ಶನಿವಾರ, ಏಪ್ರಿಲ್ 27, 2013

ಮಾನವ ಜೀವನ ಅತ್ಯಮೂಲ್ಯವಾದದ್ದು

ನುಸಾ ದುವಾ, ಬಾಲಿ
೨೭ ಎಪ್ರಿಲ್ ೨೦೧೩

ಜೀವನದಲ್ಲಿ ಮೂರು ವಿಷಯಗಳು ಬಹಳ ಮುಖ್ಯವಾದವು: ಆಸಕ್ತಿ, ವಿರಕ್ತಿ ಮತ್ತು ಸಹಾನುಭೂತಿ.

ಆಸಕ್ತಿಯು ಜೀವನದಲ್ಲಿ ಅಗತ್ಯವಿದೆ. ನಿಮ್ಮಲ್ಲಿ ಆಸಕ್ತಿಯಿದ್ದಾಗ ಮಾತ್ರ, ನಿಮಗೆ ಯಾವುದಾದರೂ ಕೆಲಸವನ್ನು ಮಾಡಲು, ಏನನ್ನಾದರೂ ಸಾಧಿಸಲು ಸಾಧ್ಯವಾಗುವುದು. ಆದುದರಿಂದ ನಮ್ಮಲ್ಲಿ ಆಸಕ್ತಿಯಿರಬೇಕು.

ಆಸಕ್ತಿಯೊಂದಿಗೆ ವಿರಕ್ತಿ ಕೂಡಾ ಇರಬೇಕು. ಆಸಕ್ತಿಯೊಂದೇ ಕೆಲಸ ಮಾಡದು. ಬಹಳಷ್ಟು ಆಸಕ್ತಿಯಿರುವ ಜನರಿದ್ದಾರೆ, ಆದರೆ ಅದು ಅವರನ್ನು ಬಹಳ ಬೇಗನೇ ಬಳಲಿಸುತ್ತದೆ, ಸೊರಗಿಸುತ್ತದೆ. ಈಗಲೇ ಅಲ್ಲ  ಆಮೇಲೆ, ಅವರು ದಹಿಸಿ ಹೋಗಿರುತ್ತಾರೆ ಮತ್ತು ಕೆಲವೊಮ್ಮೆ ಅವರು ಖಿನ್ನರಾಗುತ್ತಾರೆ. ಇದು ಯಾಕೆಂದರೆ ಅವರಲ್ಲಿ ಬಹಳಷ್ಟು ಆಸಕ್ತಿಯಿರುತ್ತದೆ, ಆದರೆ ಅವರು ಬಯಸಿದ ಫಲಿತಾಂಶವನ್ನು ಪಡೆಯುವುದಿಲ್ಲ.

ಹೀಗೆ, ಆಸಕ್ತಿಯೊಂದಿಗೆ ನಿಮ್ಮಲ್ಲಿ ವಿರಕ್ತಿಯಿರಬೇಕು. ಅದೊಂದು ರಕ್ಷಣಾ-ಕವಾಟವಿದ್ದಂತೆ. ಅದು ವಿವೇಕವನ್ನು ತರುತ್ತದೆ ಮತ್ತು ನಿಮ್ಮ ಬುದ್ಧಿಯನ್ನು ಸ್ವಸ್ಥವಾಗಿರಿಸುತ್ತದೆ. ಅದು ಹೇಗೆಂದರೆ, ಉಸಿರನ್ನು ಒಳಕ್ಕೆಳೆಯುವುದು ಆಸಕ್ತಿ ಮತ್ತು ಉಸಿರನ್ನು ಹೊರಕ್ಕೆ ಬಿಡುವುದು ವಿರಕ್ತಿ.

ವಿರಕ್ತಿ ಮತ್ತು ಆಸಕ್ತಿಗಳೊಂದಿಗೆಯೇ ಸಹಾನುಭೂತಿ ಕೂಡಾ ಅಗತ್ಯವಾಗಿದೆ. ವಿರಕ್ತಿಯೊಂದಿಗೆ ನೀವು ಒಳ್ಳೆಯ ನಿದ್ರೆಯನ್ನು ಪಡೆಯಬಹುದು, ಆಸಕ್ತಿಯೊಂದಿಗೆ ನೀವು ಕೆಲಸಗಳನ್ನು ಉತ್ತಮವಾಗಿ ಸಾಧಿಸಬಹುದು ಮತ್ತು ಸಹಾನುಭೂತಿಯೊಂದಿಗೆ ನಿಮ್ಮ ವ್ಯಕ್ತಿತ್ವವು ಪ್ರಕಾಶಿಸುವುದು. ನಮ್ಮಲ್ಲಿ ಸಹಾನುಭೂತಿ, ವಿರಕ್ತಿ ಮತ್ತು ಆಸಕ್ತಿಗಳಿರಬೇಕು; ಈ ಎಲ್ಲದರ ಸಂತುಲನವು ಜೀವನದಲ್ಲಿ ಬಹಳ ಅತ್ಯಾವಶ್ಯಕವಾಗಿದೆ.

ಮತ್ತೆ, ಎಲ್ಲಿ ನೀವು ಸಹಾನುಭೂತಿಯಿಂದಿರಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಎಂಬುದು ನಿಮಗೆ ತಿಳಿದಿರಬೇಕು.

ನಿಮ್ಮ ಮಗುವು ಶಾಲೆಗೆ ಹೋಗುವುದಿಲ್ಲವೆಂದು ಅಳುತ್ತಿರುವುದಾದರೆ, ಅಲ್ಲಿ ನೀವು ಸಹಾನುಭೂತಿಯುಳ್ಳವರಾಗಿ, "ಓ, ನಾನು ಬಹಳ ಕರುಣಾಮಯಿ, ಮಗುವು ಶಾಲೆಗೆ ಹೋಗುವುದು ಬೇಡ, ಅವನು ಮನೆಯಲ್ಲಿರಲಿ" ಎಂದು ಹೇಳಲು ಸಾಧ್ಯವಿಲ್ಲ. ಇಲ್ಲ!
ಯಾರಾದರೂ ಕೆಟ್ಟ ಕೆಲಸಗಳನ್ನು ಮಾಡುತ್ತಿರುವುದಾದರೆ, ಯಾರಾದರೂ ಮಾದಕವಸ್ತುಗಳು ಅಥವಾ ಮದ್ಯಸಾರಕ್ಕೆ ತುತ್ತಾಗಿ ತಮ್ಮ ಜೀವನವನ್ನು ಹಾಳುಮಾಡುತ್ತಿರುವುದಾದರೆ, ನೀವು, "ಓ ನನಗೆ ಅವರ ಬಗ್ಗೆ ಬಹಳ ಸಹಾನುಭೂತಿಯಿದೆ" ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ, ನಿಮ್ಮ ಸಹಾನುಭೂತಿಯು, ದೃಢವಾಗಿರುವುದರಲ್ಲಿದೆ. ನೀವು ದೃಢವಾಗಿರಬೇಕು. ಹಾಗಾಗಿ ಇದೆಲ್ಲವೂ ಜೀವನದ ಬಗ್ಗೆ; ನಾವು ಹೇಗೆ ಒಡನಾಡಬಹುದು ಎಂಬುದರ ಬಗ್ಗೆಯಾಗಿದೆ.

ಈಗ, ಈ ಘಟನೆಗಳಿಗಿಂತ, ಈ ಸಂಭವಗಳಿಂದ ಮತ್ತು ಈ ಜೀವನಕ್ಕಿಂತ ಎಷ್ಟೋ ಹೆಚ್ಚು ಮಹತ್ತರವಾದುದು ಏನೋ ಇದೆ. ಎಷ್ಟೋ ಹೆಚ್ಚು ಗೂಢವಾದುದು ಏನೋ ಇದೆ. ನಿಜ ಜಗತ್ತೆಂದು ಕರೆಯಲ್ಪಡುವುದಕ್ಕಿಂತ ಎಷ್ಟೋ ಹೆಚ್ಚು ನಿಜವಾದುದು ಏನೋ ಇದೆ. ಅದನ್ನು ಸ್ವೀಕರಿಸುವುದು, ಜೀವನಕ್ಕೆ ಇನ್ನೂ ದೊಡ್ಡದಾದ ಒಂದು ಆಯಾಮವನ್ನು ಕೊಡುತ್ತದೆ. ಅದು ನಿಮ್ಮ ಕಣ್ಣುಗಳನ್ನು, ಸಾಮಾನ್ಯವಾದ ದಿನನಿತ್ಯದ ಲೌಕಿಕ ಜೀವನದಿಂದ, ಎತ್ತರದಲ್ಲಿರುವ ಒಂದು ಸತ್ಯಕ್ಕೆ ಎತ್ತುತ್ತದೆ.

ಸುಮ್ಮನೆ ಕಲ್ಪಿಸಿಕೊಳ್ಳಿ, ಈ ಚಂದ್ರ ಹಲವಾರು ಬಿಲಿಯಗಟ್ಟಲೆ ವರ್ಷಗಳಿಂದ ಅಲ್ಲಿದೆ; ಭೂಮಿಯು ೧೯ ಬಿಲಿಯನ್ ವರ್ಷಗಳಿಂದ ಇದೆ ಮತ್ತು ನೀವು ಇಲ್ಲಿ ಎಷ್ಟು ಸಮಯದಿಂದ ಇರುವಿರಿ? ಒಂದು ಅಲ್ಪಾವಧಿಯ ಕಾಲದಿಂದ. ಅದರ ಬಗ್ಗೆ ಯೋಚಿಸಿ, ೫೦ ವರ್ಷಗಳು, ೬೦ ವರ್ಷಗಳು ಅಥವಾ ೩೦ ವರ್ಷಗಳು ಇರಬಹುದು. ನೀವಿಲ್ಲಿ ಇನ್ನು ಎಷ್ಟು ಕಾಲ ಇರುವಿರಿ? ಇನ್ನೊಂದು ೩೦-೪೦ ವರ್ಷಗಳು, ಅಷ್ಟೇ! ಮುಗಿಯಿತು! ಹೀಗಿದ್ದರೂ, ನಮ್ಮ ಮನಸ್ಸು, "ಇಲ್ಲ! ನಾನು ಎಂದೆಂದಿನಿಂದಲೂ ಇಲ್ಲಿರುವೆನು" ಎಂದು ಹೇಳುತ್ತದೆ!

ಹೆಚ್ಚಾಗಿ, ಮಕ್ಕಳು ಬೆಳೆಯುತ್ತಿರುವುದನ್ನು ನೀವು ನೋಡುತ್ತಿರುವಿರಾದರೂ ನೀವು ಹಾಗೆಯೇ ಇರುವಿರಿ ಎಂಬುದಾಗಿ ನಿಮಗೆ ಕಾಣಿಸುತ್ತದೆ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ? "ಮಕ್ಕಳೆಲ್ಲರೂ ಬೆಳೆದು ದೊಡ್ಡವರಾದರು, ಆದರೂ ನಾನು ಹಾಗೆಯೇ ಇದ್ದೇನೆ, ನನಗೆ ವಯಸ್ಸೇ ಆಗಲಿಲ್ಲ." ಇದು ನಿಜ. ನಿಮ್ಮಲ್ಲೇನೋ ಇದೆ, ನೀವು ಹುಟ್ಟಿರುವಿರೆಂಬುದನ್ನು ಅಥವಾ ನೀವು ಸಾಯುವಿರೆಂಬುದನ್ನು ಅದು ಒಪ್ಪುವುದಿಲ್ಲ.

ಚೈತನ್ಯದಲ್ಲಿ, ಮನಸ್ಸಿನಲ್ಲಿ, ನಿಮ್ಮೊಳಗೆ ಆಳದಲ್ಲಿ ಏನೋ ಇದೆ - ಆತ್ಮ, ಅದಕ್ಕೆ ವಯಸ್ಸಾಗುವುದಿಲ್ಲ. ನಿಮ್ಮ ಸುತ್ತಲಿರುವ ಎಲ್ಲವೂ ಬದಲಾಗುವುದಾದರೂ ಕೂಡಾ, ಅದು ಬದಲಾಗುವುದೇ ಇಲ್ಲ. ಈ ಜನ್ಮದ ಮೊದಲು ಕೂಡಾ ಆತ್ಮವು ಅಲ್ಲಿತ್ತು. ಇದೊಂದೇ ಜನ್ಮವಲ್ಲ; ನಾವಿಲ್ಲಿ ಹಲವು, ಹಲವು ಜನ್ಮಗಳಲ್ಲಿದ್ದೆವು.

ಒಬ್ಬರು ಒಂದು ಸಮಯದಲ್ಲಿ ಕೇವಲ ಒಂದು ದಿನವನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುವರು ಎಂದಿಟ್ಟುಕೊಳ್ಳೋಣ. ಮುಂದಿನ ದಿನ, ಹಿಂದಿನ ದಿನ ತಾವೇನಾಗಿದ್ದೆವು ಎಂಬುದನ್ನು ಅವರು ಮರೆಯುತ್ತಾರೆ. ಅಥವಾ ಒಬ್ಬರ ಸ್ಮರಣಾಶಕ್ತಿಯು ಎಷ್ಟೊಂದು ಕಡಿಮೆಯೆಂದರೆ, ತಾವು ಬೆಳಗ್ಗಿನಿಂದ ರಾತ್ರಿಯ ವರೆಗೆ ಏನು ಮಾಡಿದ್ದೇವೆಂಬುದು ಮಾತ್ರ ಅವರಿಗೆ ನೆನಪಿರುತ್ತದೆಯೆಂದು ಕಲ್ಪಿಸಿಕೊಳ್ಳಿ; ಅವರಿಗೆ ನಿನ್ನೆಯದೇನೂ ನೆನಪಿರುವುದಿಲ್ಲ ಅಥವಾ ಒಂದು ನಾಳೆಯಿರುವುದೆಂದು ಅವರು ಯೋಚಿಸುವುದಿಲ್ಲ. ಅದು, ಅಮ್ನೀಷಿಯಾದಿಂದ (ಮರೆವಿನ ರೋಗ) ಬಳಲುವ ಜನರಂತೆ. ಅವರಿಗೆ ಯಾವುದೂ ನೆನಪಿರುವುದಿಲ್ಲ. ನಾವೆಲ್ಲರೂ ಅಂತಹದ್ದೇ ಒಂದು ಮನಃಸ್ಥಿತಿಯಲ್ಲಿದ್ದೇವೆ. ಒಬ್ಬರು ಸಂಪೂರ್ಣವಾಗಿ ಮದ್ಯಪಾನ ಮಾಡಿದಾಗ, ಅವರು ಬೇರೆಲ್ಲವನ್ನೂ ಮರೆತುಬಿಡುತ್ತಾರೆ. ಅವರಿಗೆ ಯಾವುದೂ ನೆನಪಿರುವುದಿಲ್ಲ. ಅದೇ ರೀತಿಯಲ್ಲಿ, ನಾವಿಲ್ಲಿ ಮೊದಲು ಇದ್ದೆವು ಎಂಬುದು ಮತ್ತು ನಾವಿಲ್ಲಿ ಮತ್ತೆ ಇರಲಿದ್ದೇವೆಂಬುದು ಹಾಗೂ ಸಾವಿರಾರು ವರ್ಷಗಳ ಕಾಲ ನಾವಿಲ್ಲಿರುವುದನ್ನು ಮುಂದುವರಿಸಲಿದ್ದೇವೆಂಬುದು ನಮಗೆ ನೆನಪಿನಲ್ಲಿಲ್ಲ. ನಾವು ಈ ಸತ್ಯತೆಯ ಕಡೆಗೆ ನೋಡಬೇಕಾಗಿದೆ. ಆಗ ಜೀವನವು ನಿಜಕ್ಕೂ ಒಂದು ವಿಶಾಲವಾದ ಆಯಾಮವನ್ನು ತೆಗೆದುಕೊಳ್ಳುತ್ತದೆ.

ಇಲ್ಲಿ ಬಾಲಿಯಲ್ಲಿ, ಈ ಎಲ್ಲಾ ಚಿಕ್ಕ ದೇವಾಲಯಗಳಿರುವುದನ್ನು ನೀವು ನೋಡಿದ್ದೀರಾ? ದೇವಾಲಯದೊಳಗೆ ಯಾವುದೇ ಮೂರ್ತಿಯಿಲ್ಲ. ಯಾಕೆಂಬುದು ನಿಮಗೆ ಗೊತ್ತಾ? ಯಾಕೆಂದರೆ ಅದು ನಮ್ಮ ಪೂರ್ವಿಕರಿಗಾಗಿ ಇರುವುದು. ಪೂರ್ವಿಕರ ಆತ್ಮಕ್ಕಾಗಿ ಅವರು, ಸರಿಯಾದ ಒಂದು ಚಿಕ್ಕ ಆಸನವನ್ನು ಇಡುತ್ತಾರೆ.

ದೇವರಿಗಾಗಿರುವ ದೇವಾಲಯಗಳು ಕೂಡಾ ಇವೆ. ಹಲವಾರು ದೇವರುಗಳಿದ್ದಾರೆ, ಅವರೆಲ್ಲರೂ ಬರುತ್ತಾರೆ, ಅಲ್ಲಿ ಕುಳಿತುಕೊಳ್ಳುತ್ತಾರೆ, ನಿಮ್ಮನ್ನು ಹರಸುತ್ತಾರೆ ಮತ್ತು ನಿಮ್ಮನ್ನು ನೋಡಿಕೊಳ್ಳುತ್ತಾರೆ. ಇದು ಇಲ್ಲಿನ ನಂಬಿಕೆ. ನಿಜವಾಗಿ, ಇದು ಕೇವಲ ಒಂದು ನಂಬಿಕೆಯಲ್ಲ, ಅದೊಂದು ವಾಸ್ತವವೂ ಆಗಿದೆ.

ಹಲವಾರು ಹಂತಗಳ ವಾಸ್ತವಿಕತೆಯಿದೆ:

ಮೊದಲನೆಯದು ಪ್ರಕಾಶ, ಸರ್ವೋಚ್ಛ, ಒಬ್ಬ ದೇವರು, ಹಲವಾರು ದೇವರುಗಳಲ್ಲ, ಒಂದೇ ಒಂದು, ಅದು ಪರಮಾತ್ಮ.
ಪರಮಾತ್ಮನ ಕೆಳಗೆ, ಹಲವಾರು ವಿವಿಧ ಶಕ್ತಿಗಳು ಅಥವಾ ದೇವದೂತರು ಅಥವಾ ದೇವ ದೇವಿಯರು.

ಈ ಶಕ್ತಿಗಳ ಅಥವಾ ದೇವದೂತರ ಅಥವಾ ದೇವತೆಗಳ ಕೆಳಗೆ ಹಲವಾರು ಶಕ್ತಿಗಳಿವೆ.

ಈ ಶಕ್ತಿಗಳ ಕೆಳಗೆ ನಾವು ನೋಡುವ ವ್ಯಕ್ತವಾದ ಪ್ರಪಂಚವಿದೆ.

ಹೀಗೆ, ನಾವು ನೋಡುವುದೇನೆಂದರೆ ವ್ಯಕ್ತ ಜಗತ್ತು; ನಂತರ ಸೂಕ್ಷ್ಮ ಶಕ್ತಿಗಳಿವೆ, ಅವುಗಳು ಒಳ್ಳೆಯದು ಮತ್ತು ಕೆಟ್ಟದು ಆಗಿವೆ. ಅದರ ಮೇಲೆ ಇರುವುದು ದೇವತೆಯರು, ಪೂರ್ವಿಕರು; ಮತ್ತು ನಂತರ ಇರುವುದು ಪರಮಾತ್ಮ ಅಥವಾ ದೇವರು ಅಥವಾ ನೀವದನ್ನು ಏನು ಕರೆಯುತ್ತೀರೋ ಅದು.

ಈ ಪ್ರಪಂಚವು ಹಲವಾರು ಪದರಗಳಷ್ಟು ವಾಸ್ತವಿಕತೆಯಾಗಿದೆ; ಸತ್ಯವಾಗಿದೆ. ಆದುದರಿಂದ, ನೀವು ಈ ಶರೀರವನ್ನು ಬಿಟ್ಟುಹೋಗುವಾಗ, ನಿಮ್ಮ ಆತ್ಮವು ಹೋಗಿ, ಮರಳಿ ಬರಲು ಅದು ಇನ್ನೊಂದು ಶರೀರವನ್ನು ಪಡೆಯುವಲ್ಲಿಯವರೆಗೆ,  ಇನ್ನೊಂದು ಲೋಕದಲ್ಲಿ ಸ್ವಲ್ಪ ಸಮಯ ಉಳಿಯುತ್ತದೆ; . ಈ ಜೀವನ, ನಮ್ಮ ಮಾನವ ಜನ್ಮವು ಬಹಳ ಅಮೂಲ್ಯವಾದುದು ಯಾಕೆಂದರೆ, ಈ ಜನ್ಮದಿಂದ ನೀವು ಪ್ರಕಾಶದೊಂದಿಗೆ ವಿಲೀನಗೊಳ್ಳಬಹುದು. ಈ ಜನ್ಮದಲ್ಲಿ ನೀವು ಪ್ರೀತಿಯನ್ನು ವ್ಯಕ್ತಪಡಿಸಬಹುದು. ಮಾನವ ಶರೀರವು ಬಹಳ, ಬಹಳ ಅಮೂಲ್ಯವಾದುದು.

ನಾನು ಹೇಳಿದಂತೆ, ನಿಮ್ಮಲ್ಲಿ ಈ ಎಲ್ಲಾ ಚಿಕ್ಕ ಗುಡಿಗಳಿವೆಯಲ್ಲಾ? ಅದಿರುವುದು, ದೇವರು ನಿರಾಕಾರಿ, ಆದರೂ ಇಲ್ಲಿ ತನ್ನ ಇರುವಿಕೆಯ ಅನುಭವವಾಗುವಂತೆ ಮಾಡುತ್ತಾನೆ ಎಂಬುದನ್ನು ಸೂಚಿಸಲು. ಅದಕ್ಕಾಗಿಯೇ, ಇರುವಿಕೆಯನ್ನು ಅನುಭವಿಸುವುದು ಎಂದು ಹೇಳಲಾಗಿರುವುದು; ನೆನಪಿನಂತೆಯೇ. ನೀವು ತೀರಿ ಹೋದ ನಿಮ್ಮ ತಾಯಿಯನ್ನು ಅಥವಾ ತಂದೆಯನ್ನು  ಅಥವಾ ತಾತನನ್ನು ನೆನಪಿಸಿಕೊಳ್ಳುವಾಗ, ಅವರು ಯಾವತ್ತೂ ಅಲ್ಲಿ, ನಿಮ್ಮ ಮನಸ್ಸಿನಲ್ಲಿ ಇರುತ್ತಾರೆ, ಸರಿಯಾ? ಅವರ ಇರುವಿಕೆಯನ್ನು ಅನುಭವಿಸಬಹುದು, ಸ್ಮರಣೆಯು ಅವರನ್ನು ಅನುಭವಿಸುತ್ತದೆ; ಅವರು ನಿಮ್ಮ ಸ್ಮರಣೆಯಲ್ಲಿ ಇರುತ್ತಾರೆ. ಅದೇ ರೀತಿಯಲ್ಲಿ, ಬೇರೆ ಬೇರೆ ದೇವತೆಯರು, ದೇವದೂತರು ಅಥವಾ ದೇವ ದೇವಿಯರು, ನಮ್ಮ ಶರೀರದ ಪ್ರತಿಯೊಂದು ಭಾಗಕ್ಕಾಗಿ ಇದ್ದಾರೆ.

ಶರೀರದ ಪ್ರತಿಯೊಂದು ಭಾಗವು ಒಂದು ನಿರ್ದಿಷ್ಟ ದೇವತೆಯಿಂದ ಆಳಲ್ಪಡುತ್ತದೆ. ನಾವು ಅವರನ್ನು ನೆನಪಿಸಿಕೊಂಡಂತೆ, ಇರುವಿಕೆಯು ಮೇಲೆ ಬರುತ್ತದೆ; ಇರುವಿಕೆಯನ್ನು ನಾವು ಅನುಭವಿಸುತ್ತೇವೆ.

ಈ ನಂಬಿಕೆಯು ಪ್ರಪಂಚದ ಬಹುತೇಕ ಎಲ್ಲಾ ಸಂಪ್ರದಾಯಗಳಲ್ಲಿ ಇದೆ; ಮೆಕ್ಸಿಕೋ, ದಕ್ಷಿಣ ಅಮೇರಿಕಾದಿಂದ ಹಿಡಿದು ಮಂಗೋಲಿಯಾದ ವರೆಗೆ. ಹೀಗಿದ್ದರೂ, ಕೇವಲ ನಂಬಿಕೆಯೊಂದೇ ಕೆಲಸ ಮಾಡದು. ನೀವು ಧ್ಯಾನ ಮಾಡುವಾಗ ಏನಾಗುತ್ತದೆಯೆಂಬುದು ನಿಮಗೆ ಗೊತ್ತೇ? ವಾಸ್ತವಿಕತೆಯ ಇತರ ಲೋಕಗಳೊಂದಿಗೆ ನೀವೊಂದು ಸಂಬಂಧವನ್ನು ಸೃಷ್ಟಿಸುತ್ತಿರುತ್ತೀರಿ.

ನಿಮ್ಮ ಮನಸ್ಸು ಸ್ಥಿರವಾಗಿರುವಾಗ, ಧ್ಯಾನವು ಆಗುತ್ತಿರುವಾಗ ನೀವು ನಿಮ್ಮ ಸ್ವಂತ ಶರೀರದ ಎಲ್ಲಾ ಕೋಶಗಳನ್ನು ಶುದ್ಧಗೊಳಿಸುತ್ತಿರುವುದು ಮಾತ್ರವಲ್ಲ, ನಿಮ್ಮ ಸುತ್ತಲೂ ಧನಾತ್ಮಕ ಶಕ್ತಿಯನ್ನು ಹರಡುತ್ತಿರುತ್ತೀರಿ. ನಿಮ್ಮ ಧ್ಯಾನವು, ಈಗಾಗಲೇ ತೀರಿ ಹೋಗಿ ಇನ್ನೊಂದು ಬದಿಯನ್ನು ಸೇರಿದ ಜನರಿಗೆ ಶಾಂತಿ ಮತ್ತು ಆನಂದವನ್ನು ತರುತ್ತದೆ, ಇದು ಬಹಳ ಬಹಳ ಮುಖ್ಯವಾದುದು.

ನೀವು ಮೌನವಾಗಿರುವಾಗ, ನೀವು ಪ್ರಪಂಚದಿಂದ ಮನಸ್ಸಿನೊಳಕ್ಕೆ ವಿಷಯಗಳನ್ನು ಹಾಕುತ್ತಿರುವುದಿಲ್ಲ; ಶರೀರವನ್ನು ಮತ್ತು ಮನಸ್ಸನ್ನು ಶುದ್ಧೀಕರಿಸುವುದರೊಂದಿಗೆ, ನೀವು ನಿಮ್ಮನ್ನು ಮುಕ್ತವಾಗಿರಲು ಬಿಡುತ್ತೀರಿ. ಈ ಸಮಯದಲ್ಲಿ ನಿಮ್ಮ ಮನಸ್ಸಿನ ಮೇಲೆ ಕೆಲವು ಯೋಚನೆಗಳ ಸುರಿಮಳೆಯಾಗಬಹುದು. ಕೆಲವು ಹಳೆಯ ವಿಷಯಗಳು ಸುಮ್ಮನೆ ಬಂದು ನಿಮಗೆ ತೊಂದರೆ ಕೊಡಬಹುದು. ಪರವಾಗಿಲ್ಲ, ಹೆದರಬೇಡಿ. ನೀವು ಕುಳಿತಿರುವುದಷ್ಟೇ ಸಾಕು. ಏನೆಲ್ಲಾ ಆಗುವುದೋ ಅದೆಲ್ಲವೂ ಒಳ್ಳೆಯದಕ್ಕೇ.

ಹಳೆಯ ಯೋಚನೆಗಳು ಬಂದು ನಿಮಗೆ ತೊಂದರೆ ಕೊಡುತ್ತಿರುವುದಾದರೆ, ಪರವಾಗಿಲ್ಲ, ಅವುಗಳು ಸುಮ್ಮನೆ ಬರುತ್ತವೆ ಮತ್ತು ಹೋಗುತ್ತವೆ. ಹಾಗಿದ್ದರೂ, ಮೌನವನ್ನು ಕಾಪಾಡುವುದು ಬಹಳ ಬಹಳ ಅಮೂಲ್ಯವಾದುದು, ಕೇವಲ ನಿಮಗಾಗಿಯಲ್ಲ, ಆದರೆ ಸೂಕ್ಷ್ಮ ಲೋಕಕ್ಕಾಗಿ ಕೂಡಾ. ಪ್ರಪಂಚಕ್ಕಾಗಿ ಕೂಡಾ, ಯಾಕೆಂದರೆ ನೀವು ಮೌನವಾಗಿರುವ ಪ್ರತಿ ನಿಮಿಷವೂ, ನೀವು ಧ್ಯಾನ ಮಾಡುತ್ತಿರುವ ಪ್ರತಿ ನಿಮಿಷವೂ ನೀವು ಅಂತಹ ಧನಾತ್ಮಕ ಕಂಪನಗಳನ್ನು ಸೃಷ್ಟಿಸುತ್ತಿರುತ್ತೀರಿ!

ಜೊತೆಗೆ, ಪೂರ್ಣ ಚಂದ್ರ, ಸಾಗರ ಮತ್ತು ಧ್ಯಾನ, ಇವುಗಳೆಲ್ಲವೂ ಚೆನ್ನಾಗಿ ಹೊಂದಿಕೆಯಾಗುತ್ತವೆ. ಅತಿಯಾದ ಚಟುವಟಿಕೆಯಲ್ಲಿ ತೊಡಗಿದ್ದರೆ ಮನಸ್ಸು ಕ್ಷೋಭೆಗೊಳಗಾಗುವುದು. ಸಮಯದಿಂದ ಸಮಯಕ್ಕೆ, ನೀವು ನಿಮ್ಮನ್ನು ಚಟುವಟಿಕೆಯಿಂದ ಹಿಂದಕ್ಕೆ ತೆಗೆದುಕೊಂಡಾಗ ಕ್ಷೋಭೆಯು ಮಾಯವಾಗುತ್ತದೆ, ಧ್ಯಾನವು ಉಕ್ಕುತ್ತದೆ.

ಜ್ಞಾನ ಚಕ್ಷುವು ತೆರೆದಿರಲಿ

ನುಸಾ ದುವಾ, ಬಾಲಿ
೨೭ ಎಪ್ರಿಲ್ ೨೦೧೩

ಪ್ರಶ್ನೆ: ಪ್ರೀತಿಯ ಗುರುದೇವ, ನೀವು ನಮಗೆ ದೇವರ ತಾಯಿ ಮತ್ತು ತಂದೆಯ ಬಗ್ಗೆ ಹೇಳುವಿರಾ? ಮತ್ತು ದೇವರಿಗೆ ಎಷ್ಟು ಸಹೋದರ ಸಹೋದರಿಯರಿದ್ದಾರೆ?

ಶ್ರೀ ಶ್ರೀ ರವಿ ಶಂಕರ್: ಓ ದೇವರೇ! ಒಂದು ಟೆನ್ನಿಸ್ ಚೆಂಡು ಎಲ್ಲಿಂದ ಪ್ರಾರಂಭವಾಗುವುದೆಂದು ನೀನು ನನಗೆ ಹೇಳಿದರೆ, ದೇವರ ತಾಯಿ ಮತ್ತು ತಂದೆ ಯಾರೆಂಬುದನ್ನು ನಾನು ನಿನಗೆ ಹೇಳುವೆನು.

ಮೈ ಡಿಯರ್, ಹುಟ್ಟುವ ಅಥವಾ ಸಾಯುವ ಒಂದನ್ನು ನೀವು ದೇವರು ಎಂದು ಕರೆಯುವುದಿಲ್ಲ. ದೇವರೆಂದರೆ ಪ್ರಕಾಶ, ಪ್ರಜ್ಞೆ, ಯಾವುದಕ್ಕೆ ಜನ್ಮವಿಲ್ಲವೋ ಅದು.

ವಿಶ್ವದಲ್ಲಿ ಮೂರು ವಿಷಯಗಳು ಶಾಶ್ವತವಾಗಿವೆ.

ಒಂದನೆಯದು ವಿಶ್ವ. ಅದು ಯಾವತ್ತಿನಿಂದಲೂ ಅಲ್ಲಿದೆ. ಎರಡನೆಯದು ಆತ್ಮ; ಪ್ರತ್ಯೇಕ ಆತ್ಮವು ಶಾಶ್ವತವಾಗಿದೆ. ಮೂರನೆಯದು, ದೊಡ್ಡ ಮನಸ್ಸು ಅಥವಾ ದೇವರು; ಅದು ಯಾವತ್ತೂ ಇದೆ, ಅಲ್ಲದಿದ್ದರೆ ಅದು ದೇವರೆಂದು ಕರೆಯಲ್ಪಡದು.

ದೇವರು ಕೇವಲ ೨,೦೦೦ ವರ್ಷಗಳ ಮೊದಲು ಮಾತ್ರವಿದ್ದು, ಈಗ ಇಲ್ಲದೇ ಇರುವುದಾದರೆ, ಆಗ ಅದು ದೇವರಲ್ಲ. ಅಥವಾ ದೇವರು ಭವಿಷ್ಯಕಾಲದಲ್ಲಿ ಬರಲಿರುವುದಾದರೆ, ಅದು ದೇವರಲ್ಲ. ದೇವರೆಂದರೆ, ಯಾವುದು ಹಿಂದೆ ಇತ್ತೋ, ಈಗ ಇದೆಯೋ ಮತ್ತು ಮುಂದೆ ಇರುವುದೋ ಅದು; ಯಾವುದು ಸರ್ವವ್ಯಾಪಿಯಾದುದೋ ಅದು. ದೇವರೆಂದರೆ ಒಂದು ವ್ಯಕ್ತಿಯಲ್ಲ. ಅದು ಶಕ್ತಿ, ಅದು ಆಕಾಶ.

ಉಪನಿಷತ್ತುಗಳಲ್ಲಿ ಒಂದು ಸುಂದರವಾದ ಕಥೆಯಿದೆ.

ಎಂಟು ವರ್ಷಗಳ ಒಬ್ಬ ಹುಡುಗನು ತನ್ನ ತಂದೆಯಲ್ಲಿ ಕೇಳುತ್ತಾನೆ, ’ಅಪ್ಪಾ, ದೇವರು ಹೇಗಿರುತ್ತಾನೆ?’ ಅದಕ್ಕೆ ತಂದೆಯು ಹುಡುಗನ ಕೈಹಿಡಿದು ಮನೆಯಿಂದ ಹೊರಗೆ ಕರೆದುಕೊಂಡು ಹೋಗುತ್ತಾನೆ ಮತ್ತು ಅವನು ಕೇಳುತ್ತಾನೆ, ’ಕಟ್ಟಡವನ್ನು ಕಟ್ಟುವ ಮೊದಲು ಈ ಜಾಗದಲ್ಲಿ ಏನಿತ್ತು?’

ಹುಡುಗನಂದನು, ’ಖಾಲಿ ಆಕಾಶ.’

ತಂದೆಯು ಕೇಳುತ್ತಾನೆ, ’ಮತ್ತೆ ಈ ಕಟ್ಟಡವು ಎಲ್ಲಿ ನಿಂತಿದೆ?’

ಹುಡುಗನನ್ನುತ್ತಾನೆ, ’ಆಕಾಶದಲ್ಲಿ.’

’ಕಟ್ಟಡವನ್ನು ಕೆಡವಿ ಹಾಕುವಾಗ, ಅಲ್ಲಿ ಏನಿರುವುದು?’

ಹುಡುಗನಂದನು, ’ಆಕಾಶ.’

ತಂದೆಯಂದನು, ’ಹಾಗಾದರೆ, ಆಕಾಶವೆಂದರೆ ಯಾವುದು ಯಾವತ್ತೂ ಅಲ್ಲಿರುವುದೋ ಅದು, ಸರಿಯಾ?’

ಹುಡುಗನಂದನು, ’ಹೌದು.’

ತಂದೆಯಂದನು, ’ದೇವರಿರುವುದು ಹಾಗೆಯೇ.’

ದೇವರೆಂದರೆ, ಯಾವುದರಲ್ಲಿ ಎಲ್ಲವೂ ಬರುವುದೋ, ಯಾವುದರಲ್ಲಿ ಎಲ್ಲವೂ ಉಳಿಯುವುದೋ, ಯಾವುದರೊಳಗೆ ಎಲ್ಲವೂ ವಿಲೀನವಾಗುವುದೋ ಅಂತಹ ಆಕಾಶದಂತೆ. ಅದನ್ನು ನಾಶಪಡಿಸಲು ಸಾಧ್ಯವಿಲ್ಲ, ಮತ್ತು ಅದು ಯಾವತ್ತೂ ಇದೆ. ನಿಮಗೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.  ನಿಮಗೆ ದೇವರಿಂದ ದೂರ ಹೋಗಲು ಸಾಧ್ಯವೇ ಇಲ್ಲ. ಅಸಾಧ್ಯ!

ನಂತರ ಈ ಪ್ರಶ್ನೆ ಬರುತ್ತದೆ, ’ದೇವರು ಪೂರ್ತಿ ಒಳ್ಳೆಯದಾಗಿದ್ದರೆ, ಕೆಟ್ಟ ಜನರು ದೇವರಾಗಿರಲು ಹೇಗೆ ಸಾಧ್ಯ? ಒಳ್ಳೆಯ ಜನರಿದ್ದಾರೆ ಮತ್ತು ಕೆಟ್ಟ ಜನರಿದ್ದಾರೆ, ಅವರೆಲ್ಲರನ್ನೂ ನೀವು ದೇವರೆಂದು ಕರೆಯಲು ಹೇಗೆ ಸಾಧ್ಯ?’

ನಾನು ನಿಮಗೆ ಇನ್ನೊಂದು ಉದಾಹರಣೆಯನ್ನು ಕೊಡಲು ಬಯಸುತ್ತೇನೆ; ಒಂದು ಸಿನೆಮಾದ್ದು. ಒಂದು ಸಿನೆಮಾವನ್ನು ಹೇಗೆ ಪ್ರದರ್ಶಿಸಲಾಗುತ್ತದೆ? ಚಿತ್ರಸುರುಳಿಯ ಹಿಂದಿನಿಂದ ಒಂದು ಪ್ರಕಾಶದ ಕಿರಣವನ್ನು ಬೀರುವುದರ ಮೂಲಕ ಅದನ್ನು ಪ್ರದರ್ಶಿಸಲಾಗುತ್ತದೆ, ಸರಿಯಾ? ಪ್ರೊಜೆಕ್ಟರ್‌ನಲ್ಲಿ ಹೇಗೆ ರೀಲ್ ಚಲಿಸುತ್ತದೆ ಮತ್ತು ಅದರ ಹಿಂದೆ ಬೆಳಕು ಇರುವುದನ್ನು ನೀವು ನೋಡಿದ್ದೀರಾ? ಈ ಬೆಳಕಿನ ಕಾರಣದಿಂದಲೇ ಸಿನೆಮಾವು ಪರದೆಯ ಮೇಲೆ ಬಿಂಬಿಸಲ್ಪಡುವುದು. ಆದುದರಿಂದ, ಅದು ಯಾವುದೇ ಸಿನೆಮಾವಾದರೂ ಪರವಾಗಿಲ್ಲ, ನಾಯಕನೇ ಬರಲಿ ಅಥವಾ ಖಳನಾಯಕನೇ ಬರಲಿ, ಬೆಳಕು ಒಂದೇ ಆಗಿರುವುದು, ಅಲ್ಲವೇ? ಬೆಳಕು ದೇವರು ಮತ್ತು ನಾಯಕ, ಖಳನಾಯಕ ಹಾಗೂ ನೀವು ನೋಡುವ ಯಾವುದೇ ಒಳ್ಳೆಯದು ಅಥವಾ ಕೆಟ್ಟದ್ದು; ಆಗುವುದೆಲ್ಲವೂ ಕೇವಲ ಒಂದು ಸಂಭವ ಮಾತ್ರ. ಅದಕ್ಕೂ ಬೆಳಕಿಗೂ ಯಾವುದೇ ಸಂಬಂಧವಿಲ್ಲ. ನಿಮಗೆ ಅವುಗಳನ್ನು ನೋಡಲು ಸಾಧ್ಯವಾಗುವುದು ಕೂಡಾ ಬೆಳಕಿನಿಂದಾಗಿಯೇ. ನಿಮಗಿದು ಅರ್ಥವಾಗುತ್ತಿದೆಯೇ?

ಆದುದರಿಂದ, ದೇವರೆಂದರೇನು ಮತ್ತು ಪ್ರಕೃತಿಯೆಂದರೇನು ಎಂಬುದನ್ನು ನೀವು ನಿಜವಾಗಿಯೂ ತಿಳಿದುಕೊಳ್ಳಬೇಕಾದರೆ, ನೀವೊಬ್ಬ ವಿಜ್ಞಾನಿಯಾಗಿರಬೇಕು. ನೀವೊಬ್ಬ ಭೌತವಿಜ್ಞಾನಿಯಾಗಿದ್ದರೆ, ನೀವು ತಿಳಿದುಕೊಳ್ಳಬಹುದು. ನೀವು ಕ್ವಾಂಟಮ್ ಭೌತಶಾಸ್ತ್ರವನ್ನು ಅರ್ಥಮಾಡಿಕೊಂಡರೆ, ನೀವು ಅಧ್ಯಾತ್ಮಿಕತೆಯನ್ನು, ದೇವರನ್ನು ಇನ್ನೂ ಉತ್ತಮವಾಗಿ ಅರ್ಥ ಮಾಡಿಕೊಳ್ಳಬಹುದು.

ಈಗ, ದೇವರು ಎಲ್ಲೆಡೆ ಇರುವುದಾದರೆ, ಅವನು ಇಲ್ಲಿರುವನೇ? ಹೌದು.

ದೇವರು ಎಲ್ಲರಿಗೂ ಸೇರಿದವನಾಗಿದ್ದರೆ, ಅವನು ನಿನಗೆ ಸೇರಿದವನೇ? ಹೌದು.

ದೇವರು ಎಲ್ಲೆಡೆಯೂ ಇರುವುದಾದರೆ, ಅವನು ಇಲ್ಲಿಯೂ ಇರುವನೇ? ಅವನು ಯಾವತ್ತಿಗೂ ಇದ್ದನು, ಆದುದರಿಂದ ಅವನು ಈಗ ಇಲ್ಲಿರುವನು! ಅವನು ಎಲ್ಲರಿಗೂ ಸೇರಿದವನು, ಆದುದರಿಂದ ಅವನು ನನಗೆ ಸೇರಿದವನು.

ಅವನು ಎಲ್ಲಾ ಸಾಧ್ಯತೆಗಳ ಕ್ಷೇತ್ರವಾಗಿರುವನು. ಅವನು ಎಲ್ಲವನ್ನೂ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾನೆ, ಆದುದರಿಂದ ನನಗೇನೆಲ್ಲಾ ಬೇಕೋ ಅದನ್ನು ಅವನು ಪೂರೈಸುವನು.

ನೀವು ಈ ನಾಲ್ಕು ಅಂಶಗಳನ್ನು ತಿಳಿದುಕೊಂಡರೆ, ಅದು ಸಾಕು. ನಿಮಗೆ ಬೇರೇನೂ ಬೇಕಾಗಿಲ್ಲ.

ಹಾಗಾದರೆ ನೀವು ನೆನಪಿನಲ್ಲಿಡಬೇಕಾದುದು ಏನು?

ದೇವರು ಸರ್ವವ್ಯಾಪಿ, ಆದುದರಿಂದ ಅವನು ಇಲ್ಲಿ, ಈಗ ಇರುವನು. ಅವನು ನನಗೆ ಸೇರಿದವನು, ಅವನು ನನ್ನಲ್ಲಿರುವನು ಮತ್ತು ನನ್ನಲ್ಲಿ ಯಾವುದರದ್ದೆಲ್ಲಾ ಕೊರತೆಯಿದೆಯೋ ಅದನ್ನು ಪೂರೈಸಲು ಅವನು ಇರುವನು.ಅಷ್ಟೇ!

ಧ್ಯಾನದಲ್ಲಿ, ’ನಾನು’ ಎಂಬುದು ಕರಗಿಹೋಗುವಾಗ, ಜ್ಞಾನವು ಕರಗಿಹೋಗುವುದು. (ನೀವು ಯಾವುದೆಲ್ಲಾ ಜ್ಞಾನವನ್ನು ಹೊಂದುವಿರೋ ಅದು ಬಹಳ ಸೀಮಿತವಾದುದು ಎಂಬುದು ನಿಮಗೆ ತಿಳಿದಿದೆಯೇ? ಆದುದರಿಂದ, ಜ್ಞಾನವು ಕರಗಬೇಕು. ಆಳವಾದ ನಿದ್ರೆಯಲ್ಲಿ ಏನಾಗುವುದು? ಜ್ಞಾನವು ಕರಗುವುದು).

ಜ್ಞಾನವು ಕರಗುವಾಗ, ನಾನು ಎಂಬ ಪ್ರಜ್ಞೆಯು ಕರಗುವಾಗ, ಏನು ಉಳಿಯುವುದೋ, ಅದು ಮಾತ್ರ ಉಳಿಯುವುದು! ಅದುವೇ ನಿಜವಾದ ಸತ್ಯ, ಅದುವೇ ಶಿವ  ಮತ್ತು ಅದುವೇ ಭೈರವ.

ಎಲ್ಲಿ ನೀವು ಶಿವನೊಂದಿಗೆ, ಶಿವೋಹಂನೊಂದಿಗೆ ಒಂದಾಗುವಿರೋ, ಎಲ್ಲಿ ನಾನು ಎಂಬುದು ಕರಗಿರುವುದೋ, ಜ್ಞಾನವು ಕರಗಿರುವುದೋ, ಆದರೂ ಎಲ್ಲವೂ ಇರುವುದೋ, ಅದು ಭೈರವ. ನೀವದನ್ನು ಹೇಗೆ ಪಡೆಯುವಿರಿ? ನೀವದನ್ನು ಆಸಕ್ತಿ, ವಿರಕ್ತಿ ಮತ್ತು ಸಹಾನುಭೂತಿಗಳ ಮೂಲಕ ಪಡೆಯಬಹುದು. ಸಾಧನೆಗಾಗಿ ಆಸಕ್ತಿ, ಉಳಿದ ಎಲ್ಲದರ ಕಡೆಗೆ ವಿರಕ್ತಿ ಮತ್ತು ನಿಮ್ಮ ಹಾಗೂ ಇತರರ ಕಡೆಗೆ ಸಹಾನುಭೂತಿ. ಕೆಲವೊಮ್ಮೆ, ನಾವು ಇತರರ ಕಡೆಗೆ ಸಹಾನುಭೂತಿಯಿಂದ ಇರುತ್ತೇವೆ ಮತ್ತು ನಮ್ಮ ಮೇಲೆ ತುಂಬಾ ಕಠಿಣವಾಗಿರುತ್ತೇವೆ; ಅದು ಕೂಡಾ ಒಳ್ಳೆಯದಲ್ಲ.

ಪ್ರಶ್ನೆ: ಪ್ರೀತಿಯ ಗುರುದೇವ, ಅಂಗ ದಾನ, ಸಲಿಂಗ ವಿವಾಹಗಳು, ರಕ್ತದಾನಗಳು ಮತ್ತು ಗರ್ಭಪಾತಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಶ್ರೀ ಶ್ರೀ ರವಿ ಶಂಕರ್: ಅಂಗದಾನ ಪರವಾಗಿಲ್ಲ, ನೀವದನ್ನು ಮಾಡಬಹುದು; ಅದರಲ್ಲೇನೂ ತಪ್ಪಿಲ್ಲ.

ಈ ಎಲ್ಲಾ ವಿಷಯಗಳು ಬಹಳ ಸಾಪೇಕ್ಷವಾಗಿವೆ. ನೀವದಕ್ಕೆ ಒಳ್ಳೆಯದು, ಕೆಟ್ಟದ್ದು, ನಾನದನ್ನು ಬಯಸುತ್ತೇನೆ ಮತ್ತು ನಾನದನ್ನು ಬಯಸುವುದಿಲ್ಲವೆಂಬ ಲೇಬಲ್ ಹಚ್ಚಬೇಕಾಗಿಲ್ಲ. ನೀವು ಯಾವುದೇ ಆಯ್ಕೆಯನ್ನು ಮಾಡಿಕೊಂಡರೂ, ಚಿಂತಿಸಬೇಡಿ, ಪರವಾಗಿಲ್ಲ. ಹೀಗಿದ್ದರೂ, ಜೀವನವು ಈ ಚಿಕ್ಕ ಆಗುಹೋಗುವಿಕೆಗಳಿಂದ ಎಷ್ಟೋ ಹೆಚ್ಚಿನದೆಂಬುದನ್ನು ನೀವು ಮರೆಯಬಾರದು, ಅದು ಮುಖ್ಯವಾದುದು. ವಸ್ತು ಪ್ರಪಂಚದಾಚೆ ಇರುವುದರಲ್ಲಿ ಕೆಲವು ಕ್ಷಣಗಳು, ಇದರಲ್ಲಿ ಕೇವಲ ಒಂದು ಶೇಕಡಾ ನಂಬಿಕೆಯಿದ್ದರೂ ಕೂಡಾ, ಅದು ನೀವು ಮೇಲಕ್ಕೇರಲು ಸಾಕು.

ನೀವು ನೀರಿನಲ್ಲಿ, ಸಾಗರದಲ್ಲಿರುವಾಗ, ನಿಮಗೆ ಬೇಕಾಗಿರುವುದೆಂದರೆ ಒಂದು ರಬ್ಬರ್ ತೆಪ್ಪ; ಅಷ್ಟು ಸಾಕು. ಹಾಗೆಯೇ ನೀವು ಈಜಲು ಕಲಿಯುವುದು, ಸರಿಯಾ? ಅದೇ ರೀತಿಯಲ್ಲಿ, ಏನೋ ಆಚೆಗಿರುವುದರಲ್ಲಿ ಸ್ವಲ್ಪ ನಂಬಿಕೆಯಿದ್ದರೆ ಸಾಕು.

ಸಂಸ್ಕೃತದಲ್ಲಿ, ಶ್ರಾಧ್ ಎಂದು ಕರೆಯಲ್ಪಡುವ ಒಂದು ಪದವಿದೆ. ಅಂದರೆ, ಯಾವುದು ಶ್ರದ್ಧೆಯೊಂದಿಗಿದೆಯೋ, ನಂಬಿಕೆಯೊಂದಿಗಿದೆಯೋ ಅದು ಎಂದರ್ಥ.

ಒಬ್ಬರು ತೀರಿ ಹೋದಾಗ, ನೀವು ಅವರನ್ನು ನೆನೆಯುತ್ತೀರಿ. ಅವರು ಅಲ್ಲಿದ್ದರೋ ಇಲ್ಲವೋ ಎಂದು ನೀವು ಸಂಶಯ ಪಡುವುದಿಲ್ಲ. ಅವರು ನಿಮ್ಮೊಂದಿಗಿದ್ದರು ಮತ್ತು ಅವರು ಹೋಗಿರುವರು ಎಂಬುದು ನಿಮಗೆ ತಿಳಿದಿರುತ್ತದೆ. ಅವರು ಹೋಗಿರುವಾಗ, ನೀವು ಅವರನ್ನು ನೆನೆಯುವ ದಿನವು ಶ್ರಾದ್ಧ ಎಂದು ಕರೆಯಲ್ಪಡುತ್ತದೆ; ಅಂದರೆ ನಂಬಿಕೆ.

ಅವರು ಇನ್ನೂ ಅಲ್ಲಿರುವರೆಂದು ನಿಮಗೆ ನಂಬಿಕೆಯಿದೆ ಮತ್ತು ನೀವೇನು ಮಾಡುತ್ತೀರಿ? ನೀವು ಕೆಲವು ಎಳ್ಳಿನ ಬೀಜಗಳನ್ನು ತೆಗೆದುಕೊಂಡು, ಅದರ ಮೇಲೆ ನೀರನ್ನೆರೆದು, ಅವರಿಗೆ ಈ ಸಂದೇಶವನ್ನು ನೀಡುತ್ತೀರಿ, ’ತೃಪ್ತರಾಗಿರಿ, ತೃಪ್ತರಾಗಿರಿ, ತೃಪ್ತರಾಗಿರಿ. ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಬಯಕೆಗಳಿದ್ದರೆ, ಅದೆಲ್ಲವೂ ಒಂದು ಎಳ್ಳುಬೀಜದಷ್ಟು ಚಿಕ್ಕವು, ಸುಮ್ಮನೆ ಅವುಗಳನ್ನು ಬಿಟ್ಟುಬಿಡಿ. ನಿಮ್ಮ ಬಯಕೆಗಳನ್ನು ಪೂರೈಸಲು ನಾನಿಲ್ಲಿರುವೆನು. ನೀವು ಮುಂದೆ ಸಾಗಿ, ಸಂತೋಷವಾಗಿರಿ ಮತ್ತು ತೃಪ್ತರಾಗಿರಿ.’

ಇದನ್ನೇ ಮಕ್ಕಳು, ಇನ್ನೊಂದು ಬದಿಗೆ ಹಾದುಹೋಗಿರುವ ತಮ್ಮ ಹೆತ್ತವರಿಗೆ ಹೇಳುವುದು. ಅದು ಮಕ್ಕಳು ಮಾತ್ರ ಆಗಬೇಕೆಂದೇನಿಲ್ಲ; ಯಾರಾದರೂ, ಯಾವುದೇ ಮಿತ್ರ, ಯಾವುದೇ ಸಂಬಂಧಿಯು ಅದನ್ನು ಮಾಡಬಹುದು. ಇಲ್ಲಿ ಬಾಲಿಯಲ್ಲಿ ಕೂಡಾ ಮಾಡಲಾಗುವ ಒಂದು ಸಮಾರಂಭವಾಗಿದೆ ಅದು; ಅದು ಬಹಳ ಪ್ರಚಲಿತವಾಗಿದೆ.

ಈ ಸಮಾರಂಭದಲ್ಲಿ, ಎಲ್ಲ ಐದು ಇಂದ್ರಿಯಗಳನ್ನು ತೃಪ್ತಿಪಡಿಸಲಾಗುತ್ತದೆ; ರುಚಿಗೆ ಆಹಾರವಿದೆ, ಆಘ್ರಾಣಿಸಲು ಊದುಬತ್ತಿಗಳಿವೆ, ಶಬ್ದಕ್ಕೆ ಗಾಯನವಿದೆ ಮತ್ತು ನೋಡಲು ಒಂದು ದೀಪ ಅಥವಾ ಪ್ರಕಾಶವಿದೆ. ಇನ್ನೊಂದು ಬದಿಗೆ ಹಾದುಹೋದ ಜನರಿಗೆ ಒಬ್ಬರ ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ರೀತಿಯಾಗಿದೆ ಇದು. ಅಸ್ತಿತ್ವದಲ್ಲಿ ಇನ್ನೊಂದು ಪ್ರಪಂಚವಿದೆ, ಇನ್ನೊಂದು ಲೋಕವಿದೆ ಮತ್ತು ಇನ್ನೊಂದು ಬಯಲು ಇದೆ, ಕೇವಲ ಇದೊಂದೇ ಅಲ್ಲ ಎಂಬುದನ್ನು ನಿಮಗೆ ನೆನಪಿಸಲಿಕ್ಕಾಗಿಯೂ ಕೂಡಾ ಇದನ್ನು ಮಾಡಲಾಗುತ್ತದೆ. ಹೀಗೆ, ಜೀವನವು ಇನ್ನೂ ದೊಡ್ಡ ಆಯಾಮವನ್ನು ಗಳಿಸುತ್ತದೆ. ನಿಮ್ಮ ಕಣ್ಣುಗಳು ಮೆಲಿನದ್ದನ್ನು ನೋಡುತ್ತವೆ.

ಪ್ರಶ್ನೆ: ಗುರುದೇವ, ನೀವು ನಮಗೆ ಈ ಜೀವನದಲ್ಲಿ ಇಷ್ಟೊಂದು ನೀಡಲು, ನಾವು ನಮ್ಮ ಕಳೆದ ಜನ್ಮದಲ್ಲಿ ಏನು ಮಾಡಿದ್ದೇವೆ ಎಂದು ನನಗೆ ಅಚ್ಚರಿಯಾಗುತ್ತದೆ. ಬಯಸುವ ಮೊದಲೇ ಅದನ್ನು ಕೊಡಲಾಗುತ್ತದೆ. ಎಲ್ಲದಕ್ಕೂ ನಿಮಗೆ ಬಹಳ ಧನ್ಯವಾದಗಳು.

ಶ್ರೀ ಶ್ರೀ ರವಿ ಶಂಕರ್: ಬಹಳ ಒಳ್ಳೆಯದು. ನಾವು ಹೆಚ್ಚು ಕೃತಜ್ಞರಾಗಿದ್ದಷ್ಟೂ, ಹೆಚ್ಚು ಉಡುಗೊರೆಗಳು ನಮ್ಮ ದಾರಿಯಲ್ಲಿ ಬರುತ್ತವೆ. ನಿಮ್ಮಲ್ಲಿ ಎಷ್ಟು ಮಂದಿಗೆ ಇದರ ಅನುಭವವಾಗಿದೆ? ನೀವು ಏನನ್ನೆಲ್ಲಾ ಬಯಸುವಿರೋ, ಅದೆಲ್ಲವೂ ನಿಜವಾಗುತ್ತವೆ. ನಿಮಗೆ ಏನೋ ಬೇಕು ಮತ್ತು ಅದೆಲ್ಲವೂ ಪ್ರಕಟವಾಗುತ್ತದೆ. ಅಷ್ಟೇ! ನಿಮಗೇನು ಬೇಕು ಅದು ನಿಮ್ಮ ಬಳಿಗೆ ಬರುತ್ತದೆ; ಅದು ನಮ್ಮ ಪಥದಲ್ಲಿರುವ ಸೌಂದರ್ಯವಾಗಿದೆ.

ಕೆಲವೊಮ್ಮೆ, ನಾವು ಸ್ವಲ್ಪ ತುಂಟತನವನ್ನು ಕೂಡಾ ಮಾಡಬೇಕು; ಅತಿಯಾಗಿ ಗಂಭೀರವಾಗಬಾರದು. ಈ ಸುಂದರ ಜ್ಞಾನವು ಬಹಳ ಆಳವಾಗಿದೆ, ಆದರೂ ಇದನ್ನು ವಿನೋದವಾಗಿ ತೆಗೆದುಕೊಳ್ಳಬೇಕು; ಅಂದರೆ ಅತಿಯಾದ ಗಂಭೀರತೆಯಿಂದಲ್ಲ.

ಅದಕ್ಕಾಗಿಯೇ ಇದು ಲೀಲೆ ಎಂದು ಕರೆಯಲ್ಪಡುವುದು, ಅಂದರೆ ಆಟ ಅಥವಾ ನಾಟಕ ಎಂದರ್ಥ. ಇದು ದೇವರ ಆಟ ಎಂದು ಕರೆಯಲ್ಪಡುವುದು; ರಾಮ ಲೀಲೆ, ಕೃಷ್ಣ ಲೀಲೆ.

ಹೀಗೆ, ಸಂಪೂರ್ಣ ವಿಶ್ವವು ಪ್ರಜ್ಞೆಯ ಒಂದು ಆಟ ಮತ್ತು ಪ್ರದರ್ಶನವಾಗಿದೆ; ದೇವರ ಆಟ. ಜೀವನ ಕೂಡಾ ಒಂದು ಆಟವಾಗಿದೆ; ಅದೊಂದು ನಾಟಕವಾಗಿದೆ, ಒಂದು ಯುದ್ಧ ಅಥವಾ ಹೋರಾಟವಲ್ಲ. ನೀವದನ್ನು ನೆನಪಿನಲ್ಲಿಡಬೇಕು.

ಹೇಗಾದರೂ, ಕೊನೆಯಲ್ಲಿ ಆಟವು ಮುಗಿಯುವುದು ಮತ್ತು ಎಲ್ಲರೂ ಸಾಯುವರು. ಎಲ್ಲರೂ ಸಾಯಲಿದ್ದಾರೆ. ಕೆಲವು ಸಲ ಸುತ್ತು ಹಾಕುತ್ತಾ, ಒಂದಲ್ಲ ಒಂದು ದಿನ ಎಲ್ಲರೂ ಪ್ರಕಾಶದೊಂದಿಗೆ ವಿಲೀನವಾಗುವರು. ಆದುದರಿಂದ, ಜೀವನವು ಆಳವಾಗಿದೆ ಮತ್ತು ಅದೇ ಸಮಯದಲ್ಲಿ, ಮೋಜು, ಆನಂದ ಮತ್ತು ಲೀಲೆ; ಇವೆರಡೂ ಆಗಿದೆ.

ಪ್ರಶ್ನೆ: ಪ್ರೀತಿಯ ಗುರುದೇವ, ನಾವೊಂದು ಮಾಹಾಭಾರತದಲ್ಲಿ ಸಿಲುಕಿಹಾಕಿಕೊಂಡಿರುವೆವೇ ಎಂಬುದನ್ನು ನಾವು ತಿಳಿಯುವುದು ಹೇಗೆ? ಅದರಿಂದ ನಾವು ಹೊರಬರುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಇದು, ’ನನಗೆ ಛಳಿಯಾದರೆ ನನಗೆ ತಿಳಿಯುವುದು ಹೇಗೆ?’ ಎಂದು ಕೇಳುವಂತೆ. ನಿಮಗೆ ಛಳಿಯಾಗುವಾಗ, ನಿಮಗೆ ಛಳಿಯ ಅನುಭವವಾಗುವುದು. ಆದುದರಿಂದ, ನೀವು ಮಹಾಭಾರತದಲ್ಲಿರುವಾಗ, ಅಂದರೆ ನೀವೊಂದು ದೊಡ್ಡ ಜಗಳದ ಮಧ್ಯೆಯಿರುವಾಗ, ಅದು ಬಹಳ ಸ್ಪಷ್ಟವಾಗಿರುತ್ತದೆ, ನೀವು ನಿಮ್ಮ ನಿದ್ರೆಯನ್ನು ಕಳೆದುಕೊಳ್ಳುತ್ತೀರಿ.

ಜೀವನದಲ್ಲಿ, ಒಂದು ಹೋರಾಟವಿದೆ, ಜಗಳವಿದೆಯೆಂದು ನಿಮಗೆ ಕಾಣಿಸಿದರೆ ಮತ್ತು ಅದೊಂದು ಒಳ್ಳೆಯ ಉದ್ದೇಶಕ್ಕಾಗಿ ಆಗಿದ್ದರೆ, ಸುಮ್ಮನೆ ಎದ್ದುನಿಲ್ಲಿ ಹಾಗೂ ಅದನ್ನು ಮಾಡಿ. ಒಂದು ಹೋರಾಟವನ್ನು ಮಾಡುವುದು ಲಾಭಕರವಲ್ಲ, ಅದರಿಂದೇನೂ ಪ್ರಯೋಜನವಿಲ್ಲ ಎಂದು ನಿಮಗೆ ಅನ್ನಿಸಿದರೆ, ಆಗ ನೀವು ನಿಮ್ಮ ತಂತ್ರವನ್ನು ಬದಲಾಯಿಸಬೇಕು; ಸಿಲುಕಿಹಾಕಿಕೊಂಡಿರಬೇಡಿ ಮತ್ತು ಮುಂದೆ ಸಾಗಿ.

ಪ್ರಶ್ನೆ: ಯಾವ ಹಂತದಲ್ಲಿ ಜೀವನದ ಸೃಷ್ಟಿಯಾಗುತ್ತದೆ? ಜನಿಸುವ ಸಮಯದಲ್ಲೇ ಅಥವಾ ಅಂಡಾಣುವಿನ ಫಲೀಕರಣದ ಸಮಯದಲ್ಲೇ ಅಥವಾ ಮಧ್ಯೆಯಿರುವ ಯಾವುದಾದರೂ ಹಂತದಲ್ಲೇ?

ಶ್ರೀ ಶ್ರೀ ರವಿ ಶಂಕರ್: ಎಲ್ಲಾ ಮೂರು ಸಾಧ್ಯವಿದೆ. ಒಂದು ಆತ್ಮವು, ಗರ್ಭಧಾರಣೆಯ ಸಮಯದಲ್ಲಿ ಅಥವಾ ಐದನೆಯ ತಿಂಗಳಿನಲ್ಲಿ ಮತ್ತು ಕೆಲವು ಅಪರೂಪದ ಸಂದರ್ಭಗಳಲ್ಲಿ, ಜನನದ ಸಮಯದಲ್ಲಿ ಕೂಡಾ ಬರಬಹುದು.

ಇದೆಲ್ಲವೂ ಜನನದ ರಹಸ್ಯವೆಂದು ಕರೆಯಲ್ಪಡುತ್ತದೆ ಮತ್ತು ನಾವು ಅವುಗಳ ಬಗ್ಗೆ ಮಾತನಾಡುವ ಹಾಗಿಲ್ಲ. ಐದು ಮಹತ್ತರವಾದ ರಹಸ್ಯಗಳಲ್ಲಿ ಒಂದಾದ - ಜನನ ರಹಸ್ಯ, ಮರಣ ರಹಸ್ಯ, ಇವುಗಳನ್ನೆಲ್ಲಾ ಅತಿಯಾಗಿ ಚರ್ಚೆ ಮಾಡಬಾರದು. ಹೀಗಿದ್ದರೂ, ನೀವದನ್ನು ಅನ್ವೇಷಿಸಬಹುದು; ಅದನ್ನು ಅನ್ವೇಷಿಸಲು ನೀವು ಧ್ಯಾನದಲ್ಲಿ ಆಳಕ್ಕೆ ಹೋಗಬಹುದು.
     
ಪ್ರಶ್ನೆ: ಪ್ರೀತಿಯ ಗುರುದೇವ, ಇತರ ಗ್ರಹಗಳಲ್ಲಿ ಯಾವ ರೀತಿಯ ಜೀವಿಗಳು ಅಸ್ತಿತ್ವದಲ್ಲಿವೆ? ಅವರ ಆಧ್ಯಾತ್ಮಿಕ ಪ್ರಪಂಚವು ನಮ್ಮ ರೀತಿಯದ್ದೇ ಆಗಿದೆಯೇ?

ಶ್ರೀ ಶ್ರೀ ರವಿ ಶಂಕರ್: ಹೌದು, ನಮ್ಮ ಭೂಮಿಯಂತೆ ಹಲವಾರು ಗ್ರಹಗಳಿವೆ. ನಿಜವಾಗಿ, ನಮ್ಮ ಹಳೆಯ ಧರ್ಮಗ್ರಂಥಗಳು ಹೇಳುವುದೇನೆಂದರೆ, ವಿಶ್ವದಲ್ಲಿ; ಬೇರೆ ಬೇರೆ ಪ್ರಪಂಚದಲ್ಲಿ ನಿಮ್ಮದೇ ರೀತಿಯ ಐದು ಪ್ರತಿರೂಪಿ ಜೀವಿಗಳಿವೆಯೆಂದು.

ಶುಕ್ರವಾರ, ಏಪ್ರಿಲ್ 26, 2013

ಸ್ವರ್ಗದ ಬಾಗಿಲು

ಬಾಲಿ, ಇಂಡೊನೇಷಿಯಾ
೨೬  ಏಪ್ರಿಲ್ ೨೦೧೩

ಗತ್ತು ಅತ್ಯಂತ ಸುಂದರವಾಗಿದೆ. ಅನೇಕ ಬಗೆಯ ಹೂಗಳು, ಹಣ್ಣುಗಳು, ಮರಗಳು, ಪ್ರಾಣಿಗಳು, ಮನುಷ್ಯರು ಇಲ್ಲಿದ್ದಾರೆ; ಸಕಲ ವೈವಿಧ್ಯತೆಯೂ ನಿಮ್ಮನ್ನು ಹರ್ಷದಿಂದಿರಿಸುವ ಸಲುವಾಗಿ ಸೃಷ್ಟಿಸಲ್ಪಟ್ಟಿವೆ.

ಆದರೆ ನಿಮ್ಮ ಮನಸ್ಸು ನಿಮ್ಮನ್ನು ಸಂತಸದಿಂದಿರಲು ಬಿಡುತ್ತಿಲ್ಲ. ಅತ್ಯುತ್ತಮ ತಾಣವನ್ನೇ ಸಂದರ್ಶಿಸುತ್ತಿರುವಾಗಲೂ ಕಳೆದುಹೋದ ಕಹಿ ಘಟನೆಯೊಂದನ್ನು ನೆನೆಯುತ್ತ ಕೊರಗುತ್ತಿರುತ್ತದೆ, ಎಂಥ ವಿಚಿತ್ರ!

ಅತಿ ದೊಡ್ಡ ವಿಸ್ಮಯವೀ ಮನಸ್ಸು. ನಿಮ್ಮ ಮನಸ್ಸು ನಿಮ್ಮ ಮಿತ್ರನೂ, ಶತ್ರುವೂ ಆಗಬಲ್ಲುದು. ಮನಸ್ಸೇ ನಮ್ಮ ಸಂತೋಷಕ್ಕೂ ಸಂತಾಪಕ್ಕೂ ಕಾರಣೀಭೂತವಾದುದು. ಮನಸ್ಸು ವರ್ತಮಾನದಲ್ಲಿದ್ದಾಗ ಪ್ರತಿಯೊಂದೂ ಸುಂದರವಾಗಿಯೇ ಕಾಣುತ್ತದೆ. ಅದೇ ಗೊಂದಲದಲ್ಲಿದ್ದಾಗ, ಎಂಥ ಒಳ್ಳೆಯ ಯಾತ್ರಾಸ್ಥಳದಲ್ಲಿಯೂ ಸಾವಿರ ವಿಧದ ಕೊರತೆಗಳನ್ನು ಮನಸ್ಸು ಹುಡುಕುತ್ತಿರುತ್ತದೆ.

ಮನಃಸ್ಥಿತಿಯ ಐದು ಬಗೆಗಳಿವೆ.

ಮೊದಲಿಗೆ ಮನಸ್ಸು ಪ್ರತಿಯೊಂದಕ್ಕೂ ಆಧಾರವನ್ನು ಅಪೇಕ್ಷಿಸುತ್ತದೆ. ಪ್ರತಿಯೊಂದಕ್ಕೂ ನೀವು ಆಧಾರವನ್ನು ಹೇಗೆ ನೀಡಲಾದೀತು? ಅಸಾಧ್ಯ!

ಎರಡನೆಯದಾಗಿ ವಿಚಾರಗಳನ್ನು ಮನಸ್ಸು ನೇರವಾಗಿ ಅರ್ಥ ಮಾಡಿಕೊಳ್ಳದೆ, ಅವುಗಳ ಬಗ್ಗೆ ಬೇರೇನನ್ನೋ ಆಲೋಚಿಸುತ್ತದೆ. ನೀವು ಏನನ್ನು ನೆನೆಯುವಿರೋ ಅದು ಅಲ್ಲವೇ ಅಲ್ಲವೆಂಬುದು ಸ್ವಲ್ಪ ಸಮಯದ ನಂತರ ಗೋಚರಿಸುತ್ತದೆ; ಇನ್ನಷ್ಟು ಸಮಯದ ನಂತರ ನೆನೆದದ್ದನ್ನೂ ಗೋಚರಿಸಿದ್ದನ್ನೂ ಮನವು ತಿರಸ್ಕರಿಸುತ್ತದೆ. ಇದನ್ನು ವಿಪರ್ಯಾಯವೆನ್ನುತ್ತಾರೆ.

ಮೂರನೆಯದಾಗಿ ಮನವೇನನ್ನೋ ಕಲ್ಪಿಸಿಕೊಳ್ಳುತ್ತದೆ; ವಸ್ತುಸ್ಥಿತಿ ಹಾಗಿರುವುದೇ ಇಲ್ಲ.

ನಾಲ್ಕನೆಯದಾಗಿ ಮನವು ನಿದ್ರೆಗೆ ಜಾರುತ್ತದೆ. ಯಾವುದೇ ಆಲೋಚನೆಯಿಲ್ಲದಿದ್ದಾಗ ನಿದ್ದೆಯಲ್ಲಿ ಮುಳುಗಿರುತ್ತದೆ.

ಐದನೆಯದಾಗಿ ಗತಿಸಿದ ಸಂಗತಿಗಳ ನೆನೆಪಿಗೆ ಮನವು ಅಂಟಿಕೊಂಡಿರುತ್ತದೆ, ಅಥವ ಮುಂದಾಗುವುದರ ಬಗ್ಗೆ ಚಿಂತಿಸುತ್ತಿರುತ್ತದೆ.

ಮನದ ಈ ಐದು ಸ್ಥಿತಿಗಳು ಜಾಗೃತಾವಸ್ಥೆಗೆ ಅಡ್ಡಿಯುಂಟುಮಾಡುವ ಮೂಲಕ, ವರ್ತಮಾನವನ್ನು ಆನಂದಿಸಲು ಜನರನ್ನು ಬಿಡುವುದಿಲ್ಲ,

ಯೋಗವು ಇಂಥ ಮನಃಸ್ಥಿತಿಯನ್ನು ಬದಲಾಯಿಸುತ್ತದೆ, ಅನಗತ್ಯ ಚಿಂತನೆಗಳಿಂದ ದೂರಾಗಲು ಸಹಕರಿಸುತ್ತದೆ. ಅದು ಹೇಗೆನ್ನುವಿರಾ? .

ನೀವು ಎಲ್ಲವನ್ನೂ ಇಲ್ಲಿಯೇ ಬಿಟ್ಟು ಹೋಗುವವರಿದ್ದೀರಿ ಎ೦ಬುದನ್ನು ಅರಿಯಿರಿ. ಈ ಪ್ರಪಂಚವನ್ನು ಬಿಟ್ಟು ಹೋಗುವಾಗ ನೀವು ನಿಮ್ಮೊಂದಿಗೆ ಏನನ್ನೂ ಕೊಂಡೊಯ್ಯಲಾರಿರಿ. ಇದು ನನ್ನದು, ನನ್ನದು, ನನ್ನದೆನ್ನುತ್ತ ಪದಾರ್ಥಗಳತ್ತ ಒಲವನ್ನು ಬೆಳೆಸಿಕೊಳ್ಳುವುದೇ ಕಸಿವಿಸಿಯ ಮೂಲ ಕಾರಣ.

ನಾನು ಅನೇಕ ಸಂದರ್ಭಗಳಲ್ಲಿ ಪ್ರಸ್ತಾಪಿಸಿದ ಘಟನೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿಚ್ಛಿಸುತ್ತೇನೆ.
ಒಮ್ಮೆ ನಾನು ಕೆನಡಾದಲ್ಲಿದ್ದಾಗ, ಸುಮಾರು ಅರವತ್ತು ವರ್ಷ ದಾಟಿದ್ದ ಮಹಿಳೆಯೋರ್ವಳು, ನಾನು ಉಳಿದುಕೊಂಡಿದ್ದ ಮನೆಯ ಬಾಗಿಲನ್ನು ತಟ್ಟಿದಳು. ಆಗ ಸಮಯ ರಾತ್ರಿ ೧೧.೩೦ - ೧೨ ಆಗಿದ್ದಿತಾದರೂ ಆ ಕ್ಷಣವೇ ನೋಡಬೇಕೆನಿಸಿದ್ದರಿಂದ ಬಂದೆನೆಂದಳು. ನನ್ನನ್ನು ಕಂಡ ತಕ್ಷಣ ನೂರು ಡಾಲರಿನ ಒಂದು ಚೆಕ್ ನನ್ನ ಕೈಗಿತ್ತು, ಶಾಲಾ ವಿದ್ಯಾರ್ಥಿಗಳ ಯೋಜನೆಗೆ ಅದು ತನ್ನ ಕೊಡುಗೆಯೆಂದಳು. ’ಅ೦ಥ ತುರ್ತೇನು, ಅದನ್ನು ನಾಳೆ ಕೊಟ್ಟರಾಗಿತ್ತು’ ಎಂದೆ ನಾನು.

’ಯಾರನ್ನಾದರೂ ನಾನು ನಂಬಿಯೇನು, ನನ್ನ ಮನಸ್ಸನ್ನು ಮಾತ್ರ ನಂಬಲಾರೆ’ ಎಂದು ಆಕೆ ಉತ್ತರಿಸಿದಳು.

ನಾನು ಉಳಿದುಕೊಂಡಿದ್ದ ಸ್ಥಳದಿಂದ ಸುಮಾರು ಒಂದು ತಾಸು ಪ್ರಯಾಣದ ದೂರದಿಂದ ಬಂದಿದ್ದ ಆಕೆಯೆಂದಳು, ’ಇದರ ಆಲೋಚನೆ ಮನಸ್ಸಿನಲ್ಲಿ ಮೂಡಿದಾಗ ಕೂಡಲೇ ಮಾಡಿಬಿಡಬೇಕು, ಮರುದಿನಕ್ಕೆ ಇಟ್ಟುಕೊಂಡರೆ ಮನಸ್ಸು ಬದಲಾಯಿಸೀತು ಎಂದು ತೋರಿತು. ಮರುದಿನ ನಾನು ಏನನ್ನೂ ಕೊಡದಿರಬಹುದು, ಅಥವ ಅದು ಹತ್ತು ಡಾಲರಿಗೆ ಕ್ಷೀಣಿಸಬಹುದೆನಿಸಿತು.’

ಆನಂತರ, ಆ ಮಧ್ಯ ರಾತ್ರಿಯಲ್ಲಿ ನನಗೊಂದು ಕಥೆಯನ್ನು ಆಕೆ ಹೇಳಿದಳು.

ಓರ್ವ ವರ್ತಕ ಒಮ್ಮೆ ನದಿಯೊಂದರಲ್ಲಿ ಮುಳುಗೇಳುತ್ತಿದ್ದ. ದೋಣಿಯಲ್ಲಿ ಸಾಗುತ್ತಿದ್ದ ಬೆಸ್ತನೋರ್ವನನ್ನು ಆತ ಕರೆದ. ನಂತರ ಆ ಬೆಸ್ತನನ್ನು ಕುರಿತು, ’ಹೇಗಾದರೂ ಮಾಡಿ ನನ್ನನ್ನು ಬದುಕಿಸು. ನನ್ನನ್ನು ನೀನು ಬದುಕಿಸಿದರೆ, ನನ್ನ ಸಮಸ್ತ ಆಸ್ತಿಯನ್ನೂ ನಿನಗೆ ಕೊಡುತ್ತೇನೆ’ ಎಂದ. ಬೆಸ್ತ ಮರು ಮಾತನಾಡದೆ ವರ್ತಕನನ್ನು ದೋಣಿಯ ಮೇಲಕ್ಕೆ ಏರಿಸಿಕೊಂಡ.

ದೋಣಿ ಸಾಗುತ್ತಿದ್ದಾಗ ವರ್ತಕನೆಂದ, ’ನೋಡು, ನನ್ನ ಆಸ್ತಿಯೆಲ್ಲವನ್ನೂ ನಿನಗೆ ನಾನು ಕೊಡಲಾರೆ, ಅರ್ಧ ಕೊಡುತ್ತೇನೆ. ನನಗೇನೂ ಬೇಡ, ಆದರೆ ನನ್ನ ಹೆಂಡತಿ ಮತ್ತು ಮಕ್ಕಳು ಎಲ್ಲವನ್ನೂ ಬಿಟ್ಟುಕೊಡಲು ಒಪ್ಪುವುದಿಲ್ಲ; ಅವರಿಗೋಸ್ಕರ ನಾನು ಏನನ್ನಾದರೂ ಉಳಿಸಲೇ ಬೇಕಾಗುತ್ತದೆ.’

ಬೆಸ್ತ ಕೇವಲ ಮುಗುಳ್ನಕ್ಕ, ಏನೂ ಮಾತನಾಡಲಿಲ್ಲ.

ದೋಣಿ ನದಿಯ ದಡವನ್ನು ಸಮೀಪಿಸುವಂತಾದಾಗ ವರ್ತಕ ಮರುನುಡಿದ, ’ನೋಡು, ನಿನಗೆ ಅರ್ಧವನ್ನು ಕೊಟ್ಟ ಬಳಿಕ ನಾನೇನು ಮಾಡಲಾದೀತು? ಇನ್ನರ್ಧ ಭಾಗವನ್ನು ಹೆಂಡತಿ ಮತ್ತು ಮಕ್ಕಳಿಗೆ ಕೊಟ್ಟಿರುವೆನಲ್ಲಾ. ಕಾಲು ಭಾಗವನ್ನು ನಿನಗೆ ಕೊಡಲು ಸಾಧ್ಯವಾಗಬಹುದೇನೋ.’

ಅಲ್ಲಿಂದ ದೋಣಿ ನದಿಯ ದಡವನ್ನು ಮುಟ್ಟುವ ವರೆಗೆ ಮೊತ್ತವು ಪದೇಪದೇ ಕಡಿಮೆಯಾಗತೊಡಗಿತು. ದಡಕ್ಕೆ ಕಾಲಿಟ್ಟ ಮರುಕ್ಷಣ ವರ್ತಕ ಕೇವಲ ಐದು ಡಾಲರನ್ನು ಬೆಸ್ತನ ಕಡೆಗೆ ಚಾಚಿದ.

ಪ್ರತಿಕ್ರಿಯಿಸುತ್ತ ಬೆಸ್ತನೆಂದ, ’ನಿನ್ನ ಮೌಲ್ಯ ಕೇವಲ ಐದು ಡಾಲರ್ ಎಂದು ನಾನು ಭಾವಿಸಿರಲಿಲ್ಲ."

ವರ್ತಕ ಮರುನುಡಿದ, ’ನನ್ನನ್ನು ಅಲ್ಲಿಂದಿಲ್ಲಿಗೆ ಕರೆತರಲು ನಿನಗೆಷ್ಟು ವೆಚ್ಚವಾದೀತು? ಮೂರು ಡಾಲರ್; ಅದಕ್ಕಿಂತ ಹೆಚ್ಚು ಹಣವನ್ನೇ ನಾನು ನಿನಗೆ ನೀಡಿದ್ದೇನೆ.’

ಮನ ಬದಲಾಗುತ್ತದೆ! ಒಂದು ಒಳ್ಳೆಯ ಕೆಲಸ ಮಾಡುವ ಮನವಿದ್ದರೆ ತಕ್ಷಣ ಮಾಡಿಬಿಡಬೇಕು, ಮುಂದೂಡಿಕೆ ಮನಸ್ಸನ್ನು ಬದಲಾಯಿಸಿಬಿಡುತ್ತದೆ.

ಒಳ್ಳೆಯ ಕೆಲಸಗಳನ್ನು ಮುಂದೂಡುವ ನಾವು, ದುಷ್ಕಾರ್ಯವೆಸಗಲು ತಡ ಮಾಡುವುದೇ ಇಲ್ಲ.

ಕೋಪಿಸಿಕೊಳ್ಳುವುದನ್ನು ನಾವು ಒಂದು ವಾರ ತಪ್ಪಿದರೆ ಒಂದೆರಡು ದಿನಗಳಷ್ಟು ಮುಂದಕ್ಕೆ ಹಾಕಿದರೆ, ಆ ನಂತರ ನಮಗೆ ಕೋಪಿಸಿಕೊಳ್ಳಬೇಕಾದ ಅಗತ್ಯವೇ ಏರ್ಪಡಲಾರದೇನೋ. ಯಾರನ್ನಾದರೂ ಬರಮಾಡಿಕೊಂಡು ಅವರ ಮೇಲೆ ರೇಗುವಂಥ ಸಂದರ್ಭವಿದ್ದಾಗ, ರೇಗುವಿಕೆಯನ್ನು ಒಂದೆರಡು ತಾಸುಗಳಷ್ಟು ಮುಂದೂಡಿ. ಆವೇಶದ ತೀವ್ರತೆ ತಗ್ಗುತ್ತದೆ.

ಹೀಗೆ ಕಥೆಯನ್ನು ಮುగిಸಿದ ಆ ಮಹಿಳೆ, ’ವೇಳೆ ಮೀರಿದ್ದರೂ ನಾನು ಬಂದಿರುವುದು ಈ ಕಾರಣದಿಂದಲೇ. ಅಷ್ಟು ಹಣವನ್ನು ಸ್ವಂತ ವೆಚ್ಚಕ್ಕೆ, ನನ್ನ ಒಡವೆಗಳ ಮೇಲೆ, ಆಹಾರದ ಸಲುವಾಗಿ ಹಾಗೂ ಮನರಂಜನೆಗಾಗಿ ವ್ಯಯಿಸಲು ನಾನು ಹಿಂದೆಮುಂದೆ ನೋಡುವುದಿಲ್ಲ; ಆದರೆ ನಾನೊಂದು ಒಳ್ಳೆಯ ಕೆಲಸ ಮಾಡಲು ಹೊರಟರೆ ಅಡಚಣೆ ಎದುರಾಗುತ್ತದೆ.’ ಈ ಸಂದರ್ಭದಲ್ಲಿ ಹಾಗಾಗುವುದು ಬೇಡ.

ಈ ಜನ್ಮದಿಂದ ಮುಕ್ತವಾಗುವ ವೇಳೆಯಲ್ಲಿ ನಾವು ಒಳ್ಳೆಯ ಕೆಲಸಗಳಿಂದ ಗಳಿಸಿದ ಫಲಗಳು ಮಾತ್ರ ನಮ್ಮೊಂದಿಗೆ ಸಾಗುತ್ತವೆ. ಬಂಧನ ಮತ್ತು ಸ್ವಾತಂತ್ರ್ಯದ ವಿಚಾರಗಳಲ್ಲಿ ಮನಸ್ಸು ಬಹಳ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ.

ಭಗವದ್ಗೀತೆಯಲ್ಲಿ ನರಕಕ್ಕೆ ಮೂರು ಬಾಗಿಲುಗಳಿವೆಯೆಂಬ ಉಲ್ಲೇಖವಿದೆ. ಕ್ರೋಧ ಮೊದಲನೆಯ ಬಾಗಿಲು. ಕ್ರೋಧವನ್ನು ನಿಯಂತ್ರಿಸುವುದೆಂತು? ಕ್ರೋಧ ಪ್ರಕಟಣೆಯನ್ನು ಮುಂದೂಡುವ ಮೂಲಕ. ಎರಡನೇ ಬಾಗಿಲು ದುರಾಸೆ. ಮೂರನೇ ಬಾಗಿಲು ಕಾಮಾತುರತೆ. ಕಾಮದೆಡೆಗೆ ಬಾಗಿದ ಚಿತ್ತ ಇತರರನ್ನು ಲಕ್ಷಿಸುವುದಿಲ್ಲ; ಅದು ಭಯಂಕರ ಪರಿಣಾಮಗಳನ್ನು ಸೃಷ್ಟಿಸುತ್ತದೆ.
ಸ್ವರ್ಗದ  ಬಾಗಿಲುಗಳು ಯಾವುವು?

ಹಿಂದೆ ನಡೆದದ್ದೆಲ್ಲವನ್ನೂ ಜೀರ್ಣಿಸಿಕೊಳ್ಳಬಲ್ಲಂಥ ವಿಶಾಲವಾದ ಮನಸ್ಸು, ಇತರರು ಮಾಡಿದ ತಪ್ಪುಗಳಿಗೆ ವಿಶೇಷ ಅರ್ಥ ಕಲ್ಪಿಸಿ ಭಿನ್ನಾಭಿಪ್ರಾಯ ಉಂಟುಮಾಡದಂಥ ಔದಾರ್ಯವುಳ್ಳ ಮನಸ್ಸೇ ಸ್ವರ್ಗದ  ಬಾಗಿಲು. ಮನಸ್ಸಿನಲ್ಲಿ ಒಂದು ಕಹಿಯನ್ನಿರಿಸಿಕೊಂಡು ಅದನ್ನೇ ಮೆಲುಕು ಹಾಕುತ್ತಿರಬಾರದು. ವೈರಾಗ್ಯವೆನ್ನುವುದು ಇದನ್ನೇ. ಹಳತು, ಅದೆಷ್ಟೇ ದುಃಖಮಯವಾಗಿದ್ದರೂ ಅದನ್ನು ಮರೆತುಬಿಡಬೇಕು.

ಆನೆಯ ಹಾಗಿರಬೇಕು. ಆನೆಗಳು ಎಲೆ, ತೊಗಟೆ, ಹಣ್ಣು ತಿನ್ನುತ್ತವೆಯೆಂಬುದನ್ನು ನೀವು ಬಲ್ಲಿರಿ; ತೆಂಗಿನೆಲೆ, ಬಿದಿರು, ಬಾಳೆಹಣ್ಣು ಮೊದಲುಗೊಂಡು ಏನು ಬೇಕಾದರೂ ತಿನ್ನಲು ಅವು ಸಿದ್ಧ. ಬಾಳೆಹಣ್ಣು ಅದೆಷ್ಟು ಮೃದು, ಬಿದಿರು ಅದೆಷ್ಟು ಕಠೋರ, ಆದರೂ ತಿಂದು ಅವೆಲ್ಲವನ್ನೂ ಆನೆಗಳು ಜೀರ್ಣಿಸಿಕೊಳ್ಳುತ್ತವೆ.

ಅಂತೆಯೇ ಬದುಕಿನಲ್ಲಿ ಸಂತೋಷದ, ನಿರಾಶೆಯ ಕ್ಷಣಗಳಿರುತ್ತವೆ; ಶಿಷ್ಟರು, ದುಷ್ಟರು ಎದುರಾಗುತ್ತಾರೆ (ನನ್ನ ಜೀವನದಲ್ಲಿ ದುಷ್ಟರ ಸುಳುಹಿಲ್ಲ. ಒಳ್ಳೆಯವರೇ ದೊರೆತಿದ್ದಾರೆ, ಅವರು ಕೆಲವೊಮ್ಮೆ ಕೆಟ್ಟದಾಗಿ ವರ್ತಿಸಿರಬಹುದು).

ತನ್ನಿಮಿತ್ತ, ಆದದ್ದು ಆಯಿತು, ಎಲ್ಲವನ್ನೂ ಜೀರ್ಣಿಸಿಕೊಳ್ಳೋಣ. ಭೂತಕಾಲವನ್ನು ಮರೆಯುವ ಪ್ರಕ್ರಿಯೆ ವರ್ತಮಾನದಲ್ಲಿ ಹರ್ಷ ಮತ್ತು ನೆಮ್ಮದಿಯನ್ನು ಏರ್ಪಡಿಸುತ್ತದೆ.

ನಾವು ಶಕ್ತಿಶಾಲಿಗಳಾಗಬೇಕು, ಆನೆಯ ಥರ; ಎಲ್ಲವನ್ನೂ ಜೀರ್ಣಿಸಿಕೊಳ್ಳಬೇಕು - ಮೃದುವಾದ, ಕಠೋರವಾದ ಭೂತಕಾಲದ ಸಮಸ್ತವನ್ನೂ. ನಿರಂತರವಾಗಿ ಅದೇ ಸ್ಥಿತಿಯಲ್ಲಿ ಮುನ್ನಡೆಯಬೇಕು, ವೈರಾಗ್ಯವೆನ್ನುವುದು ಇದನ್ನೇ.

ವೈರಾಗ್ಯ ಯಾವ ಆನಂದವನ್ನು ಉಂಟುಮಾಡುವುದಿಲ್ಲ? ಸಮಸ್ತ ವಿಧದ ಸಂತೋಷ ಪ್ರಾಪ್ತವಾಗುವುದು ವೈರಾಗ್ಯದಿಂದಲೇ.
ಜನ ಎರಡು ಬಗೆಯ ಪ್ರವೃತ್ತಿಗಳುಳ್ಳವರಾಗಿರಬಹುದು:

ಮೊದಲನೇ ಪ್ರವೃತ್ತಿಯ ಮೇರೆಗೆ, ’ನನ್ನ ಗತಿಯೇನು’, ’ಇದರಿಂದ ನನಗಾಗುವ ಉಪಯೋಗವೇನು’ ಎಂಬ ಆಲೋಚನೆಗಳ ಲಹರಿಯಲ್ಲಿ ನಾವಿರಬಹುದು. ಕ್ಷಣಿಕವಾದ ಆನಂದ ಅದರಿಂದ ದೊರಕಬಹುದು.

ಎರಡನೆಯದಾಗಿ, ’ಈ ಪ್ರಪಂಚಕ್ಕೆ ನಾನು ಹೇಗೆ ಉಪಯುಕ್ತನಾಗಬಹುದು’ ಎಂದು ನಾವು ಯೋಚಿಸಬಹುದು. ನಿರಂತರ ಹರ್ಷಕ್ಕೆ ಅದು ಕಾರಣವಾಗಬಹುದು.

ಆದ್ದರಿಂದ, ’ಪ್ರಪಂಚದಿಂದ ಏನನ್ನು ನಾನು ಪಡೆಯಬಹುದು; ನನಗೆ ದೊರಕಬಹುದಾದ ಸಂತೋಷವೆಷ್ಟು’ ಎಂಬ ಧಾಟಿಯನ್ನು ತೊರೆದು, ’ಪ್ರಪಂಚಕ್ಕೆ ಇನ್ನೂ ಹೆಚ್ಚಿನದನ್ನು ನಾನೇನು ನೀಡಬಹುದು; ಪ್ರಪಂಚಕ್ಕೆ ನಾನೆಷ್ಟು ಉಪಯುಕ್ತನಾಗಬಹುದು’ ಎಂದು ಆಲೋಚಿಸುವ ಮಟ್ಟಕ್ಕೆ ಪ್ರವೃತ್ತಿಯನ್ನು ಬದಲಿಸಿಕೊಳ್ಳಿ.

ವ್ಯತ್ಯಾಸವನ್ನು ಗುರ್ತಿಸಿದಿರಾ?

ಸ್ವಾರ್ಥವನ್ನು ತೊರೆದು ನಿಃಸ್ವಾರ್ಥದೆಡೆಗೆ ಸಾಗುವುದನ್ನು ಅದು ಸೂಚಿಸುತ್ತದೆ. ಎರಡನೇ ಪ್ರವೃತ್ತಿಗೆ ನಮ್ಮನ್ನು ನಾವು ಅಳವಡಿಸಿಕೊಂಡರೆ ದುಃಖಗಳು ಇನ್ನಿಲ್ಲದಂತೆ ಮಾಯವಾಗುತ್ತವೆ, ಸಮೃದ್ಧಿ ಪ್ರವಹಿಸಲಾರಂಭಿಸುತ್ತದೆ.

ಸ್ವರ್ಗದ ಬಾಗಿಲಿರುವುದು ವಿಶಾಲವಾದ ಮನೋಭಾವದಲ್ಲಿ, ಅನ್ಯರು ಎಸಗಿದ ತಪ್ಪುಗಳನ್ನು ನುಂಗಿಕೊಳ್ಳುವಂಥ ಸೌಜನ್ಯದಲ್ಲಿ, ಗತಿಸಿದ ಲೋಪಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮೆಲುಕು ಹಾಕದಿರುವಲ್ಲಿ. ಭೂತಕಾಲ ಅದೆಷ್ಟು ಗಂಭೀರವಾಗಿದ್ದರೂ ಮರೆತು ಹೊಸ ಉತ್ಸಾಹದಿಂದ ವರ್ತಮಾನವನ್ನು ಬರಮಾಡಿಕೊಳ್ಳುವುದೇ ವೈರಾಗ್ಯ.

ಬುಧವಾರ, ಏಪ್ರಿಲ್ 24, 2013

ಬದುಕಿಗೆ ಸಂತೋಷ, ಪ್ರೀತಿ ಮತ್ತು ಜ್ಞಾನ ಅತ್ಯಗತ್ಯ

ಟೋಕಿಯೋ, ಜಪಾನ್
೨೪ ಎಪ್ರಿಲ್ ೨೦೧೩

ನಾವು ಜೀವನವನ್ನು ಒಂದು ವಿಶಾಲ ದೃಷ್ಟಿಕೋನದಿಂದ ನೋಡಬೇಕು.

ಜೀವನವೆಂದು ಹಾಗೂ ಈ ಇಡೀ ಜಗತ್ತೆಂದು ನಾವು ಯಾವುದನ್ನು ತಿಳಿದಿರುವೆವೋ, ಅದನ್ನು ನಾವು ತಿಳಿಯುವುದು ನಮ್ಮ ಇಂದ್ರಿಯಗಳ ಮೂಲಕ. ಅದು, ನೋಡುವ, ಕೇಳುವ, ಸ್ಪರ್ಶಿಸುವ ಮತ್ತು ಅರ್ಥ ಮಾಡಿಕೊಳ್ಳುವ ಮೂಲಕ. ಐದು ಇಂದ್ರಿಯಗಳ ಮೂಲಕ ನಾವು ಪಡೆದುಕೊಳ್ಳುವ ಜ್ಞಾನವು ಒಂದು ಹಂತದ್ದಾಗಿದೆ. ಐದು ಇಂದ್ರಿಯಗಳ ಮೂಲಕ ನಾವು ಪಡೆದುಕೊಳ್ಳುವ ಜ್ಞಾನಕ್ಕಿಂತ ಉನ್ನತವಾದ ಇನ್ನೊಂದು ಮಟ್ಟವಿದೆ, ಅಂದರೆ, ಬುದ್ಧಿಯ ಮೂಲಕವಾಗಿರುವ ಜ್ಞಾನ.
ಬುದ್ಧಿಯಿಂದ ಬಂದಿರುವ ಜ್ಞಾನವು ಇಂದ್ರಿಯಗಳ ಮೂಲಕದ ಜ್ಞಾನಕ್ಕಿಂತ ಶ್ರೇಷ್ಠವಾದುದಾಗಿದೆ.

ನಾವು ಸೂರ್ಯನು ಉದಯಿಸುವುದನ್ನು ಮತ್ತು ಸೂರ್ಯನು ಅಸ್ತಮಿಸುವುದನ್ನು ನೋಡುತ್ತೇವೆ. ಆದರೆ, ಸೂರ್ಯನು ಉದಯಿಸುವುದೂ ಇಲ್ಲ, ಅಸ್ತಮಿಸುವುದೂ ಇಲ್ಲ, ಅದು ಭೂಮಿಯು ತಿರುಗುವುದಾಗಿದೆ ಎಂಬುದು ಬುದ್ಧಿಯ ಮೂಲಕ ನಮಗೆ ತಿಳಿದಿದೆ.

ಬುದ್ಧಿಗಿಂತಲೂ ಶ್ರೇಷ್ಠವಾದ ಇನ್ನೊಂದು ಜ್ಞಾನವಿದೆ. ಅದು ಅಂತರ್ಬೋಧೆಯ ಜ್ಞಾನವಾಗಿದೆ. ಮಾನವರಾಗಿ, ನಮಗೆಲ್ಲರಿಗೂ ಅಂತರ್ಬೋಧೆಯ ಜ್ಞಾನವನ್ನು ಸ್ಪರ್ಶಿಸುವ ಸಾಮರ್ಥ್ಯವಿದೆ, ಮತ್ತು ಅದುವೇ ಆಧ್ಯಾತ್ಮಿಕ ಜ್ಞಾನ. ನೀವು ಸಮಯ ಮತ್ತು ಆಕಾಶಗಳನ್ನು ಮೀರಿ ಹೋಗುವಿರಿ ಹಾಗೂ ಅಲ್ಲಿಂದ ನೀವು ವಾಸ್ತವಿಕತೆಯನ್ನು ನೋಡುವಿರಿ. ನಿಮ್ಮಲ್ಲಿ ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಈ ಅನುಭವ ಆಗಿರಬಹುದೆಂದು ನನಗನ್ನಿಸುತ್ತದೆ: ನಿಮ್ಮ ಬುದ್ಧಿಯು ಏನೇ ಹೇಳಲಿ, ನಿಮ್ಮ ಬಲವಾದ
ಅನಿಸಿಕೆ ಬೇರೆಯದಾಗಿರುತ್ತದೆ. ನಿಮಗೆ ಈ ಅನುಭವವಾಗಿದೆಯೇ?

ನಿಮಗೊಂದು ಬಲವಾದ ಅಂತಃಸ್ಫುರಣೆಯುಂಟಾಯಿತು, ಆದರೆ ನಿಮ್ಮ ತರ್ಕವು ಬೇರೆಯದೇನನ್ನೋ ಹೇಳಿತು. ನಿಮ್ಮ ಅಂತಃಸ್ಫುರಣೆಯು ಸಂಪೂರ್ಣವಾಗಿ ವ್ಯತ್ಯಸ್ತವಾದುದಾಗಿತ್ತು, ಮತ್ತು ಅದುವೇ ಆಯಿತು. ನಿಮ್ಮಲ್ಲಿ ಎಷ್ಟು ಮಂದಿಗೆ ಆ ಅನುಭವವಾಗಿದೆ?

(ಹಲವರು ತಮ್ಮ ಕೈಗಳನ್ನು ಮೇಲೆತ್ತಿದರು)

ಪ್ರತಿಯೊಬ್ಬರಲ್ಲೂ ಈ ಶಕ್ತಿಯಿದೆ, ಆದರೆ ಅದನ್ನು ಉಪಯೋಗಿಸುವುದು ಹೇಗೆಂಬುದು ತಿಳಿಯದು.

ಅದು ಹೇಗೆಂದರೆ, ನಿಮ್ಮಲ್ಲೊಂದು ನಿಧಿಯ ಪೆಟ್ಟಿಗೆಯಿದೆ, ಆದರೆ ನೀವದಕ್ಕೆ ಬೀಗ ಹಾಕಿರುವಿರಿ ಮತ್ತು ನಿಮ್ಮಲ್ಲಿ ಅದರ ಕೀಲಿಕೈಯಿಲ್ಲ ಹಾಗೂ ಅದನ್ನೇನು ಮಾಡಬೇಕೆಂಬುದು ನಿಮಗೆ ತಿಳಿಯದು. ಹಾಗೆಯೇ ಅದು, ಒಂದು ಕಂಪ್ಯೂಟರನ್ನು ಹೊಂದಿದ್ದು, ಅದರ ಸಂಕೇತ ಪದ (ಪಾಸ್ ವರ್ಡ್) ತಿಳಿಯದೇ ಇರುವಂತೆ. ನಿಮ್ಮ ಫೋನ್ ಲಾಕ್ ಆಗಿದೆ, ಮತ್ತು ನಿಮಗೆ ಅದರ ಕೀ ವರ್ಡ್ ತಿಳಿಯದು, ಅದನ್ನು ತೆರೆಯುವುದು ಹೇಗೆಂಬುದು ನಿಮಗೆ ತಿಳಿಯದು. ನಮ್ಮಲ್ಲಿ ಫೋನ್ ಇದ್ದರೂ ನಮಗದನ್ನು ಬಳಸಲು ಸಾಧ್ಯವಾಗುವುದಿಲ್ಲ, ಯಾಕೆಂದರೆ ಅದು ಲಾಕ್ ಆಗಿದೆ. ನಮ್ಮಲ್ಲಿ ಐಪ್ಯಾಡ್ ಇದ್ದರೂ, ಅದು ತೆರೆಯುವುದಿಲ್ಲ ಯಾಕೆಂದರೆ ಅದು ಲಾಕ್ ಆಗಿದೆ ಮತ್ತು ನಾವು ಕೀ ವರ್ಡನ್ನು ಮರೆತಿದ್ದೇವೆ. ನಮ್ಮ ಜೀವನದಲ್ಲೂ ಹಾಗೆಯೇ.
ನಮ್ಮ ಶರೀರಕ್ಕೆ, ವಾಸ್ತವಿಕತೆಯ ಹಲವಾರು ಆಯಾಮಗಳಿಗೆ ಪ್ರವೇಶ ಸಾಧ್ಯವಿದೆ, ಮತ್ತು ಈ ಹಂತಗಳನ್ನು ತಲಪುವ, ಇತರರ ಬಯಕೆಗಳನ್ನು ಈಡೇರಿಸುವ ಸಾಮರ್ಥ್ಯ ನಮಗಿದೆ; ನಾವು ಪಾಸ್ ವರ್ಡನ್ನು ಹೊಂದಿದ್ದರೆ ಮಾತ್ರ. ಅಷ್ಟೊಂದು ಸರಳವಾದುದು, ಹಾಗಿದ್ದರೂ ಬಹಳ ಅಗಾಧವಾದುದು.

ಕೇವಲ ಒಂದು ಪಾಸ್ ವರ್ಡ್ ಮತ್ತು ನಿಮ್ಮ ಕಂಪ್ಯೂಟರ್ ತೆರೆಯುತ್ತದೆ. ಒಮ್ಮೆ ಕಂಪ್ಯೂಟರ್ ತೆರೆದರೆ, ನಿಮಗೆ ಎಲ್ಲಾ ಮಾಹಿತಿ ದೊರೆಯುತ್ತದೆ. ನಮ್ಮೊಳಗಿನಿಂದ ಸಾರ್ವತ್ರಿಕ ಚೈತನ್ಯ; ಸಾರ್ವತ್ರಿಕ ಶಕ್ತಿಯೊಂದಿಗಿನ ಸಂಪರ್ಕ ಆವಶ್ಯಕವಾಗಿದೆ. ಒಮ್ಮೆ ಆ ಸಂಪರ್ಕವುಂಟಾದರೆ, ವಿಶ್ವದಲ್ಲಿರುವ ಯಾವುದಕ್ಕೂ ನಿಮ್ಮ ಮುಗುಳ್ನಗೆಯನ್ನು, ಚೈತನ್ಯವನ್ನು, ಉತ್ಸಾಹವನ್ನು, ಆನಂದವನ್ನು ಮತ್ತು ನಿಮ್ಮ ಬೌದ್ಧಿಕ ಪ್ರಭೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿಯೇ ಆಧ್ಯಾತ್ಮಿಕ ತಂತ್ರಗಳು ಇರುವುದು; ನಿಮ್ಮ ಸ್ವಂತ ಜೀವನದ ಅಮೂಲ್ಯ ಕ್ಷೇತ್ರಗಳಿಗೆ ನಿಮ್ಮನ್ನು ತಲುಪಿಸಲು.

ಸುಮ್ಮನೆ ಯೋಚಿಸಿ, ನಿಮ್ಮ ಜೀವನದಲ್ಲಿ ನೀವು ಬಯಸುವುದು ಏನನ್ನು? ನಿಮಗೆ ಮೂರು ಉತ್ತರಗಳು ದೊರೆಯುವುವು.
ಮೊದಲನೆಯದು ಮತ್ತು ಅಗ್ರಗಣ್ಯವಾದುದೆಂದರೆ, ನೀವು ’ಸಂತೋಷ’ ಎಂದು ಹೇಳುವಿರಿ. ನೀವು ಕೆಲಸ ಮಾಡಲು ಯಾಕೆ ಬಯಸುವಿರಿ? ನೀವು ಹಣ ಗಳಿಸಲು ಯಾಕೆ ಬಯಸುವಿರಿ? ನೀವು ಆರಾಮವಾಗಿರಲು ಸಾಧ್ಯವಾಗಲೆಂದು, ನೀವು ಸಂತೋಷವಾಗಿರಲು ಸಾಧ್ಯವಾಗಲೆಂದು.

ಎರಡನೆಯದು ಪ್ರೀತಿ. ನಿಮ್ಮ ಜೀವನದಲ್ಲಿ ಯಾವುದೇ ಪ್ರೀತಿಯಿಲ್ಲವೆಂಬುದಾಗಿ ಊಹಿಸಿ, ನೀವು ಈ ಭೂಮಿಯ ಮೇಲೆ ಜೀವಿಸಲು ಇಷ್ಟಪಡುವಿರೇ? ನೀವು ಇಷ್ಟಪಡಲಾರಿರಿ. ಈ ಭೂಮಿಯ ಮೇಲೆ ಯಾರೂ ನಿಮ್ಮನ್ನು ಪ್ರೀತಿಸುವುದಿಲ್ಲವೆಂದು ಮತ್ತು ನೀವೂ ಯಾರನ್ನೂ ಪ್ರೀತಿಸುವುದಿಲ್ಲವೆಂದು ಸುಮ್ಮನೆ ಕಲ್ಪಿಸಿಕೊಳ್ಳಿ. ಹಾಗಾದರೆ ನೀವು ಇಲ್ಲಿ ಯಾಕಿರಬೇಕು? ಆದುದರಿಂದ, ಸಂತೋಷ, ಪ್ರೀತಿ ಮತ್ತು ಮೂರನೆಯದೆಂದರೆ ಜ್ಞಾನ.

ಎಲ್ಲರೂ ಬದುಕುವುದು ಈ ಮೂರು ವಿಷಯಗಳಿಗಾಗಿ ಮತ್ತು ಅವುಗಳ ಆದ್ಯತೆಯು ಹೀಗಿದೆ - ಪ್ರೀತಿ, ಸಂತೋಷ ಮತ್ತು ಜ್ಞಾನ.
ಪ್ರೀತಿಯೆಂಬುದು ನೀವು ಅಡಗಿಸಿಡಲು ಸಾಧ್ಯವಾಗದೇ ಇರುವಂತಹುದು. ನಿಮ್ಮ ಹೃದಯದಲ್ಲಿ ಪ್ರೀತಿಯಿದ್ದರೆ, ನೀವದನ್ನು ನಿಮ್ಮ ಕಾರ್ಯಗಳಲ್ಲಿ ಕಾಣಬಹುದು; ಅದು ನಿಮ್ಮ ಅಭಿವ್ಯಕ್ತಿಗಳಲ್ಲಿ, ನಿಮ್ಮ ಮುಖದ ಮೇಲೆ ಹೊರಬರುತ್ತದೆ ಮತ್ತು ನೀವದನ್ನು ಕಣ್ಣುಗಳಲ್ಲಿ ಕಾಣಬಹುದು.

ನೀವು ಸುಮ್ಮನೆ ಯಾರದ್ದಾದರೂ ಕಣ್ಣುಗಳೊಳಕ್ಕೆ ನೋಡಿ ಮತ್ತು ಅವರು ಚಿಂತಿತರಾಗಿರುವರೇ, ಉದ್ವಿಗ್ನರಾಗಿರುವರೇ, ಕ್ರೋಧಗೊಂಡಿರುವರೇ ಅಥವಾ ಪ್ರೀತಿಯಲ್ಲಿರುವರೇ ಎಂಬುದನ್ನು ನೀವು ಕಾಣಬಹುದು. ನೀವೊಂದು ಚಿಕ್ಕ ಮಗುವಿನ, ಒಂದು ನಾಯಿಮರಿಯ, ಒಂದು ನಾಯಿಯ ಕಣ್ಣುಗಳೊಳಕ್ಕೆ ನೋಡಿ, ಅವುಗಳೆಲ್ಲವೂ ಆ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ. ಇಡೀ ವಿಶ್ವದಲ್ಲಿ ಒಂದು ಬಂಧಕ ಶಕ್ತಿಯಿದೆ, ಅದರಲ್ಲಿ ಎಲ್ಲಾ ಪರಮಾಣುಗಳು ಬಂಧಿಸಲ್ಪಟ್ಟಿವೆ, ಅದರಲ್ಲಿ ಮರಗಳು ಬೆಳೆಯುತ್ತಿವೆ, ಪ್ರಾಣಿಗಳು ಅಸ್ತಿತ್ವದಲ್ಲಿವೆ, ಗಾಳಿಯು ಬೀಸುತ್ತಿದೆ, ಭೂಮಿಯು ಸುತ್ತುತ್ತಿದೆ ಮತ್ತು ಆ ಶಕ್ತಿಯೇ ಪ್ರೀತಿ.

ಪ್ರೀತಿಯನ್ನು ಅಡಗಿಸಿಡಲು ಸಾಧ್ಯವಿಲ್ಲ, ಅದೇ ಸಮಯದಲ್ಲಿ ನೀವದನ್ನು ಪೂರ್ಣವಾಗಿ ವ್ಯಕ್ತಪಡಿಸಲೂ ಸಾಧ್ಯವಿಲ್ಲ. ಯಾರಿಗೂ ಅದನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನೀವು ಹೆಚ್ಚು ಹೆಚ್ಚು ವ್ಯಕ್ತಪಡಿಸಿದಷ್ಟೂ, ಏನೋ ಒಂದು ಕೊರತೆಯಿದೆ ಎಂಬುದಾಗಿ ನಿಮಗನಿಸುತ್ತದೆ. ನೀವದನ್ನು ನೂರು ಶೇಕಡಾ ವ್ಯಕ್ತಪಡಿಸಲು ಸಾಧ್ಯವಿಲ್ಲ.

ನಂತರ ಬರುವುದು ಸತ್ಯ - ನೀವು ಸತ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಒಂದು ದಿನ ನೀವದನ್ನು ಎದುರಿಸಲೇ ಬೇಕು. ಕೇವಲ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳುವುದರಿಂದ, ಹಗಲು ರಾತ್ರಿಯಾಗಿ ಬದಲಾಗುವುದಿಲ್ಲ ಮತ್ತು ರಾತ್ರಿ ಹಗಲಾಗಿ ಬದಲಾಗುವುದಿಲ್ಲ. ಸತ್ಯವು ಅಲ್ಲಿದೆ ಮತ್ತು ನೀವದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಮತ್ತು ನೀವು ಸತ್ಯವನ್ನು ನಿರೂಪಿಸಲು ಸಾಧ್ಯವಿಲ್ಲ. ಅದು ಎಷ್ಟೊಂದು ದೊಡ್ಡದೆಂದರೆ ನೀವದನ್ನು ನಿರೂಪಿಸಲು ಸಾಧ್ಯವಿಲ್ಲ.

ಅದೇ ರೀತಿ ಸಾವು; ನಾವೆಲ್ಲರೂ ಒಂದು ದಿನ ಸಾಯಲಿದ್ದೇವೆ. ನಮಗೆಲ್ಲರಿಗೂ ವಯಸ್ಸಾಗಲಿದೆ, ನೀವದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಮೂರನೆಯ ವಿಷಯವೆಂದರೆ ಸೌಂದರ್ಯ. ಸೌಂದರ್ಯವನ್ನು ತ್ಯಜಿಸಲು ಅಥವಾ ತನ್ನದಾಗಿಸಿಕೊಳ್ಳಲು ಸಾಧ್ಯವಿಲ್ಲ.
ಜಗತ್ತಿನಲ್ಲಿ ಉಂಟಾಗುವ ಎಲ್ಲಾ ಸಮಸ್ಯೆಗಳು ಈ ಕಾರಣದಿಂದಾಗಿದೆ. ನಾವು ಸತ್ಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಮತ್ತು ನಾವು ಸಮಸ್ಯೆಗಳಲ್ಲಿ ಸಿಕ್ಕಿಬೀಳುತ್ತೇವೆ; ನಾವು ಪ್ರೀತಿಯನ್ನು ಪೂರ್ಣವಾಗಿ ವ್ಯಕ್ತಪಡಿಸಲು ಪ್ರಯತ್ನಿಸುತ್ತೇವೆ ಮತ್ತು ನಾವು ಸಮಸ್ಯೆಗಳಲ್ಲಿ ಸಿಕ್ಕಿಬೀಳುತ್ತೇವೆ; ನಾವು ಸೌಂದರ್ಯವನ್ನು ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಮತ್ತು ನಾವು ಸಮಸ್ಯೆಗಳಲ್ಲಿ ಸಿಕ್ಕಿಬೀಳುತ್ತೇವೆ.

ನೀವು ಸೌಂದರ್ಯವನ್ನು ತ್ಯಜಿಸಬಲ್ಲಿರೇ? ನೀವದನ್ನು ತ್ಯಜಿಸಬಲ್ಲಿರಾದರೆ, ಆಗ ಅದು ಸೌಂದರ್ಯವಲ್ಲ. ನೀವು ಸೌಂದರ್ಯವನ್ನು ನಿಮ್ಮದಾಗಿಸಿಕೊಳ್ಳಬಲ್ಲಿರೇ? ನೀವದನ್ನು ನಿಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲ.

ಹೀಗೆ, ಇದು ಇವತ್ತಿನ ಜ್ಞಾನದ ಸಾರವಾಗಿದೆ. ನೀವು ಕೇವಲ ಇದನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಇದು ನಿಮ್ಮ ದೈನಂದಿನ ಜೀವನದಲ್ಲಿ ಒಂದು ದೊಡ್ಡ ಮಟ್ಟಿಗೆ ನಿಮಗೆ ಸಹಾಯ ಮಾಡುತ್ತದೆ ಎಂಬುದನ್ನು ನೀವು ಕಂಡುಕೊಳ್ಳುವಿರಿ. ಸತ್ಯದಿಂದ ತಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ, ಅದನ್ನು ನಿರೂಪಿಸಲೂ ಸಾಧ್ಯವಿಲ್ಲ. ಸೌಂದರ್ಯವನ್ನು ತ್ಯಜಿಸಲೂ ಸಾಧ್ಯವಿಲ್ಲ, ಅದನ್ನು ಹೊಂದಲೂ ಸಾಧ್ಯವಿಲ್ಲ. ಪ್ರೀತಿಯನ್ನು ಅಡಗಿಸಿಡಲೂ ಸಾಧ್ಯವಿಲ್ಲ, ಅದನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲೂ ಸಾಧ್ಯವಿಲ್ಲ. ಈ ಅಂಶಗಳ ಬಗ್ಗೆ ಆಳವಾಗಿ ಯೋಚಿಸಿ ಮತ್ತು ಹೆಚ್ಚಿನ ಜ್ಞಾನವು ನಿಮ್ಮೊಳಗೆ ಅರಳುವುದು.

ಪ್ರಶ್ನೆ: ಸದ್ಯಕ್ಕೆ ನಾನು ಯೋಗ ಶಿಕ್ಷಕನಾಗಿರುವೆನು. ನನ್ನ ದೊಡ್ಡ ಸಮಸ್ಯೆಯೆಂದರೆ, ಜನರಿಗೆ ಸ್ಫೂರ್ತಿ ನೀಡುವುದು ಹೇಗೆಂಬುದು. ಜನರು ಸ್ಫೂರ್ತಿಗೊಳ್ಳುವುದಿಲ್ಲ. ಜನರಿಗೆ ಸ್ಫೂರ್ತಿ ನೀಡಲು ಒಬ್ಬ ಶಿಕ್ಷಕನಿಗೆ ನೀವು ನೀಡಬಹುದಾದ ಅತ್ಯುತ್ತಮ ಸಲಹೆ ಯಾವುದು? 

ಶ್ರೀ ಶ್ರೀ ರವಿ ಶಂಕರ್: ಅವರಲ್ಲಿ ಈ ಮೂರು ವಿಷಯಗಳನ್ನು ಕೇಳು: ನೀವು ಸಂತೋಷವಾಗಿರಲು ಬಯಸುವಿರೇ? ನೀವು ಆರೋಗ್ಯವಂತರಾಗಿರಲು ಬಯಸುವಿರೇ?ನಿಮ್ಮ ದೈನಂದಿನ ಜೀವನದಲ್ಲಿ ನೀವು ಹೆಚ್ಚಿನ ಸಮಯವನ್ನು ಹೊಂದಲು ಬಯಸುವಿರೇ? ಹೌದಾಗಿದ್ದರೆ, ಬಂದು ಯೋಗ ಮಾಡಿ.

ನೀವು ನನಗೆ ೧೦ ನಿಮಿಷಗಳನ್ನು ನೀಡಿ, ನಾನು ನಿಮಗೆ ಎರಡು ಗಂಟೆಗಳನ್ನು ನೀಡುವೆನು. ನೀವು ೧೦ ನಿಮಿಷಗಳ ಯೋಗವನ್ನು ಮಾಡಿದರೆ, ನಿಮಗೆ ಎರಡು ಗಂಟೆಗಳು ಅಥವಾ ಹೆಚ್ಚಿನದಕ್ಕೆ ಸಮಾನವಾದ ಚೈತನ್ಯವು ದೊರೆಯುವುದು.
ಯೋಗದ ಅಭ್ಯಾಸದೊಂದಿಗೆ ಒಬ್ಬರು ಕಡಿಮೆ ಮತ್ತು ಆಳವಾಗಿ ನಿದ್ರಿಸಬಹುದು, ಚೈತನ್ಯವನ್ನು, ಸಂತೋಷವನ್ನು, ಮತ್ತು ಎಲ್ಲರ ಕಡೆಗೂ ಬಹಳಷ್ಟು ಪ್ರೀತಿಯನ್ನು ಅನುಭವಿಸಬಹುದು. ನಿಮಗೆ ಇದಕ್ಕಿಂತ ಹೆಚ್ಚು ಏನು ಬೇಕು?

ಮೊದಲನೆಯದಾಗಿ, ಈ ಕಲ್ಪನೆಯನ್ನು ನಿಮ್ಮ ಮನಸ್ಸಿನಿಂದ ತೆಗೆದುಹಾಕಿ, "ಓ, ಯಾರೂ ಪ್ರೇರಿತರಾಗಿಲ್ಲ, ಯಾರೂ ಬರುವುದಿಲ್ಲ", ನಿಮ್ಮ ಮನಸ್ಸಿನಲ್ಲಿ ನೀವು ಹೀಗೆ ಯೋಚಿಸಬಾರದು. ಎಲ್ಲರೂ ಬಯಸುವ ಮತ್ತು ಎಲ್ಲರಿಗೂ ಅಗತ್ಯವಿರುವ ಏನೋ ಒಂದು ನಿಮ್ಮ ಬಳಿ ಇದೆಯೆಂಬುದನ್ನು ನೀವು ತಿಳಿದಿರಬೇಕು, ಮತ್ತು ಅವರು ಬರುವರು.

ನಾವು ನಮ್ಮ ಮನಸ್ಸಿನಲ್ಲಿ, "ಓ, ಯಾರೂ ಪ್ರೇರಿತರಾಗಿಲ್ಲ, ಯಾರೂ ಬರಲು ಬಯಸುವುದಿಲ್ಲ" ಎಂದು ಯೋಚಿಸಿದರೆ, ಆಗ ಯಾರೂ ಬರುವುದಿಲ್ಲ. ಪ್ರತಿದಿನವೂ ಟೋಕಿಯೋದಲ್ಲಿ ಹೊಸ ಯೋಗ ಕೇಂದ್ರಗಳು ತೆರೆಯುತ್ತಿವೆ, ಅದರರ್ಥ ಜನರಿಗೆ ಅದು ಬೇಕು ಎಂದು.

ಮಂಗಳವಾರ, ಏಪ್ರಿಲ್ 23, 2013

ಹೃದಯ ಸಮ್ಮಿಲನ


ಟೋಕಿಯೋ, ಜಪಾನ್
೨೩ ಎಪ್ರಿಲ್ ೨೦೧೩

ನಾವೊಂದು ಜಾಗತಿಕ ಕುಟುಂಬವಾಗಿದ್ದೇವೆ. ನಾನು ಜಪಾನಿನಲ್ಲಿ ಸಂತೋಷದ ಅಲೆಗಳನ್ನು ಸೃಷ್ಟಿಸಲು ಬಯಸುತ್ತೇನೆ. ಈ ದೇಶದ ಯುವಜನತೆಗೆ ವೈಭವ ತರಲು ನೀವೆಲ್ಲರೂ ಒಟ್ಟಾಗಬೇಕು.
ಪ್ರಪಂಚದಲ್ಲಿ ನಾನು ಎಲ್ಲಿಗೆಲ್ಲಾ ಹೋಗುವೆನೋ ಅಲ್ಲೆಲ್ಲಾ ನಾನು ಯಾವತ್ತೂ ಹೇಳುತ್ತೇನೆ, ನಾವು ತಂಡದಲ್ಲಿದ್ದು ಕೆಲಸ ಮಾಡುವುದನ್ನು ಜಪಾನಿನಿಂದ ಕಲಿಯಬೇಕೆಂದು. ವಿಸ್ತೀರ್ಣದಲ್ಲಿ ಜಪಾನ್ ಒಂದು ಚಿಕ್ಕ ದೇಶವಾಗಿದೆ, ಆದರೆ ಜಗತ್ತಿನಲ್ಲಿ ಅದು ಬಹಳ ಪ್ರಮುಖವಾದುದಾಗಿದೆ. ಇದು ಯಾಕೆಂದರೆ, ಕೆಲಸದ ಗುಣಮಟ್ಟದ ಕಾರಣದಿಂದ ಹಾಗೂ ಜನರು ಮತ್ತು ಸಂಸ್ಕೃತಿಯು ಹೊಂದಿರುವ ಬದ್ಧತೆಯಿಂದ. ವಿವಿಧ ದೇಶಗಳ ನಡುವೆ ಜಪಾನ್ ಒಂದು ಮಿನುಗುವ ನಕ್ಷತ್ರವಾಗುವಂತೆ ಮಾಡಿದುದು ಈ ದೇಶದ ಸಂಸ್ಕೃತಿಯಾಗಿದೆ.

ಜಾಗತೀಕರಣಗೊಂಡ ಒಂದು ಪ್ರಪಂಚದಲ್ಲಿ, ಯುವಜನರು ತಮ್ಮ ಸಂಸ್ಕೃತಿಯನ್ನು ಕಳೆದುಕೊಳ್ಳುವ ಸಂಭವವಿರುತ್ತದೆ, ಅವರು ಪಾಶ್ಚಾತ್ಯ ಸಂಸ್ಕೃತಿಯ ಪ್ರಕಾರ ಸಾಗುವ ಸಂಭವವಿರುತ್ತದೆ. ನಾವು ನಮ್ಮ ಮೂಲ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕು ಮತ್ತು ಒಂದು ವಿಶಾಲ ಹೊರನೋಟವನ್ನು ಕೂಡಾ ಹೊಂದಿರಬೇಕೆಂದು ನಾನು ಹೇಳುತ್ತೇನೆ.

ಇವತ್ತು ಬೆಳಗ್ಗೆ, ನಾನು ಶಿಂಟೋ ದೇಗುಲಕ್ಕೆ ಹೋದೆ. ಅಲ್ಲಿನ ಸಂಪ್ರದಾಯ, ಅವರು ಮಾಡುವ ಆಚಾರವಿಧಿಗಳು ನೋಡಲು ಬಹಳ ಸುಂದರವಾಗಿದ್ದವು. ನಾನು ಬಹಳ ಪ್ರಭಾವಿತನಾದೆ. ಅದು ನನಗೆ, ಬಹಳ ಸಾಮ್ಯತೆಯಿರುವ ಪ್ರಾಚೀನ ವೈದಿಕ ಸಂಪ್ರದಾಯವನ್ನು ನೆನಪಿಸಿತು. ಆದುದರಿಂದ ನಾವು ಬೇರುಗಳನ್ನು ಬಲಗೊಳಿಸಬೇಕಾಗಿದೆ ಮತ್ತು ಅದೇ ವೇಳೆಯಲ್ಲಿ, ಪ್ರಪಂಚದಲ್ಲಿ ಇತರ ಎಲ್ಲೆಡೆಗಳಿಂದಲೂ ಒಳ್ಳೆಯದನ್ನು ತೆಗೆದುಕೊಳ್ಳಬೇಕು.

ಜಪಾನ್ ಇದನ್ನು ಮಾಡಿದೆ. ಅದು ಶಿಂಟೋ ಸಂಪ್ರದಾಯವನ್ನು ಉಳಿಸಿಕೊಂಡಿದೆ, ಹಾಗೆಯೇ ಝೆನ್ ಬೌದ್ಧಮತವು ಭಾರತದಿಂದ ಬಂದಾಗ ಅದನ್ನು ಅಭಿವೃದ್ಧಿಪಡಿಸಿತು.

ಪೂರ್ವದಲ್ಲಿ ನಾವು ಎಂದಿಗೂ ಮತಾಂಧರಾಗಿರಲಿಲ್ಲ. ನಾವು ಬಹಳ ತೆರೆದ ಮನಸ್ಸಿನವರಾಗಿದ್ದೇವೆ, ಹೀಗಿದ್ದರೂ ನಮ್ಮದೇ ಸಂಸ್ಕೃತಿಯಲ್ಲಿ ಬಹಳ ಬಲವಾಗಿ ಬೇರೂರಿದ್ದೇವೆ.

ಬೌದ್ಧಮತವು ಮೊದಲಿಗೆ ಜಪಾನಿಗೆ ಬಂದುದು ಸುಮಾರು ೨೦೦೦ ವರ್ಷಗಳ ಹಿಂದೆ, ೭ನೆಯ ಶತಮಾನದಲ್ಲಿ, ಅಂದರೆ ೧,೩೦೦ ವರ್ಷಗಳ ಹಿಂದೆ ಎಂದು ನನಗನಿಸುತ್ತದೆ. ಧ್ಯಾನವೆಂಬುದು ಪ್ರಪಂಚದಾದ್ಯಂತವಿರುವ ಜನರಲ್ಲಿರುವ ಒಂದು ಸಾಮಾನ್ಯ ಅಂಶವಾಗಿದೆ.

ಶಿಂಟೋ ಗುಡಿಯಲ್ಲಿನ ೨ ಸಿಂಹಗಳ ಬಗೆಗಿನ ವಿಷಯವನ್ನು ಕೇಳಲು ನನಗೆ ಸಂತಸವಾಯಿತು. ಒಂದು ’ಆ’ ಎಂದು ಹೇಳುತ್ತದೆ, ಮತ್ತು ಇನ್ನೊಂದು ’ಮ್ಮ್’ ಎಂದು ಹೇಳುತ್ತದೆ. ಒಂದು ಪ್ರಾರಂಭವಾಗಿದೆ ಮತ್ತು ಇನ್ನೊಂದು ಅಂತ್ಯವಾಗಿದೆ. ಅದು ಓಂ ಶಬ್ದ.

ಓಂ ಎಂಬುದು ಅತ್ಯಂತ ಪ್ರಾಚೀನ ಶಬ್ದವಾಗಿದೆ. ಅದು, ಎಲ್ಲಾ ಪೌರಾತ್ಯ ಸಂಸ್ಕೃತಿಗಳ ಭಾಗವಾಗಿರುವ ಆದಿಸ್ವರೂಪದ ಧ್ವನಿಯಾಗಿದೆ.

ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ ಕೂಡಾ ಅದು ಒಂದು ಸ್ವಲ್ಪ ಬೇರೆ ರೀತಿಯಲ್ಲಿ ಇದೆ; ಆಮೆನ್, ಆಮೀನ್  ಆಗಿ. ಅಲ್ಲೂ ಕೂಡಾ ಒಂದು ರೂಪದಲ್ಲಿ ಓಂ ಇದೆ. ಅದೊಂದು ಸಾರ್ವತ್ರಿಕ ಧ್ವನಿ.

ನಿಮಗೆ ಗೊತ್ತಾ, ನನ್ನ ಕನಸೆಂದರೆ ಸಂಪೂರ್ಣ ಜಗತ್ತನ್ನು ಒಂದು ಕುಟುಂಬವಾಗಿ ನೋಡುವುದು. ಪ್ರತಿಯೊಂದು ಮುಖದ ಮೇಲೂ ಒಂದು ಮುಗುಳ್ನಗೆಯನ್ನು ನೋಡಲು ನಾನು ಬಯಸುತ್ತೇನೆ.

ಮೆಟ್ರೋ ಸ್ಟೇಷನ್ನುಗಳಲ್ಲಿ ಹಳಿಗಳ ಮೇಲಕ್ಕೆ ಹಲವಾರು ಜನರು ಜಿಗಿಯುತ್ತಾರೆಂಬುದನ್ನು ಇವತ್ತು ನನಗೆ ಹೇಳಲಾಯಿತು. ಎಷ್ಟರ ಮಟ್ಟಿಗೆ ಎಂದರೆ, ಟ್ರೈನು ಬರುವ ಮೊದಲು ಜನರು ಹಳಿಗಳ ಬಳಿಗೆ ಹೋಗುವುದನ್ನು ತಡೆಗಟ್ಟಲು ಅವರು ಒಂದು ತಡೆಯನ್ನು ಹಾಕಬೇಕಾಯಿತು. ಅದೊಂದು ಒಳ್ಳೆಯ ಆಲೋಚನೆ, ಆದರೆ ಅದು ಅತ್ಯುತ್ತಮವಾದ ಆಲೋಚನೆಯಲ್ಲ,
ಯಾಕೆಂದರೆ ಜನರು ಹಾರಲು ಬಯಸಿದರೆ ಅವರಿನ್ನೂ ಹಾರಲು ಸಾಧ್ಯವಿದೆ.

ಆದುದರಿಂದ, ತಮ್ಮನ್ನು ತಾವೇ ಕೊಲ್ಲುವುದಕ್ಕಾಗಿ ಜನರು ಹಳಿಗಳ ಮೇಲೆ ಹಾರುವುದನ್ನು ತಡೆಯಲಿರುವ ಅತ್ಯುತ್ತಮವಾದ ಮಾರ್ಗವು ಕೇವಲ ತಡೆಗಳಲ್ಲ. ಆದರೆ, ಅವರು ಅಂತರ್ಮುಖವಾಗಿ ಹೋಗಿ ಧ್ಯಾನ ಮಾಡುವಂತೆ ನಾವು ಮಾಡಬೇಕಾಗಿದೆ. ಜನರು ಪುನಃ ಮುಗುಳ್ನಗುವಲ್ಲಿ ಸಹಾಯ ಮಾಡಬಲ್ಲಂತಹ ಧ್ಯಾನದ ಬಹಳ ಸರಳವಾದ ತಂತ್ರಗಳೊಂದಿಗೆ ನಾವು ಬಂದಿದ್ದೇವೆ. ಪ್ರತಿಯೊಬ್ಬರ ಮುಖದ ಮೇಲೂ ಒಂದು ಮುಗುಳ್ನಗೆಯನ್ನು ನೋಡಲು ನಾನು ಬಯಸುತ್ತೇನೆ. ಹಾಗಾದರೆ, ಸಂತೋಷದ ಅಲೆಗಳನ್ನು ಸೃಷ್ಟಿಸಲು ನಾವೆಲ್ಲರೂ ಬದ್ಧರಾಗೋಣವೇ?

(ಸಭಿಕರು ಕೈಚಪ್ಪಾಳೆ ತಟ್ಟುತ್ತಾರೆ ಮತ್ತು ’ಹೌದು’ ಎಂದು ಹೇಳುತ್ತಾರೆ)

ಪ್ರತಿಯೊಬ್ಬರ ಮುಖದ ಮೇಲೂ ನಾವೊಂದು ಮುಗುಳ್ನಗೆಯನ್ನು ತರೋಣ. ನಾವು ಮಾಡಬೇಕಾದುದು ಇದನ್ನೇ.
ನಾವೆಲ್ಲರೂ ಇದರ ಕಡೆಗೆ ಒಟ್ಟಾಗಿ ಕೆಲಸ ಮಾಡಿದರೆ, ಪ್ರತಿಯೊಬ್ಬರ ಮುಖದ ಮೇಲೂ ನಾವೊಂದು ಮುಗುಳ್ನಗೆಯನ್ನು ತರಬಹುದು. ಹಣವೊಂದಕ್ಕೇ ಇದನ್ನು ಮಾಡಲು ಸಾಧ್ಯವಿಲ್ಲ. ನಾವು ಅನೌಪಚಾರಿಕವಾಗಿರಬೇಕು ಮತ್ತು ಪರಸ್ಪರರೊಂದಿಗೆ ಜೋಡಬೇಕು. ಅದು ಆವಶ್ಯಕವಾಗಿದೆ.

ಪ್ರತಿಯೊಬ್ಬರೂ ಪ್ರತಿ ಭಾನುವಾರವೂ ಒಂದು ಗಂಟೆಗಳ ವರೆಗೆ ತಮ್ಮ ಅಪಾರ್ಟ್ಮೆಂಟುಗಳಿಂದ ಹೊರಬಂದು, ಪರಸ್ಪರರೊಂದಿಗೆ ಕುಳಿತುಕೊಂಡು, ಪರಸ್ಪರರೊಂದಿಗೆ ಮಾತನಾಡಿ, ಹಾಡಿ, ಬೆಳಗಿನ ಉಪಹಾರಕ್ಕೆ ಒಂದು ತಿಂಡಿಯನ್ನು ಹಂಚಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಇದೊಂದು ವ್ಯತ್ಯಾಸವನ್ನು ಉಂಟುಮಾಡಬಲ್ಲದು.

ಕೆಲವು ಹಾಡುಗಳನ್ನು ಜೊತೆಯಲ್ಲಿ ಹಾಡಿ, ನಿಮಗೆ ಬೇಕಿರುವ ಯಾವುದೇ ಹಾಡುಗಳಾದರೂ. ಸ್ವಲ್ಪ ಗುಂಪು ಗಾಯನ ಮಾಡಿ, ಜೊತೆಯಲ್ಲಿ ಕುಳಿತುಕೊಳ್ಳಿ ಮತ್ತು ೧೦-೧೫ ನಿಮಿಷಗಳ ವರೆಗೆ ಧ್ಯಾನ ಮಾಡಿ. ಸ್ವಲ್ಪ ಯೋಗ ಅಥವಾ ವ್ಯಾಯಾಮಗಳನ್ನು ಜೊತೆಯಲ್ಲಿ ಮಾಡಿ, ಒಂದು ಊಟವನ್ನು ಜೊತೆಯಲ್ಲಿ ಮಾಡಿ; ಈ ಎಲ್ಲಾ ವಿಷಯಗಳನ್ನು ನಾವು ೪೫ ನಿಮಿಷಗಳಿಂದ ಒಂದು ಗಂಟೆಯಲ್ಲಿ ಮಾಡಬಹುದು.

ಇದನ್ನು ಪ್ರತಿಯೊಂದು ಅಪಾರ್ಟ್ಮೆಂಟ್ ಕಟ್ಟಡದಲ್ಲೂ ಮಾಡಿದರೆ, ಒಂದು ಸಂತೋಷದ ಅಲೆಯು ಸೃಷ್ಟಿಯಾಗುವುದು. ಆತ್ಮೀಯತೆಯ ಒಂದು ಭಾವವು ಬೆಳೆಯುವುದು. ನೀವೇನು ಹೇಳುವಿರಿ? ಕೆಲವು ಒಳ್ಳೆಯ ಜೋಕುಗಳನ್ನು ಹಂಚಿಕೊಳ್ಳಿರಿ!

ನಮ್ಮೆಲ್ಲರೊಳಗೆ ಬೃಹತ್ತಾದ ಆಕಾಶವಿದೆ. ಎಲ್ಲಾ ಅಂತಃಸ್ಫುರಣೆ ಮತ್ತು ಸೃಜನಶೀಲತೆ ಬರುವುದು ಆ ಆಕಾಶದಿಂದ.
ಇವತ್ತು ಮಹಾವೀರ ಎಂದು ಕರೆಯಲ್ಪಡುವ, ಭಾರತದ ಒಬ್ಬರು ಮಹಾನ್ ಸಂತರ ಜನ್ಮದಿನವಾಗಿದೆ. ಅವರು ಪರಮಾತ್ಮ ಬುದ್ಧನ ಸಮಕಾಲೀನರಾಗಿದ್ದರು. ಬುದ್ಧ ಪೂರ್ಣಿಮೆ, ಅಂದರೆ ಬುದ್ಧನ ಜನ್ಮದಿನವು ಶೀಘ್ರದಲ್ಲೇ ಬರಲಿದೆ.

ಭಗವಾನ್ ಮಹಾವೀರನು ಅಹಿಂಸೆಗಾಗಿ ಎದ್ದುನಿಂತನು. ಅವನು, ’ಅನೇಕಾಂತ್ ವಾದ’  ಎಂದು ಕೂಡಾ ಹೇಳಿದನು. ಅಂದರೆ, ಹಲವಾರು ಸಾಧ್ಯತೆಗಳಿವೆ ಎಂದು ಅರ್ಥ. ಜಗತ್ತು ಸಾಧ್ಯತೆಗಳಿಂದ ತುಂಬಿದೆ. ನಿಜಕ್ಕೂ ಇವತ್ತು ಇದರ ಅಗತ್ಯವಿದೆ. ಜನರು ಇದನ್ನು ಅರ್ಥ ಮಾಡಿಕೊಂಡರೆ, ಜಗತ್ತಿನಲ್ಲಿ ಯಾವುದೇ ಭಯೋತ್ಪಾದನೆ ಇರಲಾರದು. ಅಲ್ಲಿ ಯಾವುದೇ ಮತಾಂಧತೆಯಿರಲಾರದು.

ಬುದ್ಧ ಮತ್ತು ಮಹಾವೀರರು ಒಂದೇ ಊರಿನವರಾಗಿದ್ದರೆಂಬುದು ನನ್ನ ನಂಬಿಕೆ. ಅವರು ಪರಸ್ಪರರ ಬಗ್ಗೆ ತಿಳಿದಿದ್ದರು, ಆದರೆ ಅವರು ಯಾವತ್ತೂ ಭೇಟಿಯಾಗಿರಲಿಲ್ಲ. ಯಾರೋ ಒಬ್ಬರು ಅವರಲ್ಲಿ ಕೇಳಿದರು, ’ನೀವು ಯಾಕೆ ಭೇಟಿಯಾಗಬಾರದು?"
ಅವರು ಉತ್ತರಿಸಿದರು, "ಯಾವುದೇ ಅಗತ್ಯವಿಲ್ಲ, ಯಾಕೆಂದರೆ ನಾವು ಈಗಾಗಲೇ ಸಂಬಂಧ ಹೊಂದಿದ್ದೇವೆ."

ನಿಮಗೆ ಗೊತ್ತಾ, ಆತ್ಮಸಾಕ್ಷಾತ್ಕಾರದ ಸ್ಥಿತಿಯಲ್ಲಿ, ಮಾರ್ಗಗಳು ವಿಭಿನ್ನವಾಗಿದ್ದರೂ, ಆತ್ಮವು ಒಂದೇ ಆಗಿದೆ. ಅಲ್ಲಿ ಯಾವುದೇ ದೂರವಿಲ್ಲ.

ಅವರು ಭೇಟಿಯಾದರು, ಆದರೆ ಪರಸ್ಪರರೊಂದಿಗೆ ಮಾತನಾಡಲೇ ಇಲ್ಲ ಎಂದು ಹೇಳುವ ಇನ್ನೊಂದು ರೂಪಾಂತರ ಚರಿತ್ರೆಯಲ್ಲಿದೆ. ಅವರು ಸುಮ್ಮನೆ ಭೇಟಿಯಾದರು ಮತ್ತು ತಮ್ಮ ದಾರಿಗಳಲ್ಲಿ ಹೋದರು. ಇಲ್ಲಿ ಕೂಡಾ, ಮೌಖಿಕ ಸಂಪರ್ಕದ ಯಾವುದೇ ಅಗತ್ಯವಿರಲಿಲ್ಲ ಎಂದು ಹೇಳಲಾಗಿದೆ. ಹೃದಯವು ಹೃದಯವನ್ನು ಭೇಟಿಯಾಗುವಾಗ ಮತ್ತು ಆತ್ಮವು ಆತ್ಮವನ್ನು ಭೇಟಿಯಾಗುವಾಗ, ಮಾತನಾಡುತ್ತಾ ಇರಬೇಕಾದ ಯಾವುದೇ ಅಗತ್ಯವಿರುವುದಿಲ್ಲ.

ಹೃದಯಗಳ ಮಿಲನವಾಗುವಾಗ, ಅಲ್ಲಿ ಯಾವುದೇ ತಡೆಯಿರುವುದಿಲ್ಲ. ಯಾವುದೇ ಭಾಷಾ ತಡೆ, ಯಾವುದೇ ಶಬ್ದಗಳು, ಯಾವುದೂ ಮಧ್ಯೆ ಬರುವುದಿಲ್ಲ. ಇಬ್ಬರು ವ್ಯಕ್ತಿಗಳು ಬೌದ್ಧಿಕ ಮಟ್ಟದಲ್ಲಿರುವಾಗ, ಅವರು ಒಂದೇ ವಿಷಯದ ಬಗ್ಗೆ ಮಾತನಾಡುತ್ತಿರಬಹುದು, ಆದರೆ ಅದೊಂದು ಜಗಳದಂತೆ ತೋರುತ್ತದೆ.

ಇಲ್ಲಿರುವ ವಿದ್ಯಾರ್ಥಿಗಳಿಗೆ ನಾನೊಂದು ಉಜ್ವಲ ವೃತ್ತಿಜೀವನವನ್ನು ಮತ್ತು ಒಂದು ಉಜ್ವಲ ಭವಿಷ್ಯವನ್ನು ಕೋರುತ್ತೇನೆ. ನೀವೆಲ್ಲರೂ ಒಳ್ಳೆಯ ರಾಜಕಾರಣಿಗಳು, ಒಳ್ಳೆಯ ಉದ್ಯಮಿಗಳು, ಒಳ್ಳೆಯ ವೃತ್ತಿಪರರು, ವೈದ್ಯರು ಮತ್ತು ಇಂಜಿನಿಯರುಗಳಾಗಬೇಕು.

ಇದೆಲ್ಲದರ (ಆಧ್ಯಾತ್ಮಿಕ ಅಭ್ಯಾಸಗಳು) ಮೂಲತತ್ವವೆಂದರೆ, ನಿಮ್ಮ ದೃಷ್ಟಿಯನ್ನು ವಿಶಾಲಗೊಳಿಸುವುದು ಮತ್ತು ನಿಮ್ಮೊಳಗೆ ಸಂತೋಷದ ಅಂಶವನ್ನು ಇಟ್ಟುಕೊಳ್ಳುವುದು. ಯುವಕರು ಎಂತಹ ಮುಗುಳ್ನಗೆಗಳನ್ನು ಮತ್ತು ವಿಶ್ವಾಸವನ್ನು ಹೊರಹೊಮ್ಮಬೇಕೆಂದರೆ, ಅದನ್ನು ಯಾರಿಂದಲೂ ದೂರ ಕೊಂಡೊಯ್ಯಲು ಸಾಧ್ಯವಾಗಬಾರದೆಂಬುದು ನನ್ನ ಬಯಕೆ.

ನಿಮಗೆ ಮಾರ್ಗದರ್ಶನ ನೀಡಲು ಇಲ್ಲಿ ಹಲವಾರು ಶ್ರೇಷ್ಠ ವ್ಯಕ್ತಿಗಳಿದ್ದಾರೆ.

ನಾನು ನಿಮಗೆ ಒಂದನ್ನು ಹೇಳಲು ಬಯಸುತ್ತೇನೆ. ಇದನ್ನು ನೀವು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಿಮ್ಮ ವ್ಯಕ್ತಿತ್ವವನ್ನು ಯಾವ ರೀತಿ ರೂಪಿಸಿಕೊಳ್ಳಿರೆಂದರೆ, ನಿಮ್ಮನ್ನು ನಿಮ್ಮ ಸಂತುಲನದಿಂದ ದೂರ ಮಾಡಲು, ನಿಮಗೆ ತೊಂದರೆ ನೀಡಲು ಅಥವಾ ನಿಮ್ಮ ಮುಗುಳ್ನಗೆಯನ್ನು ದೂರ ಮಾಡಲು ಯಾವುದಕ್ಕೂ ಸಾಧ್ಯವಾಗಬಾರದು. ನೀವು ನಿಮ್ಮ ವ್ಯಕ್ತಿತ್ವವನ್ನು ಆ ರೀತಿ ಮಾಡಿಕೊಂಡರೆ, ಜಗತ್ತಿನ ಎಲ್ಲೆಡೆಗಳಲ್ಲಿಯೂ ನೀವು ಸ್ವಾಗತಿಸಲ್ಪಡುವಿರಿ. ಅದು ಯಶಸ್ಸಿನ ಒಂದು ಚಿಹ್ನೆಯಾಗಿದೆ.

ನಿಮಗೆ ಸಹಾಯ ಮಾಡಲು ಮತ್ತು ನಿಮಗೆ ಮಾರ್ಗದರ್ಶನ ನೀಡಲು, ಅಂತಹ ಒಂದು ವ್ಯಕ್ತಿತ್ವವನ್ನು ತರಲು ಆರ್ಟ್ ಆಫ್ ಲಿವಿಂಗ್ ಇದೆ. ಯುವಕರಿಗೆ ಮತ್ತು ಹಾಗೆಯೇ ಹಿರಿಯ  ವ್ಯಕ್ತಿಗಳಿಗಾಗಿ ನಮ್ಮಲ್ಲಿ ಹಲವಾರು ಒಳ್ಳೆಯ ಕಾರ್ಯಾಗಾರಗಳಿವೆ.

ಶುಕ್ರವಾರ, ಏಪ್ರಿಲ್ 19, 2013

ಭೌತಿಕ ನಿಯಮಗಳನ್ನು ಮೀರಿಸಿದ ಸ೦ಗತಿಯೊಂದಿದೆ

ಕ್ಯಾಲ್‍ಗರಿ, ಕ್ಯಾನಡ
೧೯ ಏಪ್ರಿಲ್ ೨೦೧೩

ಮೂವರು ಪತ್ನಿಯರನ್ನು ಹೊಂದಿದ್ದ, ಆದರೆ ಮಕ್ಕಳಿರದ ದಶರಥ ಮಹಾರಾಜನ ಮಹಾಕಾವ್ಯದ ಕತೆಯಿದೆ. ಆತ ಮತ್ತು ಆತನ ಪತ್ನಿಯರಲ್ಲೊಬ್ಬಳಾದ ಕೌಶಲ್ಯಾ ಜೊತೆಗೂಡಿ ಅಶ್ವಮೇಧ ಎಂಬ ಯಾಗವನ್ನು ಮಾಡಿ, ನಂತರ ನಾಲ್ಕು ಪುತ್ರರನ್ನು ಪಡೆದರು. ಮೇಧ ಎಂದರೆ ಪವಿತ್ರಗೊಳಿಸುವುದು; ಅಶ್ವವೆಂದರೆ ಇವತ್ತು, ಈಗ; ಯಾವುದು ನೆನ್ನೆಯಲ್ಲವೋ ಅದು, ನಾಳೆಯಲ್ಲ, ಇವತ್ತು.
ದಶರಥ ಪದದ ಅರ್ಥ ಯಾರು ಒಂದೇ ಬಾರಿಗೆ ಹತ್ತು ರಥಗಳ ಸಾರಥ್ಯವನ್ನು ವಹಿಸಬಲ್ಲನೋ ಅವನು. ಕೌಶಲ್ಯಾ ಎಂದರೆ ನಿಪುಣೆ. ಹೀಗೆ ದಶರಥ ಮತ್ತು ಕೌಶಲ್ಯಾ ಇಬ್ಬರೂ ಸೇರಿ ಅಶ್ವಮೇಧ ಯಜ್ಞವನ್ನು ನೆರವೇರಿಸಿದರು, ಅದರ ಅರ್ಥ ವರ್ತಮಾನವನ್ನು ಪವಿತ್ರಗೊಳಿಸಿದರು, ಆಗ ರಾಮನ ಜನನವಾಯಿತು. ಇದು ಶ್ರೀರಾಮನ ಜನನದ ಆಧ್ಯಾತ್ಮಿಕ ಮಹತ್ವ.

ನಿಮ್ಮ ದೇಹವೇ ದಶರಥ, ಹತ್ತು ರಥಗಳು - ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು. ಜ್ಞಾನೇಂದ್ರಿಯಗಳೆಂದರೆ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ. ಐದು ಕರ್ಮೇಂದ್ರಿಯಗಳೆಂದರೆ ಭೌತಿಕವಸ್ತುಗಳೊಂದಿಗೆ ಪ್ರತಿಕ್ರಿಯೆ ನಡೆಸಲು ಸಹಕಾರಿಯಾಗಿರುವುದು; ಕೈ-ಕಾಲುಗಳು, ಗುದದ್ವಾರ, ಜನನೇಂದ್ರಿಯ ಮತ್ತು ಬಾಯಿ. ಈ ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು ನಮ್ಮ ಮನಸ್ಸನ್ನು ಮತ್ತು ಜೀವನವನ್ನು ಹತ್ತು ಹತ್ತು ಬೇರೆ ಬೇರೆ ದಿಕ್ಕಿಗೆ ಎಳೆದೊಯ್ಯುತ್ತವೆ.

ಆಂಗ್ಲ ಭಾಷೆಯ ರೇ, ರೇಡಿಯನ್ಸ್ ಇವೆಲ್ಲ ಪದಗಳು ಸಂಸ್ಕೃತದ ಧಾತು ರಾ ಶಬ್ದದಿಂದ ಬಂದಿವೆ. ಅದರ ಅರ್ಥ ಹೊಳೆಯುವುದು, ಕಂಗೊಳಿಸುವುದು, ತೇಜಸ್ಸು, ಪ್ರಕಾಶ. ಮ ಎಂದರೆ ನನ್ನೊಳಗೆ; ನನ್ನ ಹೃದಯದೊಳಗೆ. ರಾಮ ಎಂದರೆ ನನ್ನ ಹೃದಯದಲ್ಲಿರುವ ಬೆಳಕು. ಯಾವಾಗ ಶರೀರದ ಕುಶಲತೆಯಿಂದ ಮನಸ್ಸು ವರ್ತಮಾನದಲ್ಲಿ ನೆಲೆಸಿ, ಮನಸ್ಸು ಮತ್ತು ಹೃದಯವನ್ನು ಶುದ್ಧಗೊಳಿಸುವುದೋ, ಆಗ ರಾಮ, ಅಂದರೆ ಹೃದಯದಲ್ಲಿರುವ ಬೆಳಕು ಪ್ರಕಾಶಮಾನವಾಗುತ್ತದೆ.
ಅಶ್ವಮೇಧವನ್ನು ಮಾಡಿದಾಗ ನಾಲ್ಕು ವಿಷಯಗಳು ನಿಮ್ಮಿಂದ ಹೊರಹೊಮ್ಮುವುದು.

ರಾಮ ಎಂದರೆ ಹೃದಯದಲ್ಲಿ ಜ್ಯೋತಿಯು ಬೆಳಗುವುದು; ಲಕ್ಷ್ಮಣ ಎಂದರೆ ಅರಿವು, ಜಾಗೃತಿ; ಭರತ ಎಂದರೆ ಪ್ರತಿಭೆ ಹಾಗೂ ಶತ್ರುಘ್ನ ಎಂದರೆ ಶತ್ರುಗಳೇ ಇಲ್ಲದವನು. ಅಶ್ವ ಎಂದರೆ ಕುದುರೆ, ಮತ್ತು ಮೇಧ ಎಂದರೆ ಶುದ್ಧೀಕರಣ. ಹಾಗಾದರೆ ಕುದುರೆಯೆಂದರೇನು? ನಿಮ್ಮ ಇಂದ್ರಿಯಗಳು. ನಿಮ್ಮ ಇಂದ್ರಿಯಗಳು ಶುದ್ಧಗೊಂಡಾಗ, ನಿಮ್ಮ ಹೃದಯದಲ್ಲಿ ಬೆಳಗುವುದು ಜ್ಯೋತಿ (ರಾಮ), ಮತ್ತು ಜಾಗೃತಿ (ಲಕ್ಷ್ಮಣ). ಆಗ ನಿಮಗೆ ಯಾವ ಶತ್ರು (ರಾವಣ ಎಂದರೆ ಅಹಂ)ಗಳೂ ಇರುವುದಿಲ್ಲ (ಶತ್ರುಘ್ನ) ಮತ್ತು ಸರ್ವ ಸಾಮಥ್ರ್ಯವೂ ನಿಮ್ಮ ಬಳಿಗೆ ಬರುವವು (ಭರತ).

ಮೂರು ಬಗೆಯ ಆಲೋಚನೆಗಳು ಅಥವಾ ಆಕ್ಷೇಪಣೆಗಳು ನಿಮ್ಮನ್ನು ಕಾಡುತ್ತವೆ.

ಮೊದಲನೆಯದಾಗಿ, ನಿಮಗೆ ಪ್ರತಿಭೆಯಿದ್ದರೂ ಅದನ್ನು ಉಪಯೋಗಿಸಲು ಅಥವಾ ಹೊರತರಲು ಸಾಧ್ಯವಾಗುತ್ತಿಲ್ಲ, ನೀವು ಉಪಯುಕ್ತರಲ್ಲವೆಂದು ಭಾಸವಾಗುವುದು; ಅದು ನಿಮನ್ನು ಹತಾಶೆಗೊಳಿಸುತ್ತದೆ.

ಎರಡನೆಯದಾಗಿ, ನಿಮಗೆ ತಿಳಿದಿದೆಯೆಂದು ಅನಿಸಿದರೂ ಯಾರೂ ನಿಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇದು ಮತ್ತೊಂದು ವಿವಾದನೀಯ ವಿಷಯವಾಗಿದ್ದು, ಅದರಿಂದ ಸಂಕಟಪಡುವಿರಿ.

ಮೂರನೆಯದಾಗಿ, ಎಲ್ಲೋ ಕಳೆದುಹೋದಂತೆ, ಇನ್ನಷ್ಟು ಉನ್ನತವಾಗಿ ಅಥವಾ ಬೇರೆಯ ರೀತಿಯಲ್ಲಿ ಮಾಡಬಹುದಾಗಿತ್ತು ಎಂಬ  ಭಾವ; ಆ ನಂತರ ಕಳೆದುಹೋದುದನ್ನು ಆಕ್ಷೇಪಿಸುವಿರಿ, ನಿಮ್ಮನ್ನು ನೀವೇ ಆಕ್ಷೇಪಿಸುವಿರಿ ಮತ್ತು ನಿಮ್ಮ ಸುತ್ತಮುತ್ತಲಿರುವವರೆಲ್ಲರನ್ನೂ ಆಕ್ಷೇಪಿಸುವಿರಿ.

ಈ ಮೂರು ಬಗೆಯ ಆಲೋಚನೆಗಳು ಅಥವಾ ಆಕ್ಷೇಪಣೆಗಳು ನಿಮ್ಮ ಚೈತನ್ಯವನ್ನು ಕುಗ್ಗಿಸುತ್ತವೆ. ಭೂಮಿಯಲ್ಲಿ ದುಃಖಪಡಲು ನಿಮಗೆ ಮಿಲಿಯನ್ ಕಾರಣಗಳಿರಬಹುದು. ಯಾವುದಾದರೂ ನಿಮ್ಮನ್ನು ಕೆಳಗೆಳೆಯುತ್ತಿದ್ದರೆ, ಅದಕ್ಕೆ ಕಾರಣ ನಿಮಗಿಷ್ಟ ಬಂದಂತೆ ಯಾವುದೂ ನಡೆಯುತ್ತಿಲ್ಲ.

ಜ್ಞಾನದಿಂದ ಇವೆಲ್ಲವನ್ನು ದಾಟಿಬಿಡಿ, ಮರೆತುಬಿಡಿ, ಚಿಂತೆಯಿಲ್ಲ, ಏನಾದರಾಗಲಿ! ಅನೇಕ ಜನರು ತಮ್ಮ ಪ್ರತಿಭೆಯನ್ನು ಉಪಯೋಗಿಸುತ್ತಾರೆ, ಅವರೆಲ್ಲರೂ ಸತ್ತಿದ್ದಾರೆ ಮತ್ತು ಮರೆಯಲ್ಪಟ್ಟಿದ್ದಾರೆ!

ಯಾರು ತಾನೆ ನಿತ್ಯ ಮೈಕೆಲ್ ಏಂಜಿಲೊ ಚಿತ್ರಗಳನ್ನು ಕುಳಿತು ನೋಡುತ್ತಾರೆ? ಒಮ್ಮೆ ನೀವದನ್ನು ನೋಡಿ, ನಂತರ ಮರೆತುಬಿಡುತ್ತೀರ. ಬೀತೋವನ್ ಎಂತಹ ಪ್ರತಿಭಾವಂತ ಸಂಗೀತಗಾರ. ದಿನನಿತ್ಯವೂ ಜನರು ಅವನ ಸಂಗೀತವನ್ನು ಕೇಳುತ್ತಿರುತ್ತಾರೆಂದು ನಿಮಗನಿಸುತ್ತಿದೆಯೇ? ಜನರು ಕೇಳುತ್ತಾರೆ, ಮತ್ತು ಮರೆತುಬಿಡುತ್ತಾರೆ.

ಇಲ್ಲಿ ಯಾವುದೂ ಶಾಶ್ವತವಲ್ಲ; ಈ ಪ್ರಪಂಚದಲ್ಲಿ ಎಲ್ಲವೂ ಬದಲಾಗುತ್ತಿರುತ್ತದೆ. ಈ ಬದಲಾಗುತ್ತಿರುವ ಜಗತ್ತಿನಲ್ಲಿ ನಿಮ್ಮ ನೋಟವನ್ನು ಬದಲಾಗದೇ ಇರುವತ್ತ ತಿರುಗಿಸಿ. ಇಲ್ಲವಾದರೆ, ‘ನಾನು ಸರಿ, ನಾನು ಇದಕ್ಕೇ ಅಂಟಿಕೊಂಡಿರುತ್ತೇನೆ’ ಎಂಬ ಧರ್ಮನಿಷ್ಠೆಯಲ್ಲಿ ಬಂಧಿತರಾಗುತ್ತೇವೆ.

ನೀವು ಸರಿಯೆಂದು ನಿಮಗೆ ಅನಿಸಿದಾಗ, ಬಹಳ ಬಾರಿ ಇತರರು ತಪ್ಪೆಂದು ಆಲೋಚಿಸುವಿರಿ. ಆಗ ನಿಮಗೆ ಕೋಪ ಬರುವುದು. ಇತರರು ಸರಿಯೆಂದೆನಿಸಿದರೆ, ಅನೇಕ ಬಾರಿ ನೀವು ತಪ್ಪೆಂದು ಆಲೋಚಿಸುವಿರಿ. ಆಗ ನಿಮಗೆ ಅಪರಾಧಿ ಮನೋಭಾವ, ದುಃಖ ಮತ್ತು ತೊಂದರೆಯುಂಟಾಗುವುದು. ಇವೆರಡು ಸಂದರ್ಭಗಳಲ್ಲಿಯೂ, ನಿಮ್ಮ ಸಮತೋಲನವನ್ನು ಕಳೆದುಕೊಳ್ಳುವಿರಿ.
ಮನಸ್ಸು ಈ ದ್ವಂದ್ವದಲ್ಲಿ (ಸರಿ ಮತ್ತು ತಪ್ಪುಗಳಲ್ಲಿ) ತೂಗುಯ್ಯಾಲೆಯಾಡುತ್ತದೆ. ಈ ದ್ವಂದ್ವದಿಂದ ಹೊರಬರುವುದೇ ಜೀವನದ ಉದ್ದೇಶ; ಅದನ್ನೇ ಮೋಕ್ಷ ಎನ್ನುವುದು. ಮೋಕ್ಷ ಅಂದರೆ ಈ ದ್ವಂದ್ವದಿಂದ ಉನ್ನತಕ್ಕೇರುವುದು; ಆದ್ದರಿಂದ ಜೀವನದಲ್ಲಿ ಈ ಕಹಿ ಔಷಧಿಯನ್ನು ನುಂಗಿ; ಅವು ಬರುತ್ತವೆ, ಘಟನೆಗಳು ನಡೆಯುತ್ತವೆ.

ರುದ್ರದಲ್ಲಿ ಇದನ್ನು ಬಹಳ ಸುಂದರವಾಗಿ ವರ್ಣಿಸಲಾಗಿದೆ. ಜಗತ್ತಿನಲ್ಲಿ ಎಲ್ಲ ಬಗೆಯ ಜನರಿರುವರೆಂದು ಹೇಳಲಾಗಿದೆ. ವಂಚಕರು, ನಿಷ್ಠೆಯಿಲ್ಲದವರು, ವಚನ ಭ್ರಷ್ಟರು, ಬುದ್ಧಿವಂತರಾಗಿದ್ದರೂ ಪರಿಪೂರ್ಣರಲ್ಲ, ಪೆದ್ದರು ಮತ್ತು ಎಲ್ಲ ಬಗೆಯವರು.
ಇತರರನ್ನು ಬಿಡಿ, ಕೆಲವೊಮ್ಮೆ ನಿಮ್ಮ ಸ್ವಂತ ಮನಸ್ಸು ಮೇಲೆ ಕೆಳಗೆ ಹೊಯ್ದಾಡುತ್ತದೆ. ಹಾಗಾದರೆ ಅಂತಹ ಸಮಯದಲ್ಲಿ ಏನು ಮಾಡಬೇಕು? ಅಶ್ವಮೇಧ, ವರ್ತಮಾನವನ್ನು ಪರಿಶುದ್ಧಗೊಳಿಸಬೇಕು.

ಮೇಧ ಪದಕ್ಕೂ ಅನೇಕ ಅರ್ಥಗಳಿವೆ, ಬುದ್ಧಿ ಎನ್ನುವ ಅರ್ಥವೂ ಇದೆ. ಅಶ್ವಮೇಧವೆಂದರೆ ಬುದ್ಧಿಯನ್ನು ವರ್ತಮಾನಕ್ಕೆ ತರುವುದು. ಶ್ವ ಎಂದರೆ ನೆನ್ನೆ ಅಥವಾ ನಾಳೆ. ಅಶ್ವ ಎಂದರೆ ನೆನ್ನೆಯಲ್ಲ ಅಥವಾ ನಾಳೆಯಲ್ಲ, ಶಾಶ್ವತ ಮತ್ತು ವರ್ತಮಾನ ಕ್ಷಣ. ನಿಮ್ಮ ಮೇಧ ಅಥವಾ ಬುದ್ಧಿಯು ವರ್ತಮಾನದಲ್ಲಿ ಆಳವಾಗಿದ್ದಾಗ, ಯಾವುದೂ ನಿಮ್ಮನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ. ಯಾವುದು ನಿಮ್ಮ ಬುದ್ಧಿಯನ್ನು ಅಲುಗಾಡಿಸಬಹುದೆಂದರೆ, ಅದು ಕಳೆದುಹೋದುದು (ಭೂತಕಾಲ) ಮಾತ್ರ. ಪ್ರತಿ ಕ್ಷಣವೂ ಭೂತಕಾಲದಿಂದ ಹೊರಬರುತ್ತಿದ್ದರೆ, ನೀವು ಮುಕ್ತರು, ಅದೇ ಮುಕ್ತಿ. ನಿಮಗೆ ಮುಕ್ತಿ ಸಿಕ್ಕಿದೆ, ಏಕೆಂದರೆ ನೀವು ಭೂತಕಾಲದಿಂದ ಹೊರಬಂದಿದ್ದೀರಿ.

ಅಶ್ವಮೇಧವೆಂದರೆ ಬುದ್ಧಿಯು ವರ್ತಮಾನ ಕ್ಷಣದಲ್ಲಿರುವುದು. ಇನ್ನೊಂದು ಅರ್ಥ ಶುದ್ಧಗೊಳಿಸುವುದು. ವರ್ತಮಾನ ಕ್ಷಣದಲ್ಲಿದ್ದುಕೊಂಡು, ಆತ್ಮವನ್ನು, ಇಂದ್ರಿಯಗಳನ್ನು, ತನು-ಮನಗಳನ್ನು ಶುದ್ಧಗೊಳಿಸುತ್ತಾ, ಆಂತರ್ಯದೊಳಗೆ ಹೋಗುವುದು.

ಪ್ರಾಚೀನ ಕಾಲದಲ್ಲಿ, ಯಾಗದಲ್ಲಿ ಒಂದು ಸುದೀರ್ಘವಾದ ಆಚರಣೆ ರೂಢಿಯಲ್ಲಿತ್ತು; ಒಂದು ಕುದುರೆಯನ್ನು ಧ್ವಜಗಳಿಂದ ಮತ್ತು ಒಡವೆಗಳಿಂದ ಕಟ್ಟಿ, ಮುಕ್ತವಾಗಿ ಬಿಡುವುದು. ಕುದುರೆಯು ಎಲ್ಲೆಡೆ ಅಲೆದಾಡುತ್ತಿದ್ದು, ಅದು ಎಲ್ಲಿಗೆ ಹೋಗುವುದೋ ಆ ಭೂಪ್ರದೇಶವನ್ನು ರಾಜನು ವಶಪಡಿಸಿಕೊಳ್ಳುತ್ತಿದ್ದನು. ಕುದುರೆಯೇನಾದರೂ ಇನ್ನೊಂದು ರಾಜ್ಯದ ಒಂದು ಭಾಗಕ್ಕೆ ಹೋದರೆ ಆ ರಾಜ್ಯದ ಆ ಭಾಗವನ್ನು, ಅಶ್ವಮೇಧ ಯಾಗವನ್ನು ಆಚರಿಸಿದ ರಾಜನ ಪಾಲಾಗುತ್ತಿತ್ತು. ಇದು ಅಶ್ವಮೇಧದ ಕತೆ.                                                            
ಅಶ್ವಮೇಧಯಾಗದಿಂದ ದಶರಥನು ಪುತ್ರರನ್ನು ಪಡೆದನು.

ದಶರಥನ ಮೂವರು ರಾಣಿಯರ ಹೆಸರೂ ಬಹಳ ಸ್ವಾರಸ್ಯಕರವಾಗಿದೆ. (ರಾಮಾಯಣವೆಂದರೆ ಕೇವಲ ಇತಿಹಾಸದ ಒಂದು ಕತೆಯಲ್ಲ; ಅದಕ್ಕೆ ತಾತ್ತ್ವಿಕ ಹಾಗೂ ಆಧ್ಯಾತ್ಮಿಕ ಮಹತ್ವವೂ ಇದೆ).

ಮೊದಲನೆಯ ಪತ್ನಿಯ ಹೆಸರು ಕೌಶಲ್ಯಾ, ಎಂದರೆ ಕುಶಲತೆ.

ಎರಡನೆಯ ಪತ್ನಿಯ ಹೆಸರು ಸುಮಿತ್ರ, ಎಂದರೆ ಒಳ್ಳೆಯ ಸ್ನೇಹಿತ/ಸ್ನೇಹಿತೆ. ಅನೇಕ ಮಿತ್ರರಿರಬಹುದು, ಆದರೆ ಎಲ್ಲರೂ ಒಳ್ಳೆಯ ಮಿತ್ರರಾಗಿರಬೇಕೆಂದೇನಿಲ್ಲ. ಎಷ್ಟೋ ವೇಳೆ, ಸ್ನೇಹಿತರು ನಿಮ್ಮನ್ನು ತಪ್ಪು ದಾರಿಗೆಳೆಯ್ಯುತ್ತಾರೆ. ಸುಮಿತ್ರ ಎಂದರೆ ಒಳ್ಳೆಯ ದಾರಿಗೆ ಕರೆದೊಯ್ಯುವವಳು.

ಮೂರನೆಯ ಪತ್ನಿಯ ಹೆಸರು ಕೈಕೇಯಿ, ಎಂದರೆ ತನ್ನನ್ನೇ ತ್ಯಾಗ ಮಾಡಿ ಪರೋಪಕಾರ ಮಾಡುವವಳು. ಕೈಕೇಯಿಯು ನಿಮಗಾಗಿ ನಿಲ್ಲುವಳು, ಅದಕ್ಕೆ ವಿರುದ್ಧಾರ್ಥವಾಗಿ ಅನಿಸಿದರೂ, ಆಳವಾಗಿ ನೋಡಿದಾಗ, ರಹಸ್ಯವಾಗಿ ಒಳ್ಳೆಯದನ್ನು ಮಾಡುವಳು. ವೈದ್ಯರು ನಿಮಗೆ ಕಹಿ ಔಷಧಿ ಅಥವಾ ಚುಚ್ಚು ಮದ್ದನ್ನು  ಕೊಡುವ ಹಾಗೆ. ವೈದ್ಯರನ್ನು ನೋಡುತ್ತಿದ್ದಂತೆ ಮಕ್ಕಳು ಕಿರುಚುತ್ತಾರೆ, ಅಳುತ್ತಾರೆ, ಆದರೆ ಚುಚ್ಚು ಮದ್ದು ಅವರಿಗೆ ಒಳ್ಳೆಯದನ್ನೇ ಮಾಡುತ್ತದೆ. ಹಾಗೆಯೇ, ಕೈಕೇಯಿ ಬಹಿರ್ಮುಖವಾಗಿ ಒಳ್ಳೆಯವಳಲ್ಲದಿದ್ದರೂ, ಆಂತರ್ಯದಲ್ಲಿ ಒಳ್ಳೆಯವಳೇ.

ರಾಮಯಣವನ್ನು ಹೀಗೆ ಆಧ್ಯಾತ್ಮಿಕ ದೃಷ್ಟಿಕೋನದಿಂದ ವಿಶ್ಲೇಷಿಸಬಹುದು. ಇದರಿಂದ ನಿಮಗೆ ಜ್ಞಾನ, ಆಧ್ಯಾತ್ಮದ ಮಹತ್ವ ತಿಳಿಯುವುದು. ಈ ಕತೆಗಳನ್ನು ರಚಿಸಿರುವುದು ಎಲ್ಲರಿಗಾಗಿ - ಮಕ್ಕಳು, ಹಿರಿಯರು, ಸಾಮಾನ್ಯ ಜನರು, ಯಾರು ಇದನ್ನು ಓದಿದರೂ ಏನಾದರೊಂದು ಸಿಗುವುದು, ಜೀವನದ ತತ್ವವನ್ನು ತಿಳಿಯಬಹುದು. ಆಧ್ಯಾತ್ಮದ ದೃಷ್ಟಿಯಿಂದ ನೋಡಿದರೆ ಅದರಲ್ಲಿ ಗಾಢವಾದ ಸತ್ಯವಿದೆ.

ಮಹಾತ್ಮ ಗಾಂಧೀಜೀಯವರಿಗೆ ರಾಮ ಧ್ಯಾನ ಬಹಳ ಪ್ರಿಯವಾಗಿತ್ತು. ಅವರೊಮ್ಮೆ ಹೀಗೆ ಹೇಳಿದ್ದರು ‘ನನ್ನಿಂದ ಸರ್ವಸ್ವವನ್ನೂ ತೆಗೆದುಕೊಂಡುಬಿಡಿ, ನಾನು ಬದುಕಬಲ್ಲೆ, ಆದರೆ ರಾಮನನ್ನು ನನ್ನಿಂದ ತೆಗೆದುಕೊಂಡರೆ ನಾನು ಉಳಿಯಲಾರೆ.’ ಗಾಂಧೀಜೀಯವರನ್ನು ಕೊಂದಾಗ, ಅವರ ಬಾಯಿಂದ ಹೊರಬಂದ ಕೊನೆಯ ಮಾತು ‘ಹೇ ರಾಮ್’. ಅವರು ಯಾರನ್ನೂ ದೂರಲ್ಲಿಲ್ಲ, ಕೂಗಾಡಲಿಲ್ಲ ಅಥವಾ ಅಳಲಿಲ್ಲ, ‘ಹೇ ರಾಮ್!’ ಎಂದಷ್ಟೇ ಹೇಳಿದ್ದು. (‘ರಾಮ’ ಪದ ನಾಭಿಯ ಕೇಂದ್ರದೊಂದಿಗೆ ಸಂಬಂಧ ಹೊಂದಿರುವುದು)

ನಿಮಗೆ ರಾಮಾಯಣದಿಂದ ಇನ್ನೊಂದು ಕತೆಯನ್ನು ಹೇಳಲು ಬಯಸುತ್ತೇನೆ. ವಾಸ್ತವವಾಗಿ ಅದರಲ್ಲಿ ಎರಡು ಕತೆಗಳು ಸೇರಿವೆ.

ಶ್ರೀಲಂಕೆಗೆ ಸೇತುವೆಯನ್ನು ನಿರ್ಮಿಸಲು ರಾಮನಿಗೆ ಬಹಳಷ್ಟು ವಾನರರು ಸಹಾಯ ಮಾಡುತ್ತಿದ್ದರು. ಆ ವಾನರರು ಕಲ್ಲುಗಳನ್ನೆತ್ತಿಕೊಂಡು, ಅದರ ಹಿಂದೆ ಶ್ರೀರಾಮ ಎಂದು ಬರೆದು ನೀರಲ್ಲಿ ಹಾಕುತ್ತಿದ್ದರು. ಹಾಗೆ ಮಾಡಿದಾಗ, ಆ ಕಲ್ಲುಗಳು ನೀರಿನಲ್ಲಿ ತೇಲುತ್ತಿದ್ದವು. ಇದಕ್ಕೊಂದು ಆಧ್ಯಾತ್ಮದ ಮಹತ್ವವಿದೆ. ಭಗವಂತನ ನಾಮಸ್ಮರಣೆಯು ನಿಮ್ಮೊಂದಿಗಿದ್ದಾಗ, ನೀವು ಸಮಾಜದಲ್ಲಿ ಮುಳುಗುವುದಿಲ್ಲ, ದೈನ್ಯತೆಯ ಸಾಗರದಲ್ಲೂ ತೇಲುವಿರಿ; ದೈನ್ಯತೆಯ ಪ್ರಪಂಚದಲ್ಲಿ ಮುಳುಗುವುದಿಲ್ಲ.
ಎಲ್ಲಾ ವಾನರರು ಶ್ರೀರಾಮ ಎಂದು ಬರೆಯುತ್ತಿದ್ದರು, ಅವರೆಲ್ಲರ ಕಲ್ಲುಗಳು ತೇಲುತ್ತಿದ್ದವು.

ಇದನ್ನು ಕಂಡು ರಾಮನು ಬೆರಗಾದನು. ‘ಇದೇನು? ಈ ಕಲ್ಲುಗಳು ತೇಲುತ್ತಿವೆಯಲ್ಲ!’ ಎಂದು ಯೋಚಿಸಿದನು. ಇದನ್ನು ತಾನೇ ಸ್ವತಃ ಪ್ರಯತ್ನಿಸಬೇಕೆಂದುಕೊಂಡು ಒಂದು ಕಲ್ಲು ತೆಗೆದುಕೊಂಡು ಶ್ರೀರಾಮ ನಾಮ ಬರೆದು ನೀರಿಗೆ ಬಿಟ್ಟನು. ಆ ಕಲ್ಲು ಮುಳುಗಿತು! ಶ್ರೀರಾಮನಿಗೆ ಆಶ್ಚರ್ಯವಾಯಿತು.

ಇವೆಲ್ಲವನ್ನೂ ಕಪಿಯೊಂದು ಗಮನಿಸುತ್ತಿತ್ತು. ಶ್ರೀರಾಮನು ಯಾರೂ ಗಮನಿಸದೇ ಇರುವಂತಹ ಸ್ಥಳದಲ್ಲಿ ಕೂರಬೇಕೆಂದು ಆ ಸ್ಥಳವನ್ನು ಆಯ್ದುಕೊಂಡಿದ್ದನು (ನಾವು ಎಂದಾದರೂ ಯಾರೂ ನಮ್ಮನ್ನು ನೋಡುತ್ತಿಲ್ಲವೆಂದುಕೊಂಡಾಗಲೇ ಯಾರೋ ನಮ್ಮನ್ನು ಗಮನಿಸುತ್ತಿರುತ್ತಾರೆ). ಹೀಗೆ ಗಮನಿಸುತ್ತಿದ್ದ ಕಪಿಯು ನಕ್ಕುಬಿಟ್ಟಿತು. ಇದರಿಂದ ರಾಮನಿಗೆ ಮುಜುಗರವಾಯಿತು.

ಅದು ರಾಮನಿಗೆ ಹೀಗೆ ಹೇಳಿತು, ‘ನಿನ್ನ ಕೈಗಳಿಂದ ಎಸೆದ ಕಲ್ಲು ಹೇಗೆ ತಾನೆ ತೇಲಲು ಸಾಧ್ಯ? ಅದು ಮುಳುಗಲೇಬೇಕು!’
ಭಗವಂತನಿಗಿಂತ ಭಕ್ತರೇ ಹೆಚ್ಚು ಬಲಶಾಲಿಗಳೆಂದು ಈ ಕತೆಯಿಂದ ತಿಳಿಯುತ್ತದೆ; ದೇವರಿಗಿಂತ ಭಕ್ತರೇ ಹೆಚ್ಚು ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವೆಂದು ತಿಳಿಯುತ್ತದೆ.

 ಈ ಘಟನೆಯು ನಡೆಯುತ್ತಿರುವಾಗ ಒಂದು ಚಿಕ್ಕ ಅಳಿಲೂ ಸಹ ಓಡಾಡುತ್ತಿತ್ತು. ಅದು ಚಿಕ್ಕ ಚಿಕ್ಕ ಕಲ್ಲುಗಳನ್ನೆತ್ತಿಕೊಂಡು ನೀರಿಗೆ ಹಾಕುತ್ತಿತ್ತು. ಕೆಲವರು ಅಳಿಲನ್ನು ನೋಡಿ ನಕ್ಕರು, ‘ಒಂದು ಅಳಿಲು ಹೇಗೆ ತಾನೆ ಯೋಗದಾನ ನೀಡಬಲ್ಲುದು?’
ಅಳಿಲೆಂದಿತು, ‘ನನ್ನ ಸಂತೋಷಕ್ಕಾಗಿ ಯೋಗದಾನವನ್ನು ನೀಡುತ್ತೇನೆ. ರಾಮನು ನಡೆಸುತ್ತಿರುವ ಈ ಬೃಹತ್ ಕಾರ್ಯದಲ್ಲಿ ನಾನೂ ಸಹ ಒಂದು ಭಾಗವಾಗಿದ್ದೇನೆ, ಇದರ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ.’

ಇಂದಿಗೂ ಭಾರತದಲ್ಲಿ ‘ಅಳಿಲು ಸೇವೆ’ ಎನ್ನುತ್ತೇವೆ; ಅದು ನಮ್ರತೆಯ ಸಂಕೇತ. ನಾವೊಂದು ಚಿಕ್ಕ ಪಾತ್ರ ವಹಿಸಿದರೂ ಬೃಹತ್ ಕೊಡುಗೆಯಾಗುವುದಿಲ್ಲ; ಆದರೆ ಒಂದು ಬೃಹತ್ ಕಾರ್ಯದಲ್ಲಿ ಭಾಗಿಯಾದರೆ, ‘ನಾನೂ ಏನೋ ಮಾಡಿದ್ದೇನೆ’ ಎನ್ನುವ ಒಂದು ಆಂತರಿಕ ತೃಪ್ತಿ ಸಿಗುತ್ತದೆ.

ಈ ಕತೆಯಿಂದ ತಿಳಿಯುವುದೇನೆಂದರೆ ಸ್ವತಃ ರಾಮನಿಗಿಂತ ಅವನ ಭಕ್ತರೇ ಹೆಚ್ಚು ಬಲಶಾಲಿಗಳು.

ಇದರ ಅರ್ಥ ನಿಮ್ಮ ಹೃದಯವು ಪ್ರೀತಿ ಮತ್ತು ಅನುಕಂಪದಿಂದ ತುಂಬಿದ್ದರೆ, ನೀವು ಬಹಳ ಬಲಶಾಲಿಗಳು. ಎಂದೂ ನಿಮ್ಮನ್ನು ನೀವೇ ಕಡಿಮೆಯೆಂದು ಪರಿಗಣಿಸಬೇಡಿ.

ಕಳೆದ ಅಕ್ಟೋಬರಿನಲ್ಲಿ ಇಂತಹುದೇ ಒಂದು ಘಟನೆ ಆರ್ಟ್ ಆಫ್ ಲಿವಿಂಗ್‍ನಲ್ಲಿ ನಡೆಯಿತು. ಸೆಲ್ ಫ಼ೋನ್ ಕತೆ ನಿಮಗೆ ಗೊತ್ತೇ?

ನಾನೊಂದು ಹಳ್ಳಿಗೆ ಹೋಗಬೇಕಾಗಿತ್ತು. ಅಲ್ಲಿ ಬಹಳ ವರ್ಷಗಳಿಂದ ೨೦೦೦ ಯುವಕರು ಕೆಲಸ ಮಾಡುತ್ತಿದ್ದರು. ಅಲ್ಲಿಗೆ ತೆರಳುವಾಗ ನನ್ನೊಂದಿಗೆ ಬರುತ್ತಿದ್ದ ವ್ಯಕ್ತಿಗೆ ಮೂರು ಸೆಲ್ ಫ಼ೋನ್ ತೆಗೆದುಕೊಂಡು ಬರಲು ಹೇಳಿದೆ.
ಅಲ್ಲಿಗೆ ಹೋದ ಮೇಲೆ  ‘ಇಲ್ಲಿ ಎಷ್ಟು ಮಂದಿ ಸೆಲ್ ಫ಼ೋನ್ ಕಳೆದುಕೊಂಡಿದ್ದೀರ?’

ಮೂವರು ಮಾತ್ರ ಎದ್ದು ನಿಂತರು. ಅವರು ಕೆಲಸ ಮಾಡುತ್ತಿದ್ದ ಹಳ್ಳಿಯಲ್ಲಿ ಆ ಸೆಲ್ ಫ಼ೋನ್ ತುಂಬಾ ಬೆಲೆ ಬಾಳುವಂತಹುದಾಗಿತ್ತು.  ಒಂದೆರಡು ತಿಂಗಳ ಆದಾಯದಷ್ಟಿರಬಹುದು. ಆದ್ದರಿಂದ ಅವರಿಗೆ ಬಹಳ ದುಃಖವಾಗಿತ್ತು. ಆದ್ದರಿಂದ ನಾನು ಆ ಊರು ಜನರಿಗೆ ಸೆಲ್ ಫ಼ೋನ್ಗಳನ್ನು ನೀಡಿದೆ. ನಿಜವಾಗಲೂ, ಇದು ಕಾಕತಾಳೀಯ!

ನಾನು ಹೀಗೆ ಮಾಡುತ್ತಿರುವಾಗ, ಒಂದು ಗುಂಪಿನಿಂದ ಹುಡುಗನೊಬ್ಬ ಬಂದು ತನ್ನ ಕತೆಯನ್ನು ಹಂಚಿಕೊಂಡ. ಅವನು ಅಡ್ವಾನ್ಸ್ ಕೋರ್ಸ್ ನಲ್ಲಿದ್ದಾಗ, ಮನೆಯಲ್ಲಿದ್ದ ಹೆಂಡತಿಯೊಂದಿಗೆ ಅವನು ಮಾತನಾಡಬೇಕಿತ್ತು. ಅವನ ಫ಼ೋನಿನಲ್ಲಿ ಬ್ಯಾಟರಿ ಇರಲಿಲ್ಲ ಮತ್ತು ಚಾರ್ಜರ್ ತರಲು ಮರೆತಿದ್ದ. ಅದಕ್ಕಾಗಿ ಅವನು ತನ್ನ ಫ಼ೋನ್ ಅನ್ನು ನನ್ನ ಫ಼ೋಟೋ ಮುಂದಿಟ್ಟು, ‘ಗುರೂಜೀ, ನನ್ನ ಫ಼ೋನ್ ಚಾರ್ಜ್ ಆಗಲಿ’ ಎಂದು ಕೇಳಿಕೊಂಡನು.

ಮರುದಿನ ಬೆಳಿಗ್ಗೆ ಅವನೆದ್ದು ನೋಡಿದಾಗ ಅವನ ಫ಼ೋನ್ ಚಾರ್ಜ್ ಆಗಿತ್ತು.

ಆ ಹುಡುಗ ಅವನ ಫ಼ೋನ್ ತೋರಿಸಿ ಹೇಳಿದ, ‘ನೋಡಿ, ಕಳೆದ ಒಂದೂವರೆ ವರ್ಷದಿಂದ ನಾನು ಚಾರ್ಜರ್ ಅನ್ನು ಬಿಸಾಕಿ, ಫ಼ೋನ್ ಅನ್ನು ನಿಮ್ಮ ಭಾವಚಿತ್ರದ ಮುಂದಿಡುತ್ತಿದ್ದೇನೆ, ಅದು ಚಾರ್ಜ್ ಆಗುತ್ತೆ.’

ಚಾರ್ಜರ್ ಅನ್ನು ಬಿಸಾಕಿದ್ದಾನೆ!

ನಾನು ನುಡಿದೆ, ‘ಇದೊಂದು ಅಚ್ಚರಿಯ ಸಂಗತಿ. ನನ್ನ ಫ಼ೋನಿಗೂ ಚಾರ್ಜರ್ ಬೇಕು! ನನ್ನ ಫ಼ೋನ್ ಅನ್ನು ನನ್ನ ಕೈಯಲ್ಲಿಟ್ಟು ಅಥವಾ ಭಾವಚಿತ್ರದ ಮುಂದಿಟ್ಟು ಚಾರ್ಜ್ ಮಾಡಲು ಸಾಧ್ಯವಿಲ್ಲ!’

ಆ ಮುಗ್ಧ ಹಳ್ಳಿಯ ಕೆಲಸಗಾರನು ಒಂದೂವರೆ ವರ್ಷಗಳ ಹಿಂದೆ  ಚಾರ್ಜರ್ ಬಿಸಾಕಿದ್ದಾನೆ; ಪೂರ್ತಿ ಚಾರ್ಜ್ ಆಗಿರುವ ತನ್ನ ಫ಼ೋನ್ ಎಲ್ಲರಿಗೂ ತೋರಿಸಿದನು.

ಇದೊಂದು ರೋಚಕವಾದ ಕತೆಯೆಂದೆನಿಸಿತು. ಬೆಂಗಳೂರು ಆಶ್ರಮದಲ್ಲಿ ಸುಮಾರು 150 ವಿದೇಶೀಯರೊಂದಿಗೆ ಇದನ್ನು ಹಂಚಿಕೊಂಡೆವು. ರಷ್ಯಾ ಮತ್ತು ಯೂರೋಪಿನಿಂದ ಬಂದಿದ್ದರು.

ಬಹಳ ಉತ್ಸುಕತೆಯಿಂದ ಹೇಳಿದೆವು, ‘ನೋಡಿ, ಭಕ್ತನ ಶಕ್ತಿ ಎಷ್ಟಿದೆಯೆಂದು. ಪ್ರೀತಿ ಎಷ್ಟಿದೆಯೆಂದು’ ಅವರು ನಮಗೂ ಈ ರೀತಿಯ ಅನುಭವವಾಗಿದೆ, ಇದೇನು ಮಹಾ! ಸ್ಕ್ಯಾಂಡಿನೇವಿಯಾ, ಸ್ವೀಡನ್, ರಷ್ಯಾದಿಂದ ಬಂದಿದ್ದವರೆಲ್ಲರೂ, ‘ನಮಗೂ ಇಂತಹ ಅನುಭವವಾಗಿದೆ!’ ಎಂದರು.

ಚಮತ್ಕಾರಗಳು ಹೇರಳವಾಗಿವೆ! ಎಲ್ಲರಿಗೂ ಯಾವುದಾದರೊಂದು ಚಮತ್ಕಾರವಾಗಿರಲೇಬೇಕೆಂದೆನಿಸುತ್ತದೆ. ಅದನ್ನು ಹುಡುಕುವುದಿಲ್ಲ, ಅವು ತಂತಾನೆ ನಡೆಯುತ್ತವೆ.

ಇನ್ನೊಂದು ಘಟನೆಯನ್ನು ನಿಮಗೆ ತಿಳಿಸೋಣ.

ಮಹಾರಾಷ್ಟ್ರದಲ್ಲಿ ಮೂಢನಂಬಿಕೆಗಳನ್ನು ನಿವಾರಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಗೊಬ್ಬ ಅಧ್ಯಕ್ಷನಿದ್ದಾನೆ, ಅವನು ಹಳ್ಳಿಯಿಂದ ಹಳ್ಳಿಗಳಿಗೆ ಹೋಗಿ ‘ಎಲ್ಲಾ ಸಾಧುಗಳು, ಗುರುಗಳು ವಂಚಕರು, ಅವರನ್ನು ನಂಬಬೇಡಿ’ ಎಂದು ಪ್ರಚಾರ ಮಾಡುತ್ತಾನೆ.

ಹಳ್ಳಿಯ ಹುಡುಗನೊಬ್ಬ ಚಾರ್ಜರ್ ಇಲ್ಲದೇ ತನ್ನ ಫ಼ೋನ್ ಚಾರ್ಜ್ ಮಾಡಿದ ಘಟನೆಯನ್ನು ತಿಳಿಸಿದ ಕಾರ್ಯಕ್ರಮದಲ್ಲಿ ಈ ಸಮಿತಿಯ ಅಧ್ಯಕ್ಷನ ಮಗ ಉಪಸ್ಥಿತನಿದ್ದನು.

ಹೀಗೆ ಕಳೆದ ಫೆಬ್ರವರಿಯಂದು ಸಮಿತಿಯ ಅಧ್ಯಕ್ಷನು ತನ್ನ ಕ್ಯಾಲ್‍ಕ್ಯುಲೇಟರ್ ಕೆಟ್ಟು ಹೋದ ಕಾರಣ ಗೊಂದಲಕ್ಕೊಳಗಾಗಿದ್ದನು; ಅದರ ಬೆಲೆ ೩೦೦೦೦ ರೂಗಳಾಗಿತ್ತು. ಅವನ ಮಗ ‘ಅಪ್ಪ, ನೀನೇಕೆ ಅದನ್ನು ಗುರೂಜೀಯವರ ಚಿತ್ರದ ಮುಂದಿಡಬಾರದು? ನಂತರ ಪ್ರಾರ್ಥಿಸೋಣ’ ಎಂದನು.

ಎರಡು ದಿನಗಳವರೆಗೆ ಅದನ್ನು ಚಿತ್ರದ ಮುಂದಿಟ್ಟಿದ್ದನು. ಏನೂ ಆಗಲಿಲ್ಲ. ತಂದೆಯು ಹೇಳಿದನು, ‘ನೋಡು, ನಾನು ಹೇಳಿರಲಿಲ್ಲವೇ! ಇವೆಲ್ಲ ಅಸಂಬದ್ಧವಾದುದು.’

ಆದರೂ ಕೂಡ, ಮಗನು, ‘ಅಪ್ಪ, ಅದು ಹಾಗಲ್ಲ. ನೀವದನ್ನು ಗುರೂಜೀಯವರ ಚಿತ್ರದ ಮುಂದಿಟ್ಟು ಅದಕ್ಕಾಗಿ ಪ್ರಾರ್ಥಿಸಬೇಕು. ಕೇಳಿ, ಪಡೆಯಿರಿ. ಕೇಳಿ! ವಿಶ್ವಾಸದೊಂದಿಗೆ ನೀವು ಕೇಳಲಿಲ್ಲ’ ಎಂದನು.

ಅಪ್ಪನು ಹಾಗೆಯೇ ಆಗಲಿ ಎಂದನು.

ಮಗನು ಹೇಳಿದಂತೆ ಕೇಳಿಕೊಂಡನು. ಮರುದಿನ ಬೆಳಿಗ್ಗೆ ಆ ಕ್ಯಾಲ್‍ಕ್ಯುಲೇಟರ್ ಸರಿಯಾಗಿ ಕೆಲಸಮಾಡುತ್ತಿತ್ತು!
ಈಗ ಅಪ್ಪನು ಹೇಳಿದನು, ‘ನಾನೇನು ಮಾಡಲಿ ಈಗ! ನಾನು ಈ ಸಮಿತಿಯ ಅಧ್ಯಕ್ಷ ಮತ್ತು ಇಂತಹ ಘಟನೆ ನನ್ನೊಂದಿಗೆ ನಡೆಯಿತು!. ಅವನಿಗೆ ತುಂಬಾ ಆಶ್ಚರ್ಯವಾಗಿತ್ತು!

ಆದ್ದರಿಂದ ಜೀವನವನ್ನು ಲಘುವಾಗಿ ತೆಗೆದುಕೊಳ್ಳಬೇಡಿ!

ನೀವು ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ಕ್ಷಣವೂ ಚಮತ್ಕಾರ ನಡೆಯುತ್ತಿರುತ್ತದೆ; ಪ್ರತಿ ಕ್ಷಣವೂ ಅನುಗ್ರಹವಿರುತ್ತದೆ; ಮತ್ತು ಹೊಸದೇನೋ ಇರುತ್ತದೆ.

ಆ ಕ್ಷಣದಲ್ಲಿ ಯಾವುದೋ ಚೆನ್ನಾಗಿಲ್ಲವೆಂದೆನಿಸಿದರೂ, ದೀರ್ಘ ಕಾಲದಲ್ಲಿ, ಏನೋ ಒಳ್ಳೆಯದು ಸಂಭವಿಸುತ್ತದೆ.

ವಸ್ತುನಿಷ್ಠೆಯಲ್ಲೇ ಸಿಕ್ಕಿಹಾಕಿಕೊಳ್ಳಬೇಕಾಗಿಲ್ಲ. ವಸ್ತುನಿಷ್ಠ ನಿಯಮಗಳಿವೆ, ಭೌತಿಕ ನಿಯಮಗಳಿವೆ, ಆದರೆ ಭೌತಿಕ ನಿಯಮಗಳಿಗಿಂತ ಉನ್ನತವಾದುದು ಯಾವುದೋ ಇದೆ. ಕಣ್ಣಿಗೆ ಗೋಚರಿಸುವ ಭೌತಿಕ ಸೃಷ್ಟಿಯ ನಾಮರೂಪಗಳಿಗಿಂತ ಉನ್ನತವಾದುದಿದೆ. ಪ್ರಜ್ಞೆಯನ್ನು ಅರಿಯುವುದು; ವಸ್ತುಗಿಂತ ಮನಸ್ಸು, ಮತ್ತು ಭೌತಿಕ ಸತ್ಯತೆಗಿಂತ ಪ್ರಜ್ಞೆ, ಇವುಗಳನ್ನು ಅರಿಯಬೇಕಾಗಿದೆ. ಆದ್ದರಿಂದ ನಿಮ್ಮ ಪ್ರೀತಿ, ವಿಶ್ವಾಸ ಮತ್ತು ನಿಮ್ಮ ಶಕ್ತಿಯನ್ನು ಕಡಿಮೆಯೆಂದು ಪರಿಗಣಿಸಬೇಡಿ.. ನಾವೇನು ಮಾಡಬೇಕೆಂದರೆ ನಮ್ಮ ಹೃದಯವನ್ನು ಶುದ್ಧವಾಗಿಟ್ಟುಕೊಳ್ಳಬೇಕು.

ಗುರುವಾರ, ಏಪ್ರಿಲ್ 18, 2013

ಯೋಗ ವಿಜ್ಞಾನದ ಒಂದು ವಿಚಾರ ಸಂಕಿರಣ


ಎಪ್ರಿಲ್ ೧೮, ೨೦೧೩
ಕಾಲ್ಗರಿ, ಕೆನಡಾ

ಶ್ರೀ ಶ್ರೀಯವರು ೨೦೦ಕ್ಕೂ ಹೆಚ್ಚು ವೈದ್ಯಕೀಯ ವೃತ್ತಿಪರರನ್ನು, ಕಾಲ್ಗರಿಯ ವೈದ್ಯಕೀಯ ಮಂಡಲದ ವಿಚಾರ ಸಂಕಿರಣದ ಮೂಲಕ, ಆರೋಗ್ಯ ವಿಜ್ಞಾನಗಳ ಕೇಂದ್ರದ ಲಿಬಿನ್ ಥಿಯೇಟರಿನಲ್ಲಿ ಸಂಬೋಧಿಸಿ ಮಾತನಾಡಿದರು. 

ಹಾಜರಾಗಿದ್ದ ಆರೋಗ್ಯ ಪೂರೈಕೆದಾರರು ವಿವಿಧ ರೀತಿಯ ಆರೋಗ್ಯ ವೃತ್ತಿಗಳವರಾಗಿದ್ದರು; ವೈದ್ಯರು, ದಾದಿಗಳು, ಸಾಮಾಜಿಕ ಕಾರ್ಯಕರ್ತರು, ಮನೋವಿಜ್ಞಾನಿಗಳು, ಆಂತರಿಕ ಔಷಧ ತಜ್ಞರು, ಪ್ರಕೃತಿ ಚಿಕಿತ್ಸೆ, ಹೋಮಿಯೋಪತಿ, ಹಾಗೆಯೇ ಪರಿಣತರೊಂದಿಗೆ, ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಮತ್ತು ನಿವಾಸಿಗಳೊಂದಿಗೆ ಕೆಲಸ ಮಾಡುವ ಕೆಲವರು. ಶ್ರೀ ಶ್ರೀಯವರು ಹೇಳಿದುದು ಈ ಕೆಳಗಿನಂತಿದೆ.

ನೀವು ಧ್ಯಾನ ಮತ್ತು ಪ್ರಾಣಾಯಾಮಗಳ ಬಗ್ಗೆ ಬಹಳಷ್ಟು ಕೇಳಿರಬೇಕು. ಈ ಪುರಾತನ ವಿಜ್ಞಾನವು ಭಾರತದಲ್ಲಿ ಕಳೆದ ೫,೦೦೦ ವರ್ಷಗಳಿಂದ ೮,೦೦೦ ವರ್ಷಗಳ ವರೆಗೆ ಇತ್ತೆಂಬುದು ನಿಮಗೆ ಗೊತ್ತಿದೆಯಾ? ಈ ವಿಜ್ಞಾನವು ಆಯುರ್ವೇದದೊಂದಿಗೆ ಸೇರಿಕೊಂಡು, ಹಲವಾರು ಪೀಳಿಗೆಗಳ ಜನರ ಆರೋಗ್ಯ ಮತ್ತು ಕ್ಷೇಮಗಳನ್ನು ನೋಡಿಕೊಳ್ಳುವುದಕ್ಕೆ ಕಾರಣವಾಗಿದೆ.

ಈ ಪುರಾತನ ವಿಜ್ಞಾನದಿಂದ ಲಕ್ಷಾಂತರ ಜನರು ಲಾಭ ಪಡೆದಿದ್ದಾರೆ, ಆದರೆ ದುರದೃಷ್ಟವಶಾತ್, ಅಲ್ಲಿ ಯಾವುದೇ ವೈಜ್ಞಾನಿಕ ದಾಖಲಾತಿಗಳು ಇರಲಿಲ್ಲ. ಹಾಗೆ, ನಾವು ಈ ದಿಕ್ಕಿನಲ್ಲಿ ಒಂದು ಹೆಜ್ಜೆಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ. ನಮ್ಮ ಸ್ಥಾಪನೆ, ಆರ್ಟ್ ಆಫ್ ಲಿವಿಂಗ್, ಜನರಿಗೆ ಅನುಭವವಾಗುತ್ತಿರುವ ಲಾಭಗಳನ್ನು ದಾಖಲಿಸುವಲ್ಲಿ ಒಂದು ಚಿಕ್ಕ ಪ್ರಯತ್ನವನ್ನು ಮಾಡುತ್ತಿದೆ. ಈಗಿನ ವರೆಗೆ, ಏನು ಕಳೆದುಹೋಗಿತ್ತೆಂದರೆ, ಈ ದಾಖಲಾತಿ. ವಾಸ್ತವವಾಗಿ, ಭಾರತ ಸರಕಾರವು ಈಗ ಒಂದು ಆಯುರ್ವೇದ ಸಂಶೋಧನಾ ಶಾಖೆಯನ್ನು ಕೂಡಾ ಕಲೆಹಾಕುತ್ತಿದೆ.

ನಾವು ಆಯುರ್ವೇದವನ್ನು ಆಧರಿಸಿದ ಒಂದು ವೈದ್ಯಕೀಯ ಕಾಲೇಜನ್ನು ಹೊಂದಿದ್ದೇವೆ. ಅದು ಐದು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಾ ಇದೆ ಮತ್ತು ನಾವು ಬೆಂಗಳೂರಿನ ನಮ್ಮ ಕ್ಯಾಂಪಸ್ಸಿನಲ್ಲಿ (ಪರಿಸರದಲ್ಲಿ) ಒಂದು ಆಯುರ್ವೇದ ಆಸ್ಪತ್ರೆಯನ್ನು ಕೂಡಾ ಪ್ರಾರಂಭಿಸಿದ್ದೇವೆ. ಅದು ಏಷಿಯಾದ ಅತ್ಯುತ್ತಮ ಆಯುರ್ವೇದ ಆಸ್ಪತ್ರೆಗಳಲ್ಲಿ ಒಂದಾಗಿದೆ. ಆಸ್ಪತ್ರೆಯನ್ನು ಮತ್ತು ಹಾಗೆಯೇ ನಮ್ಮ ಆಯುರ್ವೇದ ವೈದ್ಯಕೀಯ ಕಾಲೇಜನ್ನು ಭೇಟಿ ಮಾಡಲು ನಿಮ್ಮೆಲ್ಲರನ್ನೂ ನಾನು ಆಮಂತ್ರಿಸಬಯಸುತ್ತೇನೆ.

ನಮ್ಮ ಕಾಲೇಜಿನಲ್ಲಿ ಅನೇಕ ಬೇರೆ ಬೇರೆ ಸಂಶೋಧನಾ ಅಧ್ಯಯನಗಳು ನಡೆಯುತ್ತಿವೆ. ನಾವು, ಉಬ್ಬಿರುವ ರಕ್ತನಾಳಗಳು (ವೆರಿಕೋಸ್ ವೈನ್ಸ್) ಮತ್ತು ಮೂಲವ್ಯಾಧಿಗಳಿಗೆ ಹತ್ತಿರ ಹತ್ತಿರ ೧೦೦% ಯಶಸ್ಸಿನ ಪ್ರಮಾಣದಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಪುರಾತನವಾದ ಶರ ತಂತ್ರಗಳನ್ನು ಬಳಸಿ ಮಾಡಲಾದ ಶಸ್ತ್ರಚಿಕಿತ್ಸೆಯಿಂದ, ಕೇವಲ ೦.೧% ಜನರಿಗೆ ಮಾತ್ರ ಮೂಲವ್ಯಾಧಿ ಹಿಂದಿರುಗಿದೆಯಷ್ಟೆ. ಅಲೋಪತಿ ಮತ್ತು ಆಯುರ್ವೇದ ಔಷಧ ಸಂಶೋಧಕರು ಹಾಗೂ ವೃತ್ತಿಗಾರರ ನಡುವೆ, ವಿಚಾರ ವಿನಿಮಯ ಮಾಡುವುದಕ್ಕಾಗಿ ನಾವೊಂದು ಸಂಭಾಷಣೆ ನಡೆಸಲು ಸಾಧ್ಯವಾದರೆ ಅದು ಒಳ್ಳೆಯದು. ಅದು ಪ್ರಪಂಚದ ಜನತೆಗೆ ಲಾಭದಾಯಕವಾಗಬಹುದೆಂದು ನನಗನ್ನಿಸುತ್ತದೆ.

 ಧ್ಯಾನ ಮತ್ತು ಪ್ರಾಣಾಯಾಮದ ಕಡೆಗೆ ಹಿಂದಿರುಗೋಣ, ನೀವು ಈಗಾಗಲೇ ಸಂಶೋಧನಾ ನಿಪುಣರಿಂದ ಬಹಳಷ್ಟು ಕೇಳಿರುವಿರಿ. ನಾನೊಬ್ಬ ಸಾಧಾರಣ ವ್ಯಕ್ತಿ. ಆದರೆ ನಾನು ಹೇಳಲು ಬಯಸುವ ಒಂದು ವಿಷಯವೆಂದರೆ, ನೀವೊಂದು ಶಿಶುವನ್ನು ಗಮನಿಸಿದರೆ, ಅದು ಹುಟ್ಟಿದ ಸಮಯದಿಂದ ಮೂರು ವರ್ಷ ವಯಸ್ಸಿನ ವರೆಗೆ, ಅದು ಎಲ್ಲಾ ಯೋಗದ ಭಂಗಿಗಳನ್ನು ಮಾಡುತ್ತದೆ. ಇದನ್ನು ಗುರುತಿಸಲು ನಿಮ್ಮಲ್ಲಿ ಗಮನಿಸುವ ಗುಣವಿರಬೇಕಷ್ಟೆ, ಒಬ್ಬ ಯೋಗ ಹೇಳಿಕೊಡುವವನಲ್ಲ.

ಒಂದು ಶಿಶುವು ಜನಿಸುವಾಗ, ಅದೊಂದು ನಿರ್ದಿಷ್ಟ ಮುದ್ರೆಯಲ್ಲಿ ಹುಟ್ಟುತ್ತದೆ. ಯೋಗ ಪಠ್ಯಗಳ ವಿಜ್ಞಾನದಲ್ಲಿ ಅದು ಆದಿ ಮುದ್ರೆ (ಹೆಬ್ಬೆರಳು ಅಂಗೈಯೊಳಗೆ ಮತ್ತು ಇತರ ಬೆರಳುಗಳು ಒಂದು ಮುಷ್ಠಿಯಂತೆ ಸುತ್ತಿಕೊಂಡು) ಎಂದು ಕರೆಯಲ್ಪಡುತ್ತದೆ.
ಶಿಶುಗಳು ನಿದ್ರಿಸುವಾಗ, ನೀವು ಗಮನಿಸಿದರೆ, ಅವರು ತಮ್ಮ ಕೈಗಳನ್ನು ಚಿನ್ ಮುದ್ರೆಯಲ್ಲಿ (ಹೆಬ್ಬೆರಳು ಮತ್ತು ತೋರುಬೆರಳುಗಳ ತುದಿಗಳು ಪರಸ್ಪರ ತಾಗಿಕೊಂಡು ಹಾಗೂ ಇತರ ಬೆರಳುಗಳು ನೀಡಿಕೊಂಡು) ಮತ್ತು ಚಿನ್ಮಯಿ ಮುದ್ರೆಯಲ್ಲಿ (ಹೆಬ್ಬೆರಳು ಮತ್ತು ತೋರುಬೆರಳುಗಳ ತುದಿಗಳು ಪರಸ್ಪರ ತಾಗಿಕೊಂಡು ಹಾಗೂ ಇತರ ಬೆರಳುಗಳು ಒಳಕ್ಕೆ ಮಡಚಿ ಅಂಗೈಯನ್ನು ತಾಗಿಕೊಂಡು) ಇಟ್ಟುಕೊಂಡು ನಿದ್ರಿಸುತ್ತಾರೆ.

ತಮ್ಮ ಹೆಬ್ಬೆರಳನ್ನು ಚೀಪುವಾಗ ಅವರು ಮೇರುದಂಡ ಮುದ್ರೆಯನ್ನು (ಹೆಬ್ಬೆರಳು ಮೇಲಕ್ಕೆ ಮುಖ ಮಾಡಿಕೊಂಡು ಮತ್ತು ಇತರ ಬೆರಳುಗಳು ಒಳಕ್ಕೆ ಮಡಚಿಕೊಂಡು) ಕೂಡಾ ಮಾಡುತ್ತಾರೆ.

ಒಂದು ಮುದ್ರೆಯು (ಕೈಯ ನಿಲುವು) ಮೆದುಳಿನ ನಿರ್ದಿಷ್ಟ ಭಾಗಗಳನ್ನು ಮತ್ತು ಶರೀರದ ನಿರ್ದಿಷ್ಟ ಭಾಗಗಳನ್ನು ಉತ್ತೇಜಿಸುತ್ತದೆ. ಹೀಗೆ ಶಿಶುಗಳು ಈ ಎಲ್ಲಾ ವಿಭಿನ್ನ ಮುದ್ರೆಗಳನ್ನು ಮಾಡುತ್ತವೆ.

ನೀವು ಗಮನಿಸಿದರೆ, ಯಾವಾಗಲೆಲ್ಲಾ ಒಬ್ಬರಿಗೆ ಛಳಿಯಾಗುವುದೋ, ಮೊದಲನೆಯ ಸ್ವಾಭಾವಿಕ ಪ್ರವೃತ್ತಿಯೆಂದರೆ, ಹೆಬ್ಬೆರಳುಗಳನ್ನು ಬೆಚ್ಚಗಾಗಿರಿಸಲು ಕಂಕುಳುಗಳ ಅಡಿಯಲ್ಲಿ ಅಡಗಿಸುವುದು. ನಿಜವಾಗಿ, ಯೋಗದಲ್ಲಿ ಹೆಬ್ಬೆರಳುಗಳು ಬಹಳ ಪ್ರಧಾನವಾದವು. ನೀವು ಹೆಬ್ಬೆರಳನ್ನು ಬೆಚ್ಚಗಿರಿಸಿದರೆ, ಸಂಪೂರ್ಣ ಶರೀರವು ಬೆಚ್ಚಗಾಗಿರುತ್ತದೆ ಎಂದು ಹೇಳಲಾಗುತ್ತದೆ.
ಯೋಗದಲ್ಲಿ, ನಮ್ಮ ಬೆರಳುಗಳ ತುದಿಗಳು ಚೈತನ್ಯ ಬಿಂದುಗಳಾಗಿವೆ ಎಂದು ಕೂಡಾ ಹೇಳಲಾಗುತ್ತದೆ. ಅದೇ ರೀತಿಯಲ್ಲಿ ನಮ್ಮ ಕಿವಿಗಳು ಕೂಡಾ ಶಕ್ತಿ ಬಿಂದುಗಳಾಗಿವೆ. ಆಯುರ್ವೇದದಲ್ಲಿ ಇವುಗಳು ಮರ್ಮ ಬಿಂದುಗಳು ಎಂದು ಕರೆಯಲ್ಪಡುತ್ತವೆ; ಶರೀರದಲ್ಲಿನ ಶಕ್ತಿಯ ರಹಸ್ಯ ಬಿಂದುಗಳು. ಈ ಬಿಂದುಗಳು ಉತ್ತೇಜಿಸಲ್ಪಟ್ಟಾಗ, ಅವುಗಳು ವ್ಯವಸ್ಥೆಗೆ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಇದು ಆಯುರ್ವೇದದ ಪದ್ಧತಿಯಾಗಿದೆ.

ಮಕ್ಕಳನ್ನು ಗಮನಿಸುವುದರ ಕಡೆಗೆ ತಿರುಗಿ ಬರೋಣ. ನೀವು ಗಮನಿಸಿದರೆ, ಅವರು ನಾಗ ಭಂಗಿಯನ್ನು ಕೂಡಾ ಮಾಡುತ್ತಾರೆ; ಅಲ್ಲಿ ಅವರು ತಮ್ಮ ಹೊಟ್ಟೆಯ ಮೇಲೆ ಮಲಗುತ್ತಾರೆ ಮತ್ತು ತಮ್ಮ ಕತ್ತನ್ನು ಮೇಲೆತ್ತುತ್ತಾರೆ. ನಂತರ ಅವರು ದೋಣಿಯ ಭಂಗಿಯನ್ನು ಮಾಡುತ್ತಾರೆ; ಅಲ್ಲಿ ಅವರು ತಮ್ಮ ಬೆನ್ನಿನ ಮೇಲೆ ಮಲಗುತ್ತಾರೆ ಹಾಗೂ ಅವರ ಕೈಗಳು ಮತ್ತು ಕಾಲುಗಳು ನೆಲವನ್ನು ತಾಗದೆ ಮೇಲಿರುತ್ತವೆ.

ಮೂರು ವರ್ಷ ವಯಸ್ಸಿನ ಮೊದಲು ಅವರು ಬಹುತೇಕ ಎಲ್ಲಾ ಯೋಗ ಭಂಗಿಗಳನ್ನು ಮಾಡುತ್ತಾರೆ. ನಾವು ಕೇವಲ ಅವರನ್ನು ಗಮನಿಸಬೇಕಷ್ಟೆ. ಹಾಗೆಯೇ, ಮಕ್ಕಳು ಉಸಿರಾಡುವ ರೀತಿಯು ಭಿನ್ನವಾಗಿದೆ; ಅವರು ಹೊಟ್ಟೆಯಿಂದ ಉಸಿರಾಡುತ್ತಾರೆ.

ಪ್ರತಿಯೊಂದು ಭಾವನೆಗೂ ಅನುಗುಣವಾದ ಒಂದು ಲಯ ಉಸಿರಾಟದಲ್ಲಿದೆ. ನೀವು ಸಂತೋಷವಾಗಿರುವಾಗ ನಿಮ್ಮ ಉಸಿರಾಟವು, ನೀವು ದುಃಖದಲ್ಲಿರುವಾಗಿನ ನಿಮ್ಮ ಉಸಿರಾಟಕ್ಕೆ ಹೋಲಿಸಿದರೆ ಒಂದು ಭಿನ್ನವಾದ ಲಯದಲ್ಲಿ ಚಲಿಸುವುದು ಎಂಬುದನ್ನು ನೀವು ಗಮನಿಸಿರಬಹುದು. ನಿಮ್ಮ ಉಸಿರಾಟದ ಉಷ್ಣತೆ, ವೇಗ, ಉದ್ದ ಮತ್ತು ಗಾತ್ರ ವ್ಯತ್ಯಸ್ತವಾಗಿರುತ್ತದೆ (ಇದನ್ನು ರಂಗಭೂಮಿಯ ತರಗತಿಗಳಲ್ಲಿ ಕೂಡಾ ಕಲಿಸಲಾಗುತ್ತದೆ; ಉಸಿರಾಟವನ್ನು ಬದಲಾಯಿಸುವುದರ ಮೂಲಕ ವಿವಿಧ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುವುದು ಎಂದು). ಹೀಗೆ, ನಮ್ಮ ಭಾವನೆಗಳು ಉಸಿರಾಟ ಮತ್ತು ಶರೀರದ ಕೆಲವು ಭಾಗಗಳೊಂದಿಗೆ ಸಂಬಂಧ ಹೊಂದಿವೆ.

ಆರ್ಟ್ ಆಫ್ ಲಿವಿಂಗಿನ ಉನ್ನತ ಧ್ಯಾನ ಶಿಬಿರಗಳಲ್ಲಿ ನಾವು ಚಕ್ರಗಳ; ಶರೀರದಲ್ಲಿರುವ ಶಕ್ತಿಯ ಕೇಂದ್ರಗಳ ಬಗ್ಗೆ ಕಲಿಸುತ್ತೇವೆ.
ಈ ಶಕ್ತಿಯ ಕೇಂದ್ರಗಳಿಗೆ ನಿರ್ದಿಷ್ಟ ಗುಣಗಳು ಮತ್ತು ನಿರ್ದಿಷ್ಟ ಲಯಗಳಿವೆ ಹಾಗೂ ಅವುಗಳು ನಿರ್ದಿಷ್ಟ ಅಂಶಗಳೊಂದಿಗೆ ಸಂಬಂಧ ಹೊಂದಿವೆ ಎಂದು ಯೋಗದಲ್ಲಿ ಹೇಳಲಾಗುತ್ತದೆ. ಆದುದರಿಂದ ಚಕ್ರಗಳೊಂದಿಗೆ ಕೆಲಸ ಮಾಡುವುದು ಬಹಳಷ್ಟು ಲಾಭವನ್ನು ತರುತ್ತದೆ.

ಇಡೀ ಶರೀರದಲ್ಲಿ ೧೦೮ ಚಕ್ರಗಳಿವೆ. ಇವುಗಳಲ್ಲಿ ೧೨ ಬಹಳ ಮುಖ್ಯವಾದವು ಮತ್ತು ಅವುಗಳಲ್ಲಿ ಏಳು ಇನ್ನೂ ಹೆಚ್ಚು ಮುಖ್ಯವಾದವು. ಉನ್ನತ ಧ್ಯಾನ ಶಿಬಿರದಲ್ಲಿ, ಈ ಕೇಂದ್ರಗಳ ಮೇಲೆ ನಮ್ಮ ಗಮನವನ್ನು ಇರಿಸುವುದರ ಮೂಲಕ, ನಾವು ಈ ಕೇಂದ್ರಗಳನ್ನು ಉತ್ತೇಜಿಸುತ್ತೇವೆ ಮತ್ತು ಅವುಗಳಿಗೆ ವಿಶ್ರಾಮ ನೀಡುತ್ತೇವೆ.

ಪ್ರಶ್ನೆ: ನಾವೆಲ್ಲರೂ ಯೋಗ ಮಾಡಬೇಕೆಂದೂ, ಏರೋಬಿಕ್ಸ್ ಅಥವಾ ಟ್ರೆಡ್ ಮಿಲ್ಲಿನ ಮೇಲೆ ನಡೆಯುವಂತಹ ಬೇರೆ ಯಾವುದೇ ರೀತಿಯ ವ್ಯಾಯಾಮವನ್ನಲ್ಲವೆಂದೂ ನೀವು ಹೇಳುತ್ತಿರುವಿರೇ?

ಶ್ರೀ ಶ್ರೀ ರವಿ ಶಂಕರ್: ನೀವು ಕೇವಲ ಯೋಗವನ್ನು ಮಾತ್ರ ಮಾಡಬೇಕೆಂದು ನಾನು ಹೇಳುತ್ತಿಲ್ಲ. ನಾನು ಹೇಳುತ್ತಿರುವುದೆಂದರೆ, ಯೋಗವು ಒಂದು ಸ್ವಾಭಾವಿಕ ಆಗುವಿಕೆಯಾಗಿದೆ. ಅದು ಸೃಷ್ಟಿಯಲ್ಲಿ ಪ್ರಪಂಚದ ಎಲ್ಲೆಡೆಯಲ್ಲಿ ಸಂಭವಿಸುತ್ತದೆ. ಮಕ್ಕಳಾಗಿ ನಾವೆಲ್ಲರೂ ಅದನ್ನು ಮಾಡಿದ್ದೇವೆ. ನೀವು ಬೆಳೆದಂತೆ, ನಿಮಗೆ ಏರೋಬಿಕ್ಸ್ ಬೇಕಾಗಬಹುದು; ಮತ್ತು ನೀವು ಅತಿಯಾಗಿ ತಿಂದರೆ, ಆ ಕ್ಯಾಲರಿಗಳನ್ನು ಸುಡಲು ನೀವೊಂದು ಟ್ರೆಡ್ ಮಿಲ್ಲಿನ ಮೇಲೆ ಏರಬೇಕಾಗಬಹುದು.

ಪ್ರಶ್ನೆ: ಧ್ಯಾನ ಮತ್ತು ದೇವರ ನಡುವಿರುವ ಸಂಬಂಧವೇನು? ನಾನು ಅದ್ವೈತ ತತ್ವಜ್ಞಾನದ ಬಗ್ಗೆ ಓದಿದ್ದೇನೆ. 

ಶ್ರೀ ಶ್ರೀ ರವಿ ಶಂಕರ್: ದೇವರೆಂದರೆ ಸತ್ಯ, ಸೌಂದರ್ಯ ಮತ್ತು ಪ್ರೇಮವೆಂದು ನೀವು ಯೋಚಿಸಿದರೆ; ಹೌದು, ಅವುಗಳು ಸಂಬಂಧ ಹೊಂದಿವೆ.

ದೇವರು ಸಂಪೂರ್ಣ ಸೃಷ್ಟಿಯಲ್ಲಿ ಅತಿ-ಉತ್ತಮವಾದುದಾದರೆ, ಸಂಪೂರ್ಣ ಸೃಷ್ಟಿಯು ಒಂದು ವಸ್ತುವಿನಿಂದ ಮಾಡಲ್ಪಟ್ಟದ್ದಾಗಿದ್ದರೆ, ಆ ಒಂದು ಶಕ್ತಿಯನ್ನು ದೇವರೆಂದು ಕರೆಯಬಹುದು. ಎಲ್ಲವೂ ಮಾಡಲ್ಪಟ್ಟಿರುವುದು ಅದರಿಂದಲೇ ಮತ್ತು ಅದು ಎಲ್ಲದರೊಂದಿಗೂ ಸಂಬಂಧ ಹೊಂದಿದೆ.

ದೇವರೊಂದಿಗೆ ಸಂಬಂಧ ಹೊಂದಿರದೇ ಇರುವ ಒಂದೇ ಒಂದು ವಸ್ತುವೂ ಪ್ರಪಂಚದಲ್ಲಿಲ್ಲ. ಹೀಗಿದ್ದರೂ, ದೇವರೆಂದರೆ ಮೇಲೆ, ಎಲ್ಲೋ ಒಂದು ಕಡೆ ಕುಳಿತುಕೊಂಡು, ಅವನನ್ನು ನೀವು ಹಿಡಿದುಕೊಳ್ಳಲು ನಿಮಗೊಂದು ಬೆರಳನ್ನು ಕೊಡಲು ಪ್ರಯತ್ನಿಸುವ ಹಾಗೂ ನಂತರ ದೂರ ಹೋಗುವ ಒಬ್ಬ ವ್ಯಕ್ತಿಯೆಂದು ನೀವು ಯೋಚಿಸಿದರೆ; ಅಂತಹ ರೀತಿಯ ದೇವರಿಗೂ ನಾವು ಯಾವುದರ ಬಗ್ಗೆ ಮಾತನಾಡುತ್ತಿರುವೆವೋ ಅದಕ್ಕೂ ಯಾವುದೇ ಸಂಬಂಧವಿಲ್ಲ. ನೀವು ದೇವರನ್ನೊಂದು ಶಕ್ತಿಯಾಗಿ, ಒಂದು ಸಾನ್ನಿಧ್ಯವಾಗಿ, ಪ್ರೇಮವಾಗಿ, ಆ ಬೃಹತ್ತಾದ ಚೈತನ್ಯದ ಕ್ಷೇತ್ರವಾಗಿ ನೋಡಿದರೆ; ಆಗ ಹೌದು, ಅದರಿಂದ ಯಾರಿಗೂ ಬಿಡುಗಡೆಯಿಲ್ಲ. ನಾವೆಲ್ಲರೂ ಅದರೊಳಗಿದ್ದೇವೆ ಮತ್ತು ಮುಂದೆ ಅದರಲ್ಲಿರುವೆವು. ನಾವು ಅದರಲ್ಲಿದ್ದೆವು; ಮತ್ತು ನಾವು ಅಲ್ಲಿ ಇರದೇ ಇದ್ದರೂ ಕೂಡಾ, ಅದು ಅಲ್ಲಿರುವುದು.

ಪ್ರಶ್ನೆ: ಧ್ಯಾನವು, ಆ ಸಂಬಂಧವನ್ನು ಮೇಳೈಸಲಿರುವ ಅತ್ಯಂತ ಪರಿಣಾಮಕಾರಿ ಮಾರ್ಗವೇ?

ಶ್ರೀ ಶ್ರೀ ರವಿ ಶಂಕರ್: ಯಾವುದೇ ತಂತ್ರವಾದರೂ ನಿಮ್ಮನ್ನು ಧ್ಯಾನದ ಕಡೆಗೆ ಕರೆದೊಯ್ಯಲೇಬೇಕು.
ನಿಮ್ಮ ಬಾಯಾರಿಕೆಯನ್ನು ತಣಿಸಲು ಒಂದೇ ಒಂದು ಮಾರ್ಗವಿರುವುದು, ಅಂದರೆ ದ್ರವಗಳ ಮೂಲಕ. ನಿಮ್ಮ ಬಾಯಾರಿಕೆಯನ್ನು ಕೇವಲ ದ್ರವಗಳು ಮಾತ್ರ ನೀಗಿಸಬಲ್ಲವು, ಸರಿಯಾ? ಅದು ಯಾವುದೇ ದ್ರವವಾಗಬಹುದು, ಆದರೆ ಅದು ದ್ರವವಾಗಿರಲೇಬೇಕು, ಸರಿಯಾ? ಧ್ಯಾನವೆಂದರೆ ಎಚ್ಚರದಲ್ಲಿ, ನಿದ್ರೆಯಲ್ಲಿ ಅಥವಾ ಸ್ವಪ್ನದಲ್ಲಿ ಇರದ ಒಂದು ಅವಸ್ಥೆಯಾಗಿದೆ; ಅದು ನಾಲ್ಕನೆಯ ಅವಸ್ಥೆಯಾಗಿದೆ. ಅದರಲ್ಲಿ ನಿಮ್ಮ ಶರೀರವು ವಿಶ್ರಾಂತಿಯಲ್ಲಿರುತ್ತದೆ ಮತ್ತು ಮನಸ್ಸು ಜಾಗೃತವಾಗಿರುತ್ತದೆ.
ಪ್ರಾರ್ಥನೆ ಮತ್ತು ಧ್ಯಾನಗಳು ಬಹಳ ನಿಕಟವಾಗಿವೆ. ಪ್ರಾರ್ಥನೆಯಲ್ಲಿ ನೀವು ಧನ್ಯವಾದಗಳನ್ನು ಅರ್ಪಿಸುತ್ತೀರಿ ಅಥವಾ ಏನನ್ನಾದರೂ ಬೇಡುತ್ತೀರಿ; ಹಾಗೆಯೇ, ಒಬ್ಬ ಸಾಧಾರಣ ವ್ಯಕ್ತಿಯ ದೃಷ್ಟಿಯಲ್ಲಿ, ಧ್ಯಾನದಲ್ಲಿ ಒಬ್ಬನು ಕೇಳಿಸಿಕೊಳ್ಳಲು ಸಿದ್ಧನಿರುತ್ತಾನೆ. ಆದುದರಿಂದ, ಧ್ಯಾನವನ್ನು ನೀವೊಂದು ಶ್ರೇಷ್ಠ ರೀತಿಯ ಪ್ರಾರ್ಥನೆಯೆಂದು ಕರೆಯಬಹುದು.
ಧ್ಯಾನವು ಮನಸ್ಸಿನ ಒಂದು ಸ್ಥಿತಿಯಾಗಿದೆ; ಅದು ಕೇವಲ ಒಂದು ಪ್ರಕ್ರಿಯೆಯಲ್ಲ. ಅದು ಅಂತಿಮ ಉತ್ಪನ್ನ ಕೂಡಾ ಆಗಿದೆ.

ಪ್ರಶ್ನೆ: ನಾವು ಯಾವತ್ತೂ ಕುಳಿತಿರುವ ಭಂಗಿಯಲ್ಲಿಯೇ ಧ್ಯಾನ ಮಾಡಬೇಕೇ ಅಥವಾ ಅದನ್ನು ಬೇರೆ ಯಾವುದೇ ಭಂಗಿಯಲ್ಲಾದರೂ ಮಾಡಬಹುದೇ? 

ಶ್ರೀ ಶ್ರೀ ರವಿ ಶಂಕರ್: ಕುಳಿತಿರುವ ಭಂಗಿಯು ಧ್ಯಾನ ಮಾಡಲು ಉತ್ತಮವಾಗಿದೆ. ನೀವು ಮಲಗಿಕೊಂಡು ಕೂಡಾ ಅದನ್ನು ಮಾಡಬಹುದು, ಆದರೆ ಅಪಾಯವೆಂದರೆ, ನೀವು ನಿದ್ರಿಸಬಹುದು. ನೀವು ಧ್ಯಾನದಲ್ಲಿರುವಿರೆಂದು ನೀವು ಯೋಚಿಸಬಹುದು, ಆದರೆ ನಿಜವಾಗಿ ನೀವು ಆಳವಾದ ನಿದ್ರೆಯಲ್ಲಿರಬಹುದು.

ಪ್ರಶ್ನೆ: ಒಬ್ಬನು ಧ್ಯಾನವನ್ನು ಒಂದು ನಿಯಮಿತ ಅಭ್ಯಾಸವನ್ನಾಗಿ ಹೇಗೆ ಮಾಡಿಕೊಳ್ಳಬಹುದು?

ಶ್ರೀ ಶ್ರೀ ರವಿ ಶಂಕರ್: ನಾನು ಹಲವಾರು ಧ್ಯಾನದ ಸಿ.ಡಿ.ಗಳನ್ನು ಮಾಡಿದ್ದೇನೆ. ಆರಂಭಿಸಲು, ಕೆಲವು ದಿನಗಳ ಅಥವಾ ವಾರಗಳ ವರೆಗೆ ನೀನು ಈ ಸಿ.ಡಿ.ಗಳನ್ನು ಬಳಸಬಹುದು ಮತ್ತು ಧ್ಯಾನದ ಅಭ್ಯಾಸವನ್ನು ಮಾಡಿಕೊಳ್ಳಬಹುದು. ಒಮ್ಮೆ ನೀನು ಅದನ್ನು ನಿಯಮಿತವಾಗಿ ಅಭ್ಯಾಸ ಮಾಡಲು ತೊಡಗಿದ ಬಳಿಕ, ನಿನಗೆ ಒಂದು ಸಿ.ಡಿ.ಯು ಬೇಕಾಗದು, ನಿನಗೆ ಅದನ್ನು ನೀನಾಗಿಯೇ ಮಾಡಲು ಸಾಧ್ಯವಾಗುವುದು. ನಿನಗೆ ಬೇಕಾಗಿರುವುದೇನೆಂದರೆ, ಸ್ವಲ್ಪ ಧ್ಯಾನ ಮಾಡುವ ಅಭ್ಯಾಸ; ಹೋಗಲು ಬಿಡುವುದರ ಅಭ್ಯಾಸ. ಇದೆಲ್ಲಾ ಹೋಗಲು ಬಿಡುವುದರ ಬಗ್ಗೆ ಇರುವುದು.

ಪ್ರಶ್ನೆ: ಟ್ರಾನ್ಸೆಂಡೆಂಟಲ್ ಮೆಡಿಟೇಷನ್ ಅಥವಾ ಇತರ ವಿಧಾನಗಳ ಎದುರಾಗಿ ಆರ್ಟ್ ಆಫ್ ಲಿವಿಂಗ್ ವಿಧಾನಗಳಿಗೆ ಯಾವುದಾದರೂ ಲಾಭವಿದೆಯೇ?

ಶ್ರೀ ಶ್ರೀ ರವಿ ಶಂಕರ್: ನಾನೊಬ್ಬ ಒಳ್ಳೆಯ ಮಾರಾಟಗಾರನಲ್ಲ! ವಿಧಾನಗಳನ್ನು ಹೋಲಿಸುವುದು ಹೇಗೆಂಬುದನ್ನು ನಿನಗೆ ಹೇಗೆ ಹೇಳುವುದು ಎಂಬುದು ನನಗೆ ತಿಳಿಯದು. ಹಲವಾರು ಧ್ಯಾನದ ತಂತ್ರಗಳಿವೆ. ನಿನಗೆ ಯಾವುದು ಅತ್ಯುತ್ತಮವಾಗಿ ಹೊಂದಿಕೆಯಾಗುವುದೋ ಅದನ್ನು ನೀನು ಆಯ್ಕೆ ಮಾಡಿಕೊಳ್ಳಬೇಕು.

ಕೆಲವು ತಂತ್ರಗಳು, ಉದಾಹರಣೆಗೆ ಬೌದ್ಧರ ಧ್ಯಾನ ತಂತ್ರಗಳು - ವಿಪಾಸನ, ದೀರ್ಘವಾದ ಮೌನ ಧ್ಯಾನ ಶಿಬಿರದಲ್ಲಿ, ದೀರ್ಘ ಕಾಲದ ವರೆಗೆ ಹಲವಾರು ಗಂಟೆಗಳ ಅಭ್ಯಾಸ  ಬೇಕಾಗುತ್ತದೆ.

ಜನರಿಂದ ನಾನು ಏನು ಕೇಳಿರುವೆನೋ ಅದರ ಪ್ರಕಾರ, ಆರ್ಟ್ ಆಫ್ ಲಿವಿಂಗಿನ ತಂತ್ರಗಳ ಪ್ರಯೋಜನವೇನೆಂದರೆ ಅದು ಅಷ್ಟೊಂದು ದೀರ್ಘ ಸಮಯ ತೆಗೆದು ಕೊಳ್ಳುವುದಿಲ್ಲ. ನಿಮಗೆ ಫಲಿತಾಂಶಗಳು ಬಹಳ ಬೇಗನೇ ಸಿಗುತ್ತವೆ, ಯಾಕೆಂದರೆ ನೀವು ಉಸಿರಾಟದ ಲಯವನ್ನು ಬದಲಾಯಿಸುತ್ತಿರುತ್ತೀರಿ. ತಮ್ಮ ಜೀವನದಲ್ಲಿ ಬಹಳ ವ್ಯಸ್ತರಾಗಿರುವ ಜನರಿಗೆ ಈ ವಿಧಾನವು ಅತ್ಯಂತ ಹೆಚ್ಚು ಹೊಂದಿಕೆಯಾಗುತ್ತದೆ. ಅದೊಂದು ಶಕ್ತಿಯುತವಾದ ಚಿಕ್ಕ ನಿದ್ರೆಯಂತೆ. ಅದು ಬೇಗನೇ ನಿಮಗೆ ಒಂದು ಆಳವಾದ ಧ್ಯಾನದ ಅನುಭವವನ್ನು ನೀಡುತ್ತದೆ.  

ಟಿ ಎಮ್ ಕೂಡಾ ನಿಮಗೆ ಆ ಆಂತರಿಕ ಶಾಂತಿಯನ್ನು ತರುತ್ತದೆ. ಟಿ ಎಮ್ ಮಾಡಿದ ಜನರು ಕೂಡಾ, ಸುದರ್ಶನ ಕ್ರಿಯೆ ಮತ್ತು ಉಸಿರಾಟದ ತಂತ್ರಗಳನ್ನು ಅಭ್ಯಾಸ ಮಾಡಿದಾಗ, ಅದು ಇನ್ನೂ ಹೆಚ್ಚು ಲಾಭದಾಯಕವಾಗಿದೆಯೆಂಬುದನ್ನು ಕಂಡುಕೊಳ್ಳುತ್ತಾರೆ. ತಮ್ಮ ಅಭ್ಯಾಸಕ್ಕೆ ಅದು ಬಹಳ ಪೂರಕವಾಗಿರುವುದಾಗಿ ಅವರು ಕಂಡುಕೊಳ್ಳುತ್ತಾರೆ ಮತ್ತು ಅದು ಅವರಿಗೆ ತಮ್ಮ ಧ್ಯಾನದಲ್ಲಿ ಇನ್ನೂ ಆಳವಾಗಿ ಹೋಗುವುದಕ್ಕೆ ಸಹಾಯ ಮಾಡುತ್ತದೆ.

ಆರ್ಟ್ ಆಫ್ ಲಿವಿಂಗ್ ತಂತ್ರಗಳಲ್ಲಿ, ಅಷ್ಟೊಂದು ಪ್ರಯತ್ನ ಒಳಗೊಂಡಿರುವುದಿಲ್ಲ. ಅದು ಆಧುನಿಕ ದಿನದ ಜೀವನಶೈಲಿಗೆ ಹೊಂದಿಕೆಯಾಗುತ್ತದೆ. ಕೆಲವು ಯೋಗದ ಅಭ್ಯಾಸಗಳಿಗೆ, ಬಹಳ ಶಿಸ್ತುಬದ್ಧವಾದ ಜೀವನಶೈಲಿಯ ಅಗತ್ಯವಿರುತ್ತದೆ; ನೀವು ಬೆಳಗ್ಗೆ ೫ ಗಂಟೆಗೆ ಎದ್ದು ಧ್ಯಾನ ಮಾಡಬೇಕು, ಸರಿಯಾದ ಆಹಾರವನ್ನು ಸೇವಿಸಬೇಕು (ಆಹಾರ, ವಿಶ್ರಾಂತಿ ಮತ್ತು ಧ್ಯಾನದ ಸಮಯದ ಬಗ್ಗೆ ಒಂದು ಸಂಪೂರ್ಣ ಮಾರ್ಗದರ್ಶಿ ಇದೆ). ಆರ್ಟ್ ಆಫ್ ಲಿವಿಂಗ್ ವಿಧಾನದಲ್ಲಿ ಕೆಲವೇ ಕೆಲವು ನಿರ್ಬಂಧಗಳಿರುವುದು; ನಗರಗಳಲ್ಲಿರುವ ಬಿಡುವಿಲ್ಲದ ಜೀವನಶೈಲಿಯ ಜನರಿಗೆ ಸುಲಭವಾಗುವಂತೆ ಮಾಡುತ್ತದೆ. ಅವುಗಳನ್ನು ಅಭ್ಯಾಸ ಮಾಡುವುದು ಕೂಡಾ ಸುಲಭವೆಂದು ಅವರಿಗೆ ಅನ್ನಿಸುತ್ತದೆ.

ಪ್ರಶ್ನೆ: ಆರ್ಟ್ ಆಫ್ ಲಿವಿಂಗ್ ತಂತ್ರಗಳನ್ನು, ಪರಮಹಂಸ ಯೋಗಾನಂದರ ಕ್ರಿಯಾ ಯೋಗದೊಂದಿಗೆ ನೀವು ಹೇಗೆ ಹೋಲಿಸುವಿರಿ?

ಶ್ರೀ ಶ್ರೀ ರವಿ ಶಂಕರ್: ಹೌದು, ಆ ವಿಧಾನದಲ್ಲಿ, ವಿವಿಧ ಚಕ್ರಗಳ ಮೇಲೆ ಹೆಚ್ಚು ಧ್ಯಾನ ಮಾಡುವುದಾಗಿದೆ.

ಪ್ರಶ್ನೆ: ನೀವು ಹೇಳುತ್ತಿರುವ ಪ್ರಕಾರ, ಧ್ಯಾನವೆಂಬುದು ಮನಸ್ಸಿನ ಒಂದು ಅವಸ್ಥೆ. ನಾನು ಮನಸ್ಸಿನ ಆ ಅವಸ್ಥೆಯಲ್ಲಿರುವೆನೇ ಎಂಬುದನ್ನು ನಾನು ತಿಳಿಯುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಅದು ಒಂದು ಒಳ್ಳೆಯ ಚಿಕ್ಕ ನಿದ್ರೆಯನ್ನು ಮಾಡುವ ಹಾಗೆಯೇ. ನೀನೊಂದು ಒಳ್ಳೆಯ ಚಿಕ್ಕ ನಿದ್ರೆಯನ್ನು ಮಾಡಿದ್ದರೆ ಅದು ನಿನಗೆ ತಿಳಿಯುತ್ತದೆ, ಸರಿಯಾ? ಮತ್ತು ನೀನು ಆಹಾರವನ್ನು ಸೇವಿಸಿದಾಗ, ನೀನು ಆಹಾರವನ್ನು ಸೇವಿಸಿರುವೆಯೆಂಬುದು ನಿನಗೆ ತಿಳಿದಿರುತ್ತದೆ. ಇದು ಅಷ್ಟೊಂದು ಸ್ಪಷ್ಟವಾದುದು. ನೀವು ಒಳಗಿನಿಂದ ಬಹಳ ವಿಶ್ರಾಮವನ್ನು ಅನುಭವಿಸುವಿರಿ; ಅದು ವಿವರಿಸಲು ಕಷ್ಟವಾದುದು. ನಿಮಗೆ ಬಹಳ ಒಳ್ಳೆಯದಾಗಿ ಮತ್ತು ಹಿತಕರವಾಗಿ ಅನ್ನಿಸುತ್ತದೆ. ಅಲ್ಲಿ ಒಳಗಿನಿಂದ ಬರುವ, ಹಿತಕರವಾಗಿರುವಿಕೆಯ ಒಂದು ಭಾವವಿರುತ್ತದೆ ಮತ್ತು ಒಬ್ಬನು ಸಂಪೂರ್ಣವಾಗಿ ನಿರಾಳವಾಗಿರುತ್ತಾನೆ.

ಪ್ರಶ್ನೆ: ನಾನು ನಿಜವಾಗಿ ಕಷ್ಟಪಟ್ಟು ಪ್ರಯತ್ನಿಸುತ್ತೇನೆ, ಆದರೆ ನನಗೆ ನಕಾರಾತ್ಮಕ ಯೋಚನೆಗಳನ್ನು ತೊಡೆದುಹಾಕಲು ಸಾಧ್ಯವಾಗುವಂತೆ ತೋರುತ್ತಿಲ್ಲ. 

ಶ್ರೀ ಶ್ರೀ ರವಿ ಶಂಕರ್: ಅದುವೇ ಸಮಸ್ಯೆ. ನಕಾರಾತ್ಮಕ ಯೋಚನೆಗಳು ಬರುವಾಗ, ಅವುಗಳನ್ನು ಬೆನ್ನಟ್ಟಬೇಡಿ. ನೀವು ಅವುಗಳನ್ನು ಬೆನ್ನಟ್ಟಿದರೆ, ಅವುಗಳು ಒಂದು ದೊಡ್ಡ ಸೈನ್ಯದೊಂದಿಗೆ ಹಿಂದಿರುಗಿ ಬರುತ್ತವೆ. ಸುಮ್ಮನೆ ಅವುಗಳೊಂದಿಗೆ ಕೈಗಳನ್ನು ಕುಲುಕಿ ಮತ್ತು "ಬನ್ನಿ, ನನ್ನೊಂದಿಗೆ ಕುಳಿತುಕೊಳ್ಳಿ" ಎಂದು ಹೇಳಿ. ಆಗ ಅವುಗಳು ಮಾಯವಾಗುವುವು.

ನಾವು ಧ್ಯಾನ ಮಾಡುವುದನ್ನು ಕಲಿಯಬೇಕಾಗಿರುವ ಕಾರಣಗಳು ಇವು. ನಾವು ಧ್ಯಾನ ಮಾಡುವಾಗ, ನಕಾರಾತ್ಮಕ ಯೋಚನೆಗಳನ್ನು; ಅಥವಾ ಹೇಳುವುದಾದರೆ ಯಾವುದೇ ಯೋಚನೆಗಳನ್ನು ನಿರ್ವಹಿಸುವುದು ಹೇಗೆಂಬುದನ್ನು ನಾವು ಕಲಿಯುತ್ತೇವೆ.

ಧ್ಯಾನವನ್ನು ನಿದ್ರೆ ಅಥವಾ ಹಗಲುಗನಸಿನಿಂದ ವ್ಯತ್ಯಸ್ತವಾಗಿ ತಿಳಿಯುವುದು ಹೇಗೆ? ಮೂರು ದಿನಗಳ ಆರ್ಟ್ ಆಫ್ ಲಿವಿಂಗ್ ಧ್ಯಾನ ಶಿಬಿರದಲ್ಲಿ ತಿಳಿಸಿ ಕೊಡಲಾಗುವ ವಿಷಯಗಳು ಇವು.

ಪ್ರಶ್ನೆ: ಗಾಳಿಯಲ್ಲಿ ತೇಲಾಡುವಿಕೆಯು ಏನೋ ಕಲ್ಪನೆಯೇ ಅಥವಾ ಅದು ನಿಜವಾಗಿ ನಡೆಯುವಂತಹುದೇ? ಗಾಳಿಯಲ್ಲಿ ತೇಲಾಡುವಿಕೆಯ ಲಾಭಗಳೇನು?

ಶ್ರೀ ಶ್ರೀ ರವಿ ಶಂಕರ್: ನಿಜ ಹೇಳಬೇಕೆಂದರೆ, ಯಾರಾದರೂ ತೇಲಾಡುವುದನ್ನು ನಾನು ನೋಡಿಲ್ಲ. ಖಂಡಿತವಾಗಿ, ಶರೀರದಲ್ಲಿ ಥಟ್ಟನೆಯ ಸ್ನಾಯುಗಳ ಸೆಳವು ಇರುವ ಸಾಧ್ಯತೆಯಿದೆ ಮತ್ತು ಶರೀರವು ನೆಲಬಿಟ್ಟು ಜಿಗಿಯಬಹುದು. ಧ್ಯಾನದ ಸ್ವಲ್ಪ ದೀರ್ಘ ಅಭ್ಯಾಸದ ಬಳಿಕ ಅದು ಆಗಬಹುದು. ಶರೀರವು ಬಹಳ ಹಗುರವಾಗಿದೆಯೆಂದು ನಿಮಗೆ ಇದ್ದಕ್ಕಿದ್ದಂತೆ ಅನ್ನಿಸುತ್ತದೆ. ಇದು ಪ್ರತಿಯೊಂದು ಧ್ಯಾನದಲ್ಲೂ ಆಗುತ್ತದೆ.

ಪ್ರಶ್ನೆ: ಶರೀರಕ್ಕೆ ನಿದ್ರೆಯ ಅಗತ್ಯವಿದೆಯೇ? ನಿದ್ರೆಯ ಬದಲಾಗಿ ಧ್ಯಾನ ಮಾಡಬಹುದೇ?

ಶ್ರೀ ಶ್ರೀ ರವಿ ಶಂಕರ್: ನಿಮ್ಮ ಶರೀರಕ್ಕೆ ನಿರ್ದಿಷ್ಟ ಪ್ರಮಾಣದ ನಿದ್ರೆಯ ಅಗತ್ಯವಿದೆ. ನೀವು ದೇಹದಿಂದ ನಿದ್ರೆಯನ್ನು ಕಸಿದುಕೊಂಡರೆ, ಅದು ಅದನ್ನು ತೆಗೆದುಕೊಳ್ಳುವುದು. ನಿರ್ದಿಷ್ಟ ಪ್ರಮಾಣದ ನಿದ್ರೆಯ ಬಳಿಕ, ಧ್ಯಾನವು ಹೆಚ್ಚು ಆಳವಾಗುತ್ತದೆ. ಮೊದಲನೆಯದಾಗಿ ನೀವು ವಂಚಿತ ನಿದ್ರೆಯನ್ನು ದೇಹಕ್ಕೆ ಪೂರೈಸಬೇಕು. ಸಾಲ ಮುಗಿದ ಬಳಿಕ ಮಾತ್ರ ಲಾಭವನ್ನು ಲೆಕ್ಕ ಹಾಕಲಾಗುವುದು!

ಪ್ರಶ್ನೆ: ಧ್ಯಾನವು ಜನರನ್ನು ಅಹಿಂಸಾತ್ಮಕವಾಗಿ ಮಾಡಬಲ್ಲದೇ? ಅದು ಬಂಧನದಲ್ಲಿರುವ ಜನರಿಗೆ ಸಹಾಯ ಮಾಡಬಲ್ಲದೇ?

ಶ್ರೀ ಶ್ರೀ ರವಿ ಶಂಕರ್: ನಾವು ನಮ್ಮ ಕಾರ್ಯಕ್ರಮಗಳನ್ನು ಪ್ರಪಂಚದ ಸುತ್ತಲಿನ ಸೆರೆಮನೆಗಳಲ್ಲಿ ಮಾಡುತ್ತಾ ಬಂದಿದ್ದೇವೆ. ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಖೈದಿಗಳ ಅನುಭವವನ್ನು ಓದಲು ನೀವು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಲ್ಲಿರಾದರೆ, ಅದು ಅವರ ಮೇಲೆ ಬೀರಿರುವ ಪ್ರಭಾವವನ್ನು ನೀವು ನೋಡುವಿರಿ. ಪ್ರಪಂಚದಾದ್ಯಂತದ ಸುಮಾರು ೪೦೦,೦೦೦ ಖೈದಿಗಳು ಶಿಬಿರವನ್ನು ಮಾಡಿದ್ದಾರೆ ಮತ್ತು ಅವರ ನಕಾರಾತ್ಮಕ ಮನೋಭಾವವು, ಒಂದು ಅಪರಾಧಿ ಮನೋಭಾವದಿಂದ ಒಂದು ಸಹಾನುಭೂತಿಯುಳ್ಳ ಮನೋಭಾವದ ಕಡೆಗೆ ಸಂಪೂರ್ಣವಾಗಿ ಬದಲಾಗಿದೆ.

ನಾವು ಈ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಕೂಡಾ ಮಾಡುತ್ತಿದ್ದೇವೆ. ಎಲ್ಲಿ ಸವಾಲುಗಳಿರುವ ಮಕ್ಕಳಿರುವರೋ ಮತ್ತು ಹಿಂಸೆಯ ಹಲವಾರು ಘಟನೆಗಳಿರುವುವೋ, ಅಲ್ಲಿ ಕೂಡಾ ಇದು ಸಹಾಯಕವಾಗಿದೆ. ೨೬೦ ಹಿಂಸೆಯ ಘಟನೆಗಳಿದ್ದ, ಶಿಕಾಗೋದ ಒಂದು ಶಾಲಾ ಜಿಲ್ಲೆಯಲ್ಲಿ, ಎಲ್ಲಾ ಮಕ್ಕಳಿಗೆ ಕಾರ್ಯಕ್ರಮವನ್ನು ಕಲಿಸಿದ ಬಳಿಕ ಅಲ್ಪ ಕಾಲಾವಧಿಯಲ್ಲಿ ಅದು ೬೨ ಘಟನೆಗಳಿಗೆ ಇಳಿಯಿತು. ಆದುದರಿಂದ, ಪ್ರಭಾವವು ಬಹಳ ಸ್ಪಷ್ಟವಾಗಿದೆ. ಧ್ಯಾನವು ಜನರನ್ನು ಒಳಗಿನಿಂದ ಅಹಿಂಸಾತ್ಮಕವಾಗಿ ಮಾಡಬಲ್ಲದು ಎಂಬುದು ಸ್ಪಷ್ಟವಾಗಿದೆ.  

ಪ್ರಶ್ನೆ: ಅಪಸ್ಮಾರ ರೋಗವಿರುವ ಜನರು ಪ್ರಾಣಾಯಾಮಗಳನ್ನು ಮಾಡಬಹುದೇ?

ಶ್ರೀ ಶ್ರೀ ರವಿ ಶಂಕರ್: ಅದು ಅಪಸ್ಮಾರದ ರೋಗಿಗಳಲ್ಲಿ ಹಲವರಿಗೆ ಲಾಭದಾಯಕವಾಗಿದೆಯಾದರೂ, ಅವರಿಗೆ ಪ್ರಾಣಾಯಾಮ ಮಾಡಿಸುವುದರಲ್ಲಿ ನಾನು ಸ್ವಲ್ಪ ಜಾಗ್ರತೆಯಾಗಿರುವೆನು. ಮೊದಲನೆಯದಾಗಿ, ಅವರಿಗೆ ಅಪಸ್ಮಾರದ ಯಾವುದಾದರೂ ಚರಿತ್ರೆಯಿರುವುದೇ  ಎಂದು ನಾವು ಜನರಲ್ಲಿ ಕೇಳುವೆವು. ಹಾಗಿದ್ದರೆ, ಆಗ ಅವರು ನಿಧಾನವಾಗಿ ಮಾಡಬೇಕೆಂದು, ಅವರನ್ನು ಸಾಧಾರಣ ಪ್ರಕ್ರಿಯೆಗೆ ಕೊಂಡೊಯ್ಯುವ ಮೊದಲು ಕೆಲವು ಸರಳ ಪ್ರಾಣಾಯಾಮ ಮತ್ತು ಉಸಿರಾಟದ ವ್ಯಾಯಾಮಗಳೊಂದಿಗೆ ಪ್ರಾರಂಭಿಸಲು ಹೇಳಲಾಗುತ್ತದೆ.

ಸರಳವಾದ ಧ್ಯಾನದ ಬಗ್ಗೆ ಹೇಳುವುದಾದರೆ, ಅದು ವಿಶ್ರಾಮದಂತೆ, ಅದು ಯಾವುದೇ ಹಾನಿಯನ್ನು ಮಾಡುವುದಿಲ್ಲ. ಹೀಗಿದ್ದರೂ, ಮುಂದುವರಿದ ಧ್ಯಾನವನ್ನು ಮಾಡಲು ನಿಮಗೆ ಹೆಚ್ಚಿನ ತ್ರಾಣದ ಅಗತ್ಯವಿದೆ. ಅದು, ವಿವಿಧ ಶಕ್ತಿಯ ಕೇಂದ್ರಗಳು ಅಥವಾ ಚಕ್ರಗಳನ್ನು ಉತ್ತೇಜಿಸುವುದನ್ನು ಒಳಗೊಂಡಿದೆ.

ನಮ್ಮ ಕಾರ್ಯಕ್ರಮಗಳನ್ನು ಮಾಡಿ ಮನೋವಿಕೃತರಾದ ಯಾರನ್ನೂ ನಾನು ಭೇಟಿಯಾಗಿಲ್ಲ. ಹೀಗಿದ್ದರೂ, ಅವರು ಈಗಾಗಲೇ ಬೈ-ಪೋಲಾರ್ ಅಥವಾ ಛಿದ್ರಮನಸ್ಕರಾಗಿದ್ದರೆ ಹಾಗಾಗುವ ಸಾಧ್ಯತೆಗಳಿವೆ. ಅದಕ್ಕಾಗಿ, ನಾವು ಅವರಿಗೆ ಉನ್ನತ ಶಿಬಿರ ಕಾರ್ಯಕ್ರಮಗಳನ್ನು ಮಾಡದಿರಲು ಹೇಳುತ್ತೇವೆ. ಮೂಲಭೂತವಾದವುಗಳಿಗೆ; ಸರಳ ಧ್ಯಾನ, ಯೋಗಾಸನಗಳು ಮತ್ತು ಸರಳ ಪ್ರಾಣಾಯಾಮಗಳಿಗೆ ಅಂಟಿಕೊಂಡಿರಲು ನಾವು ಅವರಿಗೆ ಹೇಳುತ್ತೇವೆ. ಅದರಿಂದ ಏನೂ ತೊಂದರೆಯಿಲ್ಲ.  

ಅಭ್ಯಾಸಗಳನ್ನು ಅತಿಯಾಗಿ ಮಾಡದಿರಲು ನಾವು ಜನರಿಗೆ ಹೇಳುತ್ತೇವೆ. ಅವುಗಳನ್ನು ಮಾಡುವುದರಿಂದ ಜನರಿಗೆ ಬಹಳ ಒಳ್ಳೆಯದನ್ನಿಸುವುದರಿಂದ, ಅವರಿಗೆ ಅದು ಎಷ್ಟೊಂದು ಆಹ್ಲಾದಕಾರಿಯಾಗಿ ಮತ್ತು ಉತ್ತೇಜನಕಾರಿಯಾಗಿ ಕಂಡುಬರುತ್ತದೆಯೆಂದರೆ, ಕೆಲವೊಮ್ಮೆ ಅವರದನ್ನು ಮಿತಿ ಮೀರಿ ಮಾಡುವತ್ತ ಒಲವು ತೋರುತ್ತಾರೆ. ಅವರು ೬ ಗಂಟೆಗಳಿಂದ ೮ ಗಂಟೆಗಳ ವರೆಗೆ ಧ್ಯಾನ ಮಾಡಲು ಪ್ರಾರಂಭಿಸಬಹುದು. ಇಲ್ಲಿಯೇ ಸಮಸ್ಯೆ ಉಂಟಾಗುವುದು. ಅದಕ್ಕಾಗಿಯೇ ನಿಮಗೆ ಸರಿಯಾದ ತರಬೇತಿಯ ಹಾಗೂ ಅದನ್ನು ಮಿತಿಯಲ್ಲಿ ಮಾಡಲು ಮಾರ್ಗದರ್ಶನ ನೀಡುವ ಒಬ್ಬರು ಒಳ್ಳೆಯ ತರಬೇತುದಾರನ ಅಗತ್ಯವಿರುವುದು. ಎಷ್ಟನ್ನು ಶಿಫಾರಸು ಮಾಡಲಾಗಿದೆಯೋ ಕೇವಲ ಅಷ್ಟನ್ನು ಮಾತ್ರ ನಾವು ಮಾಡಬೇಕು. ಯಾವುದನ್ನೇ ಆದರೂ ಅತಿಯಾಗಿ ಮಾಡುವುದು ಒಳ್ಳೆಯದಲ್ಲ. ಅದು, ಬಹಳಷ್ಟು ವಿಟಾಮಿನುಗಳನ್ನು ಒಂದೇ ಸಮಯಕ್ಕೆ ಸೇವಿಸುವಂತೆ. ಅದು ಒಬ್ಬನ ಸಮತೋಲನವನ್ನು ಹಾಳು ಮಾಡುತ್ತದೆ.

ಇಪ್ಪತ್ತು ನಿಮಿಷಗಳ ವರೆಗೆ, ೩೦ ನಿಮಿಷಗಳ ವರೆಗೆ ಅಥವಾ ಒಂದು ಗಂಟೆಯ ವರೆಗೆ ಧ್ಯಾನ ಮಾಡುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ನಂತರ, ಜನರು ಸ್ವಲ್ಪ ಎಡೆ ಬಿಟ್ಟವರಂತಾಗುತ್ತಾರೆ ಅಥವಾ ವಾಸ್ತವಿಕತೆಯೊಂದಿಗಿನ ಸಂಬಂಧವನ್ನು ಕಳೆದುಕೊಳ್ಳುತ್ತಾರೆ. ಅದನ್ನು ಅತಿಯಾಗಿ ಮಾಡಿದರೆ ಜನರಿಗೆ ಆ ರೀತಿ ಆಗಬಹುದು.

ಪ್ರಶ್ನೆ: ಧ್ಯಾನ ಮತ್ತು ಸಾಕ್ಷಾತ್ಕಾರಗಳ ನಡುವಿನ ವ್ಯತ್ಯಾಸವೇನು? ಧ್ಯಾನವೆಂಬುದು ಸಾಕ್ಷಾತ್ಕಾರದ ಕಡೆಗೆ ಇರುವ ಒಂದು ಪ್ರಕ್ರಿಯೆಯೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಧ್ಯಾನವೆಂಬುದು ಒಂದು ಪ್ರಕ್ರಿಯೆ ಮತ್ತು ಆತ್ಮ ಸಾಕ್ಷಾತ್ಕಾರವೆಂಬುದು ಪರಿಣಾಮ. ನೋಡು, ನೀನು ನನಗೊಂದು ಪ್ರಶ್ನೆಯನ್ನು ಕೇಳುತ್ತಿರುವೆ ಮತ್ತು ನಾನು ನಿನಗೆ ಉತ್ತರವನ್ನು ನೀಡುತ್ತಿರುವೆ. ನೀನು ಉತ್ತರವನ್ನು ಕೇಳಿಸಿಕೊಳ್ಳುತ್ತಿರುವೆ ಮತ್ತು ಒಳಗೆ ’ಹೌದು’ ಎಂದು ಹೇಳುತ್ತಾ ನೀನು ತಲೆದೂಗುತ್ತಿರುವೆ. ಅದು ಸಾಕ್ಷಾತ್ಕಾರ.

ಪ್ರಶ್ನೆ: ಭಾರತದಲ್ಲಿ ಅಷ್ಟೊಂದು ವಿರೋಧಾತ್ಮಕತೆಗಳು ಯಾಕಿವೆ?

ಶ್ರೀ ಶ್ರೀ ರವಿ ಶಂಕರ್: ಭಾರತವು ವಿರೋಧಾತ್ಮಕತೆಗಳಿಂದ ತುಂಬಿದೆ. ನಮ್ಮಲ್ಲಿ ಹಿಮ-ಪರ್ವತಗಳು ಮತ್ತು ಮರುಭೂಮಿಗಳಿವೆ. ಅದೇ ರೀತಿಯಲ್ಲಿ, ನಾವು ಜೀವನದಲ್ಲಿ ವೈಪರೀತ್ಯಗಳನ್ನು ಹೊಂದಿದ್ದೇವೆ. ನಮ್ಮಲ್ಲಿ ಬಹಳ ಶಾಂತವಾದ ಮನಸ್ಸುಗಳಿವೆ ಮತ್ತು ಸಂಪೂರ್ಣವಾಗಿ ಕ್ಷೋಭೆಗೊಂಡ ಮನಸ್ಸುಗಳನ್ನು ಕೂಡಾ ನೀವು ಕಾಣಬಹುದು. ಭಾರತವು ಮರಳು ಮತ್ತು ಸಕ್ಕರೆಗಳ ಒಂದು ಮಿಶ್ರಣವಾಗಿದೆ. ನೀವೊಂದು ಇರುವೆಯಂತಿರಬೇಕು; ಸಕ್ಕರೆಯನ್ನು ಆರಿಸಿಕೊಳ್ಳಲು ವಿನಮ್ರರಾಗಿರಬೇಕು.

ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯಿಂದ ಇತ್ತೀಚೆಗೆ ಆದ ಅಭಿವೃದ್ಧಿಯನ್ನು ನಾನು ಹಂಚಿಕೊಳ್ಳಲು ಬಯಸುತ್ತೇನೆ. ಯಾರಾದರೂ ಒಬ್ಬರು ಮೇಲೆ ಬರಬೇಕು. ೮೦-೯೦ ಕಿಲೋಗಳ ಮಾನವ ಶರೀರವನ್ನು ನಾಶಪಡಿಸಲು ಎಷ್ಟು ವಿಷ ಬೇಕಾಗುತ್ತದೆಯೆಂದು ನನಗೆ ಹೇಳಿ? ವಿಷದ ಒಂದು ಹನಿಯು ಶರೀರವನ್ನು ನಾಶಪಡಿಸಬಲ್ಲದು, ಸರಿಯಾ?

ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯು, ಕೆಲವು ಆಯುರ್ವೇದದ ಮೂಲಿಕೆಗಳ ಭಟ್ಟಿಯಿಳಿಸಿದ ನೀರನ್ನು ತಯಾರಿಸಿದ್ದಾರೆ, ಅದರಲ್ಲಿ ಒಂದು ಅಮೃತ ಬಳ್ಳಿ ಎಂದು ಕರೆಯಲ್ಪಡುತ್ತದೆ. ಅದು ಶರೀರದಲ್ಲಿನ ರೋಗನಿರೋಧಕ ವ್ಯವಸ್ಥೆಯ ಶಕ್ತಿಯನ್ನು ವರ್ಧಿಸುತ್ತದೆ. ಅದು ಶಕ್ತಿ ಡ್ರಾಪ್ಸ್ ಎಂದು ಕರೆಯಲ್ಪಡುತ್ತದೆ.

ಮುಂಬೈಯ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯು ಶಕ್ತಿ ಡ್ರಾಪ್ಸ್ ಮೇಲೆ ಸಂಶೋಧನೆಯನ್ನು ನಡೆಸುತ್ತಿದೆ ಮತ್ತು ಈ ವರ್ಷದ ಕೊನೆಯೊಳಗೆ ಒಂದು ಪ್ರಬಂಧವನ್ನು ಪ್ರಕಟಿಸಲಿದೆ. ೪೮ ಗಂಟೆಗಳಲ್ಲಿ, ಈ ಹನಿಗಳಿಗೆ ಶರೀರದಲ್ಲಿನ ಕ್ಯಾನ್ಸರ್ ಕೋಶಗಳನ್ನು ೪೦%ದಷ್ಟು ಕಡಿಮೆ ಮಾಡಲು ಸಾಧ್ಯವಾಗಿವೆಯೆಂದು ಅವರು ಕಂಡುಹಿಡಿದಿದ್ದಾರೆ. ಕೀಮೋಥೆರಪಿಯ ಮೂಲಕ ಹಾದುಹೋಗುತ್ತಿದ್ದ ಬಹಳಷ್ಟು ಜನರಿಗೆ ಇದು, ಅಡ್ದ ಪರಿಣಾಮಗಳಿಲ್ಲದೆಯೇ ಸಹಾಯ ಮಾಡಿದೆ. ಶರೀರದಲ್ಲಿನ ಕ್ಯಾನ್ಸರ್ ಕೋಶಗಳ ಮೊತ್ತವನ್ನು ಕಡಿಮೆ ಮಾಡಲು ಅದಕ್ಕೆ ಸಾಧ್ಯವಿದೆ ಮತ್ತು ಅದು ನೋವನ್ನು ಕಡಿಮೆಗೊಳಿಸುವಂತಹ ಹಲವಾರು ವಿಷಯಗಳಲ್ಲಿ ಜನರಿಗೆ ಸಹಾಯ ಮಾಡಿದೆ.

ಪ್ರಶ್ನೆ: ಒಬ್ಬರು ಸಮಯಪ್ರಜ್ಞೆಯನ್ನು ಹೇಗೆ ಉತ್ತಮಗೊಳಿಸಬಹುದು? ಒಬ್ಬರಿಗೆ ಈ ದಿನಗಳಲ್ಲಿ ಎಷ್ಟೊಂದು ದೀರ್ಘ ಸಮಯದ ಕೆಲಸ ಮತ್ತು ಬಹಳಷ್ಟು ಪ್ರಯಾಣ ಮಾಡುವುದಿರುತ್ತದೆ.

ಶ್ರೀ ಶ್ರೀ ರವಿ ಶಂಕರ್: ಕೆಲವು ಉಸಿರಾಟದ ತಂತ್ರಗಳು, ಪ್ರಾಣಾಯಾಮ ಮತ್ತು ಧ್ಯಾನಗಳು ನಿಮಗೆ ನಿಮ್ಮ ಸಮಯ ಪ್ರಜ್ಞೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತವೆ. ಬೆಳಗ್ಗೆ ಮತ್ತು ಸಂಜೆ ಪ್ರಾಣಾಯಾಮ ಮಾಡುವುದು ನಿಮ್ಮನ್ನು ನಿಜವಾಗಿ ತಾಜಾವಾಗಿಡುತ್ತದೆ. ನಾನು ಪ್ರತಿದಿನವೂ ಸುಮಾರು ೧೯ ಗಂಟೆಗಳ ವರೆಗೆ ಕೆಲಸ ಮಾಡುತ್ತೇನೆ ಮತ್ತು ನಾನು ಸಾಕಷ್ಟು ಪ್ರಯಾಣವನ್ನು ಕೂಡಾ ಮಾಡುತ್ತಿರುತ್ತೇನೆ. ನಾನು ಬಳಲಿರುವಂತೆ ಕಾಣಿಸುತ್ತಿರುವೆನೇ? ಅದು ಖಂಡಿತವಾಗಿ ಸಹಾಯ ಮಾಡುತ್ತದೆ!

ಪ್ರಶ್ನೆ: ಅಲೋಪತಿ ಔಷಧಿ ಮತ್ತು ಆ ಕ್ಷೇತ್ರದಲ್ಲಿರುವ ವೃತ್ತಿಪರರು ಆಯುರ್ವೇದದ ವೃತ್ತಿಪರರೊಂದಿಗೆ ಸಹಕರಿಸುವುದನ್ನು ನೀವು ಹೇಗೆ ನೋಡಲು ಬಯಸುವಿರಿ?

ಶ್ರೀ ಶ್ರೀ ರವಿ ಶಂಕರ್: ಭಾರತ ಸರಕಾರವು ಆಯುಷ್ ಎಂದು ಕರೆಯಲ್ಪಡುವ ಒಂದು ಸಂಸ್ಥೆಯನ್ನು ಸ್ಥಾಪಿಸಿದೆ. ಅದು ಈ ಸಹಯೋಗದ ಕಡೆಗೆ ಕೆಲಸ ಮಾಡುತ್ತಿದೆ. ಖಂಡಿತವಾಗಿಯೂ, ಔಷಧ ಶಾಸ್ತ್ರದ ಈ ಎರಡು ವಿಭಾಗಗಳ ನಡುವೆ ನಾವೊಂದು ಜೊತೆಗಾರಿಕೆ ಹೊಂದಿದರೆ, ಮಾಡಬಹುದಾದದ್ದು ಬಹಳಷ್ಟಿದೆ. ಪ್ರಪಂಚಕ್ಕೆ ಮಹತ್ತರವಾದ ಪ್ರಯೋಜನವಾಗಲಿದೆ.

ಬುಧವಾರ, ಏಪ್ರಿಲ್ 17, 2013

ಆಶೀರ್ವಾದ

೧೭ ಎಪ್ರಿಲ್ ೨೦೧೩
ಕಾಲ್ಗರಿ, ಕೆನಡ


ಪ್ರಶ್ನೆ: ನಾನು ನನ್ನ ಅಹಂಕಾರವನ್ನು ತೊಡೆದುಹಾಕುವುದು ಹೇಗೆ? ಅದು ಬಹಳ ಶಕ್ತಿಯುತವಾಗಿದೆ.

ಶ್ರೀ ಶ್ರೀ ರವಿ ಶಂಕರ್: ಓ, ದೇವರ ಸಲುವಾಗಿಯೂ ನೀನು ಅದನ್ನು ಮಾಡಬೇಡ! ನಿನ್ನ ಅಹಂಕಾರವನ್ನು ತೊಡೆದುಹಾಕಲು ಪ್ರಯತ್ನಿಸಬೇಡ.

ನಿನ್ನ ಅಹಂಕಾರವು ನಿನ್ನ ಅತೀ ದೊಡ್ಡ ಸಮಸ್ಯೆಯೆಂದು ನಿನಗನ್ನಿಸಿದರೆ; ಅದನ್ನು ನಿನ್ನ ಜೇಬಿನಲ್ಲಿ ಅಥವಾ ನಿನ್ನ ಪರ್ಸಿನಲ್ಲಿ ಇಟ್ಟುಕೋ. ಅದಿರಲಿ.

ನಿನ್ನ ಅಹಂಕಾರವು ನಿನಗೆ ತೊಂದರೆ ನೀಡುತ್ತಿರುವುದಾದರೆ, ನಿನ್ನನ್ನು ಚೆನ್ನಾಗಿ ಅವಮಾನಿತನಾಗಲು ಬಿಡು. ನೀನದನ್ನು ಮಾಡುವೆಯಾ? ಅಷ್ಟೇ! ಅತ್ಯಂತ ದೊಡ್ಡ ಸಮಸ್ಯೆಯೆಂದರೆ, ನೀನು ಅವಮಾನಿತನಾಗಲು ಬಯಸುವುದಿಲ್ಲ. ಅವಮಾನಿತನಾಗು, ಮತ್ತು ಅಹಂಕಾರವು ಮಾಯವಾಗುವುದನ್ನು ನೀನು ಕಾಣುವೆ.

ಜೀವನದಲ್ಲಿ ಯಾರಾದರೂ ಎಲ್ಲಾದರೂ ನಿನ್ನನ್ನು ಅವಮಾನಪಡಿಸಿದರೆ, ಅದು ನಿನ್ನನ್ನು ಮೃದುಗೊಳಿಸಲಿರುವ ಒಂದು ಉಪಾಯ ಮಾತ್ರ ಎಂಬುದನ್ನು ತಿಳಿ. ಅದೊಂದು ಅನುಗ್ರಹ; ನೀನೊಂದು ಮುಗುಳ್ನಗೆಯೊಂದಿಗೆ ಆ ಪರಿಸ್ಥಿತಿಯಿಂದ ದೂರ ಹೋಗಬೇಕು ಅಥವಾ ಅದರ ಮೂಲಕ ಹಾದುಹೋಗಬೇಕು.

ಆರಂಭದಲ್ಲಿ ನಿನಗೆ ಬಹಳ ಅಹಿತಕರವೆನಿಸಲೂಬಹುದು, ಆದರೆ ನಿನ್ನಲ್ಲೊಂದು ಮಾರ್ಪಾಟು ಉಂಟಾಗುವುದು. ಅದರಿಂದ ನೀನು ಬಹಳ ಆಶ್ಚರ್ಯಚಕಿತನಾಗುವೆ. ನಂತರ, ಯಾರಿಗೂ ಯಾವತ್ತೂ ನಿನ್ನೊಳಗಿನಿಂದ ನಗೆಯನ್ನು, ಪ್ರೀತಿಯನ್ನು ಮತ್ತು ಸಹಾನುಭೂತಿಯನ್ನು ಕಸಿದುಕೊಳ್ಳಲು ಸಾಧ್ಯವಾಗದು.

ಅವಮಾನ ಅಥವಾ ಟೀಕೆಗೊಳಗಾಗಲು ನಾವು ಯಾವತ್ತೂ ನಾಚಿಕೆಪಡಬಾರದು. ಟೀಕೆಯು ಬಂದರೆ ಅದನ್ನು ತೆಗೆದುಕೊಳ್ಳಿ.
ನಿಮಗೆ ಗೊತ್ತಾ, ಹಲವು ಸಾರಿ ನಾವು ನಮ್ಮ ಕೈಗಳನ್ನು ಬಹಳ ಬಿಗಿಯಾಗಿ ಹಿಡಿಯುತ್ತೇವೆ; ನಾನು ಹೀಗೇ ಇರುವುದು, ಇದು ನನ್ನದು, ನನ್ನದು, ನನ್ನದು! ಮತ್ತು ಯಾರಾದರೂ ನಮ್ಮನ್ನು ಟೀಕಿಸಿದ ಕ್ಷಣವೇ ನಾವು ಹಿಮ್ಮೆಟ್ಟುತ್ತೇವೆ. ಇತರರ ಟೀಕೆಯ ಬಗ್ಗೆ ನಾವು ಬಹಳ ಭ್ರಮಿತರಾಗುತ್ತೇವೆ. ಇವರು ಅತ್ಯಂತ ಬಲಹೀನರಾದ ಜನರೆಂದು ನಾನು ಹೇಳುತ್ತೇನೆ.

ಯಾರಾದರೂ ನಿಮ್ಮನ್ನು ಟೀಕಿಸಿದರೆ, ಅದನ್ನು ಸ್ವಾಗತಿಸಿ! ಅದರಲ್ಲೇನಾದರೂ ಇದ್ದರೆ, ಅದನ್ನು ತೆಗೆದುಕೊಳ್ಳಿ. ಅವರು ನಿಮ್ಮ ಸ್ನೇಹವನ್ನು ಕಳೆದುಕೊಳ್ಳುವ ಅಪಾಯವನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ನಿಮಗೊಂದು ವ್ಯಾಖ್ಯಾನ ಅಥವಾ ಟೀಕೆಯನ್ನು ನೀಡುತ್ತಿದ್ದಾರೆ.

ಪ್ರಪಂಚದಲ್ಲಿ ನಿಮಗೆ ಸಹಾಯ ಮಾಡಲು ಜನರಿದ್ದಾರೆ ಎಂಬುದನ್ನು ನೀವು ತಿಳಿಯಬೇಕು. ಜನರನ್ನು ಶತ್ರುಗಳಾಗಿ ನೋಡಬೇಡಿ. ಮೂರ್ಖರು ಪ್ರಪಂಚವನ್ನು, ಶತ್ರುಗಳಿಂದ ಮತ್ತು ಪ್ರತಿಕೂಲ ಜನರಿಂದ ತುಂಬಿರುವಂತೆ ನೋಡುವರು. ಜ್ಞಾನಿಗಳು ಪ್ರಪಂಚವನ್ನು, ಮಿತ್ರರಿಂದ ತುಂಬಿರುವಂತೆ ನೋಡುತ್ತಾರೆ ಮತ್ತು ಸಹಾಯ ಮಾಡಲು ಜನರಿದ್ದಾರೆ ಎಂದು ಯೋಚಿಸುತ್ತಾರೆ.  

ನಿಮ್ಮನ್ನು ಟೀಕಿಸುವ ಯಾರೇ ಆದರೂ ನಿಮಗೆ ಏನೋ ಒಳ್ಳೆಯದನ್ನು ಮಾಡುತ್ತಿದ್ದಾನೆ ಎಂದು ಒಬ್ಬ ಜ್ಞಾನಿಯ ದೃಷ್ಟಿಕೋನದಿಂದ ನೋಡಿ. ಅವರು ನಿಮ್ಮೊಂದಿಗಿನ ತಮ್ಮ ಸ್ನೇಹವನ್ನು ಕಳೆದುಕೊಳ್ಳುವ ಅಪಾಯಕ್ಕೊಡ್ಡಿ, ನಿಮಗೆ ನಿಮ್ಮ ತಪ್ಪನ್ನು ತೋರಿಸುತ್ತಿದ್ದಾರೆ.

ಇಲ್ಲದಿದ್ದರೆ, ಸಮಾನ್ಯ ವ್ಯಕ್ತಿಯು ಸುಮ್ಮನೆ, "ಸರಿ, ಇಂತಿಂತಹ ಒಬ್ಬ ವ್ಯಕ್ತಿಯ ಸ್ನೇಹವನ್ನು ನಾನು ಯಾಕೆ ಕಳೆದುಕೊಳ್ಳಬೇಕು? ಕೇವಲ ಒಳ್ಳೆಯ ವಿಷಯಗಳನ್ನು ಮತ್ತು ಟಾಟಾ ಮಾತ್ರ ಹೇಳುವುದು. ನಿಮ್ಮ ಬಲಹೀನತೆಗಳನ್ನು ಎತ್ತಿತೋರಿಸುವ ಅಗತ್ಯವಿಲ್ಲ" ಎಂದು ಹೇಳುವನು.

ಆದುದರಿಂದ, ಯಾವಾಗೆಲ್ಲಾ ಒಬ್ಬರು ನಿಮ್ಮನ್ನು ಟೀಕಿಸುವರೋ, ಅದನ್ನು ಕೇಳಿಸಿಕೊಳ್ಳಿ. ಟೀಕೆಯಲ್ಲಿ ಏನಾದರೂ ಹುರುಳಿದ್ದರೆ ಅದನ್ನು ತೆಗೆದುಕೊಳ್ಳಿ. ಅದು ಮಾತ್ಸರ್ಯದಿಂದ ಬರುತ್ತಿದ್ದರೆ, ಅವರ ಕಡೆಗೆ ಸಹಾನುಭೂತಿಯಿಂದಿರಿ. ಅದು ಅವರ ಸಮಸ್ಯೆ; ತಮ್ಮದೇ ಆದ ಮಾತ್ಸರ್ಯವು ಅವರಿಂದ ಈ ರೀತಿ ಮಾಡಿಸುತ್ತಿದೆ. ಅವರು ತಮ್ಮ ಹತಾಶೆಯನ್ನು ನಿಮ್ಮ ಮೇಲೆ ಸುರಿಯುತ್ತಿದ್ದಾರೆ. ಮತ್ತು ಒಂದು ಅರ್ಥದಲ್ಲಿ, ತಮ್ಮ ಮನಸ್ಸಿನಿಂದ ಹತಾಶೆಯನ್ನು ಖಾಲಿಗೊಳಿಸಲು ನೀವು ಅವರಿಗೆ ಕೇವಲ ಸಹಾಯ ಮಾಡುತ್ತಿದ್ದೀರಿ.

ಅವರದನ್ನು ಸಹಾನುಭೂತಿಯಿಂದಾಗಿ, ಸ್ನೇಹ ಮತ್ತು ಪ್ರೀತಿಯಿಂದಾಗಿ ಹೇಳುತ್ತಿದ್ದರೆ, ಆಗ ನೀವದನ್ನು ಆ ಅರ್ಥದಲ್ಲಿ ತೆಗೆದುಕೊಳ್ಳಿ. ಆದುದರಿಂದ, ಒಂದು ಸಂತೋಷಕರವಾದ ಪ್ರಶಾಂತವಾದ ಮನಸ್ಸಿನಿಂದ ರಚನಾತ್ಮಕ ಟೀಕೆಯನ್ನು ನೀಡಲು ನಿಮಗೆ ಸಾಧ್ಯವಾಗಬೇಕು ಮತ್ತು ಅದೇ ಮನಸ್ಸಿನಿಂದ ಟೀಕೆಯನ್ನು ತೆಗೆದುಕೊಳ್ಳಲು ಸಾಧ್ಯವಾಗಬೇಕು. ಇದು ನಿಮ್ಮ ಅಹಂಕಾರವನ್ನು ಪರಿವರ್ತಿಸುವುದು.

ಪ್ರಶ್ನೆ: ಗುರುದೇವ, ನೀವು ದಯವಿಟ್ಟು ವೈರಾಗ್ಯದ ಬಗ್ಗೆ ಮಾತನಾಡುವಿರಾ?

ಶ್ರೀ ಶ್ರೀ ರವಿ ಶಂಕರ್: ನೋಡಿ, ನಮ್ಮ ಇಂದ್ರಿಯಗಳು ಸ್ವಾಭಾವಿಕವಾಗಿ ಭಾಹ್ಯ ವಸ್ತುಗಳತ್ತ ಆಕರ್ಷಿತವಾಗುವಂತವು. ನೀವು ನಿದ್ದೆಯಿಂದ ಎದ್ದಾಗ ಸ್ವಾಭಾವಿಕ ಪ್ರವೃತ್ತಿಯೆಂದರೆ, ಕಣ್ಣುಗಳು ನೋಡಲು ಬಯಸುತ್ತವೆ, ಕಿವಿಗಳು ಕೇಳಲು ಬಯಸುತ್ತವೆ, ಮೂಗು ಆಘ್ರಾಣಿಸಲು ಬಯಸುತ್ತದೆ, ಚರ್ಮವು ಸ್ಪರ್ಶವನ್ನು ಬಯಸುತ್ತದೆ ಮತ್ತು ನಾಲಿಗೆಯು ರುಚಿನೋಡಲು ಬಯಸುತ್ತದೆ. ಹೀಗೆ, ಇಂದ್ರಿಯಗಳ ಸ್ವಾಭಾವಿಕ ಪ್ರವೃತ್ತಿಯು ಬಹಿರ್ಮುಖವಾಗಿ ಹೋಗಿ ಸಂಪೂರ್ಣ ಸೃಷ್ಟಿಯನ್ನು ಆನಂದಿಸುವುದಾಗಿದೆ. ಆದರೆ ಇಂದ್ರಿಯಗಳ ಆನಂದಿಸುವ ಸಾಮರ್ಥ್ಯವು ಸೀಮಿತವಾಗಿದೆ.

ಇವತ್ತು ನಾವು ಉದ್ಯಾನಕ್ಕೆ ಹೋದೆವು ಮತ್ತು ದೃಶ್ಯವು ಸುಂದರವಾಗಿತ್ತು, ಆದರೆ ನೀವು ಸುಂದರವಾದ ದೃಶ್ಯವನ್ನು ಎಷ್ಟು ಹೊತ್ತು ನೋಡುವಿರಿ?

ಇಂದ್ರಿಯಗಳ ಮೂಲಕ ಸುಖಿಸುವ ಬಯಕೆಯು ಮೊದಲು ಮನಸ್ಸಿನಲ್ಲಿ ಬರುತ್ತದೆ, ಆದರೆ ಇಂದ್ರಿಯಗಳ ಆನಂದಿಸುವ ಸಾಮರ್ಥ್ಯವು ಸೀಮಿತವಾಗಿದೆ.

ನಿಮಗೆ ಆಪಲ್-ಪೈ ಅಥವಾ ಪಾಯಸ ಇಷ್ಟವೆಂದಿಟ್ಟುಕೊಳ್ಳಿ; ನಿಮಗೆ ಎಷ್ಟು ತಿನ್ನಲು ಸಾಧ್ಯ? ಒಂದು ತುಂಡು, ಎರಡು ತುಂಡುಗಳು, ಮೂರು ಬಾರಿಯಷ್ಟು? ನೀವು ಮೂರನೆಯ ಸಾರಿಗೆ ತಿನ್ನುವ ಹೊತ್ತಿಗೆ, ನಿಮಗೆ ಸುಖವನ್ನು ಕೊಡುತ್ತಿದ್ದ ಅದೇ ವಿಷಯವು, ನೋವನ್ನು ತರುತ್ತದೆ. ಇದು ಯಾಕೆಂದರೆ, ಆನಂದಿಸಲಿರುವ ನಮ್ಮ ಸಾಮರ್ಥ್ಯವು ನಮ್ಮ ಇಂದ್ರಿಯಗಳಿಗೆ ಸೀಮಿತವಾಗಿದೆ.

ಹೆಚ್ಚಾಗಿ ಒಬ್ಬರಿಗೆ ಈ ಅಸಮತೋಲನವು ಕಾಣಿಸುತ್ತದೆ - ಮನಸ್ಸು ಹೆಚ್ಚಿನದನ್ನು ಬಯಸುವುದು, ಆದರೆ ಇಂದ್ರಿಯಗಳಿಗೆ ಆನಂದಿಸುವ ಸಾಮರ್ಥ್ಯ ಇಲ್ಲದಿರುವುದು.

ಮೂರು ಪರಿಸ್ಥಿತಿಗಳಿರುವ ಸಾಧ್ಯತೆಯಿದೆ:

೧. ಯಾವುದಾದರೂ ಲಭ್ಯವಿಲ್ಲದಿರುವಾಗ; ಮನಸ್ಸು ಆಹಾರ ಸೇವಿಸಲು ಬಯಸುತ್ತದೆ, ಆದರೆ ಅದು ಲಭ್ಯವಿರುವುದಿಲ್ಲ.

೨. ಆಹಾರವು ಲಭ್ಯವಿದೆ, ಆದರೆ ಮನಸ್ಸಿನಲ್ಲಿ ಅದನ್ನು ಆನಂದಿಸುವ ಬಯಕೆಯಿರುವುದಿಲ್ಲ.

೩. ಮನಸ್ಸಿನಲ್ಲಿ ಬಯಕೆಯಿದೆ, ಆಹಾರ ಕೂಡಾ ಲಭ್ಯವಿದೆ, ಆದರೆ ಇಂದ್ರಿಯಗಳಿಗೆ ಅದನ್ನು ಆನಂದಿಸುವ ಸಾಮರ್ಥ್ಯವಿರುವುದಿಲ್ಲ.

ಈ ಮೂರು ಪರಿಸ್ಥಿತಿಗಳು ನಿಮಗೆ ಕಾಣಿಸುತ್ತವೆಯೇ?

ಒಬ್ಬ ಸಜ್ಜನ ನನ್ನ ಬಳಿಗೆ ಬಂದು, "ಗುರುದೇವ, ನನಗೆ ೫೦ ವರ್ಷ ವಯಸ್ಸು ಮತ್ತು ನಾನೊಂದು ಸಂಬಂಧವನ್ನು ಹುಡುಕುತ್ತಿದ್ದೇನೆ, ಆದರೆ ನನಗೆ ಸರಿಯಾದ ವ್ಯಕ್ತಿಯು ಸಿಗುತ್ತಿಲ್ಲ" ಎಂದು ಹೇಳಿದನು.

ನಾನಂದೆ, "ಇರು, ಇನ್ನೊಂದು ೨೦ ವರ್ಷಗಳ ವರೆಗೆ ಹುಡುಕು!"

ನೀವು ಅದರ ಬಗ್ಗೆ ಅಷ್ಟೊಂದು ಎಚ್ಚರವಹಿಸಿ ಆಯ್ಕೆಮಾಡುವವರಾಗಿದ್ದರೆ ಮತ್ತು ಯಾವುದಕ್ಕಾಗಿಯೋ ಹುಡುಕುತ್ತಾ ಇದ್ದರೆ, ಆಗ ನಿಮಗದು ಸಿಕ್ಕುವಾಗ ಕೂಡಾ, ನೀವದನ್ನು ಆನಂದಿಸುವುದಿಲ್ಲ. ಯಾಕೆ? ಇದು ಯಾಕೆಂದರೆ ನಿಮ್ಮ ಮನಸ್ಸು ಅಲ್ಲಿರುವುದಿಲ್ಲ. ಲಭ್ಯವಿರುವ ವಸ್ತುಗಳು, ಮನೋಭಾವ ಮತ್ತು ಇಂದ್ರಿಯಗಳ ಸಾಮರ್ಥ್ಯ ಇವುಗಳ ನಡುವೆ ಒಂದು ಅಸಂತುಲನವಿರುತ್ತದೆ; ಇವುಗಳೆಲ್ಲವೂ ಹೊಂದಾಣಿಕೆಯಾಗಬೇಕು. ಆಗ ಮಾತ್ರ ನಿಮಗೆ ಭೂಮಿಯಲ್ಲಿರುವ ಏನನ್ನಾದರೂ ಆನಂದಿಸಲು ಸಾಧ್ಯ.

ಮನಸ್ಸಿನಲ್ಲಿರುವ ಜ್ವರತೆ, ಸರಕುಗಳ ಲಭ್ಯತೆ ಮತ್ತು ಇಂದ್ರಿಯಗಳ ಸಾಮರ್ಥ್ಯ, ಅವುಗಳೆಲ್ಲವೂ ಹೆಚ್ಚಾಗಿ ಹೊಂದಿಕೆಯಾಗುವುದಿಲ್ಲ.

ಈಗ ಎಲ್ಲವೂ ಲಭ್ಯವಿದೆ ಎಂದಿಟ್ಟುಕೊಳ್ಳಿ. ನಿಮಗೆ ಹಸಿವಾಗುತ್ತಿದೆ, ನೀವು ಆಹಾರ ಸೇವಿಸಲು ಬಯಸುತ್ತೀರಿ ಮತ್ತು ನೀವದನ್ನು ಆನಂದಿಸಬಲ್ಲಿರಿ, ಆದರೆ ಅದು ಕೂಡಾ ಕ್ಷಣಿಕ. ಅದು ಕೆಲವು ಕ್ಷಣಗಳವರೆಗೆ ಉಳಿಯುತ್ತದೆ ಮತ್ತು ನಂತರ ಪುನಃ ನೀವು ಮೊದಲಿದ್ದಲ್ಲಿಗೇ ಹಿಂದಿರುಗುತ್ತೀರಿ. ವಿಷಯಗಳಿರುವುದು ಹೀಗೆಯೇ! ಮತ್ತು ಅದು ಏನನ್ನು ಉಂಟುಮಾಡುತ್ತದೆ? ಹತಾಶೆಯನ್ನು!

ಈಡೇರಿದ ಒಂದು ಬಯಕೆಯು ಹತಾಶೆಯನ್ನುಂಟುಮಾಡುತ್ತದೆ, ಈಡೇರದ ಒಂದು ಬಯಕೆ ಕೂಡಾ ಹತಾಶೆಯನ್ನುಂಟುಮಾಡುತ್ತದೆ. ನಾವೇನು ಮಾಡಬೇಕಾಗಿದೆ? ಉತ್ತರವೇನು? ಉತ್ತರವೆಂದರೆ ಒಳಗಡೆ ನೋಡುವುದು. ಆನಂದವೆಲ್ಲಿಂದ ಬರುವುದೋ ಆ ಸಂತೋಷದ ಮೂಲಕ್ಕೆ ಹೋಗಿ.

ನೀವು ಸಂತೋಷದ ಮೂಲಕ್ಕೆ ಹೋದಾಗ, ಇಂದ್ರಿಯಗಳು ಶಕ್ತವಾಗುತ್ತವೆ, ಮನಸ್ಸಿಗೆ ತೃಪ್ತಿ ಬರುತ್ತದೆ ಮತ್ತು ನೀವು ಬಯಸುವ ರೀತಿಯಲ್ಲಿ ವಿಷಯಗಳು ಲಭ್ಯವಾಗುತ್ತವೆ. ಇಂದ್ರಿಯಗಳನ್ನು ಒಳಮುಖವಾಗಿ ತಿರುಗಿಸಿದಾಗ ಎಲ್ಲಾ ಮೂರೂ ಸಂಭವಿಸುತ್ತವೆ ಮತ್ತು ಇಂದ್ರಿಯಗಳ ಆ ಅಂತರ್ಮುಖವಾಗಿ ತಿರುಗಿಸುವಿಕೆಯು ವೈರಾಗ್ಯವೆಂದು ಕರೆಯಲ್ಪಡುತ್ತದೆ.  

ಜೀವನದಲ್ಲಿ ನಮಗೆ ಮೂರು ವಿಷಯಗಳು ಬೇಕು, ವೈರಾಗ್ಯ, ಅನುರಾಗ ಮತ್ತು ಸಹಾನುಭೂತಿ. ಹೆಚ್ಚಾಗಿ ನಾವು, ವಿರಕ್ತಿಯೆಂದರೆ ಬಹಳ ಮಂಕಾಗಿರುವುದು, ಬೇಜಾರು ಹುಟ್ಟಿಸುವಂತಿರುವುದು ಮತ್ತು ನೀರಸವಾಗಿರುವುದು ಎಂದು ಯೋಚಿಸುತ್ತೇವೆ; ಈ ವೈರಾಗಿಗಳು ಎಂದು ಕರೆಯಲ್ಪಡುವವರು ಇರುವುದು ಹಾಗೆಯೇ, ಜೀವವಿಲ್ಲದಂತೆ. ಅಲ್ಲ, ಅದು ವಿರಕ್ತಿಯಲ್ಲ. ನನ್ನ ಪ್ರಕಾರ, ವಿರಕ್ತಿಯೆಂದರೆ, ಯಾವುದು ಜೀವಂತಿಕೆಯಿಂದ ತುಂಬಿರುವುದೋ, ಉತ್ಸಾಹದಿಂದ ತುಂಬಿರುವುದೋ ಅದು. ಸಂಸ್ಕೃತದಲ್ಲಿ ಒಂದು ಹಳೆಯ ಮಾತಿದೆ, "ವಿರಕ್ತಿಯು ನಿಮಗೆ ತರದಿರುವಂತಹ ಸುಖ, ಆನಂದ ಯಾವುದಿದೆ?" ಇದರರ್ಥವೇನೆಂದರೆ, ಜೀವನದಲ್ಲಿ ನಿಮಗೆ ಯಾವೆಲ್ಲಾ ಆನಂದದ ಬಯಕೆಯಿದೆಯೋ, ಅದನ್ನೆಲ್ಲಾ ವೈರಾಗ್ಯವು ನಿಮಗೆ ತರುತ್ತದೆ.

ನಿಮ್ಮಲ್ಲಿ ಅನುರಾಗವಿರಬೇಕು. ನೀವು ಉಸಿರನ್ನು ಒಳಕ್ಕೆಳೆದುಕೊಳ್ಳುವುದು ಅನುರಾಗವಾಗಿದೆ, ನೀವು ಉಸಿರನ್ನು ಹೊರಕ್ಕೆ ಬಿಡುವುದು ವಿರಕ್ತಿಯಾಗಿದೆ ಮತ್ತು ನಡುವೆಯಿರುವುದು ಸಹಾನುಭೂತಿಯಾಗಿದೆ.

ನಿಮ್ಮಲ್ಲಿ ಅನುರಾಗ ಮಾತ್ರವಿದ್ದರೆ, ನೀವು ಸುಸ್ತಾಗುತ್ತೀರಿ ಮತ್ತು ಹತಾಶರಾಗುತ್ತೀರಿ. ಅತಿಯಾದ ಅನುರಾಗವಿರುವ ಜನರು ಕೆಲಸಗಳನ್ನು ಮಾಡುತ್ತಾರೆ ಮತ್ತು ಬಳಲುತ್ತಾರೆ. ಯಾಕೆಂದು ನಿಮಗೆ ಗೊತ್ತೇ? ಅದು ಯಾಕೆಂದರೆ ಅವರು ಅದನ್ನು ಹಿಡಿದಿಟ್ಟುಕೊಳ್ಳುವುದರಿಂದ. ಅವರು ಅದಕನ್ನು ಮನಸ್ಸಿಟ್ಟು ಮಾಡುತ್ತಾರೆ. ಅವರು ಬಹಳಷ್ಟು ಶಕ್ತಿ ವ್ಯಯಿಸುತ್ತಾರೆ ಮತ್ತು ಆದರೂ ಅವರ ಕೈಗಳಿಗೆ ಏನೂ ಸಿಗುವುದಿಲ್ಲ. ಅದೊಂದು ಚಿಂತಾಜನಕ ಸ್ಥಿತಿ.

ವಿರಕ್ತಿಯೊಂದಿಗೆ ಇದು ಬದಲಾಗಬಲ್ಲದು ಮತ್ತು ಅದಕ್ಕಾಗಿಯೇ ವಿರಕ್ತಿಯು ಒಂದು ದೊಡ್ಡ ವ್ಯತ್ಯಾಸವನ್ನು ಮಾಡುವುದು.
ಹಾಗಾಗಿ, ನೀವು ಕೆಲಸ ಮಾಡುವಾಗ ಅನುರಾಗ, ನೀವು ಅಂತರ್ಮುಖವಾಗಿ ತಿರುಗುವಾಗ ವೈರಾಗ್ಯ ಮತ್ತು ಎಲ್ಲಾ ಸಮಯದಲ್ಲೂ ಸಹಾನುಭೂತಿ - ಇದು ಉಪಾಯ.

ಪ್ರಶ್ನೆ: ನಾವು ಪ್ರೀತಿಸುವವರೊಬ್ಬರು ಬೇರೊಬ್ಬರೊಂದಿಗೆ ಪ್ರೇಮದಲ್ಲಿರುವಾಗ ನಾವೇನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್: ನಿನ್ನ ಪ್ರೀತಿಯು ಬೇಷರತ್ತಿನದಾಗಿರಲು ಅದೊಂದು ಪರೀಕ್ಷೆ ಎಂಬುದಾಗಿ ತಿಳಿ. ಬೇಷರತ್ತಾಗಿ ಪ್ರೇಮದಲ್ಲಿರಲು ಅವರು ನಿನಗೊಂದು ಅವಕಾಶವನ್ನು ಕೊಡುತ್ತಿರುವರು.

ನೀನದನ್ನು, ಬಲಶಾಲಿಯಾಗಲು ಮತ್ತು ಪ್ರೇಮದಲ್ಲಿ ಬೆಳೆಯಲು, ನಿನ್ನ ಲಾಭಕ್ಕಾಗಿ ಉಪಯೋಗಿಸಬಹುದು ಅಥವಾ ನೀನು ಅಸಮಾಧಾನ, ಕೋಪ, ಹತಾಶೆ ಹಾಗೂ ಮತ್ಸರಗೊಳ್ಳಬಹುದು.

ನೀನು ಯಾವುದನ್ನು ಆಯ್ಕೆ ಮಾಡುವೆ? ಮಾತ್ಸರ್ಯದಲ್ಲಿ ಬೆಳೆದು, ನಿನ್ನೊಳಗೆ ಆ ಎಲ್ಲಾ ಮಾತ್ಸರ್ಯದ ಭಾವನೆಗಳನ್ನು ತುಂಬಿ, ನೊಂದು, ನಿನ್ನ ಕಂಪನಗಳನ್ನು ಹಾಳುಗೆಡವಿ ಬೆಳೆಯುವೆಯೋ ಅಥವಾ ಬೇರೊಬ್ಬರಿಗಾಗಿ ಸಂತೋಷಪಟ್ಟು, ನೀನು ಪ್ರೀತಿಸುವ ವ್ಯಕ್ತಿಗಾಗಿ ಒಳ್ಳೆಯದನ್ನು ಹಾರೈಸುವುದನ್ನೇ!

ಎರಡನೆಯ ಆಯ್ಕೆ ಕಷ್ಟವೆಂಬುದು ನನಗೆ ತಿಳಿದಿದೆ, ಆದರೆ ಮೊದಲನೆಯದು ಕೂಡಾ ಸುಲಭವೇನಲ್ಲ. ಮಾತ್ಸರ್ಯವನ್ನು ಹೊತ್ತುಕೊಂಡು ಅದರೊಂದಿಗೆ ನಡೆದಾಡುವುದು ಇನ್ನೂ ಹೆಚ್ಚು ಕಷ್ಟ, ಅಲ್ಲವೇ? ಇದರ ಬಗ್ಗೆ ಯೋಚಿಸು.

ಹೇಗಿದ್ದರೂ, ಜೀವನವು ಚಿಕ್ಕದು. ಎಲ್ಲವೂ ಒಂದು ದಿನ ಮುಕ್ತಾಯವಾಗಲಿದೆ. ಇದರ ಬಗ್ಗೆ ಯೋಚಿಸು, ನೀನು ಹೆಚ್ಚಿನ ಶಾಂತಿಯನ್ನು ಹೊಂದುವೆ.

ಯಾವಾಗೆಲ್ಲಾ ಏನಾದರೂ ನಿನಗೆ ತೊಂದರೆಯನ್ನುಂಟುಮಾಡುವುದೋ, ನಿನಗೆ ಅನ್ಯಾಯ, ಅಹಿತಕರದ ಅನುಭವವಾಗುವುದೋ ಅಥವಾ ನಿನಗೆ ನಿದ್ರಿಸಲು ಸಾಧ್ಯವಿಲ್ಲವೆಂದು ಅಥವಾ ಅದನ್ನು ನಿಭಾಯಿಸಲು ಸಾಧ್ಯವಿಲ್ಲವೆಂದು ನಿನಗನ್ನಿಸುವುದೋ ಆಗ, ಇದೆಲ್ಲವೂ ಕೊನೆಯಾಗಲಿದೆ ಎಂಬುದನ್ನು ಜ್ಞಾಪಿಸಿಕೋ! ಎಲ್ಲವೂ ಮುಕ್ತಾಯವಾಗಲಿದೆ, ಮತ್ತು ನೀನು ಇಲ್ಲಿಂದ ಹೋಗಿರುವೆ. ನಿನಗೆ ಚೆನ್ನಾಗಿ ನಿದ್ರಿಸಲು ಸಾಧ್ಯವಾಗುವುದು. ಮತ್ತೆ, ಇದು ವಿರಕ್ತಿ.

ಪ್ರಶ್ನೆ: ಐದರಿಂದ ಹದಿಮೂರನೆಯ ಆಯಾಮದ ವರೆಗೆ ಮತ್ತು ಕ್ವಾಂಟಮ್ ಭೌತಶಾಸ್ತ್ರ ಹಾಗೂ ಆಧ್ಯಾತ್ಮಿಕತೆಯ ಸಂಬಂಧದ ಬಗ್ಗೆ ದಯವಿಟ್ಟು ಚರ್ಚಿಸಿ.

ಶ್ರೀ ಶ್ರೀ ರವಿ ಶಂಕರ್: ವೇದಾಂತವು ಶುದ್ಧ ಕ್ವಾಂಟಮ್ ಭೌತಶಾಸ್ತ್ರವಾಗಿದೆ. ವೇದಾಂತ ಹೇಳುವುದು ಅಥವಾ ವೇದಗಳಲ್ಲಿನ ಜ್ಞಾನವು ಹೇಳುವುದೇನೆಂದರೆ, ಸಂಪೂರ್ಣ ಸೃಷ್ಟಿಯು ಒಂದೇ ಒಂದು ವಸ್ತುವಿನಿಂದ ಮಾಡಲ್ಪಟ್ಟಿದೆ, ಅಲ್ಲಿ ಎರಡಿಲ್ಲ. ಮತ್ತು ಸರಿಯಾಗಿ ಅದನ್ನೇ ಕ್ವಾಂಟಮ್ ಭೌತಶಾಸ್ತ್ರ ಹೇಳುವುದು, ಎಲ್ಲವೂ ಒಂದು ತರಂಗ ಪ್ರಕ್ರಿಯೆ ಎಂದು. ಹೀಗೆ, ಯಾವುದು ವಿಭಿನ್ನವಾಗಿ ತೋರುವುದೋ, ಅದು ಕೇವಲ ವಿಭಿನ್ನವಾಗಿ ಕಾಣಿಸುವುದಷ್ಟೆ, ಆದರೆ ವಾಸ್ತವವಾಗಿ, ಅದೆಲ್ಲವೂ ಒಂದು ಮಾತ್ರ.

ಇವತ್ತು ಪ್ರಪಂಚದಲ್ಲಿರುವ ಶ್ರೇಷ್ಠ ಭೌತವಿಜ್ಞಾನಿಗಳಲ್ಲೊಬ್ಬರು ಬೆಂಗಳೂರು ಆಶ್ರಮದಲ್ಲಿ ಮಾತನಾಡಿದರು. ಅವರಂದರು, "ನಾನು ಪದಾರ್ಥದ ಬಗ್ಗೆ ೪೦ ವರ್ಷಗಳ ಕಾಲ ಅಧ್ಯಯನ ಮಾಡಿದೆ, ಆದರೆ ತಿಳಿದಿದ್ದೇನೆಂದರೆ ಅದು ಅಸ್ತಿತ್ವದಲ್ಲೇ ಇಲ್ಲವೆಂಬುದು. ಅದು ಇಲ್ಲ!"

ಅವರು ಹೇಳುತ್ತಿದ್ದರು, "ನಾನು ಮಾತನಾಡುವಾಗ ಜನರು ಯೋಚಿಸುತ್ತಾರೆ, ನಾನು ಯಾವುದೋ ಪ್ರಾಚೀನ ತತ್ವಜ್ಞಾನವನ್ನು ಮಾತನಾಡುತ್ತಿರುವೆನೆಂದು. ಅದು ಸರಿಯೇ, ಯಾಕೆಂದರೆ ಇದೆಲ್ಲವೂ ಏನೂ ಅಲ್ಲ! ಇದನ್ನೇ ಆಧ್ಯಾತ್ಮಿಕ ಜ್ಞಾನವು ಹೇಳುವುದು, ಎಲ್ಲವೂ ಏನೂ ಅಲ್ಲ ಹಾಗೂ ಏನೂ ಅಲ್ಲದಿರುವುದು ಎಲ್ಲವೂ ಎಂದು.

ನಿಮ್ಮ ಧ್ಯಾನವು ಏನೂ ಅಲ್ಲದುದರೊಂದಿಗೆ ಇರುವ ಭೇಟಿ (ಅಪಾಯಿಂಟ್‌ಮೆಂಟ್) ಆಗಿದೆ!

ಪ್ರಶ್ನೆ: ಗುರುದೇವ, ಕಪಿಲ ಋಷಿಗಳ ಬಗ್ಗೆ ನೀವು ನಮಗೆ ಇನ್ನೂ ಹೆಚ್ಚು ಹೇಳಬಲ್ಲಿರಾ? ಅವರ ಬಗ್ಗೆ ಸ್ವಲ್ಪವೇ ಸ್ವಲ್ಪ ತಿಳಿದಿದೆಯಷ್ಟೆ.

ಶ್ರೀ ಶ್ರೀ ರವಿ ಶಂಕರ್: ಕಪಿಲ ಋಷಿಗಳು ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದರು. ಕ್ಯಾಲಿಫೋರ್ನಿಯಾವೆಂಬ ಹೆಸರು ಬಂದಿದ್ದು ಹಾಗೆ. ಕಪಿಲಾರಣ್ಯ ಎಂಬುದು ಕ್ಯಾಲಿಫೋರ್ನಿಯಾದ ವೈದಿಕ ಹೆಸರಾಗಿದೆ.

ಒಂದು ಕಾಲದಲ್ಲಿ, ಇಡಿಯ ದಕ್ಷಿಣ ಅಮೇರಿಕಾ ಮತ್ತು ಉತ್ತರ ಅಮೇರಿಕಾಗಳಲ್ಲಿ ವೈದಿಕ ಜ್ಞಾನವು ಪ್ರಚಲಿತವಾಗಿತ್ತು. ಕಪಿಲಾರಣ್ಯ ಮತ್ತು ಭಾರತದ ನಡುವಣ ಸಮಯದ ವ್ಯತ್ಯಾಸವು ೧೨ ಗಂಟೆಗಳಷ್ಟು ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಅಲ್ಲಿ ಹಗಲಾಗಿರುವಾಗ, ಇಲ್ಲಿ ರಾತ್ರಿಯಾಗಿರುತ್ತದೆ ಹಾಗೂ ಪ್ರತಿಕ್ರಮದಲ್ಲೂ ಹಾಗೆಯೇ; ಅದು ಕಪಿಲಾರಣ್ಯವೆಂದು ಕರೆಯಲಾದ ಕ್ಯಾಲಿಫೋರ್ನಿಯಾಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ.

ಕಪಿಲರು ದೇವಾಹುತಿಯೆಂಬ ಸ್ತ್ರೀಯ ಮಗನಾಗಿದ್ದರು. ಇವತ್ತಿನ ಡೆಟ್ರಾಯಿಟ್‌ಗೆ ದೇವಾಹುತಿಯೊಂದಿಗೆ ಸ್ವಲ್ಪ ಸಂಬಂಧವಿದೆ ಮತ್ತು ಡೆಟ್ರಾಯಿಟ್ ತನ್ನ ಹೆಸರನ್ನು ಪಡೆದುದು ಅಲ್ಲಿಂದಲೇ - ದೇವಾಹುತಿ.

ದೇವಾಹುತಿಯ ಮಗ ಕಪಿಲರು ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದರು. ಅವರು ಕೃಷ್ಣ ಪರಮಾತ್ಮನ ಮೊದಲಿನ ಅವತಾರವಾಗಿದ್ದರು. ಅವರು, ಸಾಂಖ್ಯ ದರ್ಶನವೆಂದು ಕರೆಯಲ್ಪಡುವ ತತ್ವಜ್ಞಾನದ ಸ್ಥಾಪಕರು.

ಸಾಂಖ್ಯವೆಂದರೆ, ಸಂಪೂರ್ಣ ವಿಶ್ವವು ಯಾವ ವಿವಿಧ ವಸ್ತುಗಳು ಮತ್ತು ತತ್ವಗಳಿಂದ ಮಾಡಲ್ಪಟ್ಟಿವೆಯೋ ಅವುಗಳನ್ನು; ಅಂದರೆ ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ, ಮೊದಲಾದವುಗಳನ್ನು ಎಣಿಸುವುದು. ಅದರಂತೆ, ಅವರ ಸಿದ್ಧಾಂತದಲ್ಲಿ ೨೪ ವಿವಿಧ ತತ್ವಗಳಿವೆ. ಅದಕ್ಕಾಗಿಯೇ ಅದು ಸಾಂಖ್ಯ ಯೋಗವೆಂದು ಕರೆಯಲ್ಪಡುತ್ತದೆ.

ಪ್ರಜ್ಞೆ ಮತ್ತು ಪದಾರ್ಥಗಳು ಹೇಗೆ ಬೇರೆ ಬೇರೆಯಾಗಿವೆ ಎಂಬುದರ ಬಗ್ಗೆ ಅವರು ಮಾತನಾಡುತ್ತಾರೆ ಹಾಗೂ ಪ್ರಜ್ಞೆ ಮತ್ತು ವಸ್ತುಗಳ ನಡುವಣ ಸಂಬಂಧದ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ.

ಭಗವದ್ಗೀತೆಯ ಎರಡನೆಯ ಅಧ್ಯಾಯ ಕೂಡಾ ಸಾಂಖ್ಯ ಯೋಗ ಎಂದು ಕರೆಯಲ್ಪಡುತ್ತದೆ. ಇಲ್ಲಿ ಕೃಷ್ಣ ಪರಮಾತ್ಮನು, ಮನಸ್ಸು ಮತ್ತು ಆತ್ಮಗಳು ಹೇಗೆ ವಸ್ತುವಿನಿಂದ ವ್ಯತ್ಯಸ್ತವಾಗಿವೆ ಹಾಗೂ ಆತ್ಮವು ಅಮರ ಎಂಬುದರ ಬಗ್ಗೆ ಮಾತನಾಡುತ್ತಾನೆ. ಈ ಆತ್ಮಜ್ಞಾನವು ಕೊಡಲ್ಪಟ್ಟಿದೆ.

ಪ್ರಶ್ನೆ: ಸಂಸ್ಕೃತಿಗಳು ಯಾಕೆ ಘರ್ಷಣೆಗೊಳಗಾಗುತ್ತವೆ? ಮನುಷ್ಯತ್ವವು ಮಾಯವಾಗುವುದು ಯಾಕೆ? ನೀವು ದಯವಿಟ್ಟು ಸ್ವಲ್ಪ ಬೆಳಕು ಚೆಲ್ಲುವಿರಾ?

ಶ್ರೀ ಶ್ರೀ ರವಿ ಶಂಕರ್: ಅದೊಂದು ಒಳ್ಳೆಯ ಪ್ರಶ್ನೆ. ಇವತ್ತು ಬೆಂಗಳೂರು ಮತ್ತು ಬೋಸ್ಟನ್‌ನಲ್ಲಿ ಒಂದು ಬಾಂಬ್ ಸ್ಫೋಟವಾಯಿತು. ಇದು ಅಸಹಿಷ್ಣುತೆಯಾಗಿದೆ; ಅಹಿಂಸಾ ಸಂಸ್ಕೃತಿಯು ಕಳೆದುಹೋಗುತ್ತಿದೆ. ಅದಕ್ಕಾಗಿಯೇ ನಾವೆಲ್ಲರೂ ನಮ್ಮ ಕೆಲಸವನ್ನು ಮಾಡಬೇಕಾದುದು. ನಿಮಗೆ ಹಾಗೆ ಅನ್ನಿಸುವುದಿಲ್ಲವೇ? ನಾವೆಲ್ಲರೂ ಜೊತೆಯಲ್ಲಿ ಸ್ವಲ್ಪ ಕೆಲಸ ಮಾಡೋಣವೇ?

ಭಾರತದಲ್ಲಿ ಕೂಡಾ, ದುರದೃಷ್ಟವಶಾತ್, ರಾಜಕಾರಣಿಗಳು ಈ ಪರಿಸ್ಥಿತಿಯನ್ನು ಹಾಳುಮಾಡಿದ್ದಾರೆ. ಜನರಿಗೆ ಸಾಮಾನ್ಯ ಶಿಕ್ಷಣ ಒದಗಿಸುವುದರ ಬದಲಾಗಿ ಅವರು, ಜಾತಿ ಆಧಾರಿತ ಶೈಕ್ಷಣಿಕ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತಾರೆ, ಅವುಗಳು ಕೇವಲ ಅಂತಹ ಅತಿರೇಕತೆಯನ್ನು ಪಾಲನೆ-ಪೋಷಣೆ ಮಾಡುತ್ತವೆಯಷ್ಟೆ. ಇದು ಬಹಳ ದುರದೃಷ್ಟಕರವಾಗಿದೆ.

ಈ ರೀತಿಯ ಧಾರ್ಮಿಕ ಅತಿರೇಕತೆಯು ಕೊನೆಯಾಗಬೇಕು, ಅಲ್ಲವಾದಲ್ಲಿ ಪ್ರಪಂಚವು ಒಂದು ಸುರಕ್ಷಿತ ಜಾಗವಾಗಿರದು.

ಸತ್ಯದ ಬಗ್ಗೆ, ವಾಸ್ತವದ ಬಗ್ಗೆ ಒಂದು ವಿಶಾಲವಾದ ತಿಳುವಳಿಕೆಯು ಆವಶ್ಯಕವಾಗಿದೆ. ಪ್ರತಿಯೊಂದು ಧರ್ಮವನ್ನೂ ಗೌರವಿಸಿ, ಪ್ರತಿಯೊಬ್ಬರನ್ನೂ ಗೌರವಿಸಿ. ನನ್ನ ದಾರಿ ಮಾತ್ರ ದೇವರ ಕಡೆಗಿರುವ ದಾರಿ, ಉಳಿದವರೆಲ್ಲರೂ ನರಕಕ್ಕೆ ಹೋಗುತ್ತಾರೆ, ನಾನು ಮಾತ್ರ ಸ್ವರ್ಗಕ್ಕೆ ಹೋಗುತ್ತೇನೆಂದು ನೀವು ಹೇಳಬೇಕಾಗಿಲ್ಲ. ಈ ರೀತಿಯ ಜನರು ಇತರ ಎಲ್ಲರಿಗೂ ನರಕವನ್ನು ಸೃಷ್ಟಿಸುತ್ತಾರೆ. ಧಾರ್ಮಿಕರಲ್ಲದವರನ್ನು ತೆಗೆದುಹಾಕುವುದರ ಮೂಲಕ ತಾವು ದೇವರ ಸೇವೆ ಮಾಡುತ್ತಿರುವೆವೆಂದು ಯೋಚಿಸುವುದು ಈ ಜನರೇ. ಇದು ಬಹಳ ದುರದೃಷ್ಟಕರವಾಗಿದೆ.

ಮಕ್ಕಳಿಗೆ ಶಿಕ್ಷಣ ನೀಡುವುದರ ಅಗತ್ಯವಿದೆ. ಇಲ್ಲದಿದ್ದರೆ, ಇದು ಮಾತ್ರ ಸತ್ಯ; ಇತರ ಎಲ್ಲರೂ ನಾಸ್ತಿಕರು ಮತ್ತು ಅವರಿಗೆ ಅಸ್ತಿತ್ವದಲ್ಲಿರುವ ಹಕ್ಕಿಲ್ಲವೆಂದು ಯೋಚಿಸುತ್ತಾ ಅವರು ಬೆಳೆಯುತ್ತಾರೆ. ಈ ರೀತಿಯ ಮನೋಭಾವವು ಅಪಾಯಕಾರಿಯಾಗಿದೆ.

ಇರುವ ಸಮಸ್ಯೆ ಇದು ಎಂದು ನಿಮ್ಮಲ್ಲಿ ಎಷ್ಟು ಮಂದಿಗೆ ಅನ್ನಿಸುತ್ತದೆ? ನಾವು ಈ ಮನೋಭಾವವನ್ನು ಬದಲಾಯಿಸಬೇಕಾಗಿದೆ, ಒಂದು ವಿಶಾಲ ಶ್ರೇಣಿಯ ತಿಳುವಳಿಕೆಯನ್ನು ತರಬೇಕಾಗಿದೆ, ಮತ್ತು ಅದಕ್ಕಾಗಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ.

ನಾವು ಮಾತನಾಡುತ್ತಿರುವಂತೆಯೇ, ಇರಾಕಿನಲ್ಲಿ ಒಂದು ಕಾರ್ಯಕ್ರಮ ನಡೆಯುತ್ತಿದೆ. ಆರೋಗ್ಯ ಸಚಿವರು ಮತ್ತು ಕ್ರೀಡಾ ಸಚಿವರು ಬಂದು, ಇರಾಕಿನಲ್ಲಿ ಯುವಕರು ಸಂಘಟಿಸಿದ್ದ ನಮ್ಮ ಕೋರ್ಸನ್ನು ಉದ್ಘಾಟಿಸಿದರು.

ಇವತ್ತು ಅವರು ಎರಡನೆಯ ಸುದರ್ಶನ ಕ್ರಿಯೆಯನ್ನು ಮಾಡಿದರು ಮತ್ತು ಅವರ ತಿಳುವಳಿಕೆಯಲ್ಲಿ ಒಂದು ಸಂಪೂರ್ಣ ಪರಿವರ್ತನೆಯಾಗಿದೆ. ಈ ಯುವಕರು ಈಗ ಸಾರ್ವಜನಿಕರನ್ನು ತಲುಪಲು, ಅವರು ಯೋಗ, ಧ್ಯಾನ ಮತ್ತು ಸುದರ್ಶನ ಕ್ರಿಯೆಗಳನ್ನು ಮಾಡುವಂತೆ ಮಾಡಲು ಬಯಸುತ್ತಿದ್ದಾರೆ. ಇದು ಬಹಳ ಒಳ್ಳೆಯ ಸಮಾಚಾರ. ನಾವಿದನ್ನು ಮಾಡಬೇಕು; ನಾವು ಇನ್ನೂ ಹೆಚ್ಚಿನ ಜನರನ್ನು ತಲುಪಬೇಕು.

ಪ್ರಶ್ನೆ: ಒಂದು ಕೆಲಸದ ಅಥವಾ ಒಂದು ಸಂಬಂಧದ ಆರಂಭವು ಯಾವತ್ತೂ ಅದ್ಭುತವಾಗಿರುತ್ತದೆ; ಅದನ್ನು ಉಳಿಸುವುದು ಕಷ್ಟ. ಅದು ಕೊನೆಯಾಗುತ್ತದೆಯೆಂಬಷ್ಟರಲ್ಲಿಯೇ ನಾನು ಆ ವ್ಯಕ್ತಿ ಅಥವಾ ಆ ಪರಿಸ್ಥಿತಿಯಿಂದ ನನ್ನನ್ನೇ ಬಿಡಿಸಿಕೊಳ್ಳುವತ್ತ ಒಲವು ತೋರುತ್ತೇನೆ. ನಾನು ನನ್ನ ಶಕ್ತಿಯನ್ನು ಉದ್ದಕ್ಕೂ ಉಳಿಸಿಕೊಳ್ಳುವುದು ಹೇಗೆ?------

ಶ್ರೀ ಶ್ರೀ ರವಿ ಶಂಕರ್: ಆ ಸಂಪೂರ್ಣ ಭೂತಕಾಲವನ್ನು ಬಿಟ್ಟುಬಿಡು, ಈಗ ಎಚ್ಚೆತ್ತುಕೋ! "ಓ, ನಾನು ಬಲಹೀನ, ನನಗಿದನ್ನು ಮಾಡಲು ಸಾಧ್ಯವಿಲ್ಲ, ನನಗೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ" ಎಂದು ನಿನಗೆ ನೀನೇ ಗುರುತುಪಟ್ಟಿ ಹಚ್ಚಿಕೊಳ್ಳಬೇಡ. ಅದೆಲ್ಲವೂ ಹಿಂದಿನದಾಗಿತ್ತು!

ನೀನು ಏನಾಗಿರುವೆ ಅಥವಾ ನೀನು ಯಾರು ಎಂಬುದು ನಿನಗೆ ತಿಳಿಯದೆಂಬುದನ್ನು ಸ್ವೀಕರಿಸು. ನಿನ್ನಲ್ಲಿ ಎಷ್ಟು ಶಕ್ತಿಯಿದೆ ಎಂಬುದು ನಿನಗೆ ತಿಳಿಯದು; ನಿನಗೇನು ಮಾಡಲು ಸಾಧ್ಯವಿದೆಯೆಂಬುದು ನಿನಗೆ ತಿಳಿಯದು ಎಂಬುದನ್ನು ಸ್ವೀಕರಿಸು ಮತ್ತು ಅಷ್ಟೇ! ನಿನ್ನ ಮೂಲಕ ಶಕ್ತಿಯ ಒಂದು ಹೊಸ ಅಲೆಯು ಪ್ರವಹಿಸುವುದನ್ನು ನೀನು ಕಾಣುವೆ ಮತ್ತು ನಿನ್ನ ಸಂಪೂರ್ಣ ಮನೋಭಾವ, ನಿನ್ನ ವರ್ತನೆ, ನಿನ್ನ ಗ್ರಹಿಕೆ ಹಾಗೂ ನಿನ್ನ ಅಭಿವ್ಯಕ್ತಿ ಎಲ್ಲವೂ ಬದಲಾಗುವುದು.

ನೀನು ಸ್ವ-ಇಚ್ಛೆಯಿಂದಲೋ ಅಥವಾ ಇಚ್ಛೆಯಿಲ್ಲದೆಯೋ ನಿನ್ನ ಮೇಲೆ ಹಾಕಿಕೊಂಡಿರುವ ಎಲ್ಲಾ ಗುರುತುಪಟ್ಟಿಗಳನ್ನು ನೀನು ಸುಮ್ಮನೇ ತೆಗೆದುಹಾಕಬೇಕು. ತಿಳಿಯಿತೇ?

ಪ್ರಶ್ನೆ: ಒಬ್ಬರು ಗುರುವು ಒಬ್ಬ ವ್ಯಕ್ತಿಯನ್ನು ನೋಡುವಾಗ ಅವರು ಆ ವ್ಯಕ್ತಿಯನ್ನು ನೋಡುವುದಿಲ್ಲವೆಂದೂ, ಬದಲಾಗಿ ಅವನ ಪ್ರಭಾವಲಯವನ್ನು ನೋಡುವರೆಂದೂ ನನಗೆ ಹೇಳಲಾಗಿದೆ. ಇದು ನಿಜವೇ?

ಶ್ರೀ ಶ್ರೀ ರವಿ ಶಂಕರ್: ನೀನು ಊಹಿಸುತ್ತಾ ಇರೆಂದು ನಾನು ಬಯಸುತ್ತೇನೆ.

ಸೋಮವಾರ, ಏಪ್ರಿಲ್ 15, 2013

ಕೆಲಸ ಸದಾ ಆಯಾಸದಾಯಕ ಎನಿಸುತ್ತಿದೆಯೇ?

ರೆಜೀನಾ, ಕ್ಯಾನಡಾ
೧೫.೦೪.೧೩

ಲ್ಲಿರಲು ಬಹಳ ಆನಂದವಾಗಿದೆ!

ರೆಜೀನಾ ಒಂದು ಶಾಂತ ಮನಸ್ಕರ ಮತ್ತು ಸಹೃದಯಿಗಳ ಸ್ಥಳವೆಂದು ಕಾಣಿಸುತ್ತದೆ. ಸಾಮಾನ್ಯವಾಗಿ ದೊಡ್ಡ ಪಟ್ಟಣಗಳಲ್ಲಿ ಜನರು ಬಿಸಿಯಾದ ಮನಸ್ಸುಳ್ಳವರಾಗಿ ನಿರ್ದಯಿಗಳಾಗಿರುತ್ತಾರೆ. ಸ್ವಲ್ಪ ಸಣ್ಣ ಪಟ್ಟಣಗಳಲ್ಲಿ, ಏಕತೆ ಇದೆ, ಜನರು ಒಂದಾಗಿ ಬೆರೆತುಕೊಳ್ಳುತ್ತಾರೆ. ನಾವು ಈ ಸಹೃದಯವಂತಿಕೆಯನ್ನು ಹಬ್ಬುವ ಸಂಸ್ಕೃತಿಯನ್ನು ಇಟ್ಟುಕೊಳ್ಳಬೇಕು.

ಹಿಂಸಾ-ಮುಕ್ತ ಸಮಾಜ, ರೋಗ-ಮುಕ್ತ ಶರೀರ, ದ್ವಂದ-ಮುಕ್ತ ಮನಸ್ಸು, ಹಿಂಜರಿಕೆ-ಮುಕ್ತ ವಿಚಾರವಂತಿಕೆ, ಆತಂಕ-ಮುಕ್ತ ನೆನಪು ಮತ್ತು ದುಃಖ-ಮುಕ್ತ ಆತ್ಮ ಇವು ಪ್ರತಿ ಓರ್ವರ ಜನ್ಮಸಿದ್ಧ ಹಕ್ಕು. ಜೀವನ ಕಲೆ ಸಂಸ್ಥಾನವು ಇದರಲ್ಲೇ ನಿರತವಾಗಿರುವುದು; ಸಂಘ-ಭಾವನೆಯನ್ನು ಸೃಷ್ಟಿಸುವುದು. ನಾವೆಲ್ಲರೂ ಒಂದು ಮಾನವ ಕುಟುಂಬಕ್ಕೆ ಸೇರಿರುವೆವು.
ನಾವು ಪ್ರಾರ್ಥಿಸುವ ರೀತಿ ಬೇರೆಯಾಗಿರಬಹುದು, ನಾವು ಜೀವನದಲ್ಲಿ ಆಚರಿಸುವ ಥರ ಬೇರೆಯಾಗಿರಬಹುದು, ನಮ್ಮ ಭಾಷೆ ಮತ್ತು ನಮ್ಮ ರೀತಿಗಳು ಬೇರೆಯದಾಗಿರಬಹುದು, ಆದರೆ ನಾವೆಲ್ಲರೂ ಒಂದು ಮಾನವ ಕುಟುಂಬಕ್ಕೆ ಸೇರಿದವರು. ನಾವಿದನ್ನು ಮರೆತಾಗ, ಮಾನವ ಸಂಕುಲ ಅನಾಹುತದೆಡೆಗೆ ಸಾಗುತ್ತದೆ.

ನೋಡಿ ಲೋಕದಲ್ಲಿ ಸುತ್ತಲೂ ಏನಾಗುತ್ತಿದೆ? ಪಾಠಶಾಲೆಗಳಲ್ಲಿ ಹಿಂಸಾಚಾರ ನಡೆಯುತ್ತದೆ. ಸಣ್ಣ ಮಕ್ಕಳನ್ನು ಶಾಲೆಗೆ ಕಳಿಸುವಾಗಲೂ ಜನರು ಅರಕ್ಷಿತತೆ ಅನುಭವಿಸುತ್ತಾರೆ. ಕೇವಲ ಅಮೆರಿಕಾದಲ್ಲಿ ಒಂದು ವರ್ಷಕ್ಕೆ ದಶಲಕ್ಷ ಹಿಂಸಾ ಕೃತ್ಯಗಳು ನಡೆಯುತ್ತವೆ ಎಂದು ಕೇಳಿದಾಗ,ಪ್ರತಿಯೊಂದು ಹಿಂಸಾ ಕೃತ್ಯಕ್ಕೆ ಪ್ರತಿಯಾಗಿ ನೂರುಕೋಟಿ ಅಹಿಂಸಾ ಕೃತ್ಯ ಎಸಗುವುದು ಎಂಬ ವಿಚಾರ ನನಗೆ ಬಂತು. ನಾವು ಈಗಿನ ಪರಿಸ್ಥಿತಿಯನ್ನು ಬದಲಾಯಿಸಬೇಕು; ಅದನ್ನು ಪರಿವರ್ತಿಸಬೇಕು. ಹಿಂಸೆಯ ಪ್ರತಿಯೊಂದು ಕೃತ್ಯಕ್ಕೂ ನಾವು ನೂರು ಅಹಿಂಸಾ ಕೃತ್ಯಗಳಿಂದ ಪರಿಹಾರ ನೀಡಬೇಕು.

ಕನೆಕ್ಟಿಕಟ್.ನ ದುರದೃಷ್ಟಕರ ಘಟನೆಯ ಬಗ್ಗೆ ಕೇಳಿದಾಗ, ನಾನು ಯೋಚಿಸಿದೆ, ನಾನು ಸುತ್ತಲೂ ಪರ್ಯಟನ ಮಾಡಿ ಎಲ್ಲರಲ್ಲೂ ಮಾತನಾಡಿ, ನಾವೆಲ್ಲರೂ ಹಿಂಸೆಯನ್ನು ಹೇಗೆ ಕಡಿಮೆಗೊಳಿಸಬಹುದೆಂದು ನೋಡಲು ಪ್ರತಿಯೊಬ್ಬರಲ್ಲೂ ಪ್ರಮಾಣ ತೆಗೆದುಕೊಳ್ಳಲು ಹೇಳಬೇಕು. ನೀವೆಲ್ಲರೂ ಏನನ್ನುತ್ತೀರಿ?

ನಮಗೆ ಈ ತೊಂದರೆಗಳು; ಖಿನ್ನತೆ, ಸಾಂಸಾರಿಕ(ಗೃಹಸಂಬಂಧೀ) ಹಿಂಸೆ, ಮತ್ತು ಸಾಮಾಜಿಕ ಹಿಂಸೆ; ಲೋಕದ ಎಲ್ಲೆಡೆಯಲ್ಲೂ ಇವೆ. ಯಾಕೆಂದರೆ ನಾವು ನಮ್ಮೊಳಗೇ ಮತ್ತು ನಮ್ಮ ಸುತ್ತಲಿನ ಎಲ್ಲರೊಂದಿಗೆ ಸಂಪರ್ಕ ಹೊಂದುವುದನ್ನು ಮರೆತಿದ್ದೇವೆ. ನಮ್ಮ ಜೀವನವನ್ನು ಸಾರ್ಥಕವಾಗಿಸುವುದು ಕೇವಲ ಇದು ಒಂದೇ ಒಂದು ವಿಷಯ.

ಜೀವನದಲ್ಲಿ ಪ್ರೀತಿ ಇದ್ದಾಗ ಮಾತ್ರ ಅದು ಯೋಗ್ಯವಾಗಿರುತ್ತದೆ. ಪ್ರೀತಿ, ಸಹಾನುಭೂತಿ ಮತ್ತು ಬಂಧುತ್ವ ಇಲ್ಲದ ಜೀವನವನ್ನು ಒಮ್ಮೆ ಕಲ್ಪನೆ ಮಾಡಿ. ಮನುಷ್ಯತ್ವವು ಖಿನ್ನತೆಯಲ್ಲಿ ಮುಳುಗುತ್ತಿತ್ತು. ನಾವು ಈ ಉತ್ಸವ ಮತ್ತು ಜೊತೆಗಿರುವಿಕೆಯ ಭಾವವನ್ನು ಸಮುದಾಯಗಳಲ್ಲಿ ಮತ್ತು ಕುಟುಂಬಗಳಲ್ಲಿ ಸೃಷ್ಟಿಸಬೇಕು. ನಾವು ನಮ್ಮ ಕಾರ್ಯಕ್ರಮವನ್ನು (ಪ್ರತಿಯೊಂದು ಹಿಂಸಾ ಕೃತ್ಯಕ್ಕೆ ಪ್ರತಿಯಾಗಿ ನೂರು ಕೋಟಿ ಅಹಿಂಸಾ ಕೃತ್ಯ ಎಸಗುವುದು) ಇದನ್ನೇ ಗಮನದಲ್ಲಿಟ್ಟು ಪ್ರಾರಂಭಿಸಿರುವುದು. ಎಲ್ಲಿ ಅತ್ಯಗತ್ಯವಾಗಿತ್ತೋ ಅಂಥಲ್ಲಿ ಅದು ನಿಜವಾಗಿಯೂ ಮನಮುಟ್ಟಿದೆ; ಸೆರೆಮನೆಗಳಲ್ಲಿ, ಶಾಲೆ ಮತ್ತು ತರಗತಿಗಳಲ್ಲಿ. ಅಷ್ಟೊಂದು ಸ್ವಯಂಸೇವಕರು ಜಗತ್ತಿನಾದ್ಯಂತದಿಂದಲೂ ಈ ಕಾರ್ಯಕ್ರಮಕ್ಕಾಗಿ ಕೆಲಸಕ್ಕಿಳಿದಿರುವುದು ನಾನು ಸಂತುಷ್ಟನಾಗಿದ್ದೇನೆ.

ಜೀವನಕಲೆಯು ಐದು ಸಿದ್ಧಾಂತಗಳ ಮೇಲೆ ಆಧರಿಸಿದೆ:

೧. ವಿರುದ್ಧಾತ್ಮಕ ಮೌಲ್ಯಗಳು ಪರಸ್ಪರ ಪೂರಕವಾಗಿವೆ: ಜೀವಮದಲ್ಲಿ ಎಲ್ಲವೂ ನಮಗೆ ಬೇಕಾದಂತೆ ನಡೆಯುವುದಿಲ್ಲ, ಕೆಲವೊಮ್ಮೆ ಕೆಲಸ ಕೆಟ್ಟುಹೋಗುತ್ತವೆ. ನಾವದನ್ನು ಸ್ವೀಕರಿಸಬೇಕು, ಅದರಿಂದ ಕಲಿತುಕೊಳ್ಳಬೇಕು ಮತ್ತು ಮುನ್ನಡೆಯಬೇಕು. ನಾವು ಸಮಚಿತ್ತತೆ ಉಳಿಸಿಕೊಳ್ಳಬೇಕು, ಪರಿಸ್ಥಿತಿ ಹಿತಕರವಾಗಿರಲಿ ಅಥವಾ ಅಹಿತಕರವಾಗಿರಲಿ. ಇದು ಮನುಷತ್ವಕ್ಕೆ ಇರಬೇಕಾದ ಮೂಲಭೂತ ಸಿದ್ಧಾಂತಗಳಲ್ಲೊಂದು ಎಂದು ನನ್ನ ಸಲಹೆ.

ನಾವು ನಮ್ಮ ವಿವೇಕ ಮತ್ತು ಯುಕ್ತಾಯುಕ್ತತೆಗಳ ಅರಿವನ್ನು ಯಾವುದೇ ಪರಿಸ್ಥಿತಿಯಲ್ಲಿ ಕಳೆದುಕೊಳ್ಳಬಾರದು. ನಾವದನ್ನು ಹೇಗೆ ಮಾಡಬಹುದು?

ಯಾವುದರಿಂದ ಮನಸ್ಸು ಒತ್ತಡದಿಂದ ಮುಕ್ತವಾಗಿ ವರ್ತಮಾನ ಕ್ಷಣದಲ್ಲಿ ಇರುವಂತೆ ಮಾಡಬಹುದೋ ಅಂಥ ಕೆಲವೊಂದು ಉಸಿರಾಟದ ಪ್ರಕ್ರಿಯೆಗಳನ್ನು ಮತ್ತು ವ್ಯಾಯಾಮಗಳನ್ನು ನಾವು ರೂಪಿಸಿದ್ದೇವೆ.

೨. ಜನರನ್ನು ಮತ್ತು ಪರಿಸ್ಥಿತಿಗಳನ್ನು ಅವು ಇರುವಂತೆ ಸ್ವೀಕರಿಸಿ: ನಾವು ಪರಿಸ್ಥಿ ಸ್ವೀಕರ ಮಾಡದೇ ಇದ್ದರೆ ಪರಿಸ್ಥಿತಿಗಳು ಬದಲಾಗುವುದಿಲ್ಲ, ಅಲ್ಲವೇ? ನೀವು ಸ್ವೀಕರಿಸಿದಾಗ, ಕನಿಷ್ಟ ಪಕ್ಷ, ನಿಮ್ಮ ಮನಸ್ಸು ಹೆಚ್ಚು ಏಕಾಗ್ರವಾಗುತ್ತದೆ. ಆಗ, ನೀವು ಬದಲಾವಣೆ ಉಂಟಾಗಲು ಸಹಾಯವಾಗುತ್ತೀರಿ.

೩. ಇತರರ ತಪ್ಪುಗಳ ಹಿಂದೆ ಉದ್ದೇಶ ಹುಡುಕಬೇಡಿ: ಒಬ್ಬ ಅತಿ ದುಷ್ಟ ಅಪರಾಧಿಯಲ್ಲೂ, ಒಬ್ಬ ನೊಂದ ಬಲಿಪಶು ಅಂತರಾಳದಲ್ಲಿ ಸಹಾಯಕ್ಕಾಗಿ ಅಳುತ್ತಿರುವುದನ್ನು ನೀವು ಪಡೆಯುತ್ತೀರಿ. ನಿಮಗಿದನ್ನು ನೋಡಲು ಸಾಧ್ಯವಾದಾಗ, ನಿಮ್ಮಲ್ಲಿ ದ್ವೇಷವಿರದೆ ಸಹಾನುಭೂತಿ ಇರುತ್ತದೆ.

೪. ಇತರರ ಅಭಿಪ್ರಾಯದ ಕಾಲ್ಚೆಂಡಾಗಬೇಡಿ.

೫. ವರ್ತಮಾನ ಕ್ಷಣದಲ್ಲಿ ಬದುಕಿ.

ಇವು ಕೆಲವು ಬಹಳ ಮೂಲಭೂತವಾದ ಸಿದ್ಧಾಂತಗಳು, ಇವು ನಮ್ಮೊಳಗೆಯೇ ಮತ್ತು ಕುಟುಂಬದೊಳಗೆ ಶಾಂತಿಯನ್ನು ಸೌಹಾರ್ದ ಭಾವವನ್ನು ತಂದುಕೊಳ್ಳಲು ಅಗತ್ಯ, ಅಲ್ಲವೇ? ಇದು ಯಾಕೆಂದರೆ ಕುಟುಂಬದೊಳಗೆ ನಾವು ಸರಿ ಅಂದುಕೊಂಡ ರೀತಿಯಲ್ಲಿ ಎಲ್ಲವೂ ನಡೆಯಬೇಕು ಎಂದು ನಮಗಿರುತ್ತದೆ. ಹೇಗಿದ್ದರೂ, ಇದು ಯಾವತ್ತೂ ನಡೆಯುವುದಿಲ. ನಾವು ಯಾವತ್ತೂ ಉಳಿದವರ ದೃಷ್ಟಿಕೋನಗಳಿಗೆ ಅವಕಾಶ ಕಲ್ಪಿಸಿಕೊಡಬೇಕು.

ಇದನ್ನು ಸಾಧಿಸುವುದಕ್ಕಾ ಉಸಿರಾಟ ಒಂದು ಮುಖ್ಯ ಉಪಕರಣವಾಗಿದೆ. ಪ್ರತಿಯೊಂದು ಭಾವನೆಗೂ ಒಂದು ನಿರ್ದಿಷ್ಟ ಉಸಿರಾಟದ ಲಯವಿದೆ.

ಪುರಾತನ ದಿನಗಳಲ್ಲಿ, ಈ ಜ್ಞಾನವನ್ನು ಅತ್ಯಂತ ಸಂರಕ್ಷಣೆಯಿಂದ ಒಂದು ರಹಸ್ಯವಾಗಿ ಕಾಪಾಡಿದ್ದರು. ಅದನ್ನು ಕೇವಲ ರಾಜ ಕುಟುಂಬದವರಿಗೆ ಮತ್ತು ಕೆಲವು ವಿಶಿಷ್ಟ ವ್ಯಕ್ತಿಗಳಿಗೆ ಕೊಡುತ್ತಿದ್ದರು. ನನ್ನ ಅಭಿಪ್ರಾಯದಲ್ಲಿ, ಇದನ್ನು ಸಂಪೂರ್ಣ ಜನಸಮುದಾಯಕ್ಕೆ, ಮೊಬೈಲ್ ಫೋನ್ ಗಳಂತೆ ಒದಗಿಸಬೇಕು. ನಾವು ಎಲ್ಲರಿಗೂ ತಮ್ಮ ಮನಸ್ಸನ್ನು ಹೇಗೆ ನಿಭಾಯಿಸುವುದು ಎಂಬ ಜ್ಞಾನವನ್ನು ನೀಡಬೇಕು; ಇದು ಅವಷ್ಯಕವಾಗಿದೆ. ಮತ್ತು ನಾವಿದನ್ನು ಮೂವತ್ತೆರಡು ವರ್ಷಗಳಿಂದ ಮಾಡುತ್ತಿದ್ದೇವೆ.

ನಾವೊಂದು ಹಿಂಸಾ-ಮುಕ್ತ ಸಮಾಜವನ್ನು ಸೃಷ್ಟಿಸಬೇಕು, ಇಂದು ನಾವೆಲ್ಲರೂ ಇದನ್ನು ನಮ್ಮ ಹೃದಯದಲ್ಲಿ ಸ್ಥಾಪಿಸೋಣ.
ನಮ್ಮ ಸಂಸ್ಕೃತಿ, ಕ್ರೀಡೆ, ವ್ಯವಹಾರ ಮತ್ತು ನಮ್ಮ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈ ಅಹಿಂಸೆಯ ಜ್ಞಾನವನ್ನು ನಾವು ಸಮಗ್ರವಾಗಿಸಬೇಕು. ಇವೆಲ್ಲವುಗಳಲ್ಲೂ ಇದು ಇರಬೇಕಾಗಿದೆ. ಘರ್ಷಣೆಗೊಳಗಾದಾಗ ನಮ್ಮ ಮನಸ್ಸನ್ನು ಹೇಗೆ ಶಾಂತಗೊಳಿಸುವುದು ಎಂದು ನಾವೆಲ್ಲರೂ ಕಲಿಯಬೇಕು.

ಈಗ ನೀವೆನ್ನಬಹುದು, ’ಹೌದು, ಇದು ನನ್ನ ಮನಸ್ಸಿನಲ್ಲಿದೆ, ಆದರೆ ಇದನ್ನು ದಿನನಿತ್ಯ ಜೀವನದಲ್ಲಿ ಕಾರ್ಯರೂಪಕ್ಕೆ ಹೇಗೆ ತರುವುದು. ಅಸಮಾಧಾನಗೊಳ್ಳುವುದು, ಸಿಟ್ಟಾಗುವುದು ಅಥವಾ ಖಿನ್ನವಾಗುದು ಒಳ್ಳೆಯದಲ್ಲ ಎಂದು ನನಗೆ ಗೊತ್ತು. ಅದನ್ನು ನಾನು ಹೇಗೆ ಮಾಡದೇ ಇರುವುದು/ತಪ್ಪಿಸುವುದು?’

ಇಲ್ಲಿಯೇ ಧ್ಯಾನ ಮತ್ತು ಉಸಿರಾಟದ ಪ್ರಕ್ರಿಯೆಗಳು ಉಪಯುಕ್ತವಾಗುವುದು. ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಸಹಾಯವಾಗುವುದು ಈ ಉಪಕರಣಗಳು, ಇದರಿಂದ ನೀವು ಒಳಗಿನಿಂದ ಸಂತುಷ್ಟರಾಗಿರುತ್ತೀರಿ. ನೀವು ಸಂತುಷ್ಟರಾಗಿದ್ದಾಗ, ನಿಮ್ಮಿಂದ ಎಲ್ಲರಿಗೂ ಒಳ್ಳೆಯದಾಗುವಂಥ ಕೆಲಸಗಳೇ ನಡೆಯುವುದು ಸಾಧ್ಯ.

ಯಾರು ಅಸಂತುಷ್ಟರಾಗಿರುತ್ತಾರೋ, ಅವರು ತಮಗೆ ಮತ್ತು ಉಳಿದವರಿಗೆ ಕೆಟ್ಟದಾದ ಕೃತ್ಯಗಳನ್ನೇ ಮಾಡಲಾಗುತ್ತದೆ. ಇದುವೇ ನಡೆಯುವಂಥದ್ದು. ಅವರಿಗೆ ಆ ಉದ್ದೇಶವಿದೆಯೋ ಇಲ್ಲವೋ, ಯಾರಾದರೂ ಅಸಂತುಷ್ಟವಾಗಿದ್ದರೆ, ಅವರು ಜೀವನಕ್ಕೆ ಪೂರಕವಲ್ಲದ ಚಟುವಟಿಕೆಗಳನ್ನು ಮಾಡಲು ಬದ್ಧರಾಗುತ್ತಾರೆ. ಇದು ನಾನು ಗಮನಿಸಿದಂಥದ್ದು. ಆನಂದ ನಮ್ಮ ನಿಜವಾದ ಸ್ವಭಾವ. ನಾವು ಸಂತೋಷದ ಅಲೆಗಳನ್ನೆಬ್ಬಿಸಬೇಕು. ಇದು ಕೇವಲ ಹೆಚ್ಚುಗೆಯಿಂದ ಬರುವುದಲ್ಲ.

ಪ್ರ: ಗುರುದೇವ, ನಾನು ಯಾವುದೇ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕೆಂದಿದ್ದರೆ, ನಾನು ಬಹಳ ಒತ್ತಡಕ್ಕೊಳಗಾಗುತ್ತೇನೆ, ಉದಾಹರಣೆ ಉದ್ಯೋಗದಲ್ಲಿ. ನನಗೆ ತಪ್ಪಿಸಲಾಗದ ನಿರಂತರ ಒತ್ತಡ ಉಂಟಾಗುತ್ತದೆ, ಅದರಿಂದ ನನಗೆ ಚೆನ್ನಾಗಿ ನಿದ್ದೆ ಮಾಡಲಾಗುವುದಿಲ್ಲ. ಹೇಗೆ ಶಾಂತಿ ಪಡೆಯುವುದು?

ಶ್ರೀ ಶ್ರೀ: ಒತ್ತಡ ಎಂದರೇನು ಎಂದು ನಿಮಗೆ ಗೊತ್ತೇ? ತುಂಬಾ ಕೆಲಸ, ಬಹಳ ಕಡಿಮೆ ಸಮಯ ಮತ್ತು ನಿಶ್ಶಕ್ತಿ, ಅದನ್ನು ಒತ್ತಡ ಎನ್ನುವುದು.

ಹಾಗಾಗಿ ನೀವು ಒಂದಾ ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ, ಅಥವಾ ನಿಮ್ಮ ಕೆಲಸದ ಹೊರೆಯನ್ನು ಕಡಿಮೆ ಮಾಡಿಕೊಳ್ಳಿ. ನಿಸ್ಸಂಶಯವಾಗಿ ನಿಮಗೆ ನಿಮ್ಮ ಕೆಲಸದ ಹೊರೆಯನ್ನು ಕಡಿಮೆ ಮಾಡಲಾಗುವುದಿಲ್ಲ, ಅಥವಾ ಸಮಯವನ್ನು ಹೆಚ್ಚಿಸಲಾಗುವುದಿಲ್ಲ, ಆದರೆ ನಿಮಗೆ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದು. ನಿಮ್ಮ ಶಕ್ತಿಯ ಮಟ್ಟ ಇನ್ನೂ ಏರಿದರೆ, ಆಗ ನಿಮಗೆ ನಿಮ್ಮ ಕೆಲಸವನ್ನು ಸುಲಭದಲ್ಲಿ ಮಾಡಬಹುದು.

ಈ ಎಲ್ಲಾ ಉಸಿರಾಟದ ಪ್ರಕ್ರಿಯೆಗಳು ಶಕ್ತಿಯ ಮಟ್ಟವನ್ನೇರಿಸಲು ಸಹಾಯವಾಗುತ್ತವೆ. ಕೇವಲ ಹತ್ತು ನಿಮಿಷ ಕಾಲ ಪ್ರಾಣಾಯಾಮ ಉಸಿರಾಟವನ್ನು ಬೆಳಗ್ಗೆ ಮಾಡಿ, ಮತ್ತೆ ನೀವು ಹೋಗಿ ಯಾವುದೇ ಕೆಲಸವನ್ನು ಮಾಡಬಹುದು. ನೀವು ಕೆಲಸದಿಂದ ಮರಳಿ ಬಂದಾಗ, ಇನ್ನೊಂದು ಹತ್ತು ನಿಮಿಷ ಮಾಡಿ.

ಪ್ರ: ಗುರೂಜಿ, ಚಳಿಗಾಲದಲ್ಲಿ ನಮ್ಮ ಶಕ್ತಿಯನ್ನು ಹೆಚ್ಚಿಸಲು ನಾವೇನು ಮಾಡಬಹುದು?

ಶ್ರೀ ಶ್ರೀ: ಚಳಿಗಾಲದಲ್ಲಿ ನೀವು ಖಂಡಿತವಾಗಿ ಕೆಲವು ಪ್ರಾಣಾಯಾಮ, ಕೆಲವು ಉಸಿರಾಟದ ಪ್ರಕ್ರಿಯೆಗಳನ್ನು ಮಾಡಬಹುದು. ಶರೀರದಲ್ಲಿ ಎಷ್ಟೊಂದು ಶಕ್ತಿಯಿದೆ ಎಂದರೆ ಅದು ಸಂಪೂರ್ಣ ನ್ಯೂ ಯಾರ್ಕ ಪಟ್ಟಣಕ್ಕೆ ಆರು ತಿಂಗಳ ಕಾಲ, ಅಡಚಣೆಯಿಲ್ಲದೆ ವಿದ್ಯುತ್ ಉತ್ಪಾದನೆ ನೀಡಬಹುದು. ಆ ಶಕ್ತಿಯನ್ನು ಬೆಳೆಸಲು, ನಾವು ಮಾಡಬೇಕಾದದ್ದು ಪ್ರಾಣಾಯಾಮ, ಭಸ್ತ್ರಿಕಾ ಅಷ್ಟೇ.
ನಿಮಗೆ ಗೊತ್ತೇ ನಮ್ಮ ಹೆಬ್ಬೆರಳಲ್ಲಿ ನಮಗೊಂದು ರಹಸ್ಯವಿದೆ?

ನೀವು ಗಮನಿಸಿದ್ದೀರಾ, ಜಗತ್ತಿನಾದ್ಯಂತ ಜನರು ಚಳಿಯಿರುವಾಗ ತಮ್ಮ ಹೆಬ್ಬೆರಳನ್ನು ಕಂಕುಳ ಸಂಧಿಯಲ್ಲೋ, ಜೇಬಿನಲ್ಲೋ ಮುಚ್ಚಿಕೊಳ್ಳುತ್ತಾರೆ? ಇದು ಸ್ವಾಭಾವಿಕ ಪ್ರವೃತ್ತಿ. ನಿಮ್ಮ ಹೆಬ್ಬೆರಳನ್ನು ಬೆಚ್ಚಗಿಟ್ಟರೆ ನಿಮ್ಮ ಶರೀರ ಸ್ವಲ್ಪ ಹೆಚ್ಚು ಉಷ್ಣವನ್ನು ಅನುಭವಿಸುತ್ತದೆ, ಸಂಪೂರ್ಣವಾಗಿ ಅಲ್ಲ, ಸುಮಾರು ಶೇಕಡಾ 6೦ರಷ್ಟು.

ಮಕ್ಕಳ ಆದಿ ಮುದ್ರೆ (ಹೆಬ್ಬೆರಳು ಒಳಕ್ಕೆ ಕಿರುಬೆರಳ ಮೂಲವನ್ನು ಮುಟ್ಟುವಂತೆ ಮಡಚಿಕೊಂಡು, ಉಳಿದ ನಾಲ್ಕು ಬೆರಳು ಅದರ ಮೇಲೆ ಮುಷ್ಟಿಯಾಗಿ ಮಡಚಿಕೊಳ್ಳುವುದು) ಧರಿಸಿಕೊಂಡು ಹುಟ್ಟುತ್ತಾರೆ. ಜನಿಸಿದ ಸಮಯದಿಂದ ಮೂರರ ವಯಸ್ಸಿನ ತನಕ ಮಗುವೊಂದನ್ನು ನೀವು  ಗಮನಿಸಿದರೆ, ಅದು ಎಲ್ಲಾ ಯೋಗಾಸನಗಳನ್ನು ಮಾಡುತ್ತದೆ. ನಿಮಗೆ ಯೋಗ ಶಿಕ್ಷಕರ ಅಗತ್ಯವಿಲ್ಲ; ನೀವು ಒಂದು ಮಗುವನ್ನು ಕೇವಲ ನೋಡಬೇಕು.

ಒಂದು ನವಜಾತ ಶಿಶು ಹೇಗೆ ಮಲಗುತ್ತದೆಂದು ನೀವು ನೋಡಿದ್ದೀರಾ? ಅದು ಚಿನ್ ಮುದ್ರೆ(ತೋರ್ಬೆರಳು ಸೂಕ್ಷ್ಮವಾಗಿ ಹೆಬ್ಬೆರಳನ್ನು ಮುಟ್ಟಿ, ಉಳಿದ ಬೆರಳು ನೇರವಾಗಿರುತ್ತವೆ) ಧರಿಸಿ ನಿದ್ರಿಸುತ್ತದೆ. ಈ ಮುದ್ರೆಯಲ್ಲಿ ಚೈತನ್ಯವು ಜಾಗೃತಿಯಲ್ಲಿದ್ದು ಪ್ರಾಣವು ಹೃದಯಭಾಗದತ್ತ ಹರಿಯುತ್ತದೆ. ಮಕ್ಕಳು ಚಿನ್ಮುದ್ರೆ ಅಥವಾ ಚಿನ್ಮಯೀ ಮುದ್ರೆಯಲ್ಲಿ(ತೋರ್ಬೆರಳ ಹದವಾಗಿ ಹೆಬ್ಬೆರಳನ್ನು ಮುಟ್ಟುತ್ತಿದ್ದು ಉಳಿದ ಬೆರಳುಗಳು ಮಡಚಿರುವುದು) ಮಲಗುತ್ತಾರೆ. ಆದಿ ಮುದ್ರೆಯು ನಿಮ್ಮ ಶರೀರ ತುಂಬ ತಂಪಾಗಿದ್ದಾಗ ನಿಮಗೆ ಪ್ರಯೋಜನವಾಗುತ್ತದೆ. ಈ ಸ್ಥಿತಿಯಲ್ಲಿ ಸ್ವಲ್ಪ ಉಸಿರಾಟ ಮಾಡಿ.

ಚಳಿಗಾಲದಲ್ಲಿ ನಿಮ್ಮಷ್ಟಕ್ಕೆ ನಿಮ್ಮ ವಾಸ್ತವ ಅಸ್ತಿತ್ವವಿಲ್ಲದ "ಇ" ಲೋಕದಲ್ಲಿ, ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ನೊಂದಿಗೆ ಕುಳಿತಿರಬೇಡಿ. ನಿಮ್ಮ ಮನೆಗಳ ಹೊರಗೆ ಬನ್ನಿ, 2೦-4೦ ಜನರ ಜೊತೆಗೆ ಕುಳಿತುಕೊಳ್ಳಿ, ಹಾಡಿ ಮತ್ತು ಆಚರಿಸಿ. ಆಗ ನೀವು ಬೇಸರಗೊಳ್ಳಲು ಅಥವಾ ಖಿನ್ನತೆಗೊಳಗಾಗಲು ಸಾಧ್ಯವೇ ಇಲ್ಲ. ಅದು ಅವಶ್ಯಕವಾಗಿದೆ ಎಂದು ನನ್ನ ಅಭಿಪ್ರಾಯ. ಪ್ರಾಚೀನ ಕಾಲದಲ್ಲಿ ಜನರು ಮಾಡುತ್ತಿದ್ದುದು ಅದು. ಒಂದು ಬಯಲುರಿ ಸಿದ್ಧಪಡಿಸಿ, ಅದರ ಸುತ್ತ ಕುಳಿತು ಮಾತುಕತೆ ಮತ್ತು ಹರಟೆ ನಡೆಸುತ್ತಿದ್ದರು.

ಚಳಿ ಹವೆ ಧ್ಯಾನಕ್ಕೂ ಒಳ್ಳೆಯದು. ಪ್ರಾಕೃತಿಯೂ ಸ್ಥಿರವಾಗಿರುವುದರಿಂದ, ಮನಸ್ಸು ಬಹಳ ಸ್ಥಿರವಾಗುತ್ತದೆ.
ಜನರು ಧ್ಯಾನಕ್ಕೆಂದು ಹಿಮಾಲಯಕೆ ಹೋಗುತ್ತಿದ್ದುದು ಯಾಕೆಂದರೆ ಪ್ರಕೃತಿಯು ನಿಶ್ಶಬ್ದ ಮತ್ತು ಶಾಂತವಾಗಿರುತ್ತದೆ. ಛಟುವಟಿಕೆ ಸ್ವಾಭಾವಿಕವಾಗಿ ಶಾಂತವಾಗುತ್ತಿದಂತೆ, ತಪ್ಪುಗಳು ಆಗುವುದಿಲ್ಲ. ಮನಸ್ಸು ಬಹಳ ಶಾಂತವಾಗಿ, ಅದು ಒಳಗಿನಿಂದ ಪ್ರಸನ್ನವಾಗುತ್ತದೆ.

ಪ್ರ: ನಾವು ಏತಕ್ಕೆ ಜನಿಸಿದ್ದೇವೆ? ನಾವು ತಿನ್ನುತ್ತೇವೆ, ಕುಡಿಯುತ್ತೇವೆ, ಮತ್ತು ಟಿ.ವಿ. ನೋಡುತ್ತೇವೆ; ಸಂಬಂಧಗಳ ಒಳಗೂ ಹೊರಗೂ ಹೋಗುತ್ತೇವೆ. ಜೀವನದ ಅರ್ಥವೇನು?

ಶ್ರೀ ಶ್ರೀ: ಇದೊಂದು ಬಹಳ ಮುಖ್ಯ ಪ್ರಶ್ನೆ. ಇದರ ಉತ್ತರ ಯಾರಿಗೆ ಗೊತ್ತಿದೆಯೋ ಅವರು ನಿಮಗೆ ಉತ್ತರ ನೀಡುವುದಿಲ್ಲ. ನಿಮಗೆ ಯಾರಾದರೂ ಉತ್ತರ ನೀಡಿದರೆ, ಅವರಿಗೆ ಅದು ತಿಳಿದಿಲ್ಲ. ಯಾಕೆ ಗೊತ್ತಾ? ಯಾಕೆಂದರೆ ಈ ಮೂಲ ಪ್ರಶ್ನೆಯೇ ಒಂದು ಗಾಡಿಯಂತೆ, ಅದು ನಿಮ್ಮನ್ನು ಮನೆಗೆ ಕರೆದೊಯ್ಯುವಂಥದ್ದು. ಇದು ನಿಮ್ಮ ಜೀವನಕ್ಕೆ ಇಂಧನ. ನೀವು ಮತ್ತೆ ಮತ್ತೆ ಕೇಳುತ್ತಿದ್ದಾಗ, ’ಜೀವನದ ಅರ್ಥವೇನು? ಜೀವನದ ಉದ್ದೇಶವೇನು?’ ಆಗ ಅಸಂಗತವಾದುದ್ದೆಲ್ಲಾ ಬೇರ್ಪಡೆಯಾಗುತ್ತದೆ, ಮತ್ತು ನಿಮಗೆ ಮುನ್ನಡೆಯಲು ಎಲ್ಲವೂ ಇನ್ನೂ ಸ್ಪಷ್ಟವಾಗುತ್ತದೆ. ಹಾಗಾಗಿ, ನಾನು ನಿಮಗೆ ಈ ಉತರ ಕೊಡದಿರುವುದೇ ಲೇಸು, ಆದರೆ ಇದೊಂದು ಬಹಳ ಮುಖ್ಯ ಪ್ರಶ್ನೆ.

ಈ ಮೂಲ ಪ್ರಶ್ನೆಯೇ ನಿಮ್ಮನ್ನು ಜೀವನದ ನಿಜವಾದ ಪ್ರಯಾಣಕ್ಕೆ ಹೊರಡಿಸುತ್ತದೆ. ಅದಕ್ಕಿಂತ ಮೊದಲು, ನೀವು ಕೇವಲ ಅಸ್ತಿತ್ವದಲ್ಲಿರುವುದಷ್ಟೆ, ಆದರೆ ಈ ಪ್ರಶ್ನೆ ನಿಮ್ಮನ್ನು ಆಧ್ಯಾತ್ಮಿಕ ಮಾರ್ಗದಲ್ಲಿ ತೊಡಗಿಸುತ್ತದೆ.

ಪ್ರ: ನಮ್ಮ ಆಹಾರವನ್ನು ಸುಧಾರಿಸಿದಾಗ ಮತ್ತು ಪ್ರಾಣಾಯಾಮ ಹಾಗೂ ಧ್ಯಾನಗಳನ್ನು ಮಾಡಿದಾಗ, ಕನಸುಗಳು ಇನ್ನೂ ಸ್ಪಷ್ಟವಾಗುತ್ತವೆಯೇ?

ಶ್ರೀ ಶ್ರೀ: ಹೌದು. ಕನಸುಗಳ ಗುಣಮಟ್ಟ ಖಂಡಿತ ಸುಧಾರಿಸುತ್ತದೆ.

ಪ್ರ: ನಮಗೆ ಕೆಲವೊಮ್ಮೆ ನಮ್ಮ ಕನಸನ್ನು ನೆನಪುಮಾಡಿಕೊಳ್ಳಲು ಆಗುವುದಿಲ್ಲ, ಯಾಕೆ? ಅದು ನಮ್ಮ ಆಹಾರದ ಗುಣವೇ, ಅಥವಾ ನಾವು ಧ್ಯಾನ ಮಾಡುತ್ತಿಲ್ಲವೇ?

ಶ್ರೀ ಶ್ರೀ: ನಮಗೆ ಎಲ್ಲಾ ಕನಸುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿಲ್ಲ. ನಮಗವು ನೆನಪಾಗದೇ ಇರುವುದು ಒಳ್ಳೆಯದು. ಆಗ, ನಾವು ಇನ್ನೂ ಹೆಚ್ಚು ವರ್ತಮಾನ ಕ್ಷಣದಲ್ಲಿ ಇರುತ್ತೇವೆ. ಒಂದು ಕನಸು ಒಂದು ಕನಸಷ್ಟೆ, ಅದು ಹೋಗಿಬಿಟ್ಟಿದೆ.

ಪ್ರ: ನಾವು ಹಲವು ಮಕ್ಕಳಿಗೆ ಒಗ್ಗದಿಕೆ (ಅಲರ್ಜಿ) ಮತ್ತು ದಣಿದು ಹೋದ ರೋಗ ನಿರೋಧಕ ಶಕ್ತಿ ಇರುವುದನ್ನು ನೋಡುತ್ತೇವೆ. ನಮ್ಮ ಜೀವನ ಶೈಲಿಯಲ್ಲಿ ಏನನ್ನಾದರೂ ಬದಲಾಯಿಸಿ ಅವರಿಗೆ ಸಹಾಯವಾಗಬಹುದಾದದ್ದು ಏನಾದರೂ ಇದೆಯೆ?

ಶ್ರೀ ಶ್ರೀ: ಖಂಡಿತ. ಮಕ್ಕಳನ್ನು ಟಿ.ವಿ. ಮತ್ತು ವಿಡಿಯೋ ಗೇಮ್ ಗಳ ಮುಂದೆ ಬಹಳ ಹೊತ್ತು ಕೂರಿಸಬೇಡಿ. ಅವರ ಪುಟ್ಟ ಮಿದುಳುಗಳು ಆ ಛಾಪುಗಳ ಸುರಿಮಳೆಯಿಂದ ಬಹಳ ಕಾಲ ಪ್ರಭಾವಿತಗೊಳ್ಳುತ್ತದೆ. ಅದು ಅವರ ಕಣ್ಣಿನ ದೃಷ್ಟಿಯನ್ನು ಪ್ರಭಾವಿಸುತ್ತದೆ ಮತ್ತು ಅಟ್ಟೆನ್ಶನ್ ಡೆಫಿಯೆನ್ಸಿ ಸಿನ್ಡ್ರೋಂ ಹಾಗೂ ಇತರ ತೊಂದರೆಗಳನ್ನು ಉಂಟುಮಾಡುತ್ತೆದೆ.
ಹಾಗಾಗಿ ಮಕ್ಕಳು ತುಂಬಾ ಸಮಯ ಟಿ.ವಿ.ಯಮುಂದೆ ಕಳೆಯಬಾರದು, ಹೆಚ್ಚೆಂದರೆ ದಿನಕ್ಕೆ ಒಂದು ಘಂಟೆ ಕಾಲ ಕಳೆಯಬಹುದೇನೋ. ಈಗ, ಅವರು ಎದ್ದ ಕ್ಷಣ ಟಿ.ವಿ. ಆನ್ ಆಗುತ್ತದೆ, ಅವರು ಕೂತು ಕಾರ್ಟೂನ್ ನೋಡುತ್ತಾರೆ. ಅವರು ಶಾಲೆಗೆ ಹೋಗುತ್ತಾರೆ, ಮರಳಿ ಬರುತ್ತಾರೆ, ಪುನಃ ಕಾರ್ಟೂನ್ ಮುಂದೆ ಕುಳಿತುಕೊಳ್ಳುತ್ತಾರೆ. ಅವರು ರಾತ್ರಿಯ ಊಟವನ್ನು ಕಾರ್ಟೂನ್ ಗಳ ಮುಂದೆ ಮಾಡುತ್ತಾರೆ. ನಾನು ಹೇಳಿದ್ದು ಸರಿಯೇ?

ನಮ್ಮ ಮಕ್ಕಳಿಗಾಗಿ ನಾವಿದನ್ನು ತಪ್ಪಿಸಬೇಕು. ಇದು ನನ್ನ ಅಭಿಪ್ರಾಯ, ಮತ್ತು ಬಹಳ ಬಾಲ ಮನೋವಿಜ್ಞಾನಿಗಳೂ ಇದನ್ನು ಒಪ್ಪುತ್ತಾರೆ.

ಪ್ರ: ಗುರೂಜಿ, ಮಕ್ಕಳು ವಿಡಿಯೋ ಗೇಮ್ ಗಳನ್ನು ಆಡಬಾರದು ಎಂದು ನೀವು ಹೇಳುತ್ತಿದ್ದೀರೇ?

ಶ್ರೀ ಶ್ರೀ: ಅವರು ಎಂದೂ ಯಾವುದೇ ವಿಡಿಯೋ ಗೇಮ್ ಗಳನ್ನು ಆಡಬಾರದು ಎಂದು ನಾನು ಹೇಳುತ್ತಿಲ್ಲ. ಮಕ್ಕಳು ಆಡಬೇಕಾದ ಬಹಳ ಬುದ್ಧಿ-ಕೆರಳಿಸುವ ಆಟಗಳಿವೆ. ನನ್ನ ಸಲಹೆಯೆಂದರೆ ನಾವು ಹಿಂಸಾತ್ಮಕ ವಿಡಿಯೋ ಗೇಮ್ ಗಳನ್ನು ನಿವಾರಿಸಬೇಕು. ಅವರ ಪುಟ್ಟ ಮನಸ್ಸಿಗೆ ಕಂಪ್ಯೂಟರ್ ನ ಅಸ್ತಿತ್ವವಿಲ್ಲದ ಜಗತ್ತಿಗೂ ವಾಸ್ತವ ಜಗತ್ತಿಗೂ ವ್ಯತ್ಯಾಸ ತಿಳಿದಿಲ್ಲ. ಕಂಪ್ಯೂಟರ್ ನ ಜಗತ್ತಿನಲ್ಲಿ ಶುಟ್ ಮಾಡುತ್ತಿದಂತೆ ಜನರು ಮತ್ತೆ ಎದ್ದು ಬರುತ್ತಾರೆ. ಹಾಗೆ, ಕಂಪ್ಯೂಟರ್ ಜಗತ್ತಿನಲ್ಲಿ ನಡೆದಂತೆ ನಿಜವಾದ ಜಗತ್ತಿನಲ್ಲಿ ಅವರು ಶೂಟ್ ಮಾಡಿದರೆ ಜನರು ಮತ್ತೆ ಏಳುತ್ತಾರೆ ಎಂದು ಅವರು ಯೋಚಿಸುತ್ತಾರೆ. ಬಹಳ ಅಪರಾಧಗಳು ನಡೆಯುವುದು ಯಾಕೆಂದರೆ ಅವರ ಯೋಚನಾ ಸಂಸ್ಕಾರವು ಕಲ್ಪನಾ ಲೋಕ ಹಾಗೂ ನಿಜವಾದ ಜಗತ್ತಿನ ನಡುವಿನಲ್ಲಿ ಅಸ್ಪಷ್ಟಗೊಳ್ಳುತ್ತದೆ.

ನಾನು ಆಟೋಟಗಳಿಗೆ ಸಂಪೂರ್ಣ ಪ್ರೋತ್ಸಾಹ ನೀಡುತ್ತೇನೆ. ಮಕ್ಕಳು ಆಟಗಳನ್ನು ಕಲಿಯಬೇಕು. ನಾನು ಮಕ್ಕಳು ವಿಡಿಯೋ ಗೇಮ್ ಗಳನ್ನು ಆಡುವುದಾಗಲಿ ಅಥವಾ ಟಿ.ವಿ. ನೋಡುವುದರ ವಿರುದ್ಧವಾಗಿಲ್ಲ, ಆದರೆ ಬಹಳ ಹೊತ್ತು ಅಲ್ಲ; ದಿನ್ನಕ್ಕೊಂದು ಗಂಟೆ ಮಾತ್ರ.


a