 ಬಗೆಯ ಆಹಾರ ಪದಾರ್ಥಗಳು ಗುಜರಾತಿನ ಸ್ವಯಂಸೇವಕರಿಂದ ತಯಾರಿಸಲ್ಪಟ್ಟಿದೆ.

(ಅನ್ನಕೂಟವನ್ನು(ಅರ್ಥಾತ್ ಧಾನ್ಯಗಳ ರಾಶಿ) ಶ್ರೀ ಕೃಷ್ಣ ಇಂದ್ರನನ್ನು ಸೋಲಿಸಿದ ದಿನದಂದು ಆಚರಿಸಲಾಗುತ್ತದೆ. ಅನ್ನಕೂಟಕ್ಕಾಗಿ, ಆಹಾರದ ಪರ್ವತವನ್ನು ಅಲಂಕರಿಸಲಾಗುತ್ತದೆ, ಇದು ಗೋವರ್ಧನ ಗಿರಿಯನ್ನು ಶ್ರೀ ಕೃಷ್ಣನು ಮೇಲೆತ್ತಿ ಜನರನ್ನು ಇಂದ್ರನ ರೋಷದಿಂದ ಕಾಪಾಡಿದ್ದುದನ್ನೂ, ಗೋವರ್ಧನ ಪರ್ವತವನ್ನು ಸೂಚಿಸುತ್ತದೆ)

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿದನು "ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಮ್ ದೇಹಮಾಶ್ರಿತಃ"
ನಾನು ಜಟರಾಗ್ನಿ’,(ಆಹಾರ ಪಚನಕ್ರಿಯೆಗೆ ಕಾರಣವಾದ ಅಗ್ನಿ).
ಎಲ್ಲಾ ಜೀವಿಗಳಲ್ಲಿ ಉಂಟಾಗುವ ಹಸಿವು ನಾನುಮತ್ತು ನಾಲ್ಕು ಬಗೆಯ ಆಹಾರವನ್ನು ಜೀರ್ಣಿಸುವವನು ನಾನು.’

ಆದರೆ ನಾವೇನು ಮಾಡುತ್ತೇವೆ?ನಾವು ಹಸಿವನ್ನು ಹುಟ್ಟಲೂ ಬಿಡುವುದಿಲ್ಲ. ನಮ್ಮ ಹೊಟ್ಟೆಯನ್ನು ಅಷ್ಟೊಂದು ಆಹಾರದೊಂದಿಗೆ ತುಂಬಿಸಿಕೊಳ್ಳುತ್ತಿರುತ್ತೇವೆ. ನಾವು ಭಗವಾನ್ ಕೃಷ್ಣನನ್ನು ಇರಲು ಬಿಡುವುದೂ ಇಲ್ಲ! ಆದ್ದರಿಂದಲೇ ಕಾಲಕ್ಕೊಮ್ಮೆ ಉಪವಾಸ ಮಾಡುವುದು ಒಳ್ಳೆಯದು.

ಅಷ್ಟಮಿಯಂದು ಸಾಮಾನ್ಯವಾಗಿ ಜನರು ಉಪವಾಸ ಆಚರಿಸುತ್ತಾರೆ, ಇದರಿಂದ ಹಸಿವು ಹೆಚ್ಚಾಗುತ್ತದೆ.ನಂತರ ಮಾರನೆಯ ದಿನ ಅವರು ವಿವಿಧ ಬಗೆಯ ಆಹಾರವನ್ನು ಭಗವಂತನಿಗೆ ಸಮರ್ಪಿಸುತ್ತಾರೆ.
ಹಾಗಾಗಿ, ನಿಮಗೆ ಹಸಿವಾದಾಗಲೆಲ್ಲಾ ಭಗವಾನ್ ಕೃಷ್ಣ ಬಂದಿದ್ದಾನೆಂದು ಯೋಚಿಸಿ.

ನಿಮ್ಮ ಜಟರದಲ್ಲಿನ ಅಗ್ನಿಯು ಭಗವಂತ, ಹಸಿವೂ ಭಗವಂತ ಮತ್ತು ಆಹಾರವೂ ಭಗವಂತ.
ಮತ್ತು ಆದ್ದರಿಂದ ಕೃಷ್ಣ ಹೇಳುವುದು, ’ನಾನು ನಿನ್ನ ಹೊಟ್ಟೆಯಲ್ಲಿನ ಹಸಿವು, ಮತ್ತು ನೀನು ಸೇವಿಸುವ ಆಹಾರವೂ ನಾನೇ.’
ಇದು ಬಹಳ ಅದ್ಭುತವಾದ ಜ್ಞಾನ. ನೀವು ಇಂಥ ಜ್ಞಾನವನ್ನು ಎಂದಾದರೂ ಪಡೆಯುವುದು ಬಹಳ ವಿರಳ.ನೀವು ಜಗತ್ತಿನ ಎಲ್ಲಾ ಪುಸ್ತಕಗಳನ್ನು ಓದಿದರೂ ಇಂಥ ಜ್ಞಾನವನ್ನು ಪಡೆಯುವುದಿಲ್ಲ.
ಬಹಳ ಮಂದಿ ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಭಗವಂತ ಇದನ್ನು ಕೇವಲ ಹೇಳುತ್ತಿದ್ದನಷ್ಟೇ ಎಂದು ಅವರು ಅಂದುಕೊಂಡರು.ಆದರೆ ವಿವೇಕಿಗಳು ಮತ್ತು ಜ್ಞಾನಿಗಳಾಗಿರುವವರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ.ಅವರು ಇದರ ಸತ್ಯವನ್ನು ಮತ್ತು ಇದರ ಹಿಂದಿರುವ ಸಾರವನ್ನು ಅರ್ಥಮಾಡಿಕೊಳ್ಳುತ್ತಾರೆ.

ಪ್ರ:451 ಬಗೆಯ ಆಹಾರಗಳಲ್ಲಿವೆ, ಆದರೆ ನೀವು ಸಿಹಿ ಇನ್ನುಣಿಸು(’Dessert’-ಊಟದ ಕೊನೆಯಲ್ಲಿ ಕೊಡುವ ಸಿಹಿವ್ಯಂಜನ). ನೀವು ಏನಂತೀರಿ?
ಶ್ರೀ ಶ್ರೀ: ಅದು ಸರಿ. ನಿಮಗೆ ಸಕ್ಕರೆ ಕಾಯಿಲೆ ಇಲ್ಲದಿದ್ದರೆ ಮತ್ತು ಸಿಹಿತಿನಿಸುಗಳ ಬಯಕೆಯಿದ್ದರೆ ನಾನು ಒಂದು ಸಿಹಿ ಇನ್ನುಣಿಸು!

ಪ್ರ: ಭಗವಾನ್ ಕೃಷ್ಣನು ದೇವತೆಗಳಲ್ಲಿ ಕಾರ್ತಿಕೇಯನೆಂದು ನಿನ್ನೆ ನೀವು ಹೇಳಿದಿರಿ .ದಯವಿಟ್ಟು ನಮಗೆ ಕಾರ್ತಿಕೇಯನ ಬಗ್ಗೆ ಸ್ವಲ್ಪ ಹೇಳಿ.
ಶ್ರೀ ಶ್ರೀ: ಭಗವಾನ್ ಶಿವನಿಂದ ಆಳಲ್ಪಟ್ಟ ಪಂಚ ಮಹಾಭೂತಗಳು(ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶ) ಶಕ್ತಿಯೊಂದಿಗೆ(ನಿರ್ಮಲ ಚೈತನ್ಯದೊಂದಿಗೆ) ಸಂಘಟಿಸಿದಾಗ, ಭಗವಾನ್ ಕಾರ್ತಿಕೇಯ ಹುಟ್ಟಿದನು.
ಶಿವನನ್ನು ಪಂಚಾನನ(ಐದು ತಲೆಗಳುಳ್ಳವನು) ಎಂದು ಕರೆಯುತ್ತಾರೆ. ಐದು ತಲೆಗಳು ಪ್ರಕೃತಿಯಲ್ಲಿನ ಐದು ಮೂಲಧಾತುಗಳನ್ನು ನಿರೂಪಿಸುತ್ತವೆ. ಐದು ಧಾತುಗಳು ಆರನೆಯ ಧಾತುವಾದ ಚೈತನ್ಯ ಶಕ್ತಿಯೊಂದಿಗೆ ಸಂಘಟಿಸಿದಾಗ, ಷಡಾನನ(ಆರು ತಲೆಗಳುಳ್ಳವನು) ಜನ್ಮವಾಯಿತು, ಅವನನ್ನು ಭಗವಾನ್ ಕಾರ್ತಿಕೇಯನೆಂದೂ ಕರೆಯಲಾಗುತ್ತದೆ.
ನೀವು ಇದನ್ನು ಕುಂಡಲಿನಿ ಶಕ್ತಿ(ಬೆನ್ನುಹುರಿಯ ಮೂಲದಲ್ಲಿ ಸುರುಳಿಯಾಗಿರುವ ಮೂಲಭೂತ, ಸ್ತಬ್ಧ ಆದರೂ ಸಮರ್ಥವಾದ ಶಕ್ತಿ) ಸಂಬಂಧದಿಂದ ಅರ್ಥಮಾಡಿಕೊಳ್ಳಬಹುದು.
ನಮ್ಮೊಳಗೆ ಏಳು ಶಕ್ತಿ ಚಕ್ರಗಳಿವೆ. ಶಕ್ತಿಯು ಆರು ಚಕ್ರಗಳ ಮೂಲಕ ಉಕ್ಕಿ ಆರನೆಯ ಚಕ್ರದಲ್ಲಿ-ಆಜ್ಞಾ ಚಕ್ರದಲ್ಲಿ(ಹುಬ್ಬುಗಳ ನಡುವಿನಲ್ಲಿ ಇರುವಂಥದ್ದು) ಸ್ಥಿರಗೊಂಡಾಗ, ಅದು ಭಗವಾನ್ ಕಾರ್ತಿಕೇಯನಾಗಿ(ಗುರು ತತ್ತ್ವ ಸಾಂಕೇತಿಕ) ಅರಳುತ್ತದೆ. ಆಜ್ಞಾ ಚಕ್ರವು ಗುರು ತತ್ತ್ವದ ಸ್ಥಾನವಾಗಿದೆ.ಅಲ್ಲಿಯೇ ಗುರು ತತ್ತ್ವವು ಅರಳಿ ಪ್ರಕಟವಾಗುತ್ತದೆ.ಮತ್ತು ಗುರು ತತ್ತ್ವವೇ ಕಾರ್ತಿಕೇಯ ತತ್ತ್ವವೂ.

ಭಗವಾನ್ ಶಿವನು ದೈವತ್ವದ ಅವ್ಯಕ್ತತೆ(ಆಂತರ್ಯವಾದುದು), ಮತ್ತು ಭಗವಾನ್ ಕಾರ್ತಿಕೇಯನು ವ್ಯಕ್ತ ಸ್ವರೂಪ.
ಹಾಗಾಗಿ ನೀವು ಭಗವಾನ್ ಕಾರ್ತಿಕೇಯನನ್ನು ಕುಂಡಲಿನಿ ಶಕ್ತಿಯ ಸಾಂಕೇತಿಕವೆಂದು ಪರಿಗಣಿಸಬಹುದು.ಇಚ್ಚಾ ಶಕ್ತಿ ಮತ್ತು ಜ್ಞಾನ ಶಕ್ತಿ ಎರಡೂ ಕುಂಡಲಿನಿ ಶಕ್ತಿಯ ಒಡಗೂಡಿ ಬರುತ್ತವೆ.
ವಾಸ್ತವವೆಂದರೆ ಇಚ್ಚಾ ಶಕ್ತಿ ಮತ್ತು ಕ್ರಿಯಾ ಶಕ್ತಿಗಳೆರಡೂ ಜ್ಞಾನ ಶಕ್ತಿ ಒಂದು ವ್ಯಕ್ತ ಸ್ವರೂಪವಾಗಿವೆ.
ಹಾಗಾಗಿ ಇಚ್ಚಾ ಶಕ್ತಿ ಮತ್ತು ಕ್ರಿಯಾ ಶಕ್ತಿ ಎರಡು ಒಂದೇ ಕುಂಡಲಿನಿ ಶಕ್ತಿಯ(ಕಾರ್ತಿಕೇಯ) ಅಂಶವಾಗಿವೆ ಮತ್ತು ಅವು ವಲ್ಲಿ ಮತ್ತು ದೇವಯಾನಿ - ಭಗವಾನ್ ಕಾರ್ತಿಕೇಯನ ಇಬ್ಬರು ದೇವ ಪತ್ನಿಯರು ಆಗಿ ವ್ಯಕ್ತವಾಗಿವೆ. ಮತ್ತು ಭಗವಾನ್ ಕಾರ್ತಿಕೇಯ ಜ್ಞಾನದ ಸಾಕಾರ ರೂಪ. ಹಾಗಾಗಿ ಕಾರ್ತಿಕೇಯ ತತ್ತ್ವ ಎಂದರೆ ಕೇವಲ ಗುರು ತತ್ತ್ವ.

ಭಗವಾನ್ ಶಿವನು ಓಂಕಾರ-ಸೃಷ್ಟಿಯ ಮೂಲ ಶಬ್ದದಿಂದ ಪ್ರತಿಬಿಂಬಿಸಲ್ಪಡುವ  ತ್ರಿಮೂರ್ತಿಗಳಲ್ಲಿ(ಭ್ರಹ್ಮ, ವಿಷ್ಣು ಮತ್ತು ಮಹೇಶ್ವರ) ಒಬ್ಬ. ’ಓಂನಲ್ಲಿ ಮ್-ಕಾರವು ಭಗವಾನ್ ಶಿವನಿಗೆ ಸೇರಿದ್ದು.

ಪುರಾಣಗಳಲ್ಲಿ ಭಗವಾನ್ ಕಾರ್ತಿಕೇಯನ ಬಗ್ಗೆ ಒಂದು ಕಥೆಯಿದೆ.
ಭಗವಾನ್ ಕಾರ್ತಿಕೇಯ ಎಳೆಯ ಬಾಲಕನಾಗಿದ್ದಾಗ, ಅವನ ತಂದೆಯಾದ ಭಗವಾನ್ ಶಿವನು ಅವನನ್ನು ಭಗವಾನ್ ಬ್ರಹ್ಮನಿಂದ ಕಲಿತು ವಿದ್ಯಾರ್ಜನೆಯನ್ನು ಪಡೆಯಲು ಹೇಳಿದರು.

ಹಾಗಾಗಿ ಕಾರ್ತಿಕೇಯ  ಭಗವಾನ್  ಬ್ರಹ್ಮನ ಬಳಿ ಹೋಗಿ ಕೇಳಿಕೊಂಡದ, ’ದಯವಿಟ್ಟು ನನಗೆಓಂಕಾರದ ಅರ್ಥ ಹೇಳಿ’. ಭಗವಾನ್ ಬ್ರಹ್ಮ ಹೇಳಿದರು, ’ಮೊದಲು ಅಕ್ಷರಗಳನ್ನು ಕಲಿ! ನೀನು ನೇರವಾಗಿಓಂಕಾರದ ಅರ್ಥ ಕೇಳುತ್ತಿದ್ದಿಯೆ.’
ಕಾರ್ತಿಕೇಯ ಹೇಳಿದನು, ’ಇಲ್ಲ, ನನಗೆ ಪ್ರಥಮವಾಗಿ ಅತ್ಯುನ್ನತವಾದ ಜ್ಞಾನವನ್ನುತಿಳಿಯಬೇಕು - ಓಂ.’
ಈಗ ಭಗವಾನ್  ಬ್ರಹ್ಮನಿಗೆ ಅಕ್ಷರಗಳ ಬಗ್ಗೆ ಎಲ್ಲಾ ತಿಳಿದಿತ್ತು, ಆದರೆ ಅವರಿಗೆ ಓಂ-ಕಾರ(ಮೂಲ ಶಬ್ದ) ಅರ್ಥ ತಿಳಿದಿರಲಿಲ್ಲ.
ಆದ್ದರಿಂದ ಕಾರ್ತಿಕೇಯ ಭಗವಾನ್  ಬ್ರಹ್ಮನಿಗೆ ಹೇಳಿದನು, ’ನಿಮಗೆ ಓಂ-ಕಾರದ ಅರ್ಥ ತಿಳಿದಿಲ್ಲ, ನೀವು ನನಗೆ ಹೇಹೆ ಕಲಿಸುವಿರಿ? ನಾನು ನಿಮ್ಮ ಬಳಿ ಕಲಿಯುವುದಿಲ್ಲ.’ ಮತ್ತೆ ತನ್ನ ತಂದೆಯ ಬಳಿಗೆ ಹೋದ ಕಾರ್ತಿಕೇಯ.

ಭಗವಾನ್ ಬ್ರಹ್ಮನು ಭಗವಾನ್  ಶಿವನಿಗೆ ಹೇಳಿದರು, ’ನೀವೇ ನಿಮ್ಮ ಮಗನನ್ನು ನೋಡಿಕೊಳ್ಳುವುದು ಸಾಧ್ಯ. ನನ್ನಿಂದಾಗದು. ನಾನೊಂದು ಹೇಳಿದರೆ ಅವನು ಇನ್ನೊಂದನ್ನು ಹೇಳುತ್ತಾನೆ.ನಾನೇನು ಹೇಳಿದರೂ ಅವನು ತದ್ವಿರುದ್ಧ ನುಡಿಯುತ್ತಾನೆ.ಅವನಿಗೆ ಕಲಿಸುವುದು ನನ್ನಿಂದ ಸಾಧ್ಯವಾಗದು.ಹಾಗಾಗಿ ಯಾವುದು ಒಳ್ಳೆಯದೆಂದು ನೀವೇ ನಿರ್ಧರಿಸಿ ಅವನನ್ನು ನೋಡಿಕೊಳ್ಳಿ.’

ಇದನ್ನು ಕೇಳಿ ಭಗವಾನ್ ಶಿವನು ಮಗನನ್ನು ಕೇಳಿದರು, ’ಏನಾಯಿತು ಮಗ?ಬ್ರಹ್ಮ ಸಂಪೂರ್ಣ ಬ್ರಹ್ಮಾಂಡದ ಸೃಷ್ಟಿಕರ್ತ. ನೀನು ಅವರಿಂದ ಕಲಿಯಬೇಕು.’
ಇದಕ್ಕೆ ಕಾರ್ತಿಕೇಯನು ಹೇಳಿದನು, ’ಹಾಗಾದರೆ ನೀವು ಹೇಳಿ ಓಂಕಾರದ ಅರ್ಥವೇನು?’
ಇದನ್ನು ಕೇಳಿ ಭಗವಾನ್ ಶಿವ ನಕ್ಕು ಹೇಳಿದರು, ’ನನಗೂ ತಿಳಿದಿಲ್ಲ.’
ಕಾರ್ತಿಕೇಯ ಆಗ ಹೇಳಿದನು, ’ಹಾಗಿದ್ದರೆ ನಾನು ನಿಮಗೆ ಹೇಳುತ್ತೇನೆ ಯಾಕೆಂದರೆ ನನಗೆ ಓಂಕಾರದ ಅರ್ಥ ತಿಳಿದಿದೆ.’
ನಿನಗೆ ತಿಳಿದಿರುವುದರಿಂದ ನೀನು ನನಗೆ ಅದರ ಅರ್ಥ ತಿಳಿಸು’, ಎಂದರು ಭಗವಾನ್ ಶಿವ.
ನಾನು ನಿಮಗೆ ಹಾಗೆ ಹೇಳಲು ಆಗುವುದಿಲ್ಲ. ನೀವ ನನಗೆ ಗುರುವಿನ ಸ್ಥಾನವನ್ನು ನೀಡಬೇಕು.ನೀವು ನನ್ನನ್ನು ಗುರುವಿನ ಆಸನದಲ್ಲಿ ಕೂರಿಸಿದರೆ ಮಾತ್ರ ನಾನು ನಿಮಗೆ ಹೇಳಬಲ್ಲೆ’, ಎಂದನು ಕಾರ್ತಿಕೇಯ.

ಗುರು ಎಂದರೆ ಒಂದು ಎತ್ತೆರಆದ ಸ್ಥಾನ ಅಥವಾ ವೇದಿಕೆಯ ಮೇಲಿರಬೇಕು.ಶಿಕ್ಷಕನು ಒಂದು ಎತ್ತರವಾದ ಸ್ಥಾನದಲ್ಲಿ ಕುಳಿತಿದ್ದು ವಿದ್ಯಾರ್ಥಿಯು ಕೆಳಗೆ ಕುಳಿತುಕೊಂಡು ಗುರುವಿನ ಮಾತನ್ನು ಕೇಳಬೇಕು.
ಭಗವಾನ್ ಶಿವ ತನಗಿಂತ ಎತ್ತರವಾದ ಸ್ಥಾನವನ್ನು ಹೇಗೆ ಹುಡುಕಬಹುದು?ಯಾಕೆಂದರೆ ಅವರು ದೇವತೆಗಳಲ್ಲಿ ಅತ್ಯುನ್ನತ ಮತ್ತು ಪರಮಶ್ರೇಷ್ಠ. ಹಾಗಾಗಿ ಭಗವಾನ್ ಶಿವ ಬಾಲ ಕಾರ್ತಿಕೇಯನನ್ನು ಎತ್ತಿ ತನ್ನ ಭುಜದ ಮೇಲೆ ಕುಳ್ಳಿರಿಸಿದರು. ಮತ್ತಾಗ, ಭಗವಾನ್ ಶಿವನ ಕಿವಿಯಲ್ಲಿ, ಭಗವಾನ್ ಕಾರ್ತಿಕೆಯನು ಪ್ರಣವಮಂತ್ರ(ಓಂ) ಅರ್ಥವನ್ನು ವಿವರಿಸಿದರು. ಸಂಪೂರ್ಣ ಸೃಷ್ಠಿಯು ಓಂ-ಕಾರದಲ್ಲಿ ಅಡಕವಾಗಿದೆ ಎಂದು ಕಾರ್ತಿಕೇಯನು ವಿವರಿಸಿದನು.
ತ್ರಿಮೂರ್ತಿ- ಅಂದರೆ ಭಗವಾನ್ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಓಂ-ಕಾರದಲ್ಲಿ ಒಳಗೊಂಡಿದ್ದಾರೆ.
ಓಂ ಎಂದರೆ ಎಲ್ಲವೂ ಪ್ರೀತಿ ಎಂದು- ಅವಿರತವಾದ ಮತ್ತು ನಿಷ್ಚಲವಾದ ಪ್ರೀತಿಯು ಓಂ.ಇದು ಭಗವಾನ್ ಕಾರ್ತಿಕೇಯನು ಭಗವಾನ್ ಶಿವನಿಗೆ ವಿವರಿಸಿದ ಓಂ-ಕಾರದ ಸಾರ ಮತ್ತು ರಹಸ್ಯವೂ ಹೌದು.

ಇದನ್ನು ಕೇಳುತ್ತಿದಂತೆ ದೇವಿ ಪಾರ್ವತಿಯು(ಕಾರ್ತಿಕೇಯನ ತಾಯಿ, ದೈವಿಕ ಮಾತೃ ಸ್ವರೂಪ) ಹಿಗ್ಗಿ
ಹರ್ಷಪೂರ್ಣಳಾದರು.
ಅವರು ಹೇಳಿದರು, ’ನೀನು ನನ್ನ ನಾಥನಿಗೆ ಸ್ವಾಮಿಯಾಗಿರುವೆ!’
ಹೀಗೆ ಹೇಳುತ್ತ ಅವರು ತನ್ನ ಮಗನನ್ನುಸ್ವಾಮಿನಾಥಎಂದು ಕರಿದರು.ಅಂದಿನಿಂದ ಭಗವಾನ್ ಕಾರ್ತಿಕೇಯನು ಸ್ವಾಮಿನಾಥನೆಂದೂ ಕರೆಯಲ್ಪಟ್ಟನು.

ಹಾಗೆ ರೀತಿಯಲ್ಲಿ, ಭಗವಾನ್ ಕಾರ್ತಿಕೇಯ ಗುರುವಿನ ಸ್ಥಾನವನ್ನು ಸ್ವೀಕರಿಸಿ ಭಗವಾನ್ ಶಿವನ ಭುಜವನ್ನೇರಿ ಕುಳಿತು ಅವರಿಗೆ ಓಂ-ಕಾರದ ಅರ್ಥ ವಿವರಿಸಿದರು.

ಕಥೆಯ ಸಾರವೆಂದರೆ ಇದು- ಗುರು ತತ್ತ್ವವನ್ನು ಭಗವಾನ್ ಶಿವನಿಗಿಂತಲೂ ಎತ್ತರದಲ್ಲಿ ಇಡಲಾಗಿದೆ!
ಇದನ್ನು ವಿವರಿಸಲು ಕಥೆಯನ್ನು ಸ್ಕಂಧ ಪುರಾಣದಲ್ಲಿ ಬರೆಯಲಾಗಿದೆ.ಹಾಗಾಗಿ ಭಗವಾನ್ ಶಿವನೂ ಗುರುತತ್ತ್ವದ ಶಿಷ್ಯನಾಗಬೇಕಯಿತು.; ಹಾಗಾಗಿ ಗುರುತತ್ತ್ವ ಮತ್ತು ಕಾರ್ತಿಕೇಯತತ್ತ್ವಗಳೆರಡೂ ಒಂದೇ ಆಗಿವೆ.

ಹಿಂದಿಯಲ್ಲಿ ಒಂದುದೋಹಾಇದೆ, ಗುರು ಗೋವಿಂದ ದೌ  ಖಡೆ ಕಾಕೇ ಲಾಗೂ ಪಾಯ್; ಬಲಿಹಾರೀ ಗುರು ಆಪ್ನೇ ಗೋವಿಂದ್ ದಿಯೋ ಮಿಲಾಯೆ.’
(ಇಬ್ಬರೂ -ಗುರು ಮತ್ತು ಭಗವಂತ, ನನ್ನ ಮುಂದೆ ನಿಂತಿದ್ದಾರೆ, ನಾನು ಮೊದಲು ಯಾರ ಪಾದವನ್ನು ಮುಟ್ಟಲಿ? ನಾನು ಮೊದಲು ನನ್ನ ಗುರುವಿನ ಪಾದವನ್ನು ಮುಟ್ಟುತ್ತೇನೆ ಯಾಕೆಂದರೆ ಅವರಿಲ್ಲದೆ ನಾನು ಭಗವಂತನನ್ನು ಎಂದೂ ಗುರುತಿಸಲಾಗುತ್ತಿರಲಿಲ್ಲ)
ಭಗವಾನ್ ಕಾರ್ತಿಕೇಯನನ್ನು ದೇವ ಸೇನಾಪತಿಎಂದೂ ಕರೆಯುತ್ತಾರೆ- ದೈವೀ ಗುಣಗಳ ಪಾಲಕ ಮತ್ತು ರಕ್ಷಕ.ಭಗವಾನ್ ಶಿವ ತನ್ನ ಭಕ್ತರಿಗೆ, ಅವರು ರಾಕ್ಷಸರಾಗಿದ್ದರೂ, ಸುಲಭದಲ್ಲಿ ವರ ನೀಡುವುದಕ್ಕೆ ಗುರುತಿಸಲ್ಪಟ್ಟವರು. ಅವರು ಭೋಲೇ ಬಾಬಾ(ಮುಗ್ಧರು), ಹಾಗಾಗಿ ಯಾರಾದರೂ ಏನೇ ಅನುಗ್ರಹ ಅಥವಾ ವರವನ್ನು ಬೇಡಿದರೆ, ಅವರು ಅದನ್ನು ತತ್ಕ್ಷಣ ನೆರವೇರಿಸುತ್ತಿದ್ದರು ಮತ್ತೆ ಅವರು ತಾವೇ ಸಿಕ್ಕಿಹಾಕಿಕೊಳ್ಳುತ್ತಿದ್ದರು.

ತ್ರಿಮೂರ್ತಿಗಳಲ್ಲಿ ಎಲ್ಲಾ ಮೂವರೂ-ಭಗವಾನ್ ಬ್ರಹ್ಮ, ಭಗವಾನ್ ವಿಷ್ಣು ಮತ್ತು ಭಗವಾನ್ ಶಿವ ಯಾರೇವರ ಬೇಡಿದರು ಅವರನ್ನು ಅನುಗ್ರಹಿಸುತ್ತಿದ್ದರು, ನಂತರ ಅವರು ತಮ್ಮದೇ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದರು. ಅಂಥ ಸಮಯದಲ್ಲಿ ಭಗವಾನ್ ಕಾರ್ತಿಕೇಯ ಅಸುರರ(ಅಂಥ ವರ ಪಡೆದವರ) ವಿರುದ್ಧ ಯುದ್ಧ ಮಾಡಲು ನಿಲ್ಲುತ್ತಿದ್ದರು. ಹಾಗಾಗಿ ಅವರನ್ನು ಭಗವಂತರ ಸೇನಾಧ್ಯಕ್ಷನಾಗಿ ಆರಿಸಲಾಗಿತ್ತು.

ಕಾರ್ತಿಕೇಯ ಎಂದರೆ ತತ್ತ್ವ- ಯಾವುದು ಶಾಂತಿಯುತವೂ, ಆದರೂ ಅಷ್ಟೇ ಕ್ರಿಯಾಶೀಲ.
ಸಾಮಾನ್ಯವಾಗಿ ಬಹಳ ಕ್ರಿಯಾಶೀಲ ವ್ಯಕ್ತಿಗಳು ಶಾಂತರಾಗಿ ಮತ್ತು ಮೌನವಾಗಿ ಇರುವುದಿಲ್ಲ. ಮತ್ತು ಮೌನಿಗಳು ಬಹಳ ಸಕ್ರಿಯರಾಗಿರುವುದಿಲ್ಲ(ಜಡ). ಹಾಗಾಗಿ ಕಾರ್ತಿಕೇಯ ತತ್ತ್ವ ಎಂಬುದು ಎರಡೂ ಆಗಿದೆ- ಶಾಂತವಾದುದು ಆದರೂ ಬಹಳ ಕ್ರಿಯಾಶೀಲ.

ಆಧ್ಯಾತ್ಮಿಕವಾಗಿ ಪರಿಪೂರ್ಣ ಹಾಗೂ ಪ್ರಾಪಂಚಿಕವಾಗಿ ವಿವೇಕಶೀಲರಾಗಿರುವುದು; ಎರಡು ಮುಖಗಳನ್ನು ಹೊಂದಿರುವುದು; ಹುರುಪಿನಿಂದ ಕ್ರಿಯಾಶೀಲರಾಗಿರುವುದು ಮತ್ತು ಗಾಢ ಮೌನ ಇವೆಲ್ಲ ಜೊತೆಗೇ ಕಾರ್ತಿಕೇಯ ತತ್ತ್ವವನ್ನು ರೂಪಿಸುತ್ತವೆ.
ಎಲ್ಲಿ ಇಚ್ಚಾ ಶಕ್ತಿ ಮತ್ತು ಕ್ರಿಯಾ ಶಕ್ತಿ ಎರಡೂ ಜ್ಞಾನ ಶಕ್ತಿಯೊಂದಿಗೆ ಇವೆಯೋ, ಅದು ಕಾರ್ತಿಕೇಯ ತತ್ತ್ವ. ಆದ್ದರಿಂದಲೇ ಹೇಳುವುದು, ಕ್ರಿಯಾ ಶಕ್ತಿ ಅಸ್ತಿತ್ತ್ವದ ಆಧಾರದಿಂದ ಭಗವಾನ್ ಕಾರ್ತಿಕೇಯನು ಸೇನಾಪತಿಯಾದನು- ದೇವತೆಗಳ ಸೈನ್ಯದ ಅಧ್ಯಕ್ಷನಾಗಿ ದೇವಿ ದೇವತೆಯರನ್ನು ಕಾಪಾಡಿದರು.

ಕಾರ್ತಿಕೇಯನು ತಾರಕಾಸುರನನ್ನು(ಒಬ್ಬ ಅಸುರ) ಯುದ್ಧದಲ್ಲಿ ಸೋಲಿಸಿದರು. ತಾರಕಾಸುರನು ಅಹಂಕಾರದ ಚಿಹ್ನೆ. ಯಾರಾದರುನಾನು ಎಲ್ಲವನ್ನೂ ಜಯಿಸಿದ್ದೇನೆ ಮತ್ತು ಎಲ್ಲವನ್ನೂ ಆಳುತ್ತಿದ್ದೇನೆ, ನಾನು ಎಲ್ಲವನ್ನೂ ತಿಳಿದಿದ್ದೇನೆ’, ಎಂದು ಯೋಚಿಸುತ್ತಿದ್ದರೆ, ಅಂಥ ಮನಃಸ್ಥಿತಿಯು ತಾರಕಾಸುರನಿಂದ ಪ್ರತಿನಿಧಿಸಲ್ಪಟ್ಟಿದೆ.

ಕೆಲವರಿದ್ದಾರೆ, ನೀವು ಅವರಿಗೆ ಏನು ಹೇಳಿದರೂ ಅವರು ಹೇಳುತ್ತಾರೆ, ’ಹೌದು ನನಗಾಗಲೇ ಗೊತ್ತು, ನನಗೆ ಹೇಳಬೇಕಾಗಿಲ್ಲ.’ ಅವರು ಎಂದೂ ಏನಾದರನ್ನೂ ತಿಳಿಯದಿರುವುದನ್ನು ಸ್ವೀಕರಿಸುವುದಿಲ್ಲ. ಅವರು ಎಲ್ಲವನ್ನೂ ತಿಳಿದಿರುವಂತೆ ನಡೆದುಕೊಳ್ಳುತ್ತಾರೆ.
ಹೆಮ್ಮೆಯ ಅಂಥಃ ತಪ್ಪು ಪ್ರಜ್ಞೆ, ತನ್ನ ಮುಂದೆ ಬರುವ ಎಲ್ಲವನ್ನೂ ನಿರ್ಲಕ್ಷಿಸುವಂಥ ದುರಹಂಕಾರವು ಒಂದು ಆಸುರೀ(ರಾಕ್ಷಸೀಯ) ಗುಣ.
ನಮ್ರತೆ, ಸರಳತೆ ಮತ್ತು ಸಹಜತೆ, ಎಲ್ಲಾ ಗುಣಗಳು ಅಹಂಕಾರದಿಂದ ಮುಚ್ಚಲ್ಪಡುತ್ತವೆ.ಹಾಗಾಗಿ ಅಂಥ ಅಹಂಕಾರವನ್ನು ನಾಶಮಾಡುವುದು ಕುಂಡಲಿನಿ ಶಕ್ತಿಯ-ಕಾರ್ತಿಕೇಯನ ಕೆಲಸ.ಹಾಗಾಗಿ ಕಾರ್ತಿಕೇಯನು ಅಹಂಕಾರವನ್ನು ವಧಿಸುವವನು.
ಕಥೆಯು ಹೀಗೆ ಹೇಳುತ್ತದೆ, ತಾರಕನು(ಅಹಂಕಾರವು) ಭಗವಾನ್ ಕಾರ್ತಿಕೇಯನಿಂದ ಸೋಲಿಸಲ್ಪಟ್ಟ ಮೇಲೆ, ಒಂದು ಹೂಂಜದ ರೂಪವನ್ನು ತಾಳಿದ. ಹೂಂಜ ನಿಃಶಕ್ತಿಯ, ಭದ್ರತೆಯಿಲ್ಲದ ಮತ್ತು ತಾಳ್ಮೆಯ ಕೊರತೆಯ  ಸಂಕೇತ.
ಸಾಮಾನ್ಯವಾಗಿ ಯಾರಾದರೂ ಹೇಡಿಯಾಗಿದ್ದರೆ, ’ನೀನು ಕೋಳಿಮರಿಎನ್ನುತ್ತಾರೆ ಅಲ್ಲವೆ?ಹಾಗಾಗಿ, ಕಾರ್ತಿಕೇಯನಿಂದ ಸೋಲಿಸಲ್ಪಟ್ಟ ನಂತರ, ತಾರಕಾಸುರನು ಹೂಂಜನಾದನು.ಕಾರ್ತಿಕೇಯನು ತಾರಕಾಸುರನನ್ನು ಸೋಲಿಸಿದರಿಂದ, ಅವನಿಗೆ ಜೀವಭಿಕ್ಷೆಯನ್ನು ನೀಡಿ ಅವನು ಏನು ವರವನ್ನು ಇಚ್ಚಿಸುತ್ತಾನೆಂದು ಕೇಳಿದನು.ಆಗ ತಾರಕನು ಸದಾ ಭಗವಂತನ ಚರಣದಲ್ಲಿರಲು ಪ್ರಾರ್ಥಿಸಿದನು, ಮತ್ತು ಭಗವಾನ್ ಕಾರ್ತಿಕೇಯನು ಅವನನ್ನು ತನ್ನ ಧ್ವಜ ಲಾಂಛನವನ್ನಾಗಿ ಮಾಡಿದರು.ಇದರ ಅರ್ಥ ಅಹಂಕಾರವನ್ನು ಸದಾ ನಿಗ್ರಹಿಸಿಡಬೇಕು.ಜೀವನದಲ್ಲಿ ಅಹಂಕಾರವು ಅವಶ್ಯ ಆದರೆ ಅದನ್ನು ನಿಗ್ರಹಿಸಿಡಬೇಕು.

ನೀವು ಕಾರ್ತಿಕೇಯನ ವಿಗ್ರಹವನ್ನು ನೋಡಿದರೆ, ಅವನು ಒಂದು ಕೈಯಲ್ಲಿ ಈಟಿಯನ್ನು ಧರಿಸಿದ್ದಾನೆ.ಅದನ್ನು ವೇಲ್ ಎಂದೂ ಕರೆಯುತ್ತಾರೆ.ಅದು ತ್ರಿಶೂಲವಲ್ಲ. ಅದು ಕುಂಡಲಿನಿ ಶಕ್ತಿಯ ಸಂಕೇತ. ತನ್ನ ಇನ್ನೊಂದು ಕೈಯಲ್ಲಿ ಅವನು ಹೂಂಜ ಲಾಂಛನವುಳ್ಳ ಒಂದು ಸಣ್ಣ ಧ್ವಜವನ್ನು ಹಿಡಿದಿದ್ದಾನೆ. ಹೂಂಜವು ಸದಾ ಭಗವಂತನೊಂದಿಗೆ ಧ್ವಜದ ರೂಪದಲ್ಲಿ ಇರಲು ಪ್ರಾರ್ಥಿಸಿದ ಅಸುರ ತಾರಕನ(ಅಹಂಕಾರ) ಚಿಹ್ನೆ. ತಮಿಳು ನಾಡಿನ ಮತ್ತು ದಕ್ಶಿಣ ಭಾರತದ ಹಲವು ಪ್ರದೇಶಗಳಲ್ಲೂ ಕಾರ್ತಿಕೇಯನನ್ನು ಮುರುಗಎಂದೂ ಕರೆಯುತ್ತಾರೆ.

ಪ್ರ: ಗುರೂಜಿ, ಭಗವಾನ್ ವಿಷ್ಣುವಿನ ಪರಶುರಾಮ ಅವತಾರದ ಬಗ್ಗೆ ಗೊಂದಲವಿದೆ. ಭಗವಾನ್ ರಾಮನು ಪರಶುರಾಮನಿದ್ದ ಸಮಯದಲ್ಲೇ ಜನಿಸುವುದು ಹೇಗೆ ಸಾಧ್ಯವಾಯಿತು, ಯಾಕೆಂದರೆ ಇಬ್ಬರೂ ಭಗವಾನ್ ನಾರಾಯಣನ ಅವತಾರಗಳೆಂದು ಪರಿಗಣಿಸಲ್ಪಡುತ್ತಾರೆ?
ಶ್ರೀ ಶ್ರೀ: ನಾವು ಮೊದಲುಅವತಾರ ಎಂದರೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಅವತಾರವು ಒಂದು ನಿರ್ದಿಷ್ಟ ಸಮಯದಲ್ಲಿ ಒಂದೇ ಸ್ಥಳದಲ್ಲಿ ಇದ್ದು ಇನ್ನೊಂದು ಸ್ಥಳದಲ್ಲಿ ಇರುವುದಿಲ್ಲ ಎಂದಿಲ್ಲ. ಅವತಾರವು ಕೇವಲ ದೈವತ್ವದ ಅಂಶವನ್ನು ಸೂಚಿಸುತ್ತದೆ.ಮತ್ತು ದೈವತ್ವವನ್ನು ನೀವು ಎಲ್ಲಿ ತಾನೆ ಪಡೆಯುವುದಿಲ್ಲ?
ದೈವತ್ವದ ಒಂದು ಅಂಶವು ಎಲ್ಲೆಡೆಯೂ ಮತ್ತು ಎಲ್ಲದರಲ್ಲಿಯೂ ವಾಸವಾಗಿದೆ. ದೈವತ್ವದ ಮೂಲಾಂಶವು ಎಲ್ಲಾದರೂ ಸಂಪೂರ್ಣವಾಗಿ ಒಬ್ಬ ಅದನ್ನು ವೀಕ್ಷಿಸಲಾಗುವಂತೆ ಪ್ರಕಟವಾಗುವುದೋ, ಅದು ಅವತಾರ. ಅಷ್ಟೇ. ಅದು  ಆಕಾಶದಿಂದ ಎಲ್ಲೋ ಒಮ್ಮೆಲೇ ಗೋಚರವಾಗುವುದು ಎಂದಲ್ಲ. ಭಗವಂತನು ಸರ್ವವ್ಯಾಪಿ ಮತ್ತು ಅವನು ಎಲ್ಲದರಲ್ಲೂ ಇರುವನು.

ನೋಡಿ ಒಂದು ಮನೆಗೆ ನಾಲ್ಕು ಕಿಟಕಿಗಳಿರಬಹುದು, ಅಲ್ಲವೇ?ಮತ್ತು ನಾಲ್ಕೂ ಕಿಟಕಿಗಳಿಂದ ಒಬ್ಬನು ಸೂರ್ಯನನ್ನು ಪೂರ್ತಿಯಾಗಿ ನೋಡಬಹುದು, ಅಲ್ಲವೇ?
ನೀವು ಒಂದು ಜೀವಾತ್ಮದ(ಸ್ಥೂಲ ಶರೀರ ಉಳ್ಳ ಒಂದು ಜೀವಿ) ಬಗ್ಗೆ ನನ್ನನ್ನು ಕೇಳಿದರೆ; ಜೀವಾತ್ಮವು ಒಂದು ಸ್ಥಳದಲ್ಲಿ ಹುಟ್ಟಿ ಮತ್ತೊಂದು ಸ್ಥಳದಲ್ಲೂ ಒಂದೇ ಸಮಯದಲ್ಲಿ ಹುಟ್ಟುವುದು ಹೇಗೆ ಸಾಧ್ಯ? ಪ್ರಶ್ನೆ ನೀವು ಕೇಳಬಹುದು. ಆದರೆ ಇದು ಪರಮಾತ್ಮನಿಗೆ ಸತ್ಯ ಸಂಗತವಾಗುವುದಿಲ್ಲ. ಸರ್ವವ್ಯಾಪಿಯಾಗಿರುವ ದೈವತ್ವವು(ಪರಮಾತ್ಮ) ಎಲ್ಲಾದರೂ ರೂಪತಾಳಿ ಪ್ರಕಟವಾಗಬಹುದು.
ಭಗವಂತನನ್ನು ಪರಶುರಾಮನ ರೂಪದಲ್ಲಿ ಕಾಣಲು ಸಾಧ್ಯವಾಗುವುದು ಬಹಳ ಮೋಹಕ. ನೀವು ಪರಶುರಾಮನ ಜೀವನ ಕಥೆಯನ್ನು ವೀಕ್ಷಿಸಿದರೆಅವರು ಭಗವಂತನ ಅವತಾರವೆಂದು ನಿಮಗನ್ನಿಸುವಂತೆ ಮಾಡುವ ಅವರ ಯಾವುದೇ ಕೃತ್ಯವೂ ಇಲ್ಲ.
ಮೊದಲು ಅವರು ತನ್ನ ಸ್ವಂತ ತಾಯಿಯ ಶಿರಚ್ಛೇದನ ಮಾಡಿದರು.
ಯಾವುದೇ ಮಗುವಿಗೆ ತನ್ನದೇ ತಾಯಿಯ ಶಿರಚ್ಛೇದನ ಮಾಡುವುದು ಸುಲಭವೇ?ಇಲ್ಲ, ಅದು ಬಹಳ ಕಷ್ಟ. ವಾಸ್ತವದಲ್ಲಿ ಅದು ಅಸಾಧ್ಯ. ಮತ್ತೆ ನಂತರ ಅವರು ಎಲ್ಲಾ ಕ್ಷತ್ರಿಯರನ್ನು ಪರಾಜಯಿಸುತ್ತಾ ಹೋದರು.
ನನ್ನ ಪ್ರಕಾರ, ಇದು ಒಂದು ಮೂರ್ಖತನದ ಕೆಲಸ.ನಾವು ಇದಕ್ಕಿಂತ ಎಷ್ಟೋ ವಿಕಾಸವಾಗಿದ್ದೇವೆ.ಹಾಗಾದರೆ ಇದರ ಹಿಂದಿನ ಅರ್ಥವೇನು?ಇದರ ಅರ್ಥ, ಇಂಥಃ ಕ್ರೂರ ಕೃತ್ಯಗಳನ್ನೂ ಎಸಗಬಲ್ಲ ಒಂದು ಸ್ವಾರಸ್ಯಕರ ಪರಮ ಶಕ್ತಿ ಇದೆ.
ಪರಶುರಾಮನು ಮಾಡಿದ ಕೃತ್ಯಗಳು ಅಮಾನುಷ ಮತ್ತು ಸಮಾನ್ಯತೆಯನ್ನು ವರ್ಜಿಸಿದ್ದವು.ಸಾಮಾನ್ಯ ಮನುಷ್ಯನಿಗೆ ಅಂಥ ಕೃತ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ, ಆದರೆ ಕೇವಲ ಭಗವಂತನು ತಾನಷ್ಟೇ ಅಂಥ ಕೃತ್ಯಗಳನ್ನು ಎಸಗಬಹುದು.ಹಾಗಾಗಿ ಪರಶುರಾಮ ಪರಮಾತ್ಮನದ್ದೇ ಒಂದು ಅವತಾರವಾಗಿರಬೇಕು.’ ಇದು ತಾತ್ಪರ್ಯವಾಗಿತ್ತು.ಪರಶುರಾಮನ ಅವತಾರವನ್ನು ಬೆಳಕಿನಲ್ಲಿ, ಅರ್ಥದಲ್ಲಿ ನೋಡಲಾಗುತ್ತದೆ.

ಪರಶುರಾಮನಿಂದ ಮಾಡಲ್ಪಟ್ಟ ಕೃತ್ಯಗಳು ಅಮಾನುಷ ಮತ್ತು ಒಬ್ಬ ಸಾಮಾನ್ಯ ಮನುಷ್ಯನಿಂದ ಮಾಡಲು ಯೋಗ್ಯವಾದುದಲ್ಲ. ಮತ್ತು ಯಾರೂ ಪರಶುರಾಮನ ಮಾರ್ಗವನ್ನು ಅನುಸರಿಸಲು ಬೋಧಿಸುವುದಿಲ್ಲ. ಅವರ ಕೃತ್ಯಗಳು ಅನುಕರಣೆಗೆ ಅಯೋಗ್ಯವಾದವು, ಆದರೂ ಅವು ಗೌರವಕ್ಕೆ ಅರ್ಹ. ಯಾಕೆ? ಮದಲನೆಯದಾಗಿ, ಅವರು ಯಾವುದೇ ಕಾರ್ಯ ಮಾಡಿದ್ದರೂ, ಅವನ್ನು ಕರ್ತೃತ್ವದ ಒಂದು ಭಾವನೆಯಿಲ್ಲದೇ ಮಾಡಿದರು, ಒಬ್ಬ ಸಾಕ್ಷಿಯಾಗಿ(ಸಾಕ್ಶೀ ಭಾವದಿಂದ) ಮಾಡಿದರು.
ಎರಡನೆಯದಾಗಿ, ನೀವು ಪರಶುರಾಮನಲ್ಲೂ ದೇವರನ್ನು ನೋಡಲು ಶಕ್ತರಾದರೆ, ಮತ್ತೆ ನೀವು ಕೇವಲ ದೇವರನ್ನೇ ಎಲ್ಲೆಡೆಯೂ ಕಾಣುತ್ತೀರಿ.ಪ್ರತಿ ಮಗುವಿನಲ್ಲಿ ಮತ್ತು ಪ್ರತಿಯೊಬ್ಬ ಮನುಷ್ಯನಲ್ಲಿ ನೀವು ಅವತಾರವನ್ನು ನೋಡುತ್ತೀರಿ.
ಇದರಿಂದಾಗಿ ಪರಶುರಾಮ ಅವತಾರವೆಂದು ಪರಿಗಣಿಸಲಾಗುತ್ತಾರೆ.

ನಿಮಗೆ ಒಂದು ಮೀನಿನಲ್ಲಿ ದೇವರನ್ನು ನೋಡಲು ಸಾಧ್ಯವಾದರೆ(ಮತ್ಸ್ಯಾವತಾರ), ಒಂದು ಕಾಡು ಹಂದಿಯಲ್ಲಿ(ವರಾಹಅವತಾರ), ಒಂದು ಆಮೆಯಲ್ಲಿ(ಕೂರ್ಮ ಅವತಾರ), ಒಂದು ಸಿಂಹದಲ್ಲಿ(ನರಸಿಂಹ ಅವತಾರ), ಒಂದು ಹಂಸದಲ್ಲಿ, ಒಂದು ಕಾಗೆಯಲ್ಲಿ ಮತ್ತು ಹಾಗೆಯೇ ನಿಮ್ಮ ಸುತ್ತಲಿನ ಎಲ್ಲದರಲ್ಲೂ , ಸಾವಿರಾರು ಕ್ಷತ್ರಿಯ ಯೋಧರನ್ನು ಕೊಂದ ಪರಶುರಾಮನಂಥ ಕಲ್ಲು ಹೃದಯದ ಮನುಷ್ಯನಲ್ಲೂ ನಿಮಗೆ ದೇವರನ್ನು ಕಾಣುವುದು ಸಾಧ್ಯವಾದರೆ, ಮತ್ತೆ ಕೆಲಸ ಪೂರ್ಣಗೊಂಡಿತುಆಗ ನೀವು ಎಲ್ಲಾ ಸೃಷ್ಟಿಯಲ್ಲೂ, ನಿಮ್ಮ ಸುತ್ತಲೆಲ್ಲಾ ದೈವತ್ವವನ್ನು ಕಾಣಬಲ್ಲಿರಿ.ಅದರ ನಂತರ, ಜಗತ್ತಿನಲ್ಲಿ ದೈವತ್ವವಿರುವುದನ್ನು ಕಾಣಲಾಗದಂಥ ಯಾವುದೇ ವಸ್ತು ಇರುವುದಿಲ್ಲ.
ಜ್ಞಾನವನ್ನು ಅರ್ಥಮಾಡಿಕೊಳ್ಳಲು, ಪರಶುರಾಮನನ್ನು ದೇವರ ಅವತಾರವೆಂದು ಪರಿಗಣಿಸಲಾಗಿತ್ತು.ನಿಮಗಿದು ಅರ್ಥವಾಗಿದೆಯೇ?
ಹಾಗಾಗಿ ದೇವರು ಒಂದು ಧರ್ಮಕ್ಕೆ, ದೇಶಕ್ಕೆ ಅಥವಾ ಕಾಲಕ್ಕೆ ಸೀಮಿತವೆಂದು ಯೋಚಿಸಬೇಡಿ.ಭಗವಂತ ಸರ್ವವ್ಯಾಪಿ ಮತ್ತು ಸೃಷ್ಟಿಯ ಪ್ರತಿ ಕಣದಲ್ಲೂ ವಾಸವಾಗಿದ್ದಾನೆ.

ಭಗವಾನ್ ರಾಮ ಒಂದು ಅವತಾರವಾಗಿ ಮರ್ಯಾದಾಪುರುಷೋತ್ತಮನೆಂದು ಕರೆಯಲ್ಪಡುತ್ತಾರೆ(ನರರಲ್ಲಿ ಸರ್ವೋತ್ತಮ ಮತ್ತು ಧರ್ಮದ ಸಿದ್ಧಾಂತಗಳನ್ನು ಎತ್ತಿಹಿಡಿಯುವವನು), ಆದರೂ ಅವರು ವಿನಯದಿಂದ  ಬಾಗಿ ಸಾಧುಗಳ ಪಾದಸ್ಪರ್ಷ ಮಾಡುತ್ತಿದ್ದರು. ಅವರು ಪ್ರತಿಯೊಬ್ಬರನ್ನೂ ಉತ್ತಮ ಗೌರವ ಹಾಗೂ ಮನ್ನಣೆಯೊಂದಿಗೆ ನಡೆದುಕೊಳ್ಳುತ್ತಿದ್ದರು.ಅವರು ಅಗಸ್ತ್ಯ ಮಹರ್ಷಿಗಳ ಪಾದಗಳ ಬಳಿ ಕುಳಿತು ಅವರಿಂದ ಜ್ಞಾನವನ್ನು ಪಡೆದರು.
ಅವರ ಗುರುತ್ವ(ಮಹಾತ್ಮ್ಯೆ/ಔನ್ನತ್ಯಎಂಥದ್ದೆಂದರೆ, ತನ್ನ ತಮ್ಮ ಲಕ್ಷ್ಮಣನಿಗೆ ಅವರು ರಣರಂಗದಲ್ಲಿ ಸಾಯುತ್ತ ಮಲಗಿರುವ ರಾವಣನ ಪಾದಗಳನ್ನೂ ಸ್ಪರ್ಷಿಸಲು ಹೇಳಿದರು. ಹೀಗೆ ಅವರು ತನ್ನ ತಮ್ಮನನ್ನು ರಾವಣನ ಶಿಷ್ಯನಾಗಲು ಮತ್ತು ಅವನ ಕೊನೆಯ ಕ್ಷಣಗಳಲ್ಲಿ ಅವನಿಂದ ಜ್ಞಾನವನ್ನು ಪಡೆಯಲು ಕಳುಹಿಸಿದರು.
ಭಗವಾನ್ ರಾಮ ಹೇಳಿದರು, ’ನಾನು ರಾವಣನ ಬಳಿ ಹೋದರೆ, ಅವನು ತನ್ನ ದೇಹವನ್ನು ಬಿಟ್ಟು ಅವನ ಆತ್ಮವು ನನ್ನೊಳಗೆ ಲೀನವಾಗುತ್ತದೆ.ಹಾಗಾಗಿ ಅದಾಗುವ ಮೊದಲು, ಹೋಗಿ ಅವನಿಂದ ಏನು ಕಲಿಯಲು ಸಾಧ್ಯವೋ ಎಲ್ಲವನ್ನೂ ಕಲಿ.ಅದರ ನಂತರ ನಾನು ಅವನಿಗೆ ದರ್ಶನ ನೀಡುತ್ತೇನೆ ಮತ್ತು ಅವನ ಆತ್ಮ ನನ್ನೊಳಗೆ ಲೀನವಾಗುತ್ತದೆ.’

ಭಗವಾನ್ ರಾಮನು ಭಗವಾನ್ ಶಿವನನ್ನು ಪೂಜಿಸುತ್ತಿದ್ದರು. ಭಗವಾನ್ ಕೃಷ್ಣನೂ ಭಗವಾನ್ ಶಿವನನ್ನು ಪೂಜಿಸುತ್ತಿದ್ದರು, ಮತ್ತು ಭಗವಾನ್ ಕೃಷ್ಣನು ದೇವಿಯ(ಭಗವತೀ ಮಾತೆ) ಪರಮ ಭಕ್ತರೂ ಆಗಿದ್ದರು. ಅವರು ಯಾವಾಗಲೂ ಭಗವತೀ ಮಾತೆಯನ್ನು ಪೂಜಿಸುತ್ತಿದ್ದರು.
ಇಲ್ಲಿ ದೇವಿ ಎಂದರೆ ಎಲ್ಲರಲ್ಲೂ ಚೈತನ್ಯ ಸ್ವರೂಪದಲ್ಲಿ, ಜೀವ ಸ್ವರೂಪದಲ್ಲಿ, ಹಸಿವಿನ ರೂಪದಲ್ಲಿ, ಬುದ್ಧಿ, ಯಶಸ್ಸು, ಶಕ್ತಿ ಮತ್ತು ಬೇರೆ ಅನೇಕ ರೂಪಗಳಲ್ಲಿ ವಾಸವಾಗಿರುವ ದಿವ್ಯ ಶಕ್ತಿ.
ಇಂದು ಭಗವತೀ ಮಾತೆ ನಮ್ಮ ಮುಂದೆ ಅನ್ನಪೂರ್ಣೆಯಾಗಿ ಸ್ಥಿತವಾಗಿದ್ದಾಳೆ. ನಮ್ಮ ಮುಂದೆ ಎಷ್ಟೊಂದು ಆಹಾರವಿದೆ! (ಅನ್ನಕೂಟದ ಆಚರಣೆಗೆಂದು ಗುಜರಾತಿನ ಭಕ್ತರು ತಯಾರಿಸಿದ್ದ 451 ಆಹಾರ ಪದಾರ್ಥಗಳನ್ನು ಸೂಚಿಸಿದರು).