ಶುಕ್ರವಾರ, ಡಿಸೆಂಬರ್ 28, 2012

ಪವಾಡ


೨೮ ಡಿಸೆಂಬರ್ ೨೦೧೨
ಬಾದ್ ಅಂತೋಗಾಸ್ತ್, ಜರ್ಮನಿ

ನೀವು ಹಲವಾರು ಗುರು-ಕಥೆಗಳನ್ನು ಕೇಳಿದ್ದೀರಿ, ಅಲ್ಲವೇ?ಹಾಗಾಗಿ ನಾನು ಈಗ ನಿಮಗೆ ಒಂದು ಭಕ್ತ-ಕಥೆಯನ್ನು ಹೇಳುತ್ತೇನೆ.

ನವೆಂಬರ್.ನ ಕೊನೆಯ ತಿಂಗಳಲ್ಲಿ, ನಾನು ಮಹಾರಾಷ್ಟ್ರದ ಕೆಲವು ಗ್ರಾಮಗಳಲ್ಲಿ ಪ್ರಯಾಣ ಮಾಡುತ್ತಿದ್ದೆ.ನಾನೆಂದೂ ಹೋಗಿರದಿದ್ದ ಕೆಲವು ಹಳ್ಳಿ ಮತ್ತು ಜಿಲ್ಲೆಗಳಾಗಿದ್ದವು.ನನ್ನನ್ನು ಭೇಟಿಯಾಗಲೂ ಬಂದ ಬಹಳ ಜನರಿದ್ದರು.
ಒಂದು ಹಳ್ಳಿಯಲ್ಲಿ ನಾನು ನನ್ನ ಕಾರ್ಯದರ್ಶಿಗೆ ಹೇಳಿದೆನು, ’ಮೂರು ಜನ ತಮ್ಮ ಮೊಬೈಲ್ ಕಳೆದುಕೊಂಡಿದ್ದಾರೆ ಮತು ಅವರು ಬಹಳ ಬಡ ಮಂದಿ.ಹಾಗಾಗಿ ನನ್ನ ಚೀಲದಲ್ಲಿ ಮೂರು ಹೊಸ ಮೊಬೈಲ್ ಫೋನ್.ಗಳನ್ನು ಹಾಕು.’
ನಾನು ಅಲ್ಲಿಗೆ ಹೋದಾಗ, ಅಲ್ಲಿ ೨೦೦೦ದಿಂದ ೨೫೦೦ ಸ್ವಯಂಸೇವಕರು ಮತ್ತು ೨೦೦,೦೦೦ ಜನರ ಸಂಉಹವಿತ್ತು.

ಕಾರ್ಯಕ್ರಮದ ನಂತರ ಸ್ವಯಂ ಸೇವಕರ ಕೂಟದಲ್ಲಿ, ನಾನು ಹೇಳಿದೆ, ’ನಿಮ್ಮಲ್ಲಿ ಮೂರು ಜನ ಮೊಬೈಲ್ ಕಳೆದುಕೊಂಡಿದ್ದೀರಿ.ನನಗದು ತಿಳಿದಿದೆ.ನಿಮ್ಮಲ್ಲಿ ಮೊಬೈಲ್ ಕಳೆದುಕೊಂಡಿರುವವರು ನಿಂತುಕೊಳ್ಳಿ’, ಮತ್ತು ಅಲ್ಲಿ ಮೂರೇ ಜನರು ನಿಂತುಕೊಂಡರು.
ಅಲ್ಲೊಬ್ಬ ಮಹಿಳೆ ನಿಂತುಕೊಂಡಿದ್ದಳು, ನಾನವಳಿಗೆ ಹೇಳಿದೆ, ’ನೋಡು ನೀನು ನನ್ನ ಭಾವಚಿತ್ರದ ಮುಂದೆ ಕಳೆದ ವಾರ ಅಳುತ್ತಿದ್ದಿ. ನಿನಗೇನು ಮಾಡಬೇಕೆಂದು ತಿಳಿದಿರಲಿಲ್ಲ, ಅದೊಂದು ದುಬಾರಿ ಮೊಬೈಲ್ ಆಗಿದ್ದು ಎರಡು ಮೂರು ತಿಂಗಳ ಗಳಿಕೆಯಷ್ಟು ಬೆಲೆಯುಳ್ಳದ್ದರಿಂದ, ನಿನ್ನ ಕುಟುಂಬವನ್ನು ಹೇಗೆ ಎದುರಿಸುವುದೆಂದು ತಿಳಿದಿರಲಿಲ್ಲ. ಇಲ್ಲಿ, ಈ ಹೊಸದನ್ನು ತೆಗೆದುಕೊ.’

ನಾನು ಇದನ್ನು ಮಾಡುತ್ತಿದ್ದಾಗ, ಗುಂಪಿನಿಂದ ಒಬ್ಬ ಬಾಲಕ ನನ್ನ ಬಳಿಗೆ ಬಂದು ತನ್ನ ಕಥೆಯನ್ನು ಹಂಚಿಕೊಂಡ. ಅವನು ಒಂದು ಉನ್ನತ ಧ್ಯಾನ ಶಿಬಿರದಲ್ಲಿದ್ದ ಮತ್ತು ಅವನ ಹೆಂಡತಿ ಮನೆಯಲ್ಲಿದ್ದಳು, ಅವನಿಗೆ ಅವಳೊಂದಿಗೆ ಮಾತನಾಡಬೇಕಿತ್ತು. ಅವನ ಮೊಬೈಲ್.ನಲ್ಲಿ ಬ್ಯಾಟರಿ ಇರಲಿಲ್ಲ ಮತ್ತು ಚಾರ್ಜರ್ ಮನೆಯಲ್ಲಿ ಮರೆತಿದ್ದ. ಹಾಗಾಗಿ ಅವನು ತನ್ನ ಫೋನನ್ನು ನನ್ನ ಭಾವಚಿತ್ರದ ಮುಂದಿಟ್ಟು ಕೇಳಿಕೊಂಡ, ’ಗುರುದೇವ, ಈ ಫೋನ್ ಚಾರ್ಜ್ ಆಗಲಿ.’
ಮರುದಿನ ಮುಂಜಾನೆ ಅವನು ಎದ್ದಾಗ, ಆ ಫೋನ್ ಪೂರ್ತಿ ಚಾರ್ಜ್ ಆಗಿತ್ತು.
ಈ ಹುಡುಗ ತನ್ನ ಫೋಣ್ ನನ್ಗೆ ತೋರಿಸಿ ಹೇಳಿದ, ’ನೋಡಿ ಒಂದೂವರೆ ವರ್ಷದಿಂದ ನಾನು ನನ್ನ ಚಾರ್ಜರ್ ಎಸೆದು, ಈಗ ನಾನು ನನ್ನ ಫೋನನ್ನು ಕೇವಲ ನಿಮ್ಮ ಭಾವಚಿತ್ರದ ಮುಂದಿಡುತ್ತೇನೆ ಮತ್ತು ಅದು ಚಾರ್ಜ್ ಆಗುತ್ತದೆ.’
ಅವನು ತನ್ನ ಚಾರ್ಜರ್ ಎಸೆದು ಬಿಟ್ಟ!
ನಾನು ಹೇಳಿದೆ, ’ಇದು ನಿಜವಾಗಿಯೂ ಒಂದು ವಿಸ್ಮಯ.ನಾನೂ ನನ್ನ ಫೋನಿಗೆ ಚಾರ್ಜರ್ ಉಪಯೋಗಿಸಬೇಕು, ಮತ್ತು ನನ್ನ ಭಕ್ತ ತನ್ನ ಮೊಬೈಲನ್ನು ನನ್ನ ಭಾವಚಿತ್ರದ ಮುಂದಿಟ್ಟು ಚಾರ್ಜ್ ಮಾಡುತ್ತಾನೆ.’
ನೋಡಿ ಭಕ್ತರು ಎಷ್ಟು ಶಕ್ತಿಶಾಲಿಗಳಾಗಬಹುದು.

ಇದೊಂದು ವಿಸ್ಮಯಕಾರಿ ಕಥೆ ಎಂದು ನನಗನ್ನಿಸಿತು. ಹಾಗೆ ನಾನು ಬೆಂಗಳೂರಿಗೆ ಮರಳಿದೆ ಮತ್ತು ಅಲ್ಲಿ ರಶ್ಶ್ಯ, ಪೋಲಂಡ್ ಮತ್ತು ಯುರೋಪಿನಾದ್ಯಂತದಿಂದ ಬಂದ ಸುಮಾರು ೧೫೦ ಜನರಿದ್ದರು, ಮತ್ತು ನಾನವರೊಂದಿಗೆ ಈ ಕಥೆಯನ್ನು ಹಂಚಿಕೊಂಡೆ, ’ನೋಡಿ ನನಗೆ ನನ್ನ ಫೋನನ್ನು ಚಾರ್ಜರ್ ಇಲ್ಲದೇ ಚಾರ್ಜ್ ಮಾಡಲಾಗುವುದಿಲ್ಲ ಮತ್ತು ಈ ಭಕ್ತ ತನ್ನ ಚಾರ್ಜರ್ ಎಸೆದ ಮತ್ತು ಅವನ ಫೋನನ್ನು ನನ್ನ ಭಾವಚಿತ್ರದ ಮುಂದಿಟ್ಟು ಚಾರ್ಜ್ ಮಾಡುತ್ತಾನೆ.’
ಆಗ ಅಲ್ಲಿದ್ದ ೧೫೦ ಜನರು ಹೇಳಿದರು, ’ಹೌದು, ಅದು ನಮಗೂ ಆಗುತ್ತದೆ.’
ನಾನು ಇದನ್ನು ಹೇಳಿದ್ದು ಅವರಿಗೆ ಯಾವುದೇ ಆಶ್ಚರ್ಯ ತರಲಿಲ್ಲ.
ಒಬ್ಬ ರಶ್ಶ್ಯನ್ ಹೇಳಿದ, ’ಅದು ನನಗೂ ಆಯಿತು.ಒಂದು ದಿನ ನಾನೂ ನನ್ನ ಫೋನನ್ನಿಟ್ಟು ಅದು ಚಾರ್ಜ್ ಆಗಲಿ ಎಂದು ಪ್ರಾರ್ಥಿಸಿದೆ, ಮತ್ತು ಅದು ನಿಜವಾಗಿ ಚಾರ್ಜ್ ಆಗಿಬಿಟ್ಟಿತು!’
ಪೋಲಂಡ್ ಮತ್ತು ಸ್ಕಾಂಡಿನೇವಿಯಾದ ಭಕ್ತರೂ ಇದೇ ಅನುಭವಗಳನ್ನು ಹಂಚಿಕೊಂಡರು.

ಇನ್ನೊಬ್ಬ ವ್ಯಕ್ತಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಹೇಳಿದರು, ’ನನ್ನ ಕಾರಿನ ಪೆಟ್ರೋಲ್ ಮುಗಿದು , ಫ಼್ಯೂಲ್ ಮಾರ್ಕರ್ ಶೂನ್ಯದತ್ತ ತಿರುಗಿ ಟ್ಯಾಂಕ್ ಖಾಲಿಯಾಗಿರುವುದನ್ನು ಸೂಚಿಸುತ್ತಿತ್ತು. ಆದರೆ ನಾನು ಡ್ರೈವ್ ಮಾಡುತ್ತಾ ಹೋದೆ, ಹಾಗೆಯೇ ೧೧೭ಕ್ಮ್ ದೂರ ಖಾಲಿ ಟ್ಯಾಂಕ್.ನೊಂದಿಗೆ ಗಾಡಿ ಓಡಿಸಿದೆ.’

ಇದು ಹೇಗೆ ಸಾಧ್ಯ?ಇದು ಎಲ್ಲಾ ಗೋಚರ ಪ್ರಕೃತಿಯ ನಿಯಮಗಳನ್ನು ಮುರಿಯುತ್ತಿರುವಂತೆ ಕಾಣುತ್ತದೆ.
ನಾನು ಹೇಳುತ್ತೇನೆ, ನಾವು ಜೀವನದಲ್ಲಿ ಪವಾಡಗಳು ನಡೆಯಲು ಅವಕಾಶ ನೀಡಬೇಕು.ಯಾರದೇ ಜೀವನ ಪವಾಡರಹಿತವಾಗಿರುವುದಿಲ್ಲ. ನಾವೇ ಅದನ್ನು ನಂಬುವುದಿಲ್ಲ.
ಈ ಜಗತ್ತಿನ ಎಲ್ಲಾ ಸಂಪ್ರದಾಯ ಹಾಗೂ ತತ್ತ್ವವಾದಗಳು ಪವಾಡಗಳ ಮೇಲೆ ಆಧಾರಿತವಾಗಿವೆ.ವಾಸ್ತವದಲ್ಲಿ ಅವು ಪವಾಡಗಳ ಮೇಲೆ ಪ್ರವರ್ಧಿಸುತ್ತವೆ.
ಬೈಬಲ್.ನ ಎಲ್ಲಾ ಪವಾಡಗಳನ್ನು ತೆಗೆದು ಬಿಡಿ ಆಗ ನಿಮಗೆ ಬೈಬಲ್ ಇಲ್ಲವೇನೋ ಎಂಬಂತೆ ಅನಿಸುತ್ತದೆ.
ಹಾಗೆಯೇ ನೀವು ಜಗತ್ತಿನ ಯಾವುದೇ ಧರ್ಮಗ್ರಂಥಗಳನ್ನು ನೋಡಿದರೆ, ಅದು ಪೂರ್ಣವಾಗಿ ಪವಾಡಗಳನ್ನು ಹೊಂದಿದೆ.ಆದರೆ ನಾವು ಅಂದುಕೊಳ್ಳುವುದು, ಪವಾಡಗಳು ಹಿಂದಿನ ದಿನಗಳ ಮಾತು, ವರ್ತಮಾನದ್ದಲ್ಲ ಎಂದು.ನಾನು ಹೇಳುತ್ತೇನೆ ಅವು ಇಂದು ನಡೆಯಲು ಸಾಧ್ಯ, ವರ್ತಮಾನದಲ್ಲಿ.

ಒಮ್ಮೆ ನಾನು ಬಾಸ್ಟನ್ ವಿಮಾನ ನಿಲ್ದಾಣದಲ್ಲಿದ್ದಾಗ ಒಬ್ಬ ಭಕ್ತ ನನಗೆ ಊಟ ತಂದು ಕೊಟ್ಟ, ಮತ್ತು ನನ್ನ ಜೊತೆ ಪ್ರಯಾಣಿಸುತ್ತಿದ್ದ ಇನ್ನೂ ನಾಲ್ಕು ಮಂದಿಗೂ ತಂದಿದ್ದ. ನನ್ನ ಜೊತೆ ಎಷ್ಟು ಜನರಿದ್ದರು, ನಿಮಗೆ ಗೊತ್ತಾ? ಸುಮಾರು ೬೦ರಿಂದ ೭೦ ಮಂದಿ ಇದ್ದರು, ಮತ್ತು ನಾಲ್ಕು ಜನರಿಗೆಂದು ತಂದಿದ್ದ ಆಹಾರವು ೬೦ ಜನರೊಳಗೆ ಹಂಚಲ್ಪಟ್ಟಿತ್ತು.ಪ್ರತಿಯೊಬ್ಬರೂ ಆಹಾರ ಸೇವಿಸಿದರು.ಇದು ನಿಮಗೆ ಆಶ್ಚರ್ಯ ತರುತ್ತದೆ - ಇದು ಹೇಗೆ ಸಾಧ್ಯ?!

ಇದಕ್ಕೆ ಒಂದು ವೈಜ್ಞಾನಿಕ ವಿವರಣೆಯೂ ಇದೆ.
ಈ ಸಂಪೂರ್ಣ ಜಗತ್ತು ಕಂಪನಗಳಲ್ಲದೇ ಬೇರೇನಲ್ಲ; ಎಲ್ಲವೂ ಕಂಪನವೇ.ವಸ್ತುವೂ ಕಂಪನಗಳದ್ದೇ ಸಮೂಹ. ವಸ್ತು ಮತ್ತು ಶಕ್ತಿ ಒಂದೇ, ಅವು ಕೇವಲ ಕಂಪನಗಳು.ನೋಡಿ, ನೀವೊಂದು ಸ್ವಯಂ-ಚಾಲಿತ ಗಾಜಿನ ಬಾಗಿಲನ್ನು ಸಮೀಪಿಸಿದಾಗ, ಕೂಡಲೇ ಆ ಗಾಜಿನ ಬಾಗಿಲು ತೆರೆದುಕೊಳ್ಳುತ್ತದೆ.ಈ ವಿದ್ಯಮಾನ ೧೦೦-೨೦೦ ವರ್ಷಗಳ ಹಿಂದೆ ನಡೆದಿದ್ದರೆ ಕಲ್ಪಿಸಿಕೊಳ್ಳಿ.ಆಗಿನ ಜನರಿಗೆ ಹುಚ್ಚು ಹಿಡಿಯುತ್ತಿತ್ತು.ಅವರು ಇದು ಹೇಗೆ ಸಾಧ್ಯ ಎಂದು ವಿಸ್ಮಯ ಪಡುತ್ತಿದ್ದರು.ನೀವು ಸುಮ್ಮನೆ ಅದರತ್ತ ಹೋದರೆ ಬಾಗಿಲು ತೆರೆದುಕೊಳ್ಳುತ್ತದೆ.
ಇಂದು ಇದು ಜೈವಿಕ ಶಕ್ತಿಯಿಂದ ಸಾಧ್ಯ ಎಂದು ನಮಗೆ ತಿಳಿದಿದೆ.ನಮ್ಮ ಶರೀರದಿಂದ ಶಕ್ತಿ ಹೊರಹೊಮ್ಮುತ್ತಿದೆ.

ನಿಮಗೆ ಗೊತ್ತೇ, ಕೆಲವು ಲಾಕ್.ಗಳನ್ನು ಕೇವಲ ಒಬ್ಬರಿಂದಲೇ ತೆರೆಯಲು ಸಾಧ್ಯ.
ನೀವು "ಬಯೋಮೆಟ್ರಿಕ್ ಲಾಕ್"ಗಳ ಬಗ್ಗೆ ಕೇಳಿರಬಹುದು.ಆ ಲಾಕ್ನಲ್ಲಿ ನಿಮ್ಮ ಶಕ್ತಿ ಅಡಕಗೊಂಡಿರುವುದಾದರೆ, ಮತ್ತಾರೂ ಅದನ್ನು ತೆರೆಯಲಾರರು.ನೀವಷ್ಟೇ ಅದನ್ನು ಮುಟ್ಟಿದಾಗ ಅದು ತೆರೆದುಕೊಳ್ಳುತ್ತದೆ.ಅದರ ಅರ್ಥ ಎಲ್ಲರೂ ಶಕ್ತಿಯನ್ನು ಹೊರಸೂಸುತ್ತಿದ್ದಾರೆ.

ನೀವು ಪ್ರೀತಿ ಹಾಗೂ ಭಕ್ತಿಯ ಸ್ಥಿತಿಯಲ್ಲಿದ್ದಾಗ, ನಿಮ್ಮ ಶಕ್ತಿ ಅಷ್ಟು ಪ್ರಬಲವಾಗಿ ಹಾಗೂ ದೊಡ್ಡದಾಗಿರುತ್ತದೆ ಅಂದರೆ ನಿಮ್ಮ ಮೊಬೈಲ್ ಚಾರ್ಜ್ ಆಗಬೇಕು ಎಂದು ನೀವು ಇಚ್ಚಿಸಿದರೆ ಅದು ಚಾರ್ಜ್ ಆಗಿ ಬಿಡುತ್ತದೆ.
ಇದು ಬಯೋಮೆಟ್ರಿಕ್ ಲಾಕ್.ನ ತೀಕ್ಷ್ಣ ಶಕ್ತಿಯಂತೆ.ನೀವು ಬಾಗಿಲನ್ನು ಸಮೀಪಿಸಿದಾಗ, ಆ ಬಾಗಿಲ ಮೇಲಿನ ಸಣ್ಣ ಪೆಟ್ಟಿಗೆ ನಿಮ್ಮ ಶಕ್ತಿಯನ್ನು ಗ್ರಹಿಸಿ ಬಾಗಿಲು ತೆರೆದುಕೊಳ್ಳುತ್ತದೆ.

ಹಾಗೆಯೇ, ಈ ಬ್ರಹ್ಮಾಂಡವು ಕೇವಲ ಶಕ್ತಿಯಿಂದ ಮಾಡಲ್ಪಟ್ಟಿದೆ.ಎಲ್ಲವೂ ಶಕ್ತಿಯೇ.ಆದ್ದರಿಂದ ಅದ್ಭುತಗಳಿಗೆ ನೆರವೇರಲು ಅವಕಾಶ ಕೊಡಿ.
ಇದೆಲ್ಲವೂ ಯಾವಾಗ ಸಾಧ್ಯ? ಇದು ನೀವು ಖಾಲಿ ಮತ್ತು ಟೊಳ್ಳಾಗಿದ್ದಾಗ ಸಾಧ್ಯ. ನಿಮ್ಮ ಹೃದಯ ಮತ್ತು ಮನಸ್ಸು ಶುದ್ಧ ಹಾಗೂ ಪ್ರಶಾಂತವಾಗಿದ್ದಾಗ, ಅಂಥ ಸ್ಥಿತಿಯಲ್ಲಿ  ಧನಾತ್ಮಕ ಶಕ್ತಿ ನಿಮ್ಮಲ್ಲಿ ಉದಯಿಸುತ್ತದೆ. ಆದರೆ ನಿಮ್ಮ ಮನಸ್ಸು ನೇತ್ಯಾತ್ಮಕತೆಯಿಂದ ತುಂಬಿದ್ದಾಗ, ಮತ್ತು ನೀವು ಮಾಮಸಿಕ ಒತ್ತಡದಲ್ಲಿದ್ದರೆ; ಅಥವಾ ನೀವು ಇದರ ಕುರಿತೂ ಅದರ ಕುರಿತೂ ದೂರುತ್ತಿದ್ದರೆ, ಆಗ ಯಾವುದೇ ಅದ್ಭುತ ಸಾಧ್ಯವಿಲ್ಲ. ನಿತ್ಯ ನಡೆಯಬೇಕಾದ ಕೆಲಸಗಳೂ ಆಗುವುದಿಲ್ಲ. ಸಾಮಾನ್ಯ ಕೆಲಸಗಳು ನಡೆಯುವುದಿಲ್ಲ ಏಕೆಂದರೆ ಶಕ್ತಿಯು ಕೆಳಮಟ್ಟದಲ್ಲಿದೆ ಮತ್ತು ನೇತ್ಯಾತ್ಮಕವಾಗಿದೆ.
ಶಕ್ತಿಯು ಮೇಲ್ಮಟ್ಟದಲ್ಲಿದ್ದಾಗ, ನೀವು ಅಸಾಧ್ಯವೆಂದುಕೊಂಡದ್ದು ನೆರವೇರಲು ಪ್ರಾರಂಭವಾಗುತ್ತದೆ.

ಒಬ್ಬ ವಿಜ್ಞಾನಿಯ ದ್ರೃಷ್ಟಿಕೋನದಿಂದಲೂ, ಅದ್ಭುತಗಳು ನಡೆಯುವುದು ಖಂಡಿತ ಸಾಧ್ಯ.
ಯಾವುದೂ ಅಸಾಧ್ಯವಲ್ಲ. ನೀವು ಸುಮ್ಮನೆ ಇವೆಲ್ಲವೂ ಹೇಗೆ ನೆರವೇರುತವೆ ಎಂಬುದರ ಗತಿಜ್ಞಾನವನ್ನು, ಮತ್ತು ಚೈತನ್ಯದ ಯಾವ ಸ್ಥಿತಿಯಲ್ಲಿ ಇವೆಲ್ಲವೂ ಸಾಧ್ಯ ಎಂದು ತಿಳಿದಿರಬೇಕು.

ಇಲ್ಲಿ ನಿಮ್ಮಲ್ಲಿ ಎಷ್ಟು ಮಂದಿಗೆ ಒಂದು ಅದ್ಭುತದ ಆ ಅನುಭವವಾಗಿದೆ?(ಹಲವರು ಕೈ ಎತ್ತುವರು).
ನೋಡಿ! ಇಲ್ಲಿ ನೀವೆಲ್ಲರೂ ಒಂದಿಲ್ಲ ಇನ್ನೊಂದು ಅದ್ಭುತವನ್ನು ಅನುಭವಿಸಿದ್ದೀರಿ.ಹಾಗೆ ನಾವು ಆ ಆಳವಾದ ಸಂಪರ್ಕವನ್ನು ಅನುಭವಿಸುತ್ತಿದ್ದಾಗ, ನಾವು ಆ ಪ್ರೀತಿ ಮತ್ತು ಭಕ್ತಿಯನ್ನು ಅನುಭವಿಸುತ್ತಿದ್ದಾಗ, ಇದೆಲ್ಲವು ಅನಾಯಾಸವಾಗಿ ನಡೆಯುತ್ತವೆ.

ಈಗ ನೀವು, "ನನ್ನ ಭಕ್ತಿಯನ್ನು ನಾನು ಹೇಗೆ ಹೆಚ್ಚಿಸಿಕೊಳ್ಳಲಿ?" ಎಂದು ಕೇಳಿದರೆ, ನಾನು ಹೇಳುತ್ತೇನೆ, ಅದನ್ನು ಹೆಚ್ಚಿಸಲು ಯಾವುದೇ ದಾರಿಯಿಲ್ಲ. ಅದನ್ನು ಮಾಡಲು ಪ್ರಯತ್ನಿಸಬೇಡಿ, ಸುಮ್ಮನೆ ವಿಶ್ರಮಿಸಿ.
ಇದುವೇ ನಿಜವಾದ ತೊಂದರೆ.
ಬಹಳ ಮಂದಿ ನನ್ನನ್ನು ಕೇಳುತ್ತಾರೆ, ’ನಾನು ಹೇಗೆ ಶರಣಾಗಲಿ? ನಾನು ಹೇಗೆ ನನ್ನ ಭಕ್ತಿಯನ್ನು ಹೆಚ್ಚಿಸಲಿ?’ ನಾನು ಹೇಳುತ್ತೇನೆ, ಅದನ್ನು ಮಾಡಲು ಯಾವುದೇ ದಾರಿಯಿಲ್ಲ. ಆದರೆ, ನೀವು ಈದನ್ನು ಕೇಳಿದರೆ, ’ನಾನು ನನ್ನ ನೇತ್ಯಾತ್ಮಕತೆಯಿಂದ ಹೇಗೆ ಮುಕ್ತಿ ಪಡೆಯಬಹುದು?’ ನಾನಾಗ ಹೇಳಬಹುದು, ’ಹೌದು, ಒಂದು ಮಾರ್ಗವಿದೆ.’
ಹೇಗೆ? ಕೇವಲ ಎಚ್ಚೆತ್ತು ನೋಡಿ! ಎದ್ದೇಳಿ! ನೇತ್ಯಾತ್ಮಕತೆಯನ್ನು ಹೋಗಬಿಡಿ. ಯೋಚಿಸಿ, ’ಸೋಹಂ ಮತ್ತು ಅದಕ್ಕೇನು(ಆಂಗ್ಲದಲ್ಲಿ "ಸೋ ವಾಟ್")!’ ಈ ಎರಡು ವಿಷಯಗಳಿವೆ.

ಮೊದಲು, ತೊಂದರೆಯಲ್ಲಿದ್ದಾಗ ಅಥವಾ ನೇತ್ಯಾತ್ಮಕತೆಯನ್ನು ಎದುರಿಸುವಾಗ, ಇಷ್ಟನ್ನು ಯೋಚಿಸಿ , ’ಅದಕ್ಕೇನು? ಇದೂ ಸರಿ.’
ಮತ್ತೆ, ’ಸೋಹಂ’(ಶಬ್ದಾರ್ಥದಲ್ಲಿ ’ನಾನು ಆ ತತ್ತ್ವ’ ಅಂದರೆ ಆತ್ಮನನ್ನು ದಿವ್ಯ ಚೈತನ್ಯದೊಂದಿಗೆ ಗುರುತಿಸಿಕೊಳ್ಳುವುದು).
ಈ ರೀತಿ ನೀವು ನೇತ್ಯಾತ್ಮಕತೆಯಿಂದ ಮುಕ್ತರಾಗಿ ನಿಮ್ಮ ಚೈತನ್ಯವನ್ನು ಉನ್ನತ ಸ್ಥರದಲ್ಲಿ ಇಟ್ಟುಕೊಳ್ಳಬಹುದು.

ನಿಮಗೆ ಗೊತ್ತೇ, ಯಾರಾದರೂ ಬೇಸರದಲ್ಲಿದ್ದರೆ ಅವರು ತಮ್ಮ ಸುತ್ತಲಿನ ಎಲ್ಲರನ್ನೂ ಕೆಳಗೆಳೆಯುತ್ತಾರೆ.ನೀವು ಅವರೊಡನೆ ಮಾತನಾಡಿದರೆ, ನಿಮಗೆ ತಿಳಿಯುತ್ತದೆ ಅವರು ಕೇವಲ ತಮ್ಮ ಬಗ್ಗೆ ಬೇಸರದಲ್ಲಿರುವುದಲ್ಲದೇ ತಮ್ಮ ಸುತ್ತಲಿನ ಎಲ್ಲರನ್ನೂ ಕೆಳಗೆಳೆಯಲು ಪ್ರಯತ್ನಿಸುತ್ತಾರೆ.ಇದು ಅವರ ಕೆಲಸ.ನೀವ ಯಾರನ್ನಾದರೂ ಇಷ್ಟಪಡದಿದ್ದರೆ ನೀವು ಅವರನ್ನು ದೂರುತ್ತಾ ಹೋಗುತ್ತೀರಿ, ಮತ್ತು ಬೇರೆ ಯಾರಾದರೂ ಅವರನ್ನು ಇಷ್ಟಪಟ್ಟರೆ, ನೀವು ಅವರಿಗೂ ಹೇಳುತ್ತೀರಿ, ’ನೋಡಿ ಆ ವ್ಯಕ್ತಿ ಒಳ್ಳೆಯವರಲ್ಲ’.

ಅದಲ್ಲದೇ, ಕೆಲವು ಮಂದಿಯಿದ್ದಾರೆ, ಅವರು ಯಾವ ರೀತಿಯಲ್ಲಿ ಹೇಳುತ್ತಾರೆಂದರೆ ನೀವು ಅವರ ನೇತ್ಯಾತ್ಮಕತೆಗೆ ಮರುಳಾಗಬಹುದು. ಅವರು ಹೇಳುತ್ತಾರೆ, ’ನೋಡಿ, ನಾನು ಆ ವ್ಯಕ್ತಿಯ ಬಗ್ಗೆ ಕೆಟ್ಟ ಅಭಿಪ್ರಾಯ ರಚಿಸಲು ಇಷ್ಟಪಡುವುದಿಲ್ಲ, ಹಾಗಾಗಿ ನಾನು ಅವರ ಬಗ್ಗೆ ಮಾತನಾಡಲು ಇಚ್ಚಿಸುವುದಿಲ್ಲ. ನಾನು ಅವರ ಬಗ್ಗೆ ನಿಮ್ಮ ಅಭಿಪ್ರಾಯ ಅಥವಾ ತಿಳುವಳಿಕೆಯನ್ನು ಹಾಳುಮಾಡಲು ಇಚ್ಚಿಸುವುದಿಲ್ಲ.’ ಆದರೆ ಆಗಲೇ ಕೇಡು ಉಂಟಾಗಿದೆ.
ಏನಾಗಿದೆಯೆಂದು ನೀವು ನೋಡುತ್ತಿದ್ದೀರಾ?ಆ ಸಂಶಯವನ್ನು ಆಗಲೇ ನಿಮ್ಮ ಮನಸ್ಸಿನಲ್ಲಿ ಬಿತ್ತಾಗಿದೆ.
ಹಾಗಾಗಿ ಹೆಚ್ಚು ಶಕ್ತಿಯಿಲ್ಲದ ಜನರು ತಾವು ದುಃಖದಲ್ಲಿದ್ದಾಗ ಎಲ್ಲರನ್ನೂ ಕೆಳಗೆಳೆಯಲು ಪ್ರಯತ್ನಿಸುತ್ತಾರೆ, ಮತ್ತೆ ಎಲ್ಲರೂ ದುಃಖದಲ್ಲಿರುವುದನ್ನು ನೋಡಿ ಅವರು ಸಂತೋಷ ಪಡುತ್ತಾರೆ.
ಅವರು ಇದನ್ನು ಅರಿವಿಲ್ಲದೇ ಮಾಡುತ್ತಾರೆ.ಅವರಿಗೆ ಇದರ ಅರಿವಿಲ್ಲ, ಅವರು ಇದನ್ನು ಮಾಡುತ್ತಿದ್ದಾರೆ ಎಂಬುದರ ಅರಿವು ಅವರಿಗಿಲ್ಲ.

ರಾಮಾಯಣದಲ್ಲಿ ಒಂದು ಕಥೆಯಿದೆ.
ಭಗವಾನ್ ರಾಮನ ಸೈನ್ಯದಲ್ಲಿದ್ದ ವಾನರರಿಗೆ ಭಾರತ ಮತ್ತು ಶ್ರೀಲಂಕೆಯ ನಡು ಒಂದು ಸೇತುವೆ ಕಟ್ಟಬೇಕಾಗಿತ್ತು ಮತ್ತು ಎಲ್ಲಾ ತಂಡಗಳು ಅದಕ್ಕಾಗಿ ಸಿದ್ಧತೆ ನಡೆಸುತ್ತಿದ್ದವು.ಹಾಗಾಗಿ ಅವರೇನು ಮಾಡಿದರೆಂದರೆ, ಪ್ರತಿಯೊಂದು ಕಲ್ಲಿನ ಮೇಲೂ ’ಶ್ರೀ ರಾಮ’ ಎಂದು ಬರೆದು ಮತ್ತೆ ಆ ಕಲ್ಲುಗಳನ್ನು ನೀರಿನಲ್ಲಿ ಹಾಕುತಿದ್ದರು, ಆಗ ಆ ಕಲ್ಲು ತೇಲುತ್ತಿತ್ತು.
ಈಗ ಭಗವಾನ್ ರಾಮ ತಾನೇ ಅಲ್ಲಿ ಬಂದಾಗ, ಎಲ್ಲರೂ ತನ್ನ ಹೆಸರನ್ನು ಕಲ್ಲಿನಲ್ಲಿ ಬರೆದು ನೀರಿಗೆ ಹಾಕಿದಾಗ ಅದು ತೇಲುತ್ತಿರುವುದನ್ನು ನೋಡಿ ಆಶ್ಚರ್ಯಗೊಂಡ. ಹಾಗಾಗಿ ಅವರಿಗೆ ಅದನ್ನು ಮಾಡಲು ಪ್ರಯತ್ನಿಸಬೇಕೆನಿಸಿತು. ಹೀಗೆ ಅವರೊಂದು ಕಲ್ಲನ್ನೆತ್ತಿ ಅದರ ಮೇಲೆ ’ಶ್ರೀ ರಾಮ’ ಎಂದು ಅದರ ಮೇಲೆ ಬರೆದು ಅದನು ನೀರಿಗೆ ಹಾಕಿದರು, ಆದರೆ ಆ ಕಲ್ಲು ಮುಳುಗಿ ಹೋಯಿತು, ಅದು ತೇಲಲಿಲ್ಲ. ಹಾಗಾಗಿ ಭಕ್ತರು ಅವರಿಗೆ ಹೇಳಿದರು, ’ನಿಮಗೆ ಭಕ್ತಿ ಎಂದರೆ ಏನೆಂದು ಗೊತ್ತಿಲ್ಲ. ನಮಗೆ ಮಾಡಲು ಆಗುತ್ತಿರುವುದು ನಿಮಗೆ ಆಗುವುದಿಲ್ಲ.’
ಹಾಗಾಗಿ ಭಕ್ತ ಒಂದು ಹೆಜ್ಜೆ ಮೇಲಿದ್ದಾನೆ ಎಂದು ಹೇಳಲಾಗುತ್ತದೆ ಮತ್ತು ಅವರಲ್ಲಿ ಅಪಾರ ಶಕ್ತಿಯಿದೆ.

ಈ ಭೂಮಿಯಲ್ಲಿ ಪ್ರೀತಿಯು ಅತ್ಯಂತ ಶಕ್ತಿಯುತವಾದುದು.ಯಾರಿಗೂ, ಯಾವುದೇ ಸಂದರ್ಭದಲ್ಲಿ, ಯಾವುದೇ ಕಾರಣಕ್ಕೆ, ಯಾವುದೇ ವಸ್ತುಸ್ಥಿತಿಯಲ್ಲಿ ಅದನ್ನು ನಶಿಸಲು ಬಿಡಬೇಡಿ.
ನಮ್ಮ ಪ್ರೀತಿಯು ಬಹಳ ಸೂಕ್ಷ್ಮವಾದುದು, ಅದರಲ್ಲೂ ನಾವು ಅದನ್ನು ಎಷ್ಟು ದುರ್ಬಲ ಮಾಡುತ್ತೇವೆಂದರೆ ಕೇವಲ ಇತರರ ನೇತ್ಯಾತ್ನಕ ಮಾತುಗಳನ್ನು ಕೇಳಿ, ಅವರ ನೇತ್ಯಾತ್ಮಕ್ತೆ ನಮ್ಮ ಮನಸ್ಸನ್ನು ತುಂಬಿಕೊಂಡು ನಾವು ನಮ್ಮ ಸ್ವಂತ  ಉನ್ನತ ಶಕ್ತಿಯನ್ನು ನಾಶ ಮಾಡಿಕೊಳ್ಳಲು ಆರಂಭಿಸುತ್ತೇವೆ.
ಈಗ ಅದರ ಅರ್ಥ ನೀವು ಕುರುಡರಾಗಿರಬೇಕೆಂದಲ್ಲ. ನಾವು ಬೌದ್ಧಿಕವಾಗಿ ಚುರುಕಾಗಿರಬೇಕು ಮತ್ತು ವಿವೇಚನೆಯಲ್ಲಿ ಸರಿಯಾಗಿರಬೇಕು, ಮತ್ತು ಅದೇ ಸಮಯದಲ್ಲಿ ನಮಗೆ ಸಿಕ್ಕಿರುವಂಥ ಪ್ರೀತಿ ಎಂಬ ರಮಣೀಯವಾದ ಉಡುಗೊರೆಯನ್ನು ಕಾದಿರಿಸಿಕೊಳ್ಳಬೇಕು. ನೀವೊಂದು ಮಗುವನ್ನು ಹೇಗೆ ಕಾಪಾಡುತ್ತೀರೋ ಅದೇ ರೀತಿ ಇದನ್ನು ಕಾಪಾಡಬೇಕು.ನೀವೊಂದು ಮಗುವನ್ನು ಕೆಳಗೆ ಬೀಳುವುದರಿಂದ ಅಥವಾ ಕಳೆದುಹೋಗದಂತೆ ಹೇಗೆ ಕಾಪಾಡುತ್ತೀರಿ?ನೀವು ಆ ಮಗುವನ್ನು ಯಾವಾಗಲೂ ಗಮನಿಸಿಕೊಂಡು ಅದನ್ನು ಕಾಪಾಡುತ್ತೀರಿ- ಆ ಮಗು ಎಲ್ಲಿ ಹೊರಳುತ್ತಿದೆ, ಎತ್ತ ಹೋಗುತ್ತಿದೆ ಮತ್ತು ಏನು ಮಾಡುತ್ತಿದೆ ಎಂದು.ಅದೇ ರೀತಿ ನಾವು ಈ ಆಂತರ್ಯದ ಸಂಪತ್ತನ್ನು ಕಾಪಾಡಿಕೊಳ್ಳಬೇಕು.ಇದು ಬಹಳ ಮುಖ್ಯವಾದುದು.
ಅದ್ಭುತಗಳಿಗೆ ನಡೆಯಲು ಒಂದು ಅವಕಾಶ ನೀಡಿ. ನೀವು ಸುಮ್ಮನೆ ಕುಳಿತುಕೊಂಡು ’ಒಂದು ಅದ್ಭುತವು ಈಗ ನಡೆಯಬೇಕೆಂದು ನಾನು ಇಚ್ಚಿಸುತ್ತೇನೆ’ ಎಂದು ಹೇಳಿ ಅದನ್ನು ನಡೆಸಬೇಕೆಂದಲ್ಲ. ಅದು ಹಾಗಲ್ಲ. ನಾನು ನಿಮಗೆ ಹೇಳುತ್ತೇನೆ, ನೀವು ಒಂದು ಅದ್ಭುತ ನಡೆಯಲೇ ಬೇಕೆಂದು ಇಟ್ಟುಕೊಂಡಿದ್ದರೆ ಅದು, ಯಾರಾದರೂ ಅದ್ಭುತಗಳು ಸಾಧ್ಯ ಎಂದು ನಿಮ್ಮನ್ನು ನಂಬಿಸಲು ಹೊರಟಷ್ಟೇ ಮೂರ್ಖತನ.

ನಿಮ್ಮನ್ನು ಅದ್ಭುತಗಳತ್ತ ನಂಬಿಸಲು ಹೊರಟು ’ನಾನು ಶೂನ್ಯದಿಂದ ಏನನ್ನಾದರೂ ಸೃಷ್ಟಿಸುತ್ತೇನೆ.’ ಎಂದು ಹೇಳುವವರ ಬಳಿ ಎಂದೂ ಹೋಗಬೇಡಿ.ಇದು ಸರಿಯಾದ ವಿಚಾರವೇ ಅಲ್ಲ.
ಅದ್ಭುತಗಳ ಹಿಂದೆ ಓಡಬೇಡಿ, ಆದರೆ ಅದೇ ಸಮಯದಲ್ಲಿ ಅವುಗಳನ್ನು ನಡೆಯುವುದರಿಂದ ತಡೆಯಬೇಡಿ.ಯಾರಾದರೂ ತಮ್ಮ ಕೇಂದ್ರದಲ್ಲಿರುವವರು, ಜ್ಞಾನೋದಯವಾದವರು ಎಂದೂ ಪವಾಡಗಳನ್ನು ನಡೆಸಲು ಪ್ರಯತ್ನಿಸುವುದಿಲ್ಲ. ಪವಾಡಗಳು ಸುಮ್ಮನೆ ನಡೆದು ಹೋಗುತ್ತವೆ; ಅವು ಜೀವನದ ಒಂದು ಭಾಗ. ಸುಮ್ಮನೆ ಅವುಗಳನ್ನು ಉಂಟಾಗಲು ಬಿಡಿ.ಯಾರನ್ನಾದರೂ ಮನದಟ್ಟು ಮಾಡಲು ಅಥವಾ ಏನನ್ನಾದರೂ ಸೃಷ್ಟಿಸಲು ಪ್ರಯತ್ನಿಸಬೇಡಿ, ಅದು ಒಳ್ಳೆಯದಲ್ಲ. ನಾನು ಏನು ಹೇಳುತ್ತಿದ್ದೇನೆಂಬುದನ್ನು ನೀವು ಕಾಣುತ್ತಿದ್ದೀರಾ?
ಅದು ನಿಮ್ಮ ಪ್ರೌಡತೆ ಮತ್ತು ಚೈತನ್ಯದ ಅರಳುವಿಕೆಯನ್ನು ತೋರಿಸುವುದಿಲ್ಲ.
ನಾವು ಯಾರನ್ನೇ ಆಗಲಿ ಮನದಟ್ಟು ಮಾಡಬೇಕಾಗಿಯೇ ಇಲ್ಲ. ಯಾರಾದರೂ ಅದನ್ನು ಮಾಡಲು ಪ್ರಯತ್ನಿಸಿದರೆ, ಅವರು ತಾವು ಏನು ಎಂದು ಯೋಚಿಸುತ್ತಿದ್ದಾರೋ ಅದು ಆಗಿಲ್ಲ, ಅಥವಾ ಏನಾಗಬೇಕೆಂದು ಇಚ್ಚಿಸುತ್ತಾರೋ ಅದು ಆಗಿಲ್ಲ.

ಪ್ರೀತಿ ಮತ್ತು ಭಕ್ತಿಯ ಶಕ್ತಿ ಅಷ್ಟೊಂದು.ಮತ್ತು ಈ ಸತ್ಸಂಗ, ಸೇವೆ ಮತ್ತು ಸಾಧನೆಗಳು ಇದನ್ನು ನೆರವೇರಿಸಲು ಕೇವಲ ಒಂದು ಬೆಂಬಲ.ಸತ್ಸಂಗದಲ್ಲಿ ಕುಳಿತುಕೊಳ್ಳಿ ಮತ್ತು ನೋಡಿ ನಿಮ್ಮಲ್ಲಿನ ಶಕ್ತಿ ಹೇಗೆ ಹೊಮುತ್ತದೆ.ಬಹಳಷ್ಟು ಸ್ಫೂರ್ತಿದಾಯಕ ಕಥೆಗಳು ನಿಮಗೆ ಕೇಳಿಬರುತ್ತವೆ.
ನೀವೆಲ್ಲರೂ ಯಾವುದಾದರೂ ಸ್ಫುರ್ತಿದಾಯಕ ಅನುಭವಗಳನ್ನು ಹೊಂದಿದ್ದೀರಿ, ಮತ್ತು ನೀವದನ್ನು ಬರೆಯಬೇಕು ಮತ್ತು ಹಂಚಿಕೊಳ್ಳಬೇಕು ಏಕೆಂದರೆ ಅದು ಇತರರಿಗೆ ಸ್ಫೂರ್ತಿ ನೀಡುತ್ತದೆ.
ನಾನಿದನ್ನು ಏಕೆ ಹೇಳುತ್ತಿದ್ದೇನೆಂದರೆ ನೀವು ಬೇರೆ ಯಾರಿಗಾದರೂ ಒಳ್ಳೆಯದಾಗುತ್ತಿದೆ ಎಂದು ಕೇಳಿದರೆ, ಅದು ನಿಮ್ಮನ್ನೂ ಮೇಲೆತ್ತುತ್ತದೆ.
ಇಂದಿನ ಜಗತ್ತಿನಲ್ಲಿ ನೀವು ಬಹಳಷ್ಟು ನೇತ್ಯಾತ್ಮಕ ಕಥೆಗಳನ್ನು ಯಾವಾಗಲೂ ಕೇಳುತ್ತೀರಿ.ನೀವು ಕಳ್ಳತನದ ಬಗ್ಗೆ ಅಥವಾ ಬಲಾತ್ಕಾರ ನೆಡೆದ ಬಗೆ ಕೇಳುತ್ತೀರಿ.ನೀವು ಯಾರೋ ಇನ್ನೊಬ್ಬರಿಗೆ ಮೋಸ ಮಾಡಿದ ಬಗ್ಗೆ ಕೇಳುತ್ತೀರಿ ಮತ್ತು ಇನ್ನೂ ಹಲವು ಅಪರಾಧಗಳು ನಿಮ್ಮ ಸುತ್ತ ನಡೆಯುತ್ತಿರುವುದರ ಬಗ್ಗೆ ಕೇಳುತ್ತೀರಿ.
ನೀವು ಇದನ್ನೆಲ್ಲ ಕೇಳಿದಾಗ ನೀವು ಜೀವನದ ಉತ್ಸಾಹವನ್ನು ಕಳೆದುಕೊಳ್ಳುತ್ತೀರಿ.ಬಹಳ ಯುವ ಜನರು ಕೇವಲ ನೇತ್ಯಾತ್ಮಕ ಕಥೆಗಳನ್ನು ಕೇಳುವುದರಿಂದ ಜೀವನದ ಉತ್ಸಾಹವನ್ನು ಕಳೆದುಕೊಳ್ಳುತ್ತಾರೆ.

ಬೇಸಿಗೆಯಲ್ಲಿ ನಾನು ಕೆನಡಾದಲ್ಲಿದ್ದಾಗ ಒಂದು ದಂಪತಿ ನನ್ನನ್ನು ಕಾಣಲು ಬಂದರು.
ಅವರು ಹೇಳಿದರು, ’ನಮ್ಮ ೧೮ ಹರೆಯದ ಮಗ ಆತ್ಮಹತ್ಯೆ ಮಾಡಿಕೊಂಡ. ಅವನು ಬಹಳ ಬುದ್ಧಿವಂತ ಹುಡುಗನಾಗಿದ್ದ. ಅವನು ಒಂದು ಕಾಗದ ಬರೆದಿಟ್ಟು ಹೋದ, ’ಅಮ್ಮ, ಅಪ್ಪ,  ಈ ಜಗತ್ತು ಬದುಕಲು ಯೋಗ್ಯವಾದ ಸ್ಥಳವೆಂದು ನನಗೆ ಕಾಣುವುದಿಲ್ಲ. ಪ್ರತಿ ದಿನ ಎಷ್ಟೊಂದು ಅಪರಾಧಗಳು ನಡೆಯುತ್ತಿವೆ. ನನಗೆ ಇಲ್ಲ ಇರಲು ಬಯಕೆಯಿಲ್ಲ ಮತ್ತು ನಾನಿದರಿಂದ ಬೇಸತ್ತು ಹೋಗಿದ್ದೇನೆ.’ ಅವನು ಈ ಮನೋಭಾವವನ್ನು ಹೇಗೆ ಬೆಳೆಸೊಕೊಂಡನು ಗೊತ್ತೇ?ಕೇವಲ ವಾರ್ತೆಗಳನ್ನು ನೋಡುವುದರಿಂದ.
ಅವನ ಕಾಗದದಲ್ಲಿ ಅವನು ಇನ್ನೂ ಬರೆದ,
’ನಾನು ನಿಮಗೆ ಕಷ್ಟ ಹಾಗೂ ದುಃಖ ತರುತ್ತಿರುವುದಕ್ಕಾಗಿ ನನ್ನನ್ನು ಕ್ಷಮಿಸಿ, ಆದರೆ ನನಗೆ ಬದುಕಿರಲು ಇಷ್ಟವಿಲ್ಲ.’
ಹಾಗೆ ಈ ಹುಡುಗ ಈ ಕಾಗದವನ್ನು ಬರೆದು ನಂತರ ಆತ್ಮಹತ್ಯೆ ಮಾಡಿಕೊಂಡ.
ನಾವೆಲ್ಲರೂ ನಮ್ಮ ಸುತ್ತಲಿರುವ ಎಲ್ಲರಿಗೂ ಧನಾತ್ಮಕ ಸುದ್ದಿಯನ್ನು ತರುವ ಸಂಕಲ್ಪ ತೆಗೆದುಕೊಳ್ಳಬೇಕು ಏಕೆಂದರೆ ಈ ಜಗತ್ತು ಪ್ರೀತಿಯಿಂದ ಆಳಲ್ಪಟ್ಟಿದೆ; ಆ ಜ್ಯೋತಿಯಿಂದ.
ಆ ಜ್ಯೋತಿಯು ನಿಮಗೆ ಅಷ್ಟೊಂದು ಉಡುಗೊರೆಗಳನ್ನು ತರುತ್ತದೆ ಮತ್ತು ಅಷ್ಟೊಂದು ಅದ್ಭುತಗಳು ಸಾಧ್ಯವಾಗಿವೆ.
ಪ್ರತಿ ದಿನ ನಾನು ಜಗತ್ತಿನಾದ್ಯಂತದಿಂದ ಜನರು ಕೃತಜ್ಞ್ನತೆ ಸಲ್ಲಿಸುವ ಮತ್ತು ಅವರ ಜೀವನಗಳಲ್ಲಿ ನಡೆಯುತ್ತಿರುವ ಅದ್ಭುತಗಳನ್ನು ವಿವರಿಸುವಂಥ ಸಾವಿರಾರು ಈಮೇಲ್.ಗಳನ್ನು ಪಡೆಯುತ್ತೇನೆ ಪಡೆಯುತ್ತೇನೆ.
ನಾನು ಆ ಎಲ್ಲಾ ಕಾಗದಗಳನ್ನು ಹೊರಗೆ ನಿಮ್ಮೆಲ್ಲರ ಮುಂದೆ ತಂದರೆ ಚೆನ್ನಾಗಿರುವುದಿಲ್ಲ, ಆದರೆ ನಾನು ಹೇಳುತ್ತೇನೆ, ನೀವು ನಿಮ್ಮ ಅನುಭವಗಳನ್ನು ಬರೆಯಬೇಕು ಮತ್ತು ಉಳಿದವರೊಂದಿಗೆ ಹಂಚಿಕೊಳ್ಳಬೇಕು.ಅದರ ತೀವ್ರ ಅಗತ್ಯವಿರುವವರಿಗೆಲ್ಲ ಒಂದು ಆಶಾ ಕಿರಣವನ್ನು ತನ್ನಿ.

ನೀವು ಕಥೆಗಳನ್ನು ಕಟ್ಟಬೇಕಾಗಿಲ್ಲ. ತಪ್ಪು ಕಥೆಗಳನ್ನು ಕಟ್ಟುವುದು ಸಂಪೂರ್ಣವಾಗಿ ಇನ್ನೊಂದು ವಿಪರೀತ.ಅದು ಒಳ್ಳೆಯದಲ್ಲ. ಆದರೆ ನಿಮ್ಮ ಜೀವನದಲ್ಲಿ ಏನೇ ಒಳ್ಳೆಯದು ನಡೆಯುತ್ತಿದ್ದರೆ, ಕನಿಷ್ಟ ಅದನ್ನು ನೀವು ಉಳಿದವರ ಜೀವನದಲ್ಲಿ ತರಬೇಕು.ನೀವು ಜನರಲ್ಲಿ ಅದರ ಅರಿವು ಮೂಡಿಸಬೇಕು.ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಎಲ್ಲಾ ಅದ್ಭುತಗಳನ್ನು ಬರೆಯಿರಿ.
ಆದರೂ ಅದನ್ನು ಚಿಕ್ಕದಾಗಿ ಇಡಿ, ಬಹಳ ದೊಡ್ಡದಾಗಿ ಅಲ್ಲ. ಕೆಲವೊಮ್ಮೆ ಜನ ಅಂಥ ದೊಡ್ಡ ಕಥೆಗಳನ್ನು ಬರೆಯುತ್ತಾರೆಂದರೆ ನಿಮಗೆ ಅದನ್ನು ಪೂರ್ತಿಯಾಗಿ ಓದಲು ಮನಸ್ಸೇ ಆಗುವುದಿಲ್ಲ. ಬರೇ ಒಂದು ಖಂಡ ಓದುತ್ತಲೇ ನಿಮಗೆ ಅದನ್ನು ಮುಚ್ಚಬೇಕನಿಸುತ್ತದೆ. ಹಾಗೆ ನಿಮ್ಮ ಅನುಭವಗಳನ್ನು ಬರೆಯಿರಿ ಆದರೆ ಅದು ಚಿಕ್ಕದಾಗಿ ಮತ್ತು ಜೀವತುಂಬಿರಬೇಕು.ನೀವು ತಿಳಿದಿರುವ ಮತ್ತು ಹಂಚಬೇಕೆಂದಿರುವ ನಿಮ್ಮ ಯಾವುದೇ ವಾಸ್ತವ ಅನುಭವಗಳನ್ನು ಬರೆಯಬೇಕು.ಅದುವೇ ನಿಜವಾಗಿ ಸ್ಫೂರ್ತಿ ನೀಡಬಲ್ಲದ್ದು.
ನಿಮಗೆ ಗೊತ್ತೇ, ನಾವು ಏನಾದರೂ ವಾಸ್ತವವಾದುದನ್ನು ಹಂಚಿಕೊಂಡಾಗ, ಅದು ಇತರರ ಜೀವನದಲ್ಲಿ ಒಂದು ಬಹಳ ಧನಾತ್ಮಕ ಪರಿಣಾಮವನ್ನು ಬೀರುತ್ತೀರಿ.ನಾವು ಜನರನ್ನು ಬೆಳಕಿನತ್ತ, ಜೀವನದತ್ತ ಮತ್ತು ಪ್ರೀತಿಯತ್ತ ಮುನ್ನಡೆಸಬೇಕಾದ ರೀತಿ ಇದು.
ಇದು ಎಂದಿಗಿಂತಲೂ ಹೆಚ್ಚಾಗಿ ಇಂದು ಅಗತ್ಯವಾಗಿದೆ.

ಪ್ರತಿ ದಿನ ನಾನು ಜನರಿಂದ ಬಹಳಷ್ಟು ಪತ್ರಗಳನ್ನು ಪಡೆಯುತ್ತೇನೆ.
ಆಶಾವಾದ ಕಳೆದುಕೊಂಡಿದ್ದ ವೈದ್ಯರು, ಯಾರೋ ಆರು ತಿಂಗಳೊಳಗೆ ಜೀವ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದೂ ಆದರೂ ಇನ್ನೂ, ಆ ಘಟನೆಯಾಗಿ ವರ್ಷಗಳು ಕಳೆದಿದ್ದರೂ ಬದುಕಿದ್ದಾರೆ.

ಹಲವಾರು ತೊಂದರೆಗಳು ವಾಸಿಯಾಗಿವೆ.ಅಂಥ ಸಾವಿರಾರು ಕಾಗದಗಳಿವೆ.

ಇಂದು, ನಮ್ಮ ಮನಃಸ್ಥಿತಿ ಹೇಗಾಗಿದೆಯೆಂದರೆ ನಾವು ಈ ಶಕ್ತಿಯ ಕ್ಷೇತ್ರವನ್ನು ನಂಬುವುದನ್ನೇ ಬಿಟ್ಟುಬಿಟ್ಟಿದ್ದೇವೆ.ನಾವು ನಮಗೆ ಗೊತ್ತುಮಾಡಿಸಿದ ರಾಸಾಯನಿಕ ಗುಳಿಗೆಗಳನ್ನು ಹೆಚ್ಚು ನಂಬಬಯಸುತ್ತೇವೆ.

ಹೇಗಿದ್ದರೂ, ನೀವು ಯಾವುದೇ ವಿಪರೀತದತ್ತ ತೂಗಬಾರದು. ’ಓ, ಗುರೂಜಿ ಶಕ್ತಿಯ ಕ್ಷೇತ್ರದ ಬಗ್ಗೆ ಮಾತನಾಡಿದ್ದಾರೆ, ಹಾಗಾಗಿ ನನಗೆ ಗೊತ್ತುಮಾಡಿರುವ ಯಾವುದೇ ಔಷಧಿಗಳನ್ನು ನಾನು ತೆಗೆದುಕೊಳ್ಳುವುದಿಲ್ಲ. ನಾನು ಅವುಗಳನ್ನು ಎಸೆದು ಬಿಡುತ್ತೇನೆ.’ ಅಲ್ಲ! ನಾವು ಈ ರೀತಿ ನಡೆದುಕೊಳ್ಳಬಾರದು.
ನಾವು ವೈದ್ಯರ ಸಲಹೆ ತೆಗೆದುಕೊಳ್ಳಬೇಕು, ಆದರೆ ಅದೇ ಸಮಯದಲ್ಲಿ, ನಾನು ನಿಮಗೆ ಹೇಳುತ್ತಿರುವುದೇನೆಂದರೆ, ಪವಾಡಗಳಿಗೆ ನಡೆಯಲು ಒಂದು ಅವಕಾಶ ನೀಡಿ.
ಅದು ಇದರ ರಸಸತ್ತ್ವ.