ಗುರುವಾರ, ಆಗಸ್ಟ್ 8, 2013

ಮಾಮೇಕಂ ಶರಣಂ ವ್ರಜ

ಬೆಂಗಳೂರು, ಭಾರತ
ಅಗಸ್ಟ್ ೮, ೨೦೧೩

ಪ್ರಶ್ನೆ: ಗುರುದೇವ, ಬೈಬಲ್‌ನಲ್ಲಿ ಯೇಸು ಕ್ರಿಸ್ತನು, "ನಾನು ಏಕಮಾತ್ರ ದಾರಿಯಾಗಿರುವೆನು" ಎಂದು ಹೇಳುತ್ತಾನೆ. ಖುರಾನ್ ತಾನು ಏಕಮಾತ್ರ ಮಾರ್ಗವೆಂಬುದಾಗಿ ಹೇಳುತ್ತದೆ ಮತ್ತು ಗೀತೆಯು ಕೂಡಾ, "ಮಮ ಏಕಂ ಶರಣಂ ವ್ರಜ" ಎಂದು ಹೇಳುತ್ತದೆ. ಎಲ್ಲಾ ಧಾರ್ಮಿಕ ಸಂಘರ್ಷಗಳಿಗೆ ಇದು ಕಾರಣವೇ? ಇದನ್ನು ನಾವು ಹೇಗೆ ಬದಲಾಯಿಸಬಹುದು?

ಶ್ರೀ ಶ್ರೀ ರವಿ ಶಂಕರ್: ಈ ಜ್ಞಾನವನ್ನು ಆ ಸಮಯದಲ್ಲಿದ್ದ ಜನರಿಗೆ, ತಮ್ಮ ಮನಸ್ಸನ್ನು ವರ್ತಮಾನದ ಕ್ಷಣದಲ್ಲಿ ಗಮನವಿರಿಸುವಲ್ಲಿ ಸಹಾಯ ಮಾಡುವುದಕ್ಕಾಗಿ ನೀಡಲಾಯಿತು. ಈಗ ನೀವು ನಾನು ಹೇಳುವುದನ್ನು ಕೇಳಿಸುತ್ತಿರುವುದಾದರೆ ನಾನು ನಿಮಗೆ, "ಇದು ಸತ್ಯ, ಸುಮ್ಮನೇ ಇಲ್ಲಿರಿ, ಈಗ" ಎಂದು ಹೇಳುವೆನು! ಇದು ಯಾಕೆಂದರೆ ಮನಸ್ಸಿಗೆ ಭೂತಕಾಲವನ್ನು ವೈಭವೀಕರಿಸುವ ಅಥವಾ ಭವಿಷ್ಯಕ್ಕಾಗಿ ಕಾಯುವ ಮತ್ತು ವರ್ತಮಾನವನ್ನು; ’ಈಗ’ವನ್ನು ತ್ಯಜಿಸುವ ಒಂದು ಪ್ರವೃತ್ತಿಯಿದೆ.

ಕೃಷ್ಣ ಪರಮಾತ್ಮನು ಹೀಗೆಂದು ಹೇಳಿದನು, ’ಮಮ ಏಕಂ ಶರಣಂ ವ್ರಜ’, ಅಂದರೆ, ’ನನ್ನ ಬಳಿಗೆ ಮಾತ್ರ ಬಾ’. ತನ್ನ ಅತ್ಯಂತ ಪ್ರೀತಿಪಾತ್ರ ಶಿಷ್ಯನಾದ ಅರ್ಜುನನ ಮನಸ್ಸು, ವರ್ತಮಾನದ ಮೌಲ್ಯವನ್ನು ತಿಳಿಯುವುದಕ್ಕೋಸ್ಕರ ಸಂಪೂರ್ಣವಾಗಿ ಅಲ್ಲಿರುವಂತೆ ಮಾಡಲು ಇದನ್ನು ಅವನು ಅರ್ಜುನನಿಗೆ ಹೇಳಿದನು.

ಯಾವಾಗೆಲ್ಲಾ ಇದನ್ನು ಹೇಳಲಾಯಿತೋ (ನಾನು ಏಕಮಾತ್ರ ಮಾರ್ಗವಾಗಿರುವೆನು), ಅದನ್ನು ಉನ್ನತ ಚೇತನದಿಂದ ಹೇಳಲಾಯಿತು, ಒಬ್ಬನನ್ನು ಒಬ್ಬ ಧರ್ಮಾಂಧನನ್ನಾಗಿ ಮಾಡಲಲ್ಲ. ಒಬ್ಬನು ಸತ್ಯವನ್ನು ಅರಿಯುವಂತೆ ಮಾಡಲು ಇದನ್ನು ಹೇಳಲಾಯಿತು, ಮತ್ತು ಸತ್ಯವು ಒಂದೇ ಒಂದಾಗಿದೆ ಮತ್ತು ಅದಕ್ಕಾಗಿ, ಅದನ್ನು (ಒಂದು ಸತ್ಯ) ಒತ್ತಿಹೇಳುವುದಕ್ಕಾಗಿ ’ಇದು ಏಕಮಾತ್ರ ಮಾರ್ಗವಾಗಿದೆ’ ಎಂದು ಅವರು ಹೇಳಿದರು. ಇಲ್ಲದಿದ್ದರೆ ಮನಸ್ಸು ವರ್ತಮಾನವನ್ನು ತಿರಸ್ಕರಿಸುತ್ತದೆ.

ಇದೇ ರೀತಿ ಯೇಸು ಕ್ರಿಸ್ತನೊಂದಿಗೂ ಆಯಿತು. ಆ ಕಾಲದಲ್ಲಿ ಜನರು, ಭವಿಷ್ಯದಲ್ಲಿ ಅಥವಾ ಭೂತಕಾಲದಲ್ಲಿನ ಯಾರೋ ಒಬ್ಬರ ಬಗ್ಗೆ ಮಾತ್ರ ಯೋಚಿಸುತ್ತಿದ್ದರು. ಅದಕ್ಕಾಗಿಯೇ ಅವನು, "ಈಗಲೇ, ಇಲ್ಲಿಯೇ, ನಾನು ಏಕಮಾತ್ರ ಮಾರ್ಗವಾಗಿರುವೆನು" ಎಂದು ಹೇಳಿದನು. ಅವನು ಇದನ್ನು ’ನಾನು’ ಚೇತನದಿಂದ ಹೇಳಿದನು. ಬೈಬಲನ್ನು ಕೂಡಾ ಯೇಸುಕ್ರಿಸ್ತನು ತನ್ನ ಶರೀರವನ್ನು ಬಿಟ್ಟು ೭೦ ವರ್ಷಗಳ ಬಳಿಕ ಬರೆಯಲಾಯಿತು. ಅವನು ಮಾತುಗಳು ಎಷ್ಟು ಅರ್ಥೈಸಲ್ಪಟ್ಟಿದ್ದಿರಬಹುದು ಎಂಬುದಾಗಿ ಸುಮ್ಮನೇ ಕಲ್ಪಿಸಿಕೊಳ್ಳಿ; ಅಥವಾ ಇದೇ ಕೆಲವು ಮಾತುಗಳು ಆ ಕಾಲದಲ್ಲಿ ಹೇಗೆ ಅನುವಾದಿಸಲ್ಪಟ್ಟಿದ್ದಿರಬಹುದು ಎಂಬುದು ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ.

ಯೇಸುಕ್ರಿಸ್ತನು, "ನಾನು ದೇವರ ಮಗನಾಗಿರುವೆನು" ಎಂದು ಹೇಳಿದಾಗ, ಚರ್ಚ್ ಅದನ್ನು, ಯೇಸುವು ದೇವರ ಒಬ್ಬನೇ ಮಗನಾಗಿರುವನು ಎಂಬುದಾಗಿ ಅರ್ಥೈಸಿಕೊಂಡಿತು.

ಯೇಸುವು ಹೇಳಿದ್ದೇನೆಂದರೆ, "ನಾನು ಒಬ್ಬನೇ ತಂದೆಯ ಮಗನಾಗಿರುವೆನು" ಎಂದು.

ಎಲ್ಲರಿಗೂ ಇರುವುದು ಒಬ್ಬನೇ ಒಬ್ಬ ತಂದೆ ಮತ್ತು ಅವನು, "ನಾನು ಒಬ್ಬನೇ ಒಬ್ಬ ತಂದೆಯ ಮಗನಾಗಿರುವೆನು" ಎಂದು ಹೇಳಿದನು. ಅಲ್ಲದಿದ್ದರೆ ಅವನು, "ನಾವು ಸ್ವರ್ಗದಲ್ಲಿರುವ ನಮ್ಮ ತಂದೆಯನ್ನು ಪ್ರಾರ್ಥಿಸೋಣ" ಎಂದು ಯಾಕೆ ಹೇಳುತ್ತಿದ್ದನು?
ಅವನು, "ನಮ್ಮ ತಂದೆ" ಎಂದು ಹೇಳುತ್ತಾನೆ, ಅಂದರೆ ಎಲ್ಲರ ತಂದೆಯೆಂದು. ಹಾಗಿದ್ದರೆ ಅವನು ದೇವರ ಒಬ್ಬನೇ ಮಗ ಹೇಗಾಗುವನು? ಹಾಗಾದರೆ ಬೇರೆ ಎಲ್ಲರ ಬಗ್ಗೆಯೇನು? ಅವನ ಮೊದಲು ಹುಟ್ಟಿದ ಇತರ ಜನರೇನು; ಅವರು ದೇವರ ಮಕ್ಕಳಲ್ಲವೇ?

ನಾವೆಲ್ಲರೂ, "ಸ್ವರ್ಗದಲ್ಲಿರುವ ನಮ್ಮ ತಂದೆ" ಎಂದು ಪ್ರಾಥಿಸಲು ಹೇಗೆ ಸಾಧ್ಯ? ಹಾಗಾದರೆ ನಾವು, "ಯೇಸುವಿನ ತಂದೆಯೇ, ನೀವು ನನಗೆ ಸಹಾಯ ಮಾಡಿ. ನೀವು ನನ್ನ ತಂದೆಯಲ್ಲ" ಎಂಬುದಾಗಿ ಮಾತ್ರ ಪ್ರಾರ್ಥಿಸಬೇಕು.

ಇದು ತಪ್ಪಾದ ಅರ್ಥೈಸುವಿಕೆಯ ಒಂದು ಫಲಿತಾಂಶವಾಗಿದೆ. ಯೇಸುವು, "ಸ್ವರ್ಗದಲ್ಲಿರುವ ನಮ್ಮ ತಂದೆ" ಎಂದು ಹೇಳಿದಾಗ, ಅವನರ್ಥವೇನಾಗಿತ್ತೆಂದರೆ, ಅವನು ಎಲ್ಲರ ತಂದೆಯಾಗಿರುವನೆಂದು.

ಅವನು ಹೀಗೆಂದು ಹೇಳಿದನು, "ಒಬ್ಬನೇ ತಂದೆಯ ಮಗ", ಆದರೆ ಇದು, "ತಂದೆಯ ಒಬ್ಬನೇ ಮಗ" ಎಂಬುದಾಗಿ ತಿರುಚಲ್ಪಟ್ಟಿತು.

ಕೇವಲ ಒಂದು ಶಬ್ದವನ್ನು ಇಲ್ಲಿಂದ ಅಲ್ಲಿಗೆ ಸ್ಥಳಾಂತರಿಸುವುದು ಒಂದು ದೊಡ್ಡ ವ್ಯತ್ಯಾಸವನ್ನು ಮಾಡಬಲ್ಲದು. ಧರ್ಮಗ್ರಂಥಗಳನ್ನು ಅರ್ಥೈಸಿಕೊಳ್ಳುವಾಗ, ಅದು ಯಾವಾಗ, ಎಲ್ಲಿ ಮತ್ತು ಹೇಗೆ ಹೇಳಲಾಯಿತು, ಯಾರಿಗೆ ಅದನ್ನು ಹೇಳಲಾಯಿತು ಮತ್ತು ಯಾವ ಕಾರಣಕ್ಕಾಗಿ ಎಂಬುದನ್ನು ಒಬ್ಬನು ಯಾವತ್ತೂ ಗಣನೆಗೆ ತೆಗೆದುಕೊಳ್ಳಬೇಕಾದುದು ಇದೇ ಕಾರಣಕ್ಕಾಗಿ.

ಸತ್ಯವು ಕಾಲಾತೀತವೂ ಸಾರ್ವತ್ರಿಕವೂ ಆಗಿದ್ದರೂ ಕೂಡಾ ಜ್ಞಾನವು ಯಾವತ್ತೂ ಸಾಂದರ್ಭಿಕವಾಗಿರುತ್ತದೆ. ಆದರೆ ಜ್ಞಾನಕ್ಕೆ ಯಾವತ್ತೂ ಏನಾದರೂ ಪ್ರಸಂಗವಿರುತ್ತದೆ.

ಯೇಸುವು ಒಮ್ಮೆ ಹೀಗೆಂದು ಹೇಳಿದನು, "ನಾನು ತಂದೆಯನ್ನು ಮಗನ ವಿರುದ್ಧ ಹಾಕಲು ಮತ್ತು ತಾಯಿಯನ್ನು ಮಗಳ ವಿರುದ್ಧ ಹಾಕಲು ಬಂದಿರುವೆನು. ನಾನು ಬೆಂಕಿ ಹಾಕಲು ಬಂದಿರುವೆನು ಮತ್ತು ಶಾಂತಿಯನ್ನು ಮಾಡಲಲ್ಲ."

ನೀವಿದನ್ನು ಅಪ್ರಾಸಂಗಿಕವಾಗಿ ತೆಗೆದುಕೊಂಡು, "ಯೇಸುವು ಏನು ಹೇಳಿದನೆಂದು ನೋಡು" ಎಂದು ಹೇಳಿದರೆ, ಆಗ ಅದು ತಪ್ಪಾಗುವುದು. ಅವನದನ್ನು ಎಲ್ಲಿ ಹೇಳಿದನು, ಅವನು ಏನು ಹೇಳಿದನು ಮತ್ತು ಅವನದನ್ನು ಹೇಗೆ ಹೇಳಿದನು ಎಂಬುದನ್ನು ನೀವು ನೋಡಬೇಕು.

ಯೇಸುವು ಒಂದು ಕ್ರಾಂತಿಯನ್ನು ತರಲು ಬಂದನು. ಕೃಷ್ಣ ಪರಮಾತ್ಮನು ಅದನ್ನೇ ಮಾಡಲು ಬಂದನು; ಒಂದು ದೊಡ್ಡ ಕ್ರಾಂತಿಯನ್ನು ತಂದು ಜನರ ಮನೋಭಾವವನ್ನು ಬದಲಾಯಿಸಲು. ಮೊಹಮ್ಮದ್ ಪೈಗಂಬರನು ಕೂಡಾ ಅದನ್ನೇ ಮಾಡಿದನು. ಜನರು ಶಾಸ್ತ್ರಗಳಲ್ಲಿ ಎಷ್ಟೊಂದು ಕಳೆದುಹೋಗಿದ್ದರೆಂದರೆ ಅವರು ಒಳಕ್ಕೆ ಆಳವಾಗಿ ಹೋಗಿ ಮೌನವಾಗಿ ಪ್ರಾರ್ಥಿಸುತ್ತಲೇ ಇರಲಿಲ್ಲ. ಅದಕ್ಕಾಗಿ ಅವನು, "ಇದು ಸಾಕು. ಸದಾಕಾಲವೂ ನೀವು ಕೇವಲ ಒಂದು ಮೂರ್ತಿಯಿಂದ ಇನ್ನೊಂದಕ್ಕೆ ಹೋಗುತ್ತಿರುವಿರಿ. ನೀವು ನಿಮ್ಮ ಕಣ್ಣುಗಳನ್ನು ಮುಚ್ಚಿ ಒಳಕ್ಕೆ ಹೋಗಿ ಧ್ಯಾನ ಮಾಡುತ್ತಿಲ್ಲ. ಸಾಕು, ಈಗ ನಿಮ್ಮ ಕಣ್ಣುಗಳನ್ನು ಮುಚ್ಚಿ ಧ್ಯಾನ ಮಾಡಿ" ಎಂದು ಹೇಳಿದನು!

ಶಾಸ್ತ್ರಗಳು ಒಂದು ವ್ಯಾಪಾರವಾಗಿಬಿಟ್ಟಿದ್ದವು. ಜನರು ಭಯದಿಂದಾಗಿ ಮೂರ್ತಿಗಳನ್ನು ಆರಾಧಿಸಲು ಹೋದರು. ಅದಕ್ಕಾಗಿ ಅವನು, "ಕೇವಲ ಒಳಮುಖವಾಗಿ ಹೋಗಿ ಪ್ರಾರ್ಥಿಸಿ" ಎಂದು ಹೇಳಿದನು.

ನಿರ್ಗುಣ್ ನಿರಾಕಾರ್ ಪರಬ್ರಹ್ಮ, ನಿರಾಕಾರನಾದ, ಪ್ರಕಟವಾಗಿಲ್ಲದ ದೇವರನ್ನು ಪ್ರಾರ್ಥಿಸಿ.
ಇದು ವೇದಾಂತದ ಸಾರವಾಗಿದೆ. ಅದು, ಆಕಾರದಿಂದ ನಿರಾಕಾರದೆಡೆಗೆ ಹೋಗಿ ಎಂದು ಹೇಳುತ್ತದೆ. ಮತ್ತು ಹೇಗೆ? ಧ್ಯಾನದ ಮೂಲಕ.

ಮೂರು ಉಪಾಯಗಳಿವೆ. ಮೊದಲನೆಯದು ಅಣ್ವ ಉಪಾಯ, ಪ್ರಾರ್ಥನೆ ಮತ್ತು ಆರಾಧನೆಯ ಮೂಲಕ. ಎರಡನೆಯದು ಶಕ್ತ ಉಪಾಯ, ಧ್ಯಾನದ ಮೂಲಕ. ಮತ್ತು ಮೂರನೆಯದು, ಶಂಬವ ಉಪಾಯ, ಅರಿವಿನ ಮೂಲಕ ಅಥವಾ ದೇವರನ್ನು ಅಪ್ರಯತ್ನವಾಗಿ ನೆನೆಯುವುದರ ಮೂಲಕ (ಸ್ಮರಣೆ). ಯಾವುದೇ ಆಕಾರವೂ ಅಗತ್ಯವಿಲ್ಲವೆಂದು ಮೊಹಮ್ಮದರು ಹೇಳಿದ್ದರೂ ಕೂಡಾ, ಜನರಿಗೆ ಯಾವುದಾದರೂ ಚಿಹ್ನೆ ಬೇಕಾಗುತ್ತದೆಯೆಂಬುದು ಅವರಿಗೆ ತಿಳಿದಿತ್ತು ಮತ್ತು ಅದಕ್ಕಾಗಿ ಅವರು ಕಾಬಾ ಕಲ್ಲನ್ನು ಇಟ್ಟರು. ಒಂದು ಲಿಂಗದಂತೆಯೇ, ಒಬ್ಬರು ಸುತ್ತಲೂ ಹೋಗಲು ಮತ್ತು ನಮಾಝ್ ಮಾಡಲು ಸಾಧ್ಯವಾಗುವಂತೆ ಒಂದು ಕಾಬಾ ಕಲ್ಲನ್ನು ಇಡಲಾಯಿತು. ಹಾಗಾಗಿ, ಮನಸ್ಸನ್ನು ಕೇಂದ್ರೀಕೃತವಾಗುವಂತೆ ಮಾಡಲು ಒಂದು ಚಿಹ್ನೆ ಆವಶ್ಯಕವಾಗಿದೆ.

ವೈದಿಕ ಕಾಲದಲ್ಲಿ ಯಾವುದೇ ಮೂರ್ತಿಗಳಿರಲಿಲ್ಲ; ಆರ್ಯ ಸಮಾಜವು ಮಂತ್ರಗಳೊಂದಿಗೆ ಹವನಗಳನ್ನು ಮಾಡುವುದರಲ್ಲಿ ತೊಡಗಿತ್ತು. ಆದರೆ ಎಲ್ಲರಿಗೂ ಈ ತತ್ವಜ್ಞಾನವು ಅರ್ಥವಾಗುತ್ತಿರಲಿಲ್ಲ. ಆದರೆ ಯಾರಿಗೆ ಬೇಕಾದರೂ ಒಂದು ಆಕಾರ ಅಥವಾ ಮೂರ್ತಿಯೊಂದಿಗೆ ಸಂಬಂಧ ಕಲ್ಪಿಸಿಕೊಳ್ಳಲು ಸಾಧ್ಯವಿದೆ.

ನೋಡಿ, ಯಾರಾದರೂ ಮಹಾನ್ ವ್ಯಕ್ತಿಯ ಜನ್ಮದಿನವಾಗಿದ್ದರೆ ಜನರು ಹೋಗಿ ಅವರ ಮೂರ್ತಿಗಳ ಮೇಲೆ ಹೂವಿನ ಹಾರಗಳನ್ನು ಹಾಕುತ್ತಾರೆ. ಗಾಂಧಿ ಜಯಂತಿಯಂದು, ಜನರು ಗಾಂಧಿಯ ವಿಗ್ರಹಗಳ ಬಳಿಗೆ ಹೋಗಿ, ಒಂದು ಏಣಿಯನ್ನಿಟ್ಟು ಮೇಲಕ್ಕೆ ಹತ್ತಿ ವಿಗ್ರಹಕ್ಕೆ ಹೂವಿನ ಹಾರವನ್ನು ಹಾಕುತ್ತಾರೆ.

ಈಗಿನ ಯುಗದಲ್ಲಿ ಒಂದು ಚಿತ್ರವಿಲ್ಲದೆ ಒಬ್ಬರಿಗೆ ವಿದಾಯ ಕೋರುವುದು ಅಸಾಧ್ಯವಾಗಿದೆ. ಒಂದು ಛಾಯಾಚಿತ್ರವು ಬೇಕಾಗುತ್ತದೆ. ಎಲ್ಲಾ ಧರ್ಮಗಳಲ್ಲಿ ಒಂದು ಚಿಹ್ನೆಯು ಅಷ್ಟೊಂದು ಆವಶ್ಯಕವಾದುದು ಹಾಗೆಯೇ. ಅದು ಅನಿವಾರ್ಯವಾದುದು.

ನಮ್ಮ ಋಷಿಗಳಿಗೆ ಇದು ತಿಳಿದಿತ್ತು ಮತ್ತು ಹಾಗಾಗಿ ಅವರು, "ಸರಿ, ನೀವು ಮೂರ್ತಿಗಳು, ಚಿಹ್ನೆಗಳು ಮತ್ತು ಆಕಾರಗಳಿಂದ ಆರಂಭಿಸಬಹುದು. ಆದರೆ ಒಂದು ಅಲ್ಪಾವಧಿಯವರೆಗೆ ಮಾತ್ರ, ಹಾಗೂ ನಂತರ ಹೋಗಿ ವಿಸರ್ಜನೆ ಮಾಡಿ" ಎಂದು ಹೇಳಿದರು.

ಅದು ಸಂಪ್ರದಾಯ, ಹತ್ತು ದಿನಗಳವರೆಗೆ ನೀವು ಗಣಪತಿ ಪೂಜೆಯನ್ನು ಮಾಡುತ್ತೀರಿ ಮತ್ತು ನಂತರ ನೀವು ವಿಗ್ರಹವನ್ನು ನೀರಿನಲ್ಲಿ ಮುಳುಗಿಸುತ್ತೀರಿ.

ಅದಕ್ಕಾಗಿಯೇ ಎಲ್ಲೆಡೆಯೂ ದೇವಸ್ಥಾನಗಳನ್ನು ನಿರ್ಮಿಸಲಾಯಿತು. ಪ್ರತಿದಿನವೂ ದೇವಸ್ಥಾನಗಳಿಗೆ ಹೋಗುವುದು ಅಗತ್ಯವಾಗಿರಲಿಲ್ಲ. ನಿಮಗೊಂದು ಸಂಕೇತದ ಅಗತ್ಯ ಅನುಭವಾದಾಗ ಮಾತ್ರ ನೀವು ಹೋಗಿ ಅಲ್ಲಿ ಕುಳಿತುಕೊಂಡು ಪ್ರಾರ್ಥಿಸಬಹುದು.

ಮತ್ತು ದೇವಸ್ಥಾನಗಳನ್ನು ಮಂತ್ರ ಶಕ್ತಿಯಿಂದ ಮಾಡಲಾಗುತ್ತದೆ, ಕೇವಲ ವಿಗ್ರಹಗಳಿಂದಲ್ಲ. ಪ್ರಾಣ ಅಥವಾ ಜೀವ ಶಕ್ತಿ ಚೈತನ್ಯವನ್ನು ಆ ಸ್ಥಳದಲ್ಲಿ (ದೇವಸ್ಥಾನ) ಪ್ರೇರೇಪಿಸಲಾಗುತ್ತದೆ. ದೇವಸ್ಥಾನಗಳು ಶಕ್ತಿ ಕೇಂದ್ರಗಳಾದುದು ಹಾಗೆ.

ಪ್ರಾಚೀನ ಕಾಲದಲ್ಲಿ ಜನರು ಬಹಳ ಬುದ್ಧಿವಂತರಾಗಿದ್ದರು. ಅವರು ಮಾನವ ಸ್ವಭಾವವನ್ನು ಅರ್ಥೈಸಿಕೊಂಡಿದ್ದರು ಮತ್ತು ಮಾನವ ಚೇತನದ ಬಗ್ಗೆ ತಿಳಿದಿದ್ದರು.

ಪ್ರಶ್ನೆ: ಜ್ಞಾನೋದಯದ ಲಕ್ಷಣಗಳೇನು? ಪ್ರತಿಯೊಬ್ಬ ಜ್ಞಾನೋದಯಗೊಂಡ ವ್ಯಕ್ತಿಯೂ ಒಬ್ಬ ಗುರುವಾಗುವರೇ? ಕೇವಲ ಋಷಿಗಳು, ಸಾಧುಗಳು ಮತ್ತು ಸ್ವಾಮಿಗಳು ಮಾತ್ರ ಜ್ಞಾನೋದಯ ಹೊಂದಿದವರೇ?

ಶ್ರೀ ಶ್ರೀ ರವಿ ಶಂಕರ್: ಇದಕ್ಕೆ ನೀನು ಉತ್ತರವನ್ನು ಹುಡುಕು. ಜ್ಞಾನೋದಯವೆಂದರೆ ಏನೆಂದು ನಿನಗನ್ನಿಸುತ್ತದೆ?

ಮೊದಲನೆಯ ಹೆಜ್ಜೆಯೆಂದರೆ, ನೀನು ಬಹಳ ಅದೃಷ್ಟಶಾಲಿಯೆಂದು ನಿನಗನ್ನಿಸುತ್ತದೆ! ಮತ್ತು ನಂತರ ನೀನು ಬಹಳ ಅದೃಷ್ಟಶಾಲಿಯೆಂದು ನಿನಗನ್ನಿಸುವುದು ನಿಲ್ಲುತ್ತದೆ; ಅದು ಜ್ಞಾನೋದಯ. ನಾನು ಕೆಲವು ದಿನಗಳ ಮೊದಲು ಹೇಳಿದ ಒಂದು ಕಥೆಯನ್ನು ನೀನು ಕೇಳಿದ್ದೀಯಾ?

ಒಮ್ಮೆ, ಒಬ್ಬ ಶಿಷ್ಯನು ಒಬ್ಬ ಗುರುವಿನ ಬಳಿಗೆ ಬಂದು, "ನಾನು ಪರೀಕ್ಷೆಯಲ್ಲಿ ಫೇಲಾದೆ" ಎಂದು ಹೇಳಿದನು.

ಗುರುವು, "ಓ, ನೀನು ಬಹಳ ಅದೃಷ್ಟಶಾಲಿ" ಎಂದು ಹೇಳಿದರು.  

ನಂತರ ಇನ್ನೊಬ್ಬ ವ್ಯಕ್ತಿಯು ಗುರುವಿನ ಬಳಿಗೆ ಬಂದು, "ನಾನು ನನ್ನ ನೌಕರಿ ಕಳೆದುಕೊಂಡೆ" ಎಂದು ಹೇಳಿದನು.

ಗುರುವು, "ಓ, ನೀನು ಬಹಳ ಅದೃಷ್ಟಶಾಲಿ" ಎಂದು ಉತ್ತರಿಸಿದರು.

ಮೂರನೆಯ ವ್ಯಕ್ತಿಯೊಬ್ಬನು ಬಂದು, "ನನ್ನ ಪತ್ನಿಯು ನನ್ನನ್ನು ಬಿಟ್ಟುಹೋದಳು" ಎಂದು ಹೇಳಿದನು.

ಗುರುವು, "ಓ, ನೀನು ಬಹಳ ಅದೃಷ್ಟಶಾಲಿ" ಎಂದು ಉತ್ತರಿಸಿದರು.

ಹೀಗೆ, ಯಾರಾದರೂ ಬಂದು ಏನನ್ನಾದರೂ ಹೇಳಿದಾಗ, ಗುರುವು, "ಓ, ನೀನು ಬಹಳ ಅದೃಷ್ಟಶಾಲಿ" ಎಂದು ಹೇಳುತ್ತಿದ್ದರು; ಮತ್ತು ಅದು ಹೇಗೋ ಅವರೆಲ್ಲರಿಗೂ ಸಂದೇಶ ಸಿಗುತ್ತಿತ್ತು.

ಒಬ್ಬ ನೋಡುಗನಿಗೆ ಇದು ಬಹಳ ಗೊಂದಲಮಯವಾಗಿ ಕಂಡಿತು. ಅವನು ಗುರುವಿನಲ್ಲಿ, "ಆ ಹುಡುಗನು ಅವನ ಪರೀಕ್ಷೆಯಲ್ಲಿ ಫೇಲಾದಾಗ, ಅವನು ಬಹಳ ಅದೃಷ್ಟಶಾಲಿಯೆಂದು ನೀವು ಅವನಲ್ಲಿ ಹೇಳಲು ಹೇಗೆ ಸಾಧ್ಯ?" ಎಂದು ಕೇಳಿದನು.

ಗುರುವು ಹೀಗೆಂದು ವಿವರಿಸಿದರು, "ಹೌದು, ಒಂದು ಪರೀಕ್ಷೆಯಲ್ಲಿ ಫೇಲಾದ ವ್ಯಕ್ತಿಯೊಬ್ಬನು ಅದೇ ವಿಷಯವನ್ನು ಮತ್ತೆ ಮತ್ತೆ ಅಧ್ಯಯನ ಮಾಡುವನು, ಹಾಗೂ ಅವನು ಆ ವಿಷಯದಲ್ಲಿ ಎಷ್ಟೊಂದು ಪರಿಪೂರ್ಣನಾಗುವನೆಂದರೆ ಅವನು ನಿಪುಣನಾಗುವನು."

ಒಮ್ಮೆ ಒಬ್ಬರು ಸ್ವಾಮೀಜಿ ಇಲ್ಲಿಗೆ ಬಂದಿದ್ದರು ಮತ್ತು ಅವರೊಂದು ಬಹಳ ಆಸಕ್ತಿಕರ ವಿಷಯವನ್ನು ಹೇಳಿದರು. ೧೯೪೨ರಲ್ಲಿ ಬೆಂಗಳೂರಿನಲ್ಲಿ ಒಬ್ಬರೇ ಒಬ್ಬರು ಶಸ್ತ್ರಚಿಕಿತ್ಸಾ ವೈದ್ಯರಿದ್ದರೆಂದೂ, ಅವರು ತಮ್ಮ ಎಮ್.ಬಿ.ಬಿ.ಎಸ್ ಪರೀಕ್ಷೆಯಲ್ಲಿ ಏಳು ಸಲ ಫೇಲಾಗಿದ್ದರೆಂದೂ ಅವರು ಹೇಳಿದರು!

ಆ ದಿನಗಳಲ್ಲಿ, ಜನರಿಗೆ ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆಯಾದಾಗೆಲ್ಲಾ, ವೈದ್ಯರು ಒಂದು ನಿರ್ದಿಷ್ಟ ರಕ್ತನಾಳವನ್ನು ಕತ್ತರಿಸುತ್ತಿದ್ದರು. ಇದರಿಂದಾಗಿ ರೋಗಿಗಳಲ್ಲಿ ಕೆಲವರು ಸಾಯುತ್ತಿದ್ದರು. ಅವರು ಯಾವ ರಕ್ತನಾಳವನ್ನು ಕತ್ತರಿಸುತ್ತಿದ್ದರೆಂಬುದು ಅವರಿಗೆ ತಿಳಿದಿರಲಿಲ್ಲ. ಹೀಗೆ ಈ ಸಜ್ಜನರು (ಏಳು ಸಲ ಫೇಲಾದವರು) ಅದನ್ನು ಕಂಡುಹಿಡಿದರು ಮತ್ತು ಬಹಳ ಪ್ರಸಿದ್ದರೂ, ಬಹಳ ಗೌರವಾನ್ವಿತರೂ ಆದರು. ಆ ನಂತರದಲ್ಲಿ ಅವರೊಂದು ಅಂತರರಾಷ್ಟ್ರೀಯ ಗೌರವವನ್ನು ಕೂಡಾ ಪಡೆದರು. ಆದರೆ ಅವರು ಎಮ್.ಬಿ.ಬಿ.ಎಸ್.ನಲ್ಲಿ ಏಳು ಸಲ ಫೇಲಾಗಿದ್ದರು!

ಆದುದರಿಂದ ಒಬ್ಬರು ಒಂದು ಪರೀಕ್ಷೆಯಲ್ಲಿ ಫೇಲಾಗಿದ್ದರೆ, ಅವರು ಹೆಚ್ಚು ಓದುತ್ತಾರೆ. ಅದಕ್ಕಾಗಿಯೇ ಗುರುವು, ಫೇಲಾದ ಜನರು, ಹಾಗೆಂದು ಎಲ್ಲರೂ ಅಲ್ಲ; ಫೇಲಾಗುವವರಲ್ಲಿ ಕೆಲವರು ಬಹಳ ಅದೃಷ್ಟಶಾಲಿಗಳಾಗಬಲ್ಲರು ಎಂದು ಹೇಳಿದರು, ಯಾಕೆಂದರೆ ಅವರು ಅದೇ ವಿಷಯವನ್ನು ಮತ್ತೆ ಮತ್ತೆ ಓದಿ ಬಹಳ ಪರಿಪೂರ್ಣರಾಗಬಲ್ಲರು.

ಯಾರ ಹೆಂಡತಿಯು ಅವನನ್ನು ಬಿಟ್ಟು ಓಡಿ ಹೋಗಿದ್ದಳೋ ಅವನಿಗೆ ಗುರುವು, "ನೀನು ಯಾವ ತಪ್ಪುಗಳನ್ನು ಮಾಡಿದೆಯೆಂಬುದು ಈಗ ನಿನಗೆ ತಿಳಿಯಿತು. ಇಲ್ಲಿಯತನಕ ನೀನು ನಿನ್ನದೇ ವಿಷಯದಲ್ಲಿ ಬಹಳವಾಗಿ ಮುಳುಗಿದ್ದೆ. ಒಬ್ಬಳು ಮಹಿಳೆಯೊಂದಿಗೆ ಹೇಗೆ ವರ್ತಿಸಬೇಕೆಂಬುದು ಮತ್ತು ಯಾವ ತಪ್ಪುಗಳನ್ನು ನೀನು ಮಾಡಬಾರದೆಂಬುದು ಈಗ ನಿನಗೆ ತಿಳಿಯಿತು" ಎಂದು ಹೇಳಿದರು.

ತನ್ನ ನೌಕರಿ ಕಳೆದುಕೊಂಡ ವ್ಯಕ್ತಿಗೆ ಗುರುವು, "ಹಗಲಿರುಳು ನೀನು ನಿನ್ನ ಕೆಲಸದಲ್ಲಿ ಮುಳುಗಿದ್ದೆ. ನಿನ್ನ ಬಗ್ಗೆ ಅವಲೋಕಿಸಲು; ’ಜೀವನವೆಂದರೇನು? ನಾನು ಯಾರು? ನನಗೇನು ಬೇಕು?’ ಎಂಬಂತಹ ಪ್ರಶ್ನೆಗಳನ್ನು ನಿನ್ನಲ್ಲಿಯೇ ಕೇಳಿಕೊಳ್ಳಲು ಕೂಡಾ ನಿನಗೆ ಸಮಯವಿರಲಿಲ್ಲ. ಈಗ ನಿನಗೆ ಅದಕ್ಕೆ ಸಮಯವಿದೆ.

ಕೊನೆಯದಾಗಿ, ಇನ್ನೊಬ್ಬ ಸಜ್ಜನನು ಬಂದು ಗುರುವಿನೊಡನೆ, "ನಾನು ಬಹಳ ಅದೃಷ್ಟಶಾಲಿ, ನನ್ನಲ್ಲಿ ಎಲ್ಲವೂ ಇದೆ. ನಾನು ಬಹಳ ಕೃತಜ್ಞನಾಗಿರುವೆನು" ಎಂದು ಹೇಳಿದನು.

ಗುರುವು ಅವನಿಗೆ ಒಂದು ಹೊಡೆತವನ್ನು ಕೊಟ್ಟರು ಮತ್ತು ಆ ವ್ಯಕ್ತಿಯು ನರ್ತಿಸಲು ತೊಡಗಿದನು. ಅವನು ಬಹಳ ಸಂತೋಷಗೊಂಡನು.

ಗುರುವು ನೋಡುಗನಿಗೆ ಹೀಗೆಂದು ವಿವರಿಸಿದರು, ’ನಾನು ಕೃತಜ್ಞನಾಗಿರುವೆನು’ ಎಂದು ನೀವು ಹೇಳುವಾಗ, ನೀವು ’ನಾನು’ ಎಂಬುದನ್ನು ಸುತ್ತುವರೆದಿರುತ್ತೀರಿ. ’ನಾನು’ ಎಂಬುದು ಪ್ರಧಾನವಾಗಿರುತ್ತದೆ; ’ನಾನು’ ಬಹಳ ಅದೃಷ್ಟಶಾಲಿ, ’ನಾನು’ ಕೃತಜ್ಞನಾಗಿರುವೆನು. ಈ ’ನಾನು’ ಎಂಬುದು ಕರಗಿದಾಗ, ನೀವೊಂದು ಮಗುವಿನಂತಾಗುವಿರಿ ಮತ್ತು ಎಲ್ಲರೊಂದಿಗೂ ಒಂದಾಗುವಿರಿ. ಅಸ್ತಿತ್ವದಲ್ಲಿರುವುದು ಮತ್ತು ಜೀವಿಸದಿರುವುದು, ಅಜ್ಞಾನವಾಗಿದೆ. ನೀವು ಅಸ್ತಿತ್ವದಲ್ಲಿಯೇ ಇಲ್ಲವೇನೋ ಎಂಬಂತೆ ಜೀವಿಸುವುದು ಜ್ಞಾನೋದಯವಾಗಿದೆ. ಸರಳ ಮತ್ತು ಸ್ವಾಭಾವಿಕ!

ಪ್ರಶ್ನೆ: ಗುರುದೇವ, ಆಧ್ಯಾತ್ಮವೆಂಬುದು ನನಗೆ ಸ್ವಾತಂತ್ರ್ಯವಾಗಿದೆ, ಆದರೆ ಹಲವು ಸಾರಿ, ಆರ್ಟ್ ಆಫ್ ಲಿವಿಂಗ್‌ನಲ್ಲಿ ಸೇವೆ ಮತ್ತು ಇತರ ವಿಷಯಗಳು ಬಹಳ ಪರಿಕಲ್ಪಿತವಾದವು ಎಂದು ನನಗನ್ನಿಸುತ್ತದೆ. ಎಲ್ಲೋ ನನಗೆ ಅಂತಹ ಪರಿಕಲ್ಪಿತ ತರಬೇತಿಗಳೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದನ್ನು ನಾನು ನಿರ್ವಹಿಸುವುದು ಹೇಗೆ? 

ಶ್ರೀ ಶ್ರೀ ರವಿ ಶಂಕರ್: ಒಂದು ಸಂಘರ್ಷವನ್ನು ಸೃಷ್ಟಿಸುವುದು ಮನಸ್ಸಾಗಿದೆ. ನಿನ್ನ ಮೇಲೆ, ಎಲ್ಲಾ ಸೇವೆಯನ್ನು ಮಾಡಬೇಕೆಂಬ ಬೇಡಿಕೆಯಿಲ್ಲ. ನಿನ್ನಿಂದ ಏನು ಸಾಧ್ಯವೋ ಅದನ್ನು ಮಾಡು.

ಪ್ರತಿಯೊಬ್ಬರ ಜೀವನದಲ್ಲೂ ಸೇವೆಯು ಮಾಡಲೇಬೇಕಾಗಿರುವ ಒಂದು ವಿಷಯವಾಗಿದೆ, ಯಾಕೆಂದರೆ ಅದು ತೃಪ್ತಿ ಮತ್ತು ಸಂತೋಷವನ್ನು ತರುತ್ತದೆ. ಮತ್ತು ನೀವು ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಮಾಡಿ; ನಿಮ್ಮನ್ನು ಅತಿಯಾಗಿ ದಣಿಸದೆಯೇ.
ಪರಿಕಲ್ಪನೆಗಳು ಮತ್ತು ಅವೆಲ್ಲವುಗಳ ಬಗ್ಗೆ ಯೋಚಿಸಲು ನಿನ್ನಲ್ಲಿ ಅತಿಯಾದ ಬಿಡುವಿನ ವೇಳೆಯಿದೆಯೆಂದು ನನಗನ್ನಿಸುತ್ತದೆ. ಒಂದು ಪರಿಕಲ್ಪನೆಯೆಂದರೇನು? ಶಿಕ್ಷಣಕ್ಕೆ ಒಂದು ವ್ಯವಸ್ಥೆಯಿದೆ, ಮತ್ತು ವ್ಯವಸ್ಥೆಯು ಅದನ್ನು ಬಹಳ ಪರಿಣಾಮಕಾರಿಯನ್ನಾಗಿಸುತ್ತದೆ. ಎಲ್ಲಾ ಜ್ಞಾನವನ್ನು ಎಲ್ಲಿ ಬೇಕಾದರೂ ಮತ್ತು ಹೇಗೆ ಬೇಕಾದರೂ ಕಲಿಸಬಹುದು (ಪರಿಣಾಮಕಾರಿಯಲ್ಲದ ರೀತಿಯನ್ನು ಉಲ್ಲೇಖಿಸುತ್ತಾ); ಹಳ್ಳಿಗಳಲ್ಲಿನ ನಾಟಿ ವೈದ್ಯರಂತೆ. ಹಳ್ಳಿಗಳಲ್ಲಿ ಜನರು ರೋಗಕ್ಕೆ ತುತ್ತಾಗುವಾಗ, ಅವರು ಈ ನಾಟಿ ವೈದ್ಯರಲ್ಲಿಗೆ ಹೋಗುತ್ತಾರೆ. ಅವರು ಕೆಲವು ತಾತ್ಕಾಲಿಕವಾಗಿರುವ ಮೂಲಿಕೆಗಳನ್ನು ನಿರ್ದೇಶಿಸಿ, ಅವುಗಳನ್ನು ಅರೆದು ಕುಡಿಯಲು ಹೇಳುತ್ತಾರೆ ಮತ್ತು ಎಲ್ಲವೂ ಸರಿಹೋಗುತ್ತದೆ!

ಸಂಸ್ಕೃತದಲ್ಲಿ ಒಂದು ಮಾತಿದೆ, ’ಯಸ್ಯ ಕಸ್ಯ ತರೋರ್ಮೂಲಂ, ಯೇನ ಕೇನಪಿ ಚೂನಿತಮ್, ಯಸ್ಮೈ ಕಸ್ಮೈ ಪ್ರದಾತವ್ಯಮ್ ಯದ್ಯಾ ತದ್ವ ಭವಿಷ್ಯತಿ.’ ಅಂದರೆ, ’ಯಾವುದೇ ಮರ, ಯಾವುದೇ ಬೇರು ಅಥವಾ ಏನನ್ನಾದರೂ ಸುಮ್ಮನೆ ಅರೆದು ಅದನ್ನೊಂದು ಹಿಟ್ಟನ್ನಾಗಿ ಮಾಡಿ ಯಾರಿಗಾದರೂ ಕೊಡಿ, ಮತ್ತು ಆಗ ಏನು ಬೇಕಾದರೂ ಸಂಭವಿಸಬಹುದು!’ ಇದು ಔಷಧ ಶಾಸ್ತ್ರವನ್ನು ಅಭ್ಯಾಸ ಮಾಡುವ ಒಂದು ಅವ್ಯವಸ್ಥಿತವಾದ ರೀತಿಯಾಗಿದೆ ಮತ್ತು ಇದನ್ನು ಮಾಡುವ ಹಲವಾರು ಜನರು ಭಾರತದಲ್ಲಿದ್ದಾರೆ. ಇದೊಂದು ಬಹಳ ಸರ್ವೇಸಾಮಾನ್ಯ ಸಂಗತಿಯಾಗಿದೆ. ಭಾರತದಲ್ಲಿ ಪ್ರತಿಯೊಬ್ಬರೂ ಒಬ್ಬ ವೈದ್ಯರಾಗಿರುವರು ಮತ್ತು ಪ್ರತಿಯೊಬ್ಬರೂ ಯಾವುದಕ್ಕೆ ಬೇಕಾದರೂ ಒಂದಲ್ಲ ಒಂದು ಅಜ್ಜಿ ಮದ್ದನ್ನು ಕೊಡುತ್ತಾರೆ. ಅಜ್ಜಿ ಮದ್ದುಗಳಿಗೆ ಕೂಡಾ ಸ್ವಲ್ಪ ಬೆಲೆಯಿದೆ, ಇಲ್ಲವೆಂದು ನಾನು ಹೇಳುತ್ತಿಲ್ಲ, ಆದರೆ ವ್ಯವಸ್ಥಿತವಾಗಿ ತರಬೇತು ಹೊಂದಿದ ಒಬ್ಬ ವೈದ್ಯನು ವಿಷಯವನ್ನು ಸಂಪೂರ್ಣವಾಗಿ ಅರಿತಿರುವುದರಿಂದ ಅವನಿಗೆ ಹೆಚ್ಚಿನ ಬೆಲೆಯಿದೆ.

ಒಬ್ಬ ಗಿಡಮೂಲಿಕೆ ತಜ್ಞನು ಗಿಡಮೂಲಿಕೆಗಳನ್ನು ಸಂಪೂರ್ಣವಾಗಿ ಅರಿತಿರುತ್ತಾನೆ; ಅದು ಸುಮ್ಮನೆ ಯಾರು ಬೇಕಾದರೂ ಏನು ಬೇಕಾದರೂ ಮಾಡುವುದು ಮತ್ತು ಏನು ಬೇಕಾದರೂ ಸಂಭವಿಸಬಹುದು ಎಂದಲ್ಲ. ಅದೇ ರೀತಿಯಲ್ಲಿ, ಕಲಿಸುವುದು ಕೂಡಾ ಒಂದು ವಿಧಾನಶಾಸ್ತ್ರವಾಗಿದೆ.

ಎಲ್ಲರಿಗೂ ಅಂಶಗಳು ತಿಳಿದಿದ್ದು, ಜ್ಞಾನವಿರಬಬಹುದಾದರೂ ಸಹ, ಅದನ್ನು ಯಾರು ಬೇಕಾದರೂ ಯಾವ ರೀತಿಯಲ್ಲಾದರೂ ಕಲಿಸುವುದು, ಅಪೇಕ್ಷಿತ ಫಲಿತಾಂಶಗಳನ್ನು ನೀಡಲಾರದು. ಅದಕ್ಕಾಗಿಯೇ ಒಂದು ವ್ಯವಸ್ಥೆಯಿರುವುದು.

ಪ್ರಾಚೀನ ಕಾಲದಲ್ಲಿ ಕೂಡಾ, ತಾವು ಆಚಾರ್ಯರಾಗುವ ಮೊದಲು ವಿದ್ಯಾರ್ಥಿಗಳು ಹೋಗಿ ಗುರುಕುಲಗಳಲ್ಲಿ ಸಂಪೂರ್ಣವಾಗಿ ಅಧ್ಯಯನ ನಡೆಸುತ್ತಿದ್ದರು.
 
ಪ್ರಶ್ನೆ: ಗುರುದೇವ, ’ನಾನು ಯಾರು? ನಾನು ಎಲ್ಲಿರುವೆನು?’ ಎಂಬ ಪ್ರಶ್ನೆಗಳ ಮೇಲೆ ಆತ್ಮವಿಶ್ಲೇಷಣೆ ಮಾಡಿದ ಬಳಿಕ, ನಾನು ಖಾಲಿ ಆಕಾಶವಾಗಿ ಎಲ್ಲಿಯೂ ಇಲ್ಲವೆಂಬುದಾಗಿಯೂ ಮತ್ತು ಎಲ್ಲೆಡೆಯೂ ಇರುವೆನೆಂಬುದಾಗಿಯೂ ನನಗೆ ಅರಿವಾಗಿದೆ. ಶರೀರ ಪ್ರಜ್ಞೆಗೆ ಚಲಿಸದೆಯೇ ಈ ಶುದ್ಧ ಚೇತನದಲ್ಲಿ ಉಳಿಯುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಶರೀರ ಪ್ರಜ್ಞೆಯಿಂದ ಹೊರಗಿರಲು ಪ್ರಯತ್ನಿಸುವುದು ಒಂದು ಶ್ರಮವಾಗಿದೆ. ಅಂತಹ ಪ್ರಯತ್ನಗಳನ್ನು ಮಾಡಬೇಡ. ನೀನು ಜ್ಞಾನದಲ್ಲಿ ಚೆನ್ನಾಗಿ ನೆಲೆನಿಂತಂತೆ, ಅದು ತನ್ನಿಂತಾನೇ ಆಗುವುದು.

ವಾಸನೆಗಳು ಕಡಿಮೆಯಾಗಿ ಕ್ಷೀಣಿಸಿ ಹೋದಂತೆ, ಅದು ನಿನಗೆ ಸಾಕಷ್ಟು ಹೆಚ್ಚು ಸ್ಪಷ್ಟವಾಗುತ್ತದೆ ಮತ್ತು ವಾಸನೆಗಳನ್ನು ತೊಲಗಿಸಲು ನೀನು ನಿನ್ನನ್ನು ಬಲವಂತಪಡಿಸಲು ಸಾಧ್ಯವಿಲ್ಲ.

ಸಾಧನೆ, ಸತ್ಸಂಗ; ಒಳ್ಳೆಯ ಸಂಗ ಆವಶ್ಯಕವಾಗಿವೆ. ಲೋಭಿಗಳಾಗಿರುವ ಹಾಗೂ ಒಂದು ನಕಾರಾತ್ಮಕ ಮನೋಭಾವವಿರುವ ಜನರ ಸಂಗದಲ್ಲಿ ನೀನು ಕುಳಿತರೆ, ಆಗ ನಿನ್ನ ಮನಸ್ಸು ಅಂತಹ ವಿಷಯಗಳಲ್ಲಿ ಸಂಪೂರ್ಣವಾಗಿ ಮುಳುಗುತ್ತದೆ. ಆದುದರಿಂದ, ಜ್ಞಾನದಿಂದ ಚೇತನವನ್ನು ಮೇಲಕ್ಕೇರಿಸು ಮತ್ತು ಅಪ್ರಯತ್ನವಾಗಿ ಅದು ಸಂಭವಿಸುವುದನ್ನು ನೀನು ಕಾಣುವೆ.

ಪ್ರಶ್ನೆ: ಗುರುದೇವ, ನಾಲ್ಕು ವರ್ಷಗಳ ಮೊದಲು ನನಗೆ ವಿವಾಹ ವಿಚ್ಛೇದನವಾಯಿತು ಮತ್ತು ಪುನಃ ಮದುವೆಯಾಗಿ ಇನ್ನೂ ಒಂದು ವರ್ಷವೂ ಆಗಿಲ್ಲ. ನನ್ನ ಜೀವನದಲ್ಲಿ ಅದೇ ಪರಿಸ್ಥಿತಿಗಳು ಪುನರಾವರ್ತಿಸುವುದನ್ನು ನಾನು ಕಾಣುತ್ತಿದ್ದೇನೆ. ಇದು ಕರ್ಮವೇ ಅಥವಾ ನನಗೆ ಜ್ಞಾನವನ್ನು ಅನ್ವಯಿಸಲು ಸಾಧ್ಯವಾಗುತ್ತಿಲ್ಲವೇ?

ಶ್ರೀ ಶ್ರೀ ರವಿ ಶಂಕರ್: ಇದು ನಿನಗೆ ಹೆಚ್ಚು ಚೆನ್ನಾಗಿ ತಿಳಿದಿರುತ್ತದೆ.

ನೀನು ಯಾವ ತಪ್ಪುಗಳನ್ನು ಮಾಡುತ್ತಿರುವೆಯೆಂಬುದನ್ನು ನೋಡು. ನಿನ್ನಲ್ಲಿ ಸ್ವೀಕಾರವಿದೆಯೇ? ನೀನೊಬ್ಬ ವ್ಯಕ್ತಿಗೆ ಸೇವೆ ಮಾಡುತ್ತೀಯೇ? ನೀನು ಆನಂದದ ಮತ್ತು ಉತ್ಸಾಹದ ಒಂದು ಕಾರಂಜಿಯಾಗಿದ್ದಲ್ಲಿ, ಒಬ್ಬರು ನಿನ್ನೊಂದಿಗೆ ಇರಲು ಯಾಕೆ ಇಷ್ಟಪಡುವುದಿಲ್ಲ?

ನೀನು ಪ್ರೇಮ ಮತ್ತು ಸೇವೆಗಳಿಂದ ತುಂಬಿದ್ದರೆ, ಒಬ್ಬರು ನಿನ್ನೊಂದಿಗಿರಲು ಯಾಕೆ ಇಷ್ಟಪಡುವುದಿಲ್ಲ? ನೀನು ಟೊಳ್ಳು ಮತ್ತು ಖಾಲಿಯಾಗಿದ್ದರೆ, ನೀನು ಜ್ಞಾನದಲ್ಲಿದ್ದರೆ, ಎಲ್ಲರೂ ನಿನ್ನೊಂದಿಗೆ ಸಮಯ ಕಳೆಯಲು ಬಯಸುವರು. ಆದುದರಿಂದ, ಹಗಲಿರುಳು ನಿನ್ನನ್ನು ಜ್ಞಾನದಲ್ಲಿ ನೆನೆಸಿ ಇಟ್ಟುಕೋ.

ಜ್ಞಾನದೊಂದಿಗೆ ನಿದ್ರಿಸು ಮತ್ತು ನೀನು ಎಚ್ಚೆತ್ತುಕೊಳ್ಳುವಾಗ, ಪುನಃ ಜ್ಞಾನವನ್ನು ಆಲಿಸು. ಯೋಗ ವಾಸಿಷ್ಠ, ಅಷ್ಟಾವಕ್ರ ಗೀತೆ ಮತ್ತು ಭಕ್ತಿ ಸೂತ್ರಗಳನ್ನು ಓದು.

ನಮಗೆ ಅಷ್ಟೊಂದು ಅಮೂಲ್ಯವಾದ ಜ್ಞಾನವನ್ನು ನೀಡಲಾಗಿದೆ. ಒಮ್ಮೆಗೆ ಕೇವಲ ಒಂದು ಸೂತ್ರ ಸಾಕು. ಉದಾಹರಣೆಗೆ, ’ಯೋಗಶ್ ಚಿತ್ತ ವೃತ್ತಿ ನಿರೋಧಃ, ತದ ದ್ರಷ್ಟುಃ ಸ್ವರೂಪೆ ಅವಷ್ಠಾನಮ್’, ದ್ರಷ್ಟಾನಲ್ಲಿ ಸ್ಥಾಪಿತವಾಗುವುದು ಮತ್ತು ದೃಶ್ಯದಲ್ಲಲ್ಲ ಎಂಬುದು ಯೋಗವಾಗಿದೆ. ಅಂತಹ ಜ್ಞಾನದಲ್ಲಿ ವಾಸಿಸಿಕೊಂಡು, ಇದೆಲ್ಲವೂ ದೃಶ್ಯವೆಂಬುದನ್ನು ಸ್ಮರಿಸಿಕೊಳ್ಳುತ್ತಾ, ಒಬ್ಬನು ದ್ರಷ್ಟನ ಕಡೆಗೆ ಮರಳಿ ಹೋಗಬಹುದು.

’ಶರೀರವು ದೃಶ್ಯವಾಗಿದೆ, ನಾನು ದ್ರಷ್ಟಾ(ನೋಡುವವನು)ನನ್ನು ಕಂಡುಕೊಳ್ಳುತ್ತೇನೆ’, ಇದು ನಿಮ್ಮನ್ನು ಕೂಡಲೇ ಮೂಲಕ್ಕೆ ತಿರುಗಿ ಕರೆದೊಯ್ಯುತ್ತದೆ. ಶರೀರವೆಲ್ಲಾ ಖಾಲಿ ಎಂಬುದನ್ನು ನೀವು ಅರಿಯುವಂತೆ ಅದು ಮಾಡುತ್ತದೆ. ಹೊರಗೆ ಖಾಲಿತನವಿದೆ ಮತ್ತು ಎಲ್ಲವೂ ಖಾಲಿಯಾಗಿದೆ.

ಒಂದು ಲೋಟವನ್ನು ನೋಡಿ; ಒಳಗೆ ಮತ್ತು ಹೊರಗೆ ಆಕಾಶವಿದೆ. ಶರೀರವು ಒಂದು ಲೋಟವಾಗಿದೆ, ನೀವೊಂದು ಸುಪಾತ್ರವಾಗಿರುವಿರಿ; ಟೊಳ್ಳು ಮತ್ತು ಖಾಲಿಯಾಗಿರುವ ಒಂದು ಮನಸ್ಸು.

ಕುಪಾತ್ರವೆಂದರೆ, ಯಾವಾಗ ಮನಸ್ಸು ಎಲ್ಲಾ ಹೊಲಸು ಜ಼್ವಿಷಯಗಳಿಂದ ತುಂಬಿರುವುದೋ ಆಗ. ನೀವೊಂದು ಸುಪಾತ್ರವಾಗಿರುವಿರಿ, ಒಂದು ಒಳ್ಳೆಯ ಲೋಟ; ಅದು ಮುಕ್ತವೂ, ಒಳಗೆ ಮತ್ತು ಹೊರಗೆ ಸ್ವಚ್ಛವೂ ಆಗಿದೆ. ನೀವಿದನ್ನು ಅರಿಯುವಾಗ, ಕೂಡಲೇ ನಿಮಗೆ ವಿಶ್ರಾಮ ಮಾಡಲು ಸಾಧ್ಯವಾಗುತ್ತದೆ; ನಿಮ್ಮ ಶರೀರದಲ್ಲಿನ ಪ್ರತಿಯೊಂದು ಕೋಶವೂ ವಿಶ್ರಾಮ ಮಾಡಲು ತೊಡಗುತ್ತದೆ. ಎಲ್ಲಾ ಕೊಳಕು ಬಿಟ್ಟುಹೋಗುತ್ತದೆ, ಎಲ್ಲಾ ನಕಾರಾತ್ಮಕ ಯೋಚನೆಗಳು ಮಾಯವಾಗುತ್ತವೆ.

ನೀವೊಂದು ಸ್ವಚ್ಛವಾದ ಪಾತ್ರೆಯಾಗಿರುವಿರಿ, ಟೊಳ್ಳು ಮತ್ತು ಖಾಲಿ. ಈ ಮನಃಸ್ಥಿತಿಯು ಎಷ್ಟೊಂದು ಆನಂದಮಯವಾಗಿದೆ. ನಂತರ ನಿಮಗೆ, ಆಯಾಸವಾಗದೇ ಮತ್ತು ಸಿಕ್ಕಿಹಾಕಿಕೊಳ್ಳದೆಯೇ ಒಂದು ದಿನದಲ್ಲಿ ೧೮-೨೦ ಗಂಟೆಗಳ ಕಾಲ ಕೆಲಸ ಮಾಡಲು ಸಾಧ್ಯವಾಗುತ್ತದೆ; ಮನಸ್ಸು ತಾಜಾವಾಗಿರುತ್ತದೆ. ಪ್ರತಿದಿನವೂ, ನೀವು ಸುಮಾರು ಆರು ಗಂಟೆಗಳ ಕಾಲ ಚೆನ್ನಾಗಿ ವಿಶ್ರಾಂತಿ ಪಡೆದುಕೊಳ್ಳಬೇಕು.

ಪ್ರಶ್ನೆ: ಹಲವು ವಿದ್ಯಾರ್ಥಿಗಳು ಯೆಸ್ ಪ್ಲಸ್ ಕೋರ್ಸ್ ಮಾಡಲು ಬಯಸುತ್ತಾರೆ, ಆದರೆ ಹೆತ್ತವರು ನಮಗೆ ಅನುಮತಿ ನೀಡುವುದಿಲ್ಲ. ಈ ವಯಸ್ಸಿನಲ್ಲಿ ಆಧ್ಯಾತ್ಮಿಕವಾಗಿರುವುದರ ಬಗ್ಗೆ ನಾವು ನಮ್ಮ ಹೆತ್ತವರನ್ನು ಹೇಗೆ ಒಪ್ಪಿಸಬಹುದು?

ಶ್ರೀ ಶ್ರೀ ರವಿ ಶಂಕರ್: ಕೇವಲ ಅವರೊಂದಿಗೆ ಚೆನ್ನಾಗಿರು ಮತ್ತು ನೀನು ಧ್ಯಾನ ಮಾಡಿರುವುದಾಗಿ ಅವರಿಗೆ ಹೇಳು. ನೀನು ಅವರೊಂದಿಗೆ ಕೆಟ್ಟದಾಗಿರುವ ದಿನ, ನೀನು ಧ್ಯಾನ ಮಾಡಿಲ್ಲದೇ ಇರುವುದಾಗಿಯೂ, ಅದಕ್ಕಾಗಿಯೇ ನೀನು ಕೋಪಗೊಂಡುದಾಗಿಯೂ ಅವರಿಗೆ ಹೇಳು. ಹೋಗಿ ಧ್ಯಾನ ಮಾಡುವಂತೆ ಅವರು ನಿನ್ನಲ್ಲಿ ಹೇಳುವರು.

ಪ್ರಶ್ನೆ: ಗುರುದೇವ, ಕೃಷ್ಣನನ್ನು ಪಡೆಯಲು ಒಬ್ಬನು ರಾಧೆಯಾಗಬೇಕೆಂದೂ, ಮತ್ತು ರಾಮನನ್ನು ಪಡೆಯಲು ಒಬ್ಬನು ಹನುಮಂತನಾಗಬೇಕೆಂದೂ ನೀವು ಹೇಳುತ್ತೀರಿ. ನನಗೆ ಕೇವಲ ನೀವು ಬೇಕು, ನಾನು ಏನಾಗಬೇಕು?

ಶ್ರೀ ಶ್ರೀ ರವಿ ಶಂಕರ್: ಏನೂ ಇಲ್ಲ. ಏನಾಗಲೂ ಪ್ರಯತ್ನ ಪಡಬೇಡ, ಕೇವಲ ಖಾಲಿಯಾಗು. ನೀನೇನೇ ಆಗಿದ್ದರೂ, ಅದನ್ನು ಬಿಟ್ಟುಬಿಡು ಮತ್ತು ಖಾಲಿಯಾಗು. ನೀನು ಈಗಾಗಲೇ ನನ್ನನ್ನು ಹೊಂದಿರುವೆ.

ಪ್ರಶ್ನೆ: ಗುರುದೇವ, ಜೀವನದಲ್ಲಿ ಪ್ರಧಾನವಾದುದು ಯಾವುದು, ಹಣ, ಪ್ರೇಮ, ಆತ್ಮ-ಗೌರವ ಅಥವಾ ಸಂಬಂಧಗಳೇ?

ಶ್ರೀ ಶ್ರೀ ರವಿ ಶಂಕರ್: ನಾನು! ಇವೆಲ್ಲವುಗಳನ್ನು ಬಿಟ್ಟ ನಂತರ ನಿನಗೆ ಏನು ಸಿಗುವುದೋ, ಅದು ಮಾತ್ರ ಪಡೆಯಲು ಯೋಗ್ಯವಾದುದು.