ಭಾನುವಾರ, ಅಕ್ಟೋಬರ್ 14, 2012

ಮನೋಭಾವ


೧೪ ಅಕ್ಟೋಬರ್ ೨೦೧೨
ಬೆಂಗಳೂರು, ಭಾರತ


ಚಂಚಲತೆಯು ಮನಸ್ಸಿನ ಸ್ವಭಾವ, ಹೇಗೆ ನೀರಿನ ಸ್ವಭಾವವು ಹರಿಯುವುದಾಗಿದೆಯೋ ಹಾಗೆ.

ಈಗ, ನೀವು ಮನಸ್ಸಿನ ಚಂಚಲತೆಯನ್ನು ಹೇಗೆ ಕಡಿಮೆಗೊಳಿಸುತ್ತೀರಿ?
ಅದು ಅಭ್ಯಾಸ ಮತ್ತು ವೈರಾಗ್ಯಗಳ ಮೂಲಕ.

ವೈರಾಗ್ಯವೆಂದರೇನು?
ಕೆಲವೊಮ್ಮೆ, ನೀವು ಉದ್ವಿಗ್ನರಾದಾಗ, "ನನಗೇನೂ ಬೇಡ, ಸಾಕಪ್ಪಾ ಸಾಕು" ಎನ್ನುತ್ತೀರಿ. ಇದು ಬೇಸರಗೊಂಡಾಗ ಅನುಭವವಾಗುವ ಒಂದು ರೀತಿಯ ವೈರಾಗ್ಯ. ಇದನ್ನು ಸ್ಮಶಾನ ವೈರಾಗ್ಯವೆನ್ನಲಾಗುತ್ತದೆ.

ಎರಡನೆಯ ತರದ ವೈರಾಗ್ಯವು, ನೀವು ಅರಿವಿನಿಂದ, "ನನಗೇನೂ ಬೇಡ, ನನಗೆ ಸಾಕಷ್ಟು ದೊರಕಿದೆ (ತೃಪ್ತಿ). ಜಗತ್ತಿನಲ್ಲಿರುವುದೆಲ್ಲಾ ಬದಲಾಗುತ್ತಿರುತ್ತದೆ, ಯಾವುದೂ ಶಾಶ್ವತವಲ್ಲ. ನನಗೆ ಕೆಲವೊಂದಿಲ್ಲದ್ದರೂ ಪರವಾಗಿಲ್ಲ" ಎಂದು ಹೇಳುವಾಗ.
ಇದು ಎರಡನೆಯ ರೀತಿಯ ವೈರಾಗ್ಯ ಮತ್ತು ಇದನ್ನು ಜ್ಞಾನ ವೈರಾಗ್ಯವೆನ್ನಲಾಗುತ್ತದೆ.

ನಮ್ಮಲ್ಲಿ ಇರಬೇಕಾಗಿರುವುದು ಜ್ಞಾನ ವೈರಾಗ್ಯ, ಸ್ಮಶಾನ ವೈರಾಗ್ಯವಲ್ಲ.

ಮನಸ್ಸು ಯಾವಾಗಲೂ ಸುಖದ ಕಡೆಗೆ ಚಲಿಸುತ್ತದೆ. ನಮ್ಮಲ್ಲಿ ಜ್ಞಾನ ಮತ್ತು ವೈರಾಗ್ಯಗಳಿದ್ದರೆ ಎಲ್ಲಾ ಸುಖವು ನಮ್ಮ ಕಡೆಗೆ ಬರುತ್ತದೆ.
ಅಭ್ಯಾಸದಿಂದ ಬರುವ ಸುಖವು ಶ್ರೇಷ್ಠ ಎಂದು ಹೇಳಲಾಗಿದೆ.

ಪ್ರತಿಯೊಬ್ಬರೂ ಈ ಎರಡರಲ್ಲಿ ಕನಿಷ್ಠ ಒಂದು ವಿಧದ ವೈರಾಗ್ಯವನ್ನಾದರೂ ಅನುಭವಿಸಬೇಕು. "ನನಗೆ ಬೇಕಾದಷ್ಟಾಯಿತು" ಎಂದು ಅರಿವಿನಿಂದ ಮತ್ತು ತೃಪ್ತಿಯಿಂದ ಹೇಳುವುದು ಉತ್ತಮ. ಅದು ಉನ್ನತ ರೀತಿಯ ವೈರಾಗ್ಯ!