ಮಂಗಳವಾರ, ಡಿಸೆಂಬರ್ 25, 2012

ನಿತ್ಯ ನೂತನರು ನೀವು


ಬಾದ್ ಆಂತೊಗಾಸ್ಟ್ (ಜರ್ಮನಿ)
೨೫ ದಶಂಬರ ೨೦೧೨

ಗತ್ತಿನ ಎಲ್ಲೆಡೆಯ ಜನರೂ ಇಲ್ಲಿದ್ದಾರೆ, ಅದು ಸಂತೋಷ!
ಇದು ನಮ್ಮ ಕುಟುಂಬ ಸಮ್ಮಿಲನ! ಜಗತ್ತಿನ ಎಲ್ಲೆಡೆಯಿಂದ, ನಾವು ಕ್ರಿಸ್ಮಸ್ ಆಚರಿಸುತ್ತಿದ್ದೇವೆ.
ಈ ಕ್ರಿಸ್ಮಸ್ ಗಿಡವು ಹೇಳುತ್ತಿದೆ, "ನನ್ನಂತಾಗಿ, ಎಂದಿಗೂ ತಾಜಾ, ಎತ್ತರದ ನಿಲುವು ಮತ್ತು ತುಂಬಾ ಉಡುಗೊರೆಗಳು".
ಹಾಗೆಯೇ ಪ್ರತಿಯೊಬ್ಬರೂ ಈ ಕ್ರಿಸ್ಮಸ್ ಗಿಡದಂತೆ ಬೆಳಕಿನಿಂದ ತುಂಬಿದ್ದೀರಿ, ಮಿನುಗುವ ಉಡುಗೊರೆಗಳನ್ನು ಹೊತ್ತಿದ್ದೀರಿ ಮತ್ತು ಎಂದಿಗೂ ತಾಜಾ!
ಮುಂದಿನ ವರ್ಷದಲ್ಲಿ ಹೆಚ್ಚು ಹೆಚ್ಚು ಜನರ ಅಧ್ಯಾತ್ಮಿಕ ಪಥದಲ್ಲಿ ನಡೆಯಲಿದ್ದಾರೆ ಮತ್ತು ಅದು ಸುಲಭವೂ ಆಗಲಿದೆ.
೨೦೧೩ರಲ್ಲಿ ನಾವು ಎರಡು ಬಗೆಯ ಹೊಸ ಕ್ರಿಯೆಗಳನ್ನು ಕಲಿಸಲಿದ್ದೇವೆ ಮತ್ತು ಅದು ತುಂಬಾ ಚೆನ್ನಾಗಿದೆ.

ಪ್ರಶ್ನೆ: ಈ ಹೊಸ ಯುಗದ ಬಗ್ಗೆ ಹೇಳುವಿರಾ? ಮಹಿಳೆಯರಿಗೆ ಹೆಚ್ಚಿನ ಪಾತ್ರ ದೊರೆಯಲಿದೆಯೇ?
ಶ್ರೀ ಶ್ರೀ ರವಿ ಶಂಕರ್:  ಮಹಿಳೆಯರಿಗೆ ದೊಡ್ಡ ಪಾತ್ರಗಳು ದೊರೆಯಲಿವೆ. ಈಗಲೇ ಮಹಿಳೆಯರು ದೊಡ್ಡ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ, ಆದರೆ ಇನ್ನೂ ದೊಡ್ದ ಪಾತ್ರಗಳಾಗಲಿವೆ.
ನಿಮಗೆ ಗೊತ್ತಲ್ವೇ, ೨೧ ಡಿಸೆಂಬರ್ ಬಗ್ಗೆ ತುಂಬಾ ಆತಂಕವಿತ್ತು. ಓ ದೇವರೇ, ೨೧ ಡಿಸೆಂಬರ್ ದಿನ, ಜಗತ್ತೇ ಕೊನೆಗೊಳ್ಳಲಿದೆ ಎಂದು ಜನರು ವದಂತಿ ಹಬ್ಬಿಸಿದ್ದರು.
ಜನರು ಆಹಾರ ಪದಾರ್ಥ್ಗಳನ್ನ್ನು ಖರೀದಿಸಿ, ತಮ್ಮ ನೆಲಮಾಳಿಗೆಯಲ್ಲಿ ಸಂಗ್ರಹಿಸಿದರು. ಎಷ್ಟೋ ಜನರು ತಮ್ಮ ಮನೆ, ದೇಶಗಳನ್ನು ಬಿಟ್ಟು ಯಾವುದೋ ಬೆಟ್ಟಗಳತ್ತ ಹೋದರು. ಮತ್ತು ಎಷ್ಟೋ ಜನರು ಬೆಂಗಳೂರು ಆಶ್ರಮಕ್ಕೆ ಬಂದರು, ಯಾಕೆಂದರೆ ಆಶ್ರಮವು ಒಂದು ಸುರಕ್ಷಿತ ಸ್ಥಳ ಹಾಗೊ ಉಳಿದ ಜಗತ್ತು ವಿಲೀನವಾಗಲಿದೆ ಎಂದು.
ನಾನು ಇದು ವದಂತಿಯೆಂದು ಹೆಳುತ್ತಾ ಬಂದಿದ್ದೇನೆ.  ಪ್ರಪಂಚದಲ್ಲಿ ತುಂಬಾ ಜನರು ಉಳಿದವರಲ್ಲಿ ಭಯ ಹುಟ್ಟಿಸಿ ಸಂತೋಷಿಸುತ್ತಾರೆ. ಅವರಿಗೆ ತೀವ್ರ ಗತಿಯಲ್ಲಿ ಮಾರಾಟ ಮಾಡಬೇಕಾಗಿದೆ, ಅದಕ್ಕೆ ಭಯ ಹುಟ್ಟಿಸುತ್ತಾರೆ. ಎಂದು ಭಯವಾಗುತ್ತದೋ ಅಂದು ಜನರು ವಸ್ತುಗಳನ್ನು ಕೊಂಡು, ಶೇಖರಿಸುತ್ತಾರೆ. ಆದ್ದರಿಂದ, ಇವೆಲ್ಲಾ ಬರೇ ತಂತ್ರಗಳು!
ಜಗತ್ತು ಮುಂದುವರಿಯತ್ತದೆಂದು ನಾನು ಹೇಳಿದೆ. ಇಂದು ೨೫ ಮತ್ತು ಜಗತ್ತು ದಕ್ಕೆಯಾಗದೆ  ಇದೆ, ಅದು ಮುಂದುವರಿಯುತ್ತಿದೆ. ಅದು ಕೇವಲ ಅಮೇರಿಕನ್ ಚಲನಚಿತ್ರಗಳಲ್ಲಿ ಮಾತ್ರ ನಡೆಯತ್ತದೆ, ಜಗತ್ತು ಕೊನೆಗೊಳ್ಳುವುದು.
ನಾವು ಮಾಡಬೇಕಾದುದೇನೆಂದರೆ, ನಮಗೆ ಲಭಿಸಿದುದೆಲ್ಲದರ ಕಡೆಗೊಮ್ಮೆ ನೋಡಿ ಕೃತಜ್ಞರಾಗುವುದು. ನಾವು ನಮ್ಮ ಜೀವನದಲ್ಲಿ ಬಹಳಷ್ಟನ್ನು ಪಡೆದಿದ್ದೇವೆ, ಮತ್ತು ಭವಿಷ್ಯದಲ್ಲಿ ನಮಗೆ ಏನೆಲ್ಲಾ ಪಡೆಯಬೇಕಾಗಿದೆಯೋ, ಅದನ್ನು ಕೂಡಾ ನಾವು ಪಡೆಯುವೆವು. ಇದರ ಬಗ್ಗೆ ನೀವು ವಿಶ್ವಾಸ ಹೊಂದಬೇಕು.
ಆದುದರಿಂದ, ನೀವು ಏನನ್ನು ಪಡೆದಿರುವಿರೋ ಅದಕ್ಕೆ ಕೃತಜ್ಞರಾಗಿ.
ನೀವು ಯಾವುದಾದರೂ ಸೇವೆಯನ್ನು ಮಾಡಬೇಕಾದಾಗ, ನಿಮಗೆ ಯಾವತ್ತೂ "ನಾನು ಹೆಚ್ಚು ಮಾಡಬೇಕು, ನಾನು ಸಾಕಷ್ಟು ಮಾಡಿಲ್ಲ" ಎಂದು ಅನ್ನಿಸಬೇಕು.
ನೀವು, "ನಾನು ಸಾಕಷ್ಟು ಸೇವೆಯನ್ನು ಮಾಡಿದ್ದೇನೆ ಮತ್ತು ನನಗೆ ಅರ್ಹತೆಯಿದ್ದಷ್ಟು ನನಗೆ ಸಿಗಲಿಲ್ಲ" ಎಂದು ಯೋಚಿಸಿದರೆ, ಆಗ ದುಃಖಿತನಾಗಲಿರುವ ರಹಸ್ಯ ಇದುವೇ. ನೀವು ದುಃಖಿತರಾಗಲು ಬಯಸುವುದಾದರೆ ಆಗ ನೀವು, "ನನಗೇನು ಸಿಗಬೇಕೋ ಅದು ನನಗೆ ಸಿಗಲಿಲ್ಲ" ಎಂದು ಬೇಡಿಕೆಯೊಡ್ಡಬಹುದು.
ನಿಮ್ಮಲ್ಲಿ ಏನಿಲ್ಲವೋ ಅದಕ್ಕೆ ಬೇಡಿಕೆಯೊಡ್ಡುವುದು ನಿಮ್ಮನ್ನು ದುಃಖಿತರಾಗಿಸಬಹುದು, ಮತ್ತು ನೀವು, "ನಾನು ಸಾಕಷ್ಟು ಮಾಡಿದ್ದೇನೆ ಮತ್ತು ನಾನು ಇನ್ನೂ ಹೆಚ್ಚಿನದೇನನ್ನೂ ಮಾಡಬೇಕಾಗಿಲ್ಲ" ಎಂದು ಯೋಚಿಸಿದರೆ, ಆಗ ಕೂಡಾ ನೀವು ದುಃಖಿತರಾಗಬಹುದು. ಅದು ನಿಜವಾಗಿ ಒಂದು ಉದ್ವಿಗ್ನವಾಗಿರುವ, ಕ್ರೋಧಗೊಂಡಿರುವ ಮತ್ತು ಖಿನ್ನವಾಗಿರುವ ಮನಸ್ಸಿನ ಸಂಕೇತವಾಗಿದೆ.
ಆದುದರಿಂದ ಮಾಡುವ ವಿಷಯಕ್ಕೆ ಬಂದಾಗ, "ನಾನು ಇನ್ನೂ ಸ್ವಲ್ಪ ಹೆಚ್ಚಿನದನ್ನು ಹೇಗೆ ಮಾಡಬಹುದು? ಈ ಪ್ರಪಂಚವನ್ನು ನಾನು ಒಂದು ಉತ್ತಮ ಸ್ಥಳವನ್ನಾಗಿ ಹೇಗೆ ಮಾಡಬಹುದು? ಪ್ರಪಂಚಕ್ಕೆ ನಾನು ಇನ್ನೂ ಹೆಚ್ಚಿನದೇನನ್ನು ನೀಡಬಹುದು?" ಎಂದು ಹೇಳಿ. ಇದು ನಮ್ಮ ಯೋಚನಾ ಲಹರಿಯಾಗಿರಬೇಕು.
ಮತ್ತು ಪಡೆಯುವ ವಿಷಯಕ್ಕೆ ಬಂದಾಗ, "ನನಗೇನು ಸಿಗಬೇಕಾಗಿತ್ತೋ ಅದು ನನಗೆ ಲಭಿಸಿದೆ ಮತ್ತು ನನಗೇನು ಸಿಗಬೇಕೋ ಅದು ನನಗೆ ಸಿಗುತ್ತದೆ. ನನಗೇನು ಸಿಗಬೇಕೋ ಅದನ್ನು ನನಗೆ ಪ್ರಕೃತಿಯು ಒದಗಿಸುವುದು!" ಎಂದು ಹೇಳಿ.
ಈ ವಿಶ್ವಾಸವು ನಿಮ್ಮನ್ನು ಸಂತೋಷಗೊಳಿಸುತ್ತದೆ ಮತ್ತು "ಪ್ರಪಂಚಕ್ಕಾಗಿ ನಾನು ಇನ್ನೂ ಹೆಚ್ಚಿನದನ್ನು ಮಾಡಲು ಬಯಸುತ್ತೇನೆ" ಎಂಬ ಈ ಮನೋಭಾವವು, ಆ ದಿಕ್ಕಿನಲ್ಲಿ ಸಾಗಲಿರುವ ಚೈತನ್ಯವನ್ನು ನಿಮಗೆ ನೀಡುತ್ತದೆ.