ಶನಿವಾರ, ಆಗಸ್ಟ್ 10, 2013

ದೇವರನ್ನು ಹುಡುಕುತ್ತಾ..

ಆಗಸ್ಟ್ ೧೦, ೨೦೧೩
ಬೆಂಗಳೂರು, ಭಾರತ

ವತ್ತಿನ ದಿನ ಏನಾಗುತ್ತಿದೆ ಎಂದರೆ, ನಮ್ಮ ಶೈಕ್ಷಣಿಕ ಕ್ರಮ ದುರ್ಬಲತೆಯಿಂದ ಬಳಲಿ ಮಾಸ್ಟರ್ಸ್ ಡಿಗ್ರಿ ಪಡೆದ ವಿದ್ಯಾರ್ಥಿಗಳಿಗೆ ಕೆಲಸ ಸಿಗುತ್ತಿಲ್ಲ. ಏಕೆಂದರೆ ಅವರಿಗೆ ಒಂದು ಸಾಧಾರಣ ಕೆಲಸವನ್ನೂ ಮಾಡಲು ತಿಳಿದಿಲ್ಲ. ಕುಶಲತೆಯು ಮಾಯವಾಗಿದೆ. ನಮಗೆ ಕುಶಲತೆ ಇರುವ ಶೈಕ್ಷಣಿಕ ಕ್ರಮ ಬೇಕಾಗಿದೆ. ನಾಗಪಟ್ಟಿನಮ್ ನ ಶಾಲೆಯು ಇದನ್ನೇ ಮಾಡುತ್ತಿದೆ.

ನಿಮಗೆ ಗೊತ್ತಾ, ಸುನಾಮಿ ಬಂದಪ್ಪಳಿಸಿದಾಗ ನಮ್ಮ ಸ್ವಯಂ ಸೇವಕರು ಮತ್ತು ಅಧ್ಯಾಪಕರು ಅಲ್ಲಿ ನಿರ್ಮಿಸಿದ ಶಾಲೆಯದು. ಅದರ ಜೊತೆಗೆ ಕುಶಲ ಕಲೆ ತರಬೇತಿ ಪ್ರಾರಂಭಿಸಿದರು.  ಸುನಾಮಿಯಿಂದ ತತ್ತರಿಸಿದ ಕುಟುಂಬಗಳು ಹಾಗು  ಆರುನೂರಕ್ಕಿಂತ ಮೇಲ್ಪಟ್ಟ ಮಕ್ಕಳು ವಾಸಿಸುತ್ತಿರುವ ಈ ಜಾಗದಲ್ಲಿ ಪ್ರತಿಭೆಗಳು ಸುನಾಮಿಯಂತೆ ಅಪ್ಪಳಿಸುತ್ತಿವೆ. ಇದು ನಿಜಕ್ಕೂ ಅದ್ಭುತವಾದುದು!. ಅದಕ್ಕಾಗಿ ಶ್ರಮಿಸಿದ ಸ್ವಯಂ ಸೇವಕರು ಹಾಗು ಅಧ್ಯಾಪಕರಿಗೆ ಅಭಿನಂದನೆ ಸಲ್ಲಿಸಬೇಕು.

ಶಾಲಾ ಪ್ರಾಧಿಕಾರವು ಮತ್ತೊಂದು ಆಸಕ್ತಿಕರ ವಿಚಾರವನ್ನು ಹಂಚಿಕೊಂಡಿತು. ಅದೆಂದರೆ, ಸ್ಥಳೀಯ ಎಂ.ಎಲ್.ಎಗಳು ಅವರ ಮಕ್ಕಳನ್ನು ಸೇರಿಸಲು ಶಿಫಾರಸ್ಸಿನ ಮುಖಾಂತರ ಪ್ರಯತ್ನಿಸುತ್ತಿದ್ದರಂತೆ!

ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಲು ಬಹು ದೊಡ್ಡ ಸರತಿ ಸಾಲು ಇರುತ್ತದೆ. ಆದರೆ ಕೆಲವು ಮಾನದಂಡಗಳಿಗೆ ಹೊಂದುವಂತಹ ಮಕ್ಕಳನ್ನು ಸೇರಿಸಿಕೊಳ್ಳಲಾಗುತ್ತದೆ.

ಆದ್ದರಿಂದ ಅಧ್ಯಾಪಕರು, ಸ್ವಯಂ ಸೇವಕರು, ಪ್ರಿನ್ಸಿಪಾಲರು ಶಾಲಾ ಕಾರ್ಯನೀತಿಗೆ ಕಂಕಣಬದ್ಧರಾಗಿದ್ದಾರೆ. ಸರತಿಯಲ್ಲಿ ನಿಲ್ಲದೆ, ಅರ್ಹತೆ ಇಲ್ಲದೆ ಯಾವ ನಿಯಮಗಳಿಗೂ ಒಳಪಡದೆ ಅವರ ಮಕ್ಕಳನ್ನು ಶಾಲೆಗೆ ಸೇರಿಸಲು ಭಯಂಕರ ಒತ್ತಡ ಹೇರಿದ್ದರು. ಶಾಲಾ ಪ್ರಾಧಿಕಾರವು ಹೇಳಿತು "ಇಲ್ಲ". ಮತ್ತು ಅದರಂತೆಯೇ ನಡೆದುಕೊಂಡಿತು. ಅದಿನ್ನು ಉಚಿತ ಶಾಲೆಯಾಗಿಯೇ ನಡೆಯುತ್ತಿದೆ. ಉಚಿತ ಶಾಲೆಗೆ ಸೇರಿಸಲು ನೂಕುನುಗ್ಗಲಾದದ್ದನು ಎಂದಾದರು ಕೇಳಿದ್ದೀರ? ಜನರು ಬದ್ಧತೆಯಿಂದ ಕೆಲಸ ಮಾಡಿದಾಗ ಇಂತಹುದಾಗುತ್ತದೆ. ನೀವು ನಿಮ್ಮ ಹೃದಯ ಹಾಗು ಜೀವಾತ್ಮದೊಂದಿಗೆ ಕೆಲಸ ಮಾಡಿದರೆ ಯಾವ ಸಂಸ್ಥೆಯೂ ಅತ್ಯುತ್ತಮವಾದುದನ್ನು ಸಾಧಿಸುತ್ತದೆ.

ಶಾಲಾ ಪ್ರಾಧಿಕಾರವು ಹೇಳಿತು, "ಇಲ್ಲ, ನೀವು ತುಂಬಾ ಹಣ ಕೊಟ್ಟರೂ ನಾವು ತೆಗೆದುಕೊಳ್ಳುವುದಿಲ್ಲ. ನಾವು ಹೇಗಿದ್ದರೂ ಹಣ ತೆಗೆದುಕೊಳ್ಳುವುದಿಲ್ಲ. ಇದು ಉಚಿತ ಶಾಲೆ. ನಾವು ನಿಯಮಕ್ಕೆ ಬದ್ಧರಾಗಿದ್ದೇವೆ. ನೀವು ಕ್ರಮಬದ್ಧವಾದ ವಿಧಾನವನ್ನು ಅನುಸರಿಸಬೇಕು. ಶಿಫಾರಸ್ಸು ಇಲ್ಲಿ ನಡೆಯುವುದಿಲ್ಲ".

ಇದು ಒಳ್ಳೆಯದು. ಅದುವೇ, ಇದು ಹೇಳಿದ್ದು ಯಾರೋ ತುಂಬಾ ಎತ್ತರದ ಸ್ಥಾನದಲ್ಲಿರುವವರಲ್ಲ. ಟ್ರಸ್ಟಿ ಅಥವಾ ಮತ್ತೊಬ್ಬರು ಇದನ್ನು ಮಾಡುವಂತೆ ಹೇಳಿದ್ದರು.

ಜಾಗರೂಕತೆಯು ಮನುಷ್ಯನಲ್ಲಿ ತನ್ನಂತೆ ತಾನೇ ಉದಯಿಸುತ್ತದೆ. ನಡತೆ ಹಾಗು ಬದ್ಧತೆ ಒಳಗಿಂದ ಉದಯಿಸುತ್ತದೆ, ಅದನ್ನೇ ಆಧ್ಯಾತ್ಮಿಕತೆ ಎನ್ನುವುದು. ಆಧ್ಯಾತ್ಮಿಕತೆಯು ನಿಮ್ಮಲ್ಲಿ ಬದ್ಧತೆಯನ್ನು ಉಂಟುಮಾಡುತ್ತದೆ. ನಿಮಗೆ ಒಂದು ಎತ್ತರದ ಮಾನದಂಡ ಇಟ್ಟುಕೊಳ್ಳಿ.  ಬೇರೆಯವರ ಜೊತೆ ಸ್ಪರ್ಧಿಸಲು ಅಲ್ಲ. ಆ ಎತ್ತರದ ಮಾನದಂಡ ನಿಮಗಾಗಿ ಹಾಗು ಅದನ್ನು ಸಾಧಿಸಲು. ಅದೇ ಜೀವನದ ಸಫ಼ಲತೆ.

ಪ್ರ. ಪ್ರಪಂಚದ ಬಹುದೊಡ್ಡ ಸೈನ್ಯವನ್ನು ಹೊಂದಿದ್ದೀರ. ಪ್ರಪಂಚದಲ್ಲೇ ಅತ್ಯುತ್ತಮವಾದ ಕಮಾಂಡೊಗಳು ಹಾಗು ಸಮರ್ಪಣಾ ಮನೋಭಾವದ ಸೈನಿಕರು ನಿಮ್ಮಲ್ಲಿದ್ದಾರೆ. ನಿಮ್ಮ ಸಿಬ್ಬಂದಿ ವರ್ಗದವರು ಎಂದಿಗೂ ನಿವೃತ್ತರಾಗುವುದಿಲ್ಲ. ವಸ್ತುತಃ ಹೊಸಬರು ನಿರಂತರವಾಗಿ ಸೇರುತ್ತಲೇ ಇದ್ದಾರೆ. ಏಕೆಂದರೆ ನೀವು ಒಳ್ಳೆಯ ಸಂಬಳ ಕೊಡುತ್ತೀರಿ- ಸಂತೋಷ. ಇನ್ನು ನಿಮ್ಮ 'ವಸುದೈವ ಕುಟುಂಬಕಂ ' ದೂರದೃಷ್ಠಿಯು ದೂರದ ಕನಸಾಗಿದೆ. ನಮ್ಮ ಸ್ವಂತ ದೇಶದಲ್ಲೇ ಎಲ್ಲರು ಒಂದುಗೂಡುತ್ತಿಲ್ಲ. ಇದು ಮುಂದೆ ಹೋಗುವುದು ಯಾವಾಗ?

ಶ್ರೀಶ್ರೀ: ಆ ಕೆಲಸವನ್ನು ನಿಮಗಾಗಿ ಬಿಡಲಾಗಿದೆ. ಇದರಲ್ಲಿ ನೀವೂ ಒಂದು ಪಾತ್ರವನ್ನು ಮಾಡಬೇಕಿದೆ. ಇದನ್ನೇ ನೀವು ಮಾಡಬೇಕಾಗಿರುವುದು.

ನಾವುಗಳು ಹಳ್ಳಿ ಹಳ್ಳಿಗೆ ಹೋಗಿ ಜನರ ಮನಸ್ಸು ಹಾಗು ಹೃದಯವನ್ನು ಒಂದುಗೂಡಿಸಬೇಕಿದೆ. ಇದು ಕಷ್ಟದ ಕೆಲಸ ಎಂದು ಭಾವಿಸಬೇಡ. ಏಕತೆಯು ಈಗಾಗಲೇ ಇದೆ. ಇಲ್ಲಿ ಸ್ವಲ್ಪ ತಪ್ಪು ತಿಳಿವಳಿಕೆ, ಸ್ವಲ್ಪ ಸ್ವಾರ್ಥತೆ ಹಾಗು ದೂರದೃಷ್ಠಿಯ ಕೊರತೆ ಇವುಗಳು ಇಂತಹ ವಾತಾವರಣವನ್ನು ಉಂಟುಮಾಡಿವೆ. ಮೂಲತಃ ಜನರು ಒಳ್ಳೆಯವರು. ಶೇಕಡಾ ೯೦ರಷ್ಟು ಜನರು ತುಂಬಾ ಒಳ್ಳೆಯವರು. ಇನ್ನುಳಿದ ೧೦ರಷ್ಟು ಜನರೂ ಒಳ್ಳೆಯವರೆಂದು ನಾನು ಹೇಳುತ್ತೇನೆ. ಎಲ್ಲೋ ಏನೋ ಎಡವಟ್ಟಾಗಿದೆ. ಅವರನ್ನು ಸರಿಮಾಡಬಹುದು.

ಕಿರಣ್ ಬೇಡಿಯವರು ಈ ದಿನ ನಮ್ಮೊಂದಿಗಿದ್ದಾರೆ. ಇವರು ದಿಲ್ಲಿಯ ಜೈಲಧಿಕಾರಿಯಾಗಿದ್ದಾಗ ಎಲ್ಲಾ ಕಾರಾಗೃಹಗಳನ್ನು ಆಶ್ರಮವಾಗಿ ಪರಿವರ್ತಿಸಿದ್ದರು. ಅವುಗಳನ್ನು ತಿಹಾರ್ ಆಶ್ರಮಗಳೆಂದು ಕರೆಯಲಾಗುತ್ತಿತ್ತು. ಇಂದಿಗೂ ತಿಹಾರ್ ನಲ್ಲಿ ಕುಶಲ ತರಗತಿಗಳು ಹಾಗು ನಮ್ಮ ಕೆಲವು ಕಾರ್ಯಕ್ರಮಗಳು ನಡೆಯುತ್ತಿವೆ. ಬರಿ ಧ್ಯಾನದ ತರಗತಿಗಳಲ್ಲದೆ ಆರ್ಟ್ ಆಫ್ ಲಿವಿಂಗ್ ಕೇಂದ್ರಗಳೂ ಆ ಬಂದೀಖಾನೆಗಳಲ್ಲಿವೆ. ನಿಮಗಿದು ತಿಳಿದಿತ್ತೇ?

ಬರಿ ಭಾರತದಲ್ಲಷ್ಟೇ ಅಲ್ಲದೆ ಅರ್ಜೆಂಟಿನದ ೫೫೦೦ ಜನರಿರುವ ದೊಡ್ಡ ಬಂದೀಖಾನೆಯಲ್ಲಿ ಆರ್ಟ್ ಆಫ್ ಲಿವಿಂಗ್ ಕೇಂದ್ರವಿದೆ. ಎಲ್ಲರೂ ಅಲ್ಲಿ ಧ್ಯಾನ ಮಾಡುತ್ತಾರೆ.

ನಾನು ಬ್ರೆಜಿಲ್ ನಲ್ಲಿದ್ದಾಗ ಅಲ್ಲಿಯ ರಿಯೊ ಡಿ ಜನೆರಿಯೊ ಎಂಬ ಪ್ರದೇಶದ ಬಂದೀಖಾನೆಯನ್ನು ವೀಕ್ಷಿಸಲು ತೆರಳಿದ್ದೆ, ಅಲ್ಲಿಯೂ ಆರ್ಟ್ ಆಫ್ ಲಿವಿಂಗ್ ಫಲಕವಿತ್ತು!.  ಅವರು ಹಂಸಗಳ ಚಿತ್ರವನ್ನೂ ಬಿಡಿಸಿದ್ದರು!. ಇದನ್ನು ನೋಡಿ ನಾನು ಆಶ್ಚರ್ಯ ಚಕಿತನಾದೆ. ಹಾಗು  ಅಲ್ಲಿದ್ದ ಜನಗಳ ಕಣ್ಣಲ್ಲಿ ನೀರಿತ್ತು. ಸಮಾಜದ ಕಣ್ಣಿನಲ್ಲಿ ಖೈದಿಗಳಾದ ಅವರಲ್ಲೂ ಹೃದಯವಿದೆ ಅಲ್ಲವೇ?

ಇಂದು ತಿಹಾರ್ ಜೈಲಿನಲ್ಲಿ ವಿವಿಧ ರೀತಿಯ ಕರಕುಶಲತೆಯನ್ನು ಕಲಿಯುತ್ತಿದ್ದಾರೆ. ನಾವು ಎಲೆಕ್ಟ್ರಿಕಲ್ ಅನ್ನೂ  ಹೇಳಿಕೊಡುತ್ತಿದ್ದೇವೆ. ಅವರುಗಳು ಎಲೆಕ್ಟ್ರಿಷಿಯನ್ ಹಾಗು ಬಡಗಿಗಳಾಗುತ್ತಿದ್ದಾರೆ. ನಮ್ಮ ಆರ್ಟ್ ಆಫ್ ಲಿವಿಂಗ್ ನ ಅಧ್ಯಾಪಕರಾದ ದೀಪಕ್ ರವರು ತಿಹಾರ್ ನಲ್ಲಿ  ಬಹು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ವಿವಿಧ ಕುಶಲ ಕಲೆಗಳ ತರಗತಿಯನ್ನು ದೇಶಾದ್ಯಂತ ಪ್ರಾರಂಭಿಸಿದ್ದಾರೆ, ನಮ್ಮ ರೂರಲ್ ಡೆವಲಪ್ ಮೆಂಟ್  ಪ್ರೋಗ್ರಾಮ್ (ಆರ್ ಡಿ ಪಿ) ಮೂಲಕ.

ಮೂಲತಃ ಜನರು ಒಳ್ಳೆಯವರಿದ್ದಾರೆ. ಅವರಿಗೆ ಆಧ್ಯಾತ್ಮಿಕತೆಯ ಉರಿಯು ಬೇಕಾಗಿದೆ.

ಆಧ್ಯಾತ್ಮಿಕತೆ ಇಲ್ಲದ ಜೀವನವು ಒಣಭೂಮಿ. ನೀವು ನೋಡಿದ್ದೀರ?  ಶುಷ್ಕ ಅನುಭವ ಉಂಟಾದಾಗ ತಪ್ಪನ್ನಲ್ಲದೆ ಬೇರೇನನ್ನೂ ಮಾಡಲಾಗುವುದಿಲ್ಲ. ನೀವು ಏನೇ ಮಾಡಿದರೂ ಅದು ತಪ್ಪಾಗುತ್ತದೆ. ನಿಮಗೊಂದು ಕಾರ್ಯ, ಗುರಿ ಹಾಗು ಕೆಲಸವಿದೆ. ಸುಮ್ಮನೆ ಬಂಡಿಯನ್ನೇರಿ!

ಪ್ರ. ದೇವರು ಇದ್ದಾನೆಯೇ? ಈ ಪುರಾಣಗಳೆಲ್ಲ ಕಟ್ಟು-ಕತೆ ಎನಿಸುತ್ತದೆ. ದೇವರನ್ನು ಹೇಗೆ ಹುಡುಕಲಿ? ಅವನ ಇರುವಿಕೆಯನ್ನು ಹೇಗೆ ಗುರುತಿಸಲಿ ಹಾಗು ಏಕೆ ನಂಬಲಿ?   

ಶ್ರೀಶ್ರೀ: ಇಲ್ಲಿ ಕೇಳು, ದೇವರು ವಿಶ್ರಮಿಸಲಿ. ಈಗ ದೇವರ ಬಗ್ಗೆ ಚಿಂತಿಸಬೇಡ. ನಿನ್ನ ಬಗ್ಗೆ ಚಿಂತಿಸು.

ನೀನು ಯಾರು? ಮೊದಲು ಆತ್ಮ (ಚೇತನ) ನಂತರ ಪರಮಾತ್ಮ (ದೈವೀ ಚೇತನ). ಪರಮಾತ್ಮನು (ದೇವರು) ಆತ್ಮಕ್ಕೆ (ಪ್ರತ್ಯೇಕ ಪ್ರಾಣ) ಅತೀತವಾದದ್ದು.  ಮೊದಲು ಕಾಂಪೌಂಡ್ ದಾಟಿ ಒಳಹೋಗು (ಅಂದರೆ ನಿನ್ನನ್ನು ತಿಳಿದುಕೊ), ನಂತರ ಮನೆಯ ಒಳಗೆ ಹೋಗು (ದೇವರನ್ನು ತಿಳಿದುಕೊ).

ಕೆಲವರು ಹೇಳುತ್ತಾರೆ "ನನಗೆ ಯಾವುದರ ಬಗ್ಗೆಯೂ ನಂಬಿಕೆ ಇಲ್ಲ". ಅವರುಗಳು ಅವರು ಹೇಳುವ ಪದದ ಬಗ್ಗೆಯಾದರೂ ನಂಬಿಕೆ ಇಡಬೇಕು. ನಿನಗೆ ಯಾವುದರ ಬಗ್ಗೆಯೂ ನಂಬಿಕೆ ಇಲ್ಲ ಎಂದರೆ, ನೀನು ಯಾವುದನ್ನೂ ನಂಬಬಾರದು. ಹೌದಲ್ಲವೇ?

ಹಾಗಾದರೆ ಇದನ್ನು ಹೇಳುತ್ತಿರುವವರು ಯಾರು? ನೀನು ಯಾರು? ಆಲೋಚನೆಯೇ? ಇಲ್ಲ. ಅದು ಬದಲಾಗುತ್ತಿರುತ್ತದೆ. ನೀನು ನಿನ್ನ ದೇಹವೇ? ನಿನ್ನನ್ನು ೫-೧೦ ವರ್ಷದ ಹಿಂದೆ ಇದ್ದಂತೆ ನೆನಪು ಮಾಡಿಕೊ. ನಿನ್ನ ದೇಹವು ತುಂಬ ಬದಲಾಗಿದೆ.

ಒಂದು ವರ್ಷದಲ್ಲಿ ನಮ್ಮ ದೇಹದಲ್ಲಿನ ಎಲ್ಲಾ ಜೀವಕೋಶಗಳು ಬದಲಾಗುತ್ತವೆ. ನಿಮಗಿದು ಗೊತ್ತೇ?

ನಮ್ಮ ದೇಹದ ಒಂದೊಂದು ಕಣವೂ ಬದಲಾಗುತ್ತದೆ. ಹೊಟ್ಟೆಯ ಒಳಭಾಗವು  ಐದು ದಿನಗಳಿಗೊಮ್ಮೆ ಬದಲಾಗುತ್ತವೆ. ರಕ್ತವು ೨೪ ಗಂಟೆಗಳಿಗೊಮ್ಮೆ ಬದಲಾಗುತ್ತದೆ. ಚರ್ಮವು ೩೦ ದಿನಗಳಿಗೊಮ್ಮೆ ಬದಲಾಗುತ್ತದೆ. ಎಲ್ಲಾ ಕಣ-ಕಣಗಳು ಹಾಗು ಜೀವಕೋಶಗಳು ವರ್ಷದಲ್ಲಿ ಒಂದು ಬಾರಿಯಾದರೂ ಬದಲಾಗುತ್ತವೆ.

ಹೀಗಾಗಿ ನಿಮ್ಮ ದೇಹವು ಚಲಿಸುವ ನದಿ. ನದಿಯು ಒಂದೆ, ಆದರೆ ನೀರು ಮಾತ್ರ ಹೊಸದು. ಆದ್ದರಿಂದ ನೀವು ನೂತನ ಹಾಗು ಪುರಾತನ ಎರಡೂ ಆಗಿದ್ದೀರ. ಇದು ಗಂಗಾ, ಯಮುನಾ, ಕಾವೇರಿ(ಭಾರತದ ನದಿಗಳು) ಗಳಲ್ಲಿ ಒಂದೇ ಆಗಿದೆ. ತಂಬಾ ವರ್ಷಗಳಿಂದ ನದಿಗಳು ಒಂದೇ ಆಗಿವೆ ಆದರೆ ನೀರು ಮಾತ್ರ ಹೊಸದು. ಇದೇ ರೀತಿ ನೀವೂ ನೂತನ ಹಾಗು ಪುರಾತನ ಆಗಿದ್ದೀರ.

ನಿಮ್ಮಲ್ಲಿ ಪುರಾತನವು ಯಾವುದು ಹಾಗು ನೂತನವು ಯಾವುದು ಎಂದು ಗುರುತಿಸಿ. ನಿಮ್ಮನ್ನು ನೀವು ತಿಳಿಯಿರಿ. ದೇವರು ನಿಮ್ಮನ್ನು ಹಿಂಬಾಲಿಸುತ್ತಾನೆ.

ಆದ್ದರಿಂದ, ನಂಬಲು ಪ್ರಯತ್ನಿಸಬೇಡಿ.  ನಿಮ್ಮನು ನೀವು ಒತ್ತಾಯದಿಂದ ನಂಬಿಸುವುದಕ್ಕೆ ಸಾಧ್ಯವಿಲ್ಲ. ಅದು ನಿಮ್ಮೊಳಗಿನಿಂದಲೇ ಬರಬೇಕು. ವಿಜ್ಞಾನ ಅಥವಾ ಆಧ್ಯಾತ್ಮಿಕತೆ ಇವೆರಡರಲ್ಲಿ ಒಂದರಿಂದ ಬರಬೇಕು. ಧ್ಯಾನದಿಂದ ನಿಮ್ಮ ಗುರಿ ಮುಟ್ಟಲು ಸಾಧ್ಯ. ಗುರಿ ಎಂದರೇನು? ಇಡೀ ವಿಶ್ವವು ಒಂದು ಅಲೆಯಿಂದ, ಒಂದು ತರಂಗದಿಂದ, ಒಂದೇ ವಸ್ತುವಿನಿಂದ ಮಾಡಲ್ಪಟ್ಟಿದೆ. ಆ ಒಂದು ವಸ್ತು ನಾನೇ!. ನೀವು ಇದನ್ನು ದೇವರು, ಬ್ರಹ್ಮ, ಅವನು, ಅವಳು, ಅದು ಏನೆಂದು ಕರೆದರೂ ನಡೆಯುತ್ತದೆ!. ನೀವು ಧ್ಯಾನದಲ್ಲಿ ಬಹು ಆಳಕ್ಕೆ ಹೋದಾಗ ಆ ಒಂದು ಜಾಗೃತಾವಸ್ಥೆಯೊಳಗೆ ವಿಲೀನ ಅಥವಾ ಒಂದಾಗುತ್ತೀರ. ಆ ಒಂದು ಮುಗ್ಧತೆ ಹಾಗು ಪ್ರೀತಿಯಿಂದ ಮಾತ್ರ ಪ್ರಾಪ್ತಿಯಾಗುತ್ತದೆ. ಪ್ರೀತಿ ಎಂದರೆ ನಿಮ್ಮ ಮನಸ್ಸು ಹಗುರವಾಗುವುದು.

ದುಃಖ ಹಾಗು ದ್ವೇಷದಲ್ಲಿ ಮನಸ್ಸು ನಿರ್ಜೀವವಾಗಿ ಭಾರಗೊಳ್ಳುತ್ತದೆ. ನೀವು ಪ್ರೀತಿಯಲ್ಲಿದ್ದಾಗ ಮನಸ್ಸು ಬಹಳ ಹಗುರವಾಗುತ್ತದೆ. ಇದನ್ನು ಅನುಭವಿಸಿದ್ದೀರೇನು?

ನೋಡಿ ನೀವು ಖುಷಿಯಲ್ಲಿದ್ದಾಗ ಎಂಥ ಅನುಭವ ಪಡೆಯುತ್ತೀರ? ಹಗುರವಾದ ಭಾವನೆ. ದುಃಖದಲ್ಲಿದ್ದಾಗ? ಕಲ್ಲೊಂದು ತಲೆಯ ಮೇಲೆ ಕುಳಿತಿರುವ ಹಾಗೆ. ಸರಿಯೇ? ಯೋಗವು ನಿಮ್ಮಲ್ಲಿ ಹಗುರವಾದ ಭಾವನೆಯನ್ನು ಮೂಡಿಸಲು ಇರುವ ವಿಜ್ಞಾನ.

ಇದೊಂದು ನಿಮ್ಮ ದೇಹದ ಭಾರವನ್ನು ಕರಗಿಸುವ ಕ್ರಿಯೆಯೊಂದೇ ಅಲ್ಲ, ನಿಮ್ಮ ಮನಸನ್ನು ಸಹ ಹಗುರಗೊಳಿಸುವಂತದ್ದು.

ಮನಸ್ಸಿನ ಉತ್ಪನ್ನಗಳಾದ ಕೋಪ, ಹೊಟ್ಟೆಕಿಚ್ಚು, ದ್ವೇಷ, ಲೋಭ ಇವುಗಳನ್ನು ಕಳೆದುಕೊಳ್ಳುತ್ತೀರ. ಒಳಗಿಂದ ಬಹಳ ಹಗುರತೆಯನ್ನು ಅನುಭವಿಸುತ್ತೀರ.

ಯಾವಾಗ ಹಗುರತೆಯನ್ನು ಅನುಭವಿಸುತ್ತೀರ? ನಿಮಗೆ ಗೊತ್ತಾದಾಗ, ನಂಬಿಕೆ ಬಂದಾಗ, ಸತ್ಯವೇ ಯಾವಾಗಲೂ ಗೆಲ್ಲುತ್ತದೆ ಎಂದು ತಿಳಿದಾಗ.  - "ಸತ್ಯ ಮೇವ ಜಯತೆ". ನಿಮಗೆ ಏನು ಬೇಕೋ ಅದೇ ಆಗುತ್ತದೆಂದು, ನಿಮಗೆ ನಂಬಿಕೆ ಬರುತ್ತದೆ.

ನಿಮಗೆ ಸಂಕಲ್ಪ ಹಾಗು ವಿಶ್ವಾಸವಿದ್ದಾಗ, ನೀವು ಕೋರ್ಟ್ ನಲ್ಲಿ ಹೋರಾಡಬೇಕಾಗಿ ಬಂದರೂ ನಗುವಿನಿಂದಲೇ ಎದುರಿಸುತ್ತೀರ. ಕದನಕ್ಕೂ ನಗುಮೊಗದಿಂದಲೇ ಹೋಗುತ್ತೀರ. ಕೋಪ ಹಾಗು ಭಾರವಾದ ಮನಸ್ಸಿನಿಂದಲ್ಲ. ನಿಮಗಿದು ಅರ್ಥವಾಗುತ್ತಿದೆಯೇ? ಇದೇ ಭಗವದ್ಗೀತೆಯ ತಿರುಳು.

ಎರಡನೇ ಅಧ್ಯಾಯದಲ್ಲಿ ಕೃಷ್ಣನು ಹೇಳುತ್ತಾನೆ,  "ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ, ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ ".

ಯೋಗದಲ್ಲಿ ಸ್ಥಿರವಾಗಿರುವುದು, ನಿಮ್ಮಲ್ಲಿ ಹಗುರತನವನ್ನು ಉಂಟುಮಾಡುತ್ತದೆ. ನಂಬಿಕೆಯ ಜಯವನ್ನು ಪ್ರದರ್ಶಿಸಿ ಹಾಗು ನಿಮ್ಮ ಕೆಲಸವನ್ನು ಮಾಡಿ ಹಾಗೇ ಮುಂದುವರೆಯಿರಿ. ನಂತರ ನಿಮಗೆ ದಣಿವಾಗದಿರುವುದನ್ನು ಗಮನಿಸುತ್ತೀರ. ಯಾವಾಗ ದಣಿಯುತ್ತೀರ? ನಿಮ್ಮಲ್ಲಿ ಆಶಾಕಿರಣಗಳು ಕಡಿಮೆಯಾದಾಗ. ರಾಗ-ದ್ವೇಷಗಳು ಮನಸ್ಸಿನ ಮೇಲೆ ಮೇಲ್ಮೈ ಸಾಧಿಸಿದಾಗ ಮನುಷ್ಯನು ದಣಿಯುತ್ತಾನೆ.

ಇಡೀ ಪ್ರಪಂಚಕ್ಕೆ ಭಾರತದಿಂದ ಒಂದು ಅನನ್ಯ ಕೊಡುಗೆ ಕೊಡಲ್ಪಟ್ಟಿದೆ, ಅದೆಂದರೆ ಅಬ್ಬರ ಹಾಗು ತಿರಸ್ಕಾರವಿಲ್ಲದೆ ಯುದ್ಧ ಮಾಡು. ಸವಾಲುಗಳು ಬರುತ್ತವೆ. ಯುದ್ಧವನ್ನು ಸಮಸ್ಥಿತಿಯಿಂದ, ಗಾಂಭೀರ್ಯದಿಂದ, ನೆಮ್ಮದಿಯಿಂದ, ಘನತೆಯಿಂದ ಎದುರಿಸಿ. ಶ್ರದ್ಧೆ ಹಾಗು ಸಮಸ್ಥಿತಿ ಇವೆರಡು ಸನ್ನಿವೇಶವನ್ನು ಎದುರಿಸಲು ಬೇಕಾಗುತ್ತವೆ.

ಪ್ರ. ಗುರುದೇವ್, ಒಂದು ಜನ್ಮವು ಸಾಕೆ ಮುಕ್ತಿಯನ್ನು ಪಡೆಯಲು?

ಶ್ರೀಶ್ರೀ: ನಿಶ್ಚಯವಾಗಿ ಸಾಕು. ಇದೇ ಬೇಕಾದಷ್ಟು.

ಪ್ರ. ಗುರುದೇವ್, ನನ್ನ ಮನೆಯನ್ನು ನಂದನವನವನ್ನಾಗಿ ಹೇಗೆ ಪರಿವರ್ತಿಸಲಿ? ವಾರಾಂತ್ಯದಲ್ಲಿಯೂ ಸಹ ನನ್ನ ಹೆಂಡತಿ ಜಗಳ ತೆಗೆಯುತ್ತಾಳೆ. 

ಶ್ರೀಶ್ರೀ: ನಿನಗೆ ಗೊತ್ತಾ, ನಾನು ನಿನಗೊಂದು ಸಲಹೆ ಕೊಡಬಲ್ಲೆ. ಜಗಳದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಿ. ಒಂದೇ ಸಮಯದಲ್ಲಿ ಮಾಡಬೇಡಿ. ನೀವು ಸೋಮವಾರ ಜಗಳ ಮಾಡಿರಿ. ಅವರು ಭಾನುವಾರ ಜಗಳ ಮಾಡಲಿ. ನೀವು ಮುಗುಳ್ನಗುತ್ತಿರಿ. ವಾದವು ಮತ್ತೊಂದು ವಾದವಿಲ್ಲದೆ ಮುಂದೆ ಸಾಗುವುದಿಲ್ಲ.
   
ಪ್ರಶ್ನೆಯನ್ನು ಪ್ರಶ್ನೆಯಿಂದ ಉತ್ತರಿಸಲಾಗುವುದಿಲ್ಲ. ಅವರು ವಾದಿಸಿದಾಗ ಮುಗುಳ್ನಗಿ. ಇದೇ ಧೋರಣೆಯನ್ನು ಅನುಸರಿಸಿ. ಮತ್ತು ದೋಣಿಯು ಮುಂದೆ ಸಾಗುತ್ತಿರಲಿ.

ಪ್ರ. ಗುರುದೇವ್, ಪ್ರವೃತ್ತಿ ಮತ್ತು ಅಪರಾಧಗಳ ನಡುವಿನ ವ್ಯತ್ಯಾಸವೇನು? ಪ್ರೀತಿ ಮತ್ತು ಸೇವೆಯು ನಮ್ಮ ನೈಸರ್ಗಿಕ ಪ್ರವೃತ್ತಿಯಾದರೆ, ಅಪರಾಧಗಳೇಕೆ ಹೆಚ್ಚುತ್ತಿವೆ?

ಶ್ರೀಶ್ರೀ: ಆಧ್ಯಾತ್ಮಿಕ ಶಿಕ್ಷಣದ ಕೊರತೆ ಹಾಗು ಮಾನವೀಯ ಮೌಲ್ಯಗಳ ಕೊರತೆ ಕಾಡುತ್ತಿವೆ. ಜನರು ಒತ್ತಡಕ್ಕೆ ಒಳಗಾಗಿದ್ದಾರೆ ಹಾಗು ಒತ್ತಡವನ್ನು ನಿವಾರಿಸುವ ಕಲೆಯನ್ನು ಕಲಿತಿಲ್ಲ. ಆದ್ದರಿಂದ ಅಪರಾಧಗಳು ನಡೆಯುತ್ತಿವೆ.

ನಾನು ಹೇಳಿದ ಹಾಗೆ ನೀವು ಈ ಜನರನ್ನು ಜೈಲಿನಲ್ಲಿ ಭೇಟಿ ಮಾಡಿದರೆ ಅವರು ಕಠಿಣ ಹೃದಯದವರು ಎಂದು ನಿಮಗೆ ಅನ್ನಿಸುವುದಿಲ್ಲ. ಅವರೂ ಒಳ್ಳೆಯವರೇ. ಮಾನಸಿಕ ಒತ್ತಡದಿಂದ ಅಪರಾಧಗಳನ್ನು ಮಾಡಿರುತ್ತಾರೆ. ಅವಘಡಗಳು ಅವರಿಂದ ಘಟಿಸಿರುತ್ತವೆ. ಇದರ ಬಗ್ಗೆ ಅವರನ್ನು ಕೇಳಿದರೆ ' ಓಹ್, ಇದು ಆಗಿಹೋಯ್ತು. ಇದು ಆಗಬೇಕೆಂದು ನನ್ನ ಇಚ್ಚೆ ಆಗಿರಲಿಲ್ಲ'

ಪ್ರ. ಗುರುದೇವ್, ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿದ್ದಿದ್ದರೆ, ಭೂಮಿಯಲ್ಲಿ ಇಷ್ಟೊಂದು ವಿವಾಹ ವಿಚ್ಚೇದನವೇಕೆ ಆಗುತ್ತಿವೆ?

ಶ್ರೀಶ್ರೀ: ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿವೆ, ಆದರೆ ವಿಚ್ಚೇದನ ಭೂಮಿಯಲ್ಲಿ ಆಗುತ್ತಿವೆ (ನಗು). ತಾಳ್ಮೆಯ ಕೊರತೆ ಇದೆ. ನಮ್ಮ ದೇಶದಲ್ಲಿ ನಾವು ಎಲ್ಲೋ ಒಂದು ಕಡೆ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದೇವೆ. ನಮಗೆ ತಕ್ಷಣ ಎಲ್ಲ ಆಗಬೇಕು. ತಕ್ಷಣ ಫಲಿತಾಂಶ ಬೇಕು. ತಕ್ಷಣ ಬದಲಾವಣೆಗಳಾಗಬೇಕು.

ನಮ್ಮ ಕೆನಡಾದ ಆಡಳಿತ ವ್ಯವಸ್ಥೆಯಲ್ಲಿ ನಮಗೊಬ್ಬ ಅಧ್ಯಕ್ಷದಿದ್ದರು ಬಹಳ ಕಾಲದವೆರೆಗು. ಸುಮಾರು ೧೦-೧೨ ವರ್ಷಗಳವರೆಗೆ. ಅವರು ೮೨ ವರ್ಷದ ಮಹಿಳೆ. ಅವರು ಹೇಳುತ್ತಿದ್ದರು, 'ಗುರುದೇವ್, ಒಬ್ಬರು ಒಂದು ದೋಣಿಯನ್ನು ನಡೆಸಲು ಸಾಧ್ಯವಿಲ್ಲವೆಂದರೆ ಅವರು ಯಾವ ದೋಣಿಯನ್ನೂ ನಡೆಸಲು ಸಾಧ್ಯವಿಲ್ಲ. ನೀವು ದೋಣಿಯನ್ನು ಬದಲಾಯಿಸಿದರೂ ದೋಣಿಯನ್ನು ಓಡಿಸಲು ಕಲಿಯುವುದಿಲ್ಲ'. ಮತ್ತೆ ಅವರು ಹೇಳಿದರು ' ನಾನು ನಿಶ್ಚಯ ಮಾಡಿದ್ದೆ, ಅದರಂತೆ ೪೫ ವರ್ಷದಿಂದ ಒಂದೇ ದೋಣಿಯನ್ನು ಓಡಿಸುತ್ತಿದ್ದೇನೆ!'. ಎಂದು ಅವರ ಗಂಡನನ್ನು ಪರಿಚಯಿಸಿದರು!

ಈ ದಿನಗಳಲ್ಲಿ ಯುವಜನತೆಯು, ದೋಣಿಯನ್ನು ಬದಲಿಸುವುದರಿಂದ ಅದನ್ನು ಚೆನ್ನಾಗಿ ನಡೆಸಬಲ್ಲರೆಂದು ನಂಬಿದ್ದಾರೆ!

ನಿಮಗೆ ದೋಣಿಯನ್ನು ನಡೆಸುವುದು ಹೇಗೆ ಎಂದು ಗೊತ್ತಿದ್ದರೆ ಯಾವ ದೋಣಿಯನ್ನು ಬೇಕಾದರೂ ನಡೆಸಬಲ್ಲಿರಿ. ತುಂಬಾ ಸಲ ನವ ವಿವಾಹಿತರು ಬಂದು ಅವರ ಅತ್ತೆಯ ಬಗ್ಗೆ ದೂರುತ್ತಿರುತ್ತಾರೆ. ನಾನು ಅವರಿಗೆ ಹೇಳುತ್ತಿರುತ್ತೇನೆ, ಪ್ರೀತಿಯಿಂದ ಅವರನ್ನು ಗೆಲ್ಲಿ. ಅವರಿಗೆ ಅಂಥದ್ದೇನು ಬೇಕಾಗಿದೆ? ನೀವು ಏಕೆ ಅವರಿಂದ ದೂರವಾಗಲು ಬಯಸುತ್ತೀರ?

ನಮಗೆ ಸಾಮಾನ್ಯ ಸಂವಹನೆಯು ಗೊತ್ತಿಲ್ಲದಾಗಿದೆ. ನಾನು ಅವರಲ್ಲೊಂದು ಹುಡುಗಿಗೆ ಕೇಳಿದೆ 'ನಿಮ್ಮ ಅಮ್ಮ ನಿಮ್ಮನ್ನು ಟೀಕಿಸುತ್ತಿರಲಿಲ್ಲವೇ?'

ಅವರೆಂದರು, 'ಹೌದು'.

ನೋಡಿ, ನಿಮ್ಮ ಅಮ್ಮ ನಿಮ್ಮ ಅತ್ತೆಗಿಂತ ಟೀಕಿಸುತ್ತಿದ್ದರು. ನಿಮ್ಮ ಅಮ್ಮ ಎಷ್ಟೇ ಟೀಕಿಸಿದರೂ ಅದನ್ನು ಸಹಿಸಿಕೊಂಡಿದ್ದೀರಿ. ಈಗ ಅದು ಗಂಡನ ಅಮ್ಮನಿಂದ ಬಂದರೆ ಅದು ನಿಮ್ಮನ್ನು ಜಾಸ್ತಿ ಚುಚ್ಚುತ್ತದೆ ಹಾಗು ನೀವು ಆ ಮನೆಯಿಂದ ಹೊರಗೆ ಹೋಗಬೇಕು ಎನಿಸುತ್ತದೆ.

ಅವರನ್ನು ನಿಮ್ಮ ಅಮ್ಮನಂತೆಯೇ ನೋಡಿರಿ. ಅವರ ಮಾತುಗಳನ್ನು ನಿಮ್ಮ ಅಮ್ಮನ ಮಾತುಗಳೆಂದೇ  ತಿಳಿಯಿರಿ. ಇದು ಅನೇಕ ಮದುವೆಗಳಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿದೆ.

ನೀವು ಈ ಒಂದು ಸರಳ ಜ್ಞಾನವನ್ನು ತಿಳಿದಿರಬೇಕು. ಸ್ವಲ್ಪ ಧ್ಯಾನವನ್ನು ಮಾಡಿ. ಸರಿ, ನಿಮ್ಮ ಅತ್ತೆಯು ನಿಮ್ಮನ್ನು ನಿಂದಿಸುತ್ತಿದ್ದರೆ, ಅವರ ಪಾಡಿಗೆ ಅವರು ನಿಂದಿಸಲಿ!. ಎಲ್ಲಿ ಆಪ್ತತೆ ಇರುತ್ತದೋ ಅಲ್ಲಿ ಟೀಕೆಯೂ ಇರುತ್ತದೆ!. ನಿಮ್ಮ ಅತ್ತೆಯು ಏನೋ ಒಂದು ಹೇಳಿದರೆ, ಅದು ಪರವಾಗಿಲ್ಲ ಬಿಡಿ. ಅವರು ಏನು ಹೇಳುತ್ತಿದ್ದಾರೊ ಕೇಳಿ. ಅದು ನಿಮ್ಮನ್ನು ನೋಯಿಸಿದರೆ ಕಿವಿಯಲ್ಲಿ ಹತ್ತಿಯನ್ನಿರಿಸಿ, ಕೇಳುತ್ತಿರಿ, ಮುಗುಳ್ನಗುತ್ತಿರಿ.

ನೀವು ಎಂಥಹವರನ್ನೂ ಪ್ರೀತಿಯಿಂದ ಗೆಲ್ಲಬಹುದು. ಮನೆಯ ಹಿರಿಯರನ್ನು ಗೆಲ್ಲುವಲ್ಲಿ ಅಂಥ  ಕಷ್ಟವೇನು? ಸ್ವಲ್ಪ ತಾಳ್ಮೆ, ಸಮಾಧಾನ ಅಗತ್ಯ. ನೀವು ತಾಳ್ಮೆ ಕಳೆದುಕೊಂಡರೆ ಈ ಸಮಾಜದಲ್ಲಿ ಯಾವ ವಿಷಯದಲ್ಲೂ ಗೆಲ್ಲಲು ಸಾಧ್ಯವಿಲ್ಲ. ನೀವು ನನ್ನನ್ನು ತಾಳ್ಮೆ, ಸಮಾಧಾನವನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಎಂದು ಕೇಳಿದರೆ, ನಾನು ಹೇಳುವೆ ಇಲ್ಲಿ ಏನನ್ನು ಮಾಡುತ್ತಿರುವಿರೊ ಅದನ್ನು ಮುಂದುವರೆಸಿ. ಎಷ್ಟು ಜನಕ್ಕೆ ಅನ್ನಿಸುತ್ತಿದೆ ನೀವು ಬದಲಾವಣೆ ಹೊಂದಿದ್ದೀರ, ತಾಳ್ಮೆ ಜಾಸ್ತಿಯಾಗಿದೆ ಎಂದು? ಎಲ್ಲಿ ನೋಡೋಣ. ಒಳ್ಳೆಯದು.