೭ ಅಕ್ಟೋಬರ್, ೨೦೧೨
ಪ್ರಶ್ನೆ: ಮನಸ್ಸು ಅನುಮಾನಗಳಿಂದ ತುಂಬಿದ್ದಾಗ ಅಥವಾ ಖಿನ್ನವಾಗಿದ್ದಾಗ, ಈ ಭಯಗಳು ನಿಜವಲ್ಲ ಎಂದು ಹೇಗೆ ನಾನು ನನ್ನನ್ನೇ ಅರಿವಿಗೆ ತಂದುಕೊಳ್ಳಲಿ?
ಶ್ರೀ ಶ್ರೀ ರವಿಶಂಕರ್: ಮನಸ್ಸು ಸಂಶಯಗಳಿಂದ ತುಂಬಿದ್ದಾಗ ಅಥವಾ ಖಿನ್ನವಾಗಿದ್ದಾಗ, ಅದರ ಅರ್ಥ ಪ್ರಾಣವು ಕಡಿಮೆಯಾಗಿದೆಯೆಂದು. ಪ್ರಾಣವು ಕಡಿಮೆಯಾದಾಗ, ಸಂಶಯಗಳು ಉಂಟಾಗಿ ನಾವು ದುಃಖಿತರಾಗುತ್ತೇವೆ. ಆದ್ದರಿಂದ, ಇದಕ್ಕೆ ಉಪಾಯ ಪ್ರಾಣ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು- ಪ್ರಾಣಾಯಾಮಗಳ ಮೂಲಕ, ಪೌಷ್ಟಿಕ ಆಹಾರಗಳಿಂದ, ವ್ಯಾಯಾಮಗಳಿಂದ, ಹಾಡುವುದರಿಂದ ಮತ್ತು ಉಪವಾಸದಿಂದ.
ಸ್ವಲ್ಪ ದಿನಗಳವರೆಗೆ ಹಣ್ಣುಗಳನ್ನೇ ಸೇವಿಸಿ. ನಮಗೆ ಹಸಿವಿಲ್ಲದಿದ್ದರೂ ಯಾವತ್ತೂ ನಮ್ಮ ಹೊಟ್ಟೆಯನ್ನು ಆಹಾರದೊಂದಿಗೆ ತುಂಬಿಸಿಕೊಳ್ಳುತ್ತಿರುತ್ತೇವೆ.
ಪ್ರಶ್ನೆ: ವಿಶಾಲಾಕ್ಷಿ ಮಂಟಪವು ಬಹಳ ಸುಂದರವಾಗಿದೆ. ನಾನು ಅದನ್ನು ನೋಡಲು ಬಹಳ ಆನಂದ ಪಡುತ್ತೇನೆ. ನೀವು ದಯವಿಟ್ಟು ಅದರ ಬಗ್ಗೆ ನಮಗೆ ಇನ್ನೂ ಹೆಚ್ಚು ತಿಳಿಸಬಹುದೇ? ಈ ಕಟ್ಟಡವು ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿದೆಯೇ?
ಶ್ರೀ ಶ್ರೀ ರವಿಶಂಕರ್: ಇದು ಯಾವ ರೀತಿ ಕಾಣಬೇಕು ಎಂದು ತೋರಿಸಲು ಒಂದು ರೂಪನಕ್ಷೆ ರಚಿಸಿದೆನಷ್ಟೆ. ಈ ಕಟ್ಟಡಕ್ಕೆ ಯಾವುದೇ ದೊಡ್ಡ ಶಿಲ್ಪಿ ಇಲ್ಲ.
ಹೌದು, ವಾಸ್ತು ತಜ್ಞರು ಕಟ್ಟಡವನ್ನು ಪರಿಶೀಲಿಸಿದಾಗ ಕಟ್ಟಡ ಚೆನ್ನಾಗಿ ರೂಪಿಸಲಾಗಿದೆ ಮತ್ತು ವಾಸ್ತು ಶಾಸ್ತ್ರಕ್ಕನುಗುಣವಾಗಿದೆ ಎಂದು ಹೇಳಿದರು.
ಪ್ರಶ್ನೆ: ಹಿಂದಿನ ದಿನಗಳಲ್ಲಿ ಋಷಿಗಳು ಧ್ಯಾನಕ್ಕೆ ಮೃಗಗಳ ಚರ್ಮದ ಮೇಲೆ ಕುಳಿತುಕೊಳ್ಳುತ್ತಿದ್ದರು. ಆದರೂ, ನಾವು ಸುದರ್ಶನ ಕ್ರಿಯೆ ಮಾಡುವಾಗ, ಎಲ್ಲಾ ಚರ್ಮದ ವಸ್ತುಗಳನ್ನು ತೆಗೆದಿಡಲು ಹೇಳುತ್ತೀರಿ. ಹೀಗೆ ಯಾಕೆ?
ಶ್ರೀ ಶ್ರೀ ರವಿಶಂಕರ್: ಪ್ರಾಚೀನ ದಿನಗಳಲ್ಲಿ ಅವರು ಜಿಂಕೆಯ ಚರ್ಮವನ್ನು ಮಾತ್ರ ಉಪಯೋಗಿಸುತ್ತಿದ್ದರು. ಅಲ್ಲದೇ, ಅವರು ಸಹಜ ಸಾವನ್ನಪ್ಪಿದ ಜಿಂಕೆಗಳ ಚರ್ಮವನ್ನು ಉಪಯೋಗಿಸುತ್ತಿದ್ದರು.
ಆ ದಿನಗಳಲ್ಲಿ ಅವರಲ್ಲಿ ದಿಂಬುಗಳಿರಲಿಲ್ಲ, ಹಾಗಾಗಿ ಅವರು ಜಿಂಕೆಯ ಚರ್ಮವನ್ನು ಉಪಯೋಗಿಸಿದ್ದರು.
ಚರ್ಮವನ್ನು ಉಪಯೋಗಿಸದೇ ಇರಲು ಬೇರೆ ಕಾರಣಗಳಿವೆ. ಟಿ.ಟಿ.ಸಿ.(ಶಿಕ್ಷಕರ ತರಬೇತಿ ಶಿಬಿರ) ಮಾಡಿದರೆ, ನೀವು ಅದನ್ನು ಅರಿತುಕೊಳ್ಳುತ್ತೀರಿ.
ಪ್ರಶ್ನೆ: ನನ್ನ 24 ವಯಸ್ಸಿನ ಮಗ ಖಿನ್ನತೆಗೆ ಇಳಿದು ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ. ನಾನು ಅವನನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅವನನ್ನು ಕಾಪಾಡಬಹುದಿತ್ತು ಎಂಬ ಆಲೋಚನೆ ನನ್ನನ್ನು ಕಾಡುತ್ತಿದೆ.
ಶ್ರೀ ಶ್ರೀ ರವಿಶಂಕರ್: ಅಂಥ ಬಹಳ ಮಂದಿ ಯುವಕರು, ಕರ್ನಾಟಕದಲ್ಲಿ ಮತ್ತು ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವನ ಆಯಸ್ಸು ಅಷ್ಟೇ ಇತ್ತು. ಅದರ ಬಗ್ಗೆ ಚಿಂತಿಸುತ್ತಾ ನಿಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳಬೇಡಿ.
ಯುವಕರನ್ನು ಈ ಮಾರ್ಗಕ್ಕೆ, ಗಾನ, ಜ್ಞಾನ ಮತ್ತು ಧ್ಯಾನವಿರುವಂಥ ಮಾರ್ಗಕ್ಕೆ ತರಲು ಪರಿಶ್ರಮಿಸಿ, ಮತ್ತು ಅವರ ಜೀವನದಲ್ಲಿ ಹೊಸ ಬೆಳಕನ್ನು ತರಲು ಕೆಲಸಮಾಡಿ.
ಪ್ರಶ್ನೆ: ನನ್ನ ಪತಿಯ ಶ್ವಾಸಕೋಶದಲ್ಲಿ ಗಡ್ಡೆಯೊಂದು ಪತ್ತೆಯಾಗಿದೆ. ವೈದ್ಯರು ಅದು ಕ್ಯಾನ್ಸರ್ ಆಗಿರಬಹುದು ಎಂದು ಹೇಳುತ್ತಿದ್ದಾರೆ.
ಶ್ರೀ ಶ್ರೀ ರವಿಶಂಕರ್: ಅವರು ಪ್ರಾಣಾಯಾಮ ಮಾಡಲಿ ಮತ್ತು "ಶಕ್ತಿ ಡ್ರಾಪ್"ಗಳನ್ನೂ ಉಪಯೋಗಿಸಲಿ. ಶಕ್ತಿ ಡ್ರಾಪ್.ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ನಿನ್ನೆ ಒಬ್ಬ ಆಂಕಾಲಜಿಸ್ಟ್(ಗ್ರಂಥಿ ಶಾಸ್ತ್ರಜ್ಞ) ತಾವು ೩-೪ ರೋಗಿಗಳ ಮೇಲೆ ಸಂಶೋಧನೆ ನಡೆಸಿರುವುದನ್ನು ಮತ್ತು ಶಕ್ತಿ ಡ್ರಾಪ್ಸ್ ಉಪಯೋಗದಿಂದ ಕ್ಯಾನ್ಸರ್ ಜೀವಕೋಶಗಳು ಕೇವಲ ನಲವತ್ತೆಂಟು ಘಂಟೆಗಳಲ್ಲಿ ಶೇಕಡ ನಲವತ್ತರಷ್ಟು ಇಳಿದಿರುವುದನ್ನು ಸಂಕ್ಷೇಪವಾಗಿ ಪ್ರಸ್ತಾಪಿಸಿದರು.
ಅವರು ಉನ್ನತ ಸಂಶೋಧನೆಗಳನ್ನು ಮಾಡಲಿದ್ದಾರೆ. ನಾವು ಇದರ ಮೇಲೆ ಈಗಿನಿಂದಲೇ ಹಕ್ಕು ಸಾಧಿಸಲಾಗುವುದಿಲ್ಲ ಆದರೆ ಅವರು ಈ ಸಂಶೋಧನೆಯನ್ನು ಕೈಗೆತ್ತಿಕೊಳ್ಳಲು ಬಹಳ ಪ್ರೋತ್ಸಾಹಿತರಾಗಿದ್ದರು. ಬಹಳ ಜನರು ಶಕ್ತಿ ಡ್ರಾಪ್ಸಿನಿಂದ ಲಾಭ ಪಡೆದಿದ್ದಾರೆ. ನೀವು ಅದನ್ನು ಉಪಯೋಗಿಸಬೇಕು.
ಪ್ರಶ್ನೆ: ಗುರೂಜಿ, ನಿಮ್ಮ ಪ್ರಕಾರ, ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಜನೆಯಲ್ಲದೆ ಉಳಿದ ಮೂಲಭೂತ ಆದ್ಯತೆಗಳು ಯಾವುವು?
ಶ್ರೀ ಶ್ರೀ ರವಿಶಂಕರ್: ಮೂಲಭೂತವಾದ ಆದ್ಯತೆಯೆಂದರೆ ಓದಿನಲ್ಲಿ ಶ್ರದ್ಧೆ ಮತ್ತು ಚೆನ್ನಾಗಿ ಓದುವುದು.
ಎರಡನೆಯದಾಗಿ, ನಿನಗಾಗಿ ಒಂದು ಮುನ್ನೋಟವಿಟ್ಟುಕೊ(ಗುರಿ) ಮತ್ತು ದೇಶಕ್ಕಾಗಿ ಒಂದು ಮುನ್ನೋಟವಿಟ್ಟುಕೊ.
ಪ್ರಶ್ನೆ: ಭೂಮಿಯಿಂದ ತೆರಳಿದ ಆತ್ಮಗಳೊಂದಿಗೆ ನಾವು ಮಾತನಾಡಬಹುದೇ?
ಶ್ರೀ ಶ್ರೀ ರವಿಶಂಕರ್: ಮೊದಲು, ಜೀವಂತವಾಗಿರುವವರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಿ! ಇದುವೇ ಒಂದು ದೊಡ್ಡ ಕೆಲಸ!
ಭಾರತದಲ್ಲಿ ಎಷ್ಟೊಂದು ಭಾಷೆಗಳಿವೆ, ಇದರಿಂದ ಪರಸ್ಪರ ಸಂಪರ್ಕ ಎಷ್ಟು ಕಷ್ಟವಾಗುತ್ತದೆ.
ಹೌದು, ಗತ ಆತ್ಮಗಳೊಂದಿಗೆ ಸಂಪರ್ಕಿಸಲು ಮಾರ್ಗಗಳಿವೆ. ಧ್ಯಾನ ಮಾಡಿ, ಆಗ ಆ ದಾರಿಯೂ ತೆರೆದುಕೊಳ್ಳುತ್ತದೆ.
ಬೆ೦ಗಳೂರು ಆಶ್ರಮ, ಭಾರತ

ಪ್ರಶ್ನೆ: ನಾವು ನಮ್ಮ ಲೌಕಿಕ ಹಾಗೂ ಆಧ್ಯಾತ್ಮಿಕ ಜೀವನಗಳನ್ನು ಹೇಗೆ ಸಮತೋಲನದಲ್ಲಿಡುವುದು?
ಶ್ರೀ ಶ್ರೀ ರವಿಶಂಕರ್: ನಿಮಗೆ ಸೈಕಲ್ ಓಡಿಸಲು ಬರುತ್ತದೆಯೇ? ನೀವು ಅದನ್ನು ಹೇಗೆ ಸಮತೋಲನದಲ್ಲಿಡುತ್ತೀರಿ? ನಿಮ್ಮ ಜೀವನವನ್ನು ಅದೇ ರೀತಿಯಲ್ಲಿ ಸಮತೋಲನದಲ್ಲಿಡಿ. ಅವೆರಡನ್ನೂ ಜೀವನದಲ್ಲಿ ಜೊತೆಗೇ ತೆಗೆದುಕೊಳ್ಳಿ.
ನಿಮ್ಮ ಮನಸ್ಸು ಆಧ್ಯಾತ್ಮಿಕತೆಯಲ್ಲಿ ಜಾಸ್ತಿಯೇ ಕೇಂದ್ರೀಕೃತವಾಗಿದ್ದರೆ, ನೀವು ನಿಮ್ಮ ಮನೆಯ ಜವಾಬ್ದಾರಿಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ನಾನು ಹೇಳುತ್ತೇನೆ. ನೀವು ಲೌಕಿಕ ಚಟುವಟಿಕೆಗಳಲ್ಲೇ ನಿಮ್ಮನ್ನು ಮುಳುಗಿಸಿಕೊಂಡರೆ ಮತ್ತು ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಿದರೆ, ನೀವು ಈ ಕೆಸರಿನಲ್ಲಿ ಸಿಕ್ಕಿಹಾಕಿಕೊಳ್ಳದೇ ನಿಮ್ಮ ಆಧ್ಯಾತ್ಮಿಕ ಅಭ್ಯಾಸಗಳನ್ನು ಶುರು ಮಾಡಿಕೊಳ್ಳಬೇಕು ಎಂದು ಹೇಳುತ್ತೇನೆ.
ನೀವು ದೂರದರ್ಶನ ನೋಡುತ್ತಿರುವಾಗ, ’ನಾನು ಮೊದಲು ನೋಡುತ್ತೇನೆ ಮತ್ತೆ ಆಮೇಲೆ ಕೇಳಿಕೊಳ್ಳುತ್ತೇನೆ’ ಎಂದು ಹೇಳಬಹುದೇ?
ಕೆಲವು ಜನರು ಹೇಳುತ್ತಾರೆ, ’ನಾನು ನನ್ನ ಎಲ್ಲಾ ಲೌಕಿಕ ಚಟುವಟಿಕೆಗಳನ್ನು ಮುಗಿಸಿ ನಂತರ ಆಧ್ಯಾತ್ಮಿಕತೆಗೆ ಬರುತ್ತೇನೆ.’ ನಾನು ನಿಮಗೆ ಹೇಳುತ್ತೇನೆ, ಅದು ಎಂದೂ ಆಗುವುದಿಲ್ಲ. ಎರಡೂ ಜೊತೆಗೆ ಸಾಗಬೇಕು. ಜೀವನದಲ್ಲಿ ಎರಡೂ ಬೇಕಾಗಿವೆ. ನಮಗೆ ಜೀವನದಲ್ಲಿ ಮನಃಶಾಂತಿ, ಪ್ರೀತಿ ಮತ್ತು ಆನಂದ ಬೇಕಾಗಿವೆ, ಮತ್ತು ಇದರೊಂದಿಗೆ ನಾವು ನಮ್ಮ ಜವಾಬ್ದಾರಿಗಳನ್ನೂ ಕಾಳಜಿಯಿಂದ ಪೂರೈಸಬೇಕಾಗಿದೆ.
ಪ್ರಶ್ನೆ: ಗುರೂಜಿ, ಇತ್ತೀಚೆಗೆ ಪತ್ತೆಯಾದ "ದೇವ ಕಣ (ಗಾಡ್ ಪಾರ್ಟಿಕಲ್)" ಇದರ ಕುರಿತಾಗಿ ಬೆಳಕು ಚೆಲ್ಲುತ್ತೀರಾ?
ಶ್ರೀ ಶ್ರೀ ರವಿಶಂಕರ್: ದೇವ ಕಣದ ಸಂಶೋಧನೆಯಲ್ಲಿ, ವಿಜ್ಞಾನಿಗಳು ಹೇಳುತ್ತಾರೆ ಈ ಸಂಪೂರ್ಣ ಬ್ರಹ್ಮಾಂಡವು ಒಂದು ಪದಾರ್ಥದಿಂದ, ಒಂದು ವಸ್ತುವಿನಿಂದ ಮಾಡಲ್ಪಟ್ಟಿದೆ, ಮತ್ತು ಆ ಒಂದು ವಸ್ತು ಬಹಳವಾಯಿತು.
ವೇದಾಂತದಲ್ಲೂ ಅದನ್ನೇ ಹೇಳಲಾಗಿದೆ. ಹಿಂದಿನ ದಿನಗಳಲ್ಲಿ, ಪೂರ್ವಜರು ಈ ಸಂಪೂರ್ಣ ಬ್ರಹ್ಮಾಂಡವು ಏಕ ಚೈತನ್ಯದಿಂದ ಮಾಡಲ್ಪಟ್ಟಿದೆ ಎಂದು ಹೇಳಿದ್ದರು. ಏಕ ಚೈತನ್ಯವು ತನ್ನನ್ನೇ ಬಹುವಾಗಿ ಪ್ರಕಟಪಡಿಸುತ್ತದೆ.
ಈ ವಿಚಾರವು, ನೀವು ಒಂದೇ ಗೋಧಿಯಿಂದ ಬ್ರೆಡ್, ಚಪಾತಿ, ಸಮೋಸ ಮತ್ತು ಹಲ್ವಾ ಮಾಡುವುದಕ್ಕೆ, ಹೋಲುವಂಥದ್ದು.
ಈ ಬ್ರಹ್ಮಾಂಡವು ಬಹಳ ವೈವಿಧ್ಯತೆಯಿಂದ ತುಂಬಿದೆ, ಆದರೂ, ಇದು ಒಂದು ಕಂಪನದಿಂದ, ಒಂದು ಚೈತನ್ಯದಿಂದ ರಚಿಸಲ್ಪಟ್ಟಿದೆ, ಮತ್ತು ಅದನ್ನೇ ಅವರು ದೇವ ಕಣ ಎಂದು ಕರೆಯುತ್ತಾರೆ.
ಸೃಷ್ಟಿಯ ಈ ಎಲ್ಲಾ ವೈವಿಧ್ಯತೆಗಳು ಆ ಒಂದು ವಸ್ತುವಿನಿಂದ ಉಂಟಾಗಿವೆ.